Tag: ರೈಲ್ವೇ ಇಲಾಖೆ

  • ರೈಲು ವಿಳಂಬ – ಸರಿಯಾದ ಸಮಯಕ್ಕೆ ವರನನ್ನು ಮದುವೆಗೆ ಕರೆದೊಯ್ದ ರೈಲ್ವೇ ಇಲಾಖೆ

    ರೈಲು ವಿಳಂಬ – ಸರಿಯಾದ ಸಮಯಕ್ಕೆ ವರನನ್ನು ಮದುವೆಗೆ ಕರೆದೊಯ್ದ ರೈಲ್ವೇ ಇಲಾಖೆ

    ಮುಂಬೈ: ರೈಲು ಬರಲು ತಡವಾದ ಹಿನ್ನೆಲೆ ನಿಗದಿ ಪಡಿಸಿದ ಮೂಹೂರ್ತದಲ್ಲಿ ಮಂಟಪಕ್ಕೆ ತಲುಪಬೇಕಿದ್ದ ವರನನ್ನು ರೈಲ್ವೆ ಇಲಾಖೆ (Railway Department) ಸರಿಯಾದ ಸಮಯಕ್ಕೆ ತಲುಪಿಸಿರುವ ಘಟನೆ ನಡೆದಿದೆ.

    ಮುಂಬೈ (Mumbai) ಮೂಲದ ವರ ಚಂದ್ರಶೇಖರ್ ವಾಘ್ ಹಾಗೂ ಅವರ ಕುಟುಂಬಸ್ಥರು ಗುವಾಹಟಿಯಲ್ಲಿ (Guwahati) ನಿಗದಿಯಾಗಿದ್ದ ಮದುವೆಗಾಗಿ ಮುಂಬೈನ ಕಲ್ಯಾಣ ನಿಲ್ದಾಣದಲ್ಲಿ ಕಾಯುತ್ತಿದ್ದರು. ಆದರೆ ಮುಂಬೈನಿಂದ ಗುವಾಹಟಿಗೆ ಹೊರಟಿದ್ದ ಗೀತಾಂಜಲಿ ಎಕ್ಸಪ್ರೆಸ್‌ (Geetanjali Express) ಪಶ್ಚಿಮ ಬಂಗಾಳದ (West Bengal) ಹೌರಾ ಬಳಿ ಇರುವ ಸಾಂತರಗಾಭಿ ನಿಲ್ದಾಣಕ್ಕೆ 4 ಗಂಟೆ ತಡವಾಗಿ ತಲುಪಿದೆ.ಇದನ್ನೂ ಓದಿ: ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ – ಆಯ್ದ ದೇಶಗಳ ಪಟ್ಟಿಗೆ ಭಾರತ ಸೇರ್ಪಡೆ

    ಇದರಿಂದ ಆತಂಕಗೊಂಡ ವರ ಕೂಡಲೇ ತನ್ನ ಎಕ್ಸ್ (X) ಖಾತೆಯ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ರೈಲ್ವೇ ಇಲಾಖೆಗೆ ಮನವಿ ಮಾಡಿಕೊಂಡಿದ್ದು, ಕೂಡಲೇ ಇಲಾಖೆ ಆತನ ಮನವಿಗೆ ಸ್ಪಂದಿಸಿ, ಮುಹೂರ್ತದ ಸಮಯಕ್ಕೆ ಸರಿಯಾಗಿ ಮಂಟಪಕ್ಕೆ ತಲುಪುವಂತೆ ಸಹಾಯ ಮಾಡಿದೆ.

    ಘಟನೆ ಏನು?
    ನ.14ರಂದು ಚಂದ್ರಶೇಖರ್ ವಾಘ 35 ಜನ ಕುಟುಂಬಸ್ಥರೊಂದಿಗೆ ಮುಂಬೈನ ಕಲ್ಯಾಣ ನಿಲ್ದಾಣದಿಂದ (Kalyan Railway Station) ಗುವಾಹಟಿಗೆ ಹೋಗಬೇಕಿತ್ತು. ಕಲ್ಯಾಣ ರೈಲು ನಿಲ್ದಾಣದಿಂದ ಬೆಳಿಗ್ಗೆ 6:55ಕ್ಕೆ ಗೀತಾಂಜಲಿ ಎಕ್ಸಪ್ರೆಸ್‌ ರೈಲು ಹತ್ತಿ, ನ.15ರ ಮಧ್ಯಾಹ್ನ 1:05ಕ್ಕೆ ಪಶ್ಚಿಮ ಬಂಗಾಳದ ಹೌರಾ ಜಂಕ್ಷನ್ (Howrah Juntion) ತಲುಪಬೇಕಿತ್ತು. ಅಲ್ಲಿಂದ ಸಂಜೆ 4.05ಕ್ಕೆ ಇರುವ ಸರೈಘಾಟ್ ಎಕ್ಸಪ್ರೆಸ್‌ ರೈಲು ಹತ್ತಿ ಗುವಾಹಟಿ ತಲುಪುವ ಯೋಜನೆ ಅವರದಾಗಿತ್ತು. ಆದರೆ ಗೀತಾಂಜಲಿ ಎಕ್ಸಪ್ರೆಸ್‌ ರೈಲು ಹೌರಾ ನಿಲ್ದಾಣದಿಂದ 15 ಕಿ.ಮೀ ದೂರದಲ್ಲಿರುವ ಸಾಂತರಗಾಛಿ ರೈಲು ನಿಲ್ದಾಣಕ್ಕೆ ತಲುಪಬೇಕಾಗಿದ್ದ ಸಮಯಕ್ಕಿಂತ 4 ಗಂಟೆ ತಡವಾಗಿ ಬಂದಿತ್ತು. ಇದರಿಂದ ವಿಚಲಿತರಾದ ವರ ಕೂಡಲೇ `ಎಕ್ಸ್’ನಲ್ಲಿ ತಮ್ಮ ಪರಿಸ್ಥಿತಿಯನ್ನು ವಿವರಿಸಿ, ನೆರವು ನೀಡುವಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರೈಲ್ವೆ ಅಧಿಕಾರಿಗಳನ್ನು ಟ್ಯಾಗ್ ಮಾಡಿ ಮನವಿ ಮಾಡಿದ್ದರು.

    ಮನವಿಗೆ ಸ್ಪಂದಿಸಿದ ರೈಲ್ವೆ ಅಧಿಕಾರಿಗಳು ಗೀತಾಂಜಲಿ ಎಕ್ಸ್ಪ್ರೆಸ್ ರೈಲು ಬರುವವರೆಗೂ ಸರೈಘಾಟ್ ಎಕ್ಸಪ್ರೆಸ್‌ ರೈಲನ್ನು ಹೌರಾ ಜಂಕ್ಷನ್‌ನಲ್ಲಿಯೇ ನಿಲ್ಲಿಸಿದರು. ಲೋಕೊ ಪೈಲಟ್ ಗೀತಾಂಜಲಿ ಎಕ್ಸಪ್ರೆಸ್‌ ರೈಲಿನ ವೇಗವನ್ನು ಹೆಚ್ಚಿಸಿದರು.

    ರೈಲು ತಲುಪಿದ ತಕ್ಷಣ ರೈಲ್ವೆ ಸಿಬ್ಬಂದಿಗಳು ತಕ್ಷಣವೇ ವರನ ಕುಟುಂಬ ಮತ್ತು ಅವರ ಬ್ಯಾಗುಗಳನ್ನು ಇನ್ನೊಂದು ಪ್ಲಾಟ್‌ಫಾರ್ಮ್ಗೆ ಸಾಗಿಸಲು ನೆರವಾದರು. ವಯೋವೃದ್ಧರಿಗಾಗಿ ವೀಲ್‌ಚೇರ್ ವ್ಯವಸ್ಥೆ ಮಾಡಲಾಗಿತ್ತು. ಇದರಿಂದಾಗಿ ರೈಲು ಸಂಜೆ 4:08 ನಿಮಿಷಕ್ಕೆ ಹೌರಾ ನಿಲ್ದಾಣ ತಲುಪಿತು. ಸರೈಘಾಟ್ ಎಕ್ಸಪ್ರೆಸ್‌ ಸಂಜೆ 4.19ಕ್ಕೆ ಹೊರಟು ಶನಿವಾರ ಬೆಳಿಗ್ಗೆ 10.05ಕ್ಕೆ ಸರಿಯಾಗಿ ಗುವಾಹಟಿ ತಲುಪಿತು ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

    ಸರಿಯಾಗಿ ಸಮಯಕ್ಕೆ ತಲುಪಲು ಎಲ್ಲ ರೀತಿಯ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟು ಸಹಾಯ ಮಾಡಿದ ರೈಲ್ವೆ ಇಲಾಖೆ ಹಾಗೂ ಅಧಿಕಾರಿಗಳಿಗೆ ಚಂದ್ರಶೇಖರ್ ಧನ್ಯವಾದ ತಿಳಿಸಿದ್ದಾರೆ.ಇದನ್ನೂ ಓದಿ: ಪಿಡಿಓ ಪ್ರಶ್ನೆ ಪತ್ರಿಕೆ ಸೋರಿಕೆ? – ರಾಯಚೂರಿನಲ್ಲಿ ರಸ್ತೆ ಬಂದ್ ಮಾಡಿ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ

  • ತಮಿಳುನಾಡಿನಲ್ಲಿ ಮಳೆ ಆರ್ಭಟ – ಕರ್ನಾಟಕದ ಕೆಲ ರೈಲುಗಳ ಸಂಚಾರ ರದ್ದು

    ತಮಿಳುನಾಡಿನಲ್ಲಿ ಮಳೆ ಆರ್ಭಟ – ಕರ್ನಾಟಕದ ಕೆಲ ರೈಲುಗಳ ಸಂಚಾರ ರದ್ದು

    – ಬೆಂಗಳೂರು, ಮೈಸೂರಿಗೆ ಸಂಚರಿಸುವ ರೈಲುಗಳೂ ರದ್ದು

    ಚೆನ್ನೈ: ತಮಿಳುನಾಡಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಚೆನ್ನೈನಿಂದ (Chennai) ಬೆಂಗಳೂರಿಗೆ (Bengaluru) ಸಂಚರಿಸುವ ಕೆಲವು ರೈಲುಗಳನ್ನು ರೈಲ್ವೇ ಇಲಾಖೆ ರದ್ದುಗೊಳಿಸಿದೆ.ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ ರೇಣುಕಾಸ್ವಾಮಿ ಪತ್ನಿ ಸಹನಾ – ಕುಟುಂಬದಲ್ಲಿ ಹರ್ಷ

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ತಮಿಳುನಾಡಿನ (Tamilnadu) ಕೆಲವು ಕಡೆ ಭಾರೀ ಮಳೆ ಸುರಿಯುತ್ತಿದೆ. ಚೆನ್ನೈನಲ್ಲಿ ಕಳೆದ ಎರಡು ದಿನಗಳಿಂದ ಬಿಟ್ಟುಬಿಡದೇ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಇದರಿಂದಾಗಿ ಭಾರತೀಯ ಹವಾಮಾನ ಇಲಾಖೆ (IMD) ತಮಿಳುನಾಡು ರಾಜ್ಯಾದ್ಯಂತ ಹೆಚ್ಚು ಮಳೆಯಾಗುವ ಮೂನ್ಸುಚನೆಯನ್ನು ನೀಡಿದೆ.

    ಈ ಹಿನ್ನೆಲೆಯಲ್ಲಿ ತ್ರೀವ ಮಳೆಯ ಪರಿಣಾಮ ರೈಲ್ವೆ ಇಲಾಖೆ ಇಂದು (ಅ.16) ಚೆನ್ನೈನಿಂದ ಬೆಂಗಳೂರು ಹಾಗೂ ಮೈಸೂರಿಗೆ ಸಂಚರಿಸುವ ಕೆಲವು ರೈಲುಗಳನ್ನು ರದ್ದುಗೊಳಿಸಿದೆ. ಮಳೆಯಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ರೈಲುಗಳನ್ನು ರದ್ದುಗೊಳಿಸಿದೆ.ಇದನ್ನೂ ಓದಿ: ಇಂದಿನಿಂದ ಭಾರತ-ನ್ಯೂಜಿಲೆಂಡ್‌ ಟೆಸ್ಟ್ – ಪಂದ್ಯಕ್ಕೆ ಮಳೆ ಅಡ್ಡಿ?

    ಯಾವ್ಯಾವ ರೈಲುಗಳು ರದ್ದು:
      (ರೈಲು ಸಂಖ್ಯೆ)
    ಚೆನ್ನೈ-ಬೆಂಗಳೂರು –                12657
    ಚೆನ್ನೈ-ಬೆಂಗಳೂರು –           12607, 12608
    ಚೆನ್ನೈ-ಮೈಸೂರು –                   12609
    ಮೈಸೂರು-ಚೆನ್ನೈ –                  12610
    ಚೆನ್ನೈ-ಬೆಂಗಳೂರು –                12027
    ಬೆಂಗಳೂರು-ಚೆನ್ನೈ –                12028
    ಮೈಸೂರು- ಬೆಂಗಳೂರು –         20623
    ಬೆಂಗಳೂರು-ಮೈಸೂರು –         20624
    ಮೈಸೂರು-ಚೆನ್ನೈ ಸೆಂಟ್ರಲ್ –    16022

  • ರಾಮೋತ್ಸವಕ್ಕೆ ರಾಜ್ಯದಿಂದ ಅಯೋಧ್ಯೆಗೆ ಹೆಚ್ಚುವರಿ ರೈಲು – ಇಲಾಖೆಯಿಂದ ಚಿಂತನೆ

    ರಾಮೋತ್ಸವಕ್ಕೆ ರಾಜ್ಯದಿಂದ ಅಯೋಧ್ಯೆಗೆ ಹೆಚ್ಚುವರಿ ರೈಲು – ಇಲಾಖೆಯಿಂದ ಚಿಂತನೆ

    ಬೆಂಗಳೂರು: ರಾಮಮಂದಿರ (RamMandir) ಉದ್ಘಾಟನೆ ದಿನ ಸಮೀಪವಾಗುತ್ತಿರುವ ಬೆನ್ನಲ್ಲೇ ರಾಜ್ಯದಿಂದ ಅಯೋಧ್ಯೆಗೆ (Ayodhya) ಹೊರಡಲು ತಯಾರಾದ ರಾಮನ ಭಕ್ತರಿಗೆ ರೈಲ್ವೇ ಇಲಾಖೆ ಗುಡ್ ನ್ಯೂಸ್ ನೀಡಿದೆ. ರಾಜ್ಯದ ಹಲವು ಭಾಗಗಳಿಂದ ಅಯೋಧ್ಯೆಗೆ ಹೆಚ್ಚುವರಿ ರೈಲುಗಳನ್ನು ಬಿಡಲು ಇಲಾಖೆ (Indian Railways) ಚಿಂತನೆ ನಡೆಸುತ್ತಿದೆ.

    ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಳ್ಳಲು ಇಡೀ ಹಿಂದೂ ಸಮುದಾಯ ತುದಿಗಾಲಲ್ಲಿ ನಿಂತಿದೆ. ಇದಕ್ಕಾಗಿ ರಾಜ್ಯದಿಂದ ಅಯೋಧ್ಯೆಗೆ ತೆರಳಲು ಹಲವಾರು ಜನ ಸಿದ್ಧತೆ ನಡೆಸಿದ್ದಾರೆ. ಅಯೋಧ್ಯೆಗೆ ಹೊರಟ ರಾಮನ ಭಕ್ತರಿಗಾಗಿ ನೈರುತ್ಯ ರೈಲ್ವೆ ಇಲಾಖೆ ರಾಜ್ಯದಿಂದ ಹೆಚ್ಚುವರಿ ರೈಲನ್ನು ಬಿಡಲು ತಯಾರಿ ನಡೆಸುತ್ತಿದೆ. ಇದನ್ನೂ ಓದಿ: ಜೀವನದಲ್ಲಿ ಮೊದಲ ಬಾರಿಗೆ ಭಾವುಕನಾಗಿದ್ದೇನೆ – 11 ದಿನಗಳ ವ್ರತ ಆರಂಭಿಸಿದ ಮೋದಿ

    ರಾಜ್ಯದಿಂದ ಅಯೋಧ್ಯೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹೋಗುವ ನಿರೀಕ್ಷೆ ಇದೆ. ಈ ಹಿಂದೆಯೇ ಬೇರೆ ಬೇರೆ ರಾಜ್ಯಗಳಿಂದ ಅಯೋಧ್ಯೆಗೆ ರೈಲುಗಳನ್ನು ಬಿಡುವುದಾಗಿ ಕೇಂದ್ರ ಇಲಾಖೆ ಹೇಳಿತ್ತು. ಅದೇ ರೀತಿ ರಾಜ್ಯದಿಂದಲೂ ಹೆಚ್ಚಿನ ಜನ ರಾಮಭಕ್ತರು ಅಯೋಧ್ಯೆಗೆ ತೆರಳುವ ಸಾಧ್ಯತೆ ಇದೆ. ಈ ಹಿನ್ನಲೆ ರಾಜ್ಯದಿಂದ ಹೆಚ್ಚುವರಿ ರೈಲುಗಳ ಸಂಚಾರಕ್ಕೆ ನೈರುತ್ಯ ರೈಲ್ವೆ ವಲಯ ಪ್ಲ್ಯಾನ್ ಮಾಡ್ತಿದೆ. ಈ ಸಂಬಂಧ ಈಗಾಗಲೇ ಕೇಂದ್ರ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿರುವ ನೈರುತ್ಯ ರೈಲ್ವೆ ವಲಯ, ಕೇಂದ್ರದ ಒಪ್ಪಿಗೆಗಾಗಿ ಕಾಯುತ್ತಿದೆ. ಮುಂದಿನ ಮೂರ್ನಾಲ್ಕು ದಿನದ ಒಳಗೆ ಈ ಸಂಬಂಧ ಕೇಂದ್ರ ವಲಯ ಸೂಚನೆ ನೀಡುವ ಸಾಧ್ಯತೆ ಇದ್ದು, ಈ ಹಿನ್ನೆಲೆ ನೈರುತ್ಯ ವಲಯ ಕೂಡ ತಯಾರಿ ಆರಂಭಿಸಿದೆ.

    ಅಯ್ಯೋಧ್ಯೆಗೆ ಹೆಚ್ಚುವರಿ ರೈಲನ್ನು ರಾಜ್ಯದ ಯಾವ ನಗರದ ಮಾರ್ಗದಿಂದ ಬಿಡಬೇಕು? ಯಾವ ಯಾವ ಸಮಯಕ್ಕೆ ಬಿಡಬೇಕು? ರಾಜ್ಯದಲ್ಲಿನ ಯಾವ ಯಾವ ಪ್ರಮುಖ ರೈಲ್ವೆ ನಿಲ್ದಾಣಗಳಿಂದ ಹೆಚ್ಚುವರಿ ರೈಲನ್ನು ಅಯ್ಯೋಧ್ಯೆಗೆ ಬಿಡಬಹುದು ಎಂಬ ಯೋಜನೆ ರೂಪಿಸಲಾಗುತ್ತಿದೆ. ಅಯ್ಯೋದ್ಯೆ ರೈಲ್ವೆ ನಿಲ್ದಾಣ ಹೊರತುಪಡಿಸಿ ರಾಮಮಂದಿರಕ್ಕೆ ಹತ್ತಿರ ಇರುವ ಬೇರೆ ಯಾವ ನಿಲ್ದಾಣಗಳಿಗೆ ಹೆಚ್ಚುವರಿ ರೈಲನ್ನು ಬಿಡಬಹುದು. ಪ್ರಮುಖವಾಗಿ ರಾಜ್ಯದ ಬೆಂಗಳೂರು (Bengaluru) -ಮಂಗಳೂರು ಕಲಬುರಗಿ-ಹುಬ್ಬಳ್ಳಿ, ಮೈಸೂರು ನಗರಗಳಿಂದ ರೈಲಿನ ಸಂಪರ್ಕಕ್ಕೆ ಚಿಂತನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಗುಜರಾತ್‌ನಿಂದ ಅಯೋಧ್ಯೆಗೆ ಆಗಮಿಸಿದೆ 500 ಕೆಜಿಯ ಬೃಹತ್ ನಗಾರಿ

  • ಹಳಿಯಲ್ಲಿ ಕಬ್ಬಿಣದ ರಾಡ್, ದೊಡ್ಡ ಮರದ ದಿಮ್ಮಿ – ಮೈಸೂರಿನಲ್ಲಿ ತಪ್ಪಿತು ಭಾರೀ ರೈಲು ದುರಂತ

    ಹಳಿಯಲ್ಲಿ ಕಬ್ಬಿಣದ ರಾಡ್, ದೊಡ್ಡ ಮರದ ದಿಮ್ಮಿ – ಮೈಸೂರಿನಲ್ಲಿ ತಪ್ಪಿತು ಭಾರೀ ರೈಲು ದುರಂತ

    ಮೈಸೂರು: ರೈಲ್ವೇ ಹಳಿ ಮೇಲೆ ಮರದ ದಿಮ್ಮಿ ಹಾಗೂ ಕಬ್ಬಿಣದ ರಾಡ್‍ಗಳನ್ನು ಇಟ್ಟು ಜನರ ಜೀವದ ಜೊತೆ ಕಿಡಿಗೇಡಿಗಳು ಆಟವಾಡಿದ ಘಟನೆ ಚಾಮರಾಜನಗರ – ಮೈಸೂರು ಮಾರ್ಗದಲ್ಲಿ ನಡೆದಿದೆ. ಲೋಕೋಪೈಲಟ್ ಇದನ್ನು ಗಮನಿಸಿ ರೈಲನ್ನು (Train) ನಿಲ್ಲಿಸಿದ್ದು, ಭಾರೀ ಅಪಘಾತವೊಂದು ತಪ್ಪಿದೆ.

    ಹಳಿ ಮೇಲೆ ಮರದ ದಿಮ್ಮಿ ಹಾಗೂ ಕಬ್ಬಿಣದ ರಾಡ್ ಇಡುವ ಮುನ್ನ ಕಿರಾತಕರು ಅದನ್ನು ವೀಡಿಯೋ ಕೂಡ ಮಾಡಿಕೊಂಡಿದ್ದಾರೆ. ಬಳಿಕ ಬೇರೊಂದು ರೈಲ್ವೇ ಹಳಿ ಮೇಲೆ ಮೊಬೈಲ್ ಇರಿಸಿ ರೈಲು ಹೋಗುವುದನ್ನು ವೀಡಿಯೋ ಮಾಡಿಕೊಂಡಿದ್ದಾರೆ. ಬಳಿಕ ಕಿಡಿಗೇಡಿಗಳು ರೈಲು ಅಪಘಾತ ಮಾಡಲು ಪ್ಲಾನ್ ಮಾಡಿದ್ದಾರೆ. ಇದನ್ನೂ ಓದಿ: 10 ಕೋಟಿ ಆಸ್ತಿ ಆಸೆಗೆ ಪತ್ನಿಯನ್ನೇ ಕೊಂದು ಸಹಜ ಸಾವೆಂದು ನಾಟಕವಾಡಿ ಸಿಕ್ಕಿಬಿದ್ದ ಪತಿ

    ಚಾಮರಾಜನಗರದಿಂದ (Chamarajanagar) ಮೈಸೂರಿಗೆ (Mysuru) ಬರುತ್ತಿದ್ದ ರೈಲಿನಲ್ಲಿ ಸುಮಾರು 400ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು. ಹಳಿ ಮೇಲೆ ಮರದ ದಿಮ್ಮಿ ಹಾಗೂ ಕಬ್ಬಿಣದ ಸಲಾಕೆ ಇಟ್ಟಿರುವುದನ್ನ ಲೋಕೋಪೈಲಟ್ ಗಮನಿಸಿ ರೈಲನ್ನು ನಿಲ್ಲಿಸಿದ್ದಾನೆ.

    ಈ ಸಂಬಂಧ ಮೂವರನ್ನು ರೈಲ್ವೇ ಪೊಲೀಸರು (Police) ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಶಕ್ಕೆ ಪಡೆದ ಯುವಕರನ್ನು ಒಡಿಶಾ ಮೂಲದ ಸೋಮಯ್ ಮರಾಂಡಿ, ಭಜನು ಮುರ್ಮು ಹಾಗೂ ದಸಮತ್ ಮರಾಂಡಿ ಎಂದು ಗುರುತಿಸಲಾಗಿದೆ. ಯುವಕರು ವಿಚಾರಣೆ ವೇಳೆ ತಮಾಷೆಗಾಗಿ ಈ ರೀತಿ ಮಾಡಿದ್ದೇವೆ ಎಂದಿದ್ದಾರೆ. ಅಲ್ಲದೇ ಹಲವು ಗಂಟೆಗಳ ಕಾಲ ಆರೋಪಿಗಳು ಆ ಜಾಗದಲ್ಲಿ ಮದ್ಯಪಾನ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಕಾವೇರಿ ತವರು ಕೊಡಗಿನಲ್ಲೇ ಕುಸಿಯುತ್ತಿದೆ‌ ಅಂತರ್ಜಲ ಮಟ್ಟ

  • 130 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ರೈಲಿಗೆ ಹಠಾತ್ ಬ್ರೇಕ್ – ಇಬ್ಬರ ದುರ್ಮರಣ

    130 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ರೈಲಿಗೆ ಹಠಾತ್ ಬ್ರೇಕ್ – ಇಬ್ಬರ ದುರ್ಮರಣ

    ರಾಂಚಿ: ವೇಗವಾಗಿ ಚಲಿಸುತ್ತಿದ್ದ ರೈಲೊಂದು (Train) ಹಠಾತ್ ಆಗಿ ನಿಂತ ಪರಿಣಾಮ ಇಬ್ಬರು ಪ್ರಯಾಣಿಕರು ಸಾವಿಗೀಡಾದ ಘಟನೆ ಜಾರ್ಖಂಡ್‌ (Jharkhand) ಪರ್ಸಾಬಾದ್ ಎಂಬಲ್ಲಿ ನಡೆದಿದೆ.

    ಪುರಿ-ನವದೆಹಲಿ ನಡುವೆ ಸಂಚರಿಸುವ ಪುರುಷೋತ್ತಮ್ ಎಕ್ಸ್‌ಪ್ರೆಸ್ ರೈಲಿಗೆ ವಿದ್ಯುತ್ ಸರಬರಾಜಾಗುವುದು ತಕ್ಷಣ ನಿಂತಿದೆ. ಈ ವೇಳೆ ವಿದ್ಯುತ್ ತಂತಿ ತುಂಡಾಗಿರುವುದು ಗಮನಕ್ಕೆ ಬಂದಿದ್ದು ಚಾಲಕ ಎಮರ್ಜನ್ಸಿ ಬ್ರೇಕ್ ಹಾಕಿದ್ದಾನೆ. ಈ ವೇಳೆ ಸುಮಾರು 130 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ರೈಲು ತಕ್ಷಣ ನಿಂತ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.‌ ಇದನ್ನೂ ಓದಿ: ಅತಿವೃಷ್ಠಿಯಲ್ಲಿ ಬಿಎಸ್‍ವೈ ಭಿಕ್ಷೆ ಬೇಡಿದ್ದರು, ಸಿದ್ದರಾಮಯ್ಯರಂತೆ ಡ್ಯಾನ್ಸ್ ಮಾಡಿರಲಿಲ್ಲ: ಆರಗ ಜ್ಞಾನೇಂದ್ರ ವ್ಯಂಗ್ಯ

    ಅಪಘಾತದ (Accident) ನಂತರ ನಾಲ್ಕು ಗಂಟೆಗಳ ಕಾಲ ರೈಲು ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಪುರುಷೋತ್ತಮ್ ಎಕ್ಸ್‌ಪ್ರೆಸ್ ರೈಲನ್ನು ಅಪಘಾತ ಸ್ಥಳದಿಂದ ಡೀಸೆಲ್ ಎಂಜಿನ್ ಮೂಲಕ ಗೋಮೊಹ್‍ಗೆ ತರಲಾಯಿತು. ನಂತರ ಎಲೆಕ್ಟ್ರಿಕ್ ಎಂಜಿನ್ ಮೂಲಕ ದೆಹಲಿಗೆ ಕಳುಹಿಸಲಾಯಿತು ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಅಪಘಾತದ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯುತ್ ತಂತಿ ತುಂಡಾಗಲು ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಐಸಿಸ್‌ ಪರ ಕೆಲಸ – ಅಲಿಗಢ ಮುಸ್ಲಿಂ ವಿವಿಯ 6 ವಿದ್ಯಾರ್ಥಿಗಳು ಅರೆಸ್ಟ್‌

  • ರೈಲ್ವೆ ಕಾಮಗಾರಿಗೆ ತೆಗೆದಿದ್ದ ಗುಂಡಿಗೆ ಬಿದ್ದು ಬಾಲಕಿ ಸಾವು

    ರೈಲ್ವೆ ಕಾಮಗಾರಿಗೆ ತೆಗೆದಿದ್ದ ಗುಂಡಿಗೆ ಬಿದ್ದು ಬಾಲಕಿ ಸಾವು

    ಶಿವಮೊಗ್ಗ: ರೈಲ್ವೆ (Indian Railway) ಕಾಮಗಾರಿಗಾಗಿ ರಸ್ತೆ ಮಧ್ಯದಲ್ಲಿ ತೆಗೆದಿದ್ದ ಗುಂಡಿಗೆ ಬಿದ್ದು ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಕೋಟೆಗಂಗೂರಿನಲ್ಲಿ ನಡೆದಿದೆ.

    ಮೃತ ಬಾಲಕಿಯನ್ನು ಚೈತ್ರಾ ಎಂದು ಗುರುತಿಸಲಾಗಿದೆ. ಮೃತ ಬಾಲಕಿ 5 ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಶಾಲೆಯಿಂದ ಮಂಗಳವಾರ ಸಂಜೆ ಮನೆಗೆ ಬಂದಿದ್ದಳು. ಈ ವೇಳೆ ಪೋಷಕರು ಮನೆಗೆ ಬೀಗ ಹಾಕಿಕೊಂಡು ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಹೊಲಕ್ಕೆ ಹೋಗಿ ಬೀಗ ಪಡೆದುಕೊಂಡು ವಾಪಾಸ್ ಬರುವಾಗ ಬಾಲಕಿ ರೈಲ್ವೆ ಟರ್ಮಿನಲ್ ನಿರ್ಮಾಣಕ್ಕಾಗಿ ತೆಗೆದಿದ್ದ ಗುಂಡಿಗೆ ಬಿದ್ದಿದ್ದಾಳೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ನಾನು ಭ್ರಷ್ಟನಲ್ಲ, ಲಂಚ ಸ್ವೀಕರಿಸುವುದಿಲ್ಲ; ವೈರಲ್‌ ಆಯ್ತು ಸರ್ಕಾರಿ ಅಧಿಕಾರಿಯ ಟೇಬಲ್‌ ಬೋರ್ಡ್‌

    ಮಳೆಯಿಂದ ಗುಂಡಿಯಲ್ಲಿ ನೀರು ನಿಂತಿದ್ದರಿಂದ ಬಾಲಕಿಗೆ ಮೇಲೆ ಬರಲು ಸಾಧ್ಯವಾಗಿಲ್ಲ. ಇದರಿಂದ ಆಕೆ ಅಲ್ಲಿಯೇ ಮೃತಪಟ್ಟಿದ್ದಾಳೆ. ಬಳಿಕ ಕೆಲಸ ಮುಗಿಸಿಕೊಂಡು ಬಂದ ಬಾಲಕಿಯ ತಂದೆ-ತಾಯಿ ಮಗಳಿಗಾಗಿ ಹುಡುಕಾಡಿದ್ದಾರೆ. ಈ ವೇಳೆ ಚೈತ್ರಾ ಗುಂಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

    ರಸ್ತೆ ನಡುವೆ ಗುಂಡಿ ತೆಗೆದು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದೇ ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆಗೆ ಕಾರಣನಾದ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕು. ಮೃತ ಚೈತ್ರಾ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

    ಈ ಸಂಬಂಧ ಶಿವಮೊಗ್ಗ (Shivamogga) ಗ್ರಾಮಾಂತರ ಪೊಲೀಸ್‌ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪೋರ್ಚುಗಲ್‌ ಪ್ರಧಾನಿ ಸ್ಥಾನಕ್ಕೆ ಆಂಟೋನಿಯೊ ಕೋಸ್ಟಾ ರಾಜೀನಾಮೆ

  • ಮೈಸೂರಿನಲ್ಲೂ ಮೆಟ್ರೋ ವಿಸ್ತರಣೆ, ರಾಜ್ಯಕ್ಕೆ 1200 ಎಲೆಕ್ಟ್ರಿಕ್ ಬಸ್: ಮೋದಿ ಭರವಸೆ

    ಮೈಸೂರಿನಲ್ಲೂ ಮೆಟ್ರೋ ವಿಸ್ತರಣೆ, ರಾಜ್ಯಕ್ಕೆ 1200 ಎಲೆಕ್ಟ್ರಿಕ್ ಬಸ್: ಮೋದಿ ಭರವಸೆ

    ನವದೆಹಲಿ: ಕರ್ನಾಟಕದಲ್ಲಿ ಸಾರಿಗೆ ಸಂಪರ್ಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು ಮಾಲಿನ್ಯ ನಿಯಂತ್ರಣಕ್ಕಾಗಿ 1200 ಎಲೆಕ್ಟ್ರಿಕ್ ಬಸ್‍ಗಳನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಅದಕ್ಕಾಗಿ ರಾಜ್ಯ ಸರ್ಕಾರಕ್ಕೆ 500 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಉತ್ತರ ಪ್ರದೇಶದಲ್ಲಿ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (Regional Rapid Transit System) ಕಾರಿಡಾರ್‌ನ ದೆಹಲಿ-ಗಾಜಿಯಾಬಾದ್ – ಮೀರತ್ ರೈಲುಗಳ ವಿಭಾಗವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ವೇಳೆ ಬೆಂಗಳೂರಿನಲ್ಲೂ (Bengaluru) ಎರಡು ಮೆಟ್ರೋ ಲೇನ್‍ಗಳನ್ನು ಉದ್ಘಾಟಿಸಲಾಗುತ್ತಿದೆ. ಇದರಿಂದ ಜನರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.

    ಮೆಟ್ರೋದಲ್ಲಿ (Metro) ನಿತ್ಯ 80 ಲಕ್ಷಕ್ಕೂ ಅಧಿಕ ಜನರು ಪ್ರಯಾಣ ಮಾಡುತ್ತಿದ್ದಾರೆ. ಉತ್ತರ ಪ್ರದೇಶದಂತೆ ಕರ್ನಾಟಕದಲ್ಲೂ ಮೆಟ್ರೋ ವಿಸ್ತರಣೆ ಮಾಡುತ್ತೇವೆ. ಬೆಂಗಳೂರಲ್ಲಿ ಮೆಟ್ರೋ ವಿಸ್ತರಣೆ ಮಾಡಲಾಗುತ್ತದೆ. ಅಲ್ಲದೇ ಮೈಸೂರಿನಲ್ಲೂ (Mysuru) ಮೆಟ್ರೋ ಸಾರಿಗೆ ಆರಂಭಿಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.

    ನನ್ನ ಬಾಲ್ಯವನ್ನು ರೈಲ್ವೆ ಪ್ಲಾಟ್ ಫಾರಂನಲ್ಲೇ ಕಳೆದೆ, ಇಂದು ರೈಲ್ವೆ ವ್ಯವಸ್ಥೆಯಲ್ಲಿನ ಬದಲಾವಣೆ ಹೆಚ್ಚು ಖುಷಿ ಕೊಟ್ಟಿದೆ. ರೈಲ್ವೆಯಲ್ಲಿ ಹೆಣ್ಣು ಮಕ್ಕಳಿಗೆ ಆದ್ಯತೆ ನೀಡಲಾಗಿದೆ. ಇದು ನಾರಿ ಶಕ್ತಿ ಅಭಿವೃದ್ಧಿಯ ಪ್ರತೀಕವಾಗಿದೆ. ನಮೋ ಭಾರತ್ ರೈಲಿನಲ್ಲಿ ಆಧುನಿಕತೆ, ವೇಗ ಮತ್ತು ಅತ್ಯುತ್ತಮ ಸೌಲಭ್ಯಗಳಿದೆ. ಭಾರತದ ಹೊಸ ಸಂಕಲ್ಪವನ್ನು ಈ ರೈಲು ತೋರಿಸುತ್ತಿದೆ ಎಂದಿದ್ದಾರೆ.

    ನಮೋ ಭಾರತ್ (Namo Bharat) ರೈಲು ಭಾರತದಲ್ಲೇ ತಯಾರಾಗಿದೆ. ಇದು ವಿಮಾನಕ್ಕಿಂತ ಕಡಿಮೆ ಸದ್ದು ಮಾಡುವ ರೈಲಾಗಿದೆ. ಅತ್ಯುತ್ತಮ ಪ್ರಯಾಣದ ಅನುಭವವನ್ನು ನೀಡಲಿದೆ. ಈ ರೈಲಿನ ವ್ಯವಸ್ಥೆಯಿಂದ ಭಾರತದ ಆರ್ಥಿಕತೆ ಹೆಚ್ಚಲಿದೆ. ಇಂದು ಉದ್ಘಾಟನೆಯಾಗಿರುವ ಯೋಜನೆ ಒಂದು ಆರಂಭವಾಗಿದೆ ಅಷ್ಟೇ. ಇದೇ ರೀತಿ ಬೇರೆ ಬೇರೆ ರಾಜ್ಯಗಳಲ್ಲೂ ಈ ಯೋಜನೆ ಜಾರಿಗೆ ತರಲಾಗುತ್ತದೆ ಎಂದು ಅವರು ತಿಳಿಸಿದರು.

    ಭಾರತೀಯ ರೈಲ್ವೆಯ ಕಾಯಕಲ್ಪ ಮಾಡಲಾಗುತ್ತಿದೆ. ರೈಲ್ವೆ ಸಂಪರ್ಕ ವಿಸ್ತರಣೆಯಿಂದ ಉದ್ಯೋಗ ಸೃಷ್ಟಿಯಾಗಲಿದೆ. ನನಗೆ ಸಣ್ಣ ಕನಸು ಕಾಣುವ ಹವ್ಯಾಸ ಇಲ್ಲ, ಕುಂಟುತ್ತಾ ನಡೆಯುವ ರೂಢಿಯೂ ಇಲ್ಲ. ನಾವು ಯಾವ ದೇಶಕ್ಕಿಂತ ಹಿಂದೆ ಉಳಿಯುವುದಿಲ್ಲ, ಭಾರತೀಯ ರೈಲ್ವೆ 100% ವಿದ್ಯುಧೀಕರಣ ದೂರ ಇಲ್ಲ ಎಂದಿದ್ದಾರೆ.

    ಈ ಯೋಜನೆಯಲ್ಲಿ ಮಲ್ಟಿ ಮಾಡೇಲ್ ಕನೆಕ್ಟಿವಿಟ್ ಬಗ್ಗೆಯೂ ಗಮನಹರಿಸಲಾಗಿದೆ. ಎಲೆಕ್ಟ್ರಿಕ್ ಬಸ್‍ಗಳ ನೆಟ್‍ವರ್ಕ್ ಮಾಡಲಾಗುತ್ತಿದೆ. ರಾಜ್ಯಗಳಿಗೆ 10,000 ಬಸ್ ಕೊಡಲಾಗುತ್ತಿದೆ. ದೆಹಲಿಗೆ 1300ಕ್ಕೂ ಹೆಚ್ಚು ಬಸ್ ನೀಡುವ ಪ್ರಯತ್ನ ಮಾಡಲಾಗುತ್ತಿದೆ ಎಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗಳೂರಿನಲ್ಲಿ ರೈಲಿಗೆ ಬೆಂಕಿ ಆಕಸ್ಮಿಕ ಅಲ್ಲ, ಮಾನವ ಕೃತ್ಯದ ಶಂಕೆ

    ಬೆಂಗಳೂರಿನಲ್ಲಿ ರೈಲಿಗೆ ಬೆಂಕಿ ಆಕಸ್ಮಿಕ ಅಲ್ಲ, ಮಾನವ ಕೃತ್ಯದ ಶಂಕೆ

    ಬೆಂಗಳೂರು: ಮೆಜೆಸ್ಟಿಕ್‌ (Bengaluru) ರೈಲ್ವೆ ನಿಲ್ದಾಣದಲ್ಲಿ ಉದ್ಯಾನ್ ಎಕ್ಸ್‌ಪ್ರೆಸ್ ರೈಲಿನಲ್ಲಿ (Train) ಬೆಂಕಿ (Fire) ಕಾಣಿಸಿಕೊಂಡಿದ್ದ ಪ್ರಕರಣಕ್ಕೆ ಇನ್ನೂ ನಿಖರ ಕಾರಣ ಪತ್ತೆಯಾಗಿಲ್ಲ. ಆದರೆ ಈ ಬೆಂಕಿ ಅವಘಡ ಹಾಗೂ ಮಧುರೈನಲ್ಲಿ ಸಂಭವಿಸಿದ ಅನಾಹುತದ ಹಿನ್ನಲೆಯಲ್ಲಿ ತನಿಖೆ ಚುರುಕುಗೊಳಿಸಲಾಗಿದೆ.

    ಘಟನೆ ನಡೆದು 10 ದಿನ ಕಳೆದಿದೆ. ಆದರೆ ಘಟನೆಗೆ ಇನ್ನೂ ನಿಖರ ಕಾರಣ ಸಿಗದಿರುವುದು ಹಲವು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಅಲ್ಲದೇ ಪ್ರಕರಣದ ಹಿಂದೆ ಕಿಡಿಗೇಡಿಗಳ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಪ್ರವಾಸಿಗರೇ ಎಚ್ಚರ, ಕಾಫಿನಾಡ ನಾನ್ ವೆಜ್ ಹೋಟೆಲ್‍ನಲ್ಲಿ ಕುರಿ ಬದಲು ದನದ ಮಾಂಸದ ಬಿರಿಯಾನಿ!

    ಈ ಪ್ರಕರಣವನ್ನು ಆರ್‌ಪಿಎಫ್ ಡಿಜಿ ಮನೋಜ್ ಯಾದವ್ ತನಿಖೆ ನಡೆಸುತ್ತಿದ್ದಾರೆ. ಬೆಂಕಿ ಅವಘಡವನ್ನು ಗಂಭೀರವಾಗಿ ಪರಿಗಣಿಸಿರುವ ಅವರು ಎರಡು ದಿನಗಳ ಹಿಂದೆ ರೈಲ್ವೇ ಕಚೇರಿಗೆ ಧಿಡೀರ್ ಭೇಟಿಕೊಟ್ಟಿದ್ದರು. ಈ ವೇಳೆ ನಗರ ಪೊಲೀಸ್‌ (Police) ಹಾಗೂ ಆರ್‌ಪಿಎಫ್ ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದರು.

    ಅವಘಡ ಸಂಭವಿಸಿದ್ದ ಭೋಗಿಯಲ್ಲಿ ಪ್ರಯಾಣ ಮಾಡಿದ ಪ್ರಯಾಣಿಕರು ಯಾರು? ಭೋಗಿಯಲ್ಲಿ ಟೆಕ್ನಿಕಲ್ ಸಮಸ್ಯೆ ಆಗಿತ್ತಾ? ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ಈ ವೇಳೆ ಮುಂಬೈನಿಂದ‌ (Mumbai) ಬಂದಿದ್ದ ರೈಲಿನಲ್ಲಿ ಮುಂಬೈ ಸಿಬ್ಬಂದಿಯೇ ಕಾರ್ಯ ನಿರ್ವಹಿಸುತ್ತಿದ್ದರು. ರೈಲು ಬಂದ ಒಂದು ಗಂಟೆಯ ನಂತರ ಬೆಂಕಿ ಅವಘಡ ಸಂಭವಿಸಿತ್ತು. ಇದೇ ವಿಚಾರವಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಲ್ಲಾ ಸಿಬ್ಬಂದಿಯನ್ನು ತೀವ್ರ ವಿಚಾರಣೆ ಮಾಡಲಾಗಿದೆ.

    ಸಿಸಿಟಿವಿಯಲ್ಲಿ ಪತ್ತೆಯಾದ ಅಂಶಗಳ ಆಧಾರದ ಮೇಲೂ ತನಿಖೆ ನಡೆಸಲಾಗುತ್ತಿದೆ. ರೈಲ್ವೆ ವಿಭಾಗೀಯ ಅಧಿಕಾರಿಗಳಿಂದ ಆಂತರಿಕ ತನಿಖೆ ಸಹ ನಡೆಯುತ್ತಿದೆ. ಸದ್ಯ ಎರಡು ತನಿಖಾ ತಂಡಗಳು ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿಗಾಗಿ ಕಾಯುತ್ತಿವೆ. ಬಳಿಕ ನಿಖರ ಕಾರಣ ಬೆಳಕಿಗೆ ಬರಲಿದೆ. ಇದನ್ನೂ ಓದಿ: ಉಡುಪಿ ಕಾಲೇಜು ಲೇಡಿಸ್‌ ಟಾಯ್ಲೆಟ್‌ನಲ್ಲಿ ವೀಡಿಯೋ ಚಿತ್ರೀಕರಣ ಕೇಸ್‌ – ಗುಜರಾತ್ FSLಗೆ ಮೊಬೈಲ್ ರವಾನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೋರಾಟದಿಂದ ಹಿಂದೆ ಸರಿದಿಲ್ಲ, ಸುಳ್ಳು ಸುದ್ದಿ ಹಬ್ಬಿಸಬೇಡಿ – ಸಾಕ್ಷಿ ಮಲಿಕ್

    ಹೋರಾಟದಿಂದ ಹಿಂದೆ ಸರಿದಿಲ್ಲ, ಸುಳ್ಳು ಸುದ್ದಿ ಹಬ್ಬಿಸಬೇಡಿ – ಸಾಕ್ಷಿ ಮಲಿಕ್

    ನವದೆಹಲಿ: ನಾವು ಯಾರ ಜೊತೆಗೂ ರಾಜಿ ಮಾಡಿಕೊಂಡಿಲ್ಲ, ಹೋರಾಟದಿಂದ ಹಿಂದೆಯೂ ಸರಿಯುವುದಿಲ್ಲ, ನ್ಯಾಯಕ್ಕಾಗಿ ಒಗ್ಗಟ್ಟಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ, ನಮ್ಮನ್ನು ದುರ್ಬಲಗೊಳಿಸಲು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಸಾಕ್ಷಿ ಮಲಿಕ್ (Sakshi Malik) ಹಾಗೂ ಅವರ ಪತಿ, ಕುಸ್ತಿಪಟು ಸತ್ಯವರ್ತ್ ಕಡಿಯಾನ್ (Satyawart Kadian) ಸ್ಪಷ್ಟನೆ ನೀಡಿದ್ದಾರೆ.

    ಶನಿವಾರ ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಜೊತೆಗೆ ಸಭೆ ನಡೆಸಿದ ಬೆನ್ನಲ್ಲೇ ಭಾರತೀಯ ಕುಸ್ತಿ ಫೆಡರೇಷನ್ (WFI) ಮುಖ್ಯಸ್ಥ ಬ್ರಿಜ್ ಭೂಷಣ್ (Brij Bhushan Sharan Singh)
    ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಪ್ರಮುಖ ಕುಸ್ತಿಪಟುಗಳಲ್ಲಿ ಒಬ್ಬರಾದ ಸಾಕ್ಷಿ ಮಲಿಕ್ ಹೋರಾಟದಿಂದ ಹಿಂದೆ ಸರಿದಿದ್ದು, ತಮ್ಮ ಕೆಲಸಕ್ಕಾಗಿ ರೈಲ್ವೇ ಇಲಾಖೆಗೆ (Railway Department) ಮರಳಿದ್ದಾರೆ ಎಂದು ವರದಿಯಾಗಿತ್ತು. ಇದನ್ನೂ ಓದಿ: ಪ್ರತಿಭಟನೆಯಿಂದ ಹಿಂದೆ ಸರಿದ ಕುಸ್ತಿಪಟುಗಳು – ಮರಳಿ ರೈಲ್ವೇ ಉದ್ಯೋಗಕ್ಕೆ

    ಈ ವರದಿ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಸಾಕ್ಷಿ ಮಲಿಕ್ ಪತಿ, ಕುಸ್ತಿಪಟು ಸತ್ಯವರ್ತ್ ಕಡಿಯಾನ್ ಹೋರಾಟ ಹಿಂದಕ್ಕೆ ಪಡೆದಿರುವುದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ಹೋರಾಟ ಮುಂದುವರಿಯಲಿದ್ದು, ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತ- ಪತ್ರದ ಮೂಲಕ ಮೋದಿ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ

    ಟ್ವಿಟ್ಟರ್‌ನಲ್ಲಿ (Twitter) ಈ ಬಗ್ಗೆ ಖುದ್ದು ಸಾಕ್ಷಿ ಮಲಿಕ್ ಕೂಡಾ ಪ್ರತಿಕ್ರಿಯೆ ನೀಡಿದ್ದು, ಹೋರಾಟದಿಂದ ಹಿಂದೆ ಸರಿದಿರುವ ಸುದ್ದಿ ಸಂಪೂರ್ಣ ತಪ್ಪು. ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟದಿಂದ ನಾವು ಹಿಂದೆ ಸರಿದಿಲ್ಲ, ನಾವೂ ಹಿಂದೆ ಸರಿಯುವುದೂ ಇಲ್ಲ. ಸತ್ಯಾಗ್ರಹದ ಜೊತೆಗೆ ರೈಲ್ವೇಯಲ್ಲಿ ನನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ದಯವಿಟ್ಟು ಯಾವುದೇ ತಪ್ಪು ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕಾನೂನು ಎಲ್ಲರಿಗೂ ಒಂದೇ, ತನ್ನದೇ ಆದ ಕ್ರಮ ತೆಗೆದುಕೊಳ್ಳಲಿ- ಕುಸ್ತಿಪಟುಗಳಿಗೆ ಅಮಿತ್ ಶಾ ಭರವಸೆ

  • ಒಡಿಶಾ ರೈಲು ದುರಂತ- ಪತ್ರದ ಮೂಲಕ ಮೋದಿ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ

    ಒಡಿಶಾ ರೈಲು ದುರಂತ- ಪತ್ರದ ಮೂಲಕ ಮೋದಿ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ

    ನವದೆಹಲಿ: ಒಡಿಶಾದ (Odisha) ಬಾಲಸೋರ್‌ನಲ್ಲಿ (Balasore) ಸರಣಿ ರೈಲು ಅಪಘಾತದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಎಐಸಿಸಿ (AICC) ಅಧ್ಯಕ್ಷ, ಮಾಜಿ ರೈಲ್ವೇ ಸಚಿವ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಪತ್ರ ಬರೆದಿದ್ದು, ಇಲಾಖೆ ಮೇಲಿನ ನಿರ್ಲಕ್ಷ್ಯಗಳನ್ನು ಉಲ್ಲೇಖಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ನಾಲ್ಕು ಪುಟಗಳ ಪತ್ರ (Letter) ಬರೆದಿರುವ ಮಲ್ಲಿಕಾರ್ಜುನ ಖರ್ಗೆ, ನೇಮಕಾತಿ, ತಾಂತ್ರಿಕ ಸಮಸ್ಯೆ ಮತ್ತು ಹಿಂದಿನ ತನಿಖೆಗಳನ್ನು ಉಲ್ಲೇಖಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರೈಲ್ವೇ ಇಲಾಖೆಯಲ್ಲಿ (Railway Department) ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರಸ್ತುತ ಭಾರತೀಯ ರೈಲ್ವೇಯಲ್ಲಿ ಸುಮಾರು 3 ಲಕ್ಷ ಹುದ್ದೆಗಳು ಖಾಲಿ ಇವೆ. ಅಪಘಾತದ ನಡೆದ ವಿಭಾಗದಲ್ಲೂ ಸುಮಾರು 8,278 ಹುದ್ದೆಗಳು ಖಾಲಿ ಇವೆ. 90ರ ದಶಕದಲ್ಲಿ 18 ಲಕ್ಷಕ್ಕೂ ಹೆಚ್ಚು ರೈಲ್ವೇ ಉದ್ಯೋಗಿಗಳಿದ್ದು, ಈಗ ಅದನ್ನು ಸುಮಾರು 12 ಲಕ್ಷಕ್ಕೆ ಇಳಿಸಲಾಗಿದೆ. ಅದರಲ್ಲೂ 3.18 ಲಕ್ಷ ಮಂದಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಇಷ್ಟೊಂದು ಹೆಚ್ಚಿನ ಸಂಖ್ಯೆಯ ಖಾಲಿ ಹುದ್ದೆಗಳನ್ನು ಏಕೆ ಭರ್ತಿ ಮಾಡಲಾಗಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕಾನೂನು ಎಲ್ಲರಿಗೂ ಒಂದೇ, ತನ್ನದೇ ಆದ ಕ್ರಮ ತೆಗೆದುಕೊಳ್ಳಲಿ- ಕುಸ್ತಿಪಟುಗಳಿಗೆ ಅಮಿತ್ ಶಾ ಭರವಸೆ

    ಲೊಕೊ ಪೈಲಟ್‌ಗಳು ಓವರ್ ಟೈಮ್ ಡ್ಯೂಟಿ ಮಾಡುತ್ತಿದ್ದಾರೆ ಎಂದು ಮಂಡಳಿ ಹೇಳಿದೆ. ಲೊಕೊ ಪೈಲಟ್‌ಗಳ ನೇಮಕಾತಿ ಯಾಕೆ ನಡೆದಿಲ್ಲ? ಅವರ ಮೇಲೆ ಹೊರೆ ಹಾಕುವುದು ಜನರ ಸುರಕ್ಷತೆ ಸವಾಲು ಸ್ವೀಕರಿಸಿದಂತೆ. ಮೈಸೂರಿನಲ್ಲಿ ಎರಡು ರೈಲುಗಳ ಡಿಕ್ಕಿ ಸಾಧ್ಯತೆ ಉಲ್ಲೇಖಿಸಿ ಸಿಗ್ನಲ್ ಸಮಸ್ಯೆ ಕ್ರಮಕ್ಕೆ ಒತ್ತಾಯಿಸಿತ್ತು. ಈವರೆಗೂ ಯಾಕೆ ಕ್ರಮ ತೆಗೆದುಕೊಂಡಿಲ್ಲ? ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿಯ ಸಂಸದೀಯ ಸ್ಥಾಯಿ ಸಮಿತಿಯು ರೈಲ್ವೇ ಮಂಡಳಿಯ ಸಂಪೂರ್ಣ ನಿರಾಸಕ್ತಿ ಮತ್ತು ನಿರ್ಲಕ್ಷ್ಯವನ್ನು ಟೀಕಿಸಿದೆ. ಇದರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಲಾಗಿದೆ? ರೈಲ್ವೆ ಸುರಕ್ಷತೆ ನಿರ್ಲಕ್ಷ್ಯದ ಬಗ್ಗೆ ಸಿಎಜಿ ಕೂಡ ವರದಿ ನೀಡಿದೆ. 68% ಪ್ರಕರಣಗಳಲ್ಲಿ ತಡವಾಗಿ ತನಿಖಾ ವರದಿ ಸಲ್ಲಿಸಿದ್ದು, ಸೂಕ್ತ ಕ್ರಮವೂ ತೆಗೆದುಕೊಂಡಿಲ್ಲ. ಈ ಬಗ್ಗೆ ತೀವ್ರ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಒಡಿಶಾ ರೈಲು ದುರಂತ – ಅಪಘಾತವಾಗಿ 51 ಗಂಟೆಗಳ ಬಳಿಕ ಮೊದಲ ರೈಲು ಸಂಚಾರ

    2011ರ ಹಿಂದಿನ ಸರ್ಕಾರದ ಅವಧಿಯಲ್ಲಿ ರಿಸರ್ಚ್ ಡಿಸೈನ್ಸ್ ಅಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ (RDSO) ಯಶಸ್ವಿಯಾಗಿ ರಕ್ಷಾ ಕವಚ್ ಪರೀಕ್ಷಿಸಿತು. ಇದು ರೈಲುಗಳ ಘರ್ಷಣೆಯನ್ನು ತಡೆಯಲು ಉದ್ದೇಶಿಸಲಾಗಿತ್ತು. ನಿಮ್ಮ ಸರ್ಕಾರ ಕವಚ್ ಮರು ನಾಮಕರಣ ಮಾಡಿತು. ಇದಾದ ಮೇಲೂ ಈವರೆಗೂ ಕೇವಲ 4% ಅನುಷ್ಠಾನವಾಗಿದೆ. 100% ತಂತ್ರಜ್ಞಾನ ಅಳವಡಿಕೆಗೆ ವಿಫಲವಾಗಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತ ವಿಧ್ವಂಸಕ ಕೃತ್ಯವೇ? – ಪ್ರಾಥಮಿಕ ತನಿಖೆಯ ಬೆನ್ನಲ್ಲೇ ಎದ್ದಿವೆ ಹಲವು ಪ್ರಶ್ನೆಗಳು

    ಇನ್ನೂ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ (Ashwini Vaishnav) ಜವಾಬ್ದಾರಿ ಹೊರದೆ ಸಿಬಿಐ (CBI) ತನಿಖೆಗೆ ನೀಡಿದ್ದಾರೆ. ಸಿಬಿಐ ಅಪರಾಧಗಳ ತನಿಖೆಗಿದೆ. ಸಿಬಿಐ ಅಥವಾ ಯಾವುದೇ ಇತರ ಕಾನೂನು ಜಾರಿ ಸಂಸ್ಥೆಯು ತಾಂತ್ರಿಕ, ಸಾಂಸ್ಥಿಕ ಮತ್ತು ರಾಜಕೀಯ ವೈಫಲ್ಯಗಳಿಗೆ ಹೊಣೆಗಾರಿಕೆಯನ್ನು ಸರಿಪಡಿಸಲು ಸಾಧ್ಯವಿಲ್ಲ. ಅವರಿಗೆ ರೈಲ್ವೇ ಸಿಗ್ನಲ್ ಬಗ್ಗೆ ಜ್ಞಾನವೂ ಇರುವುದಿಲ್ಲ. ಅವರಿಂದ ತನಿಖೆ ಹೇಗೆ ನಿರೀಕ್ಷಿಸಬಹುದು? 2016ರಲ್ಲಿ ಕಾನ್ಪುರದಲ್ಲಿ ರೈಲು ಹಳಿ ತಪ್ಪಿ 150 ಮಂದಿ ಪ್ರಾಣ ಕಳೆದುಕೊಂಡರು. ಚುನಾವಣೆ ವೇಳೆ ಪಿತೂರಿ ಎಂದು ಆರೋಪಿಸಿ ಎನ್‌ಐಎ (NIA) ತನಿಖೆಗೆ ನೀಡಿದ್ದಿರಿ. 2018ರಲ್ಲಿ ಎನ್‌ಐಎ ತನಿಖೆಯನ್ನು ಮುಕ್ತಾಯಗೊಳಿಸಿತು. ಆದರೆ ಆರೋಪ ಪಟ್ಟಿ ಸಲ್ಲಿಸಲು ನಿರಾಕರಿಸಿತು. 150 ಮಂದಿಯ ಸಾವಿಗೆ ಹೊಣೆ ಯಾರು ಎಂದು ಕೇಳಿದವರು ಇನ್ನಾದರೂ ಜನರ ಸುರಕ್ಷತೆ ಕುರಿತು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತದ ತನಿಖೆ ಸಿಬಿಐ ಹೆಗಲಿಗೆ