Tag: ರೊಮ್ಯಾಂಟಿಕ್

  • ಹಾಡುಗಳು ರೊಮ್ಯಾಂಟಿಕ್ ಆಗಿಲ್ಲ ಅಂತ ಹೇಳೋಕೆ ನಾನು ಮೂರ್ಖಳಲ್ಲ : ರಶ್ಮಿಕಾ ಮಂದಣ್ಣ

    ಹಾಡುಗಳು ರೊಮ್ಯಾಂಟಿಕ್ ಆಗಿಲ್ಲ ಅಂತ ಹೇಳೋಕೆ ನಾನು ಮೂರ್ಖಳಲ್ಲ : ರಶ್ಮಿಕಾ ಮಂದಣ್ಣ

    ಸಿನಿಮಾಗಳಲ್ಲಿ ಬಾಲಿವುಡ್ ಹಾಡುಗಳಷ್ಟು ದಕ್ಷಿಣದ ಸಾಂಗ್ಸ್ ರೊಮ್ಯಾಂಟಿಕ್ ಆಗಿ ಇರುವುದಿಲ್ಲ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದ ಮಾತು ಭಾರೀ ಚರ್ಚೆಗೆ ಕಾರಣವಾಗಿತ್ತು. ದಕ್ಷಿಣದ ಸಿನಿಮಾಗಳಿಂದಲೇ ಬಾಲಿವುಡ್ ಗೆ ಪರಿಚಯವಾಗಿದ್ದ ರಶ್ಮಿಕಾ ಈ ರೀತಿ ಮಾತನಾಡಿದ್ದು, ಅವರ ಅಹಂಕಾರಕ್ಕೆ ಹಿಡಿದ ಕನ್ನಡಿ ಎಂದೇ ಹಲವರು ಪ್ರತಿಕ್ರಿಯಿಸಿದ್ದರು. ಸಾಕಷ್ಟು ಟ್ರೋಲ್ ಪೇಜ್ ಗಳು ಇದರ ಬಗ್ಗೆ ಬೆಳಕುವ ಚೆಲ್ಲುವ ಪ್ರಯತ್ನ ಮಾಡಿದ್ದವು. ಇದೀಗ ಆ ಮಾತಿಗೆ ಸ್ವತಃ ರಶ್ಮಿಕಾ ಸ್ಪಷ್ಟನೆ ನೀಡಿದ್ದಾರೆ.

    ಮಾಧ್ಯಮವೊಂದರ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ರಶ್ಮಿಕಾ, ‘ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಅಥವಾ ನಾನು ಮಾತನಾಡುವುದನ್ನು ಕಲಿಯಬೇಕಿದೆ. ನಾನು ಏನೇ ಮಾತನಾಡಿದರೂ ಅದು ವಿವಾದವಾಗಿಯೇ ಬದಲಾಗುತ್ತದೆ. ರೊಮ್ಯಾಂಟಿಕ್ ಹಾಡುಗಳ ಕುರಿತಾಗಿ ನಾನು ಆ ರೀತಿಯಲ್ಲಿ ಮಾತನಾಡಿರಲಿಲ್ಲ. ದಕ್ಷಿಣದ ಹಾಡುಗಳು ರೊಮ್ಯಾಂಟಿಕ್ ಆಗಿಲ್ಲ ಅಂತ ಹೇಳುವುದಕ್ಕೆ ನಾನು ಮೂರ್ಖಳಲ್ಲ’ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ತೆರಿಗೆ ಇಲಾಖೆ ವಿರುದ್ದ ಹೈಕೋರ್ಟ್ ಮೆಟ್ಟಿಲು ಏರಿದ ನಟಿ ಅನುಷ್ಕಾ ಶರ್ಮಾ

    ರಶ್ಮಿಕಾ ಆಡುತ್ತಿರುವ ಮಾತುಗಳೇ ಅವರಿಗೆ ಮುಳುವಾಗುತ್ತಿವೆ ಎನ್ನುವ ಅರಿವು ಈಗ ಬಂದಂತಿವೆ. ಹಾಗಾಗಿ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡುವೆ ಎಂದೂ ಅವರು ಹೇಳಿಕೊಂಡಿದ್ದಾರೆ. ಇಂಥದ್ದೇ ವಿಚಾರಕ್ಕಾಗಿ ಈ ಹಿಂದೆ ಇವರು, ಕಿಚ್ಚ ಸುದೀಪ್ ಅವರಿಂದ ಪಾಠ ಮಾಡಿಸಿಕೊಂಡಿದ್ದರು. ಸೆಲೆಬ್ರಿಟಿಗಳು ಆಗಿದ್ದವರು, ಹೇಗೆ ವರ್ತಿಸಬೇಕು ಎನ್ನುವ ಕುರಿತು ಕಿಚ್ಚ ಮೊನ್ನೆಯಷ್ಟೇ ಮಾತನಾಡಿದ್ದರು. ಈ ವಿಷಯ ಕೂಡ ರಶ್ಮಿಕಾ ಅವರಿಗೆ ತಲುಪಿದೆ. ಹಾಗಾಗಿಯೇ ಮಾತಿನ ಕುರಿತಾಗಿ ಅವರು ಪ್ರತಿಕ್ರಿಯಿಸಿದ್ದಾರೆ.

    ಸದ್ಯ ರಶ್ಮಿಕಾ ಮಂದಣ್ಣ ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ. ಅವರ ಹಿಂದಿ ಸಿನಿಮಾವೊಂದು ಬಿಡುಗಡೆ ಸಿದ್ಧವಾಗಿದ್ದು, ಆ ಚಿತ್ರದ ಪ್ರಚಾರದಲ್ಲಿ ಅವರು ತೊಡಗಿದ್ದಾರೆ. ಕಳೆದ ಒಂದು ವಾರದಿಂದಲೂ ಅವರು ಮುಂಬೈನಲ್ಲೇ ಠಿಕಾಣಿ ಹೂಡಿದ್ದು, ಬಾಲಿವುಡ್ ನಲ್ಲಿ ಈ ಸಿನಿಮಾ ಅವರಿಗೊಂದು ನೆಲೆ ಕಲ್ಪಿಸಬಹುದು ಎನ್ನಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪವಿತ್ರಾ ಲೋಕೇಶ್ ಮತ್ತು ನರೇಶ್ ರೊಮ್ಯಾಂಟಿಕ್ ವಿಡಿಯೋ ರಿಲೀಸ್

    ಪವಿತ್ರಾ ಲೋಕೇಶ್ ಮತ್ತು ನರೇಶ್ ರೊಮ್ಯಾಂಟಿಕ್ ವಿಡಿಯೋ ರಿಲೀಸ್

    ನ್ನಡದ ನಟಿ ಪವಿತ್ರಾ ಲೋಕೇಶ್ (Pavitra Lokesh) ಮತ್ತು ತೆಲುಗು ನಟ ನರೇಶ್ (Naresh) ಸಂಬಂಧದ ಬಗ್ಗೆ ಏನೆಲ್ಲ ಸುದ್ದಿಗಳು ಹರಿದಾಡಿದವು. ನರೇಶ್ ಪತ್ನಿ ರಮ್ಯಾ ರಘುಪತಿ (Ramya Raghupathi) ದೊಡ್ಡ ಗಲಾಟೆಯೇ ಮಾಡಿದರು. ಪವಿತ್ರಾ ಲೋಕೇಶ್ ಮತ್ತು ನರೇಶ್ ಇಬ್ಬರೂ ಮೈಸೂರು ಹೋಟೆಲ್ ವೊಂದರಲ್ಲಿ ಸಿಕ್ಕಾಕಿಕೊಂಡು ಈ ಘಟನೆಗೆ ಬೇರೆಯದ್ದೇ ದಿಕ್ಕು ತೋರಿಸಿದರು. ಈ ಘಟನೆ ಅಲ್ಲಿಗೆ ನಾನಾ ರೂಪ ಪಡೆದುಕೊಂಡಿತು.

    ಅಷ್ಟಾಗಿಯೂ ನರೇಶ್ ಮತ್ತು ಪವಿತ್ರಾ ಒಟ್ಟಿಗೆ ಕಾಣಿಸಿಕೊಳ್ಳುವುದನ್ನು ಬಿಟ್ಟಿಲ್ಲ. ನಿನ್ನೆಯಷ್ಟೇ ಇಬ್ಬರೂ ವಿಡಿಯೋವೊಂದನ್ನು ಮಾಡಿದ್ದು, ಆ ವಿಡಿಯೋ (Video) ಸಖತ್ ವೈರಲ್ ಕೂಡ ಹಾಕಿದೆ. ಪವಿತ್ರಾ ಲೋಕೇಶ್ ಭುಜದ ಮೇಲೆ ಕೈ ಇಟ್ಟು ಸಖತ್ ರೊಮ್ಯಾಂಟಿಕ್ (Romantic) ಆಗಿ ನರೇಶ್ ಮಾತನಾಡಿದ್ದಾರೆ. ತಾವಿಬ್ಬರೂ ಗಂಡ ಹೆಂಡತಿಯಾಗಿ ನಟಿಸಿರುವ ಕುರಿತು ಮತ್ತು ಆ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಬಂದಿರುವ ಕುರಿತು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ತಮಗಿಂತ 33 ವರ್ಷ ಕಿರಿಯವಳ ಜೊತೆ ಪ್ರೀತಿಯಲ್ಲಿ ಬಿದ್ದ ನಟ ಪೃಥ್ವಿರಾಜ್

    ಖ್ಯಾತ ತೆಲುಗು ನಟ ಅಲಿ ಆಲಿ ನಿರ್ಮಿಸಿ, ನಟಿಸಿರುವ  ‘ಅಂದರೂ ಬಾಗುಂಡಾಲಿ ಅಂದುಲೋ ನೇನುಂಡಾಲಿ’ ಸಿನಿಮಾ ಆಹಾ ಓಟಿಟಿ ವೇದಿಕೆಯಲ್ಲಿ ಬಿಡುಗಡೆ ಆಗಿದೆ. ಈ ಚಿತ್ರಕ್ಕೆ ಪ್ರೇಕ್ಷಕರು ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಪವಿತ್ರಾ ಲೋಕೇಶ್ ಪಾತ್ರವನ್ನು ಮೆಚ್ಚಿ ತುಂಬಾ ಜನರು ಸಂದೇಶ ಕಳುಹಿಸಿದ್ದಾರಂತೆ. ಅದಕ್ಕಾಗಿ ನರೇಶ್ ಮತ್ತು ಪವಿತ್ರಾ ವಿಡಿಯೋ ಮೂಲಕ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

    ಈ ವಿಡಿಯೋ ನೋಡಿದ ಅನೇಕರು ಈ ಜೋಡಿಯ ರಿಲೇಶನ್ ಶಿಪ್ ಬಗ್ಗೆ ಮತ್ತೆ ಮಾತನಾಡುವುದಕ್ಕೆ ಶುರು ಮಾಡಿದ್ದಾರೆ. ಇಷ್ಟೊಂದು ಕ್ಲೋಸ್ ಆಗಿ, ರೊಮ್ಯಾಂಟಿಕ್ ಆಗಿ ಇರುವ ಜೋಡಿಯನ್ನು ಕಂಡರೆ ಎಲ್ಲರಿಗೂ ಹಾಗೆಯೇ ಅನಿಸುತ್ತದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಈ ಜೋಡಿಯ ಬಗ್ಗೆ ನೆಗೆಟಿವ್ ಕಾಮೆಂಟ್ ಗಳನ್ನು ಕೂಡ ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಶ್ಮಿಕಾ ಮಂದಣ್ಣ ಜೊತೆ ರೊಮ್ಯಾಂಟಿಕ್ ಸಿನಿಮಾ ಮಾಡಿ, ನಿವೃತ್ತಿ ಘೋಷಿಸಿದ ದುಲ್ಕರ್ ಸಲ್ಮಾನ್

    ರಶ್ಮಿಕಾ ಮಂದಣ್ಣ ಜೊತೆ ರೊಮ್ಯಾಂಟಿಕ್ ಸಿನಿಮಾ ಮಾಡಿ, ನಿವೃತ್ತಿ ಘೋಷಿಸಿದ ದುಲ್ಕರ್ ಸಲ್ಮಾನ್

    ಲಯಾಳಂ ಸಿನಿಮಾ ರಂಗದ ಖ್ಯಾತ ನಟ ದುಲ್ಕರ್ ಸಲ್ಮಾನ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಸದ್ಯ ಅವರು ರಶ್ಮಿಕಾ ಮಂದಣ್ಣ ಜೊತೆ ಸೀತಾ ರಾಮಂ ಸಿನಿಮಾ ಮಾಡಿದ್ದು, ಈ ಚಿತ್ರದ ಬಿಡುಗಡೆಗಾಗಿ ಪ್ರಚಾರ ಮಾಡುತ್ತಿದ್ದಾರೆ. ಇದೇ ಆಗಸ್ಟ್ 5 ರಂದು ಸಿನಿಮಾ ದೇಶಾದ್ಯಂತ ಬಿಡುಗಡೆ ಆಗುತ್ತಿದ್ದು, ಸಿನಿಮಾ ರಿಲೀಸಿಗೂ ಮುನ್ನ ಶಾಕಿಂಗ್ ಹೇಳಿಕೆಯ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.

    ಆಗಸ್ಟ್ 5 ರಂದು ರಿಲೀಸ್ ಆಗುತ್ತಿರುವ ‘ಸೀತಾ ರಾಮಂ’ ಸಿನಿಮಾವು ರೊಮ್ಯಾಂಟಿಕ್ ಕಥೆಯನ್ನು ಹೊಂದಿದ್ದು, ಈಗಾಗಲೇ ರಿಲೀಸ್ ಆಗಿರುವ ಟೀಸರ್ ಮತ್ತು ಟ್ರೈಲರ್ ಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಅಲ್ಲದೇ, ದುಲ್ಕರ್ ಸಲ್ಮಾನ್ ಈಗಾಗಲೇ ಅನೇಕ ರೊಮ್ಯಾಂಟಿಕ್ ಸಿನಿಮಾಗಳನ್ನು ಮಾಡಿದ್ದು, ಆ ಸಿನಿಮಾಗಳಿಗಿಂತಲೂ ಇದು ಚೆನ್ನಾಗಿ ಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ, ಇನ್ಮುಂದೆ ಈ ರೀತಿಯ ಚಿತ್ರಗಳನ್ನು ಮಾಡಲಾರೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ ದುಲ್ಕರ್. ಇದನ್ನೂ ಓದಿ:Breaking- ಅಭಿಮಾನಿಗಳಿಗೆ ನಿವೇದಿತಾ ಗೌಡ ಗುಡ್ ನ್ಯೂಸ್

    ನಾನು ರೊಮ್ಯಾಂಟಿಕ್ ಹೀರೋ ಆಗಿ ಜನರ ಮನಸ್ಸು ಗೆದ್ದಿದ್ದೇನೆ. ನಾನು ಈವರೆಗೂ ನಟಿಸಿರುವ ಸಿನಿಮಾಗಳಲ್ಲಿ ಹೆಚ್ಚಿನ ಚಿತ್ರಗಳು ಇಂಥದ್ದೇ ಕಥೆಯನ್ನು ಆಧರಿಸಿವೆ. ಆದರೆ, ಇನ್ಮುಂದೆ ರೊಮ್ಯಾಂಟಿಕ್ ಚಿತ್ರಗಳಲ್ಲಿ ನಟಿಸಲಾರೆ. ಮಾಸ್ ಚಿತ್ರಗಳತ್ತ ಮುಖ ಮಾಡುವೆ ಎಂದಿದ್ದಾರೆ. ಇಂಥದ್ದೊಂದು ನಿರ್ಧಾರಕ್ಕೆ ಕಾರಣವನ್ನು ಅವರು ತಿಳಿಸಿಲ್ಲ. ಆದರೆ, ಅಭಿಮಾನಿಗಳಂತೂ ಭಾರೀ ನಿರಾಸೆಯನ್ನು ವ್ಯಕ್ತ ಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]