Tag: ರೋಡ್ ಡಿವೈಡರ್

  • ಡಿವೈಡರ್​​ಗೆ ಕಾರ್ ಡಿಕ್ಕಿ- ಸ್ಥಳದಲ್ಲಿ ಇಬ್ಬರ ಸಾವು

    ಡಿವೈಡರ್​​ಗೆ ಕಾರ್ ಡಿಕ್ಕಿ- ಸ್ಥಳದಲ್ಲಿ ಇಬ್ಬರ ಸಾವು

    ದಾವಣಗೆರೆ: ರೋಡ್ ಡಿವೈಡರ್ ಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಜಾಕ್‍ವೆಲ್ ಬಳಿ ನಡೆದಿದೆ.

    ಗದಗ ಮೂಲದ ಚಾಲಕ ವೀರೇಶ್ (35) ಹಾಗೂ ಬಾಬುಗೌಡ (65) ಮೃತ ದುರ್ದೈವಿಗಳು. ಈ ಅವಘಡದಲ್ಲಿ ಶ್ರೀದೇವಿ, ಇಮ್ರಾ ಬಾಯಿ ಹಾಗೂ ನಾಲ್ಕು ವರ್ಷದ ಬಾಲಕ ರಿಷಬ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಬಾಬುಗೌಡ ಅವರು ಕಾರ್ಯಕ್ರಮದ ನಿಮಿತ್ತ ಕುಟುಂಬದವರ ಜೊತೆಗೆ ಬೆಂಗಳೂರಿಗೆ ಬಂದಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಇಂದು ಗದಗಗೆ ಮರಳುತ್ತಿದ್ದರು. ಈ ವೇಳೆ ಹರಿಹರ ತಾಲೂಕಿನ ರಾಜನಹಳ್ಳಿ ಜಾಕ್‍ವೆಲ್ ಬಳಿ ಚಾಲಕ ವೀರೇಶ್ ನಿಯಂತ್ರಣ ತಪ್ಪಿದ ಪರಿಣಾಮ ಕಾರ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಚಾಲಕ ವೀರೇಶ್ ಹಾಗೂ ಅವರ ಪಕ್ಕದಲ್ಲಿ ಕುಳಿತ್ತಿದ್ದ ಬಾಬುಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂದಿನ ಸೀಟ್‍ನಲ್ಲಿ ಕುಳಿತಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಘಟನಾ ಸ್ಥಳದಲ್ಲಿದ್ದ ಕೆಲವರು ಆಂಬ್ಯುಲೆನ್ಸ್ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಗದಗನಿಂದ ಮೃತರ ಕುಟುಂಬಸ್ಥರು ದಾವಣಗೆರೆ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಈ ಸಂಬಂಧ ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಬೊಲೆರೋ ಪಲ್ಟಿ – ಓರ್ವ ಸಾವು

    ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಬೊಲೆರೋ ಪಲ್ಟಿ – ಓರ್ವ ಸಾವು

    ಬಾಗಲಕೋಟೆ: ರಸ್ತೆ ವಿಭಜಕಕ್ಕೆ ಬೊಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜಿಲ್ಲೆಯ ಹುನಗುಂದ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ವಿಜಯಪುರ ಜಿಲ್ಲೆಯ ಡವಳಗಿ ನಿವಾಸಿ ನಿಂಗಪ್ಪ ಬೀರಗೊಂಡ (48) ಮೃತಪಟ್ಟ ವ್ಯಕ್ತಿ. ಇಳಕಲ್ ಪಟ್ಟಣದಿಂದ ವಿಜಯಪುರಕ್ಕೆ ಗ್ರಾನೈಟ್ ಸಾಗಿಸುತ್ತಿದ್ದ ವೇಳೆ ಘಟನೆ ಸಂಭವಿಸಿದೆ.

    ಚಾಲಕನ ನಿಯಂತ್ರ ತಪ್ಪಿದ ಜೀಪ್, ರೋಡ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಪಲ್ಟಿ ಹೊಡೆದಿದ್ದು, ಸ್ಥಳದಲ್ಲಿಯೇ ನಿಂಗಪ್ಪ ಅವರು ಮೃತಪಟ್ಟಿದ್ದಾರೆ. ಚಾಲಕ ರವಿ ಹಾಗೂ ಸೇರಿದಂತೆ ಮತ್ತೊಬ್ಬರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಹುನಗುಂದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೊಲೆರೋದಲ್ಲಿದ್ದ ಮೂವರು ವಿಜಯಪುರ ಜಿಲ್ಲೆಯ ಡವಳಗಿ ನಿವಾಸಿಗಳಾಗಿದ್ದಾರೆ. ಘಟನಾ ಸ್ಥಳಕ್ಕೆ ಹುನಗುಂದ ಠಾಣೆ ಪೊಲೀಸರು ಭೇಟಿ ನೀಡಿ ಪರಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.