Tag: ರೈಲ್ವೇ ಯೋಜನೆ

  • ರಾಜ್ಯದ ಬಾಕಿ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ಕೇಂದ್ರಕ್ಕೆ ಡಿಕೆ ಸುರೇಶ್ ಮನವಿ

    ರಾಜ್ಯದ ಬಾಕಿ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ಕೇಂದ್ರಕ್ಕೆ ಡಿಕೆ ಸುರೇಶ್ ಮನವಿ

    ನವದೆಹಲಿ: ರಾಜ್ಯದ ಬಾಕಿ ರೈಲ್ವೇ (Railway Project) ಹಾಗೂ ಜಲ ಮಿಷನ್ ಯೋಜನೆಗಳನ್ನು  ಆದಷ್ಟು ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಮಾಜಿ ಸಂಸದ ಡಿ.ಕೆ.ಸುರೇಶ್ (DK Suresh) ಮನವಿ ಮಾಡಿದ್ದಾರೆ.

    ಡಿಕೆ ಸುರೇಶ್ ಅವರು ದೆಹಲಿಯಲ್ಲಿ ಕೇಂದ್ರ ರೈಲ್ವೇ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ ಸೋಮಣ್ಣ (V Somanna) ಅವರನ್ನು ಬುಧವಾರ ಭೇಟಿ ಮಾಡಿ ಈ ಮನವಿ ಸಲ್ಲಿಸಿದರು. ಇದನ್ನೂ ಓದಿ: ಎಲ್ಲವನ್ನೂ ಸಿಬಿಐಗೆ ಕೊಡಲು ಸಾಧ್ಯವಿಲ್ಲ: ಪರಮೇಶ್ವರ್

    ಹೆಜ್ಜಾಲ, ಕನಕಪುರ ಹಾಗೂ ಚಾಮರಾಜನಗರ ಹೊಸ ರೈಲ್ವೇ ಮಾರ್ಗ ಈ ಹಿಂದೆಯೇ ಮಂಜೂರಾಗಿ, ಟೆಂಡರ್ ಪ್ರಕ್ರಿಯೆ ಆಗಿದ್ದರೂ ಕಾಮಗಾರಿ ಮಾತ್ರ ಆರಂಭವಾಗಿಲ್ಲ. ಅದೇ ರೀತಿ ರಾಜ್ಯದ ಅನೇಕ ರೈಲ್ವೇ ಯೋಜನೆಗಳು ಹತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿವೆ. ಈ ಯೋಜನೆಗಳಿಗೆ ಅನುದಾನ ನೀಡಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಎಂದು ಕೋರಿದರು. ಇದನ್ನೂ ಓದಿ: ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯಲ್ಲಿ ಹೆಚ್‍ಡಿಕೆಗೆ ಸ್ಥಾನ

    ಜಲಜೀವನ್ ಮಿಷನ್ ಅಡಿಯಲ್ಲಿ ಕುಡಿಯುವ ನೀರು ಯೋಜನೆಗಳಿಗೆ ಸಲ್ಲಿಸಿರುವ ಪ್ರಸ್ತಾವನೆಗಳು ಆರು ತಿಂಗಳಿನಿಂದ ಬಾಕಿ ಉಳಿದಿವೆ. ಅವುಗಳಿಗೆ ಮಂಜೂರಾತಿ ಕೊಡಿ ಎಂದು ಡಿಕೆ ಸುರೇಶ್ ವಿನಂತಿ ಮಾಡಿದ್ದು, ಸಚಿವ ಸೋಮಣ್ಣ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದನ್ನೂ ಓದಿ: ಹುತಾತ್ಮ ಅಗ್ನಿವೀರ್‌ ಕುಟುಂಬಕ್ಕೆ 98.39 ಲಕ್ಷ ನೀಡಲಾಗಿದೆ – ರಾಹುಲ್‌ ಆರೋಪದ ಬೆನ್ನಲ್ಲೇ ಸೇನೆ ಸ್ಪಷ್ಟನೆ

  • ಬಂಡೀಪುರದಲ್ಲಿ ರೈಲ್ವೇ ಯೋಜನೆಗೆ ವಿರೋಧ – #SaveBandipur ಅಭಿಯಾನ ಆರಂಭ

    ಬಂಡೀಪುರದಲ್ಲಿ ರೈಲ್ವೇ ಯೋಜನೆಗೆ ವಿರೋಧ – #SaveBandipur ಅಭಿಯಾನ ಆರಂಭ

    ಬೆಂಗಳೂರು: ಕೇರಳದ ನಿಲಂಬೂರಿನಿಂದ ಕರ್ನಾಟಕದ ನಂಜನಗೂಡಿಗೆ (Nilambur-Nanjangud) ಸಂಪರ್ಕ ಕಲ್ಪಿಸುವ ರೈಲ್ವೆ ಯೋಜನೆಗೆ ವೈಜ್ಞಾನಿಕ ಸಮೀಕ್ಷೆ ಶುರುವಾಗಿದೆ. ಈ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಸೇವ್ ಬಂಡೀಪುರ (Save Bandipur) ಕ್ಯಾಂಪೇನ್ ಶುರುವಾಗಿದೆ.

    ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದು ಹೋಗುವ ಈ ಯೋಜನೆಗೆ ಪರಿಸರ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೇಂದ್ರ ಬಜೆಟ್‌ – 1 ರೂ. ಬಂದಿದ್ದು ಹೇಗೆ? ಹೋಗಿದ್ದು ಹೇಗೆ?

    ಹಳೆ ಮೈಸೂರು ಭಾಗಕ್ಕೆ ಬಂಡೀಪುರ ಮತ್ತು ನಾಗರಹೊಳೆ ಕಾಡುಗಳು 2 ಕಣ್ಣುಗಳಿದ್ದಂತೆ. ಅಭಿವೃದ್ಧಿ ಹೆಸರಲ್ಲಿ ನಮ್ಮ ಕಾಡನ್ನು ನಾಶಪಡಿಸುವ ಎಲ್ಲಾ ಚಟುವಟಿಕೆಗಳು ನಿಲ್ಲಬೇಕು. ಕರ್ನಾಟಕ ಸರ್ಕಾರ ರೈಲು ಸಮೀಕ್ಷೆಗೆ ಅವಕಾಶ ನೀಡಬಾರದು. ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧವನ್ನು ಮುಂದುವರಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

     

  • 3.2 ಶತಕೋಟಿ ಡಾಲರ್‌ ಯೋಜನೆಯೇ ಅಕ್ರಮ – ಚೀನಾಗೆ ಪೆಟ್ಟು ನೀಡಿದ ಕೀನ್ಯಾ

    3.2 ಶತಕೋಟಿ ಡಾಲರ್‌ ಯೋಜನೆಯೇ ಅಕ್ರಮ – ಚೀನಾಗೆ ಪೆಟ್ಟು ನೀಡಿದ ಕೀನ್ಯಾ

    ನೈರೋಬಿ: ಒಂದೊಂದು ದೇಶದ ದೊಡ್ಡ ಯೋಜನೆಯನ್ನು ಎತ್ತಿಕೊಂಡು ನಿಧಾನವಾಗಿ ಆ ದೇಶವನ್ನೇ ತನ್ನ ಮಾರುಕಟ್ಟೆಯ ಕೇಂದ್ರವನ್ನಾಗಿ ಮಾಡುವ ಚೀನಾದ ತಂತ್ರಕ್ಕೆ ಕೀನ್ಯಾ ಈಗ ಬಲವಾದ ಪೆಟ್ಟು ನೀಡಿದೆ.

    ಕೀನ್ಯಾದಲ್ಲಿ ಚೀನಾ ಆರಂಭಿಸಿದ್ದ 3.2 ಶತಕೋಟಿ ಡಾಲರ್‌ ಮೊತ್ತ ಯೋಜನೆ ಅಕ್ರಮ ಎಂದು ಮೇಲ್ಮನವಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

    ಮೊಂಬಾಸ ಬಂದರುನಿಂದ ರಾಜಧಾನಿ ನೈರೋಬಿವರೆಗಿನ 440 ಕಿ.ಮೀ ಉದ್ದದ ರೈಲ್ವೇ ಯೋಜನೆಯ ಟೆಂಡರ್‌ ಅನ್ನು ಚೀನಾ ರೋಡ್‌ ಆಂಡ್‌ ಬ್ರಿಡ್ಜ್‌ ಕಾರ್ಪೋರೇಷನ್‌(ಸಿಆರ್‌ಬಿಸಿ) ಪಡೆದುಕೊಂಡಿತ್ತು.

    2014ರಲ್ಲಿ ಈ ಯೋಜನೆ ಆರಂಭಿಸಿದಾಗ ಕೀನ್ಯಾದ ಹೋರಾಟಗಾರ ಒಕಿಯಾ ಎಂಬವರು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ರೈಲ್ವೇ ಜನರ ತೆರಿಗೆಯಿಂದ ನಡೆಯುತ್ತಿದೆ. ಹೀಗಾಗಿ ರೈಲ್ವೇ ಅಡಿಯಲ್ಲಿ ನಡೆಯುತ್ತಿರುವ ಯೋಜನೆಗಳು ಪಾರದರ್ಶಕವಾಗಿರಬೇಕು. ಆದರೆ ಈ ಟೆಂಡರ್‌ನಲ್ಲಿ ಎಲ್ಲ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಟೆಂಡರ್‌ ಕರೆಯದೇ ಏಕಪಕ್ಷೀಯವಾಗಿ ಯೋಜನೆಗೆ ಅನುಮತಿ ನೀಡಲಾಗಿದೆ. ಈ ಯೋಜನೆಯಿಂದ ಕೀನ್ಯಾ ಪ್ರಜೆಗಳ ಮೇಲೆ ತೆರಿಗೆಯ ಭಾರ ಬೀಳಲಿದೆ ಎಂದು ವಾದಿಸಿದ್ದರು.

    ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಒಕಿಯಾ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಅವರು ಮೇಲ್ಮನವಿ ಸಲ್ಲಿಸಿದ್ದು ಈಗ ಕೋರ್ಟ್‌ ಒಕಿಯಾ ಪರವಾಗಿ ತೀರ್ಪು ನೀಡಿ ಅಕ್ರಮ ಎಂದು ಹೇಳಿದೆ.

    ಬಹುತೇಕ ಈ ಯೋಜನೆ ಪೂರ್ಣಗೊಂಡಿದ್ದು 2017ರಿಂದ ಪ್ರಯಾಣಿಕರ ರೈಲು ಮತ್ತು ಗೂಡ್ಸ್‌ ರೈಲುಗಳು ಸಂಚರಿಸುತ್ತಿವೆ. ಈ ಯೋಜನೆಗೆ ಚೀನಾದ ಎಕ್ಸಿಮ್‌ ಬ್ಯಾಂಕು ಸಾಲ ನೀಡಿದೆ.

    ಕೀನ್ಯಾ ರೈಲ್ವೇ ಮತ್ತು ಚೀನಾದ ಸಿಆರ್‌ಬಿಸಿ ಕಂಪನಿ ಈ ಯೋಜನೆಯನ್ನು ಸಮರ್ಥಿಸಿಕೊಂಡಿದ್ದು ಅಕ್ರಮ ನಡೆದಿಲ್ಲ ಎಂದು ಕೋರ್ಟ್‌ನಲ್ಲಿ ವಾದಿಸಿದೆ. ಮುಂದೆ ಈ ಯೋಜನೆ ಏನಾಗಬಹುದು ಎಂಬ ಕುತೂಹಲ ಎದ್ದಿದ್ದು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ.

    ಕೋವಿಡ್‌ 19ನಿಂದಾಗಿ ಕೀನ್ಯಾದಲ್ಲಿ ಆರ್ಥಿಕ ಪರಿಸ್ಥಿತಿ ಭಾರೀ ಹದಗೆಟ್ಟಿದೆ. ಕೀನ್ಯಾ ಸರ್ಕಾರ ಸಾಲ ಪಾವತಿಸಲು ಹೆಣಗಾಡುತ್ತಿದ್ದು ಬಲವಂತವಾಗಿ ಟ್ರಕ್‌ ಮಾಲೀಕರು ಮತ್ತು ಆಮದುದಾರರು ಈ ರೈಲ್ವೇಯನ್ನು ಬಳಸಬೇಕು ಎಂದು ಸೂಚಿಸಿದೆ. ಆದರೆ ಈ ಟ್ರಕ್‌ನಲ್ಲಿ ವಸ್ತುಗಳನ್ನು ಸಾಗಾಣಿಕೆ ಮಾಡುವುದಕ್ಕಿಂತ ಈ ರೈಲು ಸೇವೆ ಭಾರೀ ದುಬಾರಿಯಾಗಿದೆ.

    ಈ ತಿಂಗಳ ಆರಂಭದಲ್ಲಿ ಕೀನ್ಯಾದ ಸಂಸತ್ತು ಆಫ್ರಿಕಾ ಸ್ಟಾರ್‌ ರೈಲ್ವೇಗೆ 380 ದಶಲಕ್ಷ ಡಾಲರ್‌ ಆಡಳಿತ ಶುಲ್ಕ ಪಾವತಿಸಿಲ್ಲ ಎಂದು ಹೇಳಿತ್ತು. ಇದನ್ನೂ ಓದಿ: ನೇಪಾಳ ಆಯ್ತು, ಈಗ ಢಾಕಾದತ್ತ ಕೈಚಾಚಿದ ಬೀಜಿಂಗ್‌

    ಚೀನಾದ ತಂತ್ರ ಏನು?
    ಅಭಿವೃದ್ಧಿ ಹೊಂದುತ್ತಿರುವ ಮತ್ತು ಬಡರಾಷ್ಟ್ರಗಳಿಗೆ ಸಹಾಯ ಮಾಡುತ್ತೇನೆ ಎಂದು ಹೇಳಿ ಚೀನಾ ಆ ದೇಶಗಳಲ್ಲಿ ಭಾರೀ ಮೊತ್ತದ ಯೋಜನೆಗಳನ್ನು ಪಡೆದುಕೊಳ್ಳುತ್ತದೆ. ಒಂದು ವೇಳೆ ಟೆಂಡರ್‌ ಕರೆದಾಗ ಕಡಿಮೆ ಬೆಲೆಗೆ ಬಿಡ್‌ ಮಾಡುತ್ತದೆ. ಈ ಯೋಜನೆಗೆ ಚೀನಾದ ಬ್ಯಾಂಕುಗಳೇ ದೇಶಗಳಿಗೆ ಸಾಲ ನೀಡುವಂತೆ ನೋಡಿಕೊಳ್ಳುತ್ತದೆ. ಈ ಯೋಜನೆ ಸಾಲ ತೀರಿಸಲು ಆ ದೇಶಗಳಿಗೆ ಸಾಧ್ಯವಾಗದೇ ಇದ್ದಾಗ ಈ ಯೋಜನೆಯ ನೆಪ ಹೇಳಿ ಮತ್ತೊಂದು ಯೋಜನೆ ಆರಂಭಿಸಲು ಅನುಮತಿ ಕೇಳುತ್ತದೆ. ಹೀಗೆ ಒಂದೊಂದೆ ಯೋಜನೆ ಆರಂಭಿಸಿ ಈ ದೇಶವನ್ನು ತನ್ನ ದಾಳವನ್ನಾಗಿ ಮಾಡುತ್ತದೆ. ಸದ್ಯ ಪಾಕಿಸ್ತಾನದಲ್ಲಿ ಹೀಗೆ ಆಗುತ್ತಿದ್ದು, ಚೀನಾ ಹೇಳಿದಂತೆ ಅಲ್ಲಿನ ಸರ್ಕಾರ ಈಗ ಕೇಳುತ್ತಿದೆ.

  • ಮತ್ತೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಡಿಚ್ಚಿ

    ಮತ್ತೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಡಿಚ್ಚಿ

    ಬೆಂಗಳೂರು: ಲೋಕಸಭೆಯಲ್ಲಿ ಕರ್ನಾಟಕ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಮತ್ತೆ ಟ್ವಿಟ್ಟರ್ ನಲ್ಲಿ ಟಾಂಗ್ ಕೊಟ್ಟಿದ್ದಾರೆ.

    ಪ್ರಧಾನಿ ಮೋದಿಯವರೇ, ನನ್ನನ್ನು ಸಂಸತ್ತಿನಲ್ಲಿ ನೆನಪಿಸಿಕೊಂಡಿರುವುದು ಒಳ್ಳೆಯ ಬೆಳವಣಿಗೆ. ಹಾಗೆಯೇ ಬಸವಣ್ಣನವರನ್ನು ನೆನಪಿಸಿಕೊಂಡಿದ್ದಕ್ಕೆ ನನಗೆ ಸಂತಸ ತಂದಿದೆ. ಬಸವಣ್ಣ ಹೇಳಿದಂತೆ ಉಳ್ಳವರು ಶಿವಾಲಯ ಮಾಡುವರಯ್ಯ ನಾನೇನು ಮಾಡಲಿ ಬಡವನಯ್ಯ ಬಸವಣ್ಣನ ವಚನಗಳನ್ನು ತಾವು ಪಾಲಿಸಿದರೆ ಕನ್ನಡಿಗರು ನಿಮಗೆ ಕೃತಜ್ಞರಾಗಿರುತ್ತಾರೆ ಎಂದು ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದಾರೆ.

    ಪ್ರಧಾನಿ ಮೋದಿಯವರು ಕಲಬುರಗಿ ಬೀದರ್ ರೈಲ್ವೇ ಯೋಜನೆ ಬಿಜೆಪಿ ಸರ್ಕಾರದಿಂದ ಪೂರ್ಣಗೊಂಡಿದೆ ಎನ್ನುವ ಹೇಳಿಕೆಗೆ ಸಿಎಂ, ಇಡೀ ದೇಶದಲ್ಲಿ 50:50 ಅನುದಾನ ಹಂಚಿಕೆಯ ಮೂಲಕ ರೈಲ್ವೇ ಅಭಿವೃದ್ಧಿ ಯೋಜನೆ ಆರಂಭಿಸಿದ ಮೊದಲ ರಾಜ್ಯ ಕರ್ನಾಟಕ. ಬೀದರ್ ಕಲಬುರಗಿ ಹಳಿ ಕಾಮಗಾರಿ 1,542 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡಿದ್ದು, ಈ ಯೋಜನೆಗೆ 2007ರಿಂದ ಕರ್ನಾಟಕ ಸರ್ಕಾರ 691 ಕೋಟಿ ರೂ. ಅನುದಾನ ನೀಡಿದೆ. ಅದರಲ್ಲಿ ಶೇ.70ರಷ್ಟು ಹಣ(488 ಕೋಟಿ ರೂ.) ಹಣವನ್ನು 2013ಕ್ಕೆ ನಮ್ಮ ಸರ್ಕಾರ ಬಂದ ನಂತರ ಬಿಡುಗಡೆ ಮಾಡಲಾಗಿದೆ ಎಂದು    ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿ ತಿರುಗೇಟು ಕೊಟ್ಟಿದ್ದಾರೆ.

    ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಭವಿಷ್ಯವನ್ನು ನಿರ್ಧರಿಸುವವರು ಜನತೆಯೇ ಹೊರತು ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಲ್ಲ. ಮೋದಿ ಅಥವಾ ಅಮಿತ್ ಶಾ ಅವರು ಹೇಳಿದಾಕ್ಷಣ ಕಾಂಗ್ರೆಸ್ ಭವಿಷ್ಯ ನಿರ್ಧಾರವಾಗುವುದಿಲ್ಲ. 2019ಕ್ಕೆ ಇವರು ಎಲ್ಲಿರುತ್ತಾರೆ ಅನ್ನೋದನ್ನ ಮೊದಲು ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದರು.

    ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂಬುದು ಬಿಜೆಪಿಯವರ ಭ್ರಮೆಯಷ್ಟೇ. ರಾಜಕೀಯ ಮಾಡುವುದಕ್ಕೆ ಬೇರೆ ಬೇರೆ ವೇದಿಕೆಗಳಿವೆ ಎಂಬುದನ್ನು ಬಿಜೆಪಿಯವರು ತಿಳಿದುಕೊಳ್ಳಬೇಕು. ಬೆಂಗಳೂರಿಗೆ ಪ್ರಧಾನಿಯವರು ಬಂದಾಗ ಬರ ಮಾಡಿಕೊಳ್ಳಲಿಲ್ಲ ಎನ್ನುತ್ತಾರೆ. ಅವರು ಬಂದಿದ್ದು ಪಕ್ಷದ ಕಾರ್ಯಕ್ರಮಕ್ಕೆ. ಈ ಹಿಂದೆ ಹಲವು ಬಾರಿ ಪ್ರಧಾನಿಯವರು ಬೆಂಗಳೂರಿಗೆ ಬಂದಾಗ ನಾನು ಬರಮಾಡಿಕೊಂಡಿರಲಿಲ್ಲವೇ ಎಂದು ಪ್ರಶ್ನಿಸಿ ಬಿಜೆಪಿ ನಾಯಕರ ಟೀಕೆಗೆ ಉತ್ತರಿಸಿದರು.

    ಮೋದಿ ಹೇಳಿದ್ದು ಏನು?
    ಸಿಎಂ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಕರ್ನಾಟಕದಲ್ಲಿ ಅಶಾಂತಿ ಮೂಡಲು ಕಾರಣವಾಗಿದೆ. ಕಾಂಗ್ರೆಸ್ ಮೂಲವೇ ವಿಭಜನೆ. ಮಲ್ಲಿಕಾರ್ಜುನ ಖರ್ಗೆ ಕರ್ನಾಟಕ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಪ್ರಯಾಸ ಪಡುತ್ತಿದ್ದಾರೆ ಅಂತಾ ಸರ್ಕಾರದ ಕಾರ್ಯವೈಖರಿ ವಿರುದ್ಧ ಟೀಕೆಗಳ ಸುರಿಮಳೆಗೈದರು.

    ಚುನಾವಣೆಗಳಿಗೆ ಕಾಂಗ್ರೆಸ್ ಪಕ್ಷ ಅಂದು ದೇಶ ವಿಭಜನೆ ಮಾಡಿದ್ದು, ಅದರ ನೋವು 70 ವರ್ಷವಾದರೂ ದೇಶದ ಜನರು ಅನುಭವಿಸುತ್ತಿದ್ದಾರೆ. ಅಂದು ದೇಶದ ಮೊದಲ ಪ್ರಧಾನಿ ಸರ್ದಾರ್ ವಲ್ಲಭಭಾಯ್ ಪಟೇಲ್ ಆಗಿದ್ದರೆ ನಮ್ಮ ಪೂರ್ಣ ಕಾಶ್ಮೀರ ನಮಲ್ಲಿಯೇ ಇರುತ್ತಿತ್ತು. ಕಾಂಗ್ರೆಸ್ ಸರ್ಕಾರದಿಂದ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರಿಗೆ ಅನ್ಯಾಯವಾಗಿದೆ. ನಿನ್ನೆ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಶತ್ರುತ್ವ ಆ ಮಟ್ಟಿಗೆ ಮಾಡಿ, ಅದು ಎಂದಾದರೂ ಒಂದು ದಿನ ಸ್ನೇಹಕ್ಕೆ ತಿರುಗಬೇಕು ಎಂದು ಬಶೀರ್ ಭದ್ರಿ ಅವರ ಕವಿತೆ ಓದಿದ್ದರು. ಈ ಸಾಲುಗಳನ್ನು ಖರ್ಗೆ ತಮ್ಮದೇ ಸರ್ಕಾರವಿರುವ ಮುಖ್ಯಮಂತ್ರಿಗಳಿಗೆ ಹೇಳಿದಂತಿದೆ. ಈ ಶಾಯರಿಯನ್ನು ಕರ್ನಾಟಕದ ಸಿಎಂ ಕೇಳಲೇ ಬೇಕು. ಈ ಶಾಯರಿಯನ್ನು ಖರ್ಗೆಯವರು ಓದಿದ ಸ್ವಲ್ಪ ಹಿಂದಿನಿಂದ ಓದಬೇಕಿತ್ತು ಎಂದು ಹೇಳಿ ಟಾಂಗ್ ಕೊಟ್ಟರು.

    ಸಿಎಂ ಸಿದ್ದರಾಮಯ್ಯ ಅವರು ಶಾಂತಿಯ ಸಂದೇಶ ಸಾರುವ ಬದಲು ಶತ್ರುತ್ವದ ಸಂದೇಶ ಸಾರುತ್ತಿದ್ದಾರೆ. ಮುಂದಿನ ಕರ್ನಾಟಕ ಚುನಾವಣೆ ಬಳಿಕ ನೀವು ಲೋಕಸಭೆಯಲ್ಲಿ ಇರುತ್ತೀರೋ ಇಲ್ಲವೋ ಗೊತ್ತಿಲ್ಲ. ನಮಗೆ ಸಲಹೆ ನೀಡುವ ಬದಲು ನಿಮ್ಮದೇ ಸರ್ಕಾರವಿರುವ ಸಿಎಂಗೆ ಬುದ್ಧಿ ಮಾತುಗಳನ್ನು ಹೇಳಿ ಅಂತಾ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಪ್ರಧಾನಿ ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್ ಇದುವರೆಗೂ ಹೇಳದ ಮಾತನ್ನು ನಾನಿಂದು ಹೇಳುತ್ತಿದ್ದೇನೆ. ಕಲಬುರಗಿ – ಬೀದರ್ ರೈಲ್ವೇ ಯೋಜನೆಗಳಿಗೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಚಾಲನೆ ನೀಡಿತ್ತು. ಎನ್‍ಡಿಎ ಆಡಳಿತದ ಬಳಿಕ ಬಂದ ಯುಪಿಎ ಸರ್ಕಾರ ರೈಲ್ವೇ ಯೋಜನೆಯನ್ನು ಪೂರ್ಣ ಮಾಡಲು ಮನಸ್ಸು ಮಾಡಲಿಲ್ಲ. ಕರ್ನಾಟಕದಲ್ಲಿ ಬಿಎಸ್ ಯಡಿಯೂರಪ್ಪ ಸರ್ಕಾರ ಬಂದಾಗ ಕೇಂದ್ರದಿಂದ ಅನುದಾನ ಪಡೆದು ಕಾಮಗಾರಿಯನ್ನು ಆರಂಭಿಸಿದರು. 110 ಕಿಮೀ. ಉದ್ದದ ಕಾಮಗಾರಿಯಲ್ಲಿ ಯುಪಿಎ ಸರ್ಕಾರ ಕೇವಲ 37 ಕಿ.ಮೀ. ರೈಲ್ವೇ ಕಾಮಗಾರಿ ಪೂರ್ಣ ಮಾಡಿದೆ ಎಂದು ಹೇಳಿ ಖರ್ಗೆಗೆ ತಿರುಗೇಟು ನೀಡಿದ್ದರು.

    ನಮ್ಮಲ್ಲಿ ಭೇದ ಭಾವವಿಲ್ಲ: ಮಲ್ಲಿಕಾರ್ಜುನ್ ಖರ್ಗೆ ತಾವೇ ರೈಲ್ವೇ ಮಂತ್ರಿಯಾಗಿದ್ದರೂ, ತಮ್ಮ ಸ್ವಕ್ಷೇತ್ರದ ಅಭಿವೃದ್ಧಿಗೆ ಮುಂದಾಗಲಿಲ್ಲ. 2014ರಲ್ಲಿ ಕೇಂದ್ರದಲ್ಲಿ ಎನ್‍ಡಿಎ ಸರ್ಕಾರ ಬಂದ ಬಳಿಕ ಕಲಬುರಗಿ ಮತ್ತು ಬೀದರ್ ರೈಲ್ವೇ ಯೋಜನೆಯನ್ನು ಕೈಗೆತ್ತಿಕೊಂಡು ಪೂರ್ಣ ಮಾಡಿದ್ದೇವೆ. ನಾವು ಎಲ್ಲಿಯೂ ಕಲಬುರಗಿ ಮತ್ತು ಬೀದರ್ ನಮ್ಮ ವಿರೋಧ ಪಕ್ಷದ ನಾಯಕರ ಕ್ಷೇತ್ರ ಎಂದು ಭೇದ ಭಾವ ಮಾಡಿಲ್ಲ. ಕಲಬುರಗಿ ಮತ್ತು ಬೀದರ್ ವಿರೋಧ ಪಕ್ಷದ ನಾಯಕರ ಕ್ಷೇತ್ರವಾದ್ರೂ, ದೇಶ ನಮ್ಮದು ಅಂತಾ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ. 2017 ಡಿಸೆಂಬರ್ ನಲ್ಲಿ ಬೀದರ್ ರೈಲ್ವೆ ಯೋಜನೆಯನ್ನು ಉದ್ಘಾಟನೆ ಮಾಡಿದ ಖುಷಿ ನನಗಿದೆ ಎಂದು ಹೇಳಿದ್ದರು.