Tag: ರೋಡ್

  • ಬೆಂಗಳೂರಿನ ರಸ್ತೆಗಳು ಗುಂಡಿ ಮುಕ್ತ ಆಗದಿದ್ರೆ ಇಂಜಿನಿಯರ್‌ಗಳ ಸಂಬಳ ಕಟ್: BBMP ಕಮಿಷನರ್ ವಾರ್ನಿಂಗ್

    ಬೆಂಗಳೂರಿನ ರಸ್ತೆಗಳು ಗುಂಡಿ ಮುಕ್ತ ಆಗದಿದ್ರೆ ಇಂಜಿನಿಯರ್‌ಗಳ ಸಂಬಳ ಕಟ್: BBMP ಕಮಿಷನರ್ ವಾರ್ನಿಂಗ್

    ಬೆಂಗಳೂರು: ಬಿಬಿಎಂಪಿಗೆ (BBMP) ರಸ್ತೆಗುಂಡಿಗಳನ್ನು (Road) ಇಷ್ಟು ದಿನಗಳಲ್ಲಿ ಮುಚ್ಚುತ್ತೇವೆ ಎನ್ನುವ ಡೆಡ್‍ಲೈನ್ ಕಾಮನ್ ಆಗಿದೆ. ಇದೀಗ ಕಮೀಷನರ್ ಹೊಸವರ್ಷಕ್ಕೆ (New Year) ಮತ್ತೊಂದು ಹೊಸ ಡೆಡ್‍ಲೈನ್ ನೀಡಿದ್ದಾರೆ. ಒಂದು ವೇಳೆ ಅಧಿಕಾರಿಗಳು ಗುಂಡಿ (Potholes) ಮುಚ್ಚಿಲ್ಲ ಅಂದ್ರೇ ಸಂಬಳ (Salary)  ಕಟ್ ಮಾಡುವ ಶಿಕ್ಷೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

    BBMP

    ಬೆಂಗಳೂರು (Bengaluru) ನಗರದಲ್ಲಿರುವ ಗುಂಡಿ ಮುಚ್ತೀವಿ ಮುಚ್ತೀವಿ ಅಂತ ಬಿಬಿಎಂಪಿ ಹೇಳಿದ್ದೆ ಬಂತು. ಜನರ ತೆರಿಗೆ ದುಡ್ಡು ನೀರಲ್ಲಿ ಹೋಮ ಮಾಡಿದ್ದೆ ಬಂತು. ಗುಂಡಿಗಳಿಗೆ ಮಾತ್ರ ಕಡಿವಾಣವೇ ಬೀಳ್ತಿಲ್ಲ. ಈ ಮಧ್ಯೆ ಕಮಿಷನರ್ ಹೊಸ ವರ್ಷಕ್ಕೆ ನೂತನ ಡೆಡ್‍ಲೈನ್ ಕೊಟ್ಟಿದ್ದಾರೆ. ಡಿ.31ರ ಒಳಗೆ ಎಲ್ಲಾ ಗುಂಡಿ ಮುಚ್ಚುವಂತೆ ಸೂಚಿಸಿದ್ದಾರೆ. ಹೊಸ ವರ್ಷಕ್ಕೆ ರಾಜಧಾನಿಯ ಪ್ರಮುಖ ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಮೂಲಕ ಜನರಿಗೆ ಹೊಸ ವರ್ಷದ ಮೊದಲ ಗಿಫ್ಟ್ ನೀಡೋಕೆ ಮುಂದಾಗಿದ್ದಾರೆ. ಇದನ್ನೂ ಓದಿ: 5 ಲಕ್ಷದ ವಾಚ್‌ ವಿವಾದ: ದೇಶಭಕ್ತಿಯ ಟ್ವಿಸ್ಟ್‌ ನೀಡಿ ಸವಾಲೆಸೆದ ಅಣ್ಣಾಮಲೈ

    ಗುಂಡಿ ಗಂಡಾಂತರಕ್ಕೆ ಮೂಲ ಕಾರಣವೇ BWSSB, BESCOM ಎಂದು ಬಿಬಿಎಂಪಿ ದೂರುತ್ತಿದೆ. ನಾವೆಲ್ಲಾ ಕಾಮಗಾರಿ ಮಾಡ್ತಾ ಕಂಪ್ಲೀಟ್ ಮಾಡ್ತಿದ್ರೆ, ಈ ಎರಡೂ ಸಂಸ್ಥೆಗಳು ಕಾಮಗಾರಿ ನೆಪದಲ್ಲಿ ರಸ್ತೆಗಳನ್ನು ಅಗೆದು ಹಾಳು ಮಾಡುತ್ತಿದ್ದಾರೆ. ಈ ಸಂಸ್ಥೆಗಳಿಗೆ ನಮ್ಮ ಬಿಬಿಎಂಪಿ ಇಂಜಿಯರ್‌ಗಳೇ ಅನುಮತಿ ಕೊಡಬೇಕು. ಕೊಟ್ಟ ಬಳಿಕ ಕಾಮಗಾರಿ ಮುಗಿದ ಮೇಲೆ ನಮ್ಮ ಅಧಿಕಾರಿಗಳೇ ರಸ್ತೆಗಳನ್ನು ಮುಂದೆ ನಿಂತು, ಆ ಸಂಸ್ಥೆಗಳಿಂದಲೇ ಅಗೆದ ರಸ್ತೆಗಳನ್ನು ದುರಸ್ತಿ ಮಾಡಿಸಬೇಕು. ಹಾಗೇನಾದ್ರು ಮಾಡಲಿಲ್ಲ ಅಂದ್ರೆ ನಮ್ಮ ವಾರ್ಡ್ ಹಾಗೂ ಮೇಜರ್ ರೋಡ್ ಇಂಜಿನಿಯರ್‌ಗಳ ಸಂಬಳವನ್ನು ಕಡಿತ ಮಾಡಿ ರಸ್ತೆ ದುರಸ್ತಿ ಮಾಡ್ತೇವೆ ಎಂದು ಕಮಿಷನರ್ ತುಷಾರ್ ಗಿರಿನಾಥ್ (Tushar Girinath) ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿಗೆ ಅವರ ಭಾಷೆಯಲ್ಲೇ ಉತ್ತರಿಸಿ: NCP ನಾಯಕ

    ಆಗುವ ಕೆಲಸವನ್ನು ಮಾಡೋದು ಬಿಟ್ಟು, ಕಮಿಷನರ್ ಬರಿ ಶಿಸ್ತು ಕ್ರಮ, ಸಂಬಳ ಕಡಿತ, ಡೆಡ್‍ಲೈನ್ ಅಂತ ಹೇಳಿಕೆ ಕೊಡ್ತಾರೆ. ಪಾಲಿಕೆ ಇಂಜಿನಿಯರ್‌ಗಳು ಕಮಿಷನರ್ ಅವರ ಮಾತನ್ನೇ ಕೇಳೋಲ್ಲ. ಇವರೇನಾದ್ರೂ ಇಂಜಿನಿಯರ್‌ಗಳ ಸಂಬಳ ಕಡಿತ ಮಾಡಿದ್ರೆ, ಅವರೆಲ್ಲಾ ಸೇರಿ ಇವರ ವರ್ಗಾವಣೆಯನ್ನೇ ಮಾಡಿಸಿ ಬಿಡ್ತಾರೆ. ಇದು ಬಿಬಿಎಂಪಿಯಲ್ಲಿರೋ ವ್ಯವಸ್ಥೆ ಎಂದು ಸಾಮಾಜಿಕ ಹೋರಾಟಗಾರರು ಆರೋಪಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರೋಡ್, ಪಾರ್ಕ್, ಮೆಟ್ರೋ, ಬಸ್ ನಿಲ್ದಾಣಕ್ಕೆ ಪುನೀತ್ ಹೆಸರು?

    ರೋಡ್, ಪಾರ್ಕ್, ಮೆಟ್ರೋ, ಬಸ್ ನಿಲ್ದಾಣಕ್ಕೆ ಪುನೀತ್ ಹೆಸರು?

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ದೊಡ್ಮನೆ ಹುಡುಗ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನದ ಬಳಿಕ ಅವರ ಹೆಸರನ್ನು ರೋಡ್, ಪಾರ್ಕ್, ಮೆಟ್ರೋ ಹಾಗೂ ಬಸ್ ನಿಲ್ದಾಣಗಳಿಗೆ ಇಡುವ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

    ನಗರದ ಪ್ರಮುಖ ರಸ್ತೆ, ಪಾರ್ಕ್, ಮೆಟ್ರೋ ಹಾಗೂ ಬಸ್ ನಿಲ್ದಾಣಗಳಿಗೆ ಪವರ್ ಸ್ಟಾರ್ ಹೆಸರಿಡಲು ಬೆಂಗಳೂರು ಮಹಾನನಗರ ಪಾಲಿಕೆ ವತಿಯಿಂದ ಅಭಿಪ್ರಾಯ ವ್ಯಕ್ತವಾಗಿದೆ. ಪುನೀತ್ ಅಭಿಮಾನಿಗಳ ಒತ್ತಾಸೆಯ ಬೆನ್ನಲ್ಲೇ ಬಿಬಿಎಂಪಿ ಈ ನಿರ್ಧಾರ ಕೈಗೊಂಡಿದ್ದು, ನಗರದ ಮುಖ್ಯ ರಸ್ತೆಯೊಂದಕ್ಕೆ ಪುನೀತ್ ಹೆಸರಿಡಲು ಚರ್ಚೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಪುನೀತ್ ಸಾವಿಗೂ 46 ಸಂಖ್ಯೆಗೂ ಸಂಬಂಧವೇನು?

    ಈಗಾಗಲೇ ರಾಜಾಜಿನಗರ ಮುಖ್ಯ ರಸ್ತೆಗೆ ಪುನೀತ್ ಹೆಸರಿಡಲಾಗಿದ್ದು, ಪಕ್ಕದ ವೆಸ್ಟ್ ಆಫ್ ಕಾರ್ಡ್ ರೋಡ್‍ಗೆ ಕೂಡ ಪುನೀತ್ ನಾಮಕರಣ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಈ ಬಗ್ಗೆ ಮೊದಲು ಪುನೀತ್ ರಾಜ್‍ಕುಮಾರ್ ಅವರ ಕುಟುಂಬಸ್ಥರೊಂದಿಗೆ ಚರ್ಚಿಸಿ, ನಂತರ ಸರ್ಕಾರದ ಮುಂದೆ ಈ ವಿಚಾರ ಪ್ರಸ್ತಾಪಿಸಲಾಗುತ್ತದೆ. ಇದನ್ನೂ ಓದಿ: ಪುನೀತ್ ಸಾವಿನ ಬೆನ್ನಲ್ಲೇ ಹೆಚ್ಚಾಯ್ತು ಇಸಿಜಿ, ಹೃದಯಸಂಬಂಧಿ ಟೆಸ್ಟ್‌ಗಳು

    ನಗರದ ಪ್ರತಿಷ್ಠಿತ ಪಾರ್ಕ್, ಆಟದ ಮೈದಾನ, ಮೆಟ್ರೋ ಹಾಗೂ ಬಸ್ ನಿಲ್ದಾಣಕ್ಕೂ ಅಪ್ಪು ಹೆಸರಿಡಲು ಚಿಂತನೆ ನಡೆಸಲಾಗಿದೆ. ಆದರೆ ಈ ವಿಚಾರವಾಗಿ ಅಂತಿಮವಾಗಿ ಸರ್ಕಾರ ನಿರ್ಧರಿಸಬೇಕಾಗಿದೆ.

  • ಅಪಘಾತ ತಪ್ಪಿಸಲು ಹೋಗಿ ಕೆರೆಗೆ ಉರುಳಿ ಬಿದ್ದ ಬಸ್

    ಅಪಘಾತ ತಪ್ಪಿಸಲು ಹೋಗಿ ಕೆರೆಗೆ ಉರುಳಿ ಬಿದ್ದ ಬಸ್

    ಶಿವಮೊಗ್ಗ:  ದ್ವಿಚಕ್ರ ವಾಹನಕ್ಕೆ ಡಿಕ್ಕಿ  ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಕೆರೆಗೆ ಉರುಳಿ ಬಿದ್ದಿದ್ದು, ಸ್ಕೂಟಿ ಸವಾರನೊಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಕಾಸ್ಪಾಡಿಯಲ್ಲಿ ನಡೆದಿದೆ.

    ದೀಪು ಮೃತನಾಗಿದ್ದಾನೆ. ಶಿವಮೊಗ್ಗ ಗಾಂಧಿ ಬಜಾರಿನ ನಿವಾಸಿಯಾಗಿದ್ದಾನೆ. ಇಂದು ಮುಂಜಾನೆ ಶಿವಮೊಗ್ಗ ಘಟಕಕ್ಕೆ ಸೇರಿದ ಬಸ್ ಸಾಗರದಿಂದ ವಾಪಸ್ ಶಿವಮೊಗ್ಗಕ್ಕೆ ಬರುತ್ತಿತ್ತು. ಶಿವಮೊಗ್ಗದಿಂದ ಸಿಗಂಧೂರಿಗೆ ದೀಪು ಹಾಗೂ ಪ್ರಜ್ವಲ್ ಹೊರಟಿದ್ದರು. ಯುವಕರು ಸ್ಕೂಟಿಯಲ್ಲಿ ವೇಗವಾಗಿ ಬರುತ್ತಿದ್ದು, ಸ್ಕೂಟಿಗೆ ಬಸ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಈ ವೇಳೆ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಸ್ವಾತಂತ್ರ ದಿನಾಚರಣೆಯ ಭಾಷಣಕ್ಕೆ ಸಲಹೆ ನೀಡಿ: ಮೋದಿ

    ಸ್ಕೂಟಿ ಸವಾರರು ಗಂಭೀರ ಗಾಯಗೊಂಡಿದ್ದರು. ಯುವಕರನ್ನು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ದೀಪು ಮೃತಪಟ್ಟಿದ್ದಾನೆ. ಬಸ್ಸಿನಲ್ಲಿದ್ದ 27 ಮಂದಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಾಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • 2 ಬೈಕ್‍ಗಳ ಮಧ್ಯೆ ಮುಖಾಮುಖಿ ಡಿಕ್ಕಿ – ಮೂವರ ಸಾವು

    2 ಬೈಕ್‍ಗಳ ಮಧ್ಯೆ ಮುಖಾಮುಖಿ ಡಿಕ್ಕಿ – ಮೂವರ ಸಾವು

    ಹುಬ್ಬಳ್ಳಿ: ಎರಡು ಬೈಕ್‍ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಸ್ಥಳದಲ್ಲಿ ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ಹುಬ್ಬಳ್ಳಿ ಸಮೀಪದ ಶೇರೇವಾಡ ಬಳಿ ನಡೆದಿದೆ.

    ಕಳೆದ ರಾತ್ರಿ ಕುಂದಗೋಳ ಪಟ್ಟಣದಿಂದ ನೂಲ್ವಿ ಗ್ರಾಮದ ಕಡೆಗೆ ಬರುತ್ತಿದ್ದ ಬೈಕಿಗೆ ಎದುರಾಗಿ ಬರುತ್ತಿದ್ದ ಇನ್ನೊಂದು ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಎರಡು ಬೈಕನಲ್ಲಿದ್ದ ನಾಲ್ವರ ಪೈಕಿ ಮೂವರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಇನ್ನೋರ್ವನ ಸ್ಥಿತಿ ಗಂಭೀರವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಅತಿ ವೇಗವಾಗಿ ಬೈಕ್ ಚಲಾವಣೆ ಮಾಡಿದ್ದೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಘಟನೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕುಂದಗೋಳ ಹಾಗೂ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಓರ್ವನನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು. ಮೃತರ ವಿವರವನ್ನ ಪೊಲೀಸರು ಕಲೆ ಹಾಕುತ್ತಿದ್ದಾರೆ.

  • ಗಣೇಶ ಮಂದಿರ ವಾರ್ಡ್ ನ 165ನೇ ರಸ್ತೆಗೆ ಡಾ. ಮಾಸ್ಟರ್ ಹಿರಣ್ಣಯ್ಯ ಹೆಸರು

    ಗಣೇಶ ಮಂದಿರ ವಾರ್ಡ್ ನ 165ನೇ ರಸ್ತೆಗೆ ಡಾ. ಮಾಸ್ಟರ್ ಹಿರಣ್ಣಯ್ಯ ಹೆಸರು

    ಬೆಂಗಳೂರು: ನಟ, ರಂಗಭೂಮಿ ಕಲಾವಿದ, ಮಾಸ್ಟರ್ ಹಿರಣ್ಣಯ್ಯ ನವರ ಹೆಸರನ್ನು ಗಣೇಶ ಮಂದಿರ ವಾರ್ಡ್ -165ರ ರಸ್ತೆಗೆ ಇಡಲಾಗಿದೆ. ರಸ್ತೆಯ ನಾಮಫಲಕ ಉದ್ಘಾಟನೆಯನ್ನು ಕಂದಾಯ ಸಚಿವ ಆರ್. ಅಶೋಕ್, ಗಣೇಶ ಮಂದಿರ ವಾರ್ಡ್ ಬಿ.ಬಿ.ಎಂ.ಪಿ. ಸದಸ್ಯೆ ಶ್ರೀಮತಿ ಲಕ್ಷ್ಮಿ ಉಮೇಶ್ ಮತ್ತು ಶ್ರೀಮತಿ ಶಾಂತಮ್ಮ ಮಾಸ್ಟರ್ ಹಿರಣ್ಣಯ್ಯ ಮತ್ತು ಬಾಬು ಹಿರಣ್ಣಯ್ಯ, ಬಿ.ಜೆ.ಪಿ ಮುಖಂಡರಾದ ಉಮೇಶ್ ಕಬ್ಬಾಳ್ ರವರು ಉದ್ಘಾಟನೆ ಮಾಡಿದರು.

    ಇದೇ ಸಂದರ್ಭದಲ್ಲಿ ಮಾತನಾಡಿದ ಆರ್. ಅಶೋಕ್, ನಟ, ರಂಗಭೂಮಿ ಕಲಾವಿದ, ಮಾಸ್ಟರ್ ಹಿರಣ್ಣಯ್ಯ ರವರಿಗೆ ಕರ್ನಾಟಕದ ಜನರು ನಟ ರತ್ನಾಕರ ಎಂಬ ಬಿರುದು ನೀಡಿದ್ದರು. ಸಮಾಜದ ಅಂಕುಡೊಂಕುಗಳನ್ನು ತಮ್ಮ ನೇರ ಮಾತುಗಳಿಂದ ಟೀಕಿಸಿ ಸಮಾಜದ ಬದಲಾವಣೆ ತರುವಲ್ಲಿ ಅವರ ಮಹತ್ವದ ಪಾತ್ರ ವಹಿಸಿದ್ದರು. ರಾಜಕೀಯ ಶುದ್ಧೀಕರಣ ಮಾಡಲು ಅವರ ನಾಟಕಗಳ ಮುಖಾಂತರ ರಾಜಕಾರಣಿಗಳಿಗೆ ಛಾಟಿ ಬೀಸುತ್ತಿದ್ದರು ಎಂದರು.

    ಮಾಸ್ಟರ್ ಹಿರಣ್ಣಯ್ಯರ ಜೊತೆಗೆ ಪ್ರೋ.ಜಸ್ಟೋರವರರ ಹೆಸರನ್ನೂ ರಸ್ತೆಗೆ ಇಡಲಾಗಿದೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಅದ್ಭುತ ತಂತ್ರಜ್ಞರು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಉಪ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದರು. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಕನ್ನಡ ನಾಡಿಗೆ ಸೇವೆ ಸಲ್ಲಿಸಿದ ಮತ್ತು ನಮ್ಮ ಕ್ಷೇತ್ರದ ಮಹನೀಯರುಗಳನ್ನು ರಸ್ತೆಗಳಿಗೆ ನಾಮಕರಣ ಮಾಡುವುದರಿಂದ ಅವರ ಹೆಸರು ಅಜರಾಮರವಾಗಿ ಉಳಿಸಿ, ಮುಂದಿನ ಪೀಳಿಗೆಗೆ ಅವರ ಇತಿಹಾಸ ತಿಳಿಯವಂತೆ ಮಾಡುವುದು ನಮ್ಮ ಉದ್ದೇಶ ಎಂದು ಅಶೋಕ್ ಹೇಳಿದರು.

    ಶ್ರೀಮತಿ ಲಕ್ಷ್ಮಿ ಉಮೇಶ್ ಅವರು ಮಾತನಾಡಿ ವೇಗವಾಗಿ ಬೆಳೆಯುತ್ತಿರುವ ನಗರ ಪ್ರದೇಶದಲ್ಲಿ ನಾಡಿಗೆ ಸೇವೆ ಸಲ್ಲಿಸಿದ ಮಹನೀಯಗಳನ್ನು ಮರೆಯುತ್ತಿದ್ದಾರೆ. ಅವರ ಸಲ್ಲಿಸಿದ ಸೇವೆ ಮುಂದಿನ ಸಮಾಜಕ್ಕೆ ತಿಳಿಯಬೇಕು. ಅವರ ಸೇವೆ ಸ್ಮರಣೆ ಮಾಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಹೇಳಿದರು. ಇದೇ ವೇಳೆ ಶ್ರೀಮತಿ ಶಾಂತಮ್ಮ ಹಿರಣ್ಣಯ್ಯರವರಿಗೆ, ಸಿಎ 35ನೇ ರ್ಯಾಂಕ್ ಪಡೆದ ಸೌಮ್ಯ ಮತ್ತು ಕೆಎಎಸ್ ಅಧಿಕಾರಿ ಸಂಜನಾ ಅವರನ್ನು ಸನ್ಮಾನಿಸಲಾಯಿತು.

  • ರಸ್ತೆ ಗುಂಡಿಯಲ್ಲಿ ಫೋಟೋ ಇಟ್ಟು ಸೆಲ್ಫಿ ತಗೊಂಡು ರಮ್ಯಾ ವಿರುದ್ಧ ಕಿಡಿಕಾರಿದ ಬೆಂಗ್ಳೂರು ಯುವಕರು!

    ರಸ್ತೆ ಗುಂಡಿಯಲ್ಲಿ ಫೋಟೋ ಇಟ್ಟು ಸೆಲ್ಫಿ ತಗೊಂಡು ರಮ್ಯಾ ವಿರುದ್ಧ ಕಿಡಿಕಾರಿದ ಬೆಂಗ್ಳೂರು ಯುವಕರು!

    ಬೆಂಗಳೂರು: ಮಾಜಿ ಸಂಸದೆ, ಎಐಸಿಸಿ ಐಟಿ ಸೆಲ್ ಮುಖ್ಯಸ್ಥೆ ರಮ್ಯಾ ವಿರುದ್ಧ ಸಿಲಿಕಾನ್ ಸಿಟಿ ಜನ ಗರಂ ಆಗಿದ್ದು, ರಮ್ಯಾ ಹೇಳಿದ ಸುಳ್ಳಿನ ವಿರುದ್ಧ ಬೆಂಗಳೂರು ಜನ ಮುನಿಸಿಕೊಂಡಿದ್ದಾರೆ.

    ರಸ್ತೆ ಗುಂಡಿ ಮಧ್ಯೆ ನಿಂತು ರಮ್ಯಾ ಫೋಟೋ ಇಟ್ಕೊಂಡು ಯುವಕರು ಸೆಲ್ಫಿ ತೆಗೋತಿದಾರೆ. ಇದಕ್ಕೆ ಕಾರಣ ಭಾನುವಾರ ರಮ್ಯಾ ತಮ್ಮ ಫೇಸ್‍ಬುಕ್‍ನಲ್ಲಿ ಹಾಕಿದ್ದ ಈ ವಿಡಿಯೋವಾಗಿದೆ.

    ಪ್ರಧಾನಿ ಮೋದಿ ಬೆಂಗಳೂರನ್ನು ಕ್ರೈಂ ಸಿಟಿ, ಗಾರ್ಬೆಜ್ ಸಿಟಿ, ಅಂತೆಲ್ಲಾ ಕರೆದರು ಅಂತ ಅವರ ಕಾಲೆಳೆಯಲು ರಮ್ಯ ಮೇಡಂ ಫುಲ್ ಜೋಶ್‍ನಲ್ಲಿ ವಿಧಾನಸೌಧ ಸುತ್ತಮುತ್ತ ಇರುವ ರಸ್ತೆ, ಸ್ಟಾರ್ ಹೋಟೆಲ್ ಗಳ ಮುಂದಿರುವ ಒಂದೆರೆಡು ರೋಡ್ ಶಾಟ್ಸ್ ತೆಗೆದು ವಿಡಿಯೋ ಹಾಕಿ ನಮ್ ರೋಡ್ ಸೂಪರ್. ನಿಮ್ಮೂರಿನ ರೋಡ್ ನೋಡಿಕೊಳ್ಳಿ ಅಂತ ಟಾಂಗ್ ಕೊಟ್ಟಿದ್ದರು. ಈ ವಿಡಿಯೋ ಇದೀಗ ಬೆಂಗಳೂರು ಯುವಕರ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನೂ ಓದಿ:  ಕ್ರೈಂ ಸಿಟಿ ಅಂದ ಪ್ರಧಾನಿಗೆ ರಮ್ಯಾ ಗುದ್ದು – ವಾರಣಾಸಿ, ಗೋರಖ್‍ಪುರಕ್ಕಿಂತ ಬೆಂಗ್ಳೂರೇ ಉತ್ತಮ ಅಂದ್ರು ಮಾಜಿ ಸಂಸದೆ

    ಬೆಂಗಳೂರಿನ ಹದಗೆಟ್ಟ ರಸ್ತೆ, ನಾಲ್ಕು ವರ್ಷದಿಂದಲೂ ಬಿದ್ದಿರುವ ಗುಂಡಿ, ರೋಡಿನ ಮುಂದೆ ರಮ್ಯಾ ಫೋಟೋ ಜೊತೆ ಸಿಲಿಕಾನ್ ಸಿಟಿ ಯುವಕರ ಟೀಮ್ ಸೆಲ್ಫಿ ತೆಗೆದುಕೊಂಡು ಇದನ್ನು ರಮ್ಯಾಗೆ ಫೋಸ್ಟ್ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ

    ದೆಹಲಿಯಲ್ಲಿ ಕುಳಿತು ಪುಗ್ಸಟೆ ಪ್ರಚಾರಕ್ಕೆ ಸುಳ್ಳು ಹೇಳಿದ ರಮ್ಯಾ ಮೊದಲು ಕೆಲಸ ಮಾಡಲಿ, ಆಮೇಲೆ ಕ್ರೆಡಿಟ್ ತಗೊಳಲಿ ಅಂತಾ ಬೆಂಗಳೂರು ಜನ ಸರಿಯಾದ ಪಾಠ ಕಲಿಸಿದ್ದಾರೆ.