Tag: ರೈಲ್ವೆ

  • ಚಲಿಸುತ್ತಿದ್ದ ರೈಲಿನಿಂದ 3 ಹೆಣ್ಣುಮಕ್ಕಳನ್ನು ಎಸೆದ ಕ್ರೂರಿ ಚಿಕ್ಕಪ್ಪ

    ಚಲಿಸುತ್ತಿದ್ದ ರೈಲಿನಿಂದ 3 ಹೆಣ್ಣುಮಕ್ಕಳನ್ನು ಎಸೆದ ಕ್ರೂರಿ ಚಿಕ್ಕಪ್ಪ

    ಲಕ್ನೋ: ಕ್ರೂರಿ ಚಿಕ್ಕಪ್ಪನೊಬ್ಬ ಮೂವರು ಹೆಣ್ಣು ಮಕ್ಕಳನ್ನು ಚಲಿಸುತ್ತಿರುವ ರೈಲಿನಿಂದ ಎಸೆದಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ನಡೆದಿದೆ.

    ಇಕ್ಬಾಲ್ ಎಂಬಾತನೇ ಮೂವರು ಮಕ್ಕಳನ್ನು ಚಲಿಸುವ ರೈಲಿನಿಂದ ದೂಡಿದ ಕ್ರೂರಿ ಚಿಕ್ಕಪ್ಪ. ಮೂವರು ಮಕ್ಕಳಲ್ಲಿ ಒಬ್ಬ ಬಾಲಕಿ ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮುನ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅಲ್‍ಬುಲ್ (12) ಮತ್ತು ಸಲೀಮಾ ಖಾತೂನ್ (4) ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ನಡೆದಿದ್ದೇನು?: ಈ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಮೂವರು ಹೆಣ್ಣು ಮಕ್ಕಳ ಜೊತೆಯಲ್ಲಿ ತಂದೆ ಇದ್ದು ಮತ್ತು ಚಿಕ್ಕಪ್ಪ ಇಕ್ಬಾಲ್ ಅಮೃತಸರ್-ಸಹರ್‍ಸಾ ಜನ್‍ಸೇವಾ ಎಕ್ಸ್ ಪ್ರೆಸ್ ನಲ್ಲಿ ಬಿಹಾರ್‍ಗೆ ಪ್ರಯಾಣ ಬೆಳಸುತ್ತಿದ್ದರು. ಈ ವೇಳೆ ಸೀತಾಪುರ ಜಿಲ್ಲೆಯಲ್ಲಿ ಮಕ್ಕಳನ್ನು ಚಿಕ್ಕಪ್ಪ ಇಕ್ಬಾಲ್ ಹೊರಗೆ ಎಸೆದಿದ್ದಾನೆ.

    ನನ್ನ ತಂದೆ ಮತ್ತು ಚಿಕ್ಕಪ್ಪ ಇಬ್ಬರೂ ರೈಲಿನಲ್ಲಿ ಮದ್ಯಪಾನ ಮಾಡುತ್ತಿದ್ದರು. ಇಬ್ಬರ ನಡುವೆ ಜಗಳ ಸಹ ನಡೆಯಿತು. ಈ ವೇಳೆ ಚಿಕ್ಕಪ್ಪ ನನ್ನ ಸೋದರಿಯನ್ನು ರೈಲಿನಿಂದ ಎಸೆದ ಎಂದು ಗಾಯಗೊಂಡಿರುವ ಅಲ್‍ಬುಲ್ ತಿಳಿಸಿದ್ದಾಳೆ ಎಂದು ಸೀತಾಪುರನ ಆರ್‍ಪಿಎಫ್ ಪೊಲೀಸ್ ಅಧಿಕಾರಿ ಧನಂಜಯ್ ಸಿಂಗ್ ಹೇಳಿದ್ದಾರೆ.

    ಮುನ್ನಿಯ ಶವ ಬಿಸ್ವಾನ್ ಪಟ್ಟಣದ 11 ಕಿ.ಮೀ ದೂರದ ರಾಮಯ್ಯಪುರ ಹಾಲ್ಟ್ ರೈಲ್ವೆ ನಿಲ್ದಾಣದ ಬಳಿ ದೊರತಿದೆ. ಅಲ್‍ಬುಲ್ ಮತ್ತು ಸಲೀಮಾ ಇಬ್ಬರೂ ತೀವ್ರವಾಗಿ ಗಾಯಗೊಂಡು ಬೇರೆ ಬೇರೆ ಸ್ಥಳಗಳಲ್ಲಿ ಪತ್ತೆಯಾಗಿದ್ದಾರೆ.

    ಮಕ್ಕಳ ತಂದೆ ಇದ್ದು ಮತ್ತು ಇಕ್ಬಾಲ್ ಇಬ್ಬರೂ ಬಿಹಾರದ ಮೋತಿಹಾರಿ ಜಿಲ್ಲೆಯ ನಿವಾಸಿಗಳಾಗಿದ್ದು, ಪಂಜಾಬ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಘಟನೆ ಬಳಿಕ ನಾಪತ್ತೆಯಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

  • ಮಹಿಳೆಯರೇ ಎಚ್ಚರ! ರೈಲಿನಲ್ಲಿ ಪ್ರಯಾಣಿಸುವಾಗ ಸ್ವಲ್ಪ ಯಾಮಾರಿದ್ರೆ ಮಾಂಗಲ್ಯ ಸರವನ್ನೇ ಎಗರಿಸ್ತಾರೆ

    ಮಹಿಳೆಯರೇ ಎಚ್ಚರ! ರೈಲಿನಲ್ಲಿ ಪ್ರಯಾಣಿಸುವಾಗ ಸ್ವಲ್ಪ ಯಾಮಾರಿದ್ರೆ ಮಾಂಗಲ್ಯ ಸರವನ್ನೇ ಎಗರಿಸ್ತಾರೆ

    ಬಳ್ಳಾರಿ: ರೈಲಿನಲ್ಲಿ ಪ್ರಯಾಣಿಸುವಾಗ ಸ್ವಲ್ಪ ಯಾಮಾರಿದ್ರೆ ಸಾಕು ಮಹಿಳೆಯರ ಮಾಂಗಲ್ಯ ಸರ ಎಗರಿಸುತ್ತಾರೆ. ಅಂತಹದೊಂದು ಘಟನೆ ಬೆಂಗಳೂರಿನಿಂದ ಬಳ್ಳಾರಿಗೆ ಹೊರಟಿದ್ದ ಹಂಪಿ ಎಕ್ಸ್ ಪ್ರೆಸ್ ರೈಲಿನಲ್ಲಿ ನಡೆದಿದೆ.

    ಬಳ್ಳಾರಿಯ ರೇಡಿಯೋ ಪಾರ್ಕ್ ನಿವಾಸಿ ಪ್ರಮೀಳಾ ಎಂಬವರು ಸೋಮವಾರ ರಾತ್ರಿ ತಾಯಿಯೊಂದಿಗೆ ಬೆಂಗಳೂರಿನಿಂದ ಬಳ್ಳಾರಿಗೆ ರೈಲಿನಲ್ಲಿ ತೆರೆಳುತ್ತಿದ್ದರು. ರೈಲಿನ ಎಸ್ 6 ರಿಸರ್ವೇಷನ್ ಬೋಗಿಯಲ್ಲಿ ಪ್ರಯಾಣ ಮಾಡುತ್ತಿದ್ದು, ತಮ್ಮ ಮಗುವಿಗೆ ಹಾಲುಣಿಸುವ ಸಂದರ್ಭದಲ್ಲಿ ಕಳ್ಳರು ಬಂದು ಏಕಾಏಕಿ 60 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ತಕ್ಷಣ ಪ್ರಮೀಳಾ ರೈಲಿನಲ್ಲಿದ್ದ ಆರ್‍ಪಿಎಫ್ ಪೊಲೀಸರಿಗೆ ಹಾಗೂ ಟಿಸಿಗೆ ದೂರು ನೀಡಿದ್ದಾರೆ. ಆದರೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ.

    ನೀವು ಕರ್ನಾಟಕದವರು, ಗೌರಿಬಿದನೂರು ಬಳಿ ನಿಮ್ಮ ಮಾಂಗಲ್ಯ ಕಳ್ಳತನವಾಗಿದೆ. ಕರ್ನಾಟಕದಲ್ಲೇ ದೂರು ನೀಡಿ ಅಂತಾ ಆರ್‍ಪಿಎಫ್ ಪೊಲೀಸರು ನಿರ್ಲಕ್ಷ್ಯದಿಂದ ಉತ್ತರ ನೀಡಿದ್ದಾರೆ. ಹೀಗಾಗಿ ರಾತ್ರಿಯೀಡಿ ಪ್ರಮೀಳಾ ದೂರು ನೀಡಲು ಪರದಾಡಿದ್ದಾರೆ. ಅಲ್ಲದೇ ಅವರ ಸಂಬಂಧಿಕರೊಬ್ಬರು ಆರ್‍ಪಿಎಫ್ ಸುರಕ್ಷಾ ವಾಣಿಗೆ ಕರೆ ಮಾಡಿ ಮಾಹಿತಿ ನೀಡಿದಾಗ ಅಸಭ್ಯವಾಗಿ ಮಾತನಾಡಿದ್ದಾರೆ.

    ಪ್ರಮೀಳಾರವರ ಸಂಬಂಧಿಕರು ರೈಲ್ವೇ ಸಚಿವರಿಗೆ ಈ ಬಗ್ಗೆ ಟ್ಟೀಟ್ ಮಾಡಿ ಪ್ರಕರಣದ ಬಗ್ಗೆ ವಿವರಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿ ಪ್ರತಿಕ್ರಿಯಿಸಿ ಅಂತ ರೈಲ್ವೆ ಇಲಾಖೆ ಕೂಡ ಟ್ವೀಟ್ ಮಾಡಿದೆ.

    ರೈಲಿನಲ್ಲಿ ಮಹಿಳೆಯರು ಪ್ರಯಾಣಿಸುವಾಗ ರಕ್ಷಣೆ ಇಲ್ಲದಂತಾಗಿದೆ ಎಂದು ಮಾಂಗಲ್ಯ ಸರ ಕಳೆದುಕೊಂಡು ಪ್ರಮೀಳಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಚಲಿಸುತ್ತಿದ್ದ ರೈಲಿನಿಂದ ಟಿಸಿಯನ್ನು ಹೊರದೂಡಿದ ಕಳ್ಳ

    ಚಲಿಸುತ್ತಿದ್ದ ರೈಲಿನಿಂದ ಟಿಸಿಯನ್ನು ಹೊರದೂಡಿದ ಕಳ್ಳ

    ಹುಬ್ಬಳ್ಳಿ: ಕಳ್ಳನೊಬ್ಬ ಚಲಿಸುತ್ತಿದ್ದ ರೈಲಿನಿಂದ ಟಿಕೆಟ್ ಚೆಕ್ಕರ್‍ನನ್ನು ಹೊರ ತಳ್ಳಿ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾನೆ.

    ರೈಲ್ವೆ ಟಿಕೆಟ್ ಪರಿಶೀಲಕ ಚಿನ್ನಪ್ಪ ಎಂಬವರೇ ರೈಲಿನಿಂದ ಹೊರಬಿದ್ದ ರೈಲ್ವೆ ಅಧಿಕಾರಿ. ಭಾನುವಾರ ಬೆಳಗಿನ ಜಾವ ನಿಜಾಮುದ್ದಿನ-ವಾಸ್ಕೋಡಿಗಾಮಾ ಎಕ್ಸಪ್ರೆಸ್ ರೈಲಿನಲ್ಲಿ ಕಳ್ಳನೊಬ್ಬ ಸುಮಾರು 18 ಸಾವಿರ ರೂ. ವೌಲ್ಯದ ಮೊಬೈಲ್ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ. ಈ ವೇಳೆ ರೈಲಿನಲ್ಲಿದ್ದ ಟಿಸಿ ಚಿನ್ನಪ್ಪ ಆತನನ್ನು ವಶಕ್ಕೆ ಪಡೆದುಕೊಂಡಿದ್ದರು. ನಂತರ ಶೌಚಾಲಯಕ್ಕೆ ಹೋಗುವುದಾಗಿ ತೆರಳಿ 10 ನಿಮಿಷವಾದರೂ ಬಂದಿರಲಿಲ್ಲ.

    ಅನುಮಾನಗೊಂಡ ಚಿನ್ನಪ್ಪ ಅವರು ಶೌಚಾಲಯಾದ ಬಳಿ ತೆರಳಿದ್ದಾರೆ. ತನ್ನನ್ನು ಹುಡುಕಲು ಬಂದ ಟಿಸಿಯನ್ನು ಕಳ್ಳ ಚಲಿಸುತ್ತಿದ್ದ ರೈಲಿನಿಂದ ತಳ್ಳಿದ್ದಾನೆ. ಈ ವೇಳೆ ರೈಲು ರಾಯಭಾಗ-ಘಟಪ್ರಭಾ ಮಾರ್ಗದಲ್ಲಿ 65-75 ಕಿಮೀ ವೇಗದಲ್ಲಿ ಚಲಿಸುತ್ತಿತ್ತು. ರೈಲಿನಿಂದ ಹೊರಬಿದ್ದ ಟಿಸಿಯನ್ನು ಸ್ಥಳೀಯರು ರಕ್ಷಣೆ ಮಾಡಿ, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಚಿನ್ನಪ್ಪ ಪ್ರಾಣಾಪಾಯದಿಂದ ಪಾರಾಗಿದ್ದು, ಹುಬ್ಬಳ್ಳಿ ರೈಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಕಳ್ಳನ ಬಗ್ಗೆ ಯವುದೇ ಮಾಹಿತಿಗಳು ಲಭ್ಯವಾಗಿಲ್ಲ. ಈ ಸಂಬಂಧ ಘಟಪ್ರಭ ರೆಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಜೀವನಾಧಾರವಾಗಿದ್ದ ಎಮ್ಮೆಗಳನ್ನು ರಕ್ಷಿಸಲು ಹೋಗಿ ರೈಲಿಗೆ ರೈತ ಬಲಿ!

    ಜೀವನಾಧಾರವಾಗಿದ್ದ ಎಮ್ಮೆಗಳನ್ನು ರಕ್ಷಿಸಲು ಹೋಗಿ ರೈಲಿಗೆ ರೈತ ಬಲಿ!

    ಮಂಡ್ಯ: ಎಮ್ಮೆಗಳನ್ನು ರಕ್ಷಿಸಲು ಹೋಗಿ ರೈಲು ಡಿಕ್ಕಿ ಹೊಡೆದ ಪರಿಣಾಮ ರೈತರೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಅಳೀಸಂದ್ರ ಗ್ರಾಮದ ಬಳಿ ನಡೆದಿದೆ.

    ರಂಗಪ್ಪ(70) ಎಂಬುವರೇ ಮೃತ ರೈತ. ರಂಗಪ್ಪ ಅವರು ಎಂದಿನಂತೆ ಬೆಳಗ್ಗೆಯೇ ಎಮ್ಮೆ ಮೇಯಿಸಲು ಹೋಗಿದ್ರು. ಸಂಜೆಯಾಗುತ್ತಿದ್ದಂತೆ ಎಮ್ಮೆ ಮೇಯಿಸಿಕೊಂಡು ಊರಿಗೆ ವಾಪಸ್ಸಾಗುತ್ತಿದ್ದ ವೇಳೆ ರೈಲು ಬರುತ್ತಿರುವುದರ ಅರಿವಿರದ ಎಮ್ಮೆಗಳು ರೈಲ್ವೆ ಹಳಿ ಮೇಲೆ ಹೋಗಿವೆ.

    ರೈಲು ಬರುತ್ತಿರುವಾಗಲೇ ಹಳಿ ಮೇಲೆ ಬದುಕಿಗೆ ಜೀವನಾಧಾರವಾಗಿದ್ದ ಎಮ್ಮೆಗಳು ಇರುವುದನ್ನು ಗಮನಿಸಿದ ರೈತ ರಂಗಪ್ಪ ಅವುಗಳನ್ನು ಓಡಿಸಲು ಹಳಿ ಹತ್ತಿದ್ದಾರೆ. ಆದರೆ ಈ ವೇಳೆ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿದ್ದರಿಂದ ರೈತ ರಂಗಪ್ಪ ಮತ್ತು ಎರಡು ಎಮ್ಮೆಗಳು ಸ್ಥಳದಲ್ಲೇ ಸಾವನ್ನಪ್ಪಿವೆ.

    ರೈತ ರಂಗಪ್ಪನ ಸಾವಿನಿಂದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 10 ದಿನಗಳಲ್ಲಿ 3ನೇ ಅವಘಡ: ಹಳಿ ತಪ್ಪಿದ ದುರಂತೊ ಎಕ್ಸ್ ಪ್ರೆಸ್!

    10 ದಿನಗಳಲ್ಲಿ 3ನೇ ಅವಘಡ: ಹಳಿ ತಪ್ಪಿದ ದುರಂತೊ ಎಕ್ಸ್ ಪ್ರೆಸ್!

    ಮುಂಬೈ: ನಾಗ್ಪುರದಿಂದ ಮುಂಬೈಗೆ ಬರುತ್ತಿದ್ದ ದುರಂತೊ ಎಕ್ಸ್ ಪ್ರೆಸ್ ಥಾಣೆಯ ಟಿಟಿವಾಲಾ ನಿಲ್ದಾಣದ ಬಳಿ ಇಂದು ಬೆಳಗ್ಗೆ ಹಳಿ ತಪ್ಪಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ.

    ದುರಂತೊ ಎಕ್ಸ್ ಪ್ರೆಸ್‍ನ ಒಟ್ಟು 7 ಎಸಿ ಬೋಗಿಗಳು ಹಳಿ ತಪ್ಪಿದ್ದು, ರೈಲಿನಲ್ಲಿ ಸಿಲುಕಿರುವ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗುತ್ತಿದೆ. ಇಂದು ಬೆಳಗಿನ ಜಾವದಿಂದ ಘಟನಾ ಸ್ಥಳದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಘಟನೆಯಿಂದ ಇದೂವರೆಗೂ ಯಾವುದೇ ಸಾವು-ನೋವುಗಳ ಬಗ್ಗೆ ದಾಖಲಾಗಿಲ್ಲ. ಇನ್ನು ರೈಲಿನ ಕೆಲವು ಬೋಗಿಗಳಲ್ಲಿರುವ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    10 ದಿನಗಳಲ್ಲಿ 3ನೇ ಅಪಘಾತ: ಇದು ಆಗಸ್ಟ್ ತಿಂಗಳಲ್ಲಿ ನಡೆಯುತ್ತಿರುವ ಮೂರನೇ ರೈಲು ಅಪಘಾತವಾಗಿದೆ. ಉತ್ತರ ಪ್ರದೇಶ ರಾಜ್ಯದ ಮುಜಾಫರ್ ನಗರದ ಬಳಿ ಉತ್ಕಲ್ ಎಕ್ಸ್ ಪ್ರೆಸ್ ಹಳಿ ತಪ್ಪಿ ಕಾಲೇಜಿಗೆ ನುಗ್ಗಿತ್ತು. ಈ ಅಪಘಾತದಲ್ಲಿ 23 ಜನರು ಸಾವನ್ನಪ್ಪಿದ್ದು, 97 ಜನರು ಗಾಯಗೊಂಡಿದ್ದರು. ಇದಾದ ಬಳಿಕ ಅಝಮ್ಘಡ್ ದಿಂದ ನವದೆಹಲಿಗೆ ತೆರಳುತ್ತಿದ್ದ ಕೈಫಿಯತ್ ಎಕ್ಸ್ ಪ್ರೆಸ್ ರೈಲಿನ 10 ಬೋಗಿಗಳು ಹಳಿ ತಪ್ಪಿದ್ದು, ರೈಜಿನ ಇಂಜಿನ್ ಡಂಪರ್ ಗೆ ಡಿಕ್ಕಿಯಾಗಿದೆ. ಪರಿಣಾಮ 74 ಮಂದಿ ಗಾಯಗೊಂಡಿದ್ದರು.

  • ಮುಂಬೈ ರೈಲಿನಲ್ಲಿ ಬೆಂಗ್ಳೂರು ಮೂಲದ ಯುವತಿ ಮುಂದೆ ಹಸ್ತಮೈಥುನ!

    ಮುಂಬೈ ರೈಲಿನಲ್ಲಿ ಬೆಂಗ್ಳೂರು ಮೂಲದ ಯುವತಿ ಮುಂದೆ ಹಸ್ತಮೈಥುನ!

    ಮುಂಬೈ: ಸ್ಥಳೀಯ ರೈಲಿನಲ್ಲಿ 22 ವರ್ಷದ ಯುವತಿಯೊಬ್ಬಳ ಎದುರು ವ್ಯಕ್ತಿಯೊಬ್ಬ ಹಸ್ತ ಮೈಥುನ ಮಾಡಿಕೊಂಡಿರುವ ಘಟನೆ ಜೂನ್ 15 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಈ ಹೇಯ ಕೃತ್ಯದ ಕುರಿತು ಬೆಂಗಳೂರು ಮೂಲದ ಯುವತಿ ಕೂಡಲೇ ರೈಲ್ವೆ ಹೆಲ್ಪ್‍ಲೈನ್‍ಗೆ ಕಾಲ್ ಮಾಡಿ ತಿಳಿಸಿದ್ದಾರೆ. ಆದರೆ ಅಲ್ಲಿಯ ಅಧಿಕಾರಿಗಳು ಯಾವುದೇ ಗಂಭೀರತೆ ಇಲ್ಲದೆ ಹಾಸ್ಯದದ ಮೂಲಕ ನಕ್ಕು ಫೋನ್ ಕರೆ ಸ್ಥಗಿತಗೊಳಿಸಿದ್ದಾರೆ.

    ಈ ಘಟನೆಯ ಕುರಿತು ಫೇಸ್‍ಬಕ್‍ನಲ್ಲಿ ಸವಿವರವಾಗಿ ಬರೆದುಕೊಂಡಿದ್ದು ಪೋಸ್ಟ್ ವೈರಲ್ ಆಗಿದೆ. ಇದೀಗ ವಿಚಾರ ತಿಳಿದ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಉನ್ನತ ಮಟ್ಟದ ತನಿಖೆ ನಡೆಸುತ್ತಿದ್ದಾರೆ.

    ರೈಲ್ವೆ ಸಚಿವ ಸುರೇಶ್ ಪ್ರಭು ಅವರು ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದು ಆರೋಪಿಯನ್ನು ಶೀಘ್ರ ವಶಕ್ಕೆ ಪಡೆಯಲು ಸೂಚಿಸಿದ್ದಾರೆ.

    ದಾದರ್ ಮೂಲದ ರೈಲಿನಲ್ಲಿ ಮಧ್ಯಾಹ್ನ ಈ ಘಟನೆ ನಡೆದಿದ್ದು, ಅಂಗವಿಕಲರ ಕಂಪಾರ್ಟ್‍ಮೆಂಟ್ ನಲ್ಲಿದ್ದ ವ್ಯಕ್ತಿ ಮಹಿಳೆಯರ ಕಂಪಾರ್ಟ್ ಮೆಂಟ್ ಬಳಿ ಬಂದು ಹಸ್ತಮೈಥುನ ಮಾಡಿರುವುದಾಗಿ ಯುವತಿ ವಿವರವಾಗಿ ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದಾಳೆ. ಮಾತ್ರವಲ್ಲದೆ ಹೆಲ್ಪ್ ಲೈನ್ ನಂಬರ್ ಗಳು ನಿಜವಾಗಿಯೂ ಉಪಯೋಗಕ್ಕೆ ಬರುತ್ತಾವೋ ಎಂದು ಪ್ರಶ್ನಿಸಿದ್ದಾಳೆ.

    ಇದನ್ನೂ ಓದಿ: ಬೆಂಗಳೂರಿನಿಂದ ಹೊರಟ ವಿಮಾನದಲ್ಲಿ ಮಹಿಳೆಯನ್ನು ಟಚ್ ಮಾಡಿ ಹಸ್ತಮೈಥುನ ಮಾಡ್ತಿದ್ದ ಉದ್ಯಮಿ ಅರೆಸ್ಟ್!

  • ಬಾಗಲಕೋಟೆ-ಕುಡಚಿ ರೈಲು ಸಂಚಾರ ವಿರೋಧಿಸಿ ರೈತರ ಪ್ರತಿಭಟನೆ

    ಬಾಗಲಕೋಟೆ-ಕುಡಚಿ ರೈಲು ಸಂಚಾರ ವಿರೋಧಿಸಿ ರೈತರ ಪ್ರತಿಭಟನೆ

    ಬಾಗಲಕೋಟೆ: ನಗರದಲ್ಲಿ ಕುಡಚಿ ರೈಲು ಸಂಚಾರ ವಿರೋಧಿಸಿ ತಾಲೂಕಿನ ರೈತರು ಬುಧವಾರ ರೈಲು ಹಳಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

    ರೈಲ್ವೆ ಇಲಾಖೆಯ ಅಧಿಕಾರಿಗಳು 5 ವರ್ಷಗಳ ಹಿಂದೆ ರೈಲು ಮಾರ್ಗಕ್ಕಾಗಿ ಬಾಗಲಕೋಟೆ ತಾಲೂಕಿನ ಸಿಗಿಕೇರಿ, ನೀರಲಕೇರಿ ಸುಳಿಕೇರಿ ಸೇರಿದಂತೆ ಹತ್ತಾರು ಗ್ರಾಮದ ನೂರಾರು ಎಕರೆ ಜಮೀನು ಸ್ವಾಧೀನ ಪಡೆಸಿಕೊಂಡಿದ್ದರು.

    ಭೂ ಸ್ವಾಧೀನ ಪಡೆಸಿಕೊಂಡು ಐದು ವರ್ಷಗಳಾದ್ರೂ ಈವರೆಗೂ ಭೂಮಿ ಕಳೆದುಕೊಂಡ ರೈತರಿಗೆ ಯೋಗ್ಯ ಬೆಲೆ ನೀಡಿರಲಿಲ್ಲ. ಅಲ್ಲದೇ ಭೂ ಸ್ವಾಧೀನ ಪಡೆಸಿಕೊಳ್ಳುವಾಗ ರೈತರ ಮಕ್ಕಳ ಶಿಕ್ಷಣಕ್ಕೆ ಅನುಗುಣವಾಗಿ ಮನೆಯೊಬ್ಬರಿಗೆ ಸರ್ಕಾರಿ ಕೆಲಸ ನೀಡುವ ಭರವಸೆ ನೀಡಿದ್ದರು.

    ಆದರೆ ಇಲ್ಲಿಯವರೆಗೆ ರೈಲ್ವೇ ಇಲಾಖೆ ನೀಡಿದ ಯಾವ ಭರವಸೆಗಳನ್ನು ಈಡೇರಿಸಿಲ್ಲ. ಹೀಗಿರುವಾಗಲೇ ಅಧಿಕಾರಿಗಳು ಪ್ರಾಯೋಗಿಕವಾಗಿ ಕುಡುಚಿ ರೈಲು ಓಡಿಸಲು ಮನಸ್ಸು ಮಾಡಿದ್ದಾರೆ. ಅಧಿಕಾರಿಗಳ ಈ ಕ್ರಮಕ್ಕೆ ನಮ್ಮ ಒಪ್ಪಿಗೆ ಇಲ್ಲ ಎಂದು ಆಕ್ರೋಶದಿಂದ ರೈಲು ಹಳಿಯಲ್ಲಿಯೇ ಕುಳಿತು ಜನರು ಪ್ರತಿಭಟನೆ ನೆಡೆಸಿದರು.

     

    ಯಾವುದೇ ಕಾರಣಕ್ಕೂ ರೈಲು ಓಡಿಸಲು ಬಿಡೋದಿಲ್ಲವೆಂದು ಖಡಕ್ಕಾಗಿ ಹೇಳಿದ ರೈತರು, ರೈಲ್ವೇ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

  • ಗಮನಿಸಿ, ಸೋಲಾಪುರದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು- ಈ ರೈಲುಗಳ ಮಾರ್ಗ ಬದಲಾವಣೆ

    ಗಮನಿಸಿ, ಸೋಲಾಪುರದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು- ಈ ರೈಲುಗಳ ಮಾರ್ಗ ಬದಲಾವಣೆ

    ಕಲಬುರಗಿ: ರೈಲಿನ ಬ್ರೇಕ್ ಫೇಲಾದ ಪರಿಣಾಮ 6 ಗೂಡ್ಸ್ ಬೋಗಿಗಳು ಹಳಿ ತಪ್ಪಿರುವ ಘಟನೆ, ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ದುಧನಿ ಗ್ರಾಮದ ಬಳಿ ಭಾನುವಾರ ತಡರಾತ್ರಿ ನಡೆದಿದೆ.

    ಕಲಬುರಗಿಯ ಮಳಖೇಡದಿಂದ ಮಹಾರಾಷ್ಟ್ರಕ್ಕೆ ಹೋಗುತ್ತಿದ್ದ ಗೂಡ್ಸ್ ಟ್ರೇನ್ ಗಂಟೆಗೆ 50 ಕಿಮಿ ಹೋಗುತ್ತಿರುವಾಗ ಬ್ರೇಕ್ ಫೇಲ್ ಆಗಿದೆ. ಕೂಡಲೇ ರೈಲು ಚಾಲಕ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

    ಇನ್ನು ಈ ಘಟನೆಯಿಂದ ಕಲಬುರಗಿ ಮಾರ್ಗವಾಗಿ ಮುಂಬೈ ಕಡೆ ಹೋಗಬೇಕಾದ ಬಹುತೇಕ ರೈಲುಗಳು ಮಾರ್ಗ ಬದಲಾವಣೆ ಮಡಲಾಗಿದೆ. ಹೂಟಗಿ-ಗುಂಟ್ಕಲ್, ವಾಡಿ-ಲಾತುರ್ ಸೇರಿದಂತೆ ಒಟ್ಟು 12 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

     

  • ಕಾರಿಗೆ ರೈಲ್ವೆ ಎಂಜಿನ್ ಡಿಕ್ಕಿ; ಇಬ್ಬರ ಸಾವು

    ಹಾಸನ: ಕಾರೊಂದು ರೈಲ್ವೆ ಗೇಟ್ ದಾಟುವ ವೇಳೆ ರೈಲ್ವೇ ಎಂಜಿನ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಗೇಶಪುರ ಗ್ರಾಮದ ಬಳಿ ನಡೆದಿದೆ.

    ದುದ್ದ ಗ್ರಾಮದ ನಿವಾಸಿಗಳಾದ ಆನಂದ್ (22) ಮತ್ತು ರಾಘವೇಂದ್ರ (28) ಮೃತ ದುರ್ದೈವಿಗಳು. ಮಂಗಳವಾರ ರಾತ್ರಿ ಸುಮಾರು 11 ಗಂಟೆಗೆ ಇಬ್ಬರೂ ಅರಸೀಕೆರೆದಿಂದ ಕೋರವಂಗಲ್ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಕಾವಲುಗಾರನಿಲ್ಲದ ರೈಲ್ವೇ ಗೇಟ್ ದಾಟುವಾಗ ಅಪಘಾತ ನಡೆದಿದೆ.

    ವೇಗವಾಗಿ ಬಂದ ರೈಲ್ವೇ ಎಂಜಿನ್ ಕಾರಿಗೆ ಡಿಕ್ಕಿ ಹೊಡೆದು ಸುಮಾರು 500 ಮೀಟರ್ ದೂರದವರೆಗೆ ಎಳೆದುಕೊಂಡು ಹೋಗಿದೆ. ಕೊನೆಗೆ ರೈಲ್ವೇ ಪೊಲೀಸರು ಸಾರ್ವಜನಿಕರ ಸಹಾಯದೊಂದಿಗೆ ಕಾರನ್ನು ಎಂಜಿನ್‍ನಿಂದ ಬೇರ್ಪಡಿಸಿದ್ದಾರೆ. ಈ ಕುರಿತು ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

     

  • ಬಜೆಟ್‍ನಲ್ಲಿ ರೈಲ್ವೆಗೆ ಸಿಕ್ಕಿದ್ದೇನು?

    ನವದೆಹಲಿ: ಇದೇ ಮೊದಲ ಬಾರಿಗೆ ಕೇಂದ್ರ ಬಜೆಟ್ ಹಾಗೂ ರೈಲ್ವೆ ಬಜೆಟ್ ವಿಲೀನಗೊಳಿಸಲಾಗಿದ್ದು, ಬಜೆಟ್ ಮಂಡನೆ ವೇಳೆ ಅರುಣ್ ಜೇಟ್ಲಿ ರೈಲ್ವೆಗೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನ ಘೋಷಿಸಿದ್ದಾರೆ. ಅವುಗಳ ಹೈಲೈಟ್ಸ್ ಇಲ್ಲಿದೆ.

    > ರೈಲ್ವೆ ಇಲಾಖೆಗೆ 1.31 ಲಕ್ಷ ಕೋಟಿ ರೂ. ಮೀಸಲು.
    > 3,500 ಕಿ.ಮೀ. ರೈಲು ಮಾರ್ಗ ನಿರ್ಮಾಣದ ಗುರಿ.
    > 2019ರೊಳಗೆ ಎಲ್ಲಾ ರೈಲುಗಳಲ್ಲಿ ಬಯೋ ಟಾಯ್ಲೆಟ್.
    > 2020ರೊಳಗೆ ಮಾನವರಹಿತ ಕ್ರಾಸಿಂಗ್ ಇರಲ್ಲ.
    > ಏರ್‍ಪೋರ್ಟ್‍ಗಳಲ್ಲಿ 2 ಟಯರ್ ಫೆಸಿಲಿಟಿ (ಪಿಪಿಪಿ ಸಹಭಾಗಿತ್ವ)
    > ರೈಲ್ವೆ ವೆಬ್‍ಸೈಟ್‍ನಲ್ಲಿ ಟಿಕೆಟ್ ಬುಕ್ಕಿಂಗ್ ಮೇಲೆ ಸೇವಾ ತೆರಿಗೆ ಇಲ್ಲ.
    > ಮೆಟ್ರೋ – ಹೊಸ ಮೆಟ್ರೋ ರೈಲು ಯೋಜನೆ ಜಾರಿ.
    > 500 ಸ್ಟೇಷನ್‍ಗಳು ವಿಕಲಚೇತನ ಸ್ನೇಹಿ- ಲಿಫ್ಟ್, ಎಸ್ಕಲೇಟರ್ ವ್ಯವಸ್ಥೆ.
    > ಕನಿಷ್ಠ 25 ಸ್ಟೇಷನ್‍ಗಳ ಪುನರ್ ನಿರ್ಮಾಣ
    > 7 ಸಾವಿರ ಸ್ಟೇಷನ್‍ಗಳಲ್ಲಿ ಸೋಲಾರ್ ಅಳವಡಿಕೆ
    > ರೈಲು ಬೋಗಿಗಳಿಗೆ ಸಂಬಂಧಿಸಿದ ಅವಶ್ಯತೆಕತೆ ಮತ್ತು ದೂರುಗಳನ್ನು ಸ್ವೀಕರಿಸಲು ಕೋಚ್ ಮಿತ್ರಾ ವ್ಯವಸ್ಥೆ
    > ಪ್ರಯಾಣಿಕರ ಸುರಕ್ಷತೆಗೆ ರೈಲು ರಕ್ಷಾ ಕೋಶ್- 1 ಲಕ್ಷ ಕೋಟಿ ರೂ. ಮೀಸಲು.