Tag: ರೈಲ್ವೇ ಗೇಟ್

  • ಮಾಜಿ ಶಾಸಕನ ಪುತ್ರ, ಜಿ.ಪಂ ಸದಸ್ಯನಿಂದ ರೈಲ್ವೇ ಗೇಟ್‍ಮನ್ ಮೇಲೆ ಹಲ್ಲೆ!

    ಮಾಜಿ ಶಾಸಕನ ಪುತ್ರ, ಜಿ.ಪಂ ಸದಸ್ಯನಿಂದ ರೈಲ್ವೇ ಗೇಟ್‍ಮನ್ ಮೇಲೆ ಹಲ್ಲೆ!

    ಶಿವಮೊಗ್ಗ: ರೈಲು ಬರುವ ಸಮಯದಲ್ಲಿ ಗೇಟ್ ಹಾಕಿದ್ದಕ್ಕೆ ಆಕ್ರೋಶಗೊಂಡ ಬಿಜೆಪಿಯ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಮಾಜಿ ಶಾಸಕರೊಬ್ಬರ ಪುತ್ರ ರೈಲ್ವೇ ಗೇಟ್ ಮನ್, ಅರಣ್ಯ ಇಲಾಖೆಯ ಗಾರ್ಡ್ ಹಾಗೂ ವಾಚರ್ ಮೇಲೆ ದೌರ್ಜನ್ಯ ನಡೆಸಿದ್ದಾರೆ.

    ಜಿಲ್ಲೆಯ ಹೊಸನಗರ ತಾಲೂಕಿನ ಸೂಡೂರು ರೈಲ್ವೇ ಗೇಟ್ ನಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ಮಾಜಿ ಶಾಸಕ ಸ್ವಾಮಿರಾವ್ ಪುತ್ರ ಹಾಗೂ ಬಿಜೆಪಿಯ ನಗರ ಕ್ಷೇತ್ರದ ಜಿ.ಪಂ ಸದಸ್ಯ ಸುರೇಶ್ ಸ್ವಾಮಿ ರಾವ್ ಮತ್ತು ಇವರ ಸ್ನೇಹಿತ ತ್ರಿಭುವನ್ ದೌರ್ಜನ್ಯ ನಡೆಸಿದವರು.

    ಜಿಪಂ ಸದಸ್ಯ ಶಿವಮೊಗ್ಗ ಕಡೆಯಿಂದ ಕಾರಿನಲ್ಲಿ ಬಂದಿದ್ದಾನೆ. ಇದೇ ವೇಳೆ ರೈಲು ಬರುವ ಸಿಗ್ನಲ್ ದೊರೆತ ಕಾರಣ ಗೇಟ್ ಮನ್ ರೈಲ್ವೆ ಗೇಟ್ ಹಾಕಿದ್ದಾರೆ. ಇದರಿಂದ ಕುಪಿತಗೊಂಡ ಸುರೇಶ್, ಗೇಟ್ ಮನ್ ಗಣೇಶ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಇವರನ್ನು ಸಮಾಧಾನ ಮಾಡಲು ಬಂದ ಅರಣ್ಯ ತನಿಖಾ ಠಾಣೆ ಗಾರ್ಡ್ ಬಸವರಾಜು, ವಾಚರ್ ಗುತ್ಯಪ್ಪ ಎಂಬವರ ಮೇಲೂ ಹಲ್ಲೆ ಮಾಡಿ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.

    ಸದ್ಯಕ್ಕೆ ಹಲ್ಲೆಗೊಳಗಾದ ಗಣೇಶ್, ಬಸವರಾಜು, ಗುತ್ಯಪ್ಪ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಕುರಿತು ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publict

  • ಕಾರಿಗೆ ರೈಲ್ವೆ ಎಂಜಿನ್ ಡಿಕ್ಕಿ; ಇಬ್ಬರ ಸಾವು

    ಹಾಸನ: ಕಾರೊಂದು ರೈಲ್ವೆ ಗೇಟ್ ದಾಟುವ ವೇಳೆ ರೈಲ್ವೇ ಎಂಜಿನ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಗೇಶಪುರ ಗ್ರಾಮದ ಬಳಿ ನಡೆದಿದೆ.

    ದುದ್ದ ಗ್ರಾಮದ ನಿವಾಸಿಗಳಾದ ಆನಂದ್ (22) ಮತ್ತು ರಾಘವೇಂದ್ರ (28) ಮೃತ ದುರ್ದೈವಿಗಳು. ಮಂಗಳವಾರ ರಾತ್ರಿ ಸುಮಾರು 11 ಗಂಟೆಗೆ ಇಬ್ಬರೂ ಅರಸೀಕೆರೆದಿಂದ ಕೋರವಂಗಲ್ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಕಾವಲುಗಾರನಿಲ್ಲದ ರೈಲ್ವೇ ಗೇಟ್ ದಾಟುವಾಗ ಅಪಘಾತ ನಡೆದಿದೆ.

    ವೇಗವಾಗಿ ಬಂದ ರೈಲ್ವೇ ಎಂಜಿನ್ ಕಾರಿಗೆ ಡಿಕ್ಕಿ ಹೊಡೆದು ಸುಮಾರು 500 ಮೀಟರ್ ದೂರದವರೆಗೆ ಎಳೆದುಕೊಂಡು ಹೋಗಿದೆ. ಕೊನೆಗೆ ರೈಲ್ವೇ ಪೊಲೀಸರು ಸಾರ್ವಜನಿಕರ ಸಹಾಯದೊಂದಿಗೆ ಕಾರನ್ನು ಎಂಜಿನ್‍ನಿಂದ ಬೇರ್ಪಡಿಸಿದ್ದಾರೆ. ಈ ಕುರಿತು ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.