Tag: ರೈಲ್ವೇ ಹಳಿ

  • ಪೊದೆಯೊಂದರಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ – ಅತ್ಯಾಚಾರ ಶಂಕೆ

    ಪೊದೆಯೊಂದರಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ – ಅತ್ಯಾಚಾರ ಶಂಕೆ

    – ತನಿಖೆಗೆ 5 ವಿಶೇಷ ತಂಡ ರಚನೆ

    ಅಮರಾವತಿ: ಆಂಧ್ರಪ್ರದೇಶದ (Andhra Pradesh) ಎಪುರುಪಾಲೆಂ ಕುಗ್ರಾಮವೊಂದರಲ್ಲಿ ಸಾರ್ವಜನಿಕರನ್ನು ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಇಲ್ಲಿನ ಬಾಲಕಿಯರ ಪ್ರೌಢಶಾಲೆ ಬಳಿಯ ಪೊದೆಗಳಲ್ಲಿ 21 ವರ್ಷದ ಮಹಿಳೆಯೊಬ್ಬರ (Women) ಶವ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

    ಬಾಪಟ್ಲಾ ಜಿಲ್ಲೆಯ ಎಪುರುಪಾಲೆಂ ಗ್ರಾಮದಲ್ಲಿ ಘಟನೆ ನಡೆದಿದ್ದು, ಮಹಿಳೆಯನ್ನು ಹತ್ಯೆಗೈಯುವ ಮುನ್ನ ಅತ್ಯಾಚಾರ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ – ಸಂತ್ರಸ್ತನ ವಿರುದ್ಧವೇ ಕೇಸ್‌ ದಾಖಲು

    ಏನಿದು ಘಟನೆ?
    ಬಾಪಟ್ಲಾ ಜಿಲ್ಲೆಯ ಎಪುರುಪಾಲೆಂ ಗ್ರಾಮದ ಮಹಿಳೆ ಮುಂಜಾನೆ 5:30ರ ಸುಮಾರಿಗೆ ನಿತ್ಯಕರ್ಮಗಳನ್ನು ಮುಗಿಸಿ, ರೈಲ್ವೇ ಟ್ರ್ಯಾಕ್‌ಗೆ (Railway Track) ಸಮೀಪವಿರುವ ಶಾಲೆಯ ಬಳಿ ಸ್ನಾನಕ್ಕೆ ಹೋಗಿದ್ದಾರೆ. ಮತ್ತೆ ಅವರು ಮನೆಗೆ ಹಿಂದಿರುಗಲಿಲ್ಲ. ಇದರಿಂದ ಆತಂಕಗೊಂಡಿದ್ದ ಆಕೆಯ ಕುಟುಂಬದ ಸದಸ್ಯರು ತುಂಬ ಹೊತ್ತು ಹುಡುಕಾಟ ನಡೆಸಿದ್ದಾರೆ. ನಂತರ ಪೊದೆಯಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಮಹಿಳೆ ಸಾವನ್ನಪ್ಪಿರುವುದು ಕಂಡುಬಂದಿದೆ ಎಂದು ಬಪಟ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಕುಲ್ ಜಿಂದಾಲ್ ತಿಳಿಸಿದ್ದಾರೆ.

    10 ಲಕ್ಷ ರೂ. ಪರಿಹಾರ ಘೋಷಣೆ:
    ಮಹಿಳೆಯನ್ನು ಹತ್ಯೆ ಮಾಡುವುದಕ್ಕೂ ಮುನ್ನ ಕಾಮುಕರು, ಅತ್ಯಾಚಾರ ಎಸಗಿದ್ದಾರೆ. ಸದ್ಯ ಪ್ರಕರಣದ ತನಿಖೆಗಾಗಿ 5 ವಿಶೇಷ ತಂಡಗಳನ್ನ ರಚಿಸಲಾಗಿದೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿರುವುದಾಗಿ ಗೃಹ ಸಚಿವರಾದ ವಂಗಲಪುಡಿ ಅನಿತಾ ತಿಳಿಸಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರಿನ ಸುಪ್ರಸಿದ್ಧ ಪ್ರವಾಸಿ ತಾಣ ಎತ್ತಿನಭುಜಕ್ಕೆ ಪ್ರವಾಸಿಗರಿಗೆ ನಿರ್ಬಂಧ 

    48 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿ:
    ಸದ್ಯ ಈ ಘಟನೆ ಆಂಧ್ರ ಪ್ರದೇಶದಲ್ಲಿ ಸರ್ಕಾರದ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಯಾವುದೇ ಲೋಪಕ್ಕೆ ಅವಕಾಶ ನೀಡದಂತೆ 48 ಗಂಟೆಗಳ ಒಳಗೆ ಆರೋಪಿಗಳನ್ನು ಬಂಧಿಸುವಂತೆ ಸರ್ಕಾರ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಅಲ್ಲದೇ ಹೆಚ್ಚಿದ ಮಾದಕ ದ್ರವ್ಯ ಸೇವನೆಯಿಂದ ಇಂತಹ ಅಪರಾಧಗಳು ಹೆಚ್ಚಾಗುತ್ತಿವೆ ಎಂದು ಶಂಕಿಸಿದೆ.

  • ರೈಲ್ವೆ ಹಳಿಗಳ ಮೇಲೆ ಪ್ರೇಮಿಗಳ ಮೃತದೇಹ ಪತ್ತೆ- ಆತ್ಮಹತ್ಯೆ ಶಂಕೆ

    ರೈಲ್ವೆ ಹಳಿಗಳ ಮೇಲೆ ಪ್ರೇಮಿಗಳ ಮೃತದೇಹ ಪತ್ತೆ- ಆತ್ಮಹತ್ಯೆ ಶಂಕೆ

    ನೆಲಮಂಗಲ(ಬೆಂಗಳೂರು): ಹುಸ್ಕೂರು ಗ್ರಾಮದ ರೈಲ್ವೆ ಹಳಿ ಬಳಿ ಅನುಮಾಸ್ಪದವಾಗಿ ಪ್ರೇಮಿಗಳ (Lovers) ಮೃತದೇಹ ಪತ್ತೆಯಾಗಿದೆ.

    ಮೃತ ಯುವನನ್ನು ನಾಗೇಂದ್ರ (21) ಎಂದು ಗುರುತಿಸಲಾಗಿದೆ. ಯುವತಿಯ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಚಿಕ್ಕಬಾಣಾವರ (Chkkabanavara) ಮತ್ತು ಗೊಲ್ಲಹಳ್ಳಿ ರೈಲು ನಿಲ್ದಾಣ (Gollahalli Railway Station) ಗಳ ನಡುವಿನ ಹುಸ್ಕೂರು ರೈಲ್ವೆ ನಿಲ್ದಾಣದಲ್ಲಿ ಇಬ್ಬರ ಶವ ಪತ್ತೆಯಾಗಿದೆ.

    ಪರಸ್ಪರ ಪ್ರೀತಿಸ್ತಿದ್ದ ಯುವಕ- ಯುವತಿ ಮನೆ ಬಿಟ್ಟು ಬಂದು ಮದುವೆಯಾಗಿದ್ದರು ಎನ್ನಲಾಗಿದೆ. ಸದ್ಯ ಇವರ ಮೃತದೇಹ ರೈಲು ಹಳಿ ಬಳಿ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದು, ಚಲಿಸುವ ರೈಲಿಗೆ ಸಿಲುಕಿ ಇವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಬೇರೆಯವಳು ಕಾಲ್ ಪಿಕ್ ಮಾಡಿದ್ದಕ್ಕೆ ಬಾಯ್‍ಫ್ರೆಂಡ್ ಮನೆಗೆ ಬೆಂಕಿ ಇಟ್ಲು

    ಈ ಸಂಬಂಧ ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ರೈಲ್ವೇ ಹಳಿಯಲ್ಲಿ ಬಿರುಕು, ಭಾರೀ ಸ್ಫೋಟಕ ಪತ್ತೆ – ಉಗ್ರ ಕೃತ್ಯ ಶಂಕೆ

    ರೈಲ್ವೇ ಹಳಿಯಲ್ಲಿ ಬಿರುಕು, ಭಾರೀ ಸ್ಫೋಟಕ ಪತ್ತೆ – ಉಗ್ರ ಕೃತ್ಯ ಶಂಕೆ

    ಜೈಪುರ: ಉದಯಪುರ ಮತ್ತು ಅಹಮದಾಬಾದ್ ಸಂಪರ್ಕಿಸುವ ಹೊಸದಾಗಿ ತೆರೆಯಲಾದ ರೈಲ್ವೇ ಹಳಿಯಲ್ಲಿ (Railway Track) ಬಿರುಕು ಕಂಡುಬಂದ ತಕ್ಷಣ ಆ ಮಾರ್ಗವಾಗಿ ಪ್ರಯಾಣಿಸಲಿದ್ದ ರೈಲುಗಳನ್ನು (Train) ಭಾನುವಾರ ಸ್ಥಗಿತಗೊಳಿಸಲಾಗಿದೆ. ಈ ಮೂಲಕ ಭಾರೀ ಅನಾಹುತವನ್ನು ತಪ್ಪಿಸಲಾಗಿದೆ.

    ಮೂಲಗಳ ಪ್ರಕಾರ ಅಸರ್ವಾ-ಉದಯಪುರ ಎಕ್ಸ್‌ಪ್ರೆಸ್ ರೈಲು ಇದೇ ಮಾರ್ಗವಾಗಿ ಸಾಗಬೇಕಿದ್ದ ಗಂಟೆಗಳ ಮೊದಲು ರೈಲ್ವೇ ಹಳಿಯಲ್ಲಿ ಸ್ಫೋಟ (Explosion) ಉಂಟಾಗಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಅಧಿಕಾರಿಗಳಿಗೆ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಅದೇ ಸ್ಥಳದಲ್ಲಿ ಡಿಟೋನೇಟರ್‌ಗಳು ಮತ್ತು ಗನ್‌ಪೌಡರ್‌ಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದು, ಅದನ್ನು ವಶಪಡಿಸಿಕೊಂಡಿದ್ದಾರೆ. ಇದರಿಂದ ಉದಯಪುರ ಭಯೋತ್ಪಾದನಾ ನಿಗ್ರಹ ದಳ (ATS) ಅಧಿಕಾರಿಗಳಿಗೆ ದೊಡ್ಡ ಪಿತೂರಿಯ ಸುಳಿವು ಸಿಕ್ಕಿದ್ದು, ಭಯೋತ್ಪಾದನಾ ಕೋನದಲ್ಲೂ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಮುಂಬೈ ಏರ್‌ಪೋರ್ಟ್‌ನಲ್ಲಿ ಒಂದೇ ದಿನ 61 ಕೆಜಿ ಚಿನ್ನ ವಶ

    ಈ ಕೃತ್ಯದ ಬಗ್ಗೆ ಎಲ್ಲಾ ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ. ಬಿರುಕು ಬಿದ್ದಿರುವ ಹಳಿಯನ್ನು ಸರಿಪಡಿಸಲಾಗುತ್ತಿದೆ. ಶೀಘ್ರವೇ ಈ ಮಾರ್ಗವಾಗಿ ರೈಲು ಸಂಚಾರ ಪುನರಾರಂಭವಾಗಲಿದೆ ಎಂದು ಉದಯಪುರ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಶರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಶೀಘ್ರವೇ ಬರಲಿದೆ ಚಾಲಕನಿಲ್ಲದೇ ಚಲಿಸೋ ರೈಲು

    ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 31 ರಂದು ಅಹಮದಾಬಾದ್‌ನ ಅಸರ್ವಾ ರೈಲು ನಿಲ್ದಾಣದಿಂದ ಈ ಹಳಿಯಲ್ಲಿ ಅಸರ್ವಾ-ಉದಯಪುರ ಎಕ್ಸ್ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಭಾರತದ ರೈಲು ಹಳಿಗಳನ್ನು ಸ್ಫೋಟಿಸಲು ಪಾಕಿಸ್ತಾನದ ಐಎಸ್‌ಐ ಪ್ಲಾನ್: ಗುಪ್ತಚರ ಎಚ್ಚರಿಕೆ

    ಭಾರತದ ರೈಲು ಹಳಿಗಳನ್ನು ಸ್ಫೋಟಿಸಲು ಪಾಕಿಸ್ತಾನದ ಐಎಸ್‌ಐ ಪ್ಲಾನ್: ಗುಪ್ತಚರ ಎಚ್ಚರಿಕೆ

    ನವದೆಹಲಿ: ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್(ಐಎಸ್‌ಐ) ಭಾರತದ ಪಂಜಾಬ್ ಹಾಗೂ ಸುತ್ತಮುತ್ತಲಿನ ರೈಲು ಹಳಿಗಳನ್ನು ವಿಶೇಷವಾಗಿ ಸರಕು ಸಾಗಣೆ ರೈಲುಗಳ ಹಳಿಗಳನ್ನು ಧ್ವಂಸಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಭಾರತದ ಗುಪ್ತಚರ ಇಲಾಖೆ ಎಚ್ಚರಿಸಿದೆ.

    ಪಂಜಾಬ್ ಹಾಗೂ ಅದರ ಸುತ್ತಮುತ್ತಲಿನ ರಾಜ್ಯಗಳಲ್ಲಿ ರೈಲ್ವೇ ಹಳಿಯನ್ನು ಗುರಿಯಾಗಿಸಿಕೊಂಡಿರುವ ಪಾಕಿಸ್ತಾನದ ಐಎಸ್‌ಐ ದೊಡ್ಡ ಸಂಚೊಂದನ್ನು ರೂಪಿಸಿದೆ. ರೈಲ್ವೇ ಹಳಿಗಳನ್ನು ಸ್ಫೋಟಿಸಲು ಐಎಸ್‌ಐ ಯೋಜನೆ ರೂಪಿಸಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಜೈಲಿನಲ್ಲಿದ್ದ ನವಜೋತ್‌ ಸಿಂಗ್‌ ಸಿಧು ಆಸ್ಪತ್ರೆಗೆ ದಾಖಲು

    ರೈಲ್ವೇ ಹಳಿಗಳನ್ನು ಗುರಿಯಾಗಿಸಿಕೊಂಡಿರುವ ಐಎಸ್‌ಐ ಭಾರತದಲ್ಲಿ ತನ್ನ ಕಾರ್ಯಕರ್ತರಿಗೆ ಭಾರೀ ಪ್ರಮಾಣದ ಹಣ ನೀಡುತ್ತಿದೆ. ಭಾರತದಲ್ಲಿರುವ ಪಾಕಿಸ್ತಾನದ ಸ್ಲೀಪರ್ ಸೆಲ್‌ಗಳಿಗೆ ಭಯೋತ್ಪಾದನಾ ಚಟುವಟಿಕೆ ನಡೆಸಲು ಭಾರೀ ಮೊತ್ತದ ಹಣ ನೀಡಲಾಗುತ್ತಿದೆ ಎಂದಿದೆ. ಇದನ್ನೂ ಓದಿ: 154 ವರ್ಷ ಹಳೆಯ ಫೋಟೋ ಪತ್ತೆ – ಜ್ಞಾನವಾಪಿಯಲ್ಲಿ ಇದೆಯಾ ಹನುಮಂತನ ವಿಗ್ರಹ?

  • 6 ವರ್ಷದ ಬಾಲಕಿಯನ್ನು ರೇಪ್‍ಗೈದ ಆರೋಪಿ ರೈಲ್ವೇ ಹಳಿಯಲ್ಲಿ ಶವವಾಗಿ ಪತ್ತೆ

    6 ವರ್ಷದ ಬಾಲಕಿಯನ್ನು ರೇಪ್‍ಗೈದ ಆರೋಪಿ ರೈಲ್ವೇ ಹಳಿಯಲ್ಲಿ ಶವವಾಗಿ ಪತ್ತೆ

    ಹೈದರಾಬಾದ್: 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದ ವ್ಯಕ್ತಿಯೋರ್ವ ರೈಲ್ವೇ ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದಾನೆ.

    ಸೈದಾಬಾದ್‍ನಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಆಕೆಯನ್ನು ಕೊಲೆ ಮಾಡಿದ್ದ ಬಗ್ಗೆ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಸೇರಿದಂತೆ ದೇಶಾದ್ಯಂತ ಸುದ್ದಿ ಮಾಡಿತ್ತು. ಬಳಿಕ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದರು. ಆದರೆ ಇದೀಗ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಪಲ್ಲಂಕೊಂಡ ರಾಜು ಎಂಬಾತ ಶವವಾಗಿ ರೈಲ್ವೇ ಹಳಿ ಮೇಲೆ ಪತ್ತೆಯಾಗಿದ್ದಾನೆ. ಇದನ್ನೂ ಓದಿ: ಮಹಿಳಾ ಅಧಿಕಾರಿಗಳು ಅನ್ನೋದೆ ಕೆಲವರಿಗೆ ಅಡ್ವಾಂಟೇಜ್ : ಸಾ.ರಾ ಮಹೇಶ್

    ಸೈದಾಬಾದ್‍ನಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿ ಪಲ್ಲಂಕೊಂಡ ರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಉನ್ನತ ಮೂಲಗಳಿಂದ ತಿಳಿದುಬಂದಿದ್ದು, ರೈಲಿಗೆ ತಲೆಕೊಟ್ಟು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ಆತನ ಕೈ ಮತ್ತು ಶರೀರದ ಮೇಲಿದ್ದ ಹಚ್ಚೆಯ ಆಧಾರದ ಮೇಲೆ ಆತ ರಾಜು ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೆಲೆ ಏರಿಕೆ ಅನಿವಾರ್ಯ, ಖಜಾನೆ ತುಂಬಲು ಬೆಲೆ ಹೆಚ್ಚಳ ಮಾಡಲೇಬೇಕಾಗುತ್ತೆ: ಎಚ್‍ಡಿಕೆ

    ಹೈದರಾಬಾದ್‍ನ ಸಮೀಪದ ಸೈದಾಬಾದ್‍ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಆಕೆಯನ್ನು ಭೀಕರವಾಗಿ ಹತ್ಯೆ ಮಾಡಿದ್ದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಬಾಲಕಿಯನ್ನು ಕೊಲೆಗೈದು ಆ ಬಳಿಕ ಕಾಣೆಯಾಗಿದ್ದ. ಪೊಲೀಸರು ಆತನ ಪತ್ತೆಗಾಗಿ ಹುಡುಕಾಟದಲ್ಲಿದ್ದರು ಆದರೂ ಆತನ ಪತ್ತೆ ಸಾಧ್ಯವಾಗಿರಲಿಲ್ಲ. ಪೊಲೀಸರು ಈತನ ಸುಳಿವು ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನವನ್ನೂ ಘೋಷಿಸಿದ್ದರು. ಅದಲ್ಲದೆ ತೆಲಂಗಾಣ ಗೃಹ ಸಚಿವರು ಆರೋಪಿಯನ್ನು ಎನ್‍ಕೌಂಟರ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಆದರೆ ಇದೀಗ ಆರೋಪಿ ಶವವಾಗಿ ಪತ್ತೆಯಾಗಿದ್ದಾನೆ.

  • ರೈಲ್ವೇ ಹಳಿಯನ್ನ ಸ್ಫೋಟಿಸಿದ ನಕ್ಸಲರು

    ರೈಲ್ವೇ ಹಳಿಯನ್ನ ಸ್ಫೋಟಿಸಿದ ನಕ್ಸಲರು

    ರಾಂಚಿ: ಭಾನುವರ ರಾತ್ರಿ ನಕ್ಸಲರು ಜಾರ್ಖಂಡ್ ರಾಜ್ಯದ ಚಕ್ರಧರ್ಪುರ ವ್ಯಾಪ್ತಿಯಲ್ಲಿ ರೈಲ್ವೇ ಹಳಿಯನ್ನ ಸ್ಫೋಟಿಸಿದ್ದಾರೆ. ಲೋಟಾಪಹಾಡ್ ಬಳಿಯಲ್ಲಿ ನಕ್ಸಲರು ರೈಲು ಹಳಿಯನ್ನ ಸ್ಫೋಟಿಸಿದ್ದು, ಈ ಮಾರ್ಗದ ಎಲ್ಲ ರೈಲುಗಳ ಸಂಚಾರವನ್ನ ಸ್ಥಗಿತಗೊಳಿಸಲಾಗಿದೆ. ಕೆಲ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

    ಸ್ಫೋಟದ ಪರಿಣಾಮ ಹೌರಾ-ಮುಂಬೈ ಮಾರ್ಗ ಸಂಪೂರ್ಣ ಸ್ಥಗಿತಗೊಂಡಿದೆ. ಚಕ್ರಧರ್ಪುರ, ಟಾಟಾ ನಗರ, ಸಿನಿ, ಸುನೌ, ಗೋಯಿಲೆಕೆರಾ, ಮನೋಹರ್‍ಪುರ ನಿಲ್ದಾಣದಲ್ಲಿಯೇ ರೈಲುಗಳು ನಿಂತಿದ್ದು, ಪ್ರಯಾಣಿಕರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದ್ರೆ ದೂರದ ಪ್ರಯಾಣಿಕರು ಅನಿವಾರ್ಯವಾಗಿ ರೈಲಿನಲ್ಲಿಯೇ ಕಾಯುವಂತಾಗಿದೆ.

    ನಕ್ಸಲರು ಅಜಾದ್ ಹಿಂದ್ ಎಕ್ಸ್ ಪ್ರೆಸ್ ರೈಲು ಗುರಿಯಾಗಿಸಿ ಹಳಿ ಸ್ಫೋಟಿಸಿದ್ದರು ಎಂದು ವರದಿಯಾಗಿದೆ. ಅದೃಷ್ಟವಷಾತ್ ಯಾವುದೇ ರೈಲುಗಳು ಮಾರ್ಗದಲ್ಲಿ ಸಂಚರಿಸಲ್ಲ. ನಕ್ಸಲರ ನಿರ್ಮೂಲನೆಗಾಗಿ ಸರ್ಕಾರ ಕೈಗೊಂಡಿರುವ ಆಪರೇಷನ್ ಪ್ರಹಾರಕ್ಕೆ ವಿರೋಧ ವ್ಯಕ್ತಪಡಿಸಿ, ಇಂದು ಭಾರತ್ ಬಂದ್ ಗೆ ಕರೆ ನೀಡಿದ್ದರು.

    ರೈಲು ಹಳಿಯ ಸ್ಫೋಟದ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನಾ ಸ್ಥಳದ ವ್ಯಾಪ್ತಿಯಲ್ಲಿಯ ಗ್ರಾಮಸ್ಥರಿಂದಲೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇತ್ತ ಹಳಿಯ ಜೋಡಣೆ ಕಾರ್ಯವನ್ನ ಸಿಬ್ಬಂದಿ ಆರಂಭಿಸಿದ್ದು, ಮಾರ್ಗದ ಪರಿಶೀಲನೆ ನಡೆಸಲಾಗುತ್ತಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

  • ತಾಯಿ-ಮಗನ ಕೊಲೆಗೈದು ರೈಲ್ವೇ ಹಳಿ ಮೇಲೆ ಎಸೆದ!

    ತಾಯಿ-ಮಗನ ಕೊಲೆಗೈದು ರೈಲ್ವೇ ಹಳಿ ಮೇಲೆ ಎಸೆದ!

    ಬೆಳಗಾವಿ: ತಾಯಿ ಹಾಗೂ ಮಗನನ್ನು ಭೀಕರವಾಗಿ ಹತ್ಯೆಗೈದು ಶವವನ್ನು ರೈಲ್ವೇ ಹಳಿಗಳ ಮೇಲೆ ಬಿಸಾಡಿರುವ ಅಮಾನವೀಯ ಘಟನೆ ಬೆಳಗಾವಿಯ ನ್ಯೂ ಗಾಂಧಿನಗರ ಬಳಿ ನಡೆದಿದೆ.

    ನ್ಯೂ ಗಾಂಧಿನಗರ ಬಳಿಯ ರೈಲ್ವೇ ಟ್ರ್ಯಾಕ್‍ನಲ್ಲಿ ಶವಗಳು ಪತ್ತೆಯಾಗಿವೆ. ರೇಣುಕಾ(35) ಹಾಗೂ ಲಕ್ಷಣ(8) ಮೃತ ದುರ್ದೈವಿಗಳು. ಗಂಡನೇ ರೈಲ್ವೇ ಹಳಿ ಪಕ್ಕದಲ್ಲಿ ಇಬ್ಬರನ್ನೂ ಕೊಲೆ ಮಾಡಿ ನಂತರ ಹಳಿಯ ಮೇಲೆ ಶವ ಬಿಸಾಡಿದ್ದಾನೆಂದು ಶಂಕಿಸಲಾಗಿದೆ.

    ಮೂಲತಃ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೀರನೋಳಿ ಗ್ರಾಮದ ನಿವಾಸಿಯಾಗಿರುವ ರೇಣುಕಾ ಕುಟುಂಬ ಕಳೆದ ಹತ್ತು ವರ್ಷದಿಂದ ಬೆಳಗಾವಿಯ ಮಾರುತಿನಗರದಲ್ಲಿ ವಾಸಿಸುತ್ತಿತ್ತು. ತರಕಾರಿ ಮಾರಿಕೊಂಡು ಮಹಿಳೆ ಜೀವನ ನಡೆಸುತ್ತಿದ್ದರು. ಆದರೆ ಪತಿ ಯಲ್ಲಪ್ಪ ಕರಗುಪ್ಪಿ, ಪತ್ನಿ ಹಾಗೂ ಮಗನ ಹತ್ಯೆ ಮಾಡಿದ್ದಾನೆ ಎಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.

    ಶವ ಬಿದ್ದಿರುವ ಹಳಿ ಪಕ್ಕದಲ್ಲಿ ರಕ್ತದ ಗುರುತು ಪತ್ತೆಯಾಗಿದೆ. ಇದರಿಂದ ಮೊದಲು ಕೊಲೆ ಮಾಡಿ ನಂತರ ಶವಗಳನ್ನ ಹಳಿ ಮೇಲೆ ಎಸೆಯಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಘಟನಾ ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಬೆಂಗ್ಳೂರು – ಮಂಗ್ಳೂರು ರೈಲ್ವೇ ಹಳಿ 50 ಕಡೆ ಗುಡ್ಡ ಕುಸಿತ – 1 ತಿಂಗ್ಳು ಸಂಚಾರ ಅನುಮಾನ

    ಬೆಂಗ್ಳೂರು – ಮಂಗ್ಳೂರು ರೈಲ್ವೇ ಹಳಿ 50 ಕಡೆ ಗುಡ್ಡ ಕುಸಿತ – 1 ತಿಂಗ್ಳು ಸಂಚಾರ ಅನುಮಾನ

    ಹಾಸನ: ತಿಂಗಳುಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಜಿಲ್ಲೆಯಾದ್ಯಂತ ಜನರು ತತ್ತರಿಸಿಹೋಗಿದ್ದು, ಈಗ ಮಳೆಯ ರಭಸಕ್ಕೆ ರೈಲ್ವೇ ಸೇತುವೆಯೇ ಕೊಚ್ಚಿ ಹೋಗಿದೆ.

    ಜಿಲ್ಲಯಲ್ಲಿ ಶುಕ್ರವಾರ ರಾತ್ರಿ ಜೋರಾದ ಮಳೆಯಾಗಿದ್ದು, ಪರಿಣಾಮ ಸಕಲೇಶಪುರ ತಾಲೂಕು ಎಡಕುಮೇರಿ ರೈಲು ಹಳಿಯ ಮೇಲೆ ಗುಡ್ಡ ಕುಸಿದಿದೆ. ಅಷ್ಟೇ ಅಲ್ಲದೇ ಬೆಂಗಳೂರು ಮಂಗಳೂರು ರೈಲ್ವೇ ಸಂಪರ್ಕದಲ್ಲಿ 50 ಕಡೆ ಗುಡ್ಡ ಕುಸಿತ ಉಂಟಾಗಿದೆ. ಇದರಿಂದ ಇನ್ನು ಒಂದು ತಿಂಗಳು ರೈಲು ಸಂಚಾರ ಅನುಮಾನವಾಗಿದೆ.

    ಸದ್ಯಕ್ಕೆ ಸಕಲೇಶಪುರ ತಾಲೂಕು ಎಡಕುಮೇರಿ ಸುತ್ತಲು ರೈಲ್ವೇ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ತೆರವು ಕಾರ್ಯಾಚರಣೆಗೆ ಕಾರ್ಮಿಕರ ಕೊರತೆಯಿಂದ ಕಾರ್ಯ ವಿಳಂಬವಾಗುತ್ತಿದೆ. ಮಳೆಯಿಂದ ರೈಲ್ವೇ ಇಲಾಖೆಗೆ ಅಪಾರ ನಷ್ಟವಾಗಿದೆ. ಈಗಾಗಲೇ ಭಾರೀ ಮಳೆಯಿಂದ ಶಿರಾಡಿಘಾಟ್ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಕಳೆದ ನಾಲ್ಕು ದಿನಗಳಿಂದ ಕಾವೇರಿ ನದಿ ನೀರು ಅಪಾಯದ ಮಟ್ಟವನ್ನು ತಲುಪಿದೆ. ಪರಿಣಾಮ ಜಿಲ್ಲೆಯ ರಾಮನಾಥಪುರ ಪಟ್ಟಣದಲ್ಲಿ ಸಾಕಷ್ಟು ಅವಾಂತರಕ್ಕೆ ಕಾರಣವಾಗಿದೆ. ನೂರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಕೆಲವು ಮನೆಗಳು ಕುಸಿದು ಬಿದ್ದಿವೆ. ಪಟ್ಟಣದಿಂದ ಮೈಸೂರು ಮತ್ತು ಮಡಿಕೇರಿಗಳಿಗೆ ಸಂಪರ್ಕ ರಸ್ತೆಗಳು ಜಲಾವೃತಗೊಂಡಿವೆ. ಪ್ರಸನ್ನ ಸುಬ್ರಮಣ್ಯ ದೇವಾಲಯದ ಬಳಿಯೂ ನೀರು ನುಗ್ಗಿದ್ದು, ಸದಾ ಭಕ್ತರಿಂದ ಇದ್ದ ಆಂಜನೇಯ ದೇವಾಲಯಗಳು ಮತ್ತು ರಾಮನಾಥಪುರ ದೇವಸ್ಥಾನಗಳು ಜಲಾವೃತಗೊಂಡಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರೈಲಿಗೆ ಸಿಲುಕಿ ಬ್ರಿಡ್ಜ್ ಮೇಲಿಂದ ಬಿದ್ದು ಆನೆಮರಿ ಸಾವು

    ರೈಲಿಗೆ ಸಿಲುಕಿ ಬ್ರಿಡ್ಜ್ ಮೇಲಿಂದ ಬಿದ್ದು ಆನೆಮರಿ ಸಾವು

    ಬೆಳಗಾವಿ: ರೈಲ್ವೇ ಹಳಿ ದಾಟುವಾಗ, ರೈಲಿಗೆ ಸಿಲುಕಿ ಬ್ರಿಡ್ಜ್ ಮೇಲಿಂದ ಕೆಳಗೆ ಬಿದ್ದು ಆನೆ ಮರಿಯೊಂದು ಮೃತಪಟ್ಟ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಖಾನಾಪುರ ತಾಲೂಕಿನ ಗೋಲಿಹಳ್ಳಿ ವಲಯ ಅರಣ್ಯ ಪ್ರದೇಶದ ತಾವರಗಟ್ಟಿ ಹಾಗೂ ಬಿಷ್ಟೆನಟ್ಟಿ ಗ್ರಾಮಗಳ ನಡುವೆ ಇಂದು ಬೆಳಗ್ಗಿನ ಜಾವ ಈ ಘಟನೆ ನಡೆದಿದೆ.

    ಮೃತ ಹೆಣ್ಣು ಆನೆಗೆ ಅಂದಾಜು 8-10 ವರ್ಷ ವಯಸ್ಸಾಗಿರಬಹುದು. ಈ ಆನೆ ಮರಿಯು ದಾಂಡೇಲಿ ಅರಣ್ಯ ಪ್ರದೇಶದಿಂದ ಗೋಲಿಹಳ್ಳಿ ಅರಣ್ಯ ಪ್ರದೇಶಕ್ಕೆ ಆಹಾರ ಅರಸಿ ಬಂದಿರುವ ಶಂಕೆ ವ್ಯಕ್ತವಾಗುತ್ತಿದೆ.

    ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ರೈಲ್ವೇ ಹಳಿಯಲ್ಲಿ ಬಿದ್ದು ಯುವಕ ಆತ್ಮಹತ್ಯೆ

    ರೈಲ್ವೇ ಹಳಿಯಲ್ಲಿ ಬಿದ್ದು ಯುವಕ ಆತ್ಮಹತ್ಯೆ

    ಹಾವೇರಿ: ಹಳಿಯಲ್ಲಿ ಬಿದ್ದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ನಗರದ ರೈಲ್ವೇ ಗೇಟ್ ಬಳಿ ನಡೆದಿದೆ.

    ಮೃತ ಯುವಕನನ್ನ ರಾಣೇಬೆನ್ನೂರು ನಗರದ ಈಶ್ವರನಗರ ನಿವಾಸಿಯಾದ 25 ವರ್ಷ ವಯಸ್ಸಿನ ಸಚಿನ್ ಮಣೇಗಾರ ಎಂದು ಗುರುತಿಸಲಾಗಿದೆ. ನಗರದ ಗ್ಯಾರೇಜ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಸಚಿನ್, ರೈಲ್ವೆ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಯುವಕನ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಕುರಿತು ರಾಣೇಬೆನ್ನೂರು ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.