Tag: ರೈಸನ್

  • 50,000 ರೂ.ಗೆ 17 ವರ್ಷದ ಅಪ್ರಾಪ್ತೆಯ ಮಾರಾಟ – ನಾಲ್ವರ ಬಂಧನ

    50,000 ರೂ.ಗೆ 17 ವರ್ಷದ ಅಪ್ರಾಪ್ತೆಯ ಮಾರಾಟ – ನಾಲ್ವರ ಬಂಧನ

    ಭೋಪಾಲ್: 17 ವರ್ಷದ ಅಪ್ರಾಪ್ತೆಯನ್ನು 50 ಸಾವಿರ ರೂ.ಗೆ ಮಾರಾಟ ಮಾಡಿದ ಆರೋಪದ ಮೇಲೆ ಮೂವರು ಪುರುಷರು ಮತ್ತು ಒಬ್ಬ ಮಹಿಳೆಯನ್ನು ಪೊಲೀಸರು ಬಂಧಿಸಿದ ಘಟನೆ ಮಧ್ಯಪ್ರದೇಶದ (Madhya Pradesh) ರೈಸನ್ (Raisen) ಜಿಲ್ಲೆಯಲ್ಲಿ ನಡೆದಿದೆ.

    ಅಪ್ರಾಪ್ತೆ ಮಂಡ್ಲಾ (Mandla) ಜಿಲ್ಲೆಯ ಘುಘ್ರಿ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದವಳಾಗಿದ್ದು, ಜಬಲ್‌ಪುರದ ಡೈರಿಯಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಆರೋಪಿಗಳಾದ ಪಹಲ್ವತಿ ಬಾಯಿ ಹಾಗೂ ಕುಶ್ವಾಹ ಎಂಬವರು ಆಕೆಯನ್ನು ಪರಿಚಯ ಮಾಡಿಕೊಂಡಿದ್ದಾರೆ. ಅಲ್ಲದೇ ಮುಂಬೈನಲ್ಲಿ (Mumbai) ಉತ್ತಮ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಆಕೆಯನ್ನು ಪಟಾಯಿ ಗ್ರಾಮದ ವಿಷ್ಣು ಕುಶ್ವಾಹ ಎಂಬ ವ್ಯಕ್ತಿಗೆ 50 ಸಾವಿರ ರೂ.ಗೆ ಮಾರಾಟ ಮಾಡಿದ್ದಾರೆ. ಇದನ್ನೂ ಓದಿ: ಸಿಹಿ ಹಂಚಿ ರೇಪ್ – 30 ಮಕ್ಕಳ ಮೇಲೆ ಅತ್ಯಾಚಾರಗೈದವ ಕೊನೆಗೂ ದೋಷಿಯಾದ

    ಈ ಮಧ್ಯೆ ಆಕೆಯ ಪೋಷಕರು ಮಗಳು ನಾಪತ್ತೆಯಾಗಿದ್ದಾಳೆ ಎಂದು ಮಾಂಡ್ಲಾ ಪೊಲೀಸರಿಗೆ ದೂರು ನೀಡಿದ್ದರು. ಮಾಂಡ್ಲಾ ಪೊಲೀಸರು ನೀಡಿದ ಮಾಹಿತಿಯ ಆಧಾರದ ಮೇರೆಗೆ ಮಾನವ ಕಳ್ಳಸಾಗಾಣಿಕೆ (Human Trafficking) ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳನ್ನು ಪಟಾಯಿ ಗ್ರಾಮದಲ್ಲಿ ಬಂಧಿಸಲಾಗಿದೆ. ಅಲ್ಲದೇ ಅಪ್ರಾಪ್ತೆಯನ್ನು ಮಾಂಡ್ಲಾ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಡಿಯೋರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರದ್ಧಾ ಉಕೇಯ್ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಖಲಿಸ್ತಾನಿ ಕಮಾಂಡೋ ಹತ್ಯೆ

  • ಕಿಚ್ಚ ಸುದೀಪ್ ಹಾಲಿವುಡ್ ಸಿನಿಮಾದ ಫಸ್ಟ್ ಲುಕ್ ರಿಲೀಸ್

    ಕಿಚ್ಚ ಸುದೀಪ್ ಹಾಲಿವುಡ್ ಸಿನಿಮಾದ ಫಸ್ಟ್ ಲುಕ್ ರಿಲೀಸ್

    ಬೆಂಗಳೂರು: ಕನ್ನಡದ ಮಾಣಿಕ್ಯ ಸುದೀಪ್ ಅಭಿನಯಿಸುತ್ತಿರುವ ಹಾಲಿವುಡ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ರೈಸನ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಕಿಚ್ಚ ಸುದೀಪ್ ಅಮೇರಿಕ ಮಿಲಿಟರಿ ಡ್ರೆಸ್‍ ನಲ್ಲಿ ಮಿಂಚಿದ್ದಾರೆ.

    ಫಸ್ಟ್ ಲುಕ್ ನಲ್ಲಿ ಸುದೀಪ್ ಆಕರ್ಷಕ ಖಡಕ್ ಲುಕ್ ನೀಡಿದ್ದಾರೆ. ಫಸ್ಟ್ ಲುಕ್ ಜೊತೆ ಸೌಂಡ್ ಟ್ರ್ಯಾಕ್ ಕೂಡ ರಿಲೀಸ್ ಆಗಿದ್ದು, ಕಿಚ್ಚ ಸುದೀಪ್ ಹಾಲಿವುಡ್ ಮಂದಿಯ ಕಣ್ಣು ಕುಕ್ಕೋದ್ರಲ್ಲಿ ಡೌಟಿಲ್ಲ. ಅಂದಹಾಗೆ ಸಿನಿಮಾ, ರಿಯಾಲಿಟಿ ಶೋ ಎಂದು ಸಿಕ್ಕಾಪಟ್ಟೆ ಬ್ಯುಸಿ ಇರುವ ಕಿಚ್ಚ ವಿದೇಶಕ್ಕೆ ಹೋಗಿ ಚಿತ್ರಕಥೆ ಕೇಳಿ ಫೋಟೋಶೂಟ್ ಮುಗಿಸಿ ಬರೋದಕ್ಕೆ ಆಗಿರಲಿಲ್ಲ. ಹೀಗಾಗಿಯೇ ಬಿಡುವಿಲ್ಲದ ಕಿಚ್ಚನಿಗಾಗಿ ಹಾಲಿವುಡ್ ನ ರೈಸನ್ ಚಿತ್ರತಂಡ ಸಿನಿಮಾ ಕಥೆ ಹೇಳೋಕೆ ಬೆಂಗಳೂರಿಗೆ ಆಗಮಿಸಿ, ಫೋಟೋಶೂಟ್ ಕೂಡ ನಡೆಸಿತ್ತು.

    ಇದನ್ನೂ ಓದಿ: ಬೆಂಗ್ಳೂರಿಗೆ ಲ್ಯಾಂಡ್ ಆಯ್ತು ಇಂಗ್ಲೀಷ್ ಸಿನಿಮಾ ತಂಡ – ಹಾಲಿವುಡ್ ನ್ನೇ ಮನೆಗೆ ಕರೆಸಿದರಲ್ಲ ಪ್ರಚಂಡ

    ಹಾಲಿವುಡ್ ಎಡ್ಡಿ ಆರ್ಯ ನಿರ್ದೇಶನದ ಈ ಚಿತ್ರಕ್ಕೆ ಫಿಲಿಪ್. ಜೆ. ಪಡ್ಡೂಲ್ ಮ್ಯೂಸಿಕ್ ಇದೆ. ಪೈಲ್ವಾನ್ ಚಿತ್ರದ ಬಳಿಕ ಕಿಚ್ಚ ಸುದೀಪ್ ರೈಸನ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

    https://www.youtube.com/watch?v=SHdc9N8lJKY

  • ಬೆಂಗ್ಳೂರಿಗೆ ಲ್ಯಾಂಡ್ ಆಯ್ತು ಇಂಗ್ಲೀಷ್ ಸಿನಿಮಾ ತಂಡ – ಹಾಲಿವುಡ್ ನ್ನೇ ಮನೆಗೆ ಕರೆಸಿದರಲ್ಲ ಪ್ರಚಂಡ

    ಬೆಂಗ್ಳೂರಿಗೆ ಲ್ಯಾಂಡ್ ಆಯ್ತು ಇಂಗ್ಲೀಷ್ ಸಿನಿಮಾ ತಂಡ – ಹಾಲಿವುಡ್ ನ್ನೇ ಮನೆಗೆ ಕರೆಸಿದರಲ್ಲ ಪ್ರಚಂಡ

    ಬೆಂಗಳೂರು: ಕಿಚ್ಚ ಸುದೀಪ್ ಗೋಸ್ಕರ ಹಾಲಿವುಡ್ ಬೆಂಗಳೂರಿಗೆ ಬರುತ್ತದೆ ಎನ್ನುವ ವಿಷ್ಯವನ್ನು ಈ ಹಿಂದೆ ನಾವು ಹೇಳಿದ್ದೇವೆ. ಅದು ಹೇಗೆ ಸುಳ್ಳಾಗೋಕೆ ಸಾಧ್ಯ ಹೇಳಿ. ಹಾಲಿವುಡ್ ನವರು ಸುದೀಪ್ ಗಾಗಿ ಬೆಂಗಳೂರಿಗೆ ಬರೋದನ್ನು ಹೇಳಿದ ಮೇಲೆ ಬಂದಿರೋದನ್ನೂ ಹೇಳಬೇಕು ತಾನೇ? ಯೆಸ್ ಮೊನ್ನೆಯಷ್ಟೆ ಬೆಂಗಳೂರಿನಲ್ಲಿರುವ ಕಿಚ್ಚನ ಮನೆಗೆ ಹಾಲಿವುಡ್ ಚಿತ್ರತಂಡ ಬಂದಿತ್ತು.

    ಕಿಚ್ಚನ ಹಾಲಿವುಡ್ ಪ್ರಾಜೆಕ್ಟ್ ಬಗ್ಗೆ ನಿಮಗೆಲ್ಲರಿಗೂ ಗೊತ್ತೆಯಿತ್ತು. ಕಳೆದ ಒಂದು ಸುದ್ದಿಗೋಷ್ಟಿಯಲ್ಲಿ ಕಿಚ್ಚ ಹಾಲಿವುಡ್ ತಂಡದವರು ಬೆಂಗಳೂರಿಗೆ ಬರೋದಾಗಿ ಹೇಳಿದರು. ಆ ವಿಷಯ ನಿಮಗೂ ತಿಳಿಸಿದೀವಿ. ಇದೀಗ ಆ ಹಾಲಿವುಡ್ ತಂಡವೇ ಕಿಚ್ಚನ ಮನೆ ಅಂಗಳಕ್ಕೆ ಬಂದಿಳಿದಿದೆ.

    ಸಿನಿಮಾ ರಿಯಾಲಿಟಿ ಶೋ ಎಂದು ಸಿಕ್ಕಾಪಟ್ಟೆ ಬ್ಯುಸಿ ಇರುವ ಕಿಚ್ಚ ವಿದೇಶಕ್ಕೆ ಹೋಗಿ ಚಿತ್ರಕಥೆ ಕೇಳಿ ಫೋಟೋಶೂಟ್ ಮುಗಿಸಿ ಬರೋದು ಆಗದ ಮಾತು. ಹೀಗಾಗಿಯೇ ಬಿಡುವಿಲ್ಲದ ಕಿಚ್ಚನಿಗಾಗಿ ಹಾಲಿವುಡ್ ನ ರೈಸನ್ ಚಿತ್ರತಂಡ ಸಿನಿಮಾ ಕಥೆ ಹೇಳೋಕೆ ಬೆಂಗಳೂರಿಗೆ ಆಗಮಿಸಿದೆ.

    ಕಿಚ್ಚ ಫಸ್ಟ್ ಟೈಂ ಇಂಗ್ಲೀಷ್ ಚಿತ್ರವೊಂದರಲ್ಲಿ ಅಭಿನಯಿಸುತ್ತಿರೋದು. ಹೀಗಾಗಿ ಆ ಚಿತ್ರತಂಡ ಬೆಂಗಳೂರಿಗೆ ಬಂದಾಗ ಸುದ್ದಿಗೋಷ್ಠಿ ಏರ್ಪಡಿಸೋದಾಗಿ ಕಿಚ್ಚ ಹೇಳಿದ್ದರು. ಆದರೆ ಬಿಡುವಿಲ್ಲದ ಕಾರಣ ಸುದ್ದಿಗೋಷ್ಟಿ ಜರುಗಲಿಲ್ಲ. ಆದರೆ ಹಾಲಿವುಡ್ ಟೀಮ್ ಬೆಂಗಳೂರಿಗೆ ಬರೋದು ಮಿಸ್ ಆಗಲಿಲ್ಲ.

    ಆಸ್ಟ್ರೇಲಿಯಾದಿಂದ ರೈಸಲ್ ನಿರ್ದೇಶಕ ಎಡ್ಡಿ ಆರ್ಯ ಹಾಗೂ ರೈಸನ್ ನಿರ್ಮಾಪಕ ಬೆಂಗಳೂರಿಗೆ ಆಗಮಿಸಿದ್ದರು. ಕಿಚ್ಚನ ಮನೆಯಲ್ಲಿ ಒಂದಿಷ್ಟು ಸಮಯ ಕಳೆದು ಕಿಚ್ಚನ ಮನೆಯಲ್ಲಿಯೇ ಭರ್ಜರಿ ಬಾಡೂಟ ಮಾಡಿದ್ದರು.

    ಕಿಚ್ಚ ಅಭಿನಯಿಸಬೇಕಾಗಿರುವ ಹಾಲಿವುಡ್ ಚಿತ್ರ ರೈಸನ್ ಶೂಟಿಂಗ್ ಈಗಾಗಲ್ಲೇ ಶುರುವಾಗಿದೆ. ಆದರೆ ಕಿಚ್ಚನ ಭಾಗದ ಚಿತ್ರೀಕರಣ ಶುರುವಾಗಿಲ್ಲ. ಅದಕ್ಕಿಂತ ಮುಂಚೆ ಬೆಂಗಳೂರಿನಲ್ಲಿಯೇ ಫೋಟೋಶೂಟ್ ಮಾಡಿಕೊಂಡು ವಾಪಸ್ ಆಸ್ಟ್ರೇಲಿಯಾಕ್ಕೆ ತೆರಳಲಿದೆ ರೈಸನ್ ಚಿತ್ರತಂಡ. ಅಂದಹಾಗೆ ಕಿಚ್ಚ ಇಲ್ಲಿ ಕಮಾಂಡೋ ಪಾತ್ರದಲ್ಲಿ ಮಿಂಚಲಿದ್ದಾರೆ.

    ಒಂದು ವೇಳೆ ಅದು ನಿಜವಾದರೆ ಈಗಾಗಲ್ಲೇ `ಹೆಬ್ಬುಲಿ’ ಚಿತ್ರದಲ್ಲಿ ಕಿಚ್ಚ ಮಿಲಿಟರಿ ಕಮಾಂಡೋ ಪಾತ್ರದಲ್ಲಿ ಭರ್ಜರಿಯಾಗಿ ಮಿಂಚಿದ್ದರು. ಇದರಿಂದ ಇಂಪ್ರೆಸ್ ಆಗಿಯೇ ರೈಸನ್ ಗೆ ಕಿಚ್ಚನೇ ಸೂಕ್ತ ಎಂದು ಹಾಲಿವುಡ್ ತಂಡ ಕಾಯುತ್ತಿದೆ ಎನ್ನಲಾಗುತ್ತಿದೆ.

    ಕಿಚ್ಚನದ್ದು ಮಿಲಿಟರಿ ಪಾತ್ರ ಅಂದಮೇಲೆ ರೈಸನ್ ದೇಶ-ವಿದೇಶಗಳ ಒಟ್ಟಾರೆ ಕಥೆಯನ್ನು ಹೊಂದಿರುತ್ತೆ. ಕಿಚ್ಚ ಭಾರತೀಯ ಮಿಲಿಟರಿ ಪಡೆಯ ಕಮಾಂಡೋ ಆಗಿರಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಹೀಗಾಗಿ ರೈಸನ್ ಚಿತ್ರದಲ್ಲಿ ಭಾರತದ ಒಬ್ಬ ಶ್ರೇಷ್ಠ ನಟರೇ ಬೇಕಾಗಿದ್ದು, ಕಿಚ್ಚನೇ ಸೂಕ್ತವೆಂದು ತಂಡ ತೀರ್ಮಾನಿಸಿದೆಯಂತೆ.

    ಇದೇ ತಿಂಗಳಿಂದ ಕಿಚ್ಚನ ಪೈಲ್ವಾನ್ ಚಿತ್ರೀಕರಣ ಶುರುವಾಗಲಿದೆ. ಜೊತೆಗೆ ರಿಯಾಲಿಟಿ ಶೋ ಹೋಸ್ಟಿಂಗ್ ಜವಾಬ್ದಾರಿ ಇದೆ. ಇದೆಲ್ಲ ಕಂಪ್ಲೀಟ್ ಆದ ಮೇಲೆ ಕಿಚ್ಚ ವಿದೇಶಕ್ಕೆ ತೆರಳಿ ಹಾಲಿವುಡ್ ಚಿತ್ರದ ಶೂಟಿಂಗ್ ಮುಗಿಸಲಿದ್ದಾರೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ. ಅದೇನೇ ಇದ್ದರೂ ಸ್ಟೈಲಿಶ್ ಸ್ಟಾರ್ ಕಿಚ್ಚನ ಹಾಲಿವುಡ್ ಗೆಟಪ್ ಹೇಗಿರುತ್ತೆ ಎಂದು ನೋಡೋಕೆ ಕಿಚ್ಚನ ಕೋಟ್ಯಾಂತರ ಅಭಿಮಾನಿಗಳು ಕಾದು ಕುಳಿತಿದ್ದಾರೆ.