Tag: ರೋಡ್ ಶೋ

  • ಏ.14 ರಂದು ರಾಜ್ಯಕ್ಕೆ ನಮೋ- ಚಿಕ್ಕಬಳ್ಳಾಪುರ, ಬೆಂಗ್ಳೂರಿನಲ್ಲಿ ಬೃಹತ್ ರೋಡ್ ಶೋ

    ಏ.14 ರಂದು ರಾಜ್ಯಕ್ಕೆ ನಮೋ- ಚಿಕ್ಕಬಳ್ಳಾಪುರ, ಬೆಂಗ್ಳೂರಿನಲ್ಲಿ ಬೃಹತ್ ರೋಡ್ ಶೋ

    ಬೆಂಗಳೂರು: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳಿದ್ದು, ತಮ್ಮ ತಮ್ಮ ಪಕ್ಷದ ನಾಯಕರು ಅಬ್ಬರದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಅಂತೆಯೇ ಪ್ರಧಾನಿ ನರೇಂದ್ರ ಮೊದಿಯವರು (Narendra Modi) ಚುನಾವಣಾ ಪ್ರಚಾರಕ್ಕಾಗಿ ಏಪ್ರಿಲ್ 14 ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ.

    ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರಿನಲ್ಲಿ ಪ್ರಧಾನಿ ಬಿರುಸಿನ ಪ್ರಚಾರ (Election Campaign) ನಡೆಸಲಿದ್ದಾರೆ. ಏಪ್ರಿಲ್ 14 ರಂದು ಮಧ್ಯಾಹ್ನ 3 ಗಂಟೆಗೆ ಚಿಕ್ಕಬಳ್ಳಾಪುರ ಕ್ಷೇತ್ರದ ದೇವನಹಳ್ಳಿಯಲ್ಲಿ ಬೃಹತ್ ಸಾರ್ವಜನಿಕ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ. ಅಲ್ಲದೇ ಅದೇ ದಿನ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬೃಹತ್ ರೋಡ್ ಶೋಗೆ ಪ್ಲಾನ್ ಮಾಡಿಕೊಳ್ಳಲಾಗಿದೆ.

    ಬೆಂಗಳೂರಿನಲ್ಲಿ ಎರಡು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡು ರೋಡ್ ಶೋ (Namo Road Show) ನಡೆಸಲು ಪ್ಲಾನ್ ರೂಪಿಸಲಾಗಿದೆ. ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯ ಬ್ಯಾಟರಾಯನಪುರ ಮತ್ತು ಹೆಬ್ಬಾಳ ಕ್ಷೇತ್ರ ಒಳಗೊಂಡ ರೋಡ್ ಶೋ ನಡೆಸುವ ಸಾಧ್ಯತೆ ಇದೆ. ನಮೋ ರೋಡ್ ಶೋಗೆ ಇಂದು ರೂಟ್‍ಮ್ಯಾಪ್ ಸಿದ್ಧಪಡಿಸುವ ಸಾಧ್ಯತೆಗಳಿವೆ. ಇದನ್ನೂ ಓದಿ: RSS ಬಗ್ಗೆ ತಿಳಿದುಕೊಳ್ಳದೆ ಮಾತನಾಡಿದ್ದೇನೆ: ಪ್ರಜ್ವಲ್ ರೇವಣ್ಣ ಕ್ಷಮೆ

  • ಡಿಕೆ ಬ್ರದರ್ಸ್ ಭದ್ರಕೋಟೆಯಲ್ಲಿ ಅಮಿತ್ ಶಾ ಶಕ್ತಿ ಪ್ರದರ್ಶನ; ರೋಡ್ ಶೋನಲ್ಲೂ ಜೈ ಶ್ರೀರಾಮ್ ಘೋಷಣೆ

    ಡಿಕೆ ಬ್ರದರ್ಸ್ ಭದ್ರಕೋಟೆಯಲ್ಲಿ ಅಮಿತ್ ಶಾ ಶಕ್ತಿ ಪ್ರದರ್ಶನ; ರೋಡ್ ಶೋನಲ್ಲೂ ಜೈ ಶ್ರೀರಾಮ್ ಘೋಷಣೆ

    – ಡಾ. ಮಂಜುನಾಥ್‌ ಪರ ಮತಯಾಚನೆ – ರೋಡ್‌ಶೋನಲ್ಲಿ ಘಟಾನುಘಟಿ ನಾಯಕರು ಭಾಗಿ

    ರಾಮನಗರ: ರಾಜ್ಯ ಬಿಜೆಪಿಯಲ್ಲೀಗ ಲೋಕಸಭೆ ಚುನಾವಣೆಯ ರಣೋತ್ಸಾಹ ಮೂಡಿದೆ. ಅಮಿತ್ ಶಾ (Amit Shah) ಅವರ ಮಿಂಚಿನ ಸಂಚಾರ ರಾಜ್ಯ ಬಿಜೆಪಿ-ಜೆಡಿಎಸ್ ಮೈತ್ರಿಗೆ ಬೂಸ್ಟ್ ನೀಡಿದೆ. ಅದರಲ್ಲೂ ಬೆಂಗಳೂರು ಗ್ರಾಮಾಂತರ (Bengaluru Rural) ಕ್ಷೇತ್ರವನ್ನು ಪ್ರತಿಷ್ಠೆಯ ಕಣವಾಗಿ ತೆಗೆದುಕೊಂಡಿರುವ ಅಮಿತ್ ಶಾ ಅವರು ಡಿಕೆ ಬ್ರದರ್ಸ್ ಭದ್ರ ಕೋಟೆಯಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ.

    ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ ಪರ ಚುನಾವಣಾ ಪ್ರಚಾರದ ಭಾಗವಾಗಿ ಚನ್ನಪಟ್ಟಣದಲ್ಲಿಂದು ಭರ್ಜರಿ ರೋಡ್ ಶೋ (Amit Shah Road Show) ನಡೆಸಿದ್ದಾರೆ. ಅಮಿತ್ ಶಾ ಅವರಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಡಾ. ಮಂಜುನಾಥ್, ನಿಖಿಲ್ ಕುಮಾರಸ್ವಾಮಿ, ಸಿ.ಪಿ ಯೋಗೇಶ್ವರ್ ಅವರು ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಯಾವ್ದೇ ಕಾರಣಕ್ಕೂ ಪಕ್ಷ ವಿರೋಧಿ ಚಟುವಟಿಕೆ ಮಾಡಬಾರದು – ಪಕ್ಷದ ಅಸಮಧಾನಿತರಿಗೆ ಅಮಿತ್ ಶಾ ವಾರ್ನಿಂಗ್

    ಜೈ ಶ್ರೀರಾಮ್- ಮೋದಿ… ಮೋದಿ.. ಘೋಷಣೆ:
    ರೋಡ್ ಶೋ ವೇಳೆ ಸೇರಿದ್ದ ಸಾವಿರಾರು ಜನ ಹಾಗೂ ಬಿಜೆಪಿ ಕಾರ್ಯಕರ್ತರು `ಜೈ ಶ್ರೀರಾಮ’ ಘೋಷಣೆ ಕೂಗಿದ್ದಾರೆ. ಮೆರವಣಿಗೆ ಉದ್ದಕ್ಕೂ `ಜೈ ಶ್ರೀರಾಮ್, ಮೋದಿ ಮೋದಿ’ ಅಂತಾ ಘೋಷಣೆ ಕೂಗುತ್ತಲೇ ಉತ್ಸಾಹ ಮೆರೆದಿದ್ದಾರೆ. ಇದೇ ವೇಳೆ ಅಮಿತ್ ಶಾ ಅವರು ಜನರ ಮೇಲೆ ಹೂಮಳೆ ಸುರಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಕುರ್ಚಿ ಉಳಿಸಿಕೊಳ್ಳೋದೆ ಚಿಂತೆ, ಯಾಕಂದ್ರೆ ಇನ್ನೊಬ್ಬರು ಸಿಎಂ ಕುರ್ಚಿ ಎಳೆಯುತ್ತಿದ್ದಾರೆ: ಅಮಿತ್ ಶಾ

    ಭಿಗಿ ಭದ್ರತೆ:
    ರೋಡ್ ಶೋ ಹಿನ್ನೆಲೆಯಲ್ಲಿ ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ರೋಡ್ ಶೋಗು ಮುನ್ನವೇ ಬಾಂಬ್ ಸ್ಕ್ವಾಡ್ ಮತ್ತು ಶ್ವಾನದಳಗಳಿಂದ ತಪಾಸಣೆ ನಡೆಸಲಾಗಿದೆ. ಇದನ್ನೂ ಓದಿ: ಕುಮಾರಸ್ವಾಮಿಗೆ ಆಧುನಿಕ ತಂತ್ರಜ್ಞಾನದಲ್ಲಿ ಆಪರೇಷನ್ ಮಾಡಲಾಗಿದೆ: ಡಾ.ಮಂಜುನಾಥ್‌

  • ಕಲ್ಲಿದ್ದಲು ಗಣಿ ಹರಾಜು- ಹೂಡಿಕೆದಾರರ ಆಕರ್ಷಣೆಗೆ ಜ.16ರಂದು ರಾಂಚಿಯಲ್ಲಿ ರೋಡ್ ಶೋ

    ಕಲ್ಲಿದ್ದಲು ಗಣಿ ಹರಾಜು- ಹೂಡಿಕೆದಾರರ ಆಕರ್ಷಣೆಗೆ ಜ.16ರಂದು ರಾಂಚಿಯಲ್ಲಿ ರೋಡ್ ಶೋ

    – 8 ರಾಜ್ಯಗಳ 70 ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆ

    ಬೆಂಗಳೂರು: ಕಲ್ಲಿದ್ದಲು ಗಣಿ ಹರಾಜಿಗಾಗಿ (Coal Mine Auction) ಹೂಡಿಕೆದಾರರನ್ನು ಸೆಳೆಯಲು ಕೇಂದ್ರ ಸರ್ಕಾರ ಜನವರಿ 16ರಂದು ರಾಂಚಿಯಲ್ಲಿ (Ranchi) ರೋಡ್ ಶೋ (Road Show) ನಡೆಸಲಿದೆ.

    ಕಲ್ಲಿದ್ದಲು ಗಣಿಗಳ ವಾಣಿಜ್ಯ ಹರಾಜಿನಲ್ಲಿ ಹೆಚ್ಚು ಹೆಚ್ಚು ಹೂಡಿಕೆದಾರರು ಭಾಗವಹಿಸುವಂತೆ ಸೆಳೆಯಲು ಕೇಂದ್ರ ಕಲ್ಲಿದ್ದಲು ಸಚಿವಾಲಯ ಜನವರಿ 16ರಂದು ರಾಂಚಿಯಲ್ಲಿ ರೋಡ್ ಶೋ ಆಯೋಜಿಸುತ್ತಿದೆ ಎಂದು ಕಲ್ಲಿದ್ದಲು ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ರಾಹುಲ್‌ ಗಾಂಧಿ ಮೊದಲು ಪಕ್ಷದ ನಾಯಕರಿಗೆ ನ್ಯಾಯ ಕೊಡಿಸಲಿ- ʼಕೈʼ ಯಾತ್ರೆಗೆ ಅಮಿತ್‌ ಮಾಳವಿಯಾ ವ್ಯಂಗ್ಯ

    ರೋಡ್ ಶೋ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕಲ್ಲಿದ್ದಲು ಕಾರ್ಯದರ್ಶಿ ಅಮೃತ್ ಲಾಲ್ ಮೀನಾ, ಗೌರವ ಅತಿಥಿಯಾಗಿ ಹೆಚ್ಚುವರಿ ಕಾರ್ಯದರ್ಶಿ ಎಂ.ನಾಗರಾಜು ಭಾಗವಹಿಸಲಿದ್ದಾರೆ ಎಂದು ಕಲ್ಲಿದ್ದಲು ಸಚಿವಾಲಯದ ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ: ನಮ್ಮ ಎದೆ ಬಗೆದ್ರೆ ಶ್ರೀರಾಮ, ಸಿದ್ದರಾಮಯ್ಯ, ಅಂಬೇಡ್ಕರ್, ಸಿದ್ದಗಂಗಾ ಶ್ರೀಗಳೂ ಕಾಣ್ತಾರೆ: ಪ್ರದೀಪ್ ಈಶ್ವರ್

    ಕಲ್ಲಿದ್ದಲು ಗಣಿಗಳ ವಾಣಿಜ್ಯ ಹರಾಜಿನಲ್ಲಿ 8 ಸುತ್ತುಗಳ ವಾಣಿಜ್ಯ ಹರಾಜುಗಳ ಅಡಿಯಲ್ಲಿ 39 ಕಲ್ಲಿದ್ದಲು ಗಣಿಗಳನ್ನು ಮತ್ತು 9ನೆಯ ಅಡಿಯಲ್ಲಿ 31 ಕಲ್ಲಿದ್ದಲು ಗಣಿಗಳನ್ನು ಮಾರಾಟ ಮಾಡಲು ಸರ್ಕಾರ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈ 70 ಕಲ್ಲಿದ್ದಲು ಗಣಿಗಳು ಕಲ್ಲಿದ್ದಲು ಹೊಂದಿರುವ ರಾಜ್ಯಗಳಾದ ಬಿಹಾರ, ಛತ್ತೀಸ್‌ಗಢ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಿಂದ ಬಂದಿವೆ. ಇದನ್ನೂ ಓದಿ: ಟ್ರಾಫಿಕ್ ರೂಲ್ಸ್ ಪಾಲಿಸದವರಿಗೆ ಚಿತ್ರಗುಪ್ತನ ಲೆಕ್ಕ, ಯಮನ ಪಾಠ!

    ಈ ಗಣಿಗಳಲ್ಲಿ 27 ಸಂಪೂರ್ಣವಾಗಿ ಪರಿಶೋಧಿತವಾಗಿವೆ ಮತ್ತು 43 ಭಾಗಶಃ ಪರಿಶೋಧಿಸಲ್ಪಟ್ಟಿವೆ. ಏಳು ಕೋಕಿಂಗ್ ಕಲ್ಲಿದ್ದಲು ಗಣಿಗಳಾಗಿವೆ. ಆದರೆ ಉಳಿದವುಗಳು ಅಲ್ಲ ಎಂದು ಕೇಂದ್ರ ಗಣಿ ಸಚಿವಾಲಯ ಹೇಳಿದೆ. ಇದನ್ನೂ ಓದಿ: ಸೋಮವಾರ ವಿಶೇಷ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ ಗವಿಗಂಗಾಧರೇಶ್ವರ ದೇಗುಲ

    ಸಮಗ್ರ ಚರ್ಚೆಯ ನಂತರ ಗಣಿಗಳನ್ನು ಮತ್ತು ಗಣಿ ಹರಾಜು ಪ್ರಕ್ರಿಯೆ ಅಂತಿಮಗೊಳಿಸಲಾಗಿದೆ ಮತ್ತು ಸಂರಕ್ಷಿತ ಪ್ರದೇಶಗಳು, ವನ್ಯಜೀವಿ ಅಭಯಾರಣ್ಯಗಳು, ನಿರ್ಣಾಯಕ ಆವಾಸ ಸ್ಥಾನಗಳು, ಶೇ.40ಕ್ಕಿಂತ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ಮತ್ತು ಹೆಚ್ಚು ನಿರ್ಮಿಸಲಾದ ಪ್ರದೇಶವನ್ನು ಹೊರಗಿಡಲಾಗಿದೆ ಎಂದು ಕೇಂದ್ರ ಗಣಿ ಸಚಿವಲಯ ತಿಳಿಸಿದೆ. ಇದನ್ನೂ ಓದಿ: ರಾಮಮಂದಿರಕ್ಕೆ ಹೋಗಿ ಪಾಪ ತೊಳೆದುಕೊಂಡು ಬನ್ನಿ – ಸಿದ್ದರಾಮಯ್ಯಗೆ ಈಶ್ವರಪ್ಪ ಟಾಂಗ್

  • ಅಹಮದಾಬಾದ್‌ನಲ್ಲಿ ಯುಎಇ ಅಧ್ಯಕ್ಷರೊಂದಿಗೆ ಮೋದಿ ರೋಡ್ ಶೋ

    ಅಹಮದಾಬಾದ್‌ನಲ್ಲಿ ಯುಎಇ ಅಧ್ಯಕ್ಷರೊಂದಿಗೆ ಮೋದಿ ರೋಡ್ ಶೋ

    ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಯುಎಇ (UAE) ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ (Sheikh Mohamed bin Zayed Al Nahyan) ಅವರು ಜನವರಿ 9 ರಂದು ಅಹಮದಾಬಾದ್‌ನಲ್ಲಿ (Ahmedabad) ರೋಡ್ ಶೋ (Road Show) ನಡೆಸುವ ಸಾಧ್ಯತೆಯಿದೆ.

    ಮೂಲಗಳ ಪ್ರಕಾರ, ಯುಎಇ ಅಧ್ಯಕ್ಷ ಜನವರಿ 9 ರಂದು ನಗರಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳಲಿದ್ದಾರೆ. ನಂತರ ಉಭಯ ನಾಯಕರು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ (SVPI) ವಿಮಾನ ನಿಲ್ದಾಣದಿಂದ ಸಬರಮತಿ ಆಶ್ರಮದವರೆಗೆ ರೋಡ್ ಶೋ ನಡೆಸಲಿದ್ದಾರೆ. ಈ ರೋಡ್ ಶೋ 20 ನಿಮಿಷಗಳ ಕಾಲ ನಡೆಯುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಲಕ್ಷದ್ವೀಪದ ಬೀಚ್‌ನಲ್ಲಿ ಮೋದಿ ಕೂಲ್‌; ಇಲ್ಲಿದೆ ನೋಡಿ PHOTOS

    ಜನವರಿ 10ರಿಂದ 12ರವರೆಗೆ ಗಾಂಧಿನಗರದಲ್ಲಿ ನಡೆಯಲಿರುವ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯಲ್ಲಿ (Vibrant Gujarat Global Summit) ಪಾಲ್ಗೊಳ್ಳುವ ಮುಖ್ಯಸ್ಥರಲ್ಲಿ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಕೂಡ ಭಾಗವಹಿಸಲಿದ್ದಾರೆ. ಜನವರಿ 10ರಂದು ಪ್ರಧಾನಿ ನರೇಂದ್ರ ಮೋದಿಯವರು ಈ ಶೃಂಗಸಭೆಯನ್ನು ಉದ್ಘಾಟಿಸಲಿದ್ದಾರೆ. ಇದನ್ನೂ ಓದಿ: Ram Mandir: ರಾಮಮಂದಿರ ಉದ್ಘಾಟನೆಯಂದು ಇಡೀ ದಿನ ಪ್ರಧಾನಿ ಮೋದಿ ಉಪವಾಸ!

  • Ayodhya: ರಾಮಮಂದಿರ ಉದ್ಘಾಟನೆಗೂ ಮುನ್ನ ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ರೋಡ್‌ ಶೋ

    Ayodhya: ರಾಮಮಂದಿರ ಉದ್ಘಾಟನೆಗೂ ಮುನ್ನ ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ರೋಡ್‌ ಶೋ

    ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ (Ayodhya) ರಾಮಮಂದಿರ (Ram Temple) ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಡಿ.30 ರಂದು ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣ ಉದ್ಘಾಟಿಸಿ ರೋಡ್‌ ಶೋ ನಡೆಸಲಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 30 ರಂದು ಅಯೋಧ್ಯೆಗೆ ಭೇಟಿ ನೀಡಲಿದ್ದು, ಮರ್ಯಾದಾ ಪುರುಷೋತ್ತಮ ಶ್ರೀರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Maryada Purushottam Shri Ram International Airport) ಮತ್ತು ಅಯೋಧ್ಯೆ ರೈಲು ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಜೊತೆಗೆ 3,284.60 ಕೋಟಿ ವೆಚ್ಚದ 29 ಅಭಿವೃದ್ಧಿ ಯೋಜನೆಗಳಿಗೆ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ ರೋಡ್‌ ಶೋ ಮತ್ತು ಸಾರ್ವಜನಿಕ ಸಭೆಯಲ್ಲೂ ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: Ayodhya Ram Mandir: ರಾಮಮಂದಿರ ಉದ್ಘಾಟನೆಗೆ ನೇಪಾಳದಿಂದ ಬರ್ತಿದೆ ಚಿನ್ನಾಭರಣ, ವಸ್ತ್ರ, ಸಿಹಿತಿನಿಸು

    ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣಗಳ ನಡುವೆ 15 ಕಿ.ಮೀ.ವರೆಗೆ ರೋಡ್‌ ಶೋ ನಡೆಯಲಿದೆ. ಇದಾದ ನಂತರ ಪ್ರಧಾನಿ ಮೋದಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.

    ರೋಡ್‌ ಶೋ ಹಾದುಹೋಗುವ 51 ಕಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಾಧು, ಸಂತರು ಮೋದಿ ಅವರನ್ನು ಆಶೀರ್ವದಿಸಲಿದ್ದಾರೆ. ಅಯೋಧ್ಯೆಯಲ್ಲಿ ನವೀಕೃತ ರೈಲು ನಿಲ್ದಾಣವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಇದನ್ನೂ ಓದಿ: ಪ್ರಾಣಪ್ರತಿಷ್ಠೆಗೂ ಮುನ್ನ ಸಿಂಗಾರಗೊಳ್ಳಲಿದೆ ರಾಮನ ಮೆಟ್ಟಿಲು! – ಏನಿದರ ಮಹತ್ವ? ಈ ಹೆಸರು ಯಾಕೆ ಬಂತು?

    ಜ.22 ರಂದು ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಗೆ ನೆರವೇರಲಿದೆ. ಪೂರ್ವಭಾವಿಯಾಗಿ ಮರ್ಯಾದಾ ಪುರುಷೋತ್ತಮ ಶ್ರೀರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಯಾಗಲಿದೆ.

  • ಪ್ರಧಾನಿ ರೋಡ್ ಶೋ ಸಂದರ್ಭದಲ್ಲಿ ಬಿಜೆಪಿ ನಾಯಕರ ಮಾದರಿ ನಡೆ: ಬಸವರಾಜ ಬೊಮ್ಮಾಯಿ

    ಪ್ರಧಾನಿ ರೋಡ್ ಶೋ ಸಂದರ್ಭದಲ್ಲಿ ಬಿಜೆಪಿ ನಾಯಕರ ಮಾದರಿ ನಡೆ: ಬಸವರಾಜ ಬೊಮ್ಮಾಯಿ

    ಬೆಂಗಳೂರು: ಚಂದ್ರಯಾನ-3 (Chandrayaan-3) ಯಶಸ್ಸಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಇಸ್ರೊ ವಿಜ್ಞಾನಿಗಳನ್ನು ಸನ್ಮಾನಿಸಲು ಆಗಮಿಸಿದಾಗ ನಮ್ಮ ಬಿಜೆಪಿ (BJP) ನಾಯಕರು ಸಾರ್ವಜನಿಕರೊಂದಿಗೆ ನಿಂತು ಮಾದರಿಯ ನಡೆ ಅನುಸರಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅಭಿಪ್ರಾಯ ಪಟ್ಟಿದ್ದಾರೆ.

    ಭಾನುವಾರ ಶೋಭಾ ನಾಗಸಂದ್ರ ಅಪಾರ್ಟ್‌ಮೆಂಟ್‌ ವೆಲ್‌ಫೇರ್ ಅಸೋಸಿಯೇಷನ್ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚಂದ್ರಯಾನ-3 ಯಶಸ್ವಿ ಉಡಾವಣೆಗೆ ಕಾರಣರಾದ ವಿಜ್ಞಾನಿಗಳಿಗೆ ಸನ್ಮಾನ ಮಾಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಪ್ರಧಾನಿಯವರ ಶಿಷ್ಟಾಚಾರ ಪಾಲನೆಯಲ್ಲಿ ರಾಜ್ಯ ಬಿಜೆಪಿ ನಾಯಕರು ರಸ್ತೆಯ ಮಧ್ಯೆ ಜನರ ಜೊತೆ ನಿಂತು ಕೈ ಬೀಸಿರುವುದಕ್ಕೆ ಕಾಂಗ್ರೆಸ್ (Congress) ಟೀಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರೋಟೋಕಾಲ್ ಪಾಲನೆಯಲ್ಲಿ ಯಾವುದೇ ಗೊಂದಲ ಇರಲಿಲ್ಲ. ನಾವೆಲ್ಲಾ ಸಾರ್ವಜನಿಕ ಜೀವನಕ್ಕೆ ಬಂದಿರುವುದು ಸೇವೆ ಮಾಡಲು. ಇಸ್ರೋದಂತಹ (ISRO) ಸಂಸ್ಥೆ, ವಿಜ್ಞಾನಿಗಳು ಇಂತಹ ದೊಡ್ಡ ಸಾಧನೆ ಮಾಡಿದಾಗ ನಾವು ಒಂದು ಹೆಜ್ಜೆ ಹಿಂದೆ ಸರಿಯಬೇಕು. ನಾವು ಹಿಂದೆ ಸರಿದು ಅವರಿಗೆ ಮಹತ್ವ ಕೊಡಬೇಕು. ಸೇವಾ ಮನೋಭಾವದಿಂದ ಸಾಮಾನ್ಯ ಜನರ ನಡುವೆ ನಮ್ಮ ನಾಯಕರು ಇದ್ದು ಆ ಕೆಲಸ ಮಾಡಿದ್ದಾರೆ. ಅದನ್ನು ತಿಳಿದುಕೊಳ್ಳುವ, ಹೊಗಳುವ ಮನಸುಗಳು ಬೇಕಷ್ಟೇ ಎಂದರು. ಇದನ್ನೂ ಓದಿ: ಬೀದರ್‌ನಲ್ಲಿ ರನ್ ಫಾರ್ ರೋಡ್ ಸೇಫ್ಟಿ ಅಭಿಯಾನ

    ಇಸ್ರೋ ಅಧ್ಯಕ್ಷರು ಮೂರು ನಿಮಿಷ ಮಾತನಾಡಿ ಸಾಧನೆಗೆ ಕಾರಣರಾದವರಿಗೆ ಮುಂದೆ ಬಿಟ್ಟರು. ಇದರ ಅರ್ಥ ಇಸ್ರೋ ಅಧ್ಯಕ್ಷರು ಹಿಂದೆ ಸರಿದರು ಅಂತಲ್ಲ. ನಮ್ಮ ನಾಯಕರು ಹಿಂದೆ ಸರಿದು ನಿಂತು ಜನರನ್ನು ಮುಂದೆ ಬಿಟ್ಟಿದ್ದಾರೆ ಎಂದು ಸಮರ್ಥಿಸಿಕೊಂಡರು. ಇಸ್ರೋ ವಿಜ್ಞಾನಿಗಳಿಗೆ ಅಭಿನಂದಿಸಲು ಪ್ರಧಾನಿಯವರು ಬಂದಾಗ ಜನರ ಮಧ್ಯೆ ನಮ್ಮ ನಾಯಕರು ನಿಂತಿದ್ದಾರೆ. ನಮ್ಮ ನಾಯಕರು ಅತ್ಯಂತ ಮಾದರಿಯಾದ ಅನುಕರಣೀಯ ನಡವಳಿಕೆ ತೋರಿದ್ದಾರೆ. ಇವತ್ತಿನ ದಿನ ಎಲ್ಲರೂ ತಮ್ಮ ಸ್ಥಾನಮಾನಕ್ಕೆ ಪೈಪೋಟಿ ಮಾಡುತ್ತಾರೆ. ನಮ್ಮ ನಾಯಕರು ಅತ್ಯಂತ ಅನುಕರಣೀಯ ಮಾದರಿ ಅನುಸರಿಸಿದ್ದಾರೆ. ಬಿಜೆಪಿ ನಾಯಕರು ಬೀದಿ ಪಾಲಾದರು, ಬ್ಯಾರಿಕೇಡ್ ಬಂಧಿ ಆದರು ಅಂತ ಕಾಂಗ್ರೆಸ್‌ನವರು ಹೇಳಿರುವುದು ಅವರ ಮನಸ್ಥಿತಿ ತೋರಿಸುತ್ತದೆ ಎಂದು ಕಿಡಿಕಾರಿದರು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಶಾಸಕ ಎಸ್.ಟಿ.ಸೋಮಶೇಖರ್ (ST Somashekar) ಬಾರದೇ ಇರದಿರುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಅವರ ಜೊತೆ ಮಾತನಾಡಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯ ಬಿಜೆಪಿ ಮುಖಂಡರ ಮುಖ ನೋಡಲು ಮೋದಿಗೆ ಅಸಡ್ಡೆ: ದಿನೇಶ್ ಗುಂಡೂರಾವ್

    ದಾಖಲೆ ಇಲ್ಲ:
    ಹಿಂದಿನ ರಾಜ್ಯ ಸರ್ಕಾರದ ಅವಧಿಯಲ್ಲಿ 40% ಕಮಿಷನ್, ಕೋವಿಡ್ ಅಕ್ರಮಗಳ ತನಿಖೆಗೆ ವಿಚಾರಣಾ ಆಯೋಗಗಳ ರಚನೆ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಿಚಾರಣೆ ಆಗಲಿ, ತನಿಖೆ ಆಗಲಿ ಇದರಲ್ಲಿ ಆಶ್ಚರ್ಯ ಏನಿಲ್ಲ. ಈಗಾಗಲೇ ಪಿಎಸ್‌ಐ ನೇಮಕಾತಿ ಕೇಸ್ ತನಿಖೆ ನಡೆದು ಚಾರ್ಜ್‌ಶೀಟ್ ಆಗಿದೆ. ಇವರು ಚಾರ್ಜ್‌ಶೀಟ್‌ನಲ್ಲಿರುವವರ ರಕ್ಷಣೆ ಮಾಡುತ್ತಾರಾ ಅಥವಾ ಇನ್ನೊಂದು ಆಯಾಮದಲ್ಲಿ ತನಿಖೆ ಮಾಡುತ್ತಾರಾ? ಪಿಎಸ್‌ಐ ಕೇಸ್‌ನ ತನಿಖೆಯೂ ಪೊಲೀಸರೇ ಮಾಡಬೇಕು ಯಾವ ರೀತಿ ತನಿಖೆ ಮಾಡುತ್ತಾರೆ ಎಂದು ನೋಡೋಣ ಎಂದರು. ಇದನ್ನೂ ಓದಿ: ಶಿವರಾಮ್ ಹೆಬ್ಬಾರ್ ಪಕ್ಷಕ್ಕೆ ಬೇಡವೇ ಬೇಡ- ಯಲ್ಲಾಪುರ ಕಾಂಗ್ರೆಸ್ ಕಾರ್ಯಕರ್ತರು

    ಇನ್ನು 40% ಆರೋಪದಲ್ಲಿ ನಿರ್ದಿಷ್ಟ ಪ್ರಕರಣ ಇಲ್ಲ, ದಾಖಲೆಯೂ ಇಲ್ಲ. ಎರಡು ವರ್ಷವಾದರೂ ಅವರು ದಾಖಲೆ ಕೊಟ್ಟಿಲ್ಲ. ಲೋಕಾಯುಕ್ತದ (Lokayukta) ಎದುರು ಹೆಚ್ಚು ಟೆಂಡರ್ ಕೊಟ್ಟ ಹಲವು ಪ್ರಕರಣಗಳು ಇವೆ. ಇವುಗಳನ್ನು ತನಿಖೆಗೆ ಕೊಡುತ್ತಾರಾ? ಹೊಸ ದೂರು ಕೊಟ್ಟರೆ ಇವರು ಸೇರಿಸಿಕೊಳ್ಳುತ್ತಾರಾ? ಭ್ರಷ್ಟಾಚಾರ (Corruption) ಯಾವತ್ತಿದ್ದರೂ ಭ್ರಷ್ಟಾಚಾರವೇ. ಅವರ ಕಾಲದ ಆರೋಪಗಳನ್ನು ತನಿಖೆ ಮಾಡುತ್ತಾರಾ? ನಮ್ಮ ಕಾಲದ ಆರೋಪಗಳನ್ನು ತನಿಖೆ ಮಾಡಿ ಎಂದು ಮುಕ್ತವಾಗಿ ಹೇಳಿದ್ದೇವೆ. ಆದರೆ ಅವರ ಕಾಲದ ಆರೋಪಗಳ ಬಗ್ಗೆಯೂ ತನಿಖೆ ಮಾಡಲಿ. ಅದಕ್ಯಾಕೆ ಹಿಂದೇಟು ಹಾಕುತ್ತಿದ್ದಾರೆ? ರಾಜಕೀಯವಾಗಿ ಸೇಡು ತೀರಿಸಿಕೊಳ್ಳುವ, ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳುವ ಹುನ್ನಾರ ಇದರ ಹಿಂದೆ ಇದೆ ಎಂದು ಹೇಳಿದರು. ಅಲ್ಲದೇ ಸೋಮವಾರ ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರು (Bengaluru) ಬಿಜೆಪಿ ನಾಯಕರು ಪ್ರತಿಭಟನೆ (Protest) ಮಾಡುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಅತ್ಯಾಚಾರ, ಕೊಲೆ ಪ್ರಕರಣ- ಸೌಜನ್ಯ ತಾಯಿ, ಆರೋಪ ಹೊತ್ತವರೂ ಅಣ್ಣಪ್ಪನ ಬೆಟ್ಟಕ್ಕೆ ಭೇಟಿ, ಪ್ರಾರ್ಥನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬ್ಯಾರಿಕೇಡ್ ಬಂಧಿಗಳಾದ ಬಿಜೆಪಿ ನಾಯಕರು: ಪ್ರಿಯಾಂಕ್ ಖರ್ಗೆ ವ್ಯಂಗ್ಯ

    ಬ್ಯಾರಿಕೇಡ್ ಬಂಧಿಗಳಾದ ಬಿಜೆಪಿ ನಾಯಕರು: ಪ್ರಿಯಾಂಕ್ ಖರ್ಗೆ ವ್ಯಂಗ್ಯ

    ಕಲಬುರಗಿ: ಚಂದ್ರಯಾನ-3 (Chandrayaan-3) ಯಶಸ್ವಿಯಾದ ಹಿನ್ನೆಲೆ ಇಸ್ರೋ (ISRO) ವಿಜ್ಞಾನಿಗಳನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅಭಿನಂದಿಸಲು ಆಗಮಿಸುತ್ತಿರುವ ಸಂದರ್ಭದಲ್ಲಿ ಬೆಂಗಳೂರಿನಲ್ಲಿ (Bengaluru) ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ನಾಯಕರು ಬಂದೋಬಸ್ತ್‌ಗೆಂದು ಹಾಕಲಾಗಿದ್ದ ಬ್ಯಾರಿಕೇಡ್ ಒಳಗಿನಿಂದಲೇ ಮೋದಿ ಗಮನ ಸೆಳೆಯಲು ಪ್ರಯತ್ನಿಸುತ್ತಿರುವ ಸನ್ನಿವೇಶವನ್ನು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವ್ಯಂಗ್ಯವಾಡಿದ್ದಾರೆ.

    ಶನಿವಾರ ‘ಟ್ವೀಟ್’ (Tweet) ಮೂಲಕ ಬಿಜೆಪಿ ನಾಯಕರನ್ನು ಬ್ಯಾರಿಕೇಡ್ ಬಂಧಿಗಳು ಎಂದು ಕುಟುಕಿದ ಖರ್ಗೆ, ಪ್ರಧಾನಿ ಮುಂದೆ ಬ್ಯಾರಿಕೇಡ್ ಬಂಧಿಗಳಾಗಿ ಗಮನ ಸೆಳೆಯಲು ಹರಸಾಹಸ ಮಾಡುತ್ತಿರುವ ಬಿಜೆಪಿ ನಾಯಕರು ಸ್ವಾಭಿಮಾನ, ಆತ್ಮಗೌರವವನ್ನು ಬೀದಿಪಾಲು ಮಾಡಿಕೊಂಡಿದ್ದು ಕರುಣಾಜನಕವಾಗಿದೆ ಎಂದು ತಿವಿದಿದ್ದಾರೆ. ಇದನ್ನೂ ಓದಿ: ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲಾ ಹಳದಿಯೇ: ಕಾಂಗ್ರೆಸ್‌ ಗೇಲಿಗೆ ಬಿಜೆಪಿ ತಿರುಗೇಟು

    ರಾಜಕೀಯವಾಗಿ, ಸೈದ್ಧಾಂತಿಕವಾಗಿ ವಿರೋಧಿಗಳಾಗಿದ್ದರೂ ಕರ್ನಾಟಕ ಬಿಜೆಪಿ ನಾಯಕರ ದುರಾವಸ್ಥೆ ನೋಡಿ ಕರುಣೆ ಹುಟ್ಟುತ್ತಿದೆ. ನೂರು ದಿನಗಳಾದರೂ ಕೂಡಾ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡದ ಬಿಜೆಪಿಯನ್ನು ತೀಕ್ಷ್ಣವಾಗಿ ಟೀಕಿಸಿರುವ ಅವರು ಹೈಕಮಾಂಡ್‌ನಿಂದ ಇಷ್ಟೊಂದು ತಿರಸ್ಕಾರಕ್ಕೆ ಒಳಪಟ್ಟಿರುವಾಗ ವಿರೋಧ ಪಕ್ಷದ ನಾಯಕನ ಆಯ್ಕೆ ಸಾಧ್ಯವಾಗುವುದೇ ಎಂದು ಪ್ರಶ್ನಿಸಿ, ಈಗ ಸ್ವತಃ ಬಿಜೆಪಿಗರೂ ಸರ್ವಾಧಿಕಾರದ ಸಂತ್ರಸ್ತರಾಗಿದ್ದಾರೆ ಎಂದು ವಾಗ್ಬಾಣ ಬಿಟ್ಟಿದ್ದಾರೆ. ಇದನ್ನೂ ಓದಿ: ಕರ್ನಾಟಕದಿಂದ ಪಾಠ ಕಲಿತ ಬಿಜೆಪಿ ಹೈಕಮಾಂಡ್ – ಮಧ್ಯಪ್ರದೇಶದಲ್ಲಿ ಮಾಡಿದ ಬದಲಾವಣೆ ಏನು?

    ಬೀದಿಯಲ್ಲಿ ನಿಂತ ಬಿಜೆಪಿ ನಾಯಕರು ತಮ್ಮನ್ನು ತಾವೇ ಅವಮಾನಿಸಿಕೊಂಡಿದ್ದು, ಇದು ಮತ ನೀಡಿದ ಮತದಾರರಿಗೆ ಅವಮಾನ, ಕನ್ನಡಿಗರಿಗೆ ಅವಮಾನ, ಕಾರ್ಯಕರ್ತರಿಗೆ ಅವಮಾನ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಆಪರೇಷನ್ ಹಸ್ತ ಚರ್ಚೆ ಬೆನ್ನಲ್ಲೇ ರಹಸ್ಯವಾಗಿ ಸಿಎಂ ಭೇಟಿಯಾದ ಮತ್ತೊಬ್ಬ ಬಿಜೆಪಿ ಶಾಸಕ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗಳೂರಿನಲ್ಲಿ ಮೋದಿ ರೋಡ್ ಶೋ ಪ್ಲ್ಯಾನ್ ಆಗಿಲ್ಲ: ಶೋಭಾ ಕರಂದ್ಲಾಜೆ

    ಬೆಂಗಳೂರಿನಲ್ಲಿ ಮೋದಿ ರೋಡ್ ಶೋ ಪ್ಲ್ಯಾನ್ ಆಗಿಲ್ಲ: ಶೋಭಾ ಕರಂದ್ಲಾಜೆ

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ರೋಡ್ ಶೋ (Road Show) ವಿಚಾರವಾಗಿ ಈಗ ಬಿಜೆಪಿ (BJP) ಪಾಳಯದ ನಾಯಕರಲ್ಲೇ ಗೊಂದಲ ಸೃಷ್ಟಿಯಾಗಿದೆ. ರೋಡ್ ಶೋ ವಿಷಯಕ್ಕೆ ಸಂಬಂಧಿಸಿ ಮಾಜಿ ಸಚಿವ ಆರ್.ಅಶೋಕ್ (R Ashok) ನೀಡಿದ್ದ ಹೇಳಿಕೆಗೆ ವ್ಯತಿರಿಕ್ತವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಮಾತನಾಡಿದ್ದಾರೆ.

    ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಹೇಳಿಕೆ ನೀಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿಯಾಗುವ ಸಮಯ ಹತ್ತಿರವಾಗುತ್ತಿದೆ. ಭಾರತಕ್ಕೆ ಮಾತ್ರವಲ್ಲ, ವಿಶ್ವಕ್ಕೇ ನೇತೃತ್ವ ಬೇಕು ಎಂದು ವಿಶ್ವ ಬಯಸುತ್ತಿದೆ. ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ ಪ್ಲ್ಯಾನ್ ಆಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

    ಬಿಜೆಪಿಯಿಂದ ಮತದಾರ ಚೇತನ, ಮಹಾಚೇತನ ಅಭಿಯಾನದ ಹಿನ್ನೆಲೆ ಮಾತನಾಡಿದ ಕೇಂದ್ರ ಸಚಿವೆ, ಕಾಲೇಜು ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಹಿತಿ ಇರುವುದಿಲ್ಲ. ಹೊಸ ಮತದಾರರ ಸೇರ್ಪಡೆ, ವಿಳಾಸ ಬದಲಾವಣೆ, ನಿಧನರಾದವರ ಹೆಸರು ಡಿಲೀಟ್, ನಕಲಿ ಮತದಾರರನ್ನು ಗುರುತಿಸಬೇಕಾಗಿದೆ. ಈ ಕಾರ್ಯವನ್ನು ಬಿಜೆಪಿ ಕೈಗೆತ್ತಿಕೊಂಡಿದೆ ಎಂದು ತಿಳಿಸಿದ್ದಾರೆ.

    ಗಡಿ ರಾಜ್ಯಗಳಲ್ಲಿ ನಕಲಿ ಮತದಾರರು ಪತ್ತೆಯಾಗಿದ್ದಾರೆ. ಮತದಾರರ ಹೆಸರನ್ನು ಕೈಬಿಡುವ ಕೆಲಸವೂ ನಡೆದಿತ್ತು. ಜಾತಿ ನೋಡಿ, ಹೆಸರು ನೋಡಿ ಹೆಸರು ತೆಗೆಯಲಾಗಿತ್ತು. ಸರಿಯಾದ ಮತದಾರರ ಪಟ್ಟಿ ತಯಾರಿಗೆ ಚುನಾವಣಾ ಆಯೋಗ ಕೆಲಸ ಮಾಡುತ್ತಿದೆ. ಆಯೋಗಕ್ಕೆ ಪೂರಕವಾಗಿ ಬಿಜೆಪಿ ಕೆಲಸ ಮಾಡುತ್ತದೆ. 2024ರ ಚುನಾವಣೆಯಲ್ಲಿ ಯಾವುದೇ ಗೊಂದಲ ಆಗಬಾರದು. ಬಿಎಲ್‌ಎ 2 ನೇಮಕ ಸದ್ಯದಲ್ಲೇ ಮಾಡಲಿದ್ದೇವೆ. ಪಕ್ಷದಿಂದ ಗ್ರಾಮಗಳಲ್ಲಿ ಬಿಎಲ್‌ಎ 2 ನೇಮಕ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕನ್ನಡ ಶಾಲೆಗೆ ಮಲಯಾಳಂ ಶಿಕ್ಷಕಿ ನೇಮಿಸಿದ್ದ ಕೇರಳ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ – ಕನ್ನಡ ಶಿಕ್ಷಕರನ್ನೇ ನೇಮಿಸುವಂತೆ ಆದೇಶ

    ಕಾವೇರಿ ವಿವಾದದ ಬಗ್ಗೆ ಸರ್ವಪಕ್ಷ ನಿಯೋಗ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಮೊದಲು ಒಂದು ಶ್ವೇತಪತ್ರ ಹೊರಡಿಸಲಿ. ಕಾವೇರಿ ಅಣೆಕಟ್ಟಿನಲ್ಲಿ ಎಷ್ಟು ನೀರು ಇದೆ, ಕುಡಿಯುವ ನೀರಿನ ಲಭ್ಯತೆ, ಮಳೆ ಪ್ರಮಾಣದ ಬಗ್ಗೆ ಮೊದಲು ಒಂದು ಶ್ವೇತ ಪತ್ರ ಹೊರಡಿಸಲಿ. ಈ ಸಲ ಮಳೆ ಪ್ರಮಾಣ ಕಡಿಮೆ ಇದೆ. ನಮಗೆ ನೀರಿನ ಕೊರತೆ ಇದೆ. ಅದರಲ್ಲಿ ತಮಿಳುನಾಡಿಗೆ ನೀರು ಬಿಟ್ಟಿದ್ದು ಐಎನ್‌ಡಿಐಎ ನಾಯಕರನ್ನು ತೃಪ್ತಿ ಪಡಿಸಲು. ಅನಾವಶ್ಯಕವಾಗಿ ಇದರಲ್ಲಿ ರಾಜಕೀಯ ಮಾಡ್ತಿರೋದು ಮುಖ್ಯಮಂತ್ರಿಗಳು ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

    ನಿಮ್ಮ ಗ್ಯಾರಂಟಿ ಕಾರಣದಿಂದ ಯಾವ ಇಲಾಖೆಗೆ ಕೊಡಲೂ ಹಣ ಇಲ್ಲದಾಗಿದೆ. ಗ್ಯಾರಂಟಿಯನ್ನೂ ಸರಿಯಾಗಿ ಕೊಡಲು ಆಗಿಲ್ಲ. ಜನರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿದ್ದೀರಿ. ಸಣ್ಣಪುಟ್ಟ ವ್ಯಾಪಾರಿಗಳ ಬಳಿ ತಿಂಗಳಿಗಿಷ್ಟು ಅಂತ ವಸೂಲಿ ಮಾಡಲಾಗುತ್ತಿದೆ. ನನ್ನ ಬಳಿ ಒಂದು ನಿಯೋಗ ಬಂದಿತ್ತು, ಅವರು ಈ ವಿಚಾರ ಹಂಚಿಕೊಂಡರು. ಅವರೆಲ್ಲ ಕರ್ನಾಟಕ ಬಿಟ್ಟು ಹೋಗುವ ಯೋಜನೆಯಲ್ಲಿ ಇದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: KRSನಲ್ಲಿ ಕುಸಿದ ನೀರಿನ ಮಟ್ಟ – ಮಳೆ ಬಾರದಿದ್ರೆ ವರ್ಷಾಂತ್ಯಕ್ಕೆ ಕುಡಿಯುವ ನೀರಿಗೂ ತತ್ವಾರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಧಾನಿ ಮೋದಿ ಬಂದಾಗ ರೋಡ್ ಶೋ ಮಾಡುತ್ತೇವೆ: ಆರ್.ಅಶೋಕ್

    ಪ್ರಧಾನಿ ಮೋದಿ ಬಂದಾಗ ರೋಡ್ ಶೋ ಮಾಡುತ್ತೇವೆ: ಆರ್.ಅಶೋಕ್

    ಬೆಂಗಳೂರು: ಇಸ್ರೋ (ISRO) ಸಂಸ್ಥೆ ಇರುವ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಬಂದಾಗ ರೋಡ್ ಶೋ ಮಾಡುತ್ತೇವೆ ಎಂದು ಮಾಜಿ ಸಚಿವ ಆರ್.ಅಶೋಕ್ (R.Ashok) ತಿಳಿಸಿದರು.

    ಪದ್ಮನಾಭನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವ್ರು ಇನ್ನಾದರೂ ಬುದ್ಧಿ ಕಲಿಯಲಿ. ಚಂದ್ರಯಾನ-3ಗೆ (Chandrayaan-3) ಸರಿಸಾಟಿಯಾದ ಕೆಲಸವನ್ನು ಜಗತ್ತಿನಲ್ಲಿ ಬೇರೆ ಯಾರೂ ಮಾಡಿಲ್ಲ. ಈ ಸಾಧನೆಯಿಂದ ನಮಗೆಲ್ಲ ಬಹಳ ಹೆಮ್ಮೆ ಇದೆ. ಮೋದಿಯವರು ಆ.26 ರಂದು ಬೆಳಗ್ಗೆ ಬರುತ್ತಿದ್ದಾರೆ. ಹೆಚ್‌ಎಎಲ್‌ನಲ್ಲಿ ಪ್ರಧಾನಿಯವರನ್ನು ನಾವು ಸ್ವಾಗತಿಸುತ್ತೇವೆ. ಪ್ರಧಾನಿಯವರ ಸ್ವಾಗತಕ್ಕೆ ಐದಾರು ಸಾವಿರ ಜನ ಸೇರುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಬ್ರಿಕ್ಸ್‌ನ ಸದಸ್ಯರ ವಿಸ್ತರಣೆಗೆ ಭಾರತದ ಬೆಂಬಲ: ನರೇಂದ್ರ ಮೋದಿ

    ಅಲ್ಲಿ ಮೋದಿಯವರು ಎಲ್ಲರನ್ನು ಉದ್ದೇಶಿಸಿ ಮಾತಾಡಬಹುದು. ಇಸ್ರೋ ಸಂಸ್ಥೆ ಇರುವ ಪ್ರದೇಶದಲ್ಲಿ ಮೋದಿಯವರು ಬಂದಾಗ ರೋಡ್ ಶೋ ಮಾಡುತ್ತೇವೆ. ರೋಡ್ ಶೋ ನಡೆಸಲು ಕೇಂದ್ರ ಬಿಜೆಪಿಯಿಂದ ಸೂಚನೆ ಬಂದಿದೆ. ಮೋದಿಯವರನ್ನು ಅದ್ಧೂರಿಯಾಗಿ ಸ್ವಾಗತ ಮಾಡುತ್ತೇವೆ. ದಾಸರಹಳ್ಳಿ ಕ್ಷೇತ್ರದಲ್ಲಿ ಇಸ್ರೋ ಸಂಸ್ಥೆ ಇದೆ. ಅಲ್ಲಿ ಒಂದು ಕಿಮೀ ವರೆಗೆ ರೋಡ್ ಶೋ ಮಾಡುತ್ತೇವೆ ಎಂದರು.

    ರೋಡ್ ಶೋ ಬಗ್ಗೆ ದಾಸರಹಳ್ಳಿ ಶಾಸಕ ಮುನಿರಾಜು ಜೊತೆ ಚರ್ಚೆ ಮಾಡಿದ್ದೇವೆ. ಇಂದು ಸಂಜೆ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸುತ್ತೇವೆ. ಮೋದಿಯವರ ಭೇಟಿ ದಿನದ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಮುಂದಿನ ಪ್ರಾಜೆಕ್ಟ್‌ ಗಗನಯಾನಕ್ಕೂ ನಮ್ಮ ಕಂಪನಿಯಲ್ಲಿ ಬಿಡಿಭಾಗ ತಯಾರಿ: ಚಂದ್ರಯಾನ-3 ರಾಕೆಟ್‌ಗೆ ಬಿಡಿಭಾಗ ಪೂರೈಸಿದ್ದ ಬೆಳಗಾವಿ ದೀಪಕ್‌ ಮಾತು

    ಚಂದ್ರಯಾನ-3 ಯಶಸ್ಸು ಕುರಿತು ಮಾತನಾಡಿದ ಅವರು, ಸಕ್ಸಸ್ ಆಗಲು ಇಡೀ ಮನುಕುಲದ ಆಶೀರ್ವಾದ ಇತ್ತು. ಪ್ರಾರಂಭದಲ್ಲೇ ದೇವರು ನಮಗೆ ವರ ಕೊಟ್ಟಿದ್ದ. ವರ ಕೊಟ್ಟ ನಂತರವೂ ದೇವರನ್ನು ಸ್ಮರಿಸಿಕೊಳ್ಳಬೇಕು. ಅದಕ್ಕಾಗಿ ಇವತ್ತು ನಮ್ಮ ಕ್ಷೇತ್ರದ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಿದ್ದೇವೆ. ಒಂದು ಸಾವಿರಕ್ಕೂ ಹೆಚ್ಚು ಜನ ಇಸ್ರೋ ವಿಜ್ಞಾನಿಗಳು ನಮ್ಮ ಪದ್ಮನಾಭನಗರದಲ್ಲಿ ವಾಸ ಮಾಡುತ್ತಿದ್ದಾರೆ. ಇವತ್ತು ಅವರನ್ನೂ ಕರೆದು ಸನ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.

    ಮನಮೋಹನ್ ಸಿಂಗ್ ಅವರು ಚಂದ್ರಯಾನ ಪ್ರಾಜೆಕ್ಟ್‌ಗೆ ಅನುಮತಿ ಕೊಡಲಿಲ್ಲ. ಹಣಕಾಸು ಸಮಸ್ಯೆ ಅಂತ ಅನುಮತಿ ಕೊಡಲಿಲ್ಲ. ಆಗಲೇ ಅನುಮತಿಸಿದ್ದರೆ 2018-19 ರ ವೇಳೆಯಲ್ಲೇ ಚಂದ್ರಯಾನ-3 ಸಕ್ಸಸ್ ಆಗಿರುತ್ತಿತ್ತು. ಕಾಂಗ್ರೆಸ್ ಸರ್ಕಾರ ಇದ್ದಾಗ ವಿಜ್ಞಾನಿಗಳಿಗೂ ತೊಂದರೆ ಕೊಡಲಾಯಿತು. ಕೇರಳದ ಇಸ್ರೋ ವಿಜ್ಞಾನಿ ಮಾಧವನ್ ನಾಯರ್ ಅವರಿಗೆ ಕಾಂಗ್ರೆಸ್‌ನವರು ಹೇಗೆ ನಡೆಸಿಕೊಂಡರು ಅಂತ ಎಲ್ಲರಿಗೂ ಗೊತ್ತಿದೆ ಎಂದು ಚಾಟಿ ಬೀಸಿದರು. ಇದನ್ನೂ ಓದಿ: ಟೆಕ್ಕಿಗಳಿಗೆ ಮತ್ತೆ ನಿರಾಸೆ – ಎಲೆಕ್ಟ್ರಾನಿಕ್‌ ಸಿಟಿ ಮೆಟ್ರೋ ಸಂಚಾರ ವಿಳಂಬ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೋದಿ ರೋಡ್‌ಶೋ; `ಜೈ ಬಜರಂಗಿ’ ಪೋಸ್ಟರ್ ಹಿಡಿದು ಗಮನ ಸೆಳೆದ ಮುಸ್ಲಿಂ ಮಹಿಳೆ

    ಮೋದಿ ರೋಡ್‌ಶೋ; `ಜೈ ಬಜರಂಗಿ’ ಪೋಸ್ಟರ್ ಹಿಡಿದು ಗಮನ ಸೆಳೆದ ಮುಸ್ಲಿಂ ಮಹಿಳೆ

    ಬೆಂಗಳೂರು: ಕೊನೆಯದಿನದ ಚುನಾವಣಾ ಪ್ರಚಾರ (Election Campaign) ನಡೆಸಿದ ಪ್ರಧಾನಿ ಮೋದಿ ಅವರ ರೋಡ್ ಶೋ (Modi RoadShow) ಅದ್ಧೂರಿಯಾಗಿ ನೆರವೇರಿತು.

    ಬಹಿರಂಗ ಪ್ರಚಾರಕ್ಕೆ ತೆರ ಬೀಳಲು ಒಂದು ದಿನ ಬಾಕಿ ಇರುವಾಗ ಪ್ರಧಾನಿ ಮೋದಿ, ಬೆಂಗಳೂರಿನಲ್ಲಿ (Bengaluru) ಭರ್ಜರಿ ರೋಡ್ ನಡೆಸಿ ಮತಬೇಟೆ ಮಾಡಿದರು. ಭಾನುವಾರ ಬೆಳಗ್ಗೆ ತುಂತುರು ಮಳೆ ನಡುವೆಯೂ ಅಭಿಮಾನಿಗಳಲ್ಲಿ ಉತ್ಸಾಹ, ಹುರುಪಿಗೇನೂ ಕಮ್ಮಿ ಇರಲಿಲ್ಲ. ಅತ್ಯಂತ ಸುಗಮವಾಗಿ ಮೋದಿ ರೋಡ್ ಶೋ ನಡೀತು. ನ್ಯೂ ತಿಪ್ಪಸಂದ್ರದ ಕೆಂಪೇಗೌಡ ಸರ್ಕಲ್‌ನಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಮೋದಿ ನಂತ್ರ ರೋಡ್‌ಶೋ ಶುರು ಮಾಡಿದರು.

    6.5 ಕಿಲೊಮೀಟರ್ ರಸ್ತೆಯ ಉದ್ದಕ್ಕೂ ಇಕ್ಕೆಲಗಳಲ್ಲಿ ಸೇರಿದ್ದ ಅಪಾರ ಅಭಿಮಾನಿಗಳು ಮೋದಿ ಪರ ಘೋಷಣೆ ಮೊಳಗಿಸಿದ್ರು. ದಾರಿಯುದ್ದಕ್ಕೂ ಪುಷ್ಟವೃಷ್ಟಿಗೈದರು. ಇದನ್ನೂ ಓದಿ: ಕರ್ನಾಟಕವನ್ನ ಭಾರತದಿಂದ ಬೇರೆ ಮಾಡುವ ಹುನ್ನಾರ ನಡೆಸಿದೆ ಕಾಂಗ್ರೆಸ್ – ಮೋದಿ ವಾಗ್ದಾಳಿ

    ಪ್ರಧಾನಿ ಮೋದಿ ಅವರು ನಡೆಸಿದ ಕೊನೆಯದಿನದ ರೋಡ್‌ಶೋನಲ್ಲಿ ಹಲವು ವಿಶೇಷತೆಗಳು ಕಂಡುಬಂದವು. ರೋಡ್ ಶೋ ಉದ್ದಕ್ಕೂ ಕೇಸರಿ ಕಲರವ ತುಂಬಿ ತುಳುಕಿತ್ತು. ಇದೇ ವೇಳೆ ಮುಸ್ಲಿಂ ಮಹಿಳೆಯೊಬ್ಬರು (Muslim Women) `ಜೈ ಬಜರಂಗಿ.. ಜೈ ಬಿಜೆಪಿ’ ಎಂದು ಬರೆದಿದ್ದ ಪೋಸ್ಟರ್ ಹಿಡಿದು ಪ್ರಧಾನಿ ಮೋದಿ ನೋಡಲು ಬಿಸಿಲಿನಲ್ಲೂ ಕಾದು ನಿಂತಿದ್ದ ದೃಶ್ಯ ಗಮನ ಸೆಳೆಯಿತು. `ಜೈ ಬಜರಂಗಿ’ ಘೋಷವಾಕ್ಯದ ಪೋಸ್ಟರ್‌ನಲ್ಲಿ ಪ್ರಧಾನಿ ಮೋದಿ ಅವರ ಭಾವಚಿತ್ರವೂ ಇತ್ತು. ಇದನ್ನೂ ಓದಿ: ಸುಡಾನ್‌ನಿಂದ ಬಂದ ಹಕ್ಕಿಪಿಕ್ಕಿ ಜನರ ಜೊತೆ ಮೋದಿ ಸಂವಾದ

    ಅಲ್ಲದೇ, 500 ಪುರೋಹಿತರಿಂದ ಹನುಮಾನ್ ಚಾಲೀಸಾ ಪಠಣ ನಡೆಸಲಾಯಿತು. ಪುಟ್ಟ ಬಾಲಕನೊಬ್ಬ ಐ ಲವ್‌ಯೂ ಮೋದಿಜಿ ಪೋಸ್ಟರ್ ಹಿಡಿದಿದ್ದ ದೃಶ್ಯವೂ ರೋಡ್‌ಶೋ ವೇಳೆ ಗಮನ ಸೆಳೆಯಿತು.