Tag: ರೈಲ್ವೇ ಪೊಲೀಸ್

  • ತಾಯಿ ಬಳಿ ಮಲಗಿದ್ದ ಗಂಡು ಮಗು ಕಳ್ಳತನ – ಮಹಿಳೆ ಬಂಧನ

    ತಾಯಿ ಬಳಿ ಮಲಗಿದ್ದ ಗಂಡು ಮಗು ಕಳ್ಳತನ – ಮಹಿಳೆ ಬಂಧನ

    ಮೈಸೂರು: ಆರು ತಿಂಗಳ ಗಂಡು ಮಗುವನ್ನು ಕದ್ದಯ್ಯುತ್ತಿದ್ದ ಮಹಿಳೆಯನ್ನು ರೈಲ್ವೇ ಪೊಲೀಸರು (Railway Police) ಬಂಧಿಸಿ ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆ.

    ಬುಧವಾರ ರಾತ್ರಿ ಮಗುವಿನೊಂದಿಗೆ ಪೋಷಕರು ರೈಲ್ವೆ ನಿಲ್ದಾಣದ ಪ್ಲಾಟ್ ಫಾರಂ ಬಳಿ ಮಲಗಿದ್ದರು. ಈ ವೇಳೆ ಮಹಿಳೆಯೊಬ್ಬಳು ಮಗುವನ್ನು ಕದ್ದುಕೊಂಡು ಹೋಗಿದ್ದಳು.  ಇದನ್ನೂ ಓದಿ:  ಇಂದು ಹಾಸನಾಂಬೆ ಗರ್ಭಗುಡಿ ಬಾಗಿಲು ಬಂದ್ – ಕಡೆಗಳಿಗೆಯಲ್ಲೂ ದೇವಿ ಕಣ್ತುಂಬಿಕೊಂಡ ಭಕ್ತಗಣ

     

    ನಿದ್ರೆಯಿಂದ ಪೋಷಕರು ಎಚ್ಚರಗೊಂಡ ಮೇಲೆ ಮಗು ಕಾಣೆಯಾಗಿರುವುದು ಗೊತ್ತಾಗಿದೆ. ತಾಯಿ (Mother) ಆಕ್ರಂದನ ಕಂಡ ರೈಲ್ವೆ ಪೊಲೀಸರು ವಿಚಾರಿಸಿದ್ದಾಗ ಮಗು ಕಾಣೆ ಆಗಿರುವ ವಿಚಾರವನ್ನು ತಿಳಿಸಿದ್ದಾರೆ.

    ತಕ್ಷಣವೇ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದಾಗ ನಡು ವಯಸ್ಸಿನ ಮಹಿಳೆ ಮಗುವನ್ನು ಅಪಹರಿಸಿದ್ದು ಗೊತ್ತಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮಹಿಳೆಯನ್ನು ಪತ್ತೆ ಹಚ್ಚಿದ್ದಾರೆ. ಹಾಸನ ಮೂಲದ 50 ವರ್ಷದ ನಂದಿನಿಯನ್ನು ಬಂಧಿಸಿದ ಪೊಲೀಸರು ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ:  ಇವಿ ಬಿಎಂಟಿಸಿ ಬಸ್ಸು ಚಾಲಕರಿಂದ ದಿಢೀರ್‌ ಪ್ರತಿಭಟನೆ

     

  • ರೈಲು ಹತ್ತೋ ವೇಳೆ 1.20 ಲಕ್ಷ ರೂ. ಎಗರಿಸಿದ ಖದೀಮರು

    ರೈಲು ಹತ್ತೋ ವೇಳೆ 1.20 ಲಕ್ಷ ರೂ. ಎಗರಿಸಿದ ಖದೀಮರು

    ಮಂಡ್ಯ: ವ್ಯಕ್ತಿಯೊಬ್ಬ ಜೇಬಿನಲ್ಲಿ 1.20 ಲಕ್ಷ ರೂ. ಹಣವನ್ನು ಜೇಬಿನಲ್ಲಿ ಇಟ್ಟುಕೊಂಡು ರೈಲು ಹತ್ತುವ ವೇಳೆ ಜೇಬಿನಲ್ಲಿ ಇದ್ದ ಹಣ ಕಳವಾಗಿರುವ ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ಜರುಗಿದೆ.

    ಬೊಮ್ಮನಹಳ್ಳಿಯ ರಾಮು ಅವರು 1.20 ಲಕ್ಷ ರೂ.ಗಳನ್ನು ತಮ್ಮ ಬೇಬಿನಲ್ಲಿ ಇಟ್ಟುಕೊಂಡು ರಾಮನಗರಕ್ಕೆ ತೆರಳಲು ಮಂಡ್ಯ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ಮಧ್ಯಾಹ್ನ 1:30ರ ಸುಮಾರಿಗೆ ಮೆಮೋ ರೈಲು ಆಗಮಿಸಿದ್ದು, ಈ ವೇಳೆ ರಾಮು ರೈಲು ಹತ್ತಲು ಮುಂದಾಗಿದ್ದರು.

    ರೈಲು ಹತ್ತಿದ ಬಳಿಕ ರಾಮು ಅವರು ಜೇಬನ್ನು ನೋಡಿಕೊಂಡಾಗ ಹಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ರೈಲು ಹತ್ತುವ ವೇಳೆ ಜನ ಸಂದಣಿಯಲ್ಲಿ ಖದೀಮರು ರಾಮು ಅವರ ಜೇಬಿನಿಂದ ಹಣ ಎಗರಿಸಿದ್ದಾರೆ. ಸದ್ಯ ಈ ಘಟನೆ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಅಕ್ರಮವಾಗಿ ಸಾಗಿಸುತ್ತಿದ್ದ 43 ಲಕ್ಷ ರೂ. ಮೌಲ್ಯದ 1.3 ಕೆಜಿ ಚಿನ್ನ ವಶ

    ಅಕ್ರಮವಾಗಿ ಸಾಗಿಸುತ್ತಿದ್ದ 43 ಲಕ್ಷ ರೂ. ಮೌಲ್ಯದ 1.3 ಕೆಜಿ ಚಿನ್ನ ವಶ

    ಗುವಾಹಟಿ: ಅಕ್ರಮವಾಗಿ 43 ಲಕ್ಷ ರೂ. ಮೌಲ್ಯದ ಚಿನ್ನವನ್ನು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ರೈಲ್ವೇ ಪೊಲೀಸರು ಬಂಧಿಸಿದ್ದಾರೆ.

    ಕೇರಳದ ಕಣ್ಣೂರಿನ ಮೂಲದ ಮೊಹಮ್ಮದ್ ಹ್ಯಾರಿಸ್ (51) ಬಂಧಿತ ಆರೋಪಿ. ಗುವಾಹಟಿ ರೈಲ್ವೇ ನಿಲ್ದಾಣದಲ್ಲಿ ಮೊಹಮ್ಮದ್‍ನನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ಮೊಹಮ್ಮದ್ ಕಾಮ್ರಪ್ ಏಕ್ಸ್‌ಪ್ರೆಸ್ ರೈಲಿನ ಬೋಗಿ ಸಂಖ್ಯೆ ಬಿ-3ರ 11ನೇ ಸೀಟ್‍ನಲ್ಲಿ ಪ್ರಯಾಣಿಸುತ್ತಿದ್ದ. ಖಚಿತ ಮಾಹಿತಿ ಆಧಾರದ ಮೇಲೆ ಆತನ ಬಂಧನಕ್ಕೆ ಪೊಲೀಸರು ಮುಂದಾಗಿದ್ದರು. ರೈಲು ಇಂದು ಬೆಳಗ್ಗೆ 7.45 ಗಂಟೆಗೆ ಗುವಾಹಟಿ ರೈಲು ನಿಲ್ದಾಣದ ಪ್ಲ್ಯಾಟ್‍ಫಾರಂ ನಂಬರ್ 1ರಲ್ಲಿ ಬಂದು ನಿಂತಿತ್ತು. ತಕ್ಷಣವೇ ರೈಲು ಹತ್ತಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಬಂಧಿತ ಮೊಹಮ್ಮದ್ ಬಳಿ 8 ಚಿನ್ನದ ಬಿಸ್ಕೆಟ್‍ಗಳು ಸಿಕ್ಕಿದ್ದು, ಅವುಗಳ ಒಟ್ಟು ತೂಕ 1.3 ಕೆಜಿ ಆಗಿದೆ. ಸುಮಾರು 43 ಲಕ್ಷ ರೂ. ಮೌಲ್ಯದ ಚಿನ್ನ ಎಂದು ಅಂದಾಜಿಸಲಾಗಿದೆ. ಚಿನ್ನವನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

    ಗುವಾಹಟಿ ರೈಲ್ವೇ ನಿಲ್ದಾಣದಲ್ಲಿ ಏಪ್ರಿಲ್ 13ರಂದು 12 ಚಿನ್ನದ ಬಿಸ್ಕೆಟ್‍ಗಳನ್ನು ರೈಲ್ವೇ ಪೊಲೀಸರು ವಶಕ್ಕೆ ಪಡೆದಿದ್ದರು. ಅದರ ಮೌಲ್ಯವು 60 ಲಕ್ಷ ರೂ. ಎಂದು ಅಂದಾಜಿಸಲಾಗಿತ್ತು. ಅಷ್ಟೇ ಅಲ್ಲದೆ 2018 ಮಾರ್ಚ್ 23ರಲ್ಲಿ 12 ಚಿನ್ನದ ಬಿಸ್ಕೆಟ್, ಅದೇ ತಿಂಗಳ 15ರಂದು 1.5 ಕೆಜಿ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

  • ಕೆಲವೇ ಸೆಕೆಂಡ್‍ನಲ್ಲಿ ವೃದ್ಧನ ಪ್ರಾಣ ಉಳಿಸಿದ ರೈಲ್ವೇ ಪೊಲೀಸ್ ಪೇದೆ

    ಕೆಲವೇ ಸೆಕೆಂಡ್‍ನಲ್ಲಿ ವೃದ್ಧನ ಪ್ರಾಣ ಉಳಿಸಿದ ರೈಲ್ವೇ ಪೊಲೀಸ್ ಪೇದೆ

    – ಪೇದೆಗೆ ಅವಾರ್ಡ್ ನೀಡಲು ಶಿಫಾರಸು

    ಲಕ್ನೋ: ರೈಲಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದ ವೃದ್ಧನನ್ನು ರೈಲ್ವೇ ಪೊಲೀಸರೊಬ್ಬರು ಕೆಲವೇ ಸೆಕೆಂಡ್‍ನಲ್ಲಿ ಪಾರು ಮಾಡಿದ ಘಟನೆ ಉತ್ತರ ಪ್ರದೇಶದ ದೀನ ದಯಾಳ್ ಉಪಾಧ್ಯಾಯ ಜಂಕ್ಷನ್‍ನಲ್ಲಿ ನಡೆದಿದೆ.

    ರೈಲ್ವೇ ಪೊಲೀಸ್ ಅಭಿಷೇಕ್ ಪಾಂಡೆ ಅವರು 70 ವರ್ಷದ ವೃದ್ಧನನ್ನು ಪ್ರಾಣಾಪಾಯದಿಂದ ಪಾರು ಮಾಡಿದ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆಯು ಶನಿವಾರ ರಾತ್ರಿ ನಡೆದಿದ್ದು, ಸಮಯ ಪ್ರಜ್ಞೆ, ಕರ್ತವ್ಯ ನಿಷ್ಠೆ ತೋರಿದ ಅಭಿಷೇಕ್ ಪಾಂಡೆ ಅವರಿಗೆ ಪುರಸ್ಕಾರ ನೀಡಬೇಕು ಎಂದು ಉನ್ನತ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗಿದೆ.

    ವಿಡಿಯೋದಲ್ಲಿ ಏನಿದೇ?:
    ವೃದ್ಧನೊಬ್ಬ ದೀನ ದಯಾಳ್ ಉಪಾಧ್ಯಾಯ ಜಂಕ್ಷನಿನ 6ನೇ ಪ್ಲಾಟ್‍ಫಾರಂ ಮೇಲೆ ಕುಳಿತಿದ್ದ. ಈ ವೇಳೆ ಹೌರಾದಿಂದ ಜಮ್ಮು ಕಡೆಗೆ ಹೊರಟಿದ್ದ ಹೌರಾ-ಜಮ್ಮು ಎಕ್ಸ್‍ಪ್ರೆಸ್ ರೈಲು ಅದೇ ಪ್ಲಾಟ್‍ಫಾರಂ ಕಡೆಗೆ ಬರುತ್ತಿತ್ತು. ಆದರೆ ಇದನ್ನು ಗಮನಿಸದ ವೃದ್ಧ ಅಲ್ಲಿಯೇ ಕುಳಿತ್ತಿದ್ದ. ಇದನ್ನು ನೋಡಿ ಅಭಿಷೇಕ್ ಪಾಂಡೆ ಅವರು ತಕ್ಷಣವೇ ಆತನನ್ನು ರಕ್ಷಿಸಿದ್ದಾರೆ.

    ಅಭಿಷೇಕ್ ಪಾಂಡೆ ಅವರ ಸಮಯ ಪ್ರಜ್ಞೆಯಿಂದ ಕೆಲವೇ ಸೆಕೆಂಡ್‍ನಲ್ಲಿ ಭಾರೀ ಅನಾಹುತ ತಪ್ಪಿದ್ದು, ವೃದ್ಧ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ದೃಶ್ಯವನ್ನು ಗಮನಿಸಿದ ಪ್ರಯಾಣಿಕರು ಅಭಿಷೇಕ್ ಪಾಂಡೆ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ-ವಿಡಿಯೋ ವೈರಲ್

    ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ-ವಿಡಿಯೋ ವೈರಲ್

    ಮುಂಬೈ: ಕುಟುಂಬದ ಕಲಹದಿಂದಾಗಿ ವ್ಯಕ್ತಿಯೋರ್ವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಮುಂಬೈನ ಕುರ್ಲಾ ರೈಲು ನಿಲ್ದಾಣದಲ್ಲಿ ನಡೆದಿದೆ. ಈ ದೃಶ್ಯಗಳು ರೈಲ್ವೇ ನಿಲ್ದಾಣದಲ್ಲಿದ್ದ ಸಿಸಿಟಿವಿ ಯಲ್ಲಿ ಸೆರೆಯಾಗಿದೆ.

    54 ವರ್ಷದ ನರೇಂದ್ರ ದಾಮೋಜಿ ಕೋಟೆಕಾರ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ದಾಮೋಜಿ ದಿಢೀರ್ ಅಂತಾ ರೈಲ್ವೇ ಹಳಿಯ ಮೇಲೆ ಮಲಗಿದ್ದಾನೆ. ಕೂಡಲೇ ನಿಲ್ದಾಣದಲ್ಲಿದ್ದ ಪ್ರಯಾಣಿಕರು ನರೇಂದ್ರನನ್ನು ರಕ್ಷಣೆ ಮಾಡಿದ್ದಾರೆ.

    ಏನಿದು ಘಟನೆ?
    ನರೇಂದ್ರ ದಾಮೋಜಿ ಸೋಮವಾರ ಮಧ್ಯಾಹ್ನ 1.30 ರ ವೇಳೆಗೆ ಮುಂಬೈನ ಕುರ್ಲಾ ರೈಲು ನಿಲ್ದಾಣದ ಬಳಿ ಬಂದಿದ್ದಾನೆ. ಕುಟುಂಬದ ಗಲಾಟೆಗಳಿಗೆ ಮನನೊಂದು ದಾಮೋಜಿ ರೈಲು ಹಳಿಯ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾನೆ. ಕೂಡಲೇ ಸ್ಥಳದಲ್ಲಿದ್ದ ಪ್ರಯಾಣಿಕರು ಮತ್ತು ರೈಲ್ವೇ ಸಿಬ್ಬಂದಿ ನರೇಂದ್ರನನ್ನು ರಕ್ಷಿಸಿದ್ದಾರೆ.

    ಕೆಲವು ದಿನಗಳ ಹಿಂದೆ ಪನ್ವೇಲ್ ರೈಲು ನಿಲ್ದಾಣದಲ್ಲಿ ಫ್ಲಾಟ್‍ಫಾರಂ ತುದಿಯಲ್ಲಿ ನಿಂತು ರೈಲು ಹತ್ತುವ ವೇಳೆ ಬೀಳುತ್ತಿದ್ದ ವ್ಯಕ್ತಿಯನ್ನು ಪೊಲೀಸರು ರಕ್ಷಿಸಿದ್ದರು. ಫೆಬ್ರವರಿ 5 ರಂದು ನೈಗಾನ್ ರೈಲು ನಿಲ್ದಾಣದಲ್ಲಿ 7 ವರ್ಷದ ತಾಯಿಯೊಂದಿಗೆ ರೈಲು ಹತ್ತುವ ವೇಳೆ ಕೆಳಗೆ ಬಿದ್ದಿದ್ದ ಮಗುವನ್ನು ಪೊಲೀಸರು ರಕ್ಷಿಸಿದ್ದರು.

  • ರೈಲಲ್ಲಿ ಮಹಿಳೆ ಮುಂದೆ ಪ್ಯಾಂಟ್ ಜಿಪ್ ಬಿಚ್ಚಿದವ ಕೊನೆಗೂ ಸಿಕ್ಕಿಬಿದ್ದ!

    ರೈಲಲ್ಲಿ ಮಹಿಳೆ ಮುಂದೆ ಪ್ಯಾಂಟ್ ಜಿಪ್ ಬಿಚ್ಚಿದವ ಕೊನೆಗೂ ಸಿಕ್ಕಿಬಿದ್ದ!

    ಮುಂಬೈ: ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಕಾರಿನಲ್ಲಿ ಚಾಲಕನೊಬ್ಬ ಟೆಕ್ಕಿ ಯುವತಿಯ ಮುಂದೆ ಹಸ್ತಮೈಥುನ ಮಾಡಿದ ಪ್ರಕರಣ ಮಾಸುವ ಮುನ್ನವೇ ಮುಂಬೈ ಲೋಕಲ್ ಟ್ರೈನಲ್ಲೂ ಇಂಥದ್ದೇ ಘಟನೆಯೊಂದು ವರದಿಯಾಗಿದೆ. ಮತ್ತೆ ಮತ್ತೆ ಇಂತಹ ಘಟನೆ ನಡೆಯುತ್ತಿರುವುದರಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.

    ಘಟನೆ ಸಂಬಂಧ 30 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಹಾಗೂ ಮಸ್ಜಿದ್ ಬಂದರ್ ನಡುವೆ ಶನಿವಾರ ಬೆಳಗ್ಗೆ ಮಹಿಳೆ ಸಂಚರಿಸುವಾಗ ಈ ಕೃತ್ಯವೆಸಗಿದ್ದಾನೆ. ಮಹಿಳೆ ರೈಲಿನಲ್ಲಿ ಬೇಲಾಪುರಕ್ಕೆ ಪ್ರಯಾಣಿಸುತ್ತಿದ್ದರು.

    ಮಹಿಳಾ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ರೈಲಿನ ಮತ್ತೊಂದು ಕಂಪಾರ್ಟ್ ಮೆಂಟ್ ನಲ್ಲಿದ್ದ ವ್ಯಕ್ತಿ ತನ್ನ ಪ್ಯಾಂಟ್ ನ ಜಿಪ್ ಬಿಚ್ಚಿ ಗುಪ್ತಾಂಗ ಪ್ರದರ್ಶಿಸಿದ್ದಾನೆ. ಈ ಹಿನ್ನೆಲೆಯಲ್ಲಿ ರೈಲು ಇಳಿದ ತಕ್ಷಣ ಮಹಿಳೆ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಲ್ಲಿದ್ದ ಪೊಲೀಸರಿಗೆ ದೂರು ನೀಡಿದ್ದಾರೆ.

    ದೂರಿನ ಹಿನ್ನೆಲೆಯಲ್ಲಿ ಆರೋಪಿಯ ಪತ್ತೆಗೆ ಹಲವು ತಂಡಗಳನ್ನು ರಚಿಸಲಾಯಿತು. ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಆರೋಪಿ ಪತ್ತೆಯಾಗಿದ್ದಾನೆ. ಸಿಸಿಟಿವಿ ದೃಶ್ಯಗಳನ್ನಾಧರಿಸಿ ಪರಿಶೀಲನೆ ಮುಂದುವರೆಸಿದ ಪೊಲೀಸರು ಇಂದು ಬೆಳಗ್ಗೆ 6 ಗಂಟೆಗೆ ಬಂಧಿಸಿದ್ದಾರೆ. ಕೂಲಿ ಕಾರ್ಮಿಕನಾಗಿರುವ ಈತ ಒಡಿಶಾ ಮೂಲದವನು ಎಂದು ಪೊಲೀಸರು ತಿಳಿಸಿದ್ದಾರೆ. ಈತನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

  • ಹುಬ್ಬಳ್ಳಿಯ ರೈಲ್ವೇ ಪೊಲೀಸ್ ಅಧಿಕಾರಿ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ

    ಹುಬ್ಬಳ್ಳಿಯ ರೈಲ್ವೇ ಪೊಲೀಸ್ ಅಧಿಕಾರಿ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ

    ಧಾರವಾಡ: ಅಕ್ರಮ ಆಸ್ತಿ ಗಳಿಕೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ರೈಲ್ವೇ ಪೊಲೀಸ್ ಠಾಣೆಯ ಸಬ್‍ಇನ್ಸ್ ಪೆಕ್ಟರ್ ಕೆ.ಮಲ್ಲೇಶ್ ಅವರ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

    ಹುಬ್ಬಳ್ಳಿಯ ರೈಲ್ವೇ ಪೊಲೀಸ್ ಠಾಣೆಯ ಕ್ರೈಂ ವಿಭಾಗದಲ್ಲಿ ಸಬ್‍ಇನ್ಸ್ ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಕೆ. ಮಲ್ಲೇಶ್ ಮೂಲತಃ ರಾಮನಗರ ಜಿಲ್ಲೆಯ ಚನ್ನಪಟ್ಟಣದ ನಿವಾಸಿ ಆಗಿದ್ದು, ಬೆಂಗಳೂರು, ಮೈಸೂರು ಸೇರಿದಂತೆ ಚನ್ನಪಟ್ಟಣದಲ್ಲಿ ಅಕ್ರಮವಾಗಿ ಆಸ್ತಿ ಮಾಡಿದ್ದಾರೆ ಎನ್ನಲಾಗುತ್ತಿದೆ.

    ಸೂಕ್ತ ಮಾಹಿತಿ ಮೇರೆಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳನ್ನ ಪರಿಶೀಲನೆ ಮಾಡುತಿದ್ದಾರೆ. ಈ ಹಿಂದೆ ಬೆಂಗಳೂರಿನ ರೈಲ್ವೇ ಪೊಲೀಸ್ ಠಾಣೆಯ ಕ್ರೈಂ ವಿಭಾಗದ ಸಬ್‍ಇನ್ಸ್ ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ ಅವರನ್ನು ಏಪ್ರಿಲ್ 21 ರಂದು ಹುಬ್ಬಳ್ಳಿಗೆ ವರ್ಗಾವಣೆ ಮಾಡಲಾಗಿತ್ತು.

    ಇದೇ ತಿಂಗಳು 30 ರಂದು ಕೆ.ಮಲ್ಲೇಶ್ ಅವರು ಕೆಲಸದಿಂದ ನಿವೃತ್ತಿಯಾಗಲಿದ್ದು, ಅವರು ಕೆಲಸ ಮಾಡಿದ ಬೆಂಗಳೂರು ಮತ್ತು ಹುಬ್ಬಳ್ಳಿ ಕಚೇರಿಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.

  • ಧಾರವಾಡ: ರೈಲ್ವೇ ಹಳಿಯಲ್ಲಿ ವ್ಯಕ್ತಿಯ ಶವ ಪತ್ತೆ: ಕೊಲೆ ಶಂಕೆ

    ಧಾರವಾಡ: ರೈಲು ಹಳಿಯ ಮೇಲೆ ವ್ಯಕ್ತಿಯ ಶವವೊಂದು ಪತ್ತೆಯಾಗಿರುವ ಘಟನೆ ಧಾರವಾಡದ ನವಲೂರು ಗ್ರಾಮದ ಹತ್ತಿರ ಸೋಮವಾರ ಪತ್ತೆಯಾಗಿದೆ.

    ಮಹ್ಮದ್ ರಸೂಲ್ (28) ಮೃತ ವ್ಯಕ್ತಿ. ಮಹ್ಮದ್ ರಸೂಲ್ ಧಾರವಾಡ ನಗರದ ಅಗಸಿ ಬಡಾವಣೆಯ ನಿವಾಸಿ ಎಂದು ತಿಳಿದು ಬಂದಿದೆ. ರವಿವಾರ ಮನೆಯಿಂದ ಹೊರ ಹೋಗಿದ್ದ ರಸೂಲ್ ಸೋಮವಾರ ರೈಲು ಹಳಿಯ ಮೇಲೆ ಶವವಾಗಿ ಪತ್ತಯಾಗಿದ್ದಾನೆ. ರಸೂಲ್ ಪಾಲಕರು ನಮ್ಮ ಮಗನನ್ನು ಕೊಲೆ ಮಾಡಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

    ರಸೂಲ್ ಮೇಲೆ ರೈಲುಗಳು ಹರಿದ ಪರಿಣಾಮ ದೇಹ ತುಂಡು ತುಂಡಾಗಿ ಬಿದ್ದಿದೆ. ರುಂಡ ಹಾಗೂ ಎರಡು ಕೈಗಳು ಕತ್ತರಿಸಿ ಹೋಗಿದ್ದು ಅವುಗಳು ಇನ್ನೊಂದು ಭಾಗದಲ್ಲಿ ಬಿದ್ದಿದ್ದವು. ಸಾವನ್ನಪ್ಪಿದ ರಸೂಲ್ ಧಾರವಾಡ ನಗರದಲ್ಲಿ ಪಾನ್ ಶಾಪ್ ನಡೆಸುತ್ತಿದ್ದು, ಕುಡಿತದ ದಾಸನಾಗಿದ್ದ ಎಂದು ತಿಳಿದು ಬಂದಿದೆ. ಹುಬ್ಬಳ್ಳಿ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.