Tag: ರೊಟ್ಟಿ

  • ರೋಟಿ ಹಂಚಲು ತಡಮಾಡಿದ್ದಕ್ಕೆ ಬೇರೆ ಯುವತಿಯನ್ನು ಮದುವೆಯಾದ ವರ

    ರೋಟಿ ಹಂಚಲು ತಡಮಾಡಿದ್ದಕ್ಕೆ ಬೇರೆ ಯುವತಿಯನ್ನು ಮದುವೆಯಾದ ವರ

    -ವರನ ವಿರುದ್ಧ ಮದುವೆಯಾಗಬೇಕಿದ್ದ ಯುವತಿ ದೂರು

    ಲಕ್ನೋ: ಮದುವೆಯಲ್ಲಿ ರೋಟಿ ಹಂಚಲು ತಡಮಾಡಿದ್ದಕ್ಕೆ ಬೇರೆ ಯುವತಿಯನ್ನು ವರ ಮದುವೆಯಾಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ (Uttar Pradesh) ಚಂದೌಲಿ ಜಿಲ್ಲೆಯ (Chandauli District) ಹಮೀದ್‌ಪುರ (Hamidpur) ಗ್ರಾಮದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ.

    ಊಟ ಬಡಿಸಲು ತಡವಾದ ಕಾರಣಕ್ಕೆ ವರನು ತನ್ನ ಮದುವೆಯಿಂದ ಹೊರನಡೆದು ಬೇರೆ ಯುವತಿಯೊಂದಿಗೆ ಮದುವೆಯಾಗಿದ್ದಾನೆ. ಇದನ್ನು ತಿಳಿದ ವಧು ಆತನ ವಿರುದ್ಧ ದೂರು ದಾಖಲಿಸಿದ್ದಾಳೆ.ಇದನ್ನೂ ಓದಿ: Mandya | ಠಾಣೆಯಲ್ಲೇ ಪೊಲೀಸ್ ಪೇದೆ ಮೇಲೆ ವ್ಯಕ್ತಿಯಿಂದ ಹಲ್ಲೆ

    ಏಳು ತಿಂಗಳ ಹಿಂದೆ ಮೆಹ್ತಾಬ್ ಎಂಬ ಯುವಕನೊಂದಿಗೆ ವಧುವಿನ ವಿವಾಹ ನಿಶ್ಚಯವಾಗಿತ್ತು. ಡಿ.22 ರಂದು ಕಾರ್ಯಕ್ರಮಗಳು ಪ್ರಾರಂಭವಾಗಿದ್ದವು. ಈ ವೇಳೆ ವರನ ಕಡೆಯವರಿಗೆ ಊಟವನ್ನು ತಡವಾಗಿ ಬಡಿಸಿದ್ದಕ್ಕೆ ಗಲಾಟೆ ಮಾಡಿದ್ದಾರೆ. ವಧುವಿನ ಕಡೆಯವರು ವರನ ಕುಟುಂಬಸ್ಥರನ್ನು ಸಮಾಧಾನಪಡಿಸಲು ಪ್ರಯತ್ನಪಟ್ಟರು. 1.5 ಲಕ್ಷ ರೂ. ವರದಕ್ಷಿಣೆ ಸೇರಿದಂತೆ 7 ಲಕ್ಷ ರೂ. ಆರ್ಥಿಕ ನಷ್ಟವನ್ನು ಹೇಳಿಕೊಂಡರು. ಆದರೆ ವರನ ಕಡೆಯವರು ವಧುವಿನ ಮನೆಯವರನ್ನು ದೂಷಿಸುತ್ತಾ ಅಲ್ಲಿಂದ ಹೊರನಡೆದಿದ್ದಾರೆ.

    ಬಳಿಕ ವರ ಬೇರೆ ಯುವತಿಯನ್ನು ಮದುವೆಯಾಗಿರುವುದನ್ನು ತಿಳಿದು ವಧು ಇಂಡಸ್ಟ್ರಿಯಲ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ. ಆದರೆ ವರನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದಾಗ ಡಿ.24 ರಂದು ಪೊಲೀಸ್ ವರಿಷ್ಠಾಧಿಕಾರಿಗೆ ವಧು ಮನವಿ ಮಾಡಿಕೊಂಡಿದ್ದಾರೆ. ಆರ್ಥಿಕ ನಷ್ಟ ಹಾಗೂ ವರನ ಕಡೆಯ ಐದು ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

    ಕ್ರಮ ಕೈಗೊಳ್ಳುವುದಾಗಿ ಎಸ್‌ಪಿ ಭರವಸೆ ನೀಡಿದ್ದು, ಪೊಲೀಸರಿಗೆ ವರನ ಕುಟುಂಬಸ್ಥರನ್ನು ಸಂಪರ್ಕಿಸುವAತೆ ಸೂಚನೆ ನೀಡಿದ್ದಾರೆ.ಇದನ್ನೂ ಓದಿ: ಮನಮೋಹನ್ ಸಿಂಗ್‌ಗೆ ಕೇಂದ್ರ ಸರ್ಕಾರದಿಂದ ಅವಮಾನ – ರಾಹುಲ್ ಗಾಂಧಿ ಆರೋಪ

  • ಹಿಟ್ಟಿನ ಮೇಲೆ ಉಗುಳಿ ರೊಟ್ಟಿ ಮಾಡಿದವನು ಸೇರಿ 5 ಜನ ಅರೆಸ್ಟ್

    ಹಿಟ್ಟಿನ ಮೇಲೆ ಉಗುಳಿ ರೊಟ್ಟಿ ಮಾಡಿದವನು ಸೇರಿ 5 ಜನ ಅರೆಸ್ಟ್

    ಲಕ್ನೋ: ಬೀದಿ ವ್ಯಾಪಾರಿಯೊಬ್ಬ ಹಿಟ್ಟಿನ ಮೇಲೆ ಉಗುಳಿ ರೊಟ್ಟಿ ಮಾಡುತ್ತಿದ್ದ ವೀಡಿಯೋ ವೈರಲ್ ಆಗಿದ್ದು, ಆರೋಗ್ಯ ದೃಷ್ಟಿಯಿಂದ ಅಂಗಡಿಯವನನ್ನು ಸೇರಿ 5 ಜನರನ್ನು ಪೊಲೀಸರು ಬಂಧಿಸಿದ್ದಾರೆ.

    ಲಕ್ನೋದ ಹೊರವಲಯದಲ್ಲಿರುವ ಕಾಕೋರಿಯ ರಸ್ತೆಬದಿಯಲ್ಲಿ ಉಪಾಹಾರ ಗೃಹವಿತ್ತು. ಆ ಅಂಗಡಿಯವನು ರೊಟ್ಟಿಯನ್ನು ತಯಾರಿಸಲು ಹಿಟ್ಟಿನ ಮೇಲೆ ಉಗುಳುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ 22 ಸೆಕೆಂಡಿನ ವೀಡಿಯೋ ಸೊಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಈ ಪರಿಣಾಮ ಅಂಗಡಿಯವನನ್ನು ಸೇರಿ ಐದು ಸಹಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಕೋವಿಡ್ ನಿಯಮ ಉಲ್ಲಂಘನೆ – ಪ್ರಭು ಚವ್ಹಾಣ್ ವಿರುದ್ಧ ದೂರು

    ಈ ಕುರಿತು ಪ್ರತಿಕ್ರಿಯಿಸಿದ ಕಕೋರಿ ಸಹಾಯಕ ಪೊಲೀಸ್ ಕಮಿಷನರ್ ಅಶುತೋಷ್ ಕುಮಾರ್, ಧಾಬಾ ಮಾಲೀಕ ಯಾಕೂಬ್ ಮತ್ತು ಡ್ಯಾನಿಶ್, ಹಫೀಜ್, ಮುಖ್ತಾರ್, ಫಿರೋಜ್ ಮತ್ತು ಅನ್ವರ್‍ರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

    ಆರೋಪಿಗಳ ವಿರುದ್ಧ ರೋಗ ಹರಡಿಸುವ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕೋವಿಡ್ ಸಮಯದಲ್ಲಿ ಈ ರೀತಿಯ ಕೃತ್ಯ ಮಾಡಿದರುವುದು ದೊಡ್ಡ ಅಪರಾಧವಾಗಿದೆ. ಈ ರೀತಿ ರೊಟ್ಟಿ ಮಾಡುವುದರಿಂದ ಸೋಂಕು ಹೆಚ್ಚುತ್ತೆ. ಇವರ ನಿರ್ಲಕ್ಷ್ಯ ಸೋಂಕು ಹರಡಲು ದಾರಿಯಾಗುತ್ತೆ. ಇವರು ಸೋಂಕನ್ನು ಹರಡಲು ಮಾರಣಾಂತಿಕ ಕೃತ್ಯ ಎಸಗಿದ್ದಾರೆ ಎಂದರು. ಇದನ್ನೂ ಓದಿ: ನೆಟ್ಟಿಗರ ಆಕ್ರೋಶಕ್ಕೆ ಮಣಿದು ಸೈನಾ ಬಳಿ ಕ್ಷಮೆಯಾಚಿಸಿದ ಸಿದ್ದಾರ್ಥ್

    POLICE JEEP

    ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಸುಶೀಲ್ ರಜಪೂತ್ ಅಪ್ಲೋಡ್ ಮಾಡಿದ್ದಾನೆ. ವೀಡಿಯೋವನ್ನು ದೂರದಿಂದ ಚಿತ್ರೀಕರಿಸಲಾಗಿದೆ. ಅಡುಗೆಯವರು ನಿಜವಾಗಿಯೂ ಉಗುಳಿದ್ದಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಅದಕ್ಕೆ ನಾವು ಈ ಆರೋಪವನ್ನು ಖಚಿತಪಡಿಸಿಕೊಳ್ಳಲು ತಾಂತ್ರಿಕ ನೆರವು ಪಡೆಯುತ್ತೇವೆ ಎಂದು ವಿವರಿಸಿದರು.

  • ಗವಿಸಿದ್ದೇಶ್ವರ ಜಾತ್ರೆಗೆ ಕ್ಷಣಗಣನೆ- ನೂರಾರು ಮಹಿಳೆಯರಿಂದ ರೊಟ್ಟಿ ತಯಾರಿ

    ಗವಿಸಿದ್ದೇಶ್ವರ ಜಾತ್ರೆಗೆ ಕ್ಷಣಗಣನೆ- ನೂರಾರು ಮಹಿಳೆಯರಿಂದ ರೊಟ್ಟಿ ತಯಾರಿ

    ಕೊಪ್ಪಳ: ದಕ್ಷಿಣ ಭಾರತ ಮಹಾ ಕುಂಭಮೇಳವೆಂದೇ ಪ್ರಖ್ಯಾತಿ ಪಡೆದಂತ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಕ್ಷಣಗಣನೇ ಆರಂಭವಾಗಿದೆ. ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗಾಗಿ ಪ್ರಸಾದದ ವ್ಯವಸ್ಥೆಗಾಗಿ ಜಿಲ್ಲೆಯ ಜನತೆ ರೊಟ್ಟಿ ತಯಾರಿಯಲ್ಲಿ ತೊಡಗಿದ್ದಾರೆ.

    ಮಹಾಕುಂಭ ಮೇಳವೆಂದೇ ಪ್ರಖ್ಯಾತಿ ಪಡೆದಂತ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗಾಗಿ ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮದಲ್ಲಿ ಮಹಿಳೆಯರು ರೊಟ್ಟಿ ತಯಾರಿಸುತ್ತಿದ್ದಾರೆ. ಈ ಜಾತ್ರೆ ಬಂತೆಂದೆರೆ ಸಾಕು ಕೊಪ್ಪಳದ ಮಹಿಳೆಯರಿಗೆ, ಮಕ್ಕಳಿಗೆ, ಎಲ್ಲಾ ಜನರಲ್ಲಿ ಎಲ್ಲಿಲ್ಲದ ಉತ್ಸಾಹ. ಅಜ್ಜನ ಜಾತ್ರೆಗಾಗಿ ಸರ್ವರು ಸೇವೆ ಸಲ್ಲಿಸುವುದು ಇಲ್ಲಿನ ವಿಶೇಷ. ಅದಕ್ಕಾಗಿ ಹಟ್ಟಿ ಗ್ರಾಮದ ಜನತೆ, ಈ ಜಾತ್ರೆಗಾಗಿ 2 ಕ್ವಿಂಟಾಲ್ ರೊಟ್ಟಿ ಮಾಡುತ್ತಿದ್ದಾರೆ.

    ಅಜ್ಜನ ಜಾತ್ರೆಗೆ ರೊಟ್ಟಿ ಮಾಡಬೇಕೆಂದರೆ ಪ್ರತಿಯೊಬ್ಬ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡು ರೊಟ್ಟಿ ಸೇವೆ ಸಲ್ಲಿಸುತ್ತಿದ್ದಾರೆ. ಕೊಪ್ಪಳದ ಹಟ್ಟಿ ಗ್ರಾಮಸ್ಥರು ಇಷ್ಟೊಂದು ಪ್ರಮಾಣದಲ್ಲಿ ರೊಟ್ಟಿ ಮಾಡುತ್ತಿರುವುದನ್ನು ಅರಿತ ಗವಿಸಿದ್ದೇಶ್ವರ ಅಜ್ಜರು ಗ್ರಾಮಕ್ಕೆ ಆಗಮಿಸಿ ಗ್ರಾಮದ ಮಹಿಳೆಯರು ಮತ್ತು ಮಕ್ಕಳ ಸೇವೆಯನ್ನು ನೋಡಿ ಆಶೀರ್ವಾದಿಸಿದರು.

    ಇದೇ ತಿಂಗಳ 12 ರಂದು ಗವಿಸಿದ್ದೇಶ್ವರ ಜಾತ್ರೆ ಇದೆ. ಹೀಗಾಗಿ ಪ್ರತಿವರ್ಷದಂತೆ ಈ ವರ್ಷವು ಕೂಡ ಜಾತ್ರೆಯ ಸಡಗರ ಸಂಭ್ರಮ ಜಿಲ್ಲೆಯಾದ್ಯಂತ ಮನೆ ಮಾಡಿದೆ. ಅಜ್ಜನ ಜಾತ್ರೆಗೆ ಕಾತುರದಿಂದ ಕಾಯುತ್ತಿದ್ದಾರೆ. ಪ್ರತಿ ಗ್ರಾಮಸ್ಥರು ತಮ್ಮ ತಮ್ಮ ಕೈಲಾದ ಸೇವೆಯನ್ನು ಚಾಚು ತಪ್ಪದೇ ಮಠಕ್ಕೆ ಅರ್ಪಿಸುತ್ತಿದ್ದಾರೆ.

  • ಸಾಲಮನ್ನಾ ಮಾಡಿದ ಹೆಚ್‍ಡಿಕೆಗೆ ಜೋಳದ ರೊಟ್ಟಿ, ಚಟ್ನಿ ಪುಡಿ ಗಿಫ್ಟ್ ಕೊಟ್ಟ ರೈತ

    ಸಾಲಮನ್ನಾ ಮಾಡಿದ ಹೆಚ್‍ಡಿಕೆಗೆ ಜೋಳದ ರೊಟ್ಟಿ, ಚಟ್ನಿ ಪುಡಿ ಗಿಫ್ಟ್ ಕೊಟ್ಟ ರೈತ

    ಬೆಂಗಳೂರು : ಮಾಜಿ ಸಿಎಂ ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಿದ್ದಾಗ ಸಾಲಮನ್ನಾ ಕಾರ್ಯಕ್ರಮವನ್ನ ಜಾರಿಗೆ ತಂದಿದ್ದರು. ನೂರಾರು ರೈತರು ಇದರ ಪ್ರಯೋಜನವನ್ನು ಪಡೆದರು. ವಿಶೇಷ ಅಂದ್ರೆ ಸಾಲಮನ್ನಾದಿಂದ ಸಹಾಯ ಪಡೆದ ರೈತರೊಬ್ಬರು ಮಾಜಿ ಸಿಎಂ ಕುಮಾರಸ್ವಾಮಿಗೆ ಪ್ರೀತಿಯ ಊಡುಗೊರೆ ಕೊಟ್ಟಿದ್ದಾರೆ.

    ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕು ಕಿರೇಸೂರು ಗ್ರಾಮದ ಗೋವಿಂದಪ್ಪನಿಂದ ಸಾಲಮನ್ನಾ ಮಾಡಿದ ಕುಮಾರಸ್ವಾಮಿ ಅವರಿಗೆ ಪ್ರೀತಿಯ ಉಡುಗೊರೆ ಕಳಿಸಿದ್ದಾರೆ. ಕುಮಾರಸ್ವಾಮಿ ಸಿಎಂ ಅಗಿದ್ದಾಗ ಸಾಲ ಭಾದೆಯಿಂದ ಆತ್ಮಹತ್ಯೆ ಮಾಡಿಕೊಳ್ಳಲು ಗೋವಿಂದಪ್ಪ ನಿರ್ಧಾರ ಮಾಡಿದ್ದರು. ಈ ವೇಳೆ ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ಅಳಲು ತೋಡಿಕೊಂಡಿದ್ದರು. ಪತ್ರಕ್ಕೆ ಸ್ಪಂದಿಸಿದ್ದ ಕುಮಾರಸ್ವಾಮಿ ಸಾಲಮನ್ನಾ ಮಾಡಿದ್ದರು. ಬಳಿಕ ಫೋನ್ ಮೂಲಕ ಗೋವಿಂದಪ್ಪಗೆ ಧೈರ್ಯ ತುಂಬಿದ್ದರು. ಬಳಿಕ ಸಾಲಮನ್ನಾ ಆಗಿ ರೈತ ಗೋವಿಂದಪ್ಪ ಜೀವನ ರೂಪಿಸಿಕೊಂಡಿದ್ದಾರೆ. ಸಾಲಮನ್ನಾ ಮಾಡಿದ್ದಕ್ಕೆ ತನ್ನ ಹೊಲದಲ್ಲಿ ಬೆಳೆದ ಬೆಳೆಯಿಂದ ಜೋಳದ ರೊಟ್ಟಿ, ಶೇಂಗಾ ಚಟ್ನಿಪುಡಿ, ಪಲ್ಯವನ್ನ ತಯಾರಿಸಿ ಕುಮಾರಸ್ವಾಮಿ ಅವರಿಗೆ ಕಳುಹಿಸಿದ್ದಾರೆ.

    ಕೊರಿಯರ್ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ನಿವಾಸಕ್ಕೆ ಉಡುಗೊರೆ ಕಳಿಸಿದ್ದಾರೆ. ಕೊರಿಯರ್ ಬಾಕ್ಸ್ ನೋಡಿ ಮೊದಲು ಆತಂಕಗೊಂಡ ಭದ್ರತಾ ಸಿಬ್ಬಂದಿ, ಅಮೇಲೆ ತೆಗೆದು ನೋಡಿದಾಗ ಜೋಳದ ರೊಟ್ಟಿ, ಚಟ್ನಿ ಪುಡಿ ಇದೆ. ಅಲ್ಲದೆ ಒಂದು ಪತ್ರವನ್ನು ಬರೆದು ತಮ್ಮ ಗಿಫ್ಟ್ ಸ್ವೀಕಾರ ಮಾಡಬೇಕು ಅಂತ ಮನವಿ ಮಾಡಿದ್ದಾರೆ. ರೈತ ಗೋವಿಂದಪ್ಪನ ಪ್ರೀತಿಯ ಉಡುಗೊರೆಗೆ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಭಾವುಕರಾಗಿದ್ದಾರೆ.

  • ಊಟಕ್ಕೆ ರೊಟ್ಟಿ ಮಾಡಿಲ್ಲವೆಂದು ಸಹೋದರಿಗೇ ಗುಂಡಿಕ್ಕಿ ಕೊಂದ

    ಊಟಕ್ಕೆ ರೊಟ್ಟಿ ಮಾಡಿಲ್ಲವೆಂದು ಸಹೋದರಿಗೇ ಗುಂಡಿಕ್ಕಿ ಕೊಂದ

    ಲಕ್ನೋ: ಊಟಕ್ಕೆ ರೊಟ್ಟಿ ಮಾಡಿಲ್ಲ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಯುವಕನೊಬ್ಬ ತನ್ನ ಸಹೋದರಿಯನ್ನು ಗುಂಡಿಕ್ಕಿ ಕೊಂದು ವಿಕೃತಿ ಮೆರೆದಿರುವ ಘಟನೆ ಉತ್ತರಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದಿದೆ.

    ಲಖಿಂಪುರ್ ಖೇರಿಯ ಬರ್ಖೇಡಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬರ್ಖೇಡಾ ಗ್ರಾಮದ ನಿವಾಸಿ ಸೋನು ಸಿಂಗ್ ತನ್ನ ಸೋದರ ಸಂಬಂಧಿ ಸುಮನ್‍ನನ್ನು ಗುಂಡಿಕ್ಕಿ ಕೊಲೆಗೈದಿದ್ದಾನೆ. ಎರಡು ದಿನಗಳ ಹಿಂದೆ ಸುಮನ್ ತನ್ನ ಅತ್ತೆಯ ಮನೆಗೆ ಬಂದಿದ್ದಳು. ಈ ವೇಳೆ ಸೋನುಗೆ ಅಡುಗೆ ಮಾಡಿ ಊಟ ಬಡಿಸುತ್ತಿದ್ದಳು. ಕುಡಿದು ಮನೆಗೆ ಬಂದಿದ್ದ ಸೋನುಗೆ ಆ ಅಡುಗೆ ಇಷ್ಟವಿರಲಿಲ್ಲ. ಆಗ ಆತ ರೊಟ್ಟಿ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದ್ದನು. ಈ ಕಾರಣಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದು, ಮಾತಿಗೆ ಮಾತು ಬೆಳೆದು ಜಗಳವಾಗಿದೆ.

    ಇಷ್ಟಕ್ಕೆ ಕೋಪಗೊಂಡ ಸೋನು ಮನೆಯಲಿದ್ದ ತನ್ನ ತಂದೆಯ ಲೈಸನ್ಸ್ ಇರುವ ಬಂದೂಕನ್ನು ತೆಗೆದುಕೊಂಡು ಸೋದರಿಯ ತಲೆಗೆ ಗುಂಡು ಹೊಡೆದಿದ್ದಾನೆ. ಪರಿಣಾಮ ಆಕೆ ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದಾಳೆ. ಒಂದು ವರ್ಷದ ಹಿಂದೆಯಷ್ಟೇ ಸುಮನ್ ವಿವಾಹವಾಗಿದ್ದರು.

    ಕೆಲವು ವರ್ಷಗಳ ಹಿಂದೆ ಸುಮನ್ ತಂದೆ ತೀರಿಹೋಗಿದ್ದರು. ಆ ಬಳಿಕ ಸುಮನ್‍ ತನ್ನ ಸೋದರ ಸಂಬಂಧಿ ಸೋನುವನ್ನೇ ತನ್ನ ನಿಜವಾದ ಸಹೋದರನಂತೆ ನೋಡಿಕೊಳ್ಳುತ್ತಿದ್ದರು. ಆದರೆ ಸೋನು ಸುಮನ್‍ರನ್ನು ಹತ್ಯೆ ಮಾಡುವಷ್ಟು ಕಟುಕನಾಗುತ್ತಾನೆ ಎಂದು ಯಾರೂ ಊಹೆ ಕೂಡ ಮಾಡಿರಲಿಲ್ಲ.

    ಘಟನೆಯ ಬಳಿಕ ಆರೋಪಿ ಸೋನು ಪರಾರಿ ಆಗಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಸೋನು ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ಸರ್ಪ್ರೈಸ್ ನೋಡಿ ದೊಡ್ಡ ವೇದಿಕೆಯಲ್ಲೇ ಕಣ್ಣೀರಿಟ್ಟ ಹನುಮಂತ

    ಸರ್ಪ್ರೈಸ್ ನೋಡಿ ದೊಡ್ಡ ವೇದಿಕೆಯಲ್ಲೇ ಕಣ್ಣೀರಿಟ್ಟ ಹನುಮಂತ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ “ಸರಿಗಮಪ ಸೀಸನ್ 15′ ರಲ್ಲಿ ಕುರಿಗಾಹಿ ಅಂತಲೇ ಖ್ಯಾತಿ ಪಡೆದಿರುವ ಹನುಮಂತನಿಗೆ ವಾಹಿನಿ ಒಂದು ಸರ್ಪ್ರೈಸ್ ನೀಡಿದೆ. ಆದರೆ ಆ ಸರ್ಪ್ರೈಸ್ ನೋಡಿ ಹನುಮಂತ ವೇದಿಯ ಮೇಲೆಯೇ ಕಣ್ಣೀರು ಹಾಕಿದ್ದಾರೆ.

    ಇದೇ ಭಾನುವಾರ ಖಾಸಗಿ ವಾಹಿನಿಯಲ್ಲಿ ‘ಜೀ ಕುಟುಂಬ ಅವಾರ್ಡ್ಸ್ ‘ಕಾರ್ಯಕ್ರಮ ಪ್ರಸಾರವಾಗಿದೆ. ಈ ಪ್ರಶಸ್ತಿ ಕಾರ್ಯಕ್ರಮದಲ್ಲಿ ಕಿರುತೆರೆಯಲ್ಲಿ ನಟಿಸಿ ಜನರ ಮೆಚ್ಚುಗೆಯನ್ನು ಪಡೆದಿರುವ ನಟ-ನಟಿ ಸೇರಿದಂತೆ ಕಲಾವಿದರಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗಿತ್ತು.

    ಇದೇ ಕಾರ್ಯಕ್ರಮದಲ್ಲಿ ಜನತೆ ಮೆಚ್ಚಿದೆ ಅಚ್ಚುಮೆಚ್ಚಿನ ಸ್ಪರ್ಧಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಗೆ 5 ಮಂದಿ ನಾಮಿನೇಟ್ ಆಗಿದ್ದರು. ಆದರೆ ಕೊನೆಯಲ್ಲಿ ಸರಿಗಮಪ ಸೀಸನ್ 5ರ ಸ್ಪರ್ಧಿ ಹನುಮಂತನಿಗೆ ಪ್ರಶಸ್ತಿ ಲಭಿಸಿದೆ. ಈ ಸಂದರ್ಭದಲ್ಲಿ ಹನುಮಂತ ವೇದಿಕೆಯ ಮೇಲೆ ಹೋಗಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇದೇ ಸಂದರ್ಭದಲ್ಲಿ ಹನುಮಂತ್ ತಮ್ಮ ತಂದೆ-ತಾಯಿ ಇಬ್ಬರನ್ನು ಬಿಟ್ಟು ಬೆಂಗಳೂರಿಗೆ ಬಂದು 20 ದಿನಗಳಾಗಿತ್ತು.

    ಈ ಹಿಂದೆ ಸರಿಗಮಪ ವೇದಿಕೆಯಲ್ಲಿ ತಾಯಿಯನ್ನು ನೆನೆದು ಭಾವುಕರಾಗಿದ್ದರು. ಆದ್ದರಿಂದ ಪ್ರಶಸ್ತಿಯ ಜೊತೆ ಅವರ ತಾಯಿ ಶೀಲವ್ವ ಅವರನ್ನು ಕರೆಸಲಾಗಿತ್ತು. ಆಗ ವೇದಿಕೆಯ ಮೇಲೆ ತಾಯಿಯನ್ನು ನೋಡಿ ಒಂದು ಕ್ಷಣ ಹನುಮಂತ ಮೂಕರಾಗಿ ನಿಂತು ಕಣ್ಣೀರು ಹಾಕಿದ್ದಾರೆ. ಬಳಿಕ ಹನುಮಂತನ ಆಸೆಯಂತೆ ತಮ್ಮ ಮನೆಯಿಂದ ಜೋಳದ ರೊಟ್ಟಿ ತಂದು ತಾಯಿ ಕೈಯಿಂದ ವೇದಿಕೆಯ ಮೇಲೆಯೇ ತಿನ್ನಿಸಿದ್ದಾರೆ.

    ಹನುಮಂತ ಜೊತೆಗೆ ವೇದಿಕೆ ಮೇಲಿದ್ದ ನಿರೂಪಕರು ಕೂಡ ಸೇರಿ ಕುಳಿತು ಅವರ ಕೈಯಿಂದ ಕೈತ್ತುತ್ತು ತಿಂದಿದ್ದಾರೆ. ಹನುಮಂತ ಯಾವುದೇ ಸಂಗೀತ ತರಬೇತಿಗೂ ಹೋಗದೆ, ಕುರಿ ಕಾಯುತ್ತಾ, ಫೋನಿನಲ್ಲಿ ಹಾಡು ಕೇಳುತ್ತಾ ಬೆಳೆದಿದ್ದರು. ಇಂದು ಸರಿಗಮಪ ಕಾರ್ಯಕ್ರಮದ ಮೂಲಕ ಜನತೆಯ ಮೆಚ್ಚುಗೆಯನ್ನು ಪಡೆದು ಕುರಿಗಾಯಿ ಹನುಮಂತ ಎಂದು ಖ್ಯಾತಿ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv