Tag: ರೈಸ್ ಪುಲ್ಲಿಂಗ್ ಯಂತ್ರ

  • ರೈಸ್ ಪುಲ್ಲಿಂಗ್ ದಂಧೆ – ನಿವೃತ್ತ ಕಾನ್ಸ್‌ಟೇಬಲ್ ಸಹಿತ ಮೂವರ ಬಂಧನ

    ರೈಸ್ ಪುಲ್ಲಿಂಗ್ ದಂಧೆ – ನಿವೃತ್ತ ಕಾನ್ಸ್‌ಟೇಬಲ್ ಸಹಿತ ಮೂವರ ಬಂಧನ

    ಬೆಂಗಳೂರು: ರೈಸ್ ಪುಲ್ಲಿಂಗ್ (Rice Pulling) ಹೆಸರಲ್ಲಿ ಕೋಟ್ಯಂತರ ರೂ. ಹಣ ಪಡೆದು ಜನರನ್ನು ವಂಚಿಸುತ್ತಿದ್ದ ಮಾಜಿ ಪೊಲೀಸ್ ಕಾನ್ಸ್‌ಟೇಬಲ್ (Police Constable) ಸೇರಿದಂತೆ ಮೂವರು ಆರೋಪಿಗಳನ್ನು ಸಿಸಿಬಿ (CCB) ಪೊಲೀಸ್ ಬಂಧಿಸಿದ್ದಾರೆ.

    ನಿವೃತ್ತ ಕಾನ್ಸ್‌ಟೇಬಲ್ ನಟೇಶ್, ವೆಂಕಟೇಶ್ ಮತ್ತು ಸೋಮಶೇಖರ್ ಬಂಧಿತ ಆರೋಪಿಗಳು. ಇವರು ಬೆಂಗಳೂರು (Bengaluru) ಹಾಗೂ ರಾಜ್ಯದ ವಿವಿಧೆಡೆ ರೈಸ್ ಪುಲ್ಲಿಂಗ್ ದಂಧೆ ನಡೆಸುತ್ತಿದ್ದರು. ರೈಸ್ ಪುಲ್ಲಿಂಗ್ ಮಿಷನ್ ನೀಡುವುದಾಗಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಸೇನಾ ನೆಲೆಯಲ್ಲಿ ಸೈನಿಕರಿಗೆ ಗುಂಡಿಕ್ಕಿ ಹತ್ಯೆ – ಓರ್ವ ಯೋಧನ ಬಂಧನ 

    ಆರೋಪಿ ನಟೇಶ್ 2007ರಲ್ಲಿ ಸಿಎಆರ್‌ನಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದ. ಬಳಿಕ ರೈಸ್ ಪುಲ್ಲಿಂಗ್ ದಂಧೆಗೆ ಸಿಲುಕಿ ಹಣ ಕಳೆದುಕೊಂಡಿದ್ದ. ಹಣ ಲಾಸ್ ಆದ ಬಳಿಕ ಪೊಲೀಸ್ ಕೆಲಸ ಬಿಟ್ಟು ರಿಯಲ್ ಎಸ್ಟೇಟ್ (Real Estate) ವ್ಯವಹಾರದಲ್ಲಿ ಭಾಗಿಯಾಗಿದ್ದ. ನಂತರ ಇನ್ನಿಬ್ಬರು ಆರೋಪಿಗಳ ಜೊತೆಗೂಡಿ ತಾನೂ ರೈಸ್ ಪುಲ್ಲಿಂಗ್ ದಂಧೆಗೆ ಇಳಿದಿದ್ದ. ಇದನ್ನೂ ಓದಿ: ಹಳೆ ದ್ವೇಷ – ಮಡಿಕೇರಿಯಲ್ಲಿ ಗುಂಡೇಟಿಗೆ ವ್ಯಕ್ತಿ ಬಲಿ 

    ಬಂಧಿತ ಆರೋಪಿಗಳಿಂದ ರೈಸ್ ಪುಲ್ಲಿಂಗ್ ಯಂತ್ರ, 28 ಲಕ್ಷ ರೂ. ನಗದು ಹಾಗೂ 3 ಐಷಾರಾಮಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಾರು-ಬಸ್ ನಡುವೆ ಡಿಕ್ಕಿ ; ಐವರ ಸಾವು