Tag: ರೋಡ್ ಶೋ

  • ಬೆಂಗಳೂರಲ್ಲಿ ಮೋದಿ ಭರ್ಜರಿ ರೋಡ್ ಶೋ – ಸಿಲಿಕಾನ್ ಸಿಟಿ ಜನರ ಪ್ರೀತಿಗೆ ಪ್ರಧಾನಿ ಫಿದಾ

    ಬೆಂಗಳೂರಲ್ಲಿ ಮೋದಿ ಭರ್ಜರಿ ರೋಡ್ ಶೋ – ಸಿಲಿಕಾನ್ ಸಿಟಿ ಜನರ ಪ್ರೀತಿಗೆ ಪ್ರಧಾನಿ ಫಿದಾ

    ಬೆಂಗಳೂರು: ಕರ್ನಾಟಕ ಕುರುಕ್ಷೇತ್ರ ಪ್ರಚಾರ ಅಖಾಡಕ್ಕೆ ಪ್ರಧಾನಿ ನರೇಂದ್ರ ಮೋದಿ ಧುಮುಕಿದ್ದಾರೆ. ಬೆಂಗಳೂರಿನ ನೈಸ್ ರೋಡ್ ಜಂಕ್ಷನ್‍ನಿಂದ ಸುಮನಹಳ್ಳಿಯವರೆಗೆ ಅದ್ಧೂರಿಯಾಗಿ ರೋಡ್ ಶೋ ನಡೆಯಿತು. ಪ್ರಧಾನಿ ಮೋದಿ ಅವರು ತೆರೆದ ವಾಹನದಲ್ಲಿ ಬರೋಬ್ಬರಿ 5 ಕಿ.ಮೀನಲ್ಲಿ ರೋಡ್ ಶೋ ನಡೆಸಿದರು.

    ಮಹಾಲಕ್ಷ್ಮೀ ಲೇಔಟ್, ಮಲ್ಲೇಶ್ವರಂ, ಯಲಹಂಕ, ದಾಸರಹಳ್ಳಿ, ಆರ್.ಆರ್ ನಗರ, ಯಶವಂತಪುರ, ಬ್ಯಾಟರಾಯನಪುರ, ಪುಲಿಕೇಶಿನಗರ, ಹೆಬ್ಬಾಳ ವಿಧಾನಸಭಾ ಕ್ಷೇತ್ರವನ್ನು ಗುರಿಯಾಗಿಸಿಕೊಂಡು ಬಿಜೆಪಿ ಚಿಹ್ನೆ ಇರುವ ಪೇಟ ಧರಿಸಿ ಮೋದಿ ರೋಡ್ ಶೋ ನಡೆಸಿದರು. ಮೋದಿ ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿವಿ ಸದಾನಂದ ಗೌಡ ಮತ್ತು ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಸಾಥ್ ನೀಡಿದರು. ಸುಮಾರು ಒಂದೂವರೆ ಗಂಟೆಗಳ ಕಾಲ ರೋಡ್‌ ಶೋ  ನಡೆಯಿತು.

    ಮೋದಿ ರೋಡ್ ಶೋಗೆ ಕಲಾತಂಡಗಳು ಮೆರುಗು ತಂದುಕೊಟ್ಟಿದ್ದವು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕೇಸರಿ ಪೇಟ ಧರಿಸಿ ಮಿಂಚಿದರು. ಜೊತೆಗೆ ಜನರತ್ತ ಕೈಬೀಸಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಮುಗಿಲು ಮುಟ್ಟಿತ್ತು. ಹೂಮಳೆ ಸುರಿಸಿ ಸಂಭ್ರಮಿಸಿದರು. ಮೋದಿ ಮೋದಿ ಜೈಕಾರ ಘೋಷಣೆ ಜೋರಾಗಿತ್ತು.

    ಮೋದಿ ರೋಡ್ ಶೋ ಭದ್ರತೆಗೆ ಬೆಂಗಳೂರು 7 ಸುತ್ತಿನ ಕೋಟೆಯಂತಾಗಿತ್ತು. ರಸ್ತೆಗೆ ಬ್ಯಾರಿಕೇಡ್‍ಗಳನ್ನು ಹಾಕಿ, ಅಂಗಡಿ-ಮುಂಗಟ್ಟುಗಳನ್ನು ಕ್ಲೋಸ್ ಮಾಡಿ ಭದ್ರತೆ ಒದಗಿಸಲಾಗಿತ್ತು. ಭದ್ರತೆಗಾಗಿ 3 ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ಹೆಚ್ಚುವರಿಯಾಗಿ ಹತ್ತು ಕೆಎಸ್‍ಆರ್‌ಪಿ ತುಕಡಿ, 50 ಮೀಟರ್ ಒಬ್ಬರಂತೆ ಪ್ರತಿ ಬಿಲ್ಡಿಂಗ್ ಮೇಲೆ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಇದನ್ನೂ ಓದಿ: ಭಾರತದ ಮೊದಲ ಕೇಬಲ್ ರೈಲ್ವೇ ಸೇತುವೆ ಪೂರ್ಣ – ವಿಡಿಯೋ ಹಂಚಿಕೊಂಡ ಕೇಂದ್ರ ಸಚಿವ

    ಬೀದರ್, ವಿಜಯಪುರ, ಬೆಳಗಾವಿ ಇಂದು ಮೋದಿ ಪ್ರಚಾರವನ್ನು ನಡೆಸಿ ಬೆಂಗಳೂರಿಗೆ ಆಗಮಿಸಿದ್ದರು. ಮೋದಿಯನ್ನು ನೋಡಲು ಸಾವಿರಾರು ಕಾರ್ಯಕರ್ತರು ರಸ್ತೆಯ ಇಕ್ಕೆಲಗಳಲ್ಲಿ ನಿಂತಿ “ಮೋದಿ ಮೋದಿ” ಎಂದು ಜಯಘೋಷ ಹಾಕುತ್ತಿದ್ದರು.

    ಇದನ್ನೂ ಓದಿ: ಮೋದಿ ರೋಡ್ ಶೋ- ಮದುಮಗ ಆಯ್ತು, ಈಗ ಮದುವೆಗೆ ಹೋಗಲು ಕಷ್ಟಪಟ್ಟ ವಧು

  • ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷಗಳು ನಾನಾರೀತಿಯ ನಾಟಕಗಳನ್ನು ಮಾಡುತ್ತಿದೆ: ಮುನಿರತ್ನ

    ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷಗಳು ನಾನಾರೀತಿಯ ನಾಟಕಗಳನ್ನು ಮಾಡುತ್ತಿದೆ: ಮುನಿರತ್ನ

    ಬೆಂಗಳೂರು: ಚುನಾವಣೆಯ (Election) ಸಂದರ್ಭದಲ್ಲಿ ವಿರೋಧ ಪಕ್ಷಗಳು ನಾನಾರೀತಿಯ ನಾಟಕಗಳನ್ನು ಮಾಡುತ್ತಿದೆ. ಆದರೆ ಈ ರೀತಿಯ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಮಾಡುತ್ತಿರುವ ಬಗ್ಗೆ ಯಾರೂ ಮಾತನಾಡುವುದಿಲ್ಲ. ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಿರುವಂತಹ ಕಾರ್ಯಕ್ರಮ ಬಹುಷಃ ಇನ್ನೂ ಐವತ್ತು ವರ್ಷವಾದರೂ ಯಾರೂ ಆ ಮಟ್ಟಕ್ಕೆ ತಲುಪಲು ಆಗುವುದಿಲ್ಲ. ಅಷ್ಟು ಕೆಲಸವನ್ನು ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಸಚಿವ ಮುನಿರತ್ನ (Munirathna) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರಿನ (Bengaluru) ಅಂಜನಾ ನಗರದಲ್ಲಿರುವ ಎಸ್‌ಟಿ ಸೋಮಶೇಖರ್ (S.T.Somashekar) ಅವರ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪ್ರಧಾನ ಮಂತ್ರಿಗಳು ಶನಿವಾರ 9 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ರೋಡ್ ಶೋ ನಡೆಸಲಿದ್ದಾರೆ. ಅದರಲ್ಲಿ ಬಹಳ ಪ್ರಮುಖವಾಗಿ ಯಶವಂತಪುರ, ರಾಜರಾಜೇಶ್ವರಿ, ಮಹಾಲಕ್ಷ್ಮಿಪುರಂ ಹಾಗೂ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜನತೆಗೆ ನಮ್ಮ ಮೆಟ್ರೋ ಮೂಲಕ ಪ್ರಧಾನಿ ಮೋದಿಯವರು ಬಹಳ ದೊಡ್ಡ ಕೊಡುಗೆಯನ್ನು ಕೊಟ್ಟಿದ್ದಾರೆ ಎಂದರು. ಇದನ್ನೂ ಓದಿ: ದಕ್ಷಿಣ ಭಾರತದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರಲ್ಲ: ಹೆಚ್.ವಿಶ್ವನಾಥ್

    ಶನಿವಾರ ರೋಡ್ ಶೋ (Road Show) ಮಾಡುತ್ತಿರುವ ಭಾಗದಲ್ಲಿ ಮೆಟ್ರೋಗೆ ಅನುಮೋದನೆ ನೀಡುತ್ತಿದ್ದಾರೆ. ಸುಂಕದಕಟ್ಟೆಯಿಂದ ನೈಸ್ ರಿಂಗ್ ರಸ್ತೆವರೆಗೂ 11 ಕಿಲೋಮೀಟರ್ ಈಗಾಗಲೇ ಮೆಟ್ರೋ ಟಿಪಿಆರ್ ಅನುಮೋದನೆಯಾಗಿದೆ. ಇಂದು ಅದೇ ಭಾಗದಲ್ಲಿ ಮೋದಿ ರೋಡ್ ಶೋ ಮಾಡುತ್ತಿದ್ದಾರೆ. ಬಹಳ ಪ್ರಮುಖವಾಗಿ ಬಡವರು, ಮಧ್ಯಮ ವರ್ಗ ಹಾಗೂ ಕಾರ್ಖಾನೆಗಳಿರುವಂತಹ ಪಶ್ಚಿಮ ಭಾಗಕ್ಕೆ ಅನುಕೂಲವನ್ನು ಮಾಡಿಕೊಟ್ಟಿದ್ದಾರೆ. ಇಲ್ಲಿಯವರೆಗೂ ಪೂರ್ವ ಭಾಗಕ್ಕೆ ಅತಿಹೆಚ್ಚು ಮೆಟ್ರೋ ಸೇವೆಗಳಿದ್ದವು. ಈ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಅನುಕೂಲ ಮಾಡಿಕೊಟ್ಟಂತಹ ಮೋದಿಯವರು (Narendra Modi) ಆಗಮಿಸುತ್ತಿರುವುದು ಬಹಳ ಸಂತೋಷದ ವಿಚಾರ ಎಂದು ಹೇಳಿದರು. ಇದನ್ನೂ ಓದಿ: ಪ್ರಧಾನಿ ಮೋದಿ ಕಾಳಿಂಗ ಸರ್ಪ – ಸುಧಾಕರ್

    ಪ್ರಧಾನ ಮಂತ್ರಿಗಳು ಇವತ್ತು ಬರುತ್ತಿರುವುದರಿಂದ 4 ವಿಧಾನಸಭಾ ಕ್ಷೇತ್ರದ ಎಲ್ಲಾ ಮತದಾರರಿಗೆ ನಮ್ಮ ನೆಚ್ಚಿನ ಪ್ರಧಾನಮಂತ್ರಿಗಳನ್ನು ನೋಡುವ ಭಾಗ್ಯ ಎಲ್ಲರಿಗೂ ಸಿಕ್ಕಿದೆ. ಈ ರೋಡ್ ಶೋ ಅನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಬಹುದು. ಸಾಮಾನ್ಯವಾಗಿ ಪ್ರಧಾನ ಮಂತ್ರಿಗಳನ್ನು ನೋಡುವುದು ಕಷ್ಟ. ಇವತ್ತು ಸಾಮಾನ್ಯ ವ್ಯಕ್ತಿ ಕೂಡಾ ಪ್ರಧಾನ ಮಂತ್ರಿಯವರನ್ನು ನೋಡಬಹುದು. ನಮ್ಮ ದೇಶ ಬಹಳ ಮುಂದುವರೆಯುತ್ತಿದೆ. ತಾವೆಲ್ಲರೂ ಬಿಜೆಪಿಗೆ (BJP) ಬೆಂಬಲ ಕೊಟ್ಟು ಆಶೀರ್ವದಿಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಪರಮೇಶ್ವರ್ ಮೇಲೆ ಕಲ್ಲು ತೂರಾಟ ಖಂಡನೀಯ: ಯಡಿಯೂರಪ್ಪ ಕಿಡಿ

    ಬಳಿಕ ಮಾತನಾಡಿದ ಎಸ್‌ಟಿ ಸೋಮಶೇಖರ್, ಬೆಂಗಳೂರು ಜನತೆಯ ಪರವಾಗಿ ಪ್ರಧಾನಿ ಮೋದಿಯವರಿಗೆ ಸ್ವಾಗತವನ್ನು ಕೋರುತ್ತೇವೆ. ಶನಿವಾರ 6 ಗಂಟೆ 14 ನಿಮಿಷಕ್ಕೆ ಮೋದಿಯವರು ರೋಡ್ ಶೋ ನಡೆಸಲಿದ್ದಾರೆ. ಇದರಲ್ಲಿ 9 ಕ್ಷೇತ್ರದ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಅಲ್ಲದೇ ನಾಲ್ಕು ವಿಧಾನ ಸಭಾ ಕ್ಷೇತ್ರಗಳು ಈ ರೋಡ್ ಶೋಗೆ ಬರಲಿದೆ. ಮೋದಿ ಎರಡನೇ ಬಾರಿಗೆ ನಮ್ಮ ಕ್ಷೇತ್ರದ ಕಡೆಗೆ ಬರುತ್ತಿದ್ದಾರೆ. ಶನಿವಾರ ನಡೆಯಲಿರುವ ರೋಡ್ ಶೋದಲ್ಲಿ ಎಲ್ಲರೂ ಭಾಗವಹಿಸುವಂತೆ ಮನವಿ ಮಾಡಲಾಗಿದೆ. ವಿಶ್ವವಿಖ್ಯಾತ ಪ್ರಧಾನಿಯನ್ನು ಹತ್ತಿರದಿಂದ ನೋಡಿ ಕಣ್ತುಂಬಿಕೊಳ್ಳುವ ಅವಕಾಶ ಎಲ್ಲರಿಗೂ ದೊರತಿದೆ. ಪ್ರಧಾನಿ ಒಮ್ಮೆ ಬಂದು ಹೋದರೆ ನಾವು ಯಾರೂ ಕೂಡಾ ಪ್ರಚಾರ ಮಾಡದೇ ಹೋದರೂ ಗೆಲ್ಲುತ್ತೇವೆ ಎಂದರು. ಇದನ್ನೂ ಓದಿ: ಅರ್ಧಕ್ಕೆ ರೋಡ್ ಶೋ ಮುಗಿಸಿ ಹೊರಟ ಅಮಿತ್ ಶಾ

    ನಂತರ ಮಾನಾಡಿದ ಸಚಿವ ಗೋಪಾಲಯ್ಯ (K.Gopalaiah), ವಿಶ್ವನಾಯಕ ಪ್ರಧಾನಿಯನ್ನು ನಾನು ಸಂತೋಷವಾಗಿ ಸ್ವಾಗತ ಮಾಡುತ್ತೇನೆ. ಪ್ರಧಾನಿ ಒಂದು ಸ್ಥಳಕ್ಕೆ ಬಂದು ಹೋದರೆ ಅಭಿವೃದ್ಧಿ ಮಾಡುತ್ತಾರೆ. ಥರ್ಡ್ ಪೇಸ್ ಮೆಟ್ರೋಗೆ ಮೋದಿ ಅನುಮೋದನೆ ಕೊಟ್ಟಿದ್ದಾರೆ. ಅಲ್ಲದೇ 142 ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಿಕೊಡುವಂತೆ ಕೇಳಿಕೊಂಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಸೋನಿಯಾ, ರಾಹುಲ್ ಗಾಂಧಿ ಹೇಳಿಕೊಟ್ಟಂತೆ ಖರ್ಗೆ ಮಾತಾಡಿದ್ದಾರೆ: ಜೆ.ಪಿ ನಡ್ಡಾ

  • ಅರ್ಧಕ್ಕೆ ರೋಡ್ ಶೋ ಮುಗಿಸಿ ಹೊರಟ ಅಮಿತ್ ಶಾ

    ಅರ್ಧಕ್ಕೆ ರೋಡ್ ಶೋ ಮುಗಿಸಿ ಹೊರಟ ಅಮಿತ್ ಶಾ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ನಡೆಸುತ್ತಿದ್ದ ರೋಡ್‌ ಶೋವನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಅರ್ಧಕ್ಕೆ ಮೊಟಕುಗೊಳಿಸಿ ಉಡುಪಿ ಜಿಲ್ಲೆಯ ಕಾಪುಗೆ ಹೊರಟ ಘಟನೆ ನಡೆದಿದೆ.

    ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಬಿಜೆಪಿ ಕಾರ್ಯಕರ್ತರು ಶನಿವಾರ ಬೆಳಗ್ಗೆಯಿಂದ ಅಮಿತ್‌ ಶಾ ಅವರ ಬರುವಿಕೆಗಾಗಿ ಉತ್ಸಾಹದಿಂದ ಕಾಯುತ್ತಿದ್ದರು. ಆದರೆ ಅಮಿತ್‌ ಶಾ (Amit Shah) ರೋಡ್‌ ಶೋವನ್ನು ಅರ್ಧಕ್ಕೆ ಮೊಟಕುಗೊಳಿಸಿ ದಿಢೀರ್‌ ಎಂದು ತೆರಳಿರುವುದು ಬಿಜೆಪಿ (BJP) ಕಾರ್ಯಕರ್ತರಲ್ಲಿ ನಿರಾಶೆ ಉಂಟಾಯಿತು.

    ಮಡಿಕೇರಿ ಹಾಗೂ ವಿರಾಜಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ ಬೋಪಯ್ಯ ಅವರ ಪರವಾಗಿ ಚುನಾವಣಾ ಚಾಣಕ್ಯ ಜಿಲ್ಲೆಗೆ ಬಂದು ಒಂದಷ್ಟು ಕಮಾಲ್‌ ಮಾಡುತ್ತಾರೆ. ಈ ಬಾರಿಯು ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ಸಾವಿರಾರು ಬಿಜೆಪಿ ಕಾರ್ಯಕರ್ತರು ಕಾದಿದ್ದರು. ಇದನ್ನೂ ಓದಿ: ಗಾಬರಿ ಪಡುವಂತಹದ್ದೇನಿಲ್ಲ, ಗಟ್ಟಿಮುಟ್ಟಾಗಿದ್ದೇನೆ- ಸಿದ್ದರಾಮಯ್ಯ

    ಅಲ್ಲದೇ ತಮ್ಮ ಕ್ಷೇತ್ರಗಳ ಅಭ್ಯರ್ಥಿ ಪರವಾಗಿ ಬಹಿರಂಗ ಪ್ರಚಾರ ‌ಮಾಡುತ್ತಾರೆ ಎಂಬ ನೀರಿಕ್ಷೆ ಮಾಡಿದ್ದ ಕಾರ್ಯಕರ್ತರಿಗೆ ಅರ್ಧಕ್ಕೆ ರೋಡ್ ಶೋ ಮುಗಿಸಿ ಹೊರಟ ಅಮಿತ್ ಶಾ ಅವರ ನಡೆಯಿಂದ ನಿರಾಶೆ ಉಂಟಾಯಿತು. ಅಮಿತ್ ಶಾ ಅವರೊಂದಿಗೆ ಸಂಸದ ಪ್ರತಾಪ್ ಸಿಂಹ, ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಅವರು ರೋಡ್ ಶೋದಲ್ಲಿ ಅಮಿತ್ ಶಾ ಅವರಿಗೆ ಸಾಥ್ ನೀಡಿದರು. ಇದನ್ನೂ ಓದಿ: ಸೋನಿಯಾ, ರಾಹುಲ್ ಗಾಂಧಿ ಹೇಳಿಕೊಟ್ಟಂತೆ ಖರ್ಗೆ ಮಾತಾಡಿದ್ದಾರೆ: ಜೆ.ಪಿ ನಡ್ಡಾ

  • ಶನಿವಾರ ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ – ಪರ್ಯಾಯ ರಸ್ತೆಗಳ ಪೂರ್ಣ ವಿವರ ಇಲ್ಲಿದೆ

    ಶನಿವಾರ ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ – ಪರ್ಯಾಯ ರಸ್ತೆಗಳ ಪೂರ್ಣ ವಿವರ ಇಲ್ಲಿದೆ

    ಬೆಂಗಳೂರು: ಕರ್ನಾಟಕ ಚುನಾವಣೆಯ (Karnataka Election) ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ (PM Narendra Modi) ರೋಡ್‌ ಶೋ ನಡೆಸಲಿರುವ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ 2 ರಿಂದ ರಾತ್ರಿ 7:30 ರವರೆಗೆ ಪರ್ಯಾಯ ರಸ್ತೆಗಳ ಬಳಕೆ ಮಾಡುವಂತೆ ಬೆಂಗಳೂರು ಸಂಚಾರಿ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

    ನಗರದಲ್ಲಿನ ಕೆಲ ರಸ್ತೆಗಳಲ್ಲಿ ಸಂಚಾರವನ್ನು ನಿರ್ಬಂಧಿಸಿದ್ದು ಬದಲಿ ರಸ್ತೆಗಳಲ್ಲಿ ಸಂಚಾರ ಮಾಡಬೇಕೆಂದು ಪೊಲೀಸರು ವಿನಂತಿ ಮಾಡಿದ್ದಾರೆ. ಶನಿವಾರ ಸಂಜೆ ಮಾಗಡಿ ನೈಸ್‌ ರಸ್ತೆಯಿಂದ ಸುಮನಹಳ್ಳಿಯವರೆಗೆ ಸುಮಾರು 4.5 ಕಿ.ಮೀ ರೋಡ್‌ ಶೋ (Road Show) ನಡೆಸಲಿದ್ದಾರೆ.

     

    ಈ ಕೆಳಕಂಡ ರಸ್ತೆಗಳ ಬದಲಿಗೆ ಪರ್ಯಾಯ ರಸ್ತೆಗಳನ್ನು ಬಳಸಿ:
    ಹಳೆ ವಿಮಾನ ನಿಲ್ದಾಣ ರಸ್ತೆ, ಕೇಂಬ್ರಿಡ್ಜ್, ಲೇಔಟ್ ರಸ್ತೆ, ಕಬ್ಬನ್‌ ರಸ್ತೆ, ಡಿಕನ್‌ಸನ್ ರೋಡ್‌, ಲಾಲ್ ಬಾಗ್‌ ವೆಸ್ಟ್ ಗೇಟ್ ರಸ್ತೆ, ಅಂಬೇಡ್ಕರ್ ರಸ್ತೆ, ಕೆ.ಆರ್. ಸರ್ಕಲ್‌, ನೃಪತುಂಗ ರಸ್ತೆ ಕೃಂಬಿಗಲ್‌ ರಸ್ತೆ, ದೇವಾಂಗ ರಸ್ತೆ, ಆರ್.ವಿ. ಕಾಲೇಜ್ ರಸ್ತೆ, ಲಾಲ್ ಬಾಗ್ ಮುಖ್ಯ ರಸ್ತೆ, ಬಸವನಗುಡಿ 5) ಅಡಿ ಕೆನರಾ ಬ್ಯಾಂಕ್ ರಸ್ತೆ  ಇದನ್ನೂ ಓದಿ: ಧಮ್ ಇದ್ದರೆ ಮೀಸಲಾತಿಯನ್ನು ಮುಟ್ಟಿ ನೋಡಿ: ಕಾಂಗ್ರೆಸ್‌ಗೆ ಬೊಮ್ಮಾಯಿ ಸವಾಲು

    ಬದಲಿ ಮಾರ್ಗಗಳು ಯಾವುದು?
    ಮಾಗಡಿ ಕಡೆಯಿಂದ ಬೆಂಗಳೂರು ನಗರದ ಕಡೆಗೆ ಬರುವ ವಾಹನಗಳು ತಾವರೆಕೆರೆ ಜಂಕ್ಷನ್‌ನಲ್ಲಿ ಬಲತಿರುವು ಪಡೆದು ಹೆಮ್ಮಿಗೆದುರ ಕೊಮ್ಮಘಟ್ಟ, ಕೆಂಗೇರಿ ಮೂಲಕ ಮೈಸೂರು ರಸ್ತೆಗೆ ಸಂಚರಿಸಬಹುದಾಗಿದೆ.

    ಮಾಗಡಿ ಕಡೆಯಿಂದ ತುಮಕೂರು ರಸ್ತೆ ಕಡೆಗೆ ಸಂಚರಿಸುವ ವಾಹನಗಳು ತಾವರೆಕರೆ ಜಂಕ್ಷನ್‌ ನಲ್ಲಿ ಎಡ ತಿರುವು ಪಡೆದು ಸೊಂಡೇಕೊಪ್ಪ- ನೆಲಮಂಗಲ ಮೂಲಕ ಸಂಚರಿಸಬಹುದು.

    ತುಮಕೂರು ಕಡೆಯಿಂದ ಒಂದು ನೈಸ್ ರಸ್ತೆಯಲ್ಲಿ ಸಂಚರಿಸುವ ವಾಹನಗಳು ನೆಲಮಂಗಲ ಸೊಂಡೇಕೊಪ್ಪ ಬೈಪಾಸ್‌ನಲ್ಲಿ ಬಲತಿರುವು ಪಡೆದು ಸೊಂಡೇಕೊಪ್ಪ – ತಾವರೆಕರೆ – ಹೆಮ್ಮಿಗೆಪುರ – ಕೊಮ್ಮಘಟ್ಟ ಕೆಂಗೇರಿ ಮೂಲಕ ಮೈಸೂರು ರಸ್ತೆಗೆ ಪ್ರಯಾಣಿಸಬಹುದು

    ನಗರದ ಒಳಭಾಗದಿಂದ ಮಾಗಡಿ ಕಡೆಗೆ ಸಂಚರಿಸುವ ವಾಹನಗಳು ಎಂಸಿ ಸರ್ಕಲ್‌ನಲ್ಲಿ ಎಡತಿರುವು ಪಡೆದು ಮೈಸೂರು ರಸ್ತೆ ಕೆಂಗೇರಿ – ಕೊಮ್ಮಘಟ್ಟ – ಹೆಮ್ಮಿಗೆಪುರ – ತಾವರೆಕರೆ ಮೂಲಕ ಸಂಚರಿಸಬಹುದು.

    ನಾಯಂಡಹಳ್ಳಿ ಕಡೆಯಿಂದ ತುಮಕೂರು ರಸ್ತೆ ಕಡೆಗೆ ಬರುವ ವಾಹನಗಳು, ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಮೈಸೂರು ರಸ್ತೆಗೆ ಚಲಿಸಿ ಕಂಗೇರಿ ಆರ್ ಆರ್ ಕಾಲೇಜು ಮೂಲಕ ರಾಮೋಹಳ್ಳಿ, ಚಂದ್ರಪ್ಪ ಸರ್ಕಲ್ – ತಾವರೆಕೆರೆ ಮೂಲಕ ಮಾಗಡಿ ರಸ್ತೆ ಮತ್ತು ತುಮಕೂರು ರಸ್ತೆಗೆ ಹೋಗಬಹುದು.

     

    ಸಿ.ಎಂ.ಟಿ.ಐ ಜಂಕ್ಷನ್‌ನಿಂದ ನಾಯಂಡಹಳ್ಳಿ ಮೈಸೂರು ರಸ್ತೆ ಕಡೆಗೆ ಹೋಗುವ ವಾಹನಗಳು ಗೊರಗುಂಟೆಪಾಳ್ಯ – ವೆಸ್ಟ್ ಆಫ್ ಕಾರ್ಡ್ ರಸ್ತೆ – ಎಂ ಸರ್ಕಲ್‌ – ವಿಜಯನಗರ ಮೂಲಕ ಮೈಸೂರು ರಸ್ತೆಗೆ ಸಂಚರಿಸಬಹುದಾಗಿದೆ.

    ಹಳೇ ರಿಂಗ್ ರಸ್ತೆಯಲ್ಲಿ ಕೆಂಗೇರಿ ಕಡೆಯಿಂದ ತುಮಕೂರು ರಸ್ತೆ ಕಡೆಗೆ ಬರುವ ವಾಹನಗಳು ಉಲ್ಲಾಳ, ಜಂಕ್ಷನ್ ನಲ್ಲಿ, ಎಡತಿರುವು ಪಡೆದು ಉಲ್ಲಾಳ ವಿಲೇಜ್, ರಾಮಸಂದ್ರ, ಬಿಟ್ ಹೆಮ್ಮಿಗೆ ಪರ – ತಾವರೆಕೆರೆ ಮೂಲಕ ತುಮಕೂರು ರಸ್ತೆಗೆ ಪ್ರಯಾಣಿಸಬಹುದು.

  • ಮೋದಿ ರೋಡ್ ಶೋಗೆ ಸಿದ್ಧವಾಗಿದೆ ಸ್ಪೆಷಲ್‌ ಬುಲೆಟ್ ಪ್ರೂಫ್ ವಾಹನ

    ಮೋದಿ ರೋಡ್ ಶೋಗೆ ಸಿದ್ಧವಾಗಿದೆ ಸ್ಪೆಷಲ್‌ ಬುಲೆಟ್ ಪ್ರೂಫ್ ವಾಹನ

    ಬೆಂಗಳೂರು:‌ ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ಏಪ್ರಿಲ್‌ 29ರ ಶನಿವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ಅಂದು ಮೋದಿ ನಡೆಸಲಿರುವ ಮೆಗಾ ರೋಡ್‌ ಶೋಗಾಗಿ (Road Show) ಬುಲೆಟ್ ಪ್ರೂಫ್ ವಾಹನ (Bulletproof Vehicles) ಸಿದ್ಧವಾಗಿದೆ.

    ಮೋದಿ ಪ್ರಚಾರಕ್ಕೆ ಎಸ್‌ಪಿಜಿ (SPG) ತಂಡ ಬೆಂಗಳೂರಿಗೆ ಸ್ಪೆಷಲ್ ಪ್ರೂಫ್ ವಾಹನ ಕಳುಹಿಸಿದೆ. ಆ ವಾಹನದಲ್ಲೇ ಮೋದಿ ರೋಡ್ ಶೋ ನಡೆಸಲಿದ್ದಾರೆ. ಬೆಂಗಳೂರು, ಮೈಸೂರು ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಇದೇ ವಾಹನದಲ್ಲಿ ಮೋದಿ ರೋಡ್ ಶೋ ನಡೆಸಲಿದ್ದಾರೆ. ಮೋದಿ ಸುರಕ್ಷತಾ ದೃಷ್ಟಿಯಿಂದಾಗಿ ಈ ಬಾರಿ ಬುಲೆಟ್ ಪ್ರೂಫ್ ವಾಹನ ಸಿದ್ಧಪಡಿಸಿದ್ದು, ಈಗಾಗಲೇ ಬೆಂಗಳೂರಿಗೆ ಬಂದಿಳಿದಿದೆ. ಇದನ್ನೂ ಓದಿ: ಅನುಷ್ಕಾ ಶೆಟ್ಟಿ ‘ಪೊನ್ನಿಯಿನ್ ಸೆಲ್ವನ್’ ಕೈಬಿಟ್ಟಿದ್ದಕ್ಕೆ ಮೀ ಟೂ ಕಾರಣವಾ?

    ಮಾಗಡಿ ರೋಡ್ ಬಂದ್: ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ರೋಡ್‌ ಶೋ ನಡೆಯಲಿರುವ ಹಿನ್ನೆಲೆಯಲ್ಲಿ ಅಂದು ಮಧ್ಯಾಹ್ನ 2 ಗಂಟೆಯಿಂದ ಮಾಗಡಿ ರಸ್ತೆ ಬಂದ್‌ ಆಗಲಿದೆ. ಬೆಳಗಾವಿಯಿಂದ ಬೆಂಗಳೂರಿಗೆ ಬರುತ್ತಿರುವ ಮೋದಿ ಅವರು ಸಂಜೆ 4.30ಕ್ಕೆ ಇಲ್ಲಿನ ಹೆಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದ್ದಾರೆ. ಅಲ್ಲಿಂದ ನೆಲಮಂಗಲದ ಬಿಐಇಸಿ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ಇದನ್ನೂ ಓದಿ: Mood Of Karnataka ಚಾಪ್ಟರ್‌ 2 – ಕಾಂಗ್ರೆಸ್ಸಿಗಿಲ್ಲ ಬಹುಮತ, ಮೊದಲಿಗಿಂತ ಬಿಜೆಪಿ ಸ್ವಲ್ಪ ಸುಧಾರಣೆ

    ನಂತರ ಬಿಐಇಸಿ ನಿಂದ ನೈಸ್‌ ರಸ್ತೆ ಮೂಲಕ ಮಾಗಡಿ ರಸ್ತೆಗೆ ಪ್ರಯಾಣ ಬೆಳೆಸಲಿದ್ದಾರೆ. ಮಾಗಡಿ ರಸ್ತೆಯಿಂದ ಸುಮ್ಮನಹಳ್ಳಿಯ ತನಕ ರೋಡ್ ಶೋ ನಡೆಸಲಿದ್ದಾರೆ. ಮೋದಿ ಬರುವ 1 ಗಂಟೆಗೂ ಮುನ್ನವೇ ನೈಸ್‌ ರಸ್ತೆ ಸಂಚಾರವನ್ನೂ ಬಂದ್‌ ಮಾಡಲಾಗುತ್ತದೆ.

    ಸುಮ್ಮನಹಳ್ಳಿ ರೋಡ್ ಶೋ ಬಳಿಕ ಗೊರಗುಂಟೆಪಾಳ್ಯ, ಮೇಖ್ರೀ ಸರ್ಕಲ್ ಮೂಲಕ ರಾಜಭವನಕ್ಕೆ ತೆರಳಲಿದ್ದಾರೆ. ಶನಿವಾರ ರಾಜಭವನದಲ್ಲೇ ವಾಸ್ತವ್ಯ ಹೂಡಲಿರೋ ಮೋದಿ, ಭಾನುವಾರ ನಿಗದಿತ ಕಾರ್ಯಕ್ರಮ ಮುಗಿಸಿ ಅಂದು ಸಂಜೆ ದೆಹಲಿಗೆ ಮರಳಲಿದ್ದಾರೆ.

  • JDS ಭದ್ರಕೋಟೆಯಲ್ಲಿ ಯೋಗಿ ಆದಿತ್ಯನಾಥ್ ರೋಡ್ ಶೋ

    JDS ಭದ್ರಕೋಟೆಯಲ್ಲಿ ಯೋಗಿ ಆದಿತ್ಯನಾಥ್ ರೋಡ್ ಶೋ

    ಮಂಡ್ಯ: ವಿಧಾನಸಭಾ ಚುನಾವಣೆ (Assembly election) ಹಿನ್ನೆಲೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಬುಧವಾರ ಕರ್ನಾಟಕಕ್ಕೆ (Karnataka)ಆಗಮಿಸಿದ್ದು, ಜೆಡಿಎಸ್ ಭದ್ರಕೋಟೆಯಾಗಿರುವ ಮಂಡ್ಯ (Mandya) ಜಿಲ್ಲೆಯಲ್ಲಿ ಬಿಜೆಪಿ (BJP) ಪರವಾಗಿ ಪ್ರಚಾರ ಕಾರ್ಯಕ್ರಮ ಆರಂಭಿಸಿದ್ದಾರೆ. ಮಂಡ್ಯದ ಪಿಇಎಸ್ ಹೆಲಿಪ್ಯಾಡ್‌ಗೆ ಆಗಮಿಸಿದ ಯೋಗಿ ಸಂಜಯ್ ವೃತ್ತದಿಂದ ರೋಡ್ ಶೋ (Road Show) ನಡೆಸಿದರು.

    ಹೆಲಿಕಾಪ್ಟರ್ ಮೂಲಕ ಮಂಡ್ಯಕ್ಕೆ ಆಗಮಿಸಿರುವ ಯೋಗಿ ಆದಿತ್ಯನಾಥ್ ಅವರನ್ನು ಬಿಜೆಪಿ ಮುಖಂಡರು ಸ್ವಾಗತಿಸಿದರು. ಯೋಗಿ ಅವರನ್ನು ಸಚಿವ ಅಶ್ವಥ್ ನಾರಾಯಣ್, ಸಂಸದ ಪ್ರತಾಪ್ ಸಿಂಹ ಹಾಗೂ ಸಂಸದೆ ಸುಮಲತಾ ಬರಮಾಡಿಕೊಂಡರು.

    ಯೋಗಿ ಆಗಮಿಸುತ್ತಲೇ ಅವರ ಪರ ಜಯಘೋಷ ಮುಗಿಲು ಮುಟ್ಟಿತು. ವಿವಿಧ ಕಲಾತಂಡಗಳು, ಪೂರ್ಣಕುಂಭದ ಮೂಲಕ ಸ್ವಾಗತ ಕೋರಿದವು. ಜನರು ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ಸೇರಿದ್ದರು. ಅಭಿಮಾನಿಗಳು ಹಾಗೂ ಕಾರ್ಯಕರ್ತರಿಂದ ಯೋಗಿ ಮೇಲೆ ಪುಷ್ಪವೃಷ್ಟಿ ಮಾಡಲಾಯಿತು. ಇದನ್ನೂ ಓದಿ: ಮೈಲಾರಿ ಹೋಟೆಲ್‌ನಲ್ಲಿ ತಾನೇ ದೋಸೆ ಹಾಕಿ ರುಚಿಗೆ ಫಿದಾ ಆದ ಪ್ರಿಯಾಂಕಾ ಗಾಂಧಿ

    ಸಂಜಯ್ ವೃತ್ತದಿಂದ ಯೋಗಿ ರೋಡ್ ಶೋ ಆರಂಭಿಸಿ, ತೆರದ ವಾಹನದಲ್ಲಿ ನಿಂತು ಜನರತ್ತ ಕೈ ಬೀಸಿದರು. ಅಶ್ವಥ್ ನಾರಾಯಣ್, ಪ್ರತಾಪ್ ಸಿಂಹ ಸುಮಲತಾ ಅಂಬರೀಶ್, ಮಂಡ್ಯ ಜಿಲ್ಲೆಯ 7 ಕ್ಷೇತ್ರದ ಅಭ್ಯರ್ಥಿಗಳು ಯೋಗಿಗೆ ಸಾಥ್ ನೀಡಿದರು. ರೋಡ್ ಶೋ ಮಹಾವೀರ ವೃತ್ತದವರೆ ಸುಮಾರು 800ಮೀ. ಸಾಗಿ ಕೊನೆಗೊಂಡಿತು. ರೋಡ್‌ ಶೋ ವೇಳೆ ಜನ ಕಿಕ್ಕಿರಿದು ಸೇರಿದ್ದರು. ಇದನ್ನೂ ಓದಿ: ಆಪರೇಷನ್ ಕಾವೇರಿ- 135 ಮಂದಿ ಭಾರತೀಯರಿದ್ದ 3ನೇ ತಂಡ ಸೌದಿಗೆ ರೀಚ್

  • ಯಾದಗಿರಿಯಲ್ಲಿ ಅಮಿತ್ ಶಾ ರೋಡ್ ಶೋ – ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ್ ಪರ ಮತಯಾಚನೆ

    ಯಾದಗಿರಿಯಲ್ಲಿ ಅಮಿತ್ ಶಾ ರೋಡ್ ಶೋ – ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ್ ಪರ ಮತಯಾಚನೆ

    ಯಾದಗಿರಿ: ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದಂತೆ, ಚುನಾವಣಾ (Election) ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ಆರಂಭಿಸಿವೆ.

    ಗಿರಿನಾಡು ಯಾದಗಿರಿ (Yadgiri) ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಮೂರೂ ಪಕ್ಷಗಳ ಅಭ್ಯರ್ಥಿಗಳು ಗೆಲುವಿನ ರಣೋತ್ಸಾಹದಲ್ಲಿದ್ದಾರೆ. ಆದರೆ ಈ ಬಾರಿ ಮತ್ತೊಮ್ಮೆ ಸರ್ಕಾರ ರಚಿಸುವ ಭರವಸೆಯಲ್ಲಿರುವ ಬಿಜೆಪಿ (BJP) ನಾಯಕರು ರೂಟ್ ಮ್ಯಾಪ್ ಮೂಲಕ ಪ್ರಚಾರ ಆರಂಭಿಸಿದ್ದಾರೆ. ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಪ್ರಚಾರ ನಡೆಸುತ್ತಿರುವ ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಇಂದು (ಮಂಗಳವಾರ) ಯಾದಗಿರಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ, ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ್ (Venkatreddy Mudnal) ಪರ ಭರ್ಜರಿ ರೋಡ್ ಶೋ (Road Show) ನಡೆಸಿ, ಮತಯಾಚನೆ ಮಾಡಲಿದ್ದಾರೆ. ಇದನ್ನೂ ಓದಿ: ಕೊಚ್ಚಿಯಲ್ಲಿ ಭಾರತದ ಮೊದಲ ವಾಟರ್ ಮೆಟ್ರೋ ಸೇವೆ – ಇಂದು ಪ್ರಧಾನಿ ಮೋದಿ ಚಾಲನೆ

    ಸಂಜೆ 4:20ಕ್ಕೆ ಯಾದಗಿರಿ ನಗರಕ್ಕೆ ಆಗಮಿಸಲಿರುವ ಅಮಿತ್ ಶಾ, ಯಾದಗಿರಿ ನಗರದ ಸರ್ಕಾರಿ ಡಿಗ್ರಿ ಕಾಲೇಜು ಬಳಿಯಿಂದ ಶಾಸ್ತ್ರೀ ಸರ್ಕಲ್‌ವರೆಗೂ ರೋಡ್ ಶೋ ನಡೆಸಲಿದ್ದಾರೆ. 4:20ರಿಂದ 5:30ರವರೆಗೂ ರೋಡ್ ಶೋ ನಡೆಯಲಿದೆ. ರೋಡ್ ಶೋನಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆಯಿದೆ. ರೋಡ್ ಶೋ ಹಿನ್ನಲೆ ಪೊಲೀಸರಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಜಿಲ್ಲಾ ಸಶಸ್ತ್ರ ಪಡೆ, ಪ್ಯಾರಾ ಮಿಲಿಟರಿ ಫೋರ್ಸ್ ಜೊತೆಗೆ ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೇ ಐವರು ಡಿವೈಎಸ್ಪಿ ಸೇರಿದಂತೆ 50ಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ. ಡ್ರೋನ್ ಕಣ್ಗಾವಲಿನಲ್ಲಿ ರೋಡ್ ಶೋ ನಡೆಯಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಮಾಡಲಾಗಿದೆ. ರೋಡ್ ಶೋ ನಡೆಯಲಿರುವ ರಸ್ತೆಯ ಎರಡೂ ಬದಿ ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದೆ. ಇದನ್ನೂ ಓದಿ: ವ್ಯಕ್ತಿ ಮುಖ್ಯವಲ್ಲ – ಶೆಟ್ಟರ್, ಸವದಿ ವಿರುದ್ಧ ಅಮಿತ್ ಶಾ ವಾಗ್ದಾಳಿ

    ಅಮಿತ್ ಶಾ ಆಗಮನದಿಂದ ಜಿಲ್ಲೆಯಲ್ಲಿದ್ದ ಬಿಜೆಪಿ ಬಂಡಾಯ ಶಮನಕ್ಕೆ ಟಾನಿಕ್ ನೀಡಿದಂತಾಗಿದೆ. ಯಾಕೆಂದರೆ ಹಾಲಿ ಶಾಸಕ ವೆಂಕಟರೆಡ್ಡಿ ಮುದ್ನಾಳ್‌ಗೆ ಟಿಕೆಟ್ ನೀಡದಂತೆ ಆರು ಜನ ಆಕಾಂಕ್ಷಿಗಳು ದೆಹಲಿ (Delhi) ಅಂಗಳ ತಲುಪಿದ್ದರು. ವಿರೋಧದ ನಡುವೆಯೂ ಹೈಕಮಾಂಡ್ ಹಾಲಿ ಶಾಸಕರಿಗೆ ಟಿಕೆಟ್ ನೀಡಿತ್ತು. ಆದರೆ ಇದೀಗ ಅಮಿತ್ ಶಾ ಆಗಮನದಿಂದ ಬಂಡಾಯ ಶಮನ ಆಗೋದು ಗ್ಯಾರಂಟಿ ಎನ್ನಲಾಗುತ್ತಿದೆ. ಇದನ್ನೂ ಓದಿ: ಕಣದಲ್ಲಿರುವ ಬಂಡಾಯ ವೀರರು ಯಾರು? ಹಿಂದೆ ಸರಿದವರು ಯಾರು?

  • ರೋಡ್ ಶೋ ಕ್ಯಾನ್ಸಲ್ – ಅಮಿತ್ ಶಾಗೆ ತಂದಿದ್ದ 250 ಕೆಜಿ ಸೇಬಿನ ಹಾರ ಕ್ಷಣದಲ್ಲೇ ಚಿಂದಿ

    ರೋಡ್ ಶೋ ಕ್ಯಾನ್ಸಲ್ – ಅಮಿತ್ ಶಾಗೆ ತಂದಿದ್ದ 250 ಕೆಜಿ ಸೇಬಿನ ಹಾರ ಕ್ಷಣದಲ್ಲೇ ಚಿಂದಿ

    ಬೆಂಗಳೂರು: ವಿಧಾನಸಭಾ ಚುನಾವಣೆ (Assembly Election)  ಹಿನ್ನೆಲೆ ಬಿಜೆಪಿ (BJP) ಪ್ರಚಾರ ಕಾರ್ಯಗಳನ್ನು ನಡೆಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ರಾಜ್ಯಕ್ಕೆ ಆಗಮಿಸಿದ್ದಾರೆ. ಆದರೆ ಶುಕ್ರವಾರ ನಿಗದಿಪಡಿಸಲಾಗಿದ್ದ ಶಾ ಅವರ ರೋಡ್ ಶೋವನ್ನು (Road Show) ಮಳೆಯ ಹಿನ್ನೆಲೆ ರದ್ದುಗೊಳಿಸಲಾಗಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ, ಮಳೆ ಬರುತ್ತಿರುವ ಹಿನ್ನೆಲೆ ರೋಡ್ ಶೋ ಮುಂದೂಡಿಕೆ ಮಾಡಿದ್ದೇವೆ. ಮಳೆ ಇರುವ ಕಾರಣ ತಮಗೆ ತೊಂದರೆ ಆಗಬಹುದು. ಮುಂದಿನ ದಿನಗಳಲ್ಲಿ ದಿನಾಂಕ ನಿಗದಿ ಮಾಡಿ ರೋಡ್ ಶೋ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ಅಮಿತ್ ಶಾ ಅವರು ಈಗಾಗಲೇ ಬೆಂಗಳೂರಿಗೆ (Bengaluru) ಬಂದಿದ್ದಾರೆ. ಮಳೆ ಹೆಚ್ಚಾದ ಕಾರಣದಿಂದ ಹೈಕಮಾಂಡ್ ನಾಯಕರು ಈ ರೋಡ್ ಶೋ ಕ್ಯಾನ್ಸಲ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಕಾರ್ಯಕ್ರಮ ಮಾಡುತ್ತೇವೆ. ಮತ್ತೆ ನಾವು ಇದೇ ಜಾಗದಲ್ಲಿ ಸೇರೋಣ. ವರುಣ ದೇವರು ನಮಗೆ ಆಶೀರ್ವಾದ ಮಾಡಿದ್ದಾರೆ. ಪುನಃ ಕಾರ್ಯಕ್ರಮ ಆಯೋಜಿಸಿ ಘೋಷಣೆ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮತ್ತೆ ಗೆಲ್ತಾರಾ ತಿಪ್ಪಾ ರೆಡ್ಡಿ – ಚಿತ್ರದುರ್ಗ ಅಖಾಡ ಹೇಗಿದೆ?

    ಅಮಿತ್ ಶಾ ರೋಡ್ ಶೋ ರದ್ದಾಗುತ್ತಿದ್ದಂತೆಯೇ ಅವರಿಗಾಗಿ ತರಿಸಲಾಗಿದ್ದ 250 ಕೆಜಿ ತೂಕದ ಸೇಬಿನ ಹಾರವನ್ನು (Apple Garland) ಜನರು ಚಿಂದಿ ಚಿಂದಿ ಮಾಡಿದ್ದಾರೆ. ಹಾರಕ್ಕೆ ಕೈ ಹಾಕಿ ಸೇಬುಗಳನ್ನು ಜನರು ಕಿತ್ತುಕೊಂಡು ಹೋಗಿದ್ದು, ಕ್ಷಣಾರ್ಧದಲ್ಲೇ ಹಾರದಲ್ಲಿದ್ದ ಸೇಬುಗಳೆಲ್ಲವೂ ಖಾಲಿಯಾಗಿ ಹೋಗಿದೆ. ಇದನ್ನೂ ಓದಿ: ಹಿರಿಯೂರಲ್ಲಿ ಡಿಕೆಶಿ ಆಪ್ತ ಸುಧಾಕರ್, ಬಿಎಸ್‌ವೈ ದತ್ತು ಪುತ್ರಿ ಪೂರ್ಣಿಮಾ ಮಧ್ಯೆ ಜಟಾಪಟಿ

  • ಏ.21, 22ರಂದು ದಾವಣಗೆರೆ, ದೇವನಹಳ್ಳಿಯಲ್ಲಿ ಅಮಿತ್ ಶಾ ರೋಡ್ ಶೋ

    ಏ.21, 22ರಂದು ದಾವಣಗೆರೆ, ದೇವನಹಳ್ಳಿಯಲ್ಲಿ ಅಮಿತ್ ಶಾ ರೋಡ್ ಶೋ

    – ಏ. 25ರ ಬಳಿಕ ಮೋದಿ ಎಂಟ್ರಿ

    ನವದೆಹಲಿ: ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗಳು ಅಂತ್ಯಗೊಳ್ಳುವ ಬೆನ್ನಲ್ಲೇ ಪ್ರಚಾರದ ಕಾವು ಹೆಚ್ಚಿಸಲು ಬಿಜೆಪಿ (BJP) ಹೈಕಮಾಂಡ್ ತೀರ್ಮಾನಿಸಿದೆ. ಇದರ ಭಾಗವಾಗಿ ಏಪ್ರಿಲ್ 21 ಮತ್ತು 22 ರಂದು ದಾವಣಗೆರೆ (Davanagere) ಮತ್ತು ದೇವನಹಳ್ಳಿಯಲ್ಲಿ (Devanahalli) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ರೋಡ್ ಶೋ (Road Show) ನಡೆಸಲಿದ್ದಾರೆ. ಈಗಾಗಲೇ ಚುನಾವಣೆ ಅಖಾಡಕ್ಕೆ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಧುಮುಕಿದ್ದು ಇದರ ಬೆನ್ನಲ್ಲೇ ಶಾ ಹಾಗೂ ಮೋದಿ ಜೋಡಿ ಕಮಾಲ್ ಮಾಡಲು ಸಿದ್ಧವಾಗಿದೆ.

    ಏಪ್ರಿಲ್ 21-23 ರವರೆಗೆ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸದಲ್ಲಿರಲಿದ್ದು ಇಲ್ಲಿ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಮತ್ತು ಕೆಲವು ಪ್ರಮುಖ ಮಠಾಧೀಶರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ಹೇಳಿವೆ. ಇದೇ ವೇಳೆ ಅಮಿತ್ ಶಾ ರಾಜ್ಯ ನಾಯಕರೊಂದಿಗೆ ಸಭೆ ನಡೆಸಲಿದ್ದು ಪ್ರಚಾರದ ಕಾರ್ಯತಂತ್ರ ಹೆಣೆಯಲಿದ್ದಾರೆ.

    ಅಮಿತ್ ಶಾ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅಖಾಡಕ್ಕೆ ಇಳಿಯಲಿದ್ದು ಏಪ್ರಿಲ್ 25ರ ಬಳಿಕ ಸುಮಾರು 15-20 ರೋಡ್ ಶೋ, ಸಮಾವೇಶ, ರ‍್ಯಾಲಿಗಳಲ್ಲಿ ಭಾಗಿಯಾಗಲಿದ್ದಾರೆ. ಚುನಾವಣೆ ಘೋಷಣೆಗೂ ಮುನ್ನ 7 ಬಾರಿ ಮೋದಿ ರಾಜ್ಯಕ್ಕೆ ಭೇಟಿ ನೀಡಿದ್ದು ಆ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಮೋದಿ ಪ್ರಚಾರ ಮಾಡಲಿದ್ದಾರೆ. ಈ ಪ್ರಚಾರದಲ್ಲಿ ಬಂಡಾಯ ನಾಯಕರ ಕ್ಷೇತ್ರಗಳು ಪ್ರಮುಖವಾಗಿರಲಿವೆ ಎನ್ನಲಾಗಿದೆ. ಇದನ್ನೂ ಓದಿ: ಬೊಮ್ಮಾಯಿ ಮಾಮಾನನ್ನು ಮತ್ತೊಮ್ಮೆ ಗೆಲ್ಲಿಸಿ: ಜನರಲ್ಲಿ ಸುದೀಪ್‌ ಮನವಿ

    ಕರಾವಳಿ ಕರ್ನಾಟಕ, ಹುಬ್ಬಳ್ಳಿ ಸೇರಿದಂತೆ ಇತರೆ ಹಿಂದುತ್ವದ ಒಲವಿರುವ ಪ್ರದೇಶಗಳಲ್ಲಿ ಯೋಗಿ ಅಸ್ತ್ರ ಪ್ರಯೋಗಿಸಲು ತೀರ್ಮಾನಿಸಿದ್ದು ಈ ಭಾಗದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರಚಾರ ಮಾಡಲಿದ್ದಾರೆ. ಈ ದಿನಾಂಕಗಳು ಇನ್ನೆರಡು ದಿನಗಳಲ್ಲಿ ಚುನಾವಣೆ ಆಯೋಗಕ್ಕೆ ಸಲ್ಲಿಕೆಯಾಗಲಿದೆ. ಇದನ್ನೂ ಓದಿ: ಕನಕಪುರದಲ್ಲಿ ನಾನು ಅಭ್ಯರ್ಥಿಯಲ್ಲ: ಡಿಕೆ ಶಿವಕುಮಾರ್

  • ಬೊಮ್ಮಾಯಿ ಪರ ಕಿಚ್ಚ ಸುದೀಪ್ ಕ್ಯಾಂಪೇನ್ – ಶಿಗ್ಗಾಂವಿ ಕ್ಷೇತ್ರದಲ್ಲಿ ಇಂದು ಮಿಂಚಿನ ಸಂಚಾರ

    ಬೊಮ್ಮಾಯಿ ಪರ ಕಿಚ್ಚ ಸುದೀಪ್ ಕ್ಯಾಂಪೇನ್ – ಶಿಗ್ಗಾಂವಿ ಕ್ಷೇತ್ರದಲ್ಲಿ ಇಂದು ಮಿಂಚಿನ ಸಂಚಾರ

    ಹಾವೇರಿ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ರಂಗು ದಿನದಿಂದ ದಿನಕ್ಕೆ ಹೆಚ್ಚಾಗಿದೆ. ರಾಜ್ಯದಲ್ಲಿ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿದೆ. ಗುರುವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಹೀಗಾಗಿ ಹೈವೋಲ್ಟೇಜ್ ಕ್ಷೇತ್ರವಾದ ಸಿಎಂ ಬಸವರಾಜ ಬೊಮ್ಮಾಯಿಯ (Basavaraj Bommai) ಶಿಗ್ಗಾಂವಿ (Shiggaavi) ಕ್ಷೇತ್ರಕ್ಕೆ ನಟ ಕಿಚ್ಚ ಸುದೀಪ್ (Sudeep) ಆಗಮಿಸಲಿದ್ದಾರೆ. ಸುದೀಪ್ ಆಗಮನ ಬೊಮ್ಮಾಯಿಗೆ ಬಲವನ್ನು ತಂದುಕೊಡಲಿದೆ.

    ಶಿಗ್ಗಾಂವಿ ಪಟ್ಟಣದ ನಗರದ ಪ್ರಮುಖ ಬೀದಿಗಳಲ್ಲಿ ಕಿಚ್ಚ ಸುದೀಪ್ 1 ಗಂಟೆ 15 ನಿಮಿಷಗಳ ಕಾಲ ರೋಡ್ ಶೋ (Road Show) ನಡೆಸಲಿದ್ದಾರೆ. ಬೆಳಗ್ಗೆ 10:45ಕ್ಕೆ ಹುಬ್ಬಳ್ಳಿಯಿಂದ ಶಿಗ್ಗಾಂವಿ ಹೆಲಿಪ್ಯಾಡ್‌ಗೆ ಆಗಮಿಸಿ, 11 ಗಂಟೆಗೆ ಬೊಮ್ಮಾಯಿ ಪರ ಬೃಹತ್ ರೋಡ್ ಶೋದಲ್ಲಿ ಕಿಚ್ಚ ಸುದೀಪ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಾಗವಹಿಸಲಿದ್ದಾರೆ.

    ಶಿಗ್ಗಾಂವಿ ಪಟ್ಟಣದ ಸಂತೆಮೈದಾನದಿಂದ ಬೃಹತ್ ರೋಡ್ ಶೋ ಪ್ರಾರಂಭ ಆಗಲಿದೆ. ಚೆನ್ನಮ್ಮ ವೃತ್ತ, ಹಳೆ ಬಸ್ ನಿಲ್ದಾಣದ ಮಾರ್ಗವಾಗಿ ತಾಲೂಕು ಕ್ರೀಡಾಂಗಣವರೆಗೆ ಸುಮಾರು 2 ಕಿ.ಮೀ ರೋಡ್ ಶೋ ನಡೆಸಲಿದ್ದಾರೆ. 12:15ಕ್ಕೆ ಶಿಗ್ಗಾಂವಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬಿಜೆಪಿ ಬೃಹತ್ ಸಮಾವೇಶ ನಡೆಯಲಿದೆ. 2023 ರ ಚುನಾವಣೆಯಲ್ಲಿ ಬೊಮ್ಮಾಯಿ ಹೇಳಿದವರಿಗೆ ಬೆಂಬಲಿಸುತ್ತೇನೆ ಎಂದು ಹೇಳಿದ್ದ ಬಳಿಕ ಇಂದು ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಸುದೀಪ್ ಧುಮುಕಲಿದ್ದಾರೆ.

    ಸುದೀಪ್ ಪ್ರಚಾರದಿಂದ ಬೊಮ್ಮಾಯಿಗೆ ಯಾವ ರೀತಿ ಲಾಭ?
    * ಹೆಸರಾಂತ ನಟನ ನೋಡಲು ಸಾಗರೋಪಾದಿಯಲ್ಲಿ ಸೇರಲಿರುವ ಜನರು.
    * ಅದ್ದೂರಿ ರೋಡ್ ಶೋಗೆ ಸ್ಟಾರ್ ಪ್ರಚಾರಕನಿಂದ ಮೆರಗು.
    * ಸುದೀಪ್ ರೋಡ್ ಶೋದಿಂದ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿ.
    * ಕಿಚ್ಚನ ಪ್ರಚಾರದಿಂದ ಜಾತಿ ಲೆಕ್ಕಾಚಾರದಲ್ಲೂ ಮತಬುಟ್ಟಿ ತುಂಬುವ ನಿರೀಕ್ಷೆ.
    * ವಾಲ್ಮೀಕಿ ಸಮಾಜಕ್ಕೆ ಸೇರಿದ ಸುದೀಪ್ ಪ್ರಚಾರದಿಂದ ವಾಲ್ಮೀಕಿ ಮತಗಳು ಬೊಮ್ಮಾಯಿ ಕಡೆ ವಾಲುವ ನಿರೀಕ್ಷೆ. ಇದನ್ನೂ ಓದಿ: ಕೈ ಅಭ್ಯರ್ಥಿಯ ಬಿ ಫಾರಂಗೆ ತಡೆ – ಪದ್ಮನಾಭನಗರದಲ್ಲಿ ಅಶೋಕ್‌ ವಿರುದ್ಧ ಡಿಕೆ ಸುರೇಶ್‌ ಕಣಕ್ಕೆ?

    ಬೊಮ್ಮಾಯಿ ಕ್ಷೇತ್ರದಲ್ಲಿ ನಟ ಕಿಚ್ಚ ಸುದೀಪ್ ಭರ್ಜರಿ ರೋಡ್ ಶೋ ಮಾಡುವ ಮೂಲಕ ಮತಯಾಚನೆ ಮಾಡಲಿದ್ದಾರೆ. ವಾಲ್ಮೀಕಿ ಸಮುದಾಯದ ಮತ ಹಾಗೂ ಅಭಿಮಾನಿಗಳ ವೋಟ್ ಬಿಜೆಪಿ ಪರ ವಾಲುತ್ತದೋ ಇಲ್ಲವೋ ಅನ್ನೋದು ಕಾದು ನೋಡಬೇಕಾಗಿದೆ. ನಟ ಸುದೀಪ್ ಪ್ರಚಾರದಿಂದ ಹೀಗೆ ನೂರೆಂಟು ಲೆಕ್ಕಾಚಾರ ರಾಜಕೀಯ ಪಡಸಾಲೆಯಲ್ಲಿ ನಡೆದಿದೆ. ಇದರಿಂದ ಬೊಮ್ಮಾಯಿ ಗೆಲುವಿಗೆ ಬಹಳಷ್ಟು ಸಹಕಾರಿ ಆಗಲಿದೆ. ಇದನ್ನೂ ಓದಿ: ಎನ್‌ಸಿಪಿ ಲೋಗೋ ತೆಗೆದ ಅಜಿತ್‌ ಪವಾರ್‌ – ಮಹಾ ಬಿಜೆಪಿ ಜತೆ ಮೈತ್ರಿಗೆ 40 ಶಾಸಕರ ಸಮ್ಮತಿ?