Tag: ರೈಲ್ವೇ ಪ್ರಯಾಣ

  • ಹೊರರಾಜ್ಯದ ಪ್ರವಾಸಿ ಕಾರ್ಮಿಕರ ರೈಲ್ವೇ ಪ್ರಯಾಣ ವೆಚ್ಚ ಭರಿಸಲು ಸರ್ಕಾರ ನಿರ್ಧಾರ

    ಹೊರರಾಜ್ಯದ ಪ್ರವಾಸಿ ಕಾರ್ಮಿಕರ ರೈಲ್ವೇ ಪ್ರಯಾಣ ವೆಚ್ಚ ಭರಿಸಲು ಸರ್ಕಾರ ನಿರ್ಧಾರ

    ಬೆಂಗಳೂರು: ಹೊರ ರಾಜ್ಯದ ವಲಸಿ ಕಾರ್ಮಿಕರ ರೈಲ್ವೇ ಪ್ರಯಾಣ ವೆಚ್ಚ ಭರಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

    ಸಿಎಂ ಯಡಿಯೂರಪ್ಪ ಈ ಬಗ್ಗೆ ಟ್ವಿಟ್ಟರ್ ಮೂಲಕ ಘೋಷಣೆ ಮಾಡಿದ್ದಾರೆ. “ತಮ್ಮ ಸ್ವಗ್ರಾಮಗಳಿಗೆ ಹಿಂದಿರುಗಲು ಪ್ರಯಾಣದ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿಲ್ಲವೆಂಬ ವಲಸೆ ಕಾರ್ಮಿಕರ ಮನವಿಯನ್ನು ಸರ್ಕಾರವು ಪರಿಗಣಿಸಿದೆ. ನಮ್ಮ ದೇಶದ ದೂರದ ಭಾಗಗಳಿಂದ ಬಂದಿರುವ ವಲಸೆ ಕಾರ್ಮಿಕರನ್ನು ನಾವು ನಮ್ಮದೇ ರಾಜ್ಯದ ಜನರು ಎಂದು ಭಾವಿಸುತ್ತೇವೆ ಮತ್ತು ಅವರ ಕಷ್ಟಕ್ಕೆ ಸರ್ಕಾರವು ಸ್ಪಂದಿಸಬೇಕೆಂಬುದು ನನ್ನ ದೃಢ ನಿರ್ಧಾರ” ಎಂದು ಹೇಳಿದರು.

    ಮತ್ತೊಂದು ಟ್ವೀಟ್ ಮಾಡಿ “ಈ ಹಿನ್ನೆಲೆಯಲ್ಲಿ ದಿನಾಂಕ 31-05-2020 ವರೆಗೆ ಶ್ರಮಿಕ್ ರೈಲುಗಳ ಮೂಲಕ ಸ್ವಗ್ರಾಮಗಳಿಗೆ ತೆರಳ ಬಯಸುವ ವಲಸೆ ಕಾರ್ಮಿಕರು ಹಾಗೂ ಲಾಕ್‍ಡೌನ್‍ನಲ್ಲಿ ಸಿಲುಕಿರುವವರ ಪ್ರಯಾಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ” ಎಂದು ಘೋಷಣೆ ಮಾಡಿದ್ದಾರೆ.