ಬೆಂಗಳೂರು: ರೈಲ್ವೆ ಟಿಕೆಟ್ ಬುಕ್ಕಿಂಗ್ ವೇಳೆ ಆಪ್‍ನಲ್ಲಿ ಅಶ್ಲೀಲ ಹಾಗೂ ಅಸಭ್ಯ ಜಾಹೀರಾತು ತೋರಿಸಿದಕ್ಕೆ ವ್ಯಕ್ತಿಯೊಬ್ಬ ರೈಲ್ವೆ ಇಲಾಖೆ ವಿರುದ್ಧ ಟ್ವಿಟ್ಟರಿನಲ್ಲಿ ಕಿಡಿಕಾರಿದ್ದಾನೆ. ಈ ಟ್ವೀಟ್‍ಗೆ ರೈಲ್ವೆ ಇಲಾಖೆ ಪ್ರತಿಕ್ರಿಯಿಸಿದ್ದು, ಸದ್ಯ ಜನರು ವ್ಯಕ್ತಿಯನ್ನೇ ಟ್ರೋಲ್ ಮಾಡಲು ಶುರು ಮಾಡುತ್ತಿದ್ದಾರೆ.
ಪ್ರಯಾಣಿಕ ಆನಂದ್ ಕುಮಾರ್ ರೈಲ್ವೆ ಆಪ್‍ನಲ್ಲಿ ಟಿಕೆಟ್ ಬುಕ್ ಮಾಡುವಾಗ ಕಾಣಿಸಿಕೊಳ್ಳುವ ಅಶ್ಲೀಲ ಜಾಹೀರಾತುಗಳ ಫೋಟೋ ಸ್ಕ್ರೀನ್‍ಶಾಟ್ ತೆಗೆದು ಅದನ್ನು ತನ್ನ ಟ್ವಿಟ್ಟರಿನಲ್ಲಿ ಹಾಕಿ ಪಿಯೂಷ್ ಗೋಯಲ್, ರೈಲ್ವೆ ಮಂತ್ರಿಗೆ ಟ್ಯಾಗ್ ಮಾಡಿದ್ದಾನೆ.
ತನ್ನ ಟ್ವಿಟ್ಟರಿನಲ್ಲಿ ಸ್ಕ್ರೀನ್‍ಶಾಟ್ ಫೋಟೋ ಹಾಕಿ ಅದಕ್ಕೆ, “ನಾನು ರೈಲ್ವೆ ಟಿಕೆಟ್ ಬುಕ್ ಮಾಡುವಾಗ ಆಪ್‍ನಲ್ಲಿ ಅಸಭ್ಯ ಹಾಗೂ ಅಶ್ಲೀಲ ಜಾಹೀರಾತುಗಳು ತೋರಿಸುತ್ತದೆ. ಇದರಿಂದ ನನಗೆ ಸಾಕಷ್ಟು ಕಿರಿಕಿರಿ ಹಾಗೂ ಮುಜುಗರ ಆಗುತ್ತಿದೆ. ಈ ವಿಚಾರವನ್ನು ಗಮನಿಸಿ ಎಂದು ಪಿಯೂಷ್ ಗೋಯಲ್, ರೈಲ್ವೆ ಮಂತ್ರಿ ಹಾಗೂ ಐಆರ್ ಸಿಟಿಸಿ ಟ್ವಿಟ್ಟರ್ ಖಾತೆಗೆ ಟ್ಯಾಗ್ ಮಾಡಿದ್ದಾನೆ.
https://twitter.com/anandk2012/status/1133685801655476224?ref_src=twsrc%5Etfw%7Ctwcamp%5Etweetembed%7Ctwterm%5E1133685801655476224&ref_url=https%3A%2F%2Fwww.indiatoday.in%2Ftrending-news%2Fstory%2Fman-trolls-irctc-for-vulgar-ads-on-the-railway-app-their-savage-reply-has-twitter-in-splits-1537801-2019-05-29
ವ್ಯಕ್ತಿಯ ಟ್ವೀಟ್‍ಗೆ ಐಆರ್ ಸಿಟಿಸಿ, ನಮ್ಮ ವೆಬ್‍ಸೈಟ್ ನಲ್ಲಿ ಜಾಹೀರಾತಿಗಾಗಿ ಗೂಗಲಿನ ಆಡ್ ಸರ್ವಿಸ್ ಬಳಕೆ ಆಗುತ್ತಿದೆ. ಈ ಜಾಹೀರಾತು ಬಳಕೆದಾರರನ್ನು ಟಾರ್ಗೆಟ್ ಮಾಡಲು ಕುಕ್ಕೀಸ್ ಬಳಸುತ್ತದೆ. ಬಳಕೆದಾರನ ಬ್ರೌಸರ್ ಹಿಸ್ಟರಿಯನ್ನು ಗಮನಿಸಿಕೊಂಡು ಅದಕ್ಕೆ ಸಂಬಂಧಪಟ್ಟ ಜಾಹೀರಾತನ್ನು ಮಾತ್ರ ಪ್ರಕಟಿಸುತ್ತದೆ. ಇಂತಹ ಜಾಹೀರಾತು ಬರದೇ ಇರಲು ದಯವಿಟ್ಟು ನಿಮ್ಮ ಬ್ರೌಸರ್ ಹಾಗೂ ಹಿಸ್ಟರಿಯನ್ನು ಡಿಲೀಟ್ ಮಾಡಿ ಎಂದು ಟ್ವೀಟ್ ಮಾಡಿದೆ.
ಭಾರತೀಯ ರೈಲ್ವೇಯ ಈ ಟ್ವೀಟ್ ಅನ್ನು 20 ಸಾವಿರ ಜನ ಲೈಕ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ತನ್ನ ತಪ್ಪಿಗೆ ಐಆರ್ ಟಿಸಿಯನ್ನು ದೂರಬೇಡ. ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಿಯಾ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಡಿಜಿಟಲ್ ವ್ಯವಹಾರದಲ್ಲಿ ಗ್ರಾಹಕನ ಆಸಕ್ತಿ ಏನು ಎನ್ನುವುದನ್ನು ಕಂಪನಿಗಳೇ ಗುರುತಿಸುತ್ತವೆ. ಬಳಕೆದಾರ ಯಾವೆಲ್ಲ ತಾಣಗಳಿಗೆ ಭೇಟಿ ನೀಡಿದ್ದಾನೆ. ಆತನಿಗೆ ಏನು ಇಷ್ಟ ಇತ್ಯಾದಿ ಮಾಹಿತಿಗಳನ್ನು ಸರ್ಚ್ ಎಂಜಿನ್ ಕಂಪನಿಗಳು ಬ್ರೌಸರ್ ಹಿಸ್ಟರಿ ಮೂಲಕ ಪಡೆದುಕೊಳ್ಳುತ್ತದೆ. ಈ ಮೂಲಕ ಗ್ರಾಹಕನಿಗೆ ಇಷ್ಟ ಇರುವ ವಿಚಾರವನ್ನು ತೋರಿಸುತ್ತದೆ.