Tag: ರೋಡ್ ಶೋ

  • 2 ದಿನವೂ ಬೆಂಗಳೂರಿನಲ್ಲಿ ಮೋದಿ ಹವಾ

    2 ದಿನವೂ ಬೆಂಗಳೂರಿನಲ್ಲಿ ಮೋದಿ ಹವಾ

    ಬೆಂಗಳೂರು: ರಾಜ್ಯರಾಜಧಾನಿ ಬೆಂಗಳೂರಿನಲ್ಲಿ (Bengaluru) 2ನೇ ದಿನವೂ ಮೋದಿ ವರ್ಚಸ್ಸು ಜೋರಾಗಿದೆ. ನ್ಯೂ ತಿಪ್ಪಸಂದ್ರದಿಂದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ರೋಡ್ ಶೋ (Road Show) ಆರಂಭವಾಗಿದೆ.

    6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 6.5 ಕಿ.ಮೀ ದೂರದವರೆಗೆ ರೋಡ್ ಶೋ ಸಾಗಲಿದೆ. ಮಹಾದೇವಪುರ, ಕೆ.ಆರ್ ಪುರಂ, ಸಿವಿ ರಾಮನ್ ನಗರ, ಸರ್ವಜ್ಞ ನಗರ, ಶಿವಾಜಿನಗರ, ಶಾಂತಿನಗರ ಕ್ಷೇತ್ರಗಳಲ್ಲಿ ರೋಡ್ ಶೋ ಸಾಗುತ್ತಿದೆ. ತಿಪ್ಪಸಂದ್ರ ಬಳಿ ಕೆಂಪೇಗೌಡ ಪ್ರತಿಮೆಗೆ ನಮಸ್ಕರಿಸಿದ ಮೋದಿ ರೋಡ್ ಶೋ ಆರಂಭಿಸಿದ್ದಾರೆ.

    ತೆರೆದ ವಾಹನದಲ್ಲಿ ಮೋದಿ ಅಬ್ಬರದ ರೋಡ್ ಶೋ ನಡೆಯುತ್ತಿದ್ದು, ಸಹಸ್ರಾರು ಜನರತ್ತ ಮೋದಿ ಕೈಬೀಸುತ್ತಿದ್ದಾರೆ. ಮೋದಿಯನ್ನು ಸ್ವಾಗತಿಸಲು ಜಿಟಿ ಜಿಟಿ ಮಳೆಯಲ್ಲೂ ಹೆಚ್ಚಿನ ಜನರು ಸಂಭ್ರಮದಿಂದ ಸೇರಿದ್ದಾರೆ. ರಸ್ತೆಯುದ್ದಕ್ಕೂ ಸಾವಿರಾರು ಜನರು ಸೇರಿ ಮೋದಿಯನ್ನು ನೋಡಿ ಸಂತಸ ಪಡುತ್ತಿದ್ದಾರೆ. ರಸ್ತೆಯುದ್ದಕ್ಕೂ ಕೇಸರಿ ಬಾವುಟ ಹಾರಾಡುತ್ತಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮೋದಿ ಮೆಗಾ ರೋಡ್‌ ಶೋ – ಬಿಜೆಪಿ ಲೆಕ್ಕಾಚಾರ ಏನು?

    ಮೋದಿ ರೋಡ್ ಶೋಗೆ ಕಲಾತಂಡಗಳು ಮೆರುಗು ತಂದುಕೊಟ್ಟಿದೆ. ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಮುಗಿಲು ಮುಟ್ಟಿದೆ. ಹೂಮಳೆ ಸುರಿಸಿ ಸಂಭ್ರಮಿಸುತ್ತಿದ್ದಾರೆ. ಜನರೆಡೆಗೆ ಮೋದಿಯವರು ಹೂ ಎಸೆದು, ಜನರತ್ತ ಕೈಬೀಸುತ್ತಿದ್ದಾರೆ. ಮೋದಿ ಮೋದಿ ಜೈಕಾರ ಘೋಷಣೆ ಜೋರಾಗಿದೆ.

  • ಬೆಂಗಳೂರಿನಲ್ಲಿ ಮೋದಿ ಮೆಗಾ ರೋಡ್‌ ಶೋ – ಬಿಜೆಪಿ ಲೆಕ್ಕಾಚಾರ ಏನು?

    ಬೆಂಗಳೂರಿನಲ್ಲಿ ಮೋದಿ ಮೆಗಾ ರೋಡ್‌ ಶೋ – ಬಿಜೆಪಿ ಲೆಕ್ಕಾಚಾರ ಏನು?

    ಬೆಂಗಳೂರು: ಬಿಜೆಪಿ ಅಧಿಕಾರಕ್ಕೆ ಏರಬೇಕಾದರೆ ಬೆಂಗಳೂರನ್ನು ಗೆಲ್ಲಲ್ಲೇಬೇಕು. ಈ ಕಾರಣಕ್ಕೆ ಪ್ರಧಾನಿ ಮೋದಿ (PM Narendra Modi) ವರ್ಚಸ್ಸನ್ನು ಬಳಸಿಕೊಂಡು ಬಿಜೆಪಿ ರೋಡ್‌ ಶೋ (Road Show) ಆಯೋಜಿಸಿದೆ.

    ಬಹುಮತಕ್ಕೆ ಬೇಕಾಗಿರುವ 113 ಸೀಟ್‌ ಗಳಿಸಬೇಕಾದರೆ ಬಿಜೆಪಿ ಬೆಂಗಳೂರಿನಲ್ಲಿ (Bengaluru) ಹೆಚ್ಚಿನ ಸಂಖ್ಯೆಯ ಸ್ಥಾನ ಗೆಲ್ಲಬೇಕು. ಈ ಹಿಂದೆಯೇ ಅಮಿತ್‌ ಶಾ (Amit Shah) ಸರಣಿ ಸಭೆ ನಡೆಸಿ ಬೆಂಗಳೂರು ಗೆಲ್ಲಲು ನಾಯಕರಿಗೆ ಟಾಸ್ಕ್‌ ನೀಡಿ ಪಕ್ಷ ಸಂಘಟನೆ ನಡೆಸಿ ಪ್ರಚಾರ ನಡೆಸಲು ಸೂಚಿಸಿದ್ದರು. ಇದನ್ನೂ ಓದಿ: ಮೋದಿಯನ್ನು ನೋಡಿ ದೇವರನ್ನೇ ನೋಡಿದಷ್ಟು ಖುಷಿ ಆಯ್ತು ಅಂದ ಬೆಂಗ್ಳೂರು ಮಹಿಳೆ

    ಈಗ ಚುನಾವಣೆಯ (Election) ಕೊನೆಯ ಹಂತಕ್ಕೆ ಬಂದಿದ್ದು ಮೋದಿ ಮತಯಾಚನೆ ಮಾಡಲಿದ್ದಾರೆ. ಬೆಂಗಳೂರು ನಗರದ 28, ಗ್ರಾಮಾಂತರ ಜಿಲ್ಲೆಯಲ್ಲಿ 4 ಕ್ಷೇತ್ರಗಳಿವೆ. 2008ರ ಚುನಾವಣೆಯಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆದ್ದುಕೊಂಡಿತ್ತು.

    ಹಿಂದಿನ ಚುನಾವಣೆಯಲ್ಲಿ ಅನುಕಂಪದ ಅಲೆಯಿಂದ ಗೆದ್ದಿದ್ದ ಬಿಜೆಪಿ 2012ರಲ್ಲಿ 12 ಸ್ಥಾನಕ್ಕೆ ಕುಸಿದಿತ್ತು. 2018 ಮತ್ತು 2019ರ ಚುನಾವಣೆ ಉಪಚುನಾವಣೆ ಸೇರಿ ಒಟ್ಟು 15 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. ಈ ಬಾರಿ ಕನಿಷ್ಟ 18-20 ಸ್ಥಾನಗಳನ್ನು ಗೆಲ್ಲಬೇಕೆಂದು ಬಿಜೆಪಿ ಗುರಿಯನ್ನು ಹಾಕಿಕೊಂಡಿದೆ. ಈ ಕಾರಣಕ್ಕೆ ಬೆಂಗಳೂರಿಗರ ಮನಗೆಲ್ಲಲು ಮೋದಿ ಅವರ 40 ಕಿ.ಮೀ ಮೆಗಾ ರೋಡ್‌ ಶೋವನ್ನು ಬಿಜೆಪಿ ಆಯೋಜಿಸುತ್ತಿದೆ.

     

    ಏಪ್ರಿಲ್‌ 29ರಂದು ಬೆಂಗಳೂರು ಉತ್ತರದ 9 ಕ್ಷೇತ್ರಗಳಲ್ಲಿ ಮೊದಲ ರೋಡ್ ಶೋ ನಡೆದಿತ್ತು. ಮೇ 6 ರಂದು ದಕ್ಷಿಣ, ಕೇಂದ್ರ ಜಿಲ್ಲೆಗಳ 13 ಕ್ಷೇತ್ರಗಳ ಗುರಿಯನ್ನಾಗಿಸಿ 2ನೇ ರೋಡ್ ಶೋ ನಡೆದಿತ್ತು. ಎರಡು ರೋಡ್‌ ಶೋ ಭರ್ಜರಿ ಯಶಸ್ಸು ಕಂಡಿತ್ತು. ಅದರಲ್ಲೂ ನಿನ್ನೆಯ ರೋಡ್‌ ಶೋ ಕರ್ನಾಟಕದ ಮಟ್ಟಿಗೆ ದಾಖಲೆಯಾಗಿದ್ದು 10 ಲಕ್ಷಕ್ಕೂ ಅಧಿಕ ಮಂದಿ ನೇರವಾಗಿ ರೋಡ್‌ ಶೋ ವೀಕ್ಷಿಸಿದ್ದಾರೆ. ಇಂದು 5 ಕ್ಷೇತ್ರಗಳ ವ್ಯಾಪ್ತಿಯಲ್ಲಿ 6.5 ಕಿ.ಮೀ ರೋಡ್ ಶೋ ನಡೆಯಲಿದೆ.

     

    ಬೆಂಗಳೂರಿನಲ್ಲಿ ಒಟ್ಟು ನಾಲ್ಕು ಲೋಕಸಭಾ ಕ್ಷೇತ್ರಗಳಿವೆ. 2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರದಲ್ಲಿ ಬಿಜೆಪಿ ಜಯಗಳಿಸಿತ್ತು. ಬೆಂಗಳೂರು ಗ್ರಾಮಾಂತರ ಒಂದೇ ಕ್ಷೇತ್ರವನ್ನು ಕಾಂಗ್ರೆಸ್‌ ಗೆದ್ದುಕೊಂಡಿತ್ತು. 113 ಟಾರ್ಗೆಟ್‌ ರೀಚ್‌ ಆಗಬೇಕಾದರೆ ಬೆಂಗಳೂರಿನಲ್ಲಿ ಹೆಚ್ಚಿನ ಸ್ಥಾನವನ್ನು ಗೆಲ್ಲುವುದು ಬಿಜೆಪಿಗೆ ಅನಿವಾರ್ಯ. ಈ ಕಾರಣಕ್ಕೆ ಬಿಜೆಪಿ 20+ ಕ್ಷೇತ್ರಗಳನ್ನು ಗೆಲ್ಲಲು ರಣತಂತ್ರ ರೂಪಿಸುತ್ತಿದೆ.

  • ಮೋದಿಯನ್ನು ನೋಡಿ ದೇವರನ್ನೇ ನೋಡಿದಷ್ಟು ಖುಷಿ ಆಯ್ತು ಅಂದ ಬೆಂಗ್ಳೂರು ಮಹಿಳೆ

    ಮೋದಿಯನ್ನು ನೋಡಿ ದೇವರನ್ನೇ ನೋಡಿದಷ್ಟು ಖುಷಿ ಆಯ್ತು ಅಂದ ಬೆಂಗ್ಳೂರು ಮಹಿಳೆ

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ನಡೆದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಬೃಹತ್ ರೋಡ್ ಶೋ (Road Show) ಯಶಸ್ವಿಯಾಗಿ ಸಂಪನ್ನಗೊಂಡಿತು.

    ಶನಿವಾರ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅತಿದೊಡ್ಡ ರೋಡ್ ಶೋ ನಡೆಸಿದರು. ಬೆಂಗಳೂರಿನಲ್ಲಿ ಬರೋಬ್ಬರಿ 29.8 ಕಿಲೋಮೀಟರ್ ರೋಡ್‌ಶೋ ನಡೆಸುವ ಮೂಲಕ ಬಿಜೆಪಿಗೆ ಇನ್ನಷ್ಟು ಬಲ ತುಂಬಿದ್ದಾರೆ. ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಜೆಪಿ ನಗರದ ಸೋಮೇಶ್ವರ ಸಭಾಭವನದಿಂದ ಶುರುವಾದ ಮೋದಿ ಮೆಗಾ ರೋಡ್ ಶೋ 11 ಅಸೆಂಬ್ಲಿ ಕ್ಷೇತ್ರಗಳನ್ನು ಹಾದುಹೋಗಿ ಮಲ್ಲೇಶ್ವರಂನ 18ನೇ ಕ್ರಾಸ್‌ನಲ್ಲಿ ಕೊನೆಗೊಂಡಿತು. ಇದನ್ನೂ ಓದಿ: ಮೇ7ರಂದು ಬೆಂಗಳೂರಿನಲ್ಲಿ ಮೋದಿ ಫೈನಲ್‌ ರೋಡ್‌ ಶೋ

    178 ನಿಮಿಷಗಳ ಕಾಲ ಸಾಗಿದ ಮೋದಿ ರೋಡ್ ಶೋಗೆ ಐತಿಹಾಸಿಕ ಎನ್ನುವಂತಹ ಸ್ಪಂದನೆ ಸಿಕ್ಕಿತು. ರಸ್ತೆಯ ಇಕ್ಕೇಲಗಳಲ್ಲಿ ನಿಂತ ಲಕ್ಷಾಂತರ ಮೋದಿ ಅಭಿಮಾನಿಗಳು ಮೋದಿ.. ಮೋದಿ.. ಮೋದಿ.. ಅಂತಾ ದಾರಿಯುದ್ದಕ್ಕೂ ಘೋಷಣೆ ಕೂಗಿದ್ರು. ಹೂಮಳೆಗೈದು ಸಂಭ್ರಮಿಸಿದ್ರು. ರೋಡ್‌ಶೋ ಉದ್ದಕ್ಕೂ ಸಿಕ್ಕ ಅಭೂತಪೂರ್ವ ಸ್ಪಂದನೆ ನೋಡಿ ಮೋದಿ ಫುಲ್ ಖುಷ್ ಆಗಿದ್ರು. ಇದನ್ನೂ ಓದಿ: ನೀವು ಬಿಟ್ಟರೂ 40% ಕರ್ಮ ನಿಮ್ಮನ್ನ ಹಿಂಬಾಲಿಸುತ್ತಿದೆ ಮೋದಿಜೀ – ಟ್ವೀಟ್‌ನಲ್ಲಿ ಕಾಲೆಳೆದ ಸಿದ್ದು

    ಈ ವೇಳೆ ಮೋದಿಯನ್ನು ನೋಡಿದ ಸಂತಸವನ್ನು ಮಹಿಳೆಯೊಬ್ಬರು ಪಬ್ಲಿಕ್‌ ಟಿವಿಯೊಂದಿಗೆ ಹಂಚಿಕೊಂಡಿದ್ದಾರೆ. ಮೋದಿಯನ್ನು ನೋಡಿ ನನಗೆ ದೇವರನ್ನೇ ನೋಡಿದಷ್ಟು ಸಂತೋಷವಾಯ್ತು ಎಂದಿದ್ದಾರೆ.

    ನಮ್ಮದು ಇಲ್ಲೇ ಹತ್ತಿರದ ಮನೆ. ಬೆಳಗ್ಗಿನಿಂದಲೂ ಮೋದಿಯನ್ನು ನೋಡುವುದಕ್ಕಾಗಿಯೇ ಕಾದು ಕುಳಿತಿದ್ದೆ. ಮೋದಿ ಅವರನ್ನ ನೋಡುತ್ತಿದ್ದಂತೆ ಕಣ್ಣಲ್ಲಿ ಆನಂದಭಾಷ್ಪ ತುಂಬಿಬಂತು. ನನಗಂತೂ ದೇವರನ್ನೇ ನೋಡಿದಷ್ಟು ಖುಷಿ ಆಯ್ತು ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಈ ಕುರಿತ ವೀಡಿಯೋ ಇಲ್ಲಿದೆ.

  • ನೀವು ಬಿಟ್ಟರೂ 40% ಕರ್ಮ ನಿಮ್ಮನ್ನ ಹಿಂಬಾಲಿಸುತ್ತಿದೆ ಮೋದಿಜೀ – ಟ್ವೀಟ್‌ನಲ್ಲಿ ಕಾಲೆಳೆದ ಸಿದ್ದು

    ನೀವು ಬಿಟ್ಟರೂ 40% ಕರ್ಮ ನಿಮ್ಮನ್ನ ಹಿಂಬಾಲಿಸುತ್ತಿದೆ ಮೋದಿಜೀ – ಟ್ವೀಟ್‌ನಲ್ಲಿ ಕಾಲೆಳೆದ ಸಿದ್ದು

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ನಡೆದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಬೃಹತ್ ರೋಡ್ ಶೋ (Road Show) ಯಶಸ್ವಿಯಾಗಿ ಸಂಪನ್ನಗೊಂಡಿದೆ.

    ಈ ನಡುವೆ ಪ್ರಧಾನಿ ರೋಡ್‌ ಶೋ ವೇಳೆ ಕ್ಲಿಕ್ಕಿಸಿದ ಫೋಟೋವೊಂದು‌ ಪ್ರತಿಪಕ್ಷ ನಾಯಕರಿಂದ ಟೀಕೆಗೆ ಅಸ್ತ್ರವಾಗಿದೆ. ಪ್ರಧಾನಿ ರೋಡ್‌ಶೋ ವೇಳೆ ಕ್ಲಿಕ್ಕಿಸಿದ ಫೋಟೋವೊಂದರಲ್ಲಿ ಮಳಿಗೆಯ ಮೇಲೆ 40% ಆಫರ್‌ ಇರುವ ಪೋಸ್ಟರ್‌ ಕಂಡುಬಂದಿದೆ. ಈ ಫೋಟೋವನ್ನು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ಸಿದ್ದರಾಮಯ್ಯ (Siddaramaiah) ʻನೀವು ಬಿಟ್ಟರೂ 40% ಕರ್ಮ ನಿಮ್ಮನ್ನು ಬಿಡದೆ ಹಿಂಬಾಲಿಸುತ್ತಿದೆ ಮೋದಿಜೀʼ ಎಂದು ಕಾಲೆಳೆದಿದ್ದಾರೆ. ಇದನ್ನೂ ಓದಿ: ಕರ್ನಾಟಕ ಚುನಾವಣೆ – ಡಿಜಿಟಲ್‌ ಮೀಡಿಯಾ ಹವಾ ಹೇಗಿದೆ?

    ಇದರೊಂದಿಗೆ ಕನ್ನಡಿಗರ ಮತಕ್ಕಿರುವ ಬೆಲೆ ಬದುಕಿಗಿಲ್ಲವೇ? ಘೋಷಣೆಯೊಂದಿಗೆ ಹಲವು ಪ್ರಶ್ನೆಗಳನ್ನು ಪ್ರಧಾನಿ ಮೋದಿ ಅವರಿಗೆ ಕೇಳಿದ್ದಾರೆ. ಗ್ರಾಮೀಣ ಬ್ಯಾಂಕಿಂಗ್‌, ಐಬಿಪಿಎಸ್‌, ಕೇಂದ್ರ ಸ್ವಾಮ್ಯದ ಸಂಸ್ಥೆಗಳ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಬರೆಯಲು ಅವಕಾಶ ನಿರಾಕರಿಸಿ ಹುಟ್ಟಿದ ನೆಲದಲ್ಲಿಯೇ ಕನ್ನಡಿಗ ಯುವಜನರಿಗೆ ಉದ್ಯೋಗ ವಂಚನೆ ಮಾಡಲಾಗಿದೆ. ಇವರು ಪ್ರತಿಭಟನೆ ನಡೆಸುವಾಗ ನ್ಯಾಯ ಕೊಡಿಸಲು ನೀವು ಯಾಕೆ ಬಂದಿರಲಿಲ್ಲ? ಇದನ್ನೂ ಓದಿ: ಮೇ7ರಂದು ಬೆಂಗಳೂರಿನಲ್ಲಿ ಮೋದಿ ಫೈನಲ್‌ ರೋಡ್‌ ಶೋ

    ಕಳೆದ 4 ಬಜೆಟ್‌ಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಲಾಗುವ ಅನುದಾನ ಶೇ.1.97ಕ್ಕಿಂತ ಮೇಲೆ ಏರಿಲ್ಲ. 2022ರಲ್ಲಿ ಸಿಎಜಿ ವರದಿ ಪ್ರಕಾರ 2022ರಲ್ಲಿ 1.62 ಲಕ್ಷ ವಿದ್ಯಾರ್ಥಿಗಳು ಶಾಲೆಗಳನ್ನ ತ್ಯಜಿಸಿದ್ದಾರೆ. 2020-21 ಮತ್ತು 2021-22ರ ಅವಧಿಯಲ್ಲಿ 1,965 ಸರ್ಕಾರಿ ಶಾಲೆಗಳನ್ನ ಮುಚ್ಚಲಾಗಿದೆ. ಶಿಕ್ಷಣವಂಚಿತ ಮಕ್ಕಳ ಭವಿಷ್ಯ ಹಾಳಾಗುವಾಗ ನ್ಯಾಯ ಕೊಡಿಸಲು ನೀವು ಏಕೆ ಬಂದಿರಲಿಲ್ಲ? ಎಂಬಿತ್ಯಾದಿ ಪ್ರಶ್ನೆಗಳನ್ನ ಪ್ರಧಾನಿ ಮುಂದಿಟ್ಟಿದ್ದಾರೆ.

  • ಮೇ7ರಂದು ಬೆಂಗಳೂರಿನಲ್ಲಿ ಮೋದಿ ಫೈನಲ್‌ ರೋಡ್‌ ಶೋ

    ಮೇ7ರಂದು ಬೆಂಗಳೂರಿನಲ್ಲಿ ಮೋದಿ ಫೈನಲ್‌ ರೋಡ್‌ ಶೋ

    ಬೆಂಗಳೂರು: ಕರ್ನಾಟಕ ಕುರುಕ್ಷೇತ್ರಕ್ಕೆ ಇನ್ನೂ ನಾಲ್ಕು ದಿನವಷ್ಟೇ ಬಾಕಿಯಿದ್ದು, ಭಾನುವಾರ (ಮೇ 7) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಫೈನಲ್ ರೋಡ್ ಶೋ (ModiRoadshow) ನಡೆಯಲಿದೆ.

    ಶನಿವಾರವೂ ಬೆಂಗಳೂರಿನಲ್ಲಿ (Bengaluru) ಪ್ರಧಾನಿ ನರೇಂದ್ರ ಮೋದಿ ಅತಿದೊಡ್ಡ ರೋಡ್ ಶೋ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಬರೋಬ್ಬರಿ 29.8 ಕಿಲೋಮೀಟರ್ ರೋಡ್‌ಶೋ ನಡೆಸುವ ಮೂಲಕ ಬಿಜೆಪಿಗೆ ಇನ್ನಷ್ಟು ಬಲ ತುಂಬಿದ್ದಾರೆ. ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಜೆಪಿ ನಗರದ ಸೋಮೇಶ್ವರ ಸಭಾಭವನದಿಂದ ಶುರುವಾದ ಮೋದಿ ಮೆಗಾ ರೋಡ್ ಶೋ 11 ಅಸೆಂಬ್ಲಿ ಕ್ಷೇತ್ರಗಳನ್ನು ಹಾದುಹೋಗಿ ಮಲ್ಲೇಶ್ವರಂನ 18ನೇ ಕ್ರಾಸ್‌ನಲ್ಲಿ ಕೊನೆಗೊಂಡಿತು. ಇದನ್ನೂ ಓದಿ: ಬೆಂಗ್ಳೂರು, ಮೈಸೂರಿನ ಫೈನಾನ್ಸಿಯರ್ ಮನೆಗಳ ಮೇಲೆ IT ರೇಡ್ – 20 ಕೋಟಿ ಹಣ ವಶ

    178 ನಿಮಿಷಗಳ ಕಾಲ ಸಾಗಿದ ಮೋದಿ ರೋಡ್ ಶೋಗೆ ಐತಿಹಾಸಿಕ ಎನ್ನುವಂತಹ ಸ್ಪಂದನೆ ಸಿಕ್ಕಿತು. ರಸ್ತೆಯ ಇಕ್ಕೇಲಗಳಲ್ಲಿ ನಿಂತ ಲಕ್ಷಾಂತರ ಜನ ಮೋದಿ ಪರ ಘೋಷಣೆ ಕೂಗಿದ್ರು. ಹೂಮಳೆಗೈದು ಸಂಭ್ರಮಿಸಿದ್ರು. ರೋಡ್‌ಶೋ ಉದ್ದಕ್ಕೂ ಸಿಕ್ಕ ಅಭೂತಪೂರ್ವ ಸ್ಪಂದನೆ ನೋಡಿ ಮೋದಿ ಫುಲ್ ಖುಷ್ ಆಗಿದ್ರು. ಇದನ್ನೂ ಓದಿ: ಸಿಲಿಕಾನ್‌ ಸಿಟಿಯಲ್ಲಿ ಮೋದಿ ಬೃಹತ್‌ ರೋಡ್‌ ಶೋ – ರೇಷ್ಮೆಯ ಮೈಸೂರು‌ ಪೇಟಾದಲ್ಲಿ ಕಂಗೊಳಿಸುತ್ತಿರುವ ಪಿಎಂ

    ಭಾನುವಾರ (ಮೇ 7) ಬೆಂಗಳೂರಿನಲ್ಲಿ ಪ್ರಧಾನಿ ಮೋದಿಯ ರೋಡ್‌ಶೋದ 2ನೇ ಚರಣ ನಡೆಯಲಿದೆ. ನೀಟ್ ಪರೀಕ್ಷೆಗೆ ಬರುವ ಮಕ್ಕಳಿಗೆ ಯಾವುದೇ ತೊಂದರೆಯಾಗದ ರೀತಿ ಎಲ್ಲಾ ರೀತಿಯ ಮುಂಜಾಗ್ರತೆಗಳನ್ನು ಪೊಲೀಸ್ ಇಲಾಖೆ ಮತ್ತು ಬಿಜೆಪಿ ಕೈಗೊಂಡಿದೆ. ರೋಡ್‌ಶೋ ಮುಗಿಸಿ ಪ್ರಧಾನಿ ಮೋದಿ ಶಿವಮೊಗ್ಗ ಮತ್ತು ನಂಜನಗೂಡಿನಲ್ಲಿ ಮತಬೇಟೆ ನಡೆಸಲಿದ್ದಾರೆ. ನಂಜನಗೂಡು ಶ್ರೀಕಂಠೇಶ್ವರನ ದರ್ಶನವನ್ನೂ ಪಡೆಯಲಿದ್ದಾರೆ. ಇದನ್ನೂ ಓದಿ: ದಾಖಲೆ ಬರೆದ ಮೋದಿ ಬೆಂಗಳೂರು ರೋಡ್ ಶೋ

    ರೋಡ್ ಶೋ ಪ್ಲಾನ್ ಹೇಗೆ?
    * ಬೆ.10 ಗಂಟೆಗೆ ಆರಂಭ – ಬೆ.11.30 ಗಂಟೆಗೆ ಅಂತ್ಯ
    * 6.5 ಕಿಲೋಮೀಟರ್ ರೋಡ್ ಶೋ
    * ನ್ಯೂ ತಿಪ್ಪಸಂದ್ರ ರೋಡ್ – ಟ್ರಿನಿಟಿ ಸರ್ಕಲ್
    * 5 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರೋಡ್ ಶೋ

    ಎಲ್ಲೆಲ್ಲಿ ಮೋದಿ ರೋಡ್ ಶೋ?
    * ನ್ಯೂ ತಿಪ್ಪಸಂದ್ರ ಮುಖ್ಯರಸ್ತೆ
    * 80 ಅಡಿ ರಸ್ತೆ ಜಂಕ್ಷನ್, ಹೆಚ್‌ಎಎಲ್ 2ನೇ ಹಂತ
    * 12ನೇ ಮುಖ್ಯರಸ್ತೆ ಜಂಕ್ಷನ್, ಹೆಚ್‌ಎಎಲ್ 2ನೇ ಹಂತ
    * ಹೆಚ್‌ಎಎಲ್ 100 ಫೀಟ್ ರೋಡ್ ಜಂಕ್ಷನ್
    * ಸಿಎಂಹೆಚ್ ರೋಡ್
    * ಓಲ್ಡ್ ಮದ್ರಾಸ್ ರೋಡ್
    * ಟ್ರಿನಿಟಿ ಸರ್ಕಲ್

  • ಮೋದಿ ರೋಡ್ ಶೋ ವೇಳೆ ಹೂ ಜೊತೆ ಮೊಬೈಲ್ ಎಸೆತ

    ಮೋದಿ ರೋಡ್ ಶೋ ವೇಳೆ ಹೂ ಜೊತೆ ಮೊಬೈಲ್ ಎಸೆತ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ರೋಡ್ ಶೋ (Road Show) ವೇಳೆ ಅಭಿಮಾನಿಯೊಬ್ಬರು ಹೂವಿನ ಜೊತೆಗೆ ಮೊಬೈಲ್ (Mobile) ಎಸೆದ ಘಟನೆ ಬೆಂಗಳೂರು (Bengaluru) ಜೆ.ಪಿ. ನಗರದಲ್ಲಿ ನಡೆದಿದೆ.

    ಬೆಂಗಳೂರಿನ ಬ್ರಿಗೇಡ್ ಮಿಲೇನಿಯಂ ರಸ್ತೆಯಿಂದ ಪ್ರಾರಂಭವಾದ ರೋಡ್ ಶೋ ಮಲ್ಲೇಶ್ವರಂನಲ್ಲಿ ಅಂತ್ಯಗೊಂಡಿದೆ. ಪ್ರಧಾನಿ ಮೋದಿ ಅವರು ತೆರೆದ ವಾಹನದಲ್ಲಿ ಬರೋಬ್ಬರಿ 26.5 ಕಿ.ಮೀ ನಡೆದಿದೆ. ತೆರೆದ ವಾಹನದಲ್ಲಿ ಮೋದಿ ಅಬ್ಬರದ ರೋಡ್ ಶೋ ನಡೆದಿದ್ದು, ಸಹಸ್ರಾರು ಜನರತ್ತ ಮೋದಿ ಕೈಬೀಸಿದರು. ರೇಷ್ಮೆಯ ಕೇಸರಿ ಮೈಸೂರು ಪೇಟದಲ್ಲಿ ಕಂಗೊಳಿಸಿದರು. ಪಿಸಿ ಮೋಹನ್, ತೇಜಸ್ವಿ ಸೂರ್ಯ ಸಾಥ್ ನೀಡಿದ್ದರು.

    ರೋಡ್ ಶೋ ಜೆ.ಪಿ ನಗರದ ಬಳಿ ಬಂದಾಗ ಅಹಿತಕರ ಘಟನೆಯೊಂದು ನಡೆದಿದೆ. ಮೊದಿಗೆ ಹೂ ಎಸೆಯುವಾಗ ಮೊಬೈಲ್ ಬಿದ್ದಿದ್ದು, ಆದರೆ ಯಾವುದೇ ಅನಾಹುತಗಳಾಗಿಲ್ಲ. ಬದಲಿಗೆ ಮೊಬೈಲ್ ರಸ್ತೆ ಮೇಲೆ ಬಿದ್ದಿದೆ. ಇದನ್ನೂ ಓದಿ: ಹನುಮನಿಗೆ ನಮಸ್ಕರಿಸಿದ ಮೋದಿ

    ಈ ರೀತಿ ಅಹಿರತಕರ ಘಟನೆ ನಡೆದಿದ್ದು, ಇದೇ ಮೊದಲಲ್ಲ. ಈ ಮೊದಲು ಕೇರಳದ ಕೊಚ್ಚಿ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‍ಶೋ ವೇಳೆ ಮೊಬೈಲ್ ಎಸೆಯಲಾಗಿತ್ತು. ಈ ವೇಳೆ ಅಲ್ಲಿದ್ದ ಭದ್ರತಾ ಸಿಬ್ಬಂದಿ ಇದನ್ನು ಗಮನಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾಗಿ ಮೋದಿಗೆ ತಗಲದಂತೆ ನೋಡಿಕೊಂಡಿದ್ದಾರೆ. ಈ ಬಳಿಕ ತನಿಖೆ ನಡೆಸಿದ್ದಾಗ ಪ್ರಧಾನಿಯವರ ಮೇಲೆ ಹೂವಿನ ದಳಗಳನ್ನು ಸುರಿಸುವುದಕ್ಕೆ ಯತ್ನಿಸುತ್ತಿದ್ದಾಗ ವ್ಯಕ್ತಿಯೊಬ್ಬರ ಕೈಯಿಂದ ಫೋನ್ ಕೈತಪ್ಪಿ ಹೋಗಿತ್ತು ಎಂದು ಮೂಲಗಳು ತಿಳಿಸಿತ್ತು.

    ಕಳೆದ ವಾರ ಮೈಸೂರಿನಲ್ಲಿ ನಡೆದಿದ್ದ ರೋಡ್ ಶೋ ವೇಳೆ ಮೋದಿಯತ್ತ ಹೂವಿನ ದಳಗಳೊಂದಿಗೆ ಮೊಬೈಲ್ ಫೋನ್ ಅನ್ನು ಎಸೆದಿದ್ದರು. ಅದನ್ನು ಸ್ವತಃ ಮೋದಿ ಹಾಗೂ ಎಸ್‍ಪಿಜಿಯವರು ಗಮನಿಸಿದ್ದರು. ಅಷ್ಟೇ ಅಲ್ಲದೇ ಮೋದಿ ಅವರು ರೋಡ್ ಶೋ ವೇಳೆಯೇ ಮೊಬೈಲ್ ಅನ್ನು ಹಿಂದಿರುಗಿಸುವಂತೆ ಸನ್ನೆಯನ್ನು ಮಾಡಿದ್ದರು. ನಂತರ ಮೊಬೈಲ್ ಫೋನ್ ಅನ್ನು ವಾಪಸ್ ನೀಡಲಾಗಿತ್ತು. ಇದನ್ನೂ ಓದಿ: ದಾಖಲೆ ಬರೆದ ಮೋದಿ ಬೆಂಗಳೂರು ರೋಡ್ ಶೋ

  • ಹನುಮನಿಗೆ ನಮಸ್ಕರಿಸಿದ ಮೋದಿ

    ಹನುಮನಿಗೆ ನಮಸ್ಕರಿಸಿದ ಮೋದಿ

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra modi) ಅವರು ಭರ್ಜರಿ ರೋಡ್ ಶೋ (Road Show) ನಡೆಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ರಸ್ತೆ ಬದಿಯ ಆಂಜನೇಯ ಮೂರ್ತಿಗೆ ನಮಸ್ಕರಿಸಿದರು.

    ಇತ್ತೀಚೆಗೆ ಕಾಂಗ್ರೆಸ್ ಬಿಡುಗಡೆಗೊಳಿಸಿದ್ದ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸುವಂತೆ ಸೂಚಿಸಿತ್ತು. ಈ ಪ್ರಣಾಳಿಕೆಯನ್ನು ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ವಿರೋಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೋದಿ ರೋಡ್ ಶೋ ವೇಳೆ ಹನುಮಂತನ ಮುಖವಾಡ ಧರಿಸಿದ್ದರು. ಅಷ್ಟೇ ಅಲ್ಲದೇ ಬಿಜೆಪಿ ಬಾವುಟದ ಜೊತೆಗೆ ಬಜರಂಗಿ ಬಾವುಟವು ಕಂಡುಬಂತು. ಜೊತೆಗೆ ನರೇಂದ್ರ ಮೋದಿ ಅವರು ಆಂಜನೇಯನಿಗೆ ನಮಸ್ಕರಿಸಿದ್ದು ವಿಶೇಷವಾಗಿತ್ತು.

    ಚುನಾವಣಾ ಪ್ರಚಾರದ ಅಂತಿಮ ಘಟ್ಟದಲ್ಲಿ ಮತಶಿಕಾರಿ ನಡೆಸಲು ವಾರದ ಕೊನೆಯಲ್ಲಿ ಮೂರನೇ ಬಾರಿ ರಾಜ್ಯಕ್ಕೆ ಪ್ರಧಾನಿ ಮೋದಿ ಬಂದಿದ್ದಾರೆ. ಬೆಂಗಳೂರಿನ ಬ್ರಿಗೇಡ್ ಮಿಲೇನಿಯಂ ರಸ್ತೆಯಿಂದ ಪ್ರಾರಂಭವಾದ ರೋಡ್ ಶೋ ಮಲ್ಲೇಶ್ವರಂನಲ್ಲಿ ಅಂತ್ಯಗೊಂಡಿದೆ. ಪ್ರಧಾನಿ ಮೋದಿ ಅವರು ತೆರೆದ ವಾಹನದಲ್ಲಿ ಬರೋಬ್ಬರಿ 26.5 ಕಿ.ಮೀ ನಡೆದಿದೆ.

    ಬ್ರಿಗೇಡ್ ಮಿಲೇನಿಯಂ ರಸ್ತೆಯಿಂದ ಮಲ್ಲೇಶ್ವರಂ 18ನೇ ಕ್ರಾಸ್ ವರೆಗೆ 11 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರೋಡ್ ಶೋ ನಡೆದಿದೆ. ತೆರೆದ ವಾಹನದಲ್ಲಿ ಮೋದಿ ಅಬ್ಬರದ ರೋಡ್ ಶೋ ನಡೆದಿದ್ದು, ಸಹಸ್ರಾರು ಜನರತ್ತ ಮೋದಿ ಕೈಬೀಸಿದರು. ರೇಷ್ಮೆಯ ಕೇಸರಿ ಮೈಸೂರು ಪೇಟಾದಲ್ಲಿ ಕಂಗೊಳಿಸಿದರು. ಪಿಸಿ ಮೋಹನ್, ತೇಜಸ್ವಿ ಸೂರ್ಯ ಸಾಥ್ ನೀಡಿದರು. ಇದನ್ನೂ ಓದಿ: ದಾಖಲೆ ಬರೆದ ಮೋದಿ ಬೆಂಗಳೂರು ರೋಡ್ ಶೋ

    ಮೋದಿ ರೋಡ್ ಶೋಗೆ ಕಲಾತಂಡಗಳು ಮೆರುಗು ತಂದುಕೊಟ್ಟರು. ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಮುಗಿಲು ಮುಟ್ಟಿತ್ತು. ಹೂಮಳೆ ಸುರಿಸಿ ಸಂಭ್ರಮಿಸಿದರು. ಈ ವೇಳೆ ಜನರತ್ತ ಪ್ರಧಾನಿ ಮೋದಿ ಅವರು ಹೂವನ್ನು ಎಸೆದು ನಗು ಬೀರಿದರು. ಮೋದಿ ಮೋದಿ ಜೈಕಾರ ಘೋಷಣೆ ಜೋರಾಗಿದೆ. ರೋಡ್ ಶೋ ವೇಳೆ ಮೋದಿಯನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಯುವತಿಯರು ಸೇರಿದ್ದರು. ಇದನ್ನೂ ಓದಿ: ಗುಂಡ್ಲುಪೇಟೆಯಲ್ಲಿ ಕೈ, ಕಮಲದ ನಡುವೆ ಬಿಗ್‍ಫೈಟ್ – ಹುಲಿಗಳ ನಾಡಲ್ಲಿ ಘರ್ಜಿಸುವವರ‍್ಯಾರು?

  • ದಾಖಲೆ ಬರೆದ ಮೋದಿ ಬೆಂಗಳೂರು ರೋಡ್ ಶೋ

    ದಾಖಲೆ ಬರೆದ ಮೋದಿ ಬೆಂಗಳೂರು ರೋಡ್ ಶೋ

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ನಡೆದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಬೃಹತ್ ರೋಡ್ ಶೋ (Road Show) ಯಶಸ್ವಿಯಾಗಿ ಸಂಪನ್ನಗೊಂಡಿದೆ.

    ಚುನಾವಣಾ ಪ್ರಚಾರದ ಅಂತಿಮ ಘಟ್ಟದಲ್ಲಿ ಮತಶಿಕಾರಿ ನಡೆಸಲು ವಾರದ ಕೊನೆಯಲ್ಲಿ ಮೂರನೇ ಬಾರಿ ರಾಜ್ಯಕ್ಕೆ ಪ್ರಧಾನಿ ಮೋದಿ ಬಂದಿದ್ದಾರೆ. ಬೆಂಗಳೂರಿನ ಬ್ರಿಗೇಡ್ ಮಿಲೇನಿಯಂ ರಸ್ತೆಯಿಂದ ಪ್ರಾರಂಭವಾದ ರೋಡ್ ಶೋ ಮಲ್ಲೇಶ್ವರಂನಲ್ಲಿ ಅಂತ್ಯಗೊಂಡಿದೆ. ಪ್ರಧಾನಿ ಮೋದಿ ಅವರು ತೆರೆದ ವಾಹನದಲ್ಲಿ ಬರೋಬ್ಬರಿ 26.5 ಕಿ.ಮೀ ರೋಡ್‌ ಶೋ ನಡೆಸಿದರು. ಬೆಂಗಳೂರಿನ ಇತಿಹಾಸದಲ್ಲಿ ಪ್ರಧಾನಿಯೊಬ್ಬರು ಇಷ್ಟೊಂದು   ದೊಡ್ಡ ರೋಡ್‌ ಶೋ ನಡೆಸಿರುವುದು ಇದೇ ಮೊದಲು.

    ಬ್ರಿಗೇಡ್ ಮಿಲೇನಿಯಂ ರಸ್ತೆಯಿಂದ ಮಲ್ಲೇಶ್ವರಂ 18ನೇ ಕ್ರಾಸ್ ವರೆಗೆ 11 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರೋಡ್ ಶೋ ನಡೆದಿದೆ. ತೆರೆದ ವಾಹನದಲ್ಲಿ ಮೋದಿ ಅಬ್ಬರದ ರೋಡ್ ಶೋ ನಡೆದಿದ್ದು, ಸಹಸ್ರಾರು ಜನರತ್ತ ಮೋದಿ ಕೈಬೀಸಿದರು. ರೇಷ್ಮೆಯ ಕೇಸರಿ ಮೈಸೂರು ಪೇಟದಲ್ಲಿ ಕಂಗೊಳಿಸಿದರು. ಪಿಸಿ ಮೋಹನ್, ತೇಜಸ್ವಿ ಸೂರ್ಯ ಸಾಥ್ ನೀಡಿದರು.

    ಮೊದಲ ಬಾರಿಗೆ ಬೆಂಗಳೂರು ಪೊಲೀಸರು ಬಿಗಿ ಭದ್ರತೆಯನ್ನು ವಹಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಯಶಸ್ವಿಯಾಗಿ ಅಂತ್ಯಗೊಳಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಜಾತಿಯೇ ನಿರ್ಣಾಯಕ – ತರೀಕೆರೆಯಲ್ಲಿ ಈ ಬಾರಿ ಗೆಲುವು ಯಾರಿಗೆ?

    ಮೋದಿ ರೋಡ್ ಶೋಗೆ ಕಲಾತಂಡಗಳು ಮೆರುಗು ತಂದುಕೊಟ್ಟರು. ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಮುಗಿಲು ಮುಟ್ಟಿತ್ತು. ಹೂಮಳೆ ಸುರಿಸಿ ಸಂಭ್ರಮಿಸಿದರು. ಈ ವೇಳೆ ಜನರತ್ತ ಪ್ರಧಾನಿ ಮೋದಿ ಅವರು ಹೂವನ್ನು ಎಸೆದು ನಗು ಬೀರಿದರು. ಮೋದಿ ಮೋದಿ ಜೈಕಾರ ಘೋಷಣೆ ಜೋರಾಗಿದೆ. ರೋಡ್ ಶೋ ವೇಳೆ ಮೋದಿಯನ್ನು ನೋಡಲು ವೃದ್ಧರಿಂದ ಚಿಕ್ಕ ಮಕ್ಕಳವರೆಗೂ ಸೇರಿದ್ದರು. ಈ ವೇಳೆ ಹೆಚ್ಚಿನ  ಸಂಖ್ಯೆಯಲ್ಲಿ ಯುವತಿಯರು ಸೇರಿದ್ದು ವಿಶೇಷವಾಗಿತ್ತು. ಇದನ್ನೂ ಓದಿ: ಗುಂಡ್ಲುಪೇಟೆಯಲ್ಲಿ ಕೈ, ಕಮಲದ ನಡುವೆ ಬಿಗ್‍ಫೈಟ್ – ಹುಲಿಗಳ ನಾಡಲ್ಲಿ ಘರ್ಜಿಸುವವರ‍್ಯಾರು?

  • ಸಿಲಿಕಾನ್‌ ಸಿಟಿಯಲ್ಲಿ ಮೋದಿ ಬೃಹತ್‌ ರೋಡ್‌ ಶೋ – ರೇಷ್ಮೆಯ ಮೈಸೂರು‌ ಪೇಟಾದಲ್ಲಿ ಕಂಗೊಳಿಸುತ್ತಿರುವ ಪಿಎಂ

    ಸಿಲಿಕಾನ್‌ ಸಿಟಿಯಲ್ಲಿ ಮೋದಿ ಬೃಹತ್‌ ರೋಡ್‌ ಶೋ – ರೇಷ್ಮೆಯ ಮೈಸೂರು‌ ಪೇಟಾದಲ್ಲಿ ಕಂಗೊಳಿಸುತ್ತಿರುವ ಪಿಎಂ

    ಬೆಂಗಳೂರು: ಚುನಾವಣಾ ಪ್ರಚಾರದ ಅಂತಿಮ ಘಟ್ಟದಲ್ಲಿ ಮತಶಿಕಾರಿ ನಡೆಸಲು ವಾರದ ಕೊನೆಯಲ್ಲಿ ಮೂರನೇ ಬಾರಿ ರಾಜ್ಯಕ್ಕೆ ಪ್ರಧಾನಿ ಮೋದಿ (Narendra Modi) ಬಂದಿದ್ದಾರೆ. ಬೆಂಗಳೂರಿನ ಸೋಮೇಶ್ವರ ಸಭಾಭವನದಿಂದ ರಸ್ತೆಯಿಂದ ಅದ್ಧೂರಿಯಾಗಿ ರೋಡ್ ಶೋ (Road Show) ಪ್ರಾರಂಭಗೊಂಡಿದೆ. ಪ್ರಧಾನಿ ಮೋದಿ ಅವರು ತೆರೆದ ವಾಹನದಲ್ಲಿ ಬರೋಬ್ಬರಿ 26.5 ಕಿ.ಮೀ ನಡೆಸುತ್ತಿದ್ದಾರೆ.

    ಬ್ರಿಗೇಡ್ ಮಿಲೇನಿಯಂ ರಸ್ತೆಯಿಂದ ಮಲ್ಲೇಶ್ವರಂ 18ನೇ ಕ್ರಾಸ್‌ ವರೆಗೆ 11 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಯುತ್ತಿದೆ. ತೆರೆದ ವಾಹನದಲ್ಲಿ ಮೋದಿ ಅಬ್ಬರದ ರೋಡ್ ಶೋ ನಡೆಯುತ್ತಿದ್ದು, ಸಹಸ್ರಾರು ಜನರತ್ತ ಮೋದಿ ಕೈಬೀಸುತ್ತಿದ್ದಾರೆ. ರೇಷ್ಮೆಯ ಕೇಸರಿ ಮೈಸೂರು‌ ಪೇಟಾದಲ್ಲಿ ಕಂಗೊಳಿಸುತ್ತಿದ್ದಾರೆ. ಪಿಸಿ ಮೋಹನ್, ತೇಜಸ್ವಿ ಸೂರ್ಯ ಸಾಥ್‌ ನೀಡುತ್ತಿದ್ದಾರೆ.

    ಮೋದಿ ರೋಡ್ ಶೋಗೆ ಕಲಾತಂಡಗಳು ಮೆರುಗು ತಂದುಕೊಟ್ಟಿದೆ. ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಮುಗಿಲು ಮುಟ್ಟಿದೆ. ಹೂಮಳೆ ಸುರಿಸಿ ಸಂಭ್ರಮಿಸಿದ್ದಾರೆ. ಮೋದಿ ಮೋದಿ ಜೈಕಾರ ಘೋಷಣೆ ಜೋರಾಗಿದೆ.

    ಮೋದಿ ಸಂಚರಿಸುತ್ತಿರುವ ರಸ್ತೆಗಳು: ಬ್ರಿಗೇಡ್ ಮಿಲೇನಿಯಂ ರೋಡ್, ಟಿಎಂಸಿ ಲೇಔಟ್, ಮಾರೇನಹಳ್ಳಿ ರೋಡ್, ಜೆಪಿನಗರ 5ನೇ ಹಂತ, ಜಯನಗರ ಮೆಟ್ರೋ ಸ್ಟೇಷನ್, ಜಯನಗರ ಟ್ರಾಫಿಕ್ ಪೊಲೀಸ್ ಸ್ಟೇಷನ್, ಆರ್.ವಿ ರೋಡ್, ಸೌತ್ ಎಂಡ್ ಸರ್ಕಲ್, ಆರ್ಮುಗಂ ಸರ್ಕಲ್, ಮಾಧವ ರಾವ್ ಸರ್ಕಲ್, ದೊಡ್ಡ ಗಣಪತಿ ಟೆಂಪಲ್ ಜಂಕ್ಷನ್, ರಾಮಕೃಷ್ಣ ಆಶ್ರಮ, ಉಮಾ ಥಿಯೇಟರ್ ಸಿಗ್ನಲ್, ಟಿ.ಆರ್. ಮಿಲ್ ಜಂಕ್ಷನ್, ಶಿರ್ಸಿ ಸರ್ಕಲ್, ಬಿನ್ನಿಮಿಲ್ ಸರ್ಕಲ್, ಕುಷ್ಠರೋಗ ಆಸ್ಪತ್ರೆ, ಮಾಗಡಿ ರೋಡ್ ಟೋಲ್‍ಗೇಟ್.

    ವೀರೇಶ್ ಥಿಯೇಟರ್, ಬಿಎಸ್‍ಎನ್‍ಎಲ್ ವಿಜಯನಗರ , ನಾಗರಬಾವಿ ಮುಖ್ಯರಸ್ತೆ, ಗೋವಿಂದರಾಜನಗರ, ಮಾಗಡಿ ರೋಡ್ ಜಂಕ್ಷನ್, ಹಾವನೂರು ಸರ್ಕಲ್, ಬಸವೇಶ್ವರನಗರ, ಶಂಕರಮಠ, ಮೋದಿ ಹಾಸ್ಪಿಟಲ್ ಸಿಗ್ನಲ್, ನವರಂಗ್ ಬ್ರಿಡ್ಜ್, ಮಹಾಕವಿ ಕುವೆಂಪು ರಸ್ತೆ, ಕೆ.ಸಿ. ಜನರಲ್ ಆಸ್ಪತ್ರೆ, ಸಂಪಿಗೆ ರಸ್ತೆ, ಮಲ್ಲೇಶ್ವರ, ಕಾಡು ಮಲ್ಲೇಶ್ವರ ದೇವಸ್ಥಾನ. ಇದನ್ನೂ ಓದಿ: ರೋಡ್‌ ಶೋನಲ್ಲಿ ಸರ್ಕಾರದ ಸಾಧನೆ, ಬೆಂಗಳೂರು ಕೊಡುಗೆಗಳ ಉಲ್ಲೇಖದ ಫ್ಲೆಕ್ಸ್‌ ಅಳವಡಿಕೆ

  • ರೋಡ್‌ ಶೋನಲ್ಲಿ ಸರ್ಕಾರದ ಸಾಧನೆ, ಬೆಂಗಳೂರು ಕೊಡುಗೆಗಳ ಉಲ್ಲೇಖದ ಫ್ಲೆಕ್ಸ್‌ ಅಳವಡಿಕೆ

    ರೋಡ್‌ ಶೋನಲ್ಲಿ ಸರ್ಕಾರದ ಸಾಧನೆ, ಬೆಂಗಳೂರು ಕೊಡುಗೆಗಳ ಉಲ್ಲೇಖದ ಫ್ಲೆಕ್ಸ್‌ ಅಳವಡಿಕೆ

    ಬೆಂಗಳೂರು: ಮನೆ ಬಾಗಿಲಿಗೆ ಮೋದಿ ಪರಿಕಲ್ಪನೆಯ ಅಡಿ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ರೋಡ್‌ ಶೋ (Road Show) ಆಯೋಜನೆಗೊಂಡಿದೆ.

    ಬೆಂಗಳೂರು ರೋಡ್ ಶೋನಲ್ಲಿ ಕೇಂದ್ರ ಸರ್ಕಾರದ ಸಾಧನೆ ಹಾಗೂ ಬೆಂಗಳೂರಿಗೆ (Bengaluru) ಸರ್ಕಾರ ನೀಡಿದ ಕೊಡುಗೆಗಳ ಫ್ಲೆಕ್ಸ್‌ ಅಳವಡಿಸಲಾಗಿದೆ.  ಇದನ್ನೂ ಓದಿ: ಬೆಂಗಳೂರಿನಲ್ಲಿ ಮೋದಿ ಮೆಗಾ ರೋಡ್‌ ಶೋ – ಯಾವ ಸಮಯದಲ್ಲಿ ಎಲ್ಲಿ? ಯಾವ ರಸ್ತೆಯಲ್ಲಿ ಸಂಚಾರ?

     

    ನಾಯಕರಿಗೆ ಸ್ವಾಗತ ಕೋರಿ ಫ್ಲೆಕ್ಸ್‌ ಹಾಕುವುದು ಸಾಮಾನ್ಯ. ಆದರೆ ಈ ರೋಡ್‌ ಶೋನಲ್ಲಿ ಮೋದಿಗೆ ಸ್ವಾಗತ ಕೋರುವ ಬದಲಾಗಿ  ಕೇಂದ್ರ, ರಾಜ್ಯ ಸರ್ಕಾರದ ಸಾಧನೆಯ ಫ್ಲೆಕ್ಸ್‌ ಅಳವಡಿಸಿ ಮತ ಬೇಟೆಗೆ ಬಿಜೆಪಿ ಮುಂದಾಗಿದೆ. ಮೋದಿ ರೋಡ್‌ ಶೋ ನಡೆಸುವ ರಸ್ತೆಯುದ್ಧಕ್ಕೂ ಬೆಂಗಳೂರಿಗೆ ನೀಡಿದ ಕೊಡುಗೆಗಳ ವಿವರ ಇರುವ ಫ್ಲೆಕ್ಸ್‌ ಹಾಕಲಾಗಿದೆ.

    ಶನಿವಾರ ಬೆಳಗ್ಗೆ 10ಕ್ಕೆ ಆರಂಭವಾಗಿ ಮಧ್ಯಾಹ್ನ 12:30 ಗಂಟೆಯವರೆಗೆ 26.5 ಕಿಲೋ ಮೀಟರ್ ರೋಡ್ ಶೋ ನಡೆಯಲಿದೆ. ಬ್ರಿಗೇಡ್ ಮಿಲೇನಿಯಂ ರಸ್ತೆಯಿಂದ ಮಲ್ಲೇಶ್ವರಂ 18ನೇ ಕ್ರಾಸ್‌ ವರೆಗೆ 11 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಯಲಿದೆ.