Tag: ರೋಡ್ ರೋಲರ್

  • 5.47 ಕೋಟಿ ಮೌಲ್ಯದ 2.43 ಲಕ್ಷ ಎಣ್ಣೆ ಬಾಟ್ಲಿಗಳ ಮೇಲೆ ಹರಿಯಿತು ರೋಡ್ ರೋಲರ್!

    5.47 ಕೋಟಿ ಮೌಲ್ಯದ 2.43 ಲಕ್ಷ ಎಣ್ಣೆ ಬಾಟ್ಲಿಗಳ ಮೇಲೆ ಹರಿಯಿತು ರೋಡ್ ರೋಲರ್!

    ಅಮರಾವತಿ: 5.47 ಕೋಟಿ ಮೌಲ್ಯದ ಅಕ್ರಮ ಮದ್ಯವನ್ನು ಆಂಧ್ರಪ್ರದೇಶ(AndhraPradesh) ದ ಪೊಲೀಸರು ನಾಶಪಡಿಸಿದ್ದಾರೆ.

    2.43 ಲಕ್ಷ ಮದ್ಯ(Liquor) ದ ಬಾಟ್ಲಿಗಳ ಮೇಲೆ ಪೊಲೀಸರು ರೋಡ್ ರೋಲರ್ (Road Roler) ಹರಿಸಿದ್ದಾರೆ. ಈ ಘಟನೆ ಎನ್‍ಟಿಆರ್ ಜಿಲ್ಲೆಯ ನಂದಿಗಾಮದಲ್ಲಿ ನಡೆದಿದೆ. ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿಯೇ ಆಲ್ಕೋಹಾಲ್ ತುಂಬಿದ ಬಾಟ್ಲಿಗಳನ್ನು ನಾಶಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ತೆಲಂಗಾಣ (Telangana) ದಿಂದ ಆಂಧ್ರಪ್ರದೇಶಕ್ಕೆ ಅಕ್ರಮವಾಗಿ ಮದ್ಯದ ಬಾಟ್ಲಿಗಳನ್ನು ಸಾಗಿಸಲಾಗುತ್ತಿತ್ತು. ಈ ವಿಚಾರ ನಮ್ಮ ಗಮನಕ್ಕೆ ಬಂತು. ಹೀಗಾಗಿ ನಾವು ದಾಳಿ ಮಾಡಿ 2 ಸಾವಿರ ಲೀಟರ್ ಅಕ್ರಮ ಮದ್ಯವನ್ನು ನಾಶಪಡಿಸಿದ್ದೇವೆ. ಅಲ್ಲದೆ ಈ ಸಂಬಂಧ 226 ಕೇಸ್ ದಾಖಲಿಸಿದ್ದೇವೆ ಎಂದು ವಿಜಯವಾಡದ ಪೊಲೀಸ್ ಆಯುಕ್ತ ಕಾಂತಿ ರಾಣಾ ಟಾಟಾ ವಿವರಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಸೀಟ್ ಬೆಲ್ಟ್ ಕಡ್ಡಾಯ – ಧರಿಸದಿದ್ದರೆ 1,000ರೂ. ದಂಡ

    ನಗರದ ಹೊರವಲಯದಲ್ಲಿರುವ ಎಲ್ಲಾ ಚೆಕ್ ಪೋಸ್ಟ್ (Check Post) ಗಳ ಮೇಲೆ ಏಕಾಏಕಿ ದಾಳಿ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇತರ ರಾಜ್ಯಗಳಿಂದ ಆಂಧ್ರಪ್ರದೇಶಕ್ಕೆ ಅಕ್ರಮ ಮದ್ಯ ಸಾಗಣೆಯಾಗಿರುವ ಕುರಿತು ವರದಿಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

    ಈ ವರ್ಷದ ಆರಂಭದಲ್ಲಿ ಕರ್ನೂಲ್‍ನಿಂದ 2 ಕೋಟಿ ಮೌಲ್ಯದ 66 ಸಾವಿರ ಮದ್ಯದ ಬಾಟ್ಲಿಗಳನ್ನು ಆಂಧ್ರ ಪ್ರದೇಶದ ವಿಶೇಷ ಜಾರಿ ಬ್ಯೂರೋ (SEB) ಸೀಜ್ ಮಾಡಿತ್ತು.

    Live Tv
    [brid partner=56869869 player=32851 video=960834 autoplay=true]

  • ಹಾಫ್ ಹೆಲ್ಮೆಟ್, ಶೋಕಿ ಸೈಲನ್ಸರ್ ಮೇಲೆ ಉರುಳಿದ ರೋಡ್‌‌ ರೋಲರ್

    ಹಾಫ್ ಹೆಲ್ಮೆಟ್, ಶೋಕಿ ಸೈಲನ್ಸರ್ ಮೇಲೆ ಉರುಳಿದ ರೋಡ್‌‌ ರೋಲರ್

    ಚಿಕ್ಕಮಗಳೂರು: ಶೋಕಿ ಸೈಲನ್ಸರ್ ಹಾಗೂ ಹಾಫ್ ಹೆಲ್ಮೆಟ್‌ಗಳ ಮೇಲೆ ಪೊಲೀಸರು ರೋಡ್‌‌ ರೋಲರ್ ಹತ್ತಿಸಿರುವ ಘಟನೆ ನಗರದ ಸಂಚಾರಿ ಪೊಲೀಸ್ ಠಾಣೆ ಬಳಿ ನಡೆದಿದೆ.

    ಚಿಕ್ಕಮಗಳೂರು ನಗರದಲ್ಲಿ ಕೆಲ ಯುವಕರು ಬೈಕಿನ ಸೈಲನ್ಸರ್‌ಗಳನ್ನು ಮೋಡಿಫೈ ಮಾಡಿಸಿಕೊಂಡು ನಗರದಲ್ಲಿ ಕರ್ಕಶ ಶಬ್ದದೊಂದಿಗೆ ಓಡಾಡುತ್ತಿದ್ದರು. ಇದರಿಂದ ಸ್ಥಳೀಯರಿಗೂ ಕೂಡ ತೊಂದರೆಯಾಗುತ್ತಿತ್ತು. ಶಾಲಾ-ಕಾಲೇಜುಗಳ ಆವರಣದಲ್ಲಿ ಜೋರಾಗಿ ಎಕ್ಸ್‌ಲೇಟರ್ ರೈಸ್ ಮಡುತ್ತಾ, ವಿಚಿತ್ರ ಶಬ್ದದೊಂದಿಗೆ ಓಡಾಡುತ್ತಿದ್ದರು. ಜೊತೆಗೆ ಯುವಕರು ಬೈಕ್‍ಗಳಲ್ಲಿ ನಗರದೊಳಗೆ ವ್ಹೀಲಿಂಗ್ ಮಾಡುತ್ತಿದ್ದರು. ಇದಕ್ಕೆ ಉದಾಹರಣೆ ಎಂಬಂತೆ ನಿನ್ನೆ ಕೂಡ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಮಧ್ಯೆಯೇ ಐದಾರು ಯುವಕರು ವ್ಹೀಲಿಂಗ್ ಮಾಡುತ್ತಿದ್ದರು.

    ನಡು ರಸ್ತೆ ರೇಸಿಗೆ ಬಿದ್ದ ಯುವಕರು ವ್ಹೀಲಿಂಗ್ ಮಾಡಿಕೊಂಡು ಇತರ ಪ್ರಯಾಣಿಕರಿಗೂ ತೊಂದರೆ ಕೊಡುತ್ತಿದ್ದರು. ಇದರಿಂದ ಸ್ಥಳೀಯರು ಹಾಗೂ ವಾಹನ ಸವಾರರು ಕೂಡ ಗಾಬರಿಯಾಗಿದ್ದರು. ಯುವಕರ ಈ ಹುಚ್ಚಾಟದ ವೀಡಿಯೋವನ್ನು ಸೆರೆ ಹಿಡಿದು ಪೊಲೀಸ್ ವರಿಷ್ಠಾಧಿಕಾರಿಗೆ ಕಳುಹಿಸಿದ್ದರು. ಎಸ್ಪಿ ಸೂಚನೆ ಮೇರೆಗೆ ನಿನ್ನೆ 5 ಬೈಕ್‍ಗಳನ್ನು ಕಡೂರು ತಾಲೂಕಿನ ಸಕರಾಯಪಟ್ಟಣ ಸಮೀಪದ ಅಯ್ಯನಕೆರೆ ಬಳಿ ವಶಕ್ಕೆ ಪಡೆದಿದ್ದರು. ಇದನ್ನೂ ಓದಿ: ವಿಧಾನಸೌಧದ ಆವರಣದಲ್ಲೇ ಕೆಂಪೇಗೌಡ ಪ್ರತಿಮೆ ಸ್ಥಾಪನೆ ಆಗಲಿದೆ: ಸಿಎಂ ಘೋಷಣೆ

    ಆ ಬೈಕ್‍ಗಳಿಗೆ ಇನ್ಶೂರೆನ್ಸ್ ದಾಖಲೆಗಳು ಯಾವುದು ಇರಲಿಲ್ಲ. ಯುವಕರ ಬಳಿ ಡಿಎಲ್ ಕೂಡ ಇರಲಿಲ್ಲ. ಹಾಗಾಗಿ ಒಂದು ದಾಖಲೆಗಳಿಲ್ಲ. ಮತ್ತೊಂದು ಸೈಲನ್ಸರ್‌ಗಳನ್ನು ಮಾಡಿಫೈಡ್ ಮಾಡಿಕೊಂಡಿದ್ದ ಬೈಕ್‍ಗಳು ಹಾಗೂ ಹಾಫ್ ಹೆಲ್ಮೆಟ್‌ಗಳ ಮೇಲೆ ರೋಡ್‌‌ ರೋಲರ್ ಹತ್ತಿಸಿ ಬೈಕ್ ಸವಾರರಿಗೆ ಎಚ್ವರಿಕೆ ನೀಡಿದ್ದಾರೆ. ಹಾಫ್ ಹೆಲ್ಮೆಟ್‌ ಹಾಕುವವರಿಗೆ ಹೆಲ್ಮೆಟಿನ ಮಹತ್ವ ತಿಳಿಸಿ ಫುಲ್ ಹೆಲ್ಮೆಟ್‌ ಹಾಕುವಂತೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಉದ್ಧವ್ ಠಾಕ್ರೆ ಸರ್ಕಾರ ಬಹುತೇಕ ಪತನ – ಸುಪ್ರೀಂ ಕೋರ್ಟ್‍ನಲ್ಲಿ ಬಹುಮತ ಕಳೆದುಕೊಂಡಿದೆ ಎಂದ ಬಂಡಾಯ ಶಾಸಕರು

    Live Tv

  • ಚಕ್ರ ಕಳಚಿಬಿದ್ದ ರೋಡ್ ರೋಲರ್- ತಪ್ಪಿದ ಅನಾಹುತ

    ಚಕ್ರ ಕಳಚಿಬಿದ್ದ ರೋಡ್ ರೋಲರ್- ತಪ್ಪಿದ ಅನಾಹುತ

    ಮಡಿಕೇರಿ: ರಸ್ತೆ ಕಾಮಗಾರಿಗೆ ಹೋಗುತ್ತಿದ್ದ ರೋಡ್ ರೋಲರ್ ಚಕ್ರ ಬಿಚ್ಚಿದ್ದಕ್ಕೆ ಕಳಚಿಬಿದ್ದಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ಹಾಗೂ ಮೂರ್ನಾಡು ಮಧ್ಯೆ ನಡೆದಿದೆ.

    ರಸ್ತೆ ಕೆಲಸಕ್ಕೆಂದು ಹೋಗುತ್ತಿದ್ದಾಗ ರೋಲರ್ ನ ಎಡಭಾಗದ ಚಕ್ರ ಕಳಚಿ ರಸ್ತೆ ಪಕ್ಕದ ಬಾಳೆ ತೋಟಕ್ಕೆ ಹೋಗಿ ಬಿದ್ದಿದೆ. ಸ್ವಲ್ಪ ದೂರದಲ್ಲೇ ಆರ್‍ಟಿಓ ಅಧಿಕಾರಿಗಳು ವಾಹನಗಳ ತಪಾಸಣೆ ನಡೆಸುತಿದ್ದರಿಂದ ರೋಡ್ ರೋಲರ್ ಎದುರಿಗೆ ಯಾವುದೇ ವಾಹನಗಳು ಬಂದಿಲ್ಲ. ಇದರಿಂದಾಗಿ ಸಂಭವಿಸಬಹುದಾಗಿದ್ದ ಬಾರಿ ಅನಾಹುತ ತಪ್ಪಿದೆ.

    ಚಕ್ರ ಕಳಚಿ ಹೋಗಿದ್ದರಿಂದ ರೋಲರ್ ಮಿಷನ್ ರಸ್ತೆ ಮಧ್ಯದಲ್ಲೇ ಬಿದ್ದಿದೆ. ಬಳಿಕ ಜೆಸಿಬಿಯ ಸಹಾಯದಿಂದ ರೋಲರ್ ಮಿಷನ್ ಅನ್ನು ರಸ್ತೆಯಿಂದ ತೆರವುಗೊಳಿಸಿದ ವಿರಾಜಪೇಟೆಯ ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

  • ರೋಡ್ ರೋಲರ್ ಮೇಲೆ ಹರಿದು ವ್ಯಕ್ತಿ ಸ್ಥಳದಲ್ಲಿಯೇ ಸಾವು

    ರೋಡ್ ರೋಲರ್ ಮೇಲೆ ಹರಿದು ವ್ಯಕ್ತಿ ಸ್ಥಳದಲ್ಲಿಯೇ ಸಾವು

    ಕೊಪ್ಪಳ: ರಸ್ತೆ ಕಾಮಗಾರಿಗಳಿಗೆ ಬಳಕೆಯಾಗುವ ರೋಡ್ ರೋಲರ್ ಹರಿದು ಚಾಲಕನೋರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಕೊಪ್ಪಳದ ಗಂಗಾವತಿ ನಗರದ ಹೊರ ವಲಯ ಸಂಗಪುರ ರಸ್ತೆಯಲ್ಲಿರುವ ಆಂಜನೇಯ ಕಣಿವೆ ಬಳಿ ನಡೆದಿದೆ.

    ಮೃತ ವ್ಯಕ್ತಿಯನ್ನು ನಗರದ ನೀಲಕಂಠೇಶ್ವರ ವೃತ್ತದ ಪ್ರದೇಶದಲ್ಲಿ ವಾಸಿಸುವ ಸುರೇಶ್ ಐಲಿ (35) ಎಂದು ಗುರುತಿಸಲಾಗಿದೆ. ಸಂಗಪುರದಿಂದ ಗಂಗಾವತಿಗೆ ಬರುವಾಗ ಕಣಿವೆ ಆಂಜನೇಯ ದೇಗುಲದ ಬಳಿಯ ಇಳಿಜಾರು ಪ್ರದೇಶದಲ್ಲಿ ಸುರೇಶ್ ಮೊಬೈಲ್ ಅಲ್ಲಿ ಮಾತನಾಡಿಕೊಂಡು ವಾಹನವನ್ನು ನ್ಯೂಟ್ರಲ್ ಮಾಡಿದ್ದಾರೆ. ಈ ವೇಳೆ ವಾಹನದ ನಿಯಂತ್ರಣ ಸಿಗದ ಹಿನ್ನೆಲೆ ರಸ್ತೆ ಪಕ್ಕದ ಗದ್ದೆಗೆ ನುಗ್ಗಿದೆ. ಆಗ ಗಾಬರಿಗೊಂಡ ಸುರೇಶ್ ಬೀಳುವ ಆತಂಕದಿಂದ ವಾಹನದಿಂದ ಜಿಗಿದಿದ್ದಾರೆ.

    ಅವರು ಜಿಗಿದ ಕೂಡಲೇ ರೋಲರ್ ಅವರ ಹರಿದು ಈ ಘಟನೆ ಸಂಭವಿಸಿದೆ. ಈ ಬಗ್ಗೆ ಗಂಗಾವತಿ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕುದುರೆ ಬದಲು ರೋಡ್‌ ರೋಲರ್‌ನಲ್ಲಿ  ಮದ್ವೆಗೆ ಎಂಟ್ರಿ ಕೊಟ್ಟ ವರ: ವಿಡಿಯೋ ವೈರಲ್

    ಕುದುರೆ ಬದಲು ರೋಡ್‌ ರೋಲರ್‌ನಲ್ಲಿ ಮದ್ವೆಗೆ ಎಂಟ್ರಿ ಕೊಟ್ಟ ವರ: ವಿಡಿಯೋ ವೈರಲ್

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯಲ್ಲಿ ವರನೊಬ್ಬ ತನ್ನ ಮದುವೆಗೆ ಕುದುರೆ ಬದಲು ರೋಡ್‌ ರೋಲರ್‌ನಲ್ಲಿ ಎಂಟ್ರಿ ಕೊಟ್ಟು ಸುದ್ದಿಯಾಗಿದ್ದಾನೆ.

    ವರ ಅರ್ಕಾ ಪತ್ರಾ ಅಕ್ಕಸಾಲಿಗನ ಮಗನಾಗಿದ್ದು, ತನ್ನ ಮದುವೆಯಲ್ಲಿ ರೋಡ್‌ ರೋಲರ್‌ನಲ್ಲಿ ಎಂಟ್ರಿ ನೀಡಿದ್ದಾನೆ. ಅರ್ಕಾ ಜಿಲ್ಲೆಯ ಕೃಷ್ಣನಗರದ ಉಖಿಲ್ಪಾರದಲ್ಲಿದ್ದ ಮದುವೆ ಮನೆಗೆ ಅಲಂಕರಿಸಿದ ರೋಡ್ ರೋಲರ್ ನಿಂದ ಹೊರಗೆ ಬರುವಾಗ ಆತನ ಸ್ವಾಗತಕ್ಕೆಂದು ನಿಂತಿದ್ದ ಅತಿಥಿಗಳು ವರನನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ.

    ನಾನು ನನ್ನ ಮದುವೆಯನ್ನು ನೆನಪಿಗಾಗಿ ಹಾಗೂ ವಿಭಿನ್ನವಾಗಿ ಮಾಡಬೇಕು ಎಂದು ನಿರ್ಧರಿಸಿದೆ. ನಾನು ವಿಂಟೇಜ್ ಕಾರಿನಲ್ಲೇ ಮದುವೆಗೆ ಎಂಟ್ರಿ ಕೊಡಬಹುದಿತ್ತು. ಆದರೆ ಇದು ಹೊಸದಾಗಿ ಇರುವುದಿಲ್ಲ. ಈ ಹಿಂದೆ ಯಾರೋ ಜೆಸಿಬಿಯಲ್ಲಿ ಮದುವೆಗೆ ಎಂಟ್ರಿ ನೀಡಿದ್ದರು ಎಂದು ಕೇಳಿದೆ. ಆದರೆ ರೋಡ್‌ ರೋಲರ್‌ನಲ್ಲಿ ಇದುವರೆಗೂ ಯಾರೊಬ್ಬ ವರ ಮದುವೆಗೆ ಆಗಮಿಸಿಲ್ಲ ಎಂದು ತಿಳಿಯಿತು. ಹಾಗಾಗಿ ನಾನು ರೋಡ್‌ ರೋಲರ್‌ನಲ್ಲಿ ಎಂಟ್ರಿ ಕೊಡಲು ನಿರ್ಧರಿಸಿದೆ ಎಂದು ಅರ್ಕಾ ತಿಳಿಸಿದ್ದಾನೆ. ಇದನ್ನು ಓದಿ: ಮದುವೆಯಲ್ಲೂ ಕೆಲಸದ ಪ್ರೀತಿ ಮೆರೆದ ವರ- ಜೆಸಿಬಿಯಲ್ಲೇ ದಿಬ್ಬಣ!

    ಅರ್ಕಾ ತನ್ನ ಮದುವೆಗೆ ಕುದುರೆ ಬದಲು ರೋಡ್‌ ರೋಲರ್‌ನಲ್ಲಿ ಆಗಮಿಸುತ್ತಿರುವುದು ಆತನ ಪತ್ನಿ ಆರುಂಧತಿ ತರಫ್‍ದಾರ್ ಗೆ ಯಾವುದೇ ಅಭ್ಯಂತರ ಇರಲಿಲ್ಲ. ಮದುವೆ ಮೊದಲೇ ಇಬ್ಬರು ಈ ವಿಚಾರದ ಬಗ್ಗೆ ಮಾತನಾಡಿಕೊಂಡಿದ್ದರು.

    ಅರ್ಕಾ ಮದುವೆಯಲ್ಲಿ ಯಾವುದೇ ಡಿಜೆ ಇರಲಿಲ್ಲ. ಡಿಜೆ ಬದಲು ವ್ಯಕ್ತಿಯೊಬ್ಬ ಮದುವೆ ಮನೆಯಲ್ಲಿ ಕೊಳಲು ನುಡಿಸುತ್ತಿದ್ದ. ಕೊಳಲು ನುಡಿಸಿದರೆ ಮದುವೆ ಬಂದಿರುವ ಅತಿಥಿಗಳಿಗೆ ಇಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ಡಿಜಿ ಆಯೋಜಿಸಿರಲಿಲ್ಲ ಎಂದು ಅರ್ಕಾ ಹೇಳಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ರೋಡ್ ರೋಲರ್ ಕದ್ದು ರಸ್ತೆ ಬದಿಯಲ್ಲೇ ಬಿಟ್ಟು ಹೋದ ಕಳ್ಳರು!

    ರೋಡ್ ರೋಲರ್ ಕದ್ದು ರಸ್ತೆ ಬದಿಯಲ್ಲೇ ಬಿಟ್ಟು ಹೋದ ಕಳ್ಳರು!

    ಬೆಂಗಳೂರು: ಹೊತ್ತುಕೊಂಡು ಹೋಗಲು ಸಾಧ್ಯವಾಗುವ ವಸ್ತುಗಳನ್ನೇ ಕಳ್ಳರು ಎಗರಿಸುವುದು ಸಾಮಾನ್ಯ. ಆದರೆ ಸಿಲಿಕಾನ್ ಸಿಟಿಯಲ್ಲಿ ಕೆಲ ಕಳ್ಳರು ರೋಡ್ ರೋಲರ್ ಹಾಗೂ ಟಾರ್ ಸಿಂಪಡಿಸುವ ವಾಹನ ಕದ್ದು, ಸಾಗಿಸಲು ಸಾಧ್ಯವಾಗದೇ ನಡು ರಸ್ತೆಯಲ್ಲಿಯೇ ಬಿಟ್ಟು ಹೋಗಿದ್ದಾರೆ.

    ರಸ್ತೆ ಕಾಮಗಾರಿ ಗುತ್ತಿಗೆದಾರ ಜ್ಯೋತಿಶ್ ಎಂಬವರಿಗೆ ಸೇರಿದ್ದ ವಾಹನಗಳನ್ನು ಕಳ್ಳರು ಎಗರಿಸಿದ್ದರು. ಜ್ಯೋತಿಶ್ ಅವರ ಜೊತೆಗೆ ಕೆಲಸ ಮಾಡುತ್ತಿದ್ದ ಕೆಲ ದುಷ್ಕರ್ಮಿಗಳೇ ಈ ಕೃತ್ಯ ಎಸಗಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ.

    ಟಿಂಬರ್‍ರ್ಯಾರ್ಡ್ ಲೇಔಟ್‍ನಲ್ಲಿ ಗುತ್ತಿಗೆದಾರ ಜ್ಯೋತಿಶ್ ಅವರು ಎರಡೂ ವಾಹನಗಳನ್ನು ನಿಲ್ಲಿಸಿದ್ದರು. ರಾತ್ರಿ ವೇಳೆ ಅಲ್ಲಿಗೆ ಬಂದಿದ್ದ ಕೆಲ ದುಷ್ಕರ್ಮಿಗಳು ವಾಹನಗಳನ್ನು ಚಾಲನೆ ಮಾಡಿಕೊಂಡು ಹೋಗಿದ್ದಾರೆ. ಆದರೆ ವೇಗವಾಗಿ ಚಾಲನೆ ಮಾಡಲಾಗದೇ ರಸ್ತೆ ಬದಿಯಲ್ಲಿಯೇ ರೋಡ್ ರೋಲರ್ ಹಾಗೂ ಟಾರ್ ಸಿಂಪಡಿಸುವ ವಾಹನ ನಿಲ್ಲಿಸಿ, ಅಲ್ಲಿಂದ ಪರಾರಿಯಾಗಿದ್ದಾರೆ.

    ಲಕ್ಷಾಂತರ ರೂ. ಮೌಲ್ಯದ ರೋಡ್ ರೋಲರ್ ಹಾಗೂ 17 ಲಕ್ಷ ರೂ. ಬೆಲೆಬಾಳುವ ಟಾರ್ ಸಿಂಪಡಿಸುವ ವಾಹನಗಳು ಪುನಃ ಮಾಲೀಕ ಜ್ಯೋತಿಶ್ ಅವರ ಕೈ ಸೇರಿವೆ. ಈ ಕುರಿತು ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಲೇಜಿಗೆ ತೆರಳ್ತಿದ್ದಾಗ ಸ್ಕೂಟಿಗೆ ರೋಡ್ ರೋಲರ್ ಡಿಕ್ಕಿ- ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು

    ಕಾಲೇಜಿಗೆ ತೆರಳ್ತಿದ್ದಾಗ ಸ್ಕೂಟಿಗೆ ರೋಡ್ ರೋಲರ್ ಡಿಕ್ಕಿ- ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು

    ಬೆಂಗಳೂರು: ವಿದ್ಯಾರ್ಥಿನಿ ಮನೆಯಿಂದ ಕಾಲೇಜಿಗೆ ತೆರಳುತ್ತಿದ್ದಾಗ ಸ್ಕೂಟಿಗೆ ರೋಡ್ ರೋಲರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಕಾಲೇಜು ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಬೆಂಗಳೂರು- ಹೊಸೂರು ಮುಖ್ಯ ರಸ್ತೆಯ ಬೊಮ್ಮಸಂದ್ರ ಸರ್ವಿಸ್ ರೋಡ್ ಬಳಿ ನಡೆದಿದೆ.

    ಯುವತಿ ಬೊಮ್ಮಸಂದ್ರ ಮೂಲದ ಲಯ(19) ಎಂದು ತಿಳಿದು ಬಂದಿದೆ. ಲಯ ಎಂದಿನಂತೆ ಮುಂಜಾನೆ ಮನೆಯಿಂದ ಸ್ಕೂಟಿಯಲ್ಲಿ ಬೊಮ್ಮಸಂದ್ರ ಸರ್ವಿಸ್ ರೋಡ್ ಮಾರ್ಗವಾಗಿ ಕಾಲೇಜಿಗೆ ತೆರಳುತ್ತಿದ್ದಾಗ ಎದುರು ಕಡೆಯಿಂದ ಬರುತ್ತಿದ್ದ ರೋಡ್ ರೋಲರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಲಯ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

    ಲಯ ಹುಸ್ಕೂರು ಬಳಿಯ ಎಸ್‍ಎಫ್‍ಎಸ್ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಸದ್ಯ ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರೋಡ್ ರೋಲರ್ ಸಮೇತ ಕುಸಿದು ಬಿದ್ದ ಸೇತುವೆ!

    ರೋಡ್ ರೋಲರ್ ಸಮೇತ ಕುಸಿದು ಬಿದ್ದ ಸೇತುವೆ!

    ಬೆಳಗಾವಿ: ರೋಡ್ ರೋಲರ್ ಸಮೇತ ಸೇತುವೆ ಕುಸಿದು ಬಿದ್ದಿರುವ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ಬಳಿ ನಡೆದಿದೆ.

    ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ ನೂತನವಾಗಿ ನಿರ್ಮಾಣವಾಗುತ್ತಿರುವ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿ ಮೇಲೆ ಈ ದುರ್ಘಟನೆ ಸಂಭವಿಸಿದೆ. 3 ವರ್ಷಗಳ ಹಿಂದೆಯಷ್ಟೇ ಈ ಸೇತುವೆಯನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಾಣ ಮಾಡಲಾಗಿತ್ತು. ಕಳಪೆ ಕಾಮಗಾರಿಯ ಕಾರಣ ಸೇತುವೆ ಕುಸಿದು ಬಿದ್ದು ಭಾರಿ ಅನಾಹುತ ತಪ್ಪಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಈಗ ನೂತನ ರಸ್ತೆ ಮಾಡುತ್ತಿರುವ ಅಧಿಕಾರಿಗಳು ಮಾತ್ರ ಹಳೇ ಸೇತುವೆಯ ಗುಣಮಟ್ಟ ಪರೀಕ್ಷೆ ಮಾಡುವಾಗ ಈ ಘಟನೆ ನಡೆದಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಮೇಲೆ ಬೆರಳು ತೋರಿಸುತ್ತಿದ್ದಾರೆ. ಈ ಸೇತುವೆ ಕೇವಲ ಮೂರೇ ವರ್ಷದಲ್ಲಿ ಮುರಿದು ಬಿದ್ದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

    ಒಂದು ವೇಳೆ ಘಟನೆಯಿಂದ ಯಾವುದಾದರೂ ಪ್ರಾಣಾಪಾಯ ಸಂಭವಿಸಿದ್ದರೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದು, ತನಿಖೆಗೆ ಒತ್ತಾಯಿಸುತ್ತಿದ್ದಾರೆ.