Tag: ರೋಡ್ ಶೋ

  • ಬೆಂಗಳೂರಿನಲ್ಲಿ ಮೋದಿ ಮೆಗಾ ರೋಡ್‌ ಶೋ – ಯಾವ ಸಮಯದಲ್ಲಿ ಎಲ್ಲಿ? ಯಾವ ರಸ್ತೆಯಲ್ಲಿ ಸಂಚಾರ?

    ಬೆಂಗಳೂರಿನಲ್ಲಿ ಮೋದಿ ಮೆಗಾ ರೋಡ್‌ ಶೋ – ಯಾವ ಸಮಯದಲ್ಲಿ ಎಲ್ಲಿ? ಯಾವ ರಸ್ತೆಯಲ್ಲಿ ಸಂಚಾರ?

    ಬೆಂಗಳೂರು: ಚುನಾವಣಾ ಪ್ರಚಾರದ ಅಂತಿಮ ಘಟ್ಟದಲ್ಲಿ ಮತಶಿಕಾರಿ ನಡೆಸಲು ವಾರದ ಕೊನೆಯಲ್ಲಿ ಮೂರನೇ ಬಾರಿ ರಾಜ್ಯಕ್ಕೆ ಬಂದಿರುವ ಪ್ರಧಾನಿ ಮೋದಿ (Narendra Modi) ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ಬೃಹತ್ ರೋಡ್ ಶೋ (Road Show) ನಡೆಸಲಿದ್ದಾರೆ.

    ಶನಿವಾರ ಬೆಳಗ್ಗೆ 10ಕ್ಕೆ ಆರಂಭವಾಗಿ ಮಧ್ಯಾಹ್ನ 12:30 ಗಂಟೆಯವರೆಗೆ 26.5 ಕಿಲೋ ಮೀಟರ್ ರೋಡ್ ಶೋ ನಡೆಯಲಿದೆ. ಬ್ರಿಗೇಡ್ ಮಿಲೇನಿಯಂ ರಸ್ತೆಯಿಂದ ಮಲ್ಲೇಶ್ವರಂ 18ನೇ ಕ್ರಾಸ್‌ ವರೆಗೆ 11 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಯಲಿದೆ.


    ಯಾವ ಸಮಯದಲ್ಲಿ ಎಲ್ಲಿ?
    10:00 – ಶ್ರೀ ಸೋಮೇಶ್ವರ ಸಭಾ ಭವನ
    10:10 – ಜೆಪಿ ನಗರ 5ನೇ ಹಂತ
    10:20 – ಜಯನಗರ 5ನೇ ಬ್ಲಾಕ್
    10:30 – ಜಯನಗರ 4ನೇ ಬ್ಲಾಕ್
    10:40 – ಸೌತ್ ಎಂಡ್ ಸರ್ಕಲ್
    10:45 – ಮಾಧವರಾವ್ ವೃತ್ತ
    11:00 – ರಾಮಕೃಷ್ಣ ಆಶ್ರಮ
    11:05 – ಉಮಾ ಥಿಯೇಟರ್ ಸಿಗ್ನಲ್
    11:15 – ಮೈಸೂರು ಸಿಗ್ನಲ್
    11:25 – ಟೋಲ್ ಗೇಟ್ ಸಿಗ್ನಲ್
    11:35 – ಗೋವಿಂದರಾಜನಗರ
    11:45 – ಮಾಗಡಿ ರೋಡ್ ಜಂಕ್ಷನ್
    12:00 – ಶಂಕರ ಮಠ ಚೌಕ
    12:20 – ಮಲ್ಲೇಶ್ವರಂ ವೃತ್ತ
    12:30-18ನೇ ಅಡ್ಡ ರಸ್ತೆ ಜಂಕ್ಷನ್, ಸಂಪಿಗೆ ರಸ್ತೆ

    ಮೋದಿ ಸಂಚರಿಸುವ ರಸ್ತೆಗಳು:
    ಬ್ರಿಗೇಡ್ ಮಿಲೇನಿಯಂ ರೋಡ್, ಟಿಎಂಸಿ ಲೇಔಟ್, ಮಾರೇನಹಳ್ಳಿ ರೋಡ್, ಜೆಪಿನಗರ 5ನೇ ಹಂತ, ಜಯನಗರ ಮೆಟ್ರೋ ಸ್ಟೇಷನ್, ಜಯನಗರ ಟ್ರಾಫಿಕ್ ಪೊಲೀಸ್ ಸ್ಟೇಷನ್, ಆರ್.ವಿ ರೋಡ್, ಸೌತ್ ಎಂಡ್ ಸರ್ಕಲ್, ಆರ್ಮುಗಂ ಸರ್ಕಲ್, ಮಾಧವ ರಾವ್ ಸರ್ಕಲ್, ದೊಡ್ಡ ಗಣಪತಿ ಟೆಂಪಲ್ ಜಂಕ್ಷನ್, ರಾಮಕೃಷ್ಣ ಆಶ್ರಮ, ಉಮಾ ಥಿಯೇಟರ್ ಸಿಗ್ನಲ್, ಟಿ.ಆರ್. ಮಿಲ್ ಜಂಕ್ಷನ್, ಶಿರ್ಸಿ ಸರ್ಕಲ್, ಬಿನ್ನಿಮಿಲ್ ಸರ್ಕಲ್, ಕುಷ್ಠರೋಗ ಆಸ್ಪತ್ರೆ, ಮಾಗಡಿ ರೋಡ್ ಟೋಲ್‍ಗೇಟ್.   ಇದನ್ನೂ ಓದಿ: 90ರ ವಯಸ್ಸಿನಲ್ಲಿ ಬಂದು ನಿಮ್ಮ ಬಳಿ ಕೈ ಚಾಚುತ್ತಿದ್ದೇನೆ, ನಿಖಿಲ್ ಗೆಲ್ಲಿಸಿ: ಹೆಚ್‍ಡಿಡಿ ಕಣ್ಣೀರು


    ವೀರೇಶ್ ಥಿಯೇಟರ್, ಬಿಎಸ್‍ಎನ್‍ಎಲ್ ವಿಜಯನಗರ , ನಾಗರಬಾವಿ ಮುಖ್ಯರಸ್ತೆ, ಗೋವಿಂದರಾಜನಗರ, ಮಾಗಡಿ ರೋಡ್ ಜಂಕ್ಷನ್, ಹಾವನೂರು ಸರ್ಕಲ್, ಬಸವೇಶ್ವರನಗರ, ಶಂಕರಮಠ, ಮೋದಿ ಹಾಸ್ಪಿಟಲ್ ಸಿಗ್ನಲ್, ನವರಂಗ್ ಬ್ರಿಡ್ಜ್, ಮಹಾಕವಿ ಕುವೆಂಪು ರಸ್ತೆ, ಕೆ.ಸಿ. ಜನರಲ್ ಆಸ್ಪತ್ರೆ, ಸಂಪಿಗೆ ರಸ್ತೆ, ಮಲ್ಲೇಶ್ವರ, ಕಾಡು ಮಲ್ಲೇಶ್ವರ ದೇವಸ್ಥಾನ.

  • ರೋಡ್ ಶೋನಿಂದ ಒಬ್ಬ ವಿದ್ಯಾರ್ಥಿಗೂ ತೊಂದರೆಯಾಗಬಾರದು ಅಂದ್ರು ಪ್ರಧಾನಿ: ಶೋಭಾ ಕರಂದ್ಲಾಜೆ

    ರೋಡ್ ಶೋನಿಂದ ಒಬ್ಬ ವಿದ್ಯಾರ್ಥಿಗೂ ತೊಂದರೆಯಾಗಬಾರದು ಅಂದ್ರು ಪ್ರಧಾನಿ: ಶೋಭಾ ಕರಂದ್ಲಾಜೆ

    – ಮೋದಿ ರೋಡ್ ಶೋ ವೇಳೆ ಅಂಬುಲೆನ್ಸ್ ತರಲು ಕಾಂಗ್ರೆಸ್ ಸಂಚು

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ವಿದ್ಯಾರ್ಥಿಗಳ (Students) ಮೇಲೆ ವಿಶೇಷ ಕಾಳಜಿ ಇದೆ. ಅವರ ಅಪೇಕ್ಷೆಯಂತೆಯೇ ಬೆಂಗಳೂರಿನಲ್ಲಿ (Bengaluru) ನಡೆಯಬೇಕಿದ್ದ ಶನಿವಾರ ಹಾಗೂ ಭಾನುವಾರದ ರೋಡ್ ಶೋಗಳಲ್ಲಿ (Road Show) ಬದಲಾವಣೆ ಮಾಡಲಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೋಭಾ, ಮೋದಿಯವರ ರೋಡ್ ಶೋ ಮೇ 6 ಹಾಗೂ 7 ಕ್ಕೆ ಇದೆ. ಅದಕ್ಕಾಗಿ ಎಲ್ಲ ತಯಾರಿಯ ಬಗ್ಗೆ ಕಾರ್ಯಕರ್ತರಿಗೆ ಮಾಹಿತಿ ಕೊಟ್ಟಿದ್ದೆವು. ಆದರೆ ಭಾನುವಾರ ನೀಟ್ ಪರೀಕ್ಷೆ ಇದ್ದು, ರೋಡ್ ಶೋದಿಂದ ಅಭ್ಯರ್ಥಿಗಳಿಗೆ ಸಮಸ್ಯೆ ಆಗುವ ಬಗ್ಗೆ ಪ್ರಧಾನಿಯವರ ಗಮನಕ್ಕೆ ತಂದೆವು. ಪ್ರಧಾನಿಯವರು ಮಕ್ಕಳ ಪರೀಕ್ಷೆ ಬಗ್ಗೆ ಕಾಳಜಿಯುಳ್ಳವರು. ಪರೀಕ್ಷೆ ಬಗ್ಗೆ ಚರ್ಚೆ ನಡೆಸಿ, ರೋಡ್ ಶೋದಿಂದ ಒಬ್ಬ ವಿದ್ಯಾರ್ಥಿಗೂ ತೊಂದರೆ ಆಗಬಾರದು ಎಂದು ಹೇಳಿ ಬದಲಾವಣೆ ಮಾಡಿಸಿದರು ಎಂದು ತಿಳಿಸಿದರು.

    ನೀಟ್ ಪರೀಕ್ಷೆ ಮಕ್ಕಳ ಭವಿಷ್ಯ ಬರೆಯುತ್ತದೆ. ಮೋದಿಯವರಿಗೆ ವಿದ್ಯಾರ್ಥಿಗಳ ಮೇಲೆ ವಿಶೇಷ ಕಾಳಜಿ ಇದೆ. ಪ್ರಧಾನಿ ಅಪೇಕ್ಷೆಯಂತೆ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ. ಶನಿವಾರ ಮತ್ತು ಭಾನುವಾರದ ಕಾರ್ಯಕ್ರಮಗಳು ಅದಲು ಬದಲಾಯಿಸಿದ್ದೇವೆ. 26.5 ಕಿ.ಮೀ.ನ ದೊಡ್ಡ ರೋಡ್ ಶೋ ಶನಿವಾರ ಇರಲಿದ್ದು, ಭಾನುವಾರ ಚಿಕ್ಕ ರೋಡ್ ಶೋ ಇರುತ್ತದೆ. ಇದರಿಂದ ಯಾವುದೇ ಮಕ್ಕಳಿಗೆ ಸಮಸ್ಯೆ ಆಗದಂತೆ ನೋಡಿಕೊಂಡಿದ್ದೇವೆ. ಭಾನುವಾರದ ರೋಡ್ ಶೋ ನಡೆಯುವ ದಾರಿಯಲ್ಲಿ ಪರೀಕ್ಷಾ ಕೇಂದ್ರಗಳು ಕಡಿಮೆ ಇದೆ. ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಿದರೆ ಪೊಲೀಸರು ಪರೀಕ್ಷಾ ಕೇಂದ್ರಕ್ಕೆ ಹೋಗಲು ಅವಕಾಶ ಕೊಡುತ್ತಾರೆ. ಪೊಲೀಸರಿಗೆ ಸಹಕರಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ನೀಟ್ ಅಭ್ಯರ್ಥಿಗಳಿಗೆ ಸಂಚಾರದ ಆತಂಕ – ಬೆಂಗಳೂರಲ್ಲಿ ಮೋದಿ ರೋಡ್ ಶೋನಲ್ಲಿ ಮತ್ತೆ ಬದಲಾವಣೆ

    ಕಾಂಗ್ರೆಸ್ ಷಡ್ಯಂತ್ರ:
    ಮೋದಿ ರೋಡ್ ಶೋಗೆ ಕಾಂಗ್ರೆಸ್‌ನವರು ಷಡ್ಯಂತ್ರ ಮಾಡಿದ್ದಾರೆ. ರೋಡ್ ಶೋ ವೇಳೆ ಅಂಬುಲೆನ್ಸ್ಗಳನ್ನು ತರಲು ಕಾಂಗ್ರೆಸ್ ಸಂಚು ಮಾಡಿದೆ. ನಾವು ಯಾವುದೇ ಅಂಬುಲೆನ್ಸ್ಗೂ ಭಂಗ ಮಾಡದೇ ಹೋಗಲು ಅವಕಾಶ ನೀಡುತ್ತೇವೆ. ಆದರೆ ಅಂಬುಲೆನ್ಸ್ಗಳಲ್ಲಿ ರೋಗಿ ಇದ್ದಾರೋ, ಇಲ್ಲವೋ ಎಂಬುದನ್ನು ತಪಾಸಣೆ ಮಾಡುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಕಾಂಗ್ರೆಸ್ ಮೋದಿ ರೋಡ್ ಶೋ ಬಗ್ಗೆ ಅಪಪ್ರಚಾರ ಮಾಡುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡಬೇಡಿ, ಮೋದಿ ರ‍್ಯಾಲಿ ರದ್ದು ಮಾಡಿ: ಹೆಚ್‌ಡಿಕೆ ವಾಗ್ದಾಳಿ

  • ನೀಟ್ ಅಭ್ಯರ್ಥಿಗಳಿಗೆ ಸಂಚಾರದ ಆತಂಕ – ಬೆಂಗಳೂರಲ್ಲಿ ಮೋದಿ ರೋಡ್ ಶೋನಲ್ಲಿ ಮತ್ತೆ ಬದಲಾವಣೆ

    ನೀಟ್ ಅಭ್ಯರ್ಥಿಗಳಿಗೆ ಸಂಚಾರದ ಆತಂಕ – ಬೆಂಗಳೂರಲ್ಲಿ ಮೋದಿ ರೋಡ್ ಶೋನಲ್ಲಿ ಮತ್ತೆ ಬದಲಾವಣೆ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Assembly Election) ಹಿನ್ನೆಲೆ ಬಿಜೆಪಿ (BJP) ಪರವಾಗಿ ಭರ್ಜರಿ ಪ್ರಚಾರದಲ್ಲಿ ತೊಡಗಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ರಾಜ್ಯಾದ್ಯಂತ ರೋಡ್ ಶೋಗಳನ್ನು (Road Show) ನಡೆಸುತ್ತಿದ್ದಾರೆ. ಇದೀಗ ಶನಿವಾರ ಹಾಗೂ ಭಾನುವಾರ ರಾಜಧಾನಿ ಬೆಂಗಳೂರಿನಲ್ಲಿ (Bengaluru) ನಡೆಯಬೇಕಿದ್ದ ರೋಡ್ ಶೋನಲ್ಲಿ ಮತ್ತೆ ಬದಲಾವಣೆ ಮಾಡಲಾಗಿದೆ.

    ಮೋದಿ ರೋಡ್ ಶೋ ನಡೆಯಲಿರುವ ದಿನ ಪ್ರಮುಖ ರಸ್ತೆಗಳನ್ನು ಬಂದ್ ಮಾಡುವುದಾಗಿ ಪೊಲೀಸರು ಸೂಚನೆ ನೀಡಿದ್ದಾರೆ. ಆದರೆ ಭಾನುವಾರ ನೀಟ್ ಪರೀಕ್ಷೆಯೂ ನಡೆಯಲಿದ್ದು ಅಂದು ಕೂಡಾ ಮೋದಿ ರೋಡ್ ಶೋ ನಿಗದಿಪಡಿಸಲಾಗಿದೆ. ಇದರಿಂದ ಅಭ್ಯರ್ಥಿಗಳು ಹಾಗೂ ಪೋಷಕರು ಪರೀಕ್ಷಾ ಕೇಂದ್ರಗಳಿಗೆ ಹೋಗೋದು ಹೇಗೆ ಎಂಬ ಆತಂಕದಲ್ಲಿದ್ದಾರೆ. ಹೀಗಾಗಿ ಮೋದಿ ರೋಡ್ ಶೋನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

    ಶನಿವಾರ ಮತ್ತು ಭಾನುವಾರಗಳ ರೋಡ್ ಶೋಗಳನ್ನು ಅದಲು ಬದಲು ಮಾಡಲಾಗಿದೆ. ಭಾನುವಾರ ಬೆಳಗ್ಗೆ ನಿಗದಿಯಾಗಿದ್ದ ರೋಡ್ ಶೋವನ್ನು ಶನಿವಾರಕ್ಕೆ ಶಿಫ್ಟ್ ಮಾಡಲಾಗಿದ್ದು, ಶನಿವಾರ ಬೆಳಗ್ಗೆ ನಿಗದಿಯಾಗಿದ್ದ ರೋಡ್ ಶೋ ಭಾನುವಾರಕ್ಕೆ ಶಿಫ್ಟ್ ಮಾಡಲಾಗಿದೆ. ಜೊತೆಗೆ ರೋಡ್ ಶೋ ಸಾಗುವ ದೂರವನ್ನೂ ಕಡಿತ ಮಾಡಲಾಗಿದೆ. ಇದನ್ನೂ ಓದಿ: ಬಜರಂಗದಳ ನಿಷೇಧ ವಿಚಾರಕ್ಕೆ ಕೈ ಹಾಕಿದ್ರೆ ಹುಷಾರ್: ಸಿದ್ದಲಿಂಗ ಶ್ರೀಗಳಿಂದ ಡಿಕೆಶಿಗೆ ಎಚ್ಚರಿಕೆ

    ಶನಿವಾರ ಬೆಳಗ್ಗೆ 10 ಗಂಟೆಯಿಂದ 12:30 ರವರೆಗೆ ರೋಡ್ ಶೋ ನಡೆಯಲಿದೆ. ಇದು ಜೆಪಿ ನಗರ ಬ್ರಿಗೇಡ್ ಮಿಲೇನಿಯಂನಿಂದ ಮಲ್ಲೇಶ್ವರಂ ಸರ್ಕಲ್ ಮಾರಮ್ಮ ಟೆಂಪಲ್ ವರೆಗೆ ನಡೆಯಲಿದೆ. ಭಾನುವಾರ ಬೆಳಗ್ಗೆ 10 ಗಂಟೆಯಿಂದ 11:30 ರವರೆಗೆ ರೋಡ್ ಶೋ ನಡೆಯಲಿದ್ದು, ಇದು ಸುರಂಜನ್ ದಾಸ್ ಸರ್ಕಲ್ ನಿಂದ ಟ್ರಿನಿಟಿ ಸರ್ಕಲ್ ವರೆಗೆ ಸಾಗಲಿದೆ. ಮಾತ್ರವಲ್ಲದೇ ಭಾನುವಾರ ನಡೆಯುವ ರೋಡ್ ಶೋದಲ್ಲಿ 4 ಕಿ.ಮೀ ಕಡಿತ ಮಾಡಲಾಗಿದೆ.

    ಈ ಬಾರಿ ಮೋದಿ ಬೆಂಗಳೂರಿನ 18 ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ. ಮೋದಿ ರೋಡ್ ಶೋ ಸಾಗುವ ಮಾರ್ಗದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಸುಮಾರು 37 ಕಿ.ಮೀ ರೋಡ್ ಶೋ ನಡೆಯಲಿದ್ದು, ದಾರಿಯುದ್ದಕ್ಕೂ ಬಿಗಿ ಭದ್ರತೆಯನ್ನು ಮಾಡಲಾಗಿದೆ. ಬಿಬಿಎಂಪಿ ಸಿಬ್ಬಂದಿಯಿಂದ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದು, 3 ದಿನ ಫುಟ್‌ಪಾತ್ ವ್ಯಾಪಾರಕ್ಕೂ ಬ್ರೇಕ್ ಬೀಳುವ ಸಾದ್ಯತೆಯಿದೆ. ಬೆಂಗಳೂರು ದಕ್ಷಿಣ ಹಾಗೂ ಕೇಂದ್ರ ಭಾಗದಲ್ಲಿ ಅತಿ ಹೆಚ್ಚು ನೀಟ್ ಪರೀಕ್ಷೆ ಕೇಂದ್ರಗಳು ಇದ್ದು, ಭಾನುವಾರ ಸಾವಿರಾರು ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇದನ್ನೂ ಓದಿ: ರಾಜಕೀಯಕ್ಕೆ ಅಖಾಡಕ್ಕೆ ರಮೇಶ್ ಅರವಿಂದ್? ಸ್ಪಷ್ಟನೆ ನೀಡಿದ ನಟ

  • ಮೋದಿ ಬೆಂಗಳೂರು ರೋಡ್ ಶೋನಲ್ಲಿ ಬದಲಾವಣೆ – ಶನಿವಾರ, ಭಾನುವಾರ ಎರಡು ದಿನ ಮತ ಬೇಟೆ

    ಮೋದಿ ಬೆಂಗಳೂರು ರೋಡ್ ಶೋನಲ್ಲಿ ಬದಲಾವಣೆ – ಶನಿವಾರ, ಭಾನುವಾರ ಎರಡು ದಿನ ಮತ ಬೇಟೆ

    ಬೆಂಗಳೂರು: ಟ್ರಾಫಿಕ್ ಮತ್ತು ಮಳೆಯ ಕಾರಣದಿಂದ ಮೇ 6ರಂದು ನಿಗದಿಯಾಗಿದ್ದ ಮೋದಿ (Narendra Modi) ಬೆಂಗಳೂರು (Bengaluru) ರೋಡ್ ಶೋನಲ್ಲಿ ಬದಲಾವಣೆ ಮಾಡಲು ಬಿಜೆಪಿ ಮುಂದಾಗಿದೆ.

    ಚುನಾವಣೆ (Election) ಹಿನ್ನೆಲೆ ಮೋದಿ ರಾಜ್ಯದಲ್ಲಿ ಪ್ರವಾಸ ಕೈಗೊಂಡಿದ್ದು, ಮೇ 6ರಂದು ಬೆಂಗಳೂರಿನಲ್ಲಿ ರೋಡ್ ಶೋ (Road Show) ನಡೆಸಲಿದ್ದಾರೆ. ಒಂದು ಇಡೀ ದಿನ ರೋಡ್ ಶೋ ನಡೆಸುವುದರಿಂದ ಬೆಂಗಳೂರಿನಲ್ಲಿ ಟ್ರಾಫಿಕ್ ಅಸ್ತವ್ಯಸ್ತಗೊಳ್ಳಲಿದೆ. ಅಲ್ಲದೇ ಸತತವಾಗಿ ಮಳೆ ಬರುತ್ತಿರುವ ಹಿನ್ನೆಲೆ ಸ್ವತಃ ಮೋದಿಯವರೇ ಶನಿವಾರ ಮತ್ತು ಭಾನುವಾರ ಎರಡು ದಿನ ರೋಡ್ ಶೋ ಆಯೋಜಿಸುವಂತೆ ಸೂಚನೆ ನೀಡಿದ್ದಾರೆ. ಈ ಕುರಿತು ಬಿಜೆಪಿ (BJP) ನಾಯಕರು ಗುರುವಾರ ಮಧ್ಯಾಹ್ನ ಮಹತ್ವದ ಸಭೆಯನ್ನು ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಇದನ್ನೂ ಓದಿ: ಅಂಜನಾದ್ರಿ ಅಭಿವೃದ್ಧಿ ಮಾಡ್ತೇವೆ, ಯುವಕರಿಗೆ ಆಂಜನೇಯನ ವಿಚಾರಗಳ ಬೆಳೆಸಲು ವಿಶೇಷ ಕಾರ್ಯಕ್ರಮ: ಡಿಕೆಶಿ

    ಶನಿವಾರ ಬೆಳಗ್ಗೆ ಮತ್ತು ಸಂಜೆಯಿಂದ ರಾತ್ರಿಯವರೆಗೂ ಮೋದಿ ರೋಡ್ ಶೋ ನಡೆಸಲು ಈ ಮೊದಲು ಸಿದ್ಧತೆ ನಡೆಸಲಾಗಿತ್ತು. ಇದೀಗ ಶನಿವಾರ ಮಧ್ಯಾಹ್ನದ ನಂತರದ ರೋಡ್ ಶೋ ಕಾರ್ಯಕ್ರಮವನ್ನು ಭಾನುವಾರಕ್ಕೆ ಶಿಫ್ಟ್ ಮಾಡುವ ಸಾಧ್ಯತೆಯಿದೆ. ಶನಿವಾರ ಬೆಳಗ್ಗಿನಿಂದ ಮಧ್ಯಾಹ್ನದವರೆಗಿನ ಮೋದಿ ರೋಡ್ ಶೋನಲ್ಲಿ ಯಾವುದೇ ಬದಲಾವಣೆಯಿಲ್ಲ. ಇದನ್ನೂ ಓದಿ: ಅಗತ್ಯವಿದ್ದರೆ ರಾಜ್ಯದಲ್ಲೂ ಬಜರಂಗದಳ ನಿಷೇಧ ಮಾಡ್ತೀವಿ – ಛತ್ತೀಸಗಢ ಸಿಎಂ

    ಶನಿವಾರ 10.1 ಕಿ.ಮೀ ರೋಡ್ ಶೋ ನಡೆಸಲಿದ್ದು, ಮಧ್ಯಾಹ್ನ 4ರಿಂದ ರಾತ್ರಿ 9 ಗಂಟೆವರೆಗೆ ನಿಗದಿಯಾಗಿದ್ದ ರೋಡ್ ಶೋವನ್ನು ಭಾನುವಾರ ಬೆಳಗ್ಗೆ ಮುಂದುವರೆಸಲಿದ್ದಾರೆ. ಭಾನುವಾರ ಒಟ್ಟು 26.5 ಕಿ.ಮೀ ರೋಡ್ ಶೋ ನಡೆಯುವ ಸಾಧ್ಯತೆಯಿದೆ. ಇದನ್ನೂ ಓದಿ: ತಂದೆಗೆ ಟಿಕೆಟ್ ಸಿಕ್ಕಿದ್ದಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿದ ಬಿಜೆಪಿ ಅಭ್ಯರ್ಥಿಯ ಪುತ್ರ – ಕಾಂಗ್ರೆಸ್‍ನಿಂದ ವೀಡಿಯೋ ರಿಲೀಸ್

    ಏಪ್ರಿಲ್ 29 ರಂದು ಮೋದಿ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಿದ್ದರು. ಮಾಗಡಿ ರಸ್ತೆಯ ನೈಸ್ ರೋಡ್‌ನಿಂದ ಸುಮನಹಳ್ಳಿವರೆಗೆ ಮೋದಿ ಬೆಂಗಳೂರು ಉತ್ತರ ಕ್ಷೇತ್ರವನ್ನು ಗುರಿಯಾಗಿಸಿ ಮತಯಾಚನೆ ಮಾಡಿದ್ದರು. ಇದನ್ನೂ ಓದಿ: ಚಾಮರಾಜನಗರದಲ್ಲಿ ಹೈವೋಲ್ಟೇಜ್‌ ಫೈಟ್‌ – ಅಖಾಡದಲ್ಲಿ ಸಚಿವ ಸೋಮಣ್ಣ vs ಸಿದ್ದು ಶಿಷ್ಯ; ಯಾರಾಗ್ತಾರೆ ಪೈಲ್ವಾನ್?

  • ಬೆಂಗಳೂರಿನಲ್ಲಿ ಅಹಮದಾಬಾದ್‌ ತಂತ್ರ – ಒಂದೇ ದಿನ ಮೆಗಾ ರೋಡ್‌ ಶೋ

    ಬೆಂಗಳೂರಿನಲ್ಲಿ ಅಹಮದಾಬಾದ್‌ ತಂತ್ರ – ಒಂದೇ ದಿನ ಮೆಗಾ ರೋಡ್‌ ಶೋ

    ಬೆಂಗಳೂರು: ಪ್ರಧಾನಿ ಮೋದಿ (PM Narendra Modi) ರೋಡ್ ಶೋಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ ಕರ್ನಾಟಕದಲ್ಲೂ (Karnataka) ಗುಜರಾತ್ ಮಾಡೆಲ್ ಸ್ಟ್ರಾಟರ್ಜಿ ಶುರುವಾಗಿದೆ.

    ರಾಜಧಾನಿ ಬೆಂಗಳೂರಿನಲ್ಲಿ ಗುಜರಾತ್‍ನ ಅಹಮದಾಬಾದ್ (Gujarat Ahmedabad) ತಂತ್ರಕ್ಕೆ ಬಿಜೆಪಿ (BJP) ಮೊರೆ ಹೋಗಿದೆ. ಅಹಮದಾಬಾದ್‍ನಲ್ಲಿ ಆಯೋಜಿಸಿದ್ದ ಬಿಗ್ ರೋಡ್ ಶೋ ಈಗ ಬೆಂಗಳೂರಿನಲ್ಲಿ (Bengaluru) ಮಾಡಲಾಗುತ್ತಿದೆ.

     

    ಕಳೆದ ಡಿಸೆಂಬರ್ 1ರಂದು ಅಹಮದಾಬಾದ್‌ನ 13 ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಮೋದಿ ಒಟ್ಟು 50 ಕಿ.ಮೀ ಮೆಗಾ ರೋಡ್‌ ಶೋ ನಡೆಸಿದ್ದರು. ಅಹಮದಾಬಾದ್ ರೋಡ್ ಶೋದಿಂದ ಬಿಜೆಪಿಗೆ ಭರ್ಜರಿ ಲಾಭ ಸಿಕ್ಕಿದ ಬೆನ್ನಲ್ಲೇ ಬೆಂಗಳೂರಲ್ಲೂ ಈಗ ಅದೇ ಮಾದರಿಯ ಮೆಗಾ ರೋಡ್ ಶೋ ನಡೆಯಲಿದೆ. ಈ ಮೂಲಕ ಈ ಸಲ 15 ಹಾಲಿ ಸೀಟ್‍ಗಳಿಂದ 20ಕ್ಕೆ ಏರಿಸಿಕೊಳ್ಳಲು ಬಿಜೆಪಿ ಕಸರತ್ತು ನಡೆಸುತ್ತಿದೆ. ಇದನ್ನೂ ಓದಿ: ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಸೇರಿದ್ದು ಹೇಗೆ? – ಇನ್‌ಸೈಡ್‌ ಸ್ಟೋರಿ

    ಬೆಂಗಳೂರಿನಲ್ಲಿ ಅಹಮದಾಬಾದ್ ತಂತ್ರ
    ಮೇ. 6 ರಂದು ಒಂದೇ ದಿನ ಎರಡು ಹಂತದಲ್ಲಿ ರೋಡ್ ಶೋ ನಡೆಯಲಿದೆ. ಬೆಳಗ್ಗೆ 8 ಕಿ.ಮೀ, ಮಧ್ಯಾಹ್ನ 29.4 ಕಿ.ಮೀ ರೋಡ್ ಶೋಗೆ ರೂಟ್‍ಮ್ಯಾಪ್ ಸಿದ್ಧಪಡಿಸಲಾಗಿದೆ. ಇಲ್ಲೂ ಸುಮಾರು 13 ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೋದಿ ಮೆಗಾ ರೋಡ್ ಶೋ ನಡೆಯಲಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಮತ್ತೆ ಮೋದಿ ಕ್ಯಾಂಪೇನ್- 38 ಕಿ.ಮೀಟರ್ ರೋಡ್ ಶೋಗೆ ಪ್ಲ್ಯಾನ್

    ಗುಜರಾತ್ ರೀತಿ ಚುನಾವಣೆಗೆ ಮೂರ್ನಾಲ್ಕು ದಿನಗಳಿರುವಾಗ ಮೋದಿ ಈ ತಂತ್ರ ಪ್ರಯೋಗ ಮಾಡಿದ್ದರು. ರಾಜಧಾನಿಯಲ್ಲಿ ಮೋದಿಯವರ ವರ್ಚಸ್ಸೇ ಬಿಜೆಪಿಯ ಗೆಲುವಿನ ಸೂತ್ರವಾಗಿದ್ದು ನಮೋ ಮೂಲಕವೇ ಮತ ಬೇಟೆ ನಡೆಸಲು ಬಿಜೆಪಿ ಮುಂದಾಗಿದೆ.

  • ವಿಧಾನಸಭೆ ಚುನಾವಣೆ 2023: ಸುದೀಪ್ ರೋಡ್ ಶೋ ಮತ್ತೆ ರದ್ದು

    ವಿಧಾನಸಭೆ ಚುನಾವಣೆ 2023: ಸುದೀಪ್ ರೋಡ್ ಶೋ ಮತ್ತೆ ರದ್ದು

    ಕಿಚ್ಚ ಸುದೀಪ್ (Sudeep) ಇಂದು ಬೆಳಗಾವಿ (Belgaum) ಜಿಲ್ಲೆಯ ಬಿಜೆಪಿ (BJP) ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ತೆರಳಿದ್ದಾರೆ. ಇಂದು ಒಟ್ಟು ನಾಲ್ಕು ಕ್ಷೇತ್ರಗಳಲ್ಲಿ ಅವರು ರೋಡ್ ಶೋ (Road Show) ನಡೆಸಬೇಕಿತ್ತು. ಅದರಲ್ಲಿ ಒಂದು ರದ್ದಾಗಿದೆ (Canceled). ಬೆಳಗಾವಿ ಜಿಲ್ಲೆಯ, ಬೆಳಗಾವಿ ಗ್ರಾಮೀಣ ಕ್ಷೇತ್ರ ಪ್ರಚಾರದ ರೋಡ್ ಶೋ ತಾರೀಹಾಳದಲ್ಲಿ ನಡೆಯಬೇಕಿತ್ತು. ಅದು ರದ್ದಾಗಿದೆ.

    ಬೆಳಗ್ಗೆ 11.20ಕ್ಕೆ ಕಿತ್ತೂರು ಕ್ಷೇತ್ರದ ನೇಸರಗಿಯಲ್ಲಿ ಕಿಚ್ಚ ರೋಡ್ ಶೋ ನಡೆಸಿದರು. ಅದು ಮುಗಿಯುತ್ತಿದ್ದಂತೆಯೇ ಅವರು ತಾರೀಹಾಳ ಗ್ರಾಮಕ್ಕೆ ಹೋಗಬೇಕಿತ್ತು. ಆದರೆ, ಯುವಕನೊಬ್ಬನ ಹತ್ಯೆಯಾದ ಕಾರಣದಿಂದಾಗಿ ರೋಡ್ ಶೋ ರದ್ದಾಗಿದೆ. ಕ್ಷುಲ್ಲಕ ಕಾರಣಕ್ಕಾಗಿ ಯುವಕನೊಬ್ಬನ ಮರ್ಡರ್ ಆಗಿರುವ ಕಾರಣದಿಂದಾಗಿ ರದ್ದು ಪಡಿಸಲಾಗಿದೆ. ಇದನ್ನೂ ಓದಿ:ದೇಶವು ಸುರಕ್ಷಿತರ ಕೈಯಲ್ಲಿದೆ, ಭಯಪಡಬೇಕಿಲ್ಲ ಸಲ್ಮಾನ್ ಎಂದ ಕಂಗನಾ

    ಮಧ್ಯಾಹ್ನ 1 ಗಂಟೆಗೆ ತಾರೀಹಾಳದಲ್ಲಿ ರೋಡ್ ಶೋ ನಡೆಯಬೇಕಿತ್ತು. ರದ್ದಾಗಿದ್ದರಿಂದ ಆ ಸಮಯದಲ್ಲಿ ಊಟ ಮುಗಿಸಿಕೊಂಡು ಯಮಕನಮರಡಿ ಕ್ಷೇತ್ರದ ಅಭ್ಯರ್ಥಿಯ ಪರವಾಗಿ ವಂಟಮೂರಿ ಗ್ರಾಮದಲ್ಲಿ ಕಿಚ್ಚ ರೋಡ್ ಶೋ ನಡೆಸಿದ್ದಾರೆ. ಅಲ್ಲಿಂದ ಬೆಳಗಾವಿ ಉತ್ತರ ಮತ್ತು ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಸುದೀಪ್ ರೋಡ್ ಶೋ ಮಾಡಬೇಕಿದೆ.

    ಎರಡು ದಿನಗಳ ಹಿಂದೆಯೂ ಎರಡು ಕ್ಷೇತ್ರಗಳ ಪ್ರಚಾರದಲ್ಲಿ ಸುದೀಪ್ ಭಾಗಿಯಾಗಲು ಆಗಿರಲಿಲ್ಲ. ನವಲಗುಂದ ಮತ್ತು ಗದಗ ಕ್ಷೇತ್ರಗಳಿಗೆ ನಿಗದಿ ಆಗಿದ್ದ ಕಾರ್ಯಕ್ರಮದಲ್ಲಿ ವ್ಯತ್ಯಾಸವುಂಟಾಗಿದ್ದರಿಂದ  ಆ ಎರಡೂ ರೋಡ್ ಶೋಗಳು ಮೊನ್ನೆಯಷ್ಟೇ ರದ್ದಾಗಿದ್ದವು. ಎರಡು ದಿನಗಳ ಕಾಲ ವಿಶ್ರಾಂತಿ ಪಡೆದುಕೊಂಡು ಮತ್ತೆ ಇಂದು ಸುದೀಪ್ ಪ್ರಚಾರಕ್ಕೆ ತೆರಳಿದ್ದರು.

  • ತಪ್ಪಿ ಮೋದಿಯತ್ತ ಎಸೆದ ಮೊಬೈಲ್ ಮರಳಿ ಮಹಿಳೆಯ ಕೈಗೆ ಸಿಕ್ತು!

    ತಪ್ಪಿ ಮೋದಿಯತ್ತ ಎಸೆದ ಮೊಬೈಲ್ ಮರಳಿ ಮಹಿಳೆಯ ಕೈಗೆ ಸಿಕ್ತು!

    ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ (Mysuru) ಭಾನುವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಅದ್ಧೂರಿಯಾಗಿ ನಡೆಯಿತು. ಈ ವೇಳೆ ಮೋದಿಯತ್ತ ಹೂವಿನ ದಳಗಳೊಂದಿಗೆ ಎಸೆದಿದ್ದ ಮೊಬೈಲ್ (Mobile) ಫೋನ್ ಅನ್ನು ಮಹಿಳೆಗೆ ವಾಪಸ್ ನೀಡಿದ್ದಾರೆ.

    ವಿಧಾನಸಭಾ ಚುನಾವಣೆಯ ಪ್ರಚಾರದ ರಂಗು ತುಂಬಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 4 ಕಿ.ಮೀವರೆಗೆ ರೋಡ್ ಶೋ (Road Show) ನಡೆಸಿ ಗಮನ ಸೆಳೆದಿದ್ದರು. ರೋಡ್ ಶೋದ ರಸ್ತೆಯ ಇಕ್ಕೆಲಗಳಗಲ್ಲಿ ಬಿಜೆಪಿ (BJP) ಕಾರ್ಯಕರ್ತರು, ಅಭಿಮಾನಿಗಳು ಮೋದಿ ನೋಡಿ ಪುಳಕಿತರಾದರು. ಅಷ್ಟೇ ಅಲ್ಲದೇ ಮೋದಿ, ಮೋದಿ ಎಂದು ಕೂಗಿ ಸಂಭ್ರಮಿಸಿದ್ದರು. ದಾರಿಯುದ್ದಕ್ಕೂ ಮೋದಿಗೆ ಹೂ ಸುರಿಸಿದರು. ಆದರೆ ಚಿಕ್ಕಗಡಿಯಾರದ ಬಳಿ ಹೂಗಳ ಮಧ್ಯೆ ಅಚಾನಕ್ ಆಗಿ ಮೊಬೈಲ್‍ವೊಂದು ತೂರಿ ಬಂದಿತ್ತು.

    ಮೊಬೈಲ್ ಬಿದ್ದ ಹಿನ್ನೆಲೆಯಲ್ಲಿ ಕೆಲ ಕಾಲ ಆತಂಕ ಸೃಷ್ಟಿ ಆಗಿತ್ತು. ಅದನ್ನು ಸ್ವತಃ ಮೋದಿ ಹಾಗೂ ಎಸ್‍ಪಿಜಿಯವರು ಗಮನಿಸಿದ್ದರು. ಅಷ್ಟೇ ಅಲ್ಲದೇ ಮೋದಿ ಅವರು ರೋಡ್ ಶೋ ವೇಳೆಯೇ ಮೊಬೈಲ್ ಅನ್ನು ಹಿಂದಿರುಗಿಸುವಂತೆ ಸನ್ನೆಯನ್ನು ಮಾಡಿದ್ದರು. ಆದರೆ ಮೊಬೈಲ್ ಪ್ರಚಾರದ ವಾಹನದ ಮೇಲ್ಗಡೆ ಬಿದ್ದಿದ್ದರಿಂದ ಯಾವುದೇ ಅನಾಹುತಗಳು ಆಗಿರಲಿಲ್ಲ. ಆದರೂ ರೋಡ್ ಶೋ ವೇಳೆ ಪ್ರಧಾನಿ ಮೋದಿಗೆ ಭದ್ರತಾ ಲೋಪ ಆಗಿದೆಯಾ ಎನ್ನುವ ಚರ್ಚೆಯೂ ಹುಟ್ಟುಹಾಕಿತ್ತು. ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ – ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ಮಳೆ

    ಇದೀಗ ಘಟನೆಗೆ ಸಂಬಂಧಿಸಿ ಎಡಿಜಿಪಿ ಅಲೋಕ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಮೊಬೈಲ್ ಫೋನ್ ಎಸೆದವರು ಮಹಿಳಾ ಬಿಜೆಪಿ ಕಾರ್ಯಕರ್ತೆಯಾಗಿದ್ದಾರೆ. ಅವರು ದುರುದ್ದೇಶದಿಂದ ಮೊಬೈಲ್ ಅನ್ನು ಎಸೆದಿಲ್ಲ, ಬದಲಿಗೆ ಹೂ ದಳಗಳನ್ನು ಎಸೆಯುವಾಗ ಆಕಸ್ಮಿಕವಾಗಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಎಸ್‍ಪಿಜಿಯವರು ಮೊಬೈಲ್ ಅನ್ನು ಮಹಿಳೆಗೆ ಹಿಂದಿರುಗಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಾಣಿಜ್ಯ ಬಳಕೆಯ LPG ಸಿಲಿಂಡರ್‌ ಬೆಲೆ ಭಾರೀ ಇಳಿಕೆ

  • ಮೋದಿ ರೋಡ್ ಶೋ ವೇಳೆ ಹೂ ಜೊತೆ ಮೊಬೈಲ್ ಎಸೆದ ಅಭಿಮಾನಿ

    ಮೋದಿ ರೋಡ್ ಶೋ ವೇಳೆ ಹೂ ಜೊತೆ ಮೊಬೈಲ್ ಎಸೆದ ಅಭಿಮಾನಿ

    ಮೈಸೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ರೋಡ್ ಶೋ (Road Show) ವೇಳೆ ಅಭಿಮಾನಿಯೊಬ್ಬರು ಹೂವಿನ ಜೊತೆಗೆ ಮೊಬೈಲ್ (Mobile) ಎಸೆದ ಘಟನೆ ಮೈಸೂರಿನಲ್ಲಿ (Mysuru) ನಡೆದಿದೆ.

    ಮೈಸೂರಿನಲ್ಲಿ ಸುಮಾರು 4 ಕಿ.ಮೀವರೆಗೆ ಮೋದಿ ರೋಡ್ ಶೋ ನಡೆಸಿದರು. ಈ ವೇಳೆ ಪ್ರಧಾನಿ ಮೋದಿ ಅವರು ಕೇಸರಿ ಶಾಲು ಧರಿಸಿ ಗಮನ ಸೆಳೆದರು. ರೋಡ್ ಶೋದ ರಸ್ತೆ ಇಕ್ಕೆಲೆಗಳಲ್ಲಿ ಕೇಸರಿ ಕಾರ್ಯಕರ್ತರು, ಅಭಿಮಾನಿಗಳು ಮೋದಿ ನೋಡಿ ಪುಳಕಿತರಾದರು. ದಾರಿಯುದ್ಧಕ್ಕೂ ಹೂಮಳೆ ಸುರಿಸಿದರು. ಹೂ ಹಾಕುವಾಗ ಅಭಿಮಾನಿಯೊಬ್ಬನ ಮೊಬೈಲ್ ಅಚಾನಕ್ ತೂರಿ ಬಂದ ಘಟನೆ ನಡೆದಿದೆ. ಆದರೆ ಮೊಬೈಲ್ ಪ್ರಚಾರ ವಾಹನದ ಮೇಲ್ಗಡೆ ಬಿದ್ದಿದ್ದು, ಯಾವುದೇ ತೊಂದರೆ ಸಂಭವಿಸಿಲ್ಲ. ಇದನ್ನೂ ಓದಿ: ಮೈಸೂರಿನಲ್ಲಿ ಮೋದಿ ಮೇನಿಯಾ – 4 ಕಿ.ಮೀ. ಭರ್ಜರಿ ರೋಡ್‍ ಶೋಗೆ ಜನಸಾಗರ

    ಇತ್ತೀಚೆಗಷ್ಟೇ ಕೇರಳದ ಕೊಚ್ಚಿ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ಶೋ ವೇಳೆ ಮೊಬೈಲ್‌ ಎಸೆಯಲಾಗಿತ್ತು. ಈ ವೇಳೆ ಅಲ್ಲಿದ್ದ ಭದ್ರತಾ ಸಿಬ್ಬಂದಿ  ಇದನ್ನು ಗಮನಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾಗಿ  ಮೋದಿಗೆ ತಗಲದಂತೆ ನೋಡಿಕೊಂಡಿದ್ದಾರೆ. ಈ ಬಳಿಕ ತನಿಖೆ ನಡೆಸಿದ್ದಾಗ ಪ್ರಧಾನಿಯವರ ಮೇಲೆ ಹೂವಿನ ದಳಗಳನ್ನು ಸುರಿಸುವುದಕ್ಕೆ ಯತ್ನಿಸುತ್ತಿದ್ದಾಗ ವ್ಯಕ್ತಿಯೊಬ್ಬರ ಕೈಯಿಂದ ಫೋನ್ ಕೈತಪ್ಪಿ ಹೋಗಿತ್ತು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮೋದಿ ನೋಡಲು 6 ತಿಂಗಳ ಮಗುವಿನೊಂದಿಗೆ ಬೆಂಗಳೂರಿನಿಂದ ಬಂದ ಮಹಿಳೆ

  • ಮೋದಿ ನೋಡಲು 6 ತಿಂಗಳ ಮಗುವಿನೊಂದಿಗೆ ಬೆಂಗಳೂರಿನಿಂದ ಬಂದ ಮಹಿಳೆ

    ಮೋದಿ ನೋಡಲು 6 ತಿಂಗಳ ಮಗುವಿನೊಂದಿಗೆ ಬೆಂಗಳೂರಿನಿಂದ ಬಂದ ಮಹಿಳೆ

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ (Mysuru) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ರೋಡ್‌ ಶೋವನ್ನು (Road Show) ವೀಕ್ಷಿಸಲು ತಾಯಿಯೊಬ್ಬರು (Mother) ಆರು ತಿಂಗಳ ಮಗುವನ್ನು ಕರೆದುಕೊಂಡು ಬಂದಿದ್ದಾರೆ.

    ಹಳೆ ಮೈಸೂರು ಭಾಗದಲ್ಲಿ ನಡೆದ ರೋಡ್ ಶೋದಲ್ಲಿ ಮೋದಿ ಅವರನ್ನು ಹತ್ತಿರದಿಂದ ನೋಡಬೇಕೆಂಬ ಆಸೆಯಿಂದ ಬೆಂಗಳೂರು ಮೂಲದ ಶೋಭಾ ಎಂಬುವವರು ರಾತ್ರಿ ಸಮಯದಲ್ಲೇ ತನ್ನ ಆರು ತಿಂಗಳ ಮಗುವನ್ನು ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಮಗುವಿಗೆ ಬಾಟಲಿಯಲ್ಲೇ ಹಾಲು ಕುಡಿಸುತ್ತಾ ರೋಡ್‌ ಶೋವನ್ನು ಹತ್ತಿರದಿಂದ ವೀಕ್ಷಿಸಿ ಖುಷಿಪಟ್ಟರು. ಇದನ್ನೂ ಓದಿ: ಮೋದಿ ಸಮಾವೇಶಕ್ಕೆ ಜನ ಸೇರಿಸಲು ಹಣ ಹಂಚಿಕೆ ಆರೋಪ – ಪಿ.ರಾಜೀವ್ ವಿರುದ್ದ ಎಫ್‌ಐಆರ್

    ಪಬ್ಲಿಕ್ ಟಿವಿಯೊಂದಿಗೆ ಮಾತಾನಾಡಿದ ಶೋಭಾ, ನಾವು ಬೆಂಗಳೂರಿನಲ್ಲಿ ಮೋದಿ ಅವರನ್ನು ನೋಡಬೇಕೆಂದು ಆಸೆ ಪಟ್ಟಿದ್ದೆವು. ಆದರೆ ಅವರನ್ನು ನೋಡಲು ಸಾದ್ಯವಾಗಲಿಲ್ಲ. ಇಂದು ಮೈಸೂರಿಗೆ ಬರುವುದರ ಬಗ್ಗೆ ಮಾಹಿತಿ ಇತ್ತು. ಹಾಗಾಗಿ ಅವರನ್ನು ನೋಡಬೇಕು ಎನ್ನುವ ಕುತೂಹಲ ಮೂಡಿತ್ತು. ಹೀಗಾಗಿ ಇಂದು ಅವರನ್ನು ನೋಡಲು ಬಂದೆ. ತಮ್ಮ ಮಗುವು ಭವಿಷ್ಯದದಲ್ಲಿ ಇದೇ ರೀತಿ ನಾಯಕ ಆಗಬೇಕು ಎಂದು ಹಂಬಲವಿದೆ ಎಂದರು. ಇದನ್ನೂ ಓದಿ: ಮೈಸೂರಿನಲ್ಲಿ ಮೋದಿ ಮೇನಿಯಾ – 4 ಕಿ.ಮೀ. ಭರ್ಜರಿ ರೋಡ್‍ ಶೋಗೆ ಜನಸಾಗರ

  • ಮೈಸೂರಿನಲ್ಲಿ ಮೋದಿ ಮೇನಿಯಾ – 4 ಕಿ.ಮೀ. ಭರ್ಜರಿ ರೋಡ್‍ ಶೋಗೆ ಜನಸಾಗರ

    ಮೈಸೂರಿನಲ್ಲಿ ಮೋದಿ ಮೇನಿಯಾ – 4 ಕಿ.ಮೀ. ಭರ್ಜರಿ ರೋಡ್‍ ಶೋಗೆ ಜನಸಾಗರ

    ಮೈಸೂರು: ಕರ್ನಾಟಕದಲ್ಲಿ (Karnataka) ಈ ಬಾರಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರಬೇಕು ಅಂತ ಪ್ರಧಾನಿ ಮೋದಿ (Narendra Modi) ಪಟ್ಟ ತೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ (Mysuru) ಸುಮಾರು 4 ಕಿ.ಮೀವರೆಗೆ ಮೋದಿ ರೋಡ್ ಶೋ (Road Show) ನಡೆಸಿದರು.

    ಮತದಾನಕ್ಕೆ ಇನ್ನು 10 ದಿನ ಬಾಕಿ ಇದ್ದು ರೋಡ್‍ಶೋ, ರ‍್ಯಾಲಿಗಳನ್ನು ತೀವ್ರಗೊಳಿಸಿದ್ದಾರೆ. 2ನೇ ದಿನವಾದ ಇವತ್ತು ಕೋಲಾರ, ಚನ್ನಪಟ್ಟಣ, ಬೇಲೂರು, ಮೈಸೂರಿನಲ್ಲಿ ಅಬ್ಬರದ ಪ್ರಚಾರ ನಡೆಸಿದರು. ಕೋಲಾರ, ಚನ್ನಪಟ್ಟಣ, ಬೇಲೂರಿನಲ್ಲಿ ಬೃಹತ್ ಸಮಾವೇಶದ ಬಳಿಕ ಮೈಸೂರಿನ ಓವೆಲ್ ಮೈದಾನದಲ್ಲಿ ಇಳಿದ ಮೋದಿ ಬಳಿಕ ರೋಡ್ ಶೋ ನಡೆಸಿದರು.

    ನಿನ್ನೆ ಬೆಂಗಳೂರಿನಲ್ಲಿ ನಡೆಸಿದಂತೆ ಅರಮನೆ ನಗರಿ ಮೈಸೂರಿನಲ್ಲಿ ಇವತ್ತು ಸುಮಾರು 4 ಕಿ.ಮೀ. ರೋಡ್ ಶೋ ನಡೆಸಿದರು. ಈ ವೇಳೆ ಪ್ರಧಾನಿ ಮೋದಿ ಅವರು ಕೇಸರಿ ಶಾಲು ಧರಿಸಿ ಗಮನ ಸೆಳೆದರು. ರೋಡ್ ಶೋದ ರಸ್ತೆ ಇಕ್ಕೆಲೆಗಳಲ್ಲಿ ಕೇಸರಿ ಕಾರ್ಯಕರ್ತರು, ಅಭಿಮಾನಿಗಳು ಮೋದಿ ನೋಡಿ ಪುಳಕಿತರಾದರು. ದಾರಿಯುದ್ಧಕ್ಕೂ ಹೂಮಳೆ ಸುರಿಸಿದರು. ಹೂ ಹಾಕುವಾಗ ಅಭಿಮಾನಿಯೊಬ್ಬನ ಮೊಬೈಲ್ ಅಚಾನಕ್ ತೂರಿ ಬಂದ ಘಟನೆಯೂ ನಡೆಯಿತು. ಮೊಬೈಲ್ ಪ್ರಚಾರ ವಾಹನದ ಮೇಲ್ಗಡೆ ಬಿತ್ತು.ಇದನ್ನೂ ಓದಿ: ಕಾಲಿಗೆ ಬೀಳಲು ಬಂದ ನಾಯಕರಿಗೆ ಬುದ್ಧಿ ಹೇಳಿದ ಮೋದಿ

    ಗನ್‍ಹೌಸ್ ಸರ್ಕಲ್‍ನಿಂದ ಆರಂಭವಾದ ಪವರ್ ಶೋ, ಕಾಪೋರೇಷನ್ ಸರ್ಕಲ್, ಸಿಟಿ ಬಸ್ ನಿಲ್ದಾಣ, ಕೆ.ಆರ್ ಸರ್ಕಲ್, ಸಯ್ಯಾಜಿ ರಾವ್ ರಸ್ತೆ, ಆಯುರ್ವೇದ ಸರ್ಕಲ್, ಮಿಲೀನಿಯಂ ಸರ್ಕಲ್‍ನಲ್ಲಿ ಸಾಗಿ ಅಂತ್ಯವಾಯಿತು. ಮೋದಿ ಜೊತೆ ಈಶ್ವರಪ್ಪ, ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ರಾಮದಾಸ್ ಇದ್ದರು. ಈ ರೋಡ್ ಶೋ ಮೂಲಕ, ಸಿದ್ದರಾಮಯ್ಯ ಸೇರಿದಂತೆ 3 ಜಿಲ್ಲೆಗಳಿಗೆ ಮೋದಿ ಸಂದೇಶ ರವಾನಿಸಿದರು. ನಾಳೆ ಮೋದಿ ಪ್ರಚಾರಕ್ಕೆ ವಿರಾಮ ಇದ್ದು, ನಾಡಿದ್ದು ಮತ್ತೆ ರಾಜ್ಯಕ್ಕೆ ಬರಲಿದ್ದಾರೆ. ಇದನ್ನೂ ಓದಿ:  ನಮ್ಮ ಜೊತೆ ಮೋದಿ ಇದ್ದಾರೆ, ಕಾಂಗ್ರೆಸ್ ಜೊತೆ ಭ್ರಷ್ಟರಿದ್ದಾರೆ: ಆರ್.ಅಶೋಕ್