Tag: ರೊಮ್ಯಾನ್ಸ್

  • ನೀರೊಳಗೂ ರೊಮ್ಯಾನ್ಸ್ ಮಾಡಿದ ಚಂದನ್ ಶೆಟ್ಟಿ-ನಿವ್ವಿ

    ನೀರೊಳಗೂ ರೊಮ್ಯಾನ್ಸ್ ಮಾಡಿದ ಚಂದನ್ ಶೆಟ್ಟಿ-ನಿವ್ವಿ

    ಗಾಯಕ ಚಂದನ್ ಶೆಟ್ಟಿ (Chandan Shetty) ಮತ್ತು ಕಿರುತೆರೆ ನಟಿ ಹಾಗೂ ಚಂದನ್ ಪತ್ನಿ ನಿವೇದಿತಾ ಗೌಡ (Nivedita Gowda) ಹಾಲಿಡೇ ಮೂಡ್ ನಲ್ಲಿದ್ದಾರೆ. ಪ್ರವಾಸದಲ್ಲಿ ವಿಡಿಯೋವೊಂದನ್ನು ಮಾಡಿದ್ದು, ಆ ವಿಡಿಯೋ ಸಖತ್ ವೈರಲ್ ಆಗಿದೆ. ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅಂಡರ್ ವಾಟರ್ ಶೂಟ್ ಮಾಡಿದ್ದು, ನೀರಿನೊಳಗೆ ರೊಮ್ಯಾನ್ಸ್ (Romance) ಮಾಡಿದ್ದಾರೆ.

    ಅಂಡರ್ ವಾಟರ್ (Underwater) ನಲ್ಲಿ ತುಟಿಗೆ ತುಟಿ ಬೆರೆಸಿ ರೊಮ್ಯಾಂಟಿಕ್ ಆಗಿ ವಿಡಿಯೋ ಶೂಟ್ ಮಾಡಿದ್ದು, ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಚಂದನ್ ಶೆಟ್ಟಿ. ಈ ವಿಡಿಯೋಗೆ ನಾನಾ ರೀತಿಯಲ್ಲಿ ಕಾಮೆಂಟ್ಸ್ ಬರುತ್ತಿವೆ. ಕೆಲವರು ಸಪೋರ್ಟ್ ಮಾಡಿದರೆ ಇನ್ನೂ ಕೆಲವರು ಖಾಸಗಿ ಸಂಗತಿಗಳನ್ನು ಬಹಿರಂಗವಾಗಿ ತೋರಿಸುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:ಸಮಂತಾ ನಟನೆಯ ಹಾಲಿವುಡ್ ಸಿನಿಮಾಗೆ ಟೈಟಲ್ ಫಿಕ್ಸ್

    ಕಾಮೆಂಟ್ ಗಳು ಏನೇ ಇರಲಿ ಚಂದನ್ ಮತ್ತು ನಿವೇದಿತಾ ಕೆಲ ಹೊತ್ತು ನೀರಿನೊಳಗೆ ರೊಮ್ಯಾನ್ಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಉಚಿತ ಮನರಂಜನೆ ನೀಡಿದ್ದಾರೆ. ದಾಂಪತ್ಯದ ಅನ್ಯೋನ್ಯತೆಗೆ ಸಾಕ್ಷಿ ಎನ್ನುವಂತೆ ವಿಡಿಯೋ ಮಾಡಿದ್ದಾರೆ. ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

  • ವಿದ್ಯಾರ್ಥಿನಿ ಜೊತೆ ಶಿಕ್ಷಕನ  ರೊಮ್ಯಾನ್ಸ್ – ವೀಡಿಯೋ ವೈರಲ್

    ವಿದ್ಯಾರ್ಥಿನಿ ಜೊತೆ ಶಿಕ್ಷಕನ ರೊಮ್ಯಾನ್ಸ್ – ವೀಡಿಯೋ ವೈರಲ್

    ಮೈಸೂರು: ಶಾಲೆಯಲ್ಲಿ ವಿದ್ಯಾರ್ಥಿನಿ ಜೊತೆ ಮುಖ್ಯ ಶಿಕ್ಷಕ ರೊಮ್ಯಾನ್ಸ್ ಮಾಡುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಸಾಮಾನ್ಯವಾಗಿ ತಂದೆ, ತಾಯಿ ಬಳಿಕ ವಿದ್ಯೆ ಕಲಿಸುವ ಗುರುವಿಗೆ ಭಾರತೀಯ ಪರಂಪರೆಯಲ್ಲಿ ಪೂಜ್ಯ ಸ್ಥಾನವಿದೆ. ಶಿಕ್ಷಕನನ್ನು ದೇವರು ಎಂದು ಕೂಡ ಪರಿಗಣಿಸಲಾಗುತ್ತದೆ. ಆದರೆ ಮೈಸೂರು ಜಿಲ್ಲೆ ಹೆಚ್.ಡಿ. ಕೋಟೆ ತಾಲೂಕಿನ ಶಾಲೆಯೊಂದರಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿನಿ ಜೊತೆಗೆ ರಾಸಲೀಲೆಯಲ್ಲಿ ತೊಡಗಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಸಿದ್ದರಾಮಯ್ಯನಿಗೆ ಪಾಠ ಮಾಡಲು ನಾನು ಎಲ್‍ಕೆಜಿ ಟೀಚರ್ ಅಲ್ಲ: ಈಶ್ವರಪ್ಪ

    ಶಾಲೆಯ ಖಾಲಿ ಕೊಠಡಿಯಲ್ಲಿ ವಿದ್ಯಾರ್ಥಿನಿ ಜೊತೆಗೆ ಶಿಕ್ಷಕ ಸರಸ-ಸಲ್ಲಾಪ ನಡೆಸುತ್ತಿರುವ ವೀಡಿಯೋವನ್ನು ವಿದ್ಯಾರ್ಥಿಗಳೇ ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಇದೀಗ ವೀಡಿಯೋ ವೈರಲ್ ಆದ ಹಿನ್ನೆಲೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಲಾಗಿದ್ದು, ಶಾಲೆಗೆ ಭೇಟಿ ನೀಡಿ ಪರಿಶೀಲಿಸುವ ಭರವಸೆಯನ್ನು ಬಿಇಓ ನೀಡಿದ್ದಾರೆ. ಇದನ್ನೂ ಓದಿ: 2-3 ವಾರಗಳಲ್ಲಿ 3ನೇ ಅಲೆ ಕಡಿಮೆಯಾಗುತ್ತೆ: ಸುಧಾಕರ್

  • ಪಬ್ಲಿಕ್ ಪ್ಲೇಸ್‍ನಲ್ಲಿ ಕಿಸ್, ಹಗ್ ಮಾಡ್ತಾರೆ ಪ್ರೇಮಿಗಳು!

    ಪಬ್ಲಿಕ್ ಪ್ಲೇಸ್‍ನಲ್ಲಿ ಕಿಸ್, ಹಗ್ ಮಾಡ್ತಾರೆ ಪ್ರೇಮಿಗಳು!

    – ಪ್ರವಾಸಿಗರಿಗೆ ಮುಜುಗರ ತರ್ತಿರೋ ಪ್ರೇಮಿಗಳ ಹುಚ್ಚಾಟ

    ಚಿಕ್ಕಬಳ್ಳಾಪುರ: ವಿಶ್ವಪ್ರಸಿದ್ಧ ಪ್ರವಾಸಿ ತಾಣ ನಂದಿಬೆಟ್ಟಕ್ಕೆ ಹೋಗುವ ಕೆಲ ಪ್ರೇಮಿಗಳು, ಮನಸ್ಸೊಇಚ್ಛೆ ಅಶ್ಲೀಲ ಹಾಗೂ ಅನೈತಿಕ ಚಟುವಟಿಕೆಗಳಲ್ಲಿ ತೊಡುಗುತ್ತಾರೆ ಎಂದು ಸರ್ಕಾರ ಅಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನ ಅಳವಡಿಸಿದೆ. ಆದರೂ ಕ್ಯಾಮೆರಾಗಳಿವೆ ಎಂಬ ಪರಿಜ್ಞಾನವಿಲ್ಲದ ಕೆಲ ಜೋಡಿಗಳು ಸಾರ್ವಜನಿಕರ ಸಮ್ಮುಖದಲ್ಲೇ ರೊಮ್ಯಾನ್ಸ್‌ನಲ್ಲಿ ತೊಡಗುವುದರ ಮೂಲಕ ಪ್ರವಾಸಿಗರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದಾರೆ.

    ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮದಲ್ಲಿ ಪ್ರೇಮಿಗಳು ಸಾರ್ವಜನಿಕ ಸ್ಥಳದಲ್ಲಿಯೇ ಅಶ್ಲೀಲವಾಗಿ ವರ್ತಿಸುತಿದ್ದಾರೆ. ನೂರಾರು ಎಕರೆ ವಿಶಾಲವಾಗಿ ಹರಡಿರುವ ನಂದಿಗಿರಿಧಾಮದಲ್ಲಿ ಹಿಂದೊಮ್ಮೆ ಅಶ್ಲೀಲ ಅನೈತಿಕ ಚಟುವಟಿಕೆಗಳು ಹೆಚ್ಚಾಗಿದ್ದ ಕಾರಣ ರಾಜ್ಯ ತೋಟಗಾರಿಕೆ ಇಲಾಖೆ ಗಿರಿಧಾಮದ ವಿವಿಧೆಡೆ ಸಿಸಿಟಿವಿ ಕ್ಯಾಮೆರಾಗಳನ್ನ ಅಳವಡಿಸಿದೆ.

    ಕೆಲವು ಜೋಡಿಗಳು ಈಗಲೂ ಸಹ ಸಿಸಿಟಿವಿ ಕ್ಯಾಮೆರಾಗಳಿದ್ದರೂ ಸಾರ್ವಜನಿಕವಾಗಿಯೇ ಒಬ್ಬರಿಗೊಬ್ಬರು ಕೀಸ್ ಮಾಡ್ತಾ, ತಬ್ಬಿಕೊಂಡು ಮುದ್ದು ಮಾಡುತ್ತಾ, ರೊಮ್ಯಾನ್ಸ್ ಮಾಡುವ ಘಟನೆಗಳು ಪದೇ ಪದೇ ಮರುಕಳಿಸುತ್ತಿವೆ. ಹೀಗಾಗಿ ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಮುಜುಗರ ಉಂಟು ಮಾಡುತ್ತಿದ್ದಾರೆ ಎಂದು ನಂದಿಗಿರಿಧಾಮದ ಅಧಿಕಾರಿ ರವಿಕುಮಾರ್ ಬೇಸರದಿಂದ ಹೇಳಿದ್ದಾರೆ.

    ಸಿಸಿಟಿವಿ ಭಯದಿಂದ ನಂದಿಗಿರಿಧಾಮಕ್ಕೆ ಬರೋ ಕೆಲ ಜೋಡಿಗಳು ಗಿರಿಧಾಮದಲ್ಲಿನ ಪೊದೆಗಳ ಮರೆಗೆ ಹೋಗಿ ರೊಮ್ಯಾನ್ಸ್‌ನಲ್ಲಿ ತೊಡಗುತ್ತಾರೆ. ಹೀಗಾಗಿ ಎಚ್ಚೆತ್ತ ತೋಟಗಾರಿಕೆ ಇಲಾಖೆ ಈ ಹಿಂದೆ ಬೆಟ್ಟದ ಮೇಲಿರುವ ದಟ್ಟವಾದ ಪೊದೆಗಳನ್ನು ಸಹ ಕಟಾವು ಮಾಡಿಸಿದೆ. ಆದರೂ ಪ್ರೇಮಿಗಳ ಈ ತುಂಟಾಟ ಮಾತ್ರ ನಿಲ್ಲುತ್ತಿಲ್ಲ. ಒಂದೆಡೆ ಪ್ರಕೃತಿ ಸೊಬಗು ಸವಿಯೋಣ ಎಂದು ಬರುವ ಪ್ರವಾಸಿಗರು, ಮತ್ತೊಂದೆಡೆ ಬೆಟ್ಟದ ಮೇಲೆ ಇರೋ ದೇವಸ್ಥಾನಗಳಿಗೆ ಬರುವ ಭಕ್ತರಿಗೆ ಇದು ಇರುಸು ಮುರುಸು ಉಂಟುಮಾಡುತ್ತಿದೆ ಎಂದು ಪ್ರವಾಸಿಗ ನಾಗೇಂದ್ರ ಪ್ರಸಾದ್ ಹೇಳಿದ್ದಾರೆ.

    ಪ್ರೇಮಿಗಳ ತಾಣ ನಂದಿಗಿರಿಧಾಮದಲ್ಲಿ ಹೆಜ್ಜೆ ಹೆಜ್ಜೆಗೂ ಸಿಸಿಟಿವಿ ಅಳವಡಿಸಲಾಗಿದೆ. ಆದರೆ ಸಕಾಲಕ್ಕೆ ಕ್ಯಾಮೆರಾಗಳ ಮಾನಿಟರಿಂಗ್ ವ್ಯವಸ್ಥೆ ಇಲ್ಲದೆ ಇಲ್ಲದಿರುವುದರಿಂದ ಬೆಟ್ಟದಲ್ಲಿ ಕೆಲವು ಪ್ರೇಮಿ ಜೋಡಿಗಳು ಆಡಿದ್ದೆ ಆಟ, ಮಾಡಿದ್ದೆ ಕಾಯಕವಾಗಿದೆ. ಇನ್ನೂ ಮುಂದಾದರು ಗಿರಿಧಾಮದ ವಿಶೇಷಾಧಿಕಾರಿಗಳು ನಂದಿಬೆಟ್ಟದಲ್ಲಿ ಅಶ್ಲೀಲ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

     

  • ಜನ್ರ ಸಮ್ಮುಖದಲ್ಲೇ ಜೋಡಿ ಲಿಪ್‍ಲಾಕ್ – ಪೊಲೀಸ್ರು ನಿಯೋಜನೆ ಮಾಡಿದ್ದ ರಸ್ತೆಯಲ್ಲೇ ಪ್ರೇಮಿಗಳು ಅರೆಬೆತ್ತಲೆ

    ಜನ್ರ ಸಮ್ಮುಖದಲ್ಲೇ ಜೋಡಿ ಲಿಪ್‍ಲಾಕ್ – ಪೊಲೀಸ್ರು ನಿಯೋಜನೆ ಮಾಡಿದ್ದ ರಸ್ತೆಯಲ್ಲೇ ಪ್ರೇಮಿಗಳು ಅರೆಬೆತ್ತಲೆ

    ಬೆಂಗಳೂರು: ಒಂದುಕಡೆ 2020ರ ಹೊಸ ವರ್ಷವನ್ನು ತುಂಬಾ ಸಂತೋಷದಿಂದ ಜನರು ಬರಮಾಡಿಕೊಂಡಿದ್ದಾರೆ. ಮತ್ತೊಂದೆಡೆ ಹೊಸ ವರ್ಷದ ಸಂಭ್ರಮದಲ್ಲಿ ಜನರು ನೈತಿಕತೆಯನ್ನು ಮರೆತು ರಸ್ತೆಯಲ್ಲಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ.

    ನಗರದ ಚರ್ಚ್ ಸ್ಟ್ರೀಟ್‍ನ ರಸ್ತೆಯಲ್ಲಿ ಮದ್ಯದ ಅಮಲಿನಲ್ಲಿ ಎಲ್ಲಿದ್ದೇವೆ ಅನ್ನೋದನ್ನೇ ಮರೆತ ಜೋಡಿಯೊಂದು ಅರೆಬೆತ್ತಲೆಯಾಗಿ ರೊಮ್ಯಾನ್ಸ್ ಮಾಡಿದ್ದಾರೆ. ಚರ್ಚ್ ಸ್ಟ್ರೀಟ್ ನಲ್ಲಿ ಸೆಕ್ಯೂರಿಟಿಗಾಗಿ ಪೊಲೀಸರನ್ನು ನಿಯೋಜನೆ ಮಾಡಿದ್ದರು. ಪೊಲೀಸರು ನಿಯೋಜನೆ ಮಾಡಿರುವ ರಸ್ತೆಯಲ್ಲಿ ಪ್ರೇಮಿಗಳು ಅರೆಬೆತ್ತಲೆ ಸ್ಥಿತಿಯಲ್ಲಿದ್ದರು. ಅಲ್ಲದೇ ಯುವತಿ- ಯುವಕ ರೊಮ್ಯಾನ್ಸ್ ಕೂಡ ಮಾಡಿದ್ದಾರೆ. ಹೊಸ ವರ್ಷ ಎಂಬ ಕಾರಣಕ್ಕೆ ಪೊಲೀಸರು ಪ್ರಶ್ನೆ ಮಾಡಲ್ಲ, ರೊಮ್ಯಾನ್ಸ್ ಮಾಡೋರನ್ನು ಕಳಿಸುವುದಿಲ್ಲ ಎಂದು ಈ ರೀತಿ ನಡೆದುಕೊಂಡಿದ್ದಾರೆ.

    ಹೊಸ ವರ್ಷದ ಪಾರ್ಟಿ ಮುಗಿಸಿ ಪ್ರೇಮಿಗಳು ಚರ್ಚ್ ಸ್ಟ್ರೀಟ್‍ನ ಪಬ್ ನಿಂದ ಹೊರ ಬಂದಿದ್ದಾರೆ. ನಂತರ ರಸ್ತೆ ಮಧ್ಯದಲ್ಲಿ ನಿಂತುಕೊಂಡು ಜನರ ಸಮ್ಮುಖದಲ್ಲಿಯೇ ಲಿಪ್‍ಲಾಕ್ ಮಾಡಿದ್ದಾರೆ. ಈ ಮೂಲಕ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದ್ದಾರೆ. ಇದರಿಂದ ಪೊಲೀಸರು ಕೊಡುವ ಸೆಕ್ಯೂರಿಟಿ ಇದೆನಾ ಎಂಬ ಪ್ರಶ್ನೆ ಮೂಡಿ ಬರುತ್ತಿದೆ.

    ಚರ್ಚ್ ಸ್ಟ್ರೀಟ್ ಎಂಪೇರ್ ಹೋಟೆಲ್ ಮುಂಭಾಗ ಪಾರ್ಟಿ ಮುಗಿಸಿ ಪ್ರಿಯಕರನ ಜೊತೆ ಯುವತಿ ವಾಪಸ್ ಹೋಗುತ್ತಿದ್ದಳು. ಈ ವೇಳೆ ನಡು ಬೀದಿಯಲ್ಲಿ ಯುವತಿಯ ಖಾಸಗಿ ಅಂಗವನ್ನ ಯುವಕ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಹಿಂಬದಿಯಿಂದ ಬಂದು ಖಾಸಗಿ ಅಂಗ ಮುಟ್ಟುವ ಯುವಕನಿಗೆ ಯುವತಿ ತಲೆಗೆ ಹೊಡೆದಿದ್ದಾಳೆ. ಬಳಿಕ ಏನು ತಿಳಿಯದಂತೆ ಯುವಕ ಪರಾರಿಯಾಗಿದ್ದಾನೆ.

  • ಸಹೋದ್ಯೋಗಿಯನ್ನು ಅಪ್ಪಿಕೊಂಡು ಪ್ರಿನ್ಸಿಪಾಲ್ ರೊಮ್ಯಾನ್ಸ್..!

    ಸಹೋದ್ಯೋಗಿಯನ್ನು ಅಪ್ಪಿಕೊಂಡು ಪ್ರಿನ್ಸಿಪಾಲ್ ರೊಮ್ಯಾನ್ಸ್..!

    – ಕೊಠಡಿಯಲ್ಲಿ ವಿಡಿಯೋ ರೆಕಾರ್ಡ್

    ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕಿನ ಮಳೂರು ಗ್ರಾಮದಲ್ಲಿ ಮಕ್ಕಳಿಗೆ ನೈತಿಕತೆಯ ಪಾಠ ಮಾಡಬೇಕಾದ ಪ್ರಾಂಶುಪಾಲನೊಬ್ಬ ಸಹೋದ್ಯೋಗಿ ಜೊತೆ ಚಕ್ಕಂದವಾಡುತ್ತಿದ್ದಾಗ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

    ಮೊರಾರ್ಜಿ ವಸತಿ ಶಾಲೆಯ ಪ್ರಿನ್ಸಿಪಾಲ್ ಚಂದ್ರಪ್ಪ ಈ ರೀತಿ ಶಾಲೆಯಲ್ಲೇ ರೊಮ್ಯಾನ್ಸ್ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಈ ವಸತಿ ಶಾಲೆಯಲ್ಲಿ ಆರನೇ ತರಗತಿಯಿಂದ ಹತ್ತನೇ ತರಗತಿವರೆಗೆ ಸುಮಾರು 250 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ ಶಿಕ್ಷಕರು, ಶಿಕ್ಷಕಿಯರು, ಅಡುಗೆಯವರು ಮತ್ತು ಅಡುಗೆ ಸಹಾಯಕರು ಸೇರಿ 20 ಮಂದಿ ಇಲ್ಲಿನ ಕ್ವಾರ್ಟರ್ಸ್ ಗಳಲ್ಲಿ ವಾಸವಾಗಿದ್ದಾರೆ.

    ಸುಪ್ರೀಂಕೋರ್ಟ್ ಆದೇಶವಿದೆ ಎಂದ:
    ಈ ವಸತಿ ಶಾಲೆಯ ಉದ್ಯೋಗಿಯಾಗಿ ಬಂದ ಮಹಿಳೆಯೊಬ್ಬರ ಜೊತೆ ಪ್ರಿನ್ಸಿಪಾಲ್ ಚಂದ್ರಪ್ಪ ಚಕ್ಕಂದ ಶುರು ಮಾಡಿದ್ದಾನೆ. ಕದ್ದುಮುಚ್ಚಿ ನಡೆಯುತ್ತಿದ್ದ ಇವರಿಬ್ಬರ ಪ್ರೀತಿ ಶಾಲೆಯ ಇನ್ನಿತರ ಶಿಕ್ಷಕರು ಹಾಗೂ ಮಕ್ಕಳಿಗೂ ಗೊತ್ತಾಗಿದೆ. ಈ ಬಗ್ಗೆ ಗ್ರಾಮಸ್ಥರು ಆಕ್ಷೇಪ ಮಾಡಿದಾಗ, ಸುಪ್ರೀಂಕೋರ್ಟ್ ಆದೇಶ ಇದೆ. ಯಾರು ಯಾರ ಜೊತೆ ಬೇಕಾದರೂ ಸಂಬಂಧ ಇಟ್ಟುಕೊಳ್ಳಬಹುದು ಎಂದು ಅವಾಜ್ ಹಾಕಿದ್ದಾನೆ.

    ಅಷ್ಟೇ ಅಲ್ಲದೆ ಇವರಿಬ್ಬರು ಇತ್ತೀಚೆಗೆ ಅಡುಗೆ ಸಾಮಾಗ್ರಿಗಳಿದ್ದ ರೂಮಿನಲ್ಲಿ ಅಪ್ಪಿಕೊಂಡು ರೊಮ್ಯಾನ್ಸ್ ಮಾಡಿದ್ದಾರೆ. ಇದನ್ನು ಅವರಿಗೆ ಗೊತ್ತಾಗದೇ ರೀತಿಯಲ್ಲಿ ಕಿಟಕಿಯಿಂದ ವಿಡಿಯೋ ಮಾಡಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಸಮಾಜ ಕಲ್ಯಾಣ ಇಲಾಖೆ ಸುಪರ್ದಿಯಲ್ಲಿರುವ ಈ ಶಾಲೆಯ ಪ್ರಿನ್ಸಿಪಾಲ್ ರೊಮ್ಯಾನ್ಸ್ ವಿಷಯ ಹಿರಿಯ ಅಧಿಕಾರಿಗಳಿಗೆ ತಿಳಿದಿದ್ದರೂ, ಸೂಕ್ತ ಕ್ರಮ ಕೈಗೊಳ್ಳದೆ ಸಂಬಂಧವೇ ಇಲ್ಲವೇನು ಎಂಬಂತೆ ಇದ್ದಾರೆ. ಇಂತಹ ವಿಷಯದಿಂದ ಮಕ್ಕಳ ಮೇಲಾಗುವ ಪರಿಣಾಮಗಳ ಬಗ್ಗೆ ಇಲಾಖೆ ಗಂಭೀರವಾಗಿ ಯೋಚಿಸಬೇಕು ಎಂದು ಪೋಷಕರು ಆಗ್ರಹಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಲ್ಮಾನ್ ಗೆಳತಿ ಲುಲಿಯಾ ಜೊತೆ ಮನೀಶ್ ಪೌಲ್ ರೊಮ್ಯಾನ್ಸ್!

    ಸಲ್ಮಾನ್ ಗೆಳತಿ ಲುಲಿಯಾ ಜೊತೆ ಮನೀಶ್ ಪೌಲ್ ರೊಮ್ಯಾನ್ಸ್!

    ಮುಂಬೈ: ಬಾಲಿವುಡ್ ದಬಂಗ್ ಸಲ್ಮಾನ್ ಖಾನ್ ಗೆಳತಿ ಲುಲಿಯಾ ವಂಟೂರ್ ನಟ, ನಿರೂಪಕ ಮನೀಶ್ ಪೌಲ್ ಜೊತೆ ನಟಿಸಿರುವ ‘ಹರ್ ಜಾಯಿ’ ಸಾಂಗ್ ಅಲ್ಬಮ್ ರಿಲೀಸ್ ಆಗಿದೆ. ವಿಡಿಯೋ ಸಾಂಗ್‍ನಲ್ಲಿ ಲುಲಿಯಾ ಮತ್ತು ಮನೀಶ್ ಇಬ್ಬರೂ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.

    ಸಲ್ಮಾನ್‍ಗಾಗಿ ತನ್ನ ದೇಶವನ್ನು ತೊರೆದು ಭಾರತಕ್ಕೆ ಬಂದಿರುವ ಲುಲಿಯಾ ಸದ್ಯ ತಮ್ಮ ಕೆರಿಯರ್ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದಾರೆ. ಈ ಬಗ್ಗೆ ಸಲ್ಮಾನ್ ಕೂಡ ತನ್ನ ಗೆಳತಿಯ ಪ್ರೊಫೆಶನಲ್ ಲೈಫ್ ಬಗ್ಗೆ ಹಲವರೊಂದಿಗೆ ಮಾತುಕತೆಯನ್ನು ಸಹ ನಡೆಸಿದ್ದಾರೆ. ಲುಲಿಯಾರ ಸಾಂಗ್ ಅಲ್ಬಮ್ ರಿಲೀಸ್ ಆಗುತ್ತಿದೆ ಎಂದು ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದರು.

    ಸಾಂಗ್ ಅಲ್ಬಮ್‍ರ ಒಂದು ಟೀಸರ್ ಬಿಡುಗಡೆಯಾಗಿದ್ದು, ಬಾಲಿವುಡ್‍ನಲ್ಲಿ ಸಂಚಲನ ಮೂಡಿಸಿದೆ. ಮೂಲತಃ ಗಾಯಕಿಯಾಗಿರುವ ಲುಲಿಯಾ ‘ಹರ್ ಜಾಯಿ’ ಹಾಡಿಗೆ ಧ್ವನಿ ನೀಡಿದ್ದಾರೆ. ಸಾಂಗ್‍ನಲ್ಲಿ ಲುಲಿಯಾ ಜೊತೆ ಮನೀಶ್ ಪೌಲ್ ರೊಮ್ಯಾಂಟಿಕ್ ಲುಕ್ ನಲ್ಲಿ ಕಾಣಸಿಗುತ್ತಾರೆ. ಹರ್‍ಜಾಯಿ ಹಾಡು ಮನೀಶ್ ಪೌಲ್ ಮತ್ತು ಸಚಿನ್ ಗುಪ್ತಾ ಕಂಠಸಿರಿಯಲ್ಲಿ ಕೇಳುಗರನ್ನು ರಂಜಿಸುತ್ತಿದೆ.

    ಟೀಸರ್ ಕೇವಲ 35 ಸೆಕೆಂಡ್ ಹೊಂದಿದ್ದು, ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಸಾಂಗ್ ಅಲ್ಬಮ್ ಮೆಲೋಡಿಯಿಂದ ಕೂಡಿರಲಿದೆ ಎಂದು ಹೇಳಲಾಗುತ್ತಿದೆ. ಫುಲ್ ಸಾಂಗ್ ಅಲ್ಬಮ್ ಬುಧವಾರ ರಿಲೀಸ್ ಆಗಲಿದೆ.

  • ರೊಮ್ಯಾನ್ಸ್ ಗೆ ಒಪ್ಪದಿದ್ದಕ್ಕೆ ಕ್ಲಾಸ್‍ಮೇಟ್ ಮೇಲೆ ವಿದ್ಯಾರ್ಥಿಯಿಂದ ಶೂಟೌಟ್

    ರೊಮ್ಯಾನ್ಸ್ ಗೆ ಒಪ್ಪದಿದ್ದಕ್ಕೆ ಕ್ಲಾಸ್‍ಮೇಟ್ ಮೇಲೆ ವಿದ್ಯಾರ್ಥಿಯಿಂದ ಶೂಟೌಟ್

    ಲಕ್ನೋ: ಅಪ್ತಾಪ್ತ ವಿದ್ಯಾರ್ಥಿಯೊಬ್ಬ ರೊಮ್ಯಾನ್ಸ್  ಮಾಡಲು ಒಪ್ಪಲಿಲ್ಲ ಎಂದು ತನ್ನ ಕ್ಲಾಸ್‍ಮೆಟ್ ವಿದ್ಯಾರ್ಥಿನಿಯ ಮೇಲೆ ಗುಂಡು ಹಾರಿಸಿರುವ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.

    ಮಥುರಾ ರಸ್ತೆಮಾರ್ಗದ ಕಾಲೋನಿ ಸಮೀಪದಲ್ಲಿ 15 ವರ್ಷದ ವಿದ್ಯಾರ್ಥಿನಿ ಒಬ್ಬಳೆ ಶಾಲೆಗೆ ಹೋಗುತ್ತಿದ್ದಳು. ಈ ಸಂದರ್ಭದಲ್ಲಿ ಅದೇ ಶಾಲೆಯ 16 ವರ್ಷದ ವಿದ್ಯಾರ್ಥಿಯೊಬ್ಬ ಆಕೆಯನ್ನು ರೊಮ್ಯಾನ್ಸ್ ಗೆ ಕರೆದಿದ್ದಾನೆ. ಇದಕ್ಕೆ ವಿದ್ಯಾರ್ಥಿನಿ ನಿರಾಕರಿಸಿದ್ದಾಳೆ.

    ರೊಮ್ಯಾನ್ಸ್ ಒಪ್ಪಲಿಲ್ಲ ಎಂದು ಕೋಪಗೊಂಡ ವಿದ್ಯಾರ್ಥಿ ಶಾಲೆಗೆ ಹೋಗುತ್ತಿದ್ದ ವೇಳೆ ಬೈಕ್‍ನಲ್ಲಿ ಬಂದು ಆಕೆಯ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಸದ್ಯಕ್ಕೆ ತೀವ್ರವಾಗಿ ಗಾಯಗೊಂಡ ವಿದ್ಯಾರ್ಥಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಆದರೆ ಆಕೆಯ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಘಟನೆ ಕುರಿತು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಬಾಲ ಆರೋಪಿ ಪತ್ತೆಗೆ ಜಾಲ ಬೀಸಿದ್ದಾರೆ.

    ಇದನ್ನು ಓದಿ: ಶಾಲೆಯಲ್ಲಿ ವಿದ್ಯಾರ್ಥಿನಿಯನ್ನು ಕೆಲ ಸೆಕೆಂಡ್ ತಬ್ಬಿಕೊಂಡಿದ್ದಕ್ಕೆ ವಿದ್ಯಾರ್ಥಿ ಸಸ್ಪೆಂಡ್!

  • ಹಂಪಿಯ ಬಂಡೆಗಳ ಹಿಂದೆಯೇ ವಿದೇಶಿ ಹುಡುಗಿ ಜೊತೆ ಸ್ಥಳೀಯ ಹುಡುಗನ ರೊಮ್ಯಾನ್ಸ್!

    ಹಂಪಿಯ ಬಂಡೆಗಳ ಹಿಂದೆಯೇ ವಿದೇಶಿ ಹುಡುಗಿ ಜೊತೆ ಸ್ಥಳೀಯ ಹುಡುಗನ ರೊಮ್ಯಾನ್ಸ್!

    ಬಳ್ಳಾರಿ: ವಿಶ್ವವಿಖ್ಯಾತ ಐತಿಹಾಸಿಕ ಸ್ಥಳವಾದ ಹಂಪಿ ಬರಬರುತ್ತಾ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ. ವಿದೇಶಿ ಹುಡುಗಿ ಸ್ಥಳೀಯ ಹುಡುಗನ ಜೊತೆ ಸೇರಿ ಅನೈತಿಕ ಕ್ರಿಯೆಯಲ್ಲಿ ತೊಡಗಿದ್ದು, ಇದು ಸ್ಥಳೀಯರು ಮುಜುಗರಕ್ಕೆ ಒಳಗಾಗುವಂತೆ ಮಾಡಿದೆ.

    ಇತ್ತೀಚೆಗಷ್ಟೇ ವಿದೇಶಿಗರು ಮದ್ಯ ಬಾಟಲ್‍ಗಳನ್ನು ದೇವಾಲಯದ ಒಳಗೆ ತಂದು ಕುಡಿಯುತ್ತಿದ್ದರು. ಅಷ್ಟೇ ಅಲ್ಲದೇ ಚಪ್ಪಲಿಯನ್ನು ಕೂಡ ಹಾಕಿಕೊಂಡು ದೇವಾಲಯದ ಒಳಗಡೆಲ್ಲಾ ಓಡಾಡಿದ್ದರು. ಆದರೆ ಈಗ ಈ ವಿದೇಶಿಯರಿಂದ ಮತ್ತೆ ಅನೈತಿಕ ಚಟುವಟಿಕೆ ನಡೆದಿದೆ.

    ಹಂಪಿಯ ವಿರುಪಾಕ್ಷೇಶ್ವರ ದೇವಾಲಯದ ಹಿಂಭಾಗದಲ್ಲಿನ ವಾಟರ್ ಫಾಲ್ಸ್ ಬಳಿಯ ನಿರ್ಜನ ಪ್ರದೇಶದಲ್ಲಿ ವಿದೇಶಿ ಮಹಿಳೆಯೊಬ್ಬಳು ಸ್ಥಳೀಯ ಯುವಕನೊಂದಿಗೆ ರಾಜಾರೋಷವಾಗಿ ಕಾಮಕೇಳಿಯಲ್ಲಿ ತೊಡಗಿದ್ದಾಳೆ. ದೇವಾಲಯದ ಹಿಂದೆ ಹೋಗಿ ಯಾರು ಇಲ್ಲದ್ದನ್ನು ನೋಡಿ ಸ್ಥಳೀಯ ಹುಡುಗ ಬಟ್ಟೆ ಬಿಚ್ಚಿ ವಿದೇಶಿ ಹುಡುಗಿಯ ತೊಡೆ ಮೇಲೆ ಮಲಗಿಕೊಂಡು ಅಸಭ್ಯವಾಗಿ ಕಾಮಕೇಳಿಯಲ್ಲಿ ತೊಡಗಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಇಂಗ್ಲೆಂಡ್ ದೇಶದ ಮಹಿಳೆಯೆಂದು ಗುರುತಿಸಿದ್ದು, ಕಾಮಕೇಳಿಯಲ್ಲಿ ತೊಡಗಿರುವ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದಂತೆ ಕ್ಯಾಮೆರಾ ಕಂಡು ಓಡಿ ಹೋಗಿದ್ದಾರೆ. ಆದರೆ ಅಲ್ಲಿನ ಸುತ್ತಮುತ್ತಲಿನ ಸ್ಥಳೀಯರು ಇದನ್ನು ನೋಡಿ ಮುಜುಗರಕ್ಕೆ ಒಳಗಾಗುವಂತೆ ಮಾಡಿದೆ.