Tag: ರೈಲ್ವೆ

  • ಬೆಂಗ್ಳೂರು ಹೋಗುವುದಾಗಿ ಹೇಳಿ 3 ದಿನದ ಹಿಂದೆ ಮನೆ ಬಿಟ್ಟವ ಶವವಾಗಿ ಪತ್ತೆ

    ಬೆಂಗ್ಳೂರು ಹೋಗುವುದಾಗಿ ಹೇಳಿ 3 ದಿನದ ಹಿಂದೆ ಮನೆ ಬಿಟ್ಟವ ಶವವಾಗಿ ಪತ್ತೆ

    ಹಾಸನ: ಬೆಂಗಳೂರಿನ ಖಾಸಗಿ ಕಂಪನಿಯ ನೌಕರನೊಬ್ಬ ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆ ಹಾಸನ ನಗರದ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

    ಪ್ರಮೋದ್ (23) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದು, ಗದಗ ಮೂಲದವನೆಂದು ಗುರುತಿಸಲಾಗಿದೆ. ರುಂಡ, ಮುಂಡ ಬೇರೆ ಬೇರೆಯಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಇದನ್ನೂ ಓದಿ: ಸಚಿವಾಕಾಂಕ್ಷಿ ರೇಣುಕಾಚಾರ್ಯಗೆ ಮತ್ತೆ ಸಿ.ಡಿ ಭಯ- ಕೋರ್ಟ್ ಮೊರೆ

    ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈತ ಕೊರೊನಾ ಹಿನ್ನೆಲೆಯಲ್ಲಿ ಊರಿನಲ್ಲಿಯೇ ಇದ್ದ. ಎರಡನೇ ಅಲೆ ಮುಗಿದ ಹಿನ್ನೆಲೆಯಲ್ಲಿ ಮತ್ತೆ ಕಂಪನಿ ಕೆಲಸಕ್ಕೆ ಬೆಂಗಳೂರಿಗೆ ಹೋಗುವುದಾಗಿ ಮೂರು ದಿನದ ಹಿಂದೆ ಮನೆಯವರಿಗೆ ಹೇಳಿದ್ದನು. ಇಂದು ಬೆಳಗ್ಗಿನ ಜಾವ ಮಂಗಳೂರು-ಬೆಂಗಳೂರು ಪ್ಯಾಸೆಂಜರ್ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಮಾನನಷ್ಟ ಮೊಕದ್ದಮೆ ಹೂಡಿದ್ದ ಶಿಲ್ಪಾ ಶೆಟ್ಟಿಗೆ ತರಾಟೆಗೆ ತೆಗೆದುಕೊಂಡ ಕೊರ್ಟ್

    ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ತಂದೆ ಅನಾರೋಗ್ಯಪೀಡಿತರಾಗಿದ್ದು, ದುಡಿದ ಸಂಬಳವನ್ನು ಮನೆಗೆ ಖರ್ಚು ಮಾಡುತ್ತಿದ್ದ ಎಂಬ ಮಾಹಿತಿ ತಿಳಿದುಬಂದಿದೆ. ಕುಟುಂಬಸ್ಥರು ಈಗ ಸ್ವಗ್ರಾಮದಿಂದ ಹಾಸನಕ್ಕೆ ಬರುತ್ತಿದ್ದು ಬಳಿಕ ಆತ್ಮಹತ್ಯೆಗೆ ಕಾರಣ ಏನು ಎಂಬುದು ಗೊತ್ತಾಗಲಿದೆ.

    ಈ ಸಂಬಂಧ ಹಾಸನ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

  • ಹುಬ್ಬಳ್ಳಿಯಲ್ಲಿ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಿದ ನಟ ಸೋನು ಸೂದ್

    ಹುಬ್ಬಳ್ಳಿಯಲ್ಲಿ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಿದ ನಟ ಸೋನು ಸೂದ್

    ಹುಬ್ಬಳ್ಳಿ: ಮಹಾನಗರದ ಕರ್ನಾಟಕ ರೈಲ್ವೆ ಪೊಲೀಸ್ ಠಾಣೆಯಲ್ಲಿ ಬಾಲಿವುಡ್ ನಟ ಸೋನು ಸೂದ್ ನೇತೃತ್ವದ ಸೂದ್ ಚಾರಿಟಿ ಫೌಂಡೇಶನ್ ವತಿಯಿಂದ ತುರ್ತು ಆಮ್ಲಜನಕ ಸಿಲಿಂಡರ್ ಪೂರೈಕೆ ಘಟಕ ಉದ್ಘಾಟನೆ ಸಮಾರಂಭ ಇಂದು ನೇರವೇರಿಸಲಾಯಿತು.

    ಕೊರೊನಾ ಮಹಾಮಾರಿ ರೋಗದಿಂದ ಬಳಲುತ್ತಿರುವ ಹಲವು ರೋಗಿಗಳು ಉಸಿರಾಟದ ತೊಂದರೆಯಿಂದ ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ, ಬಾಲಿವುಡ್ ನಟ ಸೋನು ಸೂದ್ ನೇತೃತ್ವದ ಸೂದ್ ಚಾರಿಟಿ ಫೌಂಡೇಶನ್ ವತಿಯಿಂದ ಲೋಕಾರ್ಪಣೆ ಮಾಡಲಾಯಿತು.

    ಸೂದ್ ಚಾರಿಟಿ ಫೌಂಡೇಶನ್ ಚೇರ್ಮನ್ ರೈಲ್ವೆ ಪೊಲೀಸ್ ಸಿಬ್ಬಂದಿಗೆ ಆಕ್ಸಿಜನ್ ಹೇಗೆ ಬಳಕೆ ಮಾಡಬೇಕು ಮತ್ತು ಇದರ ಸದ್ಬಳಕೆ ಹೇಗೆ ಎನ್ನುವುದರ ಕುರಿತು ಸಂಪೂರ್ಣ ಮಾಹಿತಿ ನೀಡಿದರು.

    ಸೂದ್ ಚಾರಿಟಿ ಫೌಂಡೇಶನ್ ಕೊರೊನಾ ಸಂಧರ್ಭದಲ್ಲಿ ತುರ್ತು ಸೇವೆ ಆರಂಭಿಸಿರುವುದು ಅವಳಿನಗರದ ಸುತ್ತಮುತ್ತಲಿನ ಅಂದಾಜು 120ಕಿ.ಮಿ. ಅಕ್ಕ ಪಕ್ಕದ ಜಿಲ್ಲೆಗಳಿಗೂ ತಲುಪಿಸುವ ಗುರಿ ಹೊಂದಿದೆ. ಆಮ್ಲಜನಕದ ಅಭಾವ ಇದ್ದಲ್ಲಿ ಸರಿಯಾದ ದಾಖಲೆಗಳನ್ನು ನೀಡಿ ಸಾರ್ವಜನಿಕರು ಇದರ ಸದುಪಯೋಗ ಪಡೆದು ಕೊಳ್ಳಬಹುದೆಂದು ರೆಲ್ವೆ ಪೊಲೀಸ್ ಅಧಿಕಾರಿ ಪುಷ್ಪಲತಾ ಹೇಳಿದ್ದಾರೆ.

    ರೈಲ್ವೆ ಇಲಾಖೆಯ ಪೊಲೀಸ್ ಸಿಬ್ಬಂದಿ, ಸೂದ್ ಚಾರಿಟಿ ಫೌಂಡೇಶನ್ ಚೆರ್ಮನ್ ಅಮಿತ್ ಪುರೋಹಿತ, ಅಜಯ್ ಪ್ರತಾಪ್ ಸಿಂಗ್, ಡಿಎಸ್ ಪಿ. ಎನ್ ಪುಷ್ಪಲತಾ, ಡಿ ಬಿ ಪಾಟೀಲ್, ಪಿ ಎಸೈ, ಸತ್ಯಪ್ಪ ಮುಕ್ಕಣ್ಣವರ ಉಪಸ್ಥಿತರಿದ್ದರು.

  • ಮಾಸ್ಕ್ ಹಾಕಿಲ್ಲ ಅಂದ್ರೆ ದಂಡ ಫಿಕ್ಸ್-ರೈಲ್ವೆ ನಿಲ್ದಾಣದಲ್ಲಿ ಹೊಸ ನಿಯಮ ಜಾರಿ

    ಮಾಸ್ಕ್ ಹಾಕಿಲ್ಲ ಅಂದ್ರೆ ದಂಡ ಫಿಕ್ಸ್-ರೈಲ್ವೆ ನಿಲ್ದಾಣದಲ್ಲಿ ಹೊಸ ನಿಯಮ ಜಾರಿ

    ನವದೆಹಲಿ: ರೈಲ್ವೆ ನಿಲ್ದಾಣದಲ್ಲಿ, ರೈಲಿನಲ್ಲಿ ಮಾಸ್ಕ್ ಧರಿಸದೇ ಓಡಾಡುವವರಿಗೆ ರೈಲ್ವೆ ಸಚಿವಾಲಯ 500 ರೂಪಾಯಿ ದಂಡವನ್ನು ವಿಧಿಸುವುದಾಗಿ ಹೇಳಿದೆ.

    ದೇಶದ್ಯಂತ ಕೊರೊನಾ ಹೆಚ್ಚಾಗುತ್ತಿದೆ. ಈ ಹಿನ್ನೆಯಲ್ಲಿ ಭಾರತೀಯ ರೈಲ್ವೆ ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ. ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಈ ನಿಯಮವನ್ನು ಉಲ್ಲಂಘಿಸಿದವರಿಗೆ ರೈಲ್ವೆ ನಿಯಮಗಳು 2012ರ ಕಾಯ್ದೆಯಡಿ 500 ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ ಎಂದು ಪ್ರಯಾಣಿಕರಿಗೆ ಎಚ್ಚರಿಸಿ ತನ್ನ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ. ಮಾಸ್ಕ್ ಧರಿಸದವರಿಗೆ 500 ರೂಪಾಯಿ ದಂಡವನ್ನು ವಿಧಿಸಿ ಕಠಿಣ ಕ್ರಮವನ್ನು ಕೈಗೊಳ್ಳಲಿದೆ. ಮುಂದಿನ ಆದೇಶದವರೆಗೆ ಈ ನಿಯಮ ಜಾರಿಯಲ್ಲಿರಲಿದೆ ಎಂದು ತಿಳಿಸಿದೆ.

    ಕೊರೊನಾ ಟೆಸ್ಟ್ ನಿಂದ ತಪ್ಪಿಸಿಕೊಳ್ಳಲು ರೈಲ್ವೆ ನಿಲ್ದಾಣದಿಂದ ಪ್ರಯಾಣಿಕರು ಹೊರಗೆ ಓಡಿಹೋದ ಘಟನೆ ಬಿಹಾರದ ಬಕ್ಸಾರ್ ರೈಲ್ವೆ ನಿಲ್ದಾಣದಲ್ಲಿ ಇತ್ತೇಚಿಗೆ ನಡೆದಿತ್ತು. ಆರೋಗ್ಯ ಸಿಬ್ಬಂದಿ ಕೆಲ ಪ್ರಯಾಣಿಕರನ್ನು ತಡೆದು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಹೇಳಿದಾಗ ಹಿಂದೇಟು ಹಾಕಿದ್ದಾರೆ. ಪ್ರಯಾಣಿಕರು ಭಯದಿಂದ ರೈಲ್ವೆ ನಿಲ್ದಾಣದಿಂದ ಹೊರಗೆ ಓಡಿ ಹೋಗಿದ್ದರು.

  • ಕೊರೊನಾ ಟೆಸ್ಟ್ ವೇಳೆ ಎದ್ನೋ ಬಿದ್ನೋ ಎಂದು ಓಡಿದ ಪ್ರಯಾಣಿಕರು

    ಕೊರೊನಾ ಟೆಸ್ಟ್ ವೇಳೆ ಎದ್ನೋ ಬಿದ್ನೋ ಎಂದು ಓಡಿದ ಪ್ರಯಾಣಿಕರು

    ಪಾಟ್ನಾ: ಕೊರೊನಾ ಟೆಸ್ಟ್ ನಿಂದ ತಪ್ಪಿಸಿಕೊಳ್ಳಲು ರೈಲ್ವೆ ನಿಲ್ದಾಣದಿಂದ ಪ್ರಯಾಣಿಕರು ಹೊರಗೆ ಓಡಿಹೋದ ಘಟನೆ ಬಿಹಾರದ ಬಕ್ಸಾರ್ ರೈಲ್ವೆ ನಿಲ್ದಾಣದಲ್ಲಿನಡೆದಿದೆ.

    ರೈಲಿನಿಂದ ಇಳಿದ ಪ್ರಯಾಣಿಕರಿಗೆ ಕೊರೊನಾ ಟೆಸ್ಟ್ ಮಾಡುತ್ತಾರೆ ಅಂತಾ ಗೊತ್ತಾಗಿದ್ದೇ ತಡ ನಿಲ್ದಾಣದಿಂದ ಹೊರಗೆ ಹೋಗಲು ಮುಗಿಬಿದ್ದಿದ್ದಾರೆ. ಈ ಮಧ್ಯೆ ಆರೋಗ್ಯ ಸಿಬ್ಬಂದಿ ಕೆಲ ಪ್ರಯಾಣಿಕರನ್ನು ತಡೆದು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಹೇಳಿದಾಗ ಹಿಂದೇಟು ಹಾಕಿದ್ದಾರೆ. ರೈಲ್ವೆ ನಿಲ್ದಾಣದಿಂದ ಹೊರಗೆ ಓಡಿ ಹೋಗಿದ್ದಾರೆ.

    ಪ್ರಯಾಣಿಕರನ್ನು ನಾವು ತಡೆದಾಗ ಅವರು ವಾದ ಮಾಡಲು ಶುರು ಮಾಡಿದ್ರು. ಈ ಘಟನೆ ನಡೆದಾಗ ನಿಲ್ದಾಣದಲ್ಲಿ ಯಾವುದೇ ಪೊಲೀಸ್ ಸಿಬ್ಬಂದಿ ಇರಲಿಲ್ಲ. ಬಳಿಕ ಒಬ್ಬರು ಮಹಿಳಾ ಪೊಲೀಸ್ ಬಂದರು ಆದರೆ ಅವರೊಬ್ಬರೇ ಇದ್ದದ್ದರಿಂದ ಅಸಾಹಯಕರಾಗಿದ್ರು ಎಂದು ಸ್ಥಳೀಯ ಕೌನ್ಸಿಲರ್ ಜೈ ತಿವಾರಿ ಹೇಳಿದ್ದಾರೆ.

    ದೇಶದ ವಿವಿಧ ಭಾಗಗಳಿಂದ ಜನರು ಬಿಹಾರಕ್ಕೆ ವಾಪಸ್ಸಾಗುತ್ತಿದ್ದು, ಅವರನ್ನು ಸ್ಕ್ರೀನಿಂಗ್ ಮಾಡಲು ಎಲ್ಲ ರೈಲ್ವೆ ನಿಲ್ದಾಣಗಳಲ್ಲಿ ಕೊರೊನಾ ಟೆಸ್ಟ್ ಮಾಡುವ ವ್ಯವೆಸ್ಥೆ ಮಾಡಲಾಗಿದೆ ಎಂದು ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ:ಮಹಾ ವಲಸೆ – ಮುಂಬೈ, ದೆಹಲಿ ನಗರಗಳನ್ನ ತೊರೆಯುತ್ತಿರೋ ಪ್ರವಾಸಿ ಕಾರ್ಮಿಕರು

    ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಮುಂಬೈ, ಪುಣೆ, ದೆಹಲಿಯಿಂದ ಬರುವ ರೈಲುಗಳು ಪ್ರತಿದಿನ ಬಿಹಾರಕ್ಕೆ ಬರುತ್ತಿದೆ. ಈ ನಗರಗಳಲ್ಲಿ ಲಾಕ್‍ಡೌನ್‍ನಿಂದ ಹಾಗೂ ಉದ್ಯೋಗವಿಲ್ಲದ ಕಾರಣ ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳುತ್ತಿದ್ದಾರೆ.

  • ಅಕ್ರಮ ಗಾಂಜಾ ಮಾರಾಟ – ಮಹಿಳೆ ಸೇರಿ ಇಬ್ಬರ ಬಂಧನ

    ಅಕ್ರಮ ಗಾಂಜಾ ಮಾರಾಟ – ಮಹಿಳೆ ಸೇರಿ ಇಬ್ಬರ ಬಂಧನ

    ಹುಬ್ಬಳ್ಳಿ: ರೈಲ್ವೆ ನಿಲ್ದಾಣದ ಪಾರ್ಸಲ್ ಕಚೇರಿಯ ಪಕ್ಕದಲ್ಲಿರುವ ಪಾರ್ಕ್ ಜಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಮಹಿಳೆ ಸೇರಿ ಇಬ್ಬರನ್ನ ಬಂಧಿಸುವಲ್ಲಿ ಹುಬ್ಬಳ್ಳಿಯ ರೈಲ್ವೆ ಠಾಣೆ ಪೆÇಲೀಸರು ಯಶಸ್ವಿಯಾಗಿದ್ದಾರೆ.

    ಶಿವಮೊಗ್ಗ ವಿದ್ಯಾನಗರದ ನಿವಾಸಿ ಸಲ್ಮಾನ್ ಅಕ್ಮಲ್ ಹಾಗೂ ಹುಬ್ಬಳ್ಳಿ ಎಂ.ವಿ ಗಲ್ಲಿಯ ನಿವಾಸಿ ಸಾವಿತ್ರಿಬಾಯಿ ದಿಲೀಪ್ ಹಬೀಬ ಬಂಧಿತ ಆರೋಪಿಗಳಾಗಿದ್ದಾರೆ. ರೈಲ್ವೆ ಪ್ರಯಾಣಿಕರಿಗೆ ಗಾಂಜಾ ಮಾರಾಟ ಮಾಡುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ

    ಬಂಧಿತ ಆರೋಪಿಗಳಿಂದ 8 ಸಾವಿರ ರೂಪಾಯಿ ಮೌಲ್ಯದ 800 ಗ್ರಾಂ ಗಾಂಜಾ ಹಾಗೂ 800 ರೂಪಾಯಿ ನಗದನ್ನು ವಶಕ್ಕೆ ಪಡೆಯಲಾಗಿದ್ದು, ಈ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಈಗ ಸಂಚರಿಸುವ ಯಾವುದೇ ರೈಲುಗಳನ್ನು ನಿಲ್ಲಿಸಿಲ್ಲ- ರೈಲ್ವೇಯಿಂದ ಸ್ಪಷ್ಟನೆ

    ಈಗ ಸಂಚರಿಸುವ ಯಾವುದೇ ರೈಲುಗಳನ್ನು ನಿಲ್ಲಿಸಿಲ್ಲ- ರೈಲ್ವೇಯಿಂದ ಸ್ಪಷ್ಟನೆ

    ನವದೆಹಲಿ: ನಿತ್ಯ ಸಂಚರಿಸುವ ಯಾವುದೇ ರೈಲುಗಳನ್ನು ನಿಲ್ಲಿಸಲಾಗಿಲ್ಲ ಎಂದು ರೈಲ್ವೇ ಸಚಿವಾಲಯ ಸ್ಪಷ್ಟಪಡಿಸಿದೆ.

    ಈ ಕುರಿತು ಟ್ವೀಟ್ ಮಾಡುವ ಮೂಲಕ ತಿಳಿಸಿರುವ ಸಚಿವಾಲಯ, ಕೆಲ ಮಾಧ್ಯಮಗಳಲ್ಲಿ ಸೆಪ್ಟೆಂಬರ್ 30ರ ವರೆಗೆ ನಿತ್ಯ ಸಂಚರಿಸುವ ಎಲ್ಲ ರೈಲುಗಳನ್ನು ಸಚಿವಾಲಯ ರದ್ದು ಮಾಡಿದೆ ಎಂದು ವರದಿಯಾಗಿದೆ. ಈ ವರದಿ ಸರಿಯಲ್ಲ. ಸಚಿವಾಲಯ ಯಾವುದೇ ಹೊಸ ಸುತ್ತೋಲೆಯನ್ನು ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ.

    ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ನೋಟಿಫಿಕೇಶನ್ ಹರಿದಾಡುತ್ತಿದ್ದು, ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಎಲ್ಲ ಎಕ್ಸ್‍ಪ್ರೆಸ್ ರೈಲುಗಳ ಸೇವೆಯನ್ನು ಸೆಪ್ಟೆಂಬರ್ 30ರ ವರೆಗೆ ರದ್ದುಗೊಳಿಸಲಾಗಿದೆ ಎಂದು ಇದರಲ್ಲಿ ತಿಳಿಸಲಾಗಿದೆ. ಅಗಸ್ಟ್ 10ರ ದಿನಾಂಕವಿರುವ ಈ ಸುತ್ತೋಲೆಯಲ್ಲಿ ರೈಲುಗಳು ಸಂಚಾರ ರದ್ದತಿ ಮುಂದುವರಿಯಲಿದ್ದು, ಎಕ್ಸ್‍ಪ್ರೆಸ್ ರೈಲುಗಳ ಸಂಚಾರ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ. ಹೀಗಾಗಿ ರೈಲು ಸಂಚಾರ ರದ್ದು ಹಾಗೂ ಪ್ರಾರಂಭದ ಕುರಿತು ಯಾವುದೇ ಸುತ್ತೋಲೆ ಹೊರಡಿಸಿಲ್ಲ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

  • ಲಾಕ್‍ಡೌನ್ ಮುಗಿದಿದ್ದೆ ತಡ ರೈಲ್ವೆ ನಿಲ್ದಾಣದಲ್ಲಿ ಸಾಲುಗಟ್ಟಿ ನಿಂತ ಜನ

    ಲಾಕ್‍ಡೌನ್ ಮುಗಿದಿದ್ದೆ ತಡ ರೈಲ್ವೆ ನಿಲ್ದಾಣದಲ್ಲಿ ಸಾಲುಗಟ್ಟಿ ನಿಂತ ಜನ

    ಬೆಂಗಳೂರು: ಒಂದು ವಾರದ ಲಾಕ್‍ಡೌನ್ ಅಂತ್ಯವಾಗಿದ್ದೆ ತಡ ಬೆಂಗಳೂರಿನಲ್ಲಿ ವಾಸವಿದ್ದ ಬೇರೆ ಬೇರೆ ರಾಜ್ಯದವರು ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಕಡೆ ಮುಖ ಮಾಡಿದ್ದಾರೆ.

    ಒಂದು ವಾರಗಳ ಕಾಲ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಮಾತ್ರ ಲಾಕ್‍ಡೌನ್ ಮಾಡಲಾಗಿತ್ತು. ರೈಲು ಮತ್ತು ವಿಮಾನ ಓಡಾಟವನ್ನು ನಿಲ್ಲಿಸಿರಲಿಲ್ಲ. ಆದರೆ ರೈಲ್ವೆ ನಿಲ್ದಾಣಕ್ಕೆ ಹೋಗಲು ಯಾವುದೇ ಬಸ್, ಆಟೋ, ಕ್ಯಾಬ್ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಬೇರೆ ಬೇರೆ ರಾಜ್ಯದ ಕಾರ್ಮಿಕರು ಒಂದು ವಾರ ಬೆಂಗಳೂರಿನಲ್ಲಿ ಲಾಕ್‍ಡೌನ್ ಆಗಿದ್ದರು. ಇದೀಗ ಲಾಕ್‍ಡೌನ್ ಅಂತ್ಯವಾಗುತ್ತಿದ್ದಂತೆ ಕಾರ್ಮಿಕರು ರೈಲ್ವೆ ನಿಲ್ದಾಣದ ಕಡೆ ಬರುತ್ತಿದ್ದಾರೆ.

    ಮೆಜೆಸ್ಟಿಕ್ ರೈಲ್ವೆ ಸ್ಟೇಷನ್ ಮುಂದೆ ಜನ ಕ್ಯೂ ನಿಂತಿದ್ದು, ಸಾವಿರಾರು ಜನ ಲಗೇಜ್ ಸಮೇತ ಬೆಂಗಳೂರನ್ನ ತೊರೆಯುತ್ತಿದ್ದಾರೆ. ಬೆಳ್ಳಂಬೆಳ್ಳಗ್ಗೆ ಹೊರ ರಾಜ್ಯದವರು ಬೆಂಗಳೂರನ್ನ ತೊರೆಯಲು ಮುಂದಾಗಿದ್ದು, ಬಿಹಾರ, ಪಾಟ್ನಾ ಮತ್ತು ಅಸ್ಸಾಂ ಕಡೆ ಹೋಗುವುದಕ್ಕೆ ಕಾರ್ಮಿಕರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ. ಸಾಮಾಜಿಕ ಅಂತರವಿಲ್ಲದೇ, ಮಾಸ್ಕ್ ಹಾಕಿಕೊಳ್ಳದೆ ಜನ ಲಗೇಜ್ ಇಟ್ಟಿಕೊಂಡು ಕಾಯುತ್ತಿದ್ದಾರೆ.

    ಈ ಮೂಲಕ ಲಾಕ್‍ಡೌನ್ ಅಂತ್ಯ ಆಗಿದ್ದೆ ತಡ ಬೇರೆ ಬೇರೆ ರಾಜ್ಯಗಳಿಗೆ ಹೋಗಲು ಸಾವಿರಾರು ಜನ ಸಾಲು ಗಟ್ಟಿ ನಿಂತಿದ್ದಾರೆ. ಪ್ರತಿಯೊಬ್ಬ ಪ್ರಯಾಣಿಕನಿಗೂ ಟೆಂಪ್ರೇಚರ್ ಚೆಕ್ ಮಾಡಿ, ವೈದ್ಯಕೀಯ ತಪಾಸಣೆ ಮಾಡಿ ರೈಲು ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಅಲ್ಲದೇ ಹೊಂ ಕ್ವಾರಂಟೈನ್ ಸೀಲ್ ಚೆಕ್ ಮಾಡಿ ಒಳಗಡೆ ಬಿಡಲಾಗುತ್ತಿದೆ.

  • ಪತ್ನಿಯ ಗೆಳೆಯನಿಂದಲೇ ಮಗು ಹತ್ಯೆ- ಮಗಳನ್ನ ಕಳ್ಕೊಂಡ 10 ದಿನದ ನಂತ್ರ ತಂದೆ ಆತ್ಮಹತ್ಯೆ

    ಪತ್ನಿಯ ಗೆಳೆಯನಿಂದಲೇ ಮಗು ಹತ್ಯೆ- ಮಗಳನ್ನ ಕಳ್ಕೊಂಡ 10 ದಿನದ ನಂತ್ರ ತಂದೆ ಆತ್ಮಹತ್ಯೆ

    – ತ್ರಿಕೋನ ಸಂಬಂಧದಿಂದ ಬಾಲಕಿಯ ಭೀಕರ ಕೊಲೆ

    ಹೈದರಬಾದ್: 10 ದಿನಗಳ ಹಿಂದೆ ಐದು ವರ್ಷದ ಬಾಲಕಿಯನ್ನು ತಾಯಿಯ ಗೆಳೆಯನೇ ಕೊಲೆ ಮಾಡಿದ್ದನು. ಇದೀಗ ಮಗಳನ್ನು ಕಳೆದುಕೊಂಡ ನೋವಿನಲ್ಲಿದ್ದ ತಂದೆ 10 ದಿನಗಳ ನಂತರ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ಭೊಂಗಿರ್‌ನಲ್ಲಿ ಚಲಿಸುವ ರೈಲಿನ ಮುಂದೆ ಬಿದ್ದು 37 ವರ್ಷದ ಸರ್ಕಾರಿ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶನಿವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ರೈಲ್ವೆ ಹಳಿ ಬಳಿ ವಾಸಿಸುವ ಕೆಲವೇ ಮಕ್ಕಳು ಮೃತ ದೇಹವನ್ನು ನೋಡಿ ತಮ್ಮ ಪೋಷಕರಿಗೆ ಹೋಗಿ ಹೇಳಿದ್ದಾರೆ. ತಕ್ಷಣ ಅವರು ಭೊಂಗಿರ್ ಪೊಲೀಸರು ಮತ್ತು ಸ್ಥಳೀಯ ರೈಲ್ವೆ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತನನ್ನು ಸರ್ಕಾರಿ ನೌಕರನಾಗಿದ್ದ 37 ವರ್ಷದ ವ್ಯಕ್ತಿ ಎಂದು ಗುರುತಿಸಿದ್ದಾರೆ. ತನಿಖೆಯ ಸಮಯದಲ್ಲಿ ಮೃತ ವ್ಯಕ್ತಿ ಘಾಟ್ಕೇಸರ್ ನಿವಾಸಿ ಎಂದು ತಿಳಿದುಬಂದಿದೆ. ಜುಲೈ 1 ರಂದು ಮೃತ ವ್ಯಕ್ತಿಯ ಮಗಳನ್ನು ಆರೋಪಿ ಕರುಣಾಕರ್ ಕೊಲೆ ಮಾಡಿದ್ದನು.

    ಆರೋಪಿ ಕರುಣಾಕರ್ ಮೃತ ಮಗುವಿನ ತಾಯಿ ಅಕ್ರಮ ಸಂಬಂಧ ಹೊಂದಿದ್ದಾಳೆ. ಅಲ್ಲದೇ ಆಕೆ ತನ್ನಿಂದ ದೂರವಾಗುತ್ತಿದ್ದಾಳೆ ಎಂದು ಅಸಮಾಧಾನಗೊಂಡು ಮಗುವನ್ನು ಕೊಲೆ ಮಾಡಿದ್ದನು. ಮಗಳ ಸಾವಿನ ನಂತರ ವ್ಯಕ್ತಿಯ ಭೋಂಗಿರ್ ನಲ್ಲಿರುವ ತನ್ನ ಸಹೋದರರ ನಿವಾಸದಲ್ಲಿ ವಾಸಿಸುತ್ತಿದ್ದನು. ಆದರೆ ಮಗಳ ಹತ್ಯೆಯಿಂದ ತುಂಬಾ ನೊಂದಿದ್ದನು. ಕೊನೆಗೆ ಮನನೊಂದು ಮಗಳು ಕೊಲೆಯಾದ 10 ದಿನಗಳ ನಂತರ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾನೆ.

    ಏನಿದು ಪ್ರಕರಣ?
    2011ರಲ್ಲಿ ಭುವನಗಿರಿ ಮೂಲದ ವ್ಯಕ್ತಿ ಆಂಧ್ರಪ್ರದೇಶದ ಅನಂತಪುರದ ಯುವತಿಯನ್ನು ವಿವಾಹವಾಗಿದ್ದರು. ಈ ದಂಪತಿಗೆ 5 ವರ್ಷದ ಮಗಳಿದ್ದಳು. ಇವರಿಬ್ಬರು ಫೇಸ್‍ಬುಕ್ ಮೂಲಕ ಪರಿಚಯವಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ನಂತರ ತಮ್ಮ ಪ್ರೀತಿಯ ವಿಚಾರವನ್ನು ಮನೆಯಲ್ಲಿ ಹೇಳಿದ್ದರು. ಮನೆಯವರು ಕೂಡ ಇವರ ಪ್ರೀತಿಯನ್ನು ಒಪ್ಪಿಕೊಂಡು ಮದುವೆ ಮಾಡಿಸಿದ್ದರು. ಮಹಿಳೆಯ ಪತಿ ಭುವನಗಿರಿ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದನು.

    ಮಹಿಳೆ ಕೆಲವು ತಿಂಗಳ ಹಿಂದೆ ಫೇಸ್‍ಬುಕ್ ಮೂಲಕ ಆರೋಪಿ ಕರುಣಾಕರ್ ಸ್ನೇಹಿತನಾಗಿದ್ದನು. ನಂತರ ಕರುಣಾಕರ್ ತನ್ನ ಸ್ನೇಹಿತ ರಾಜಶೇಖರ್ ನನ್ನು ಮಹಿಳೆಗೆ ಪರಿಚಯ ಮಾಡಿಸಿಕೊಟ್ಟಿದ್ದನು. ಸ್ವಲ್ಪ ದಿನಗಳ ನಂತರ ಮಹಿಳೆ ಮತ್ತು ರಾಜಶೇಖರ್ ತುಂಬಾ ಆತ್ಮೀಯರಾಗಿದ್ದರು. ಅಲ್ಲದೇ ಕರುಣಾಕರ್ ಬಳಿ ಮಹಿಳೆ ಮಾತನಾಡುವುದನ್ನು ಕಡಿಮೆ ಮಾಡಿದ್ದಳು. ಇದರಿಂದ ಕೋಪಗೊಂಡ ಕರುಣಾಕರ್ ಮಹಿಳೆಯ ಮನೆಗೆ ಹೋಗಿದ್ದನು.

    ಆರೋಪಿ ಕರುಣಾಕರ್ ಮಹಿಳೆಯ ಮನೆಗೆ ಬರುವ ಮೊದಲೇ ರಾಜಶೇಖರ್ ಮನೆಯಲ್ಲಿದ್ದನು. ಇದನ್ನು ತಿಳಿದು ಕರುಣಾಕರ್ ಕೋಪಗೊಂಡು ಮನೆಗೆ ನುಗ್ಗಿದ್ದನು. ಮಹಿಳೆ ಕರುಣಾಕರ್ ಬರುವುದನ್ನು ನೋಡಿ ರಾಜಶೇಖರ್ ನನ್ನು ಬಾತ್‍ರೂಮಿನಲ್ಲಿ ಬಚ್ಚಿಟ್ಟುಕೊಳ್ಳುವಂತೆ ಹೇಳಿದ್ದಳು. ಆಗ ಕರುಣಾಕರ್, ರಾಜಶೇಖರ್ ನನ್ನು ಹೊರಗೆ ಬರುವಂತೆ ಹೇಳಿದ್ದಾನೆ. ಹೊರಗೆ ಬರದಿದ್ದರೆ ಬಾಲಕಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಕೊನೆಗೆ ಬಾಲಕಿಯ ಕತ್ತನ್ನು ಕೊಯ್ದು ಕೊಲೆ ಮಾಡಿದ್ದನು.

  • ರೈಲ್ವೆ, ವಿಮಾನಗಳ ಟಿಕೆಟ್ ಬುಕ್ಕಿಂಗ್ ಮಾದರಿಯಲ್ಲೇ ಸ್ಥಳೀಯ ನಗರ ಸಾರಿಗೆಗೂ ಇ-ಟಿಕೆಟ್

    ರೈಲ್ವೆ, ವಿಮಾನಗಳ ಟಿಕೆಟ್ ಬುಕ್ಕಿಂಗ್ ಮಾದರಿಯಲ್ಲೇ ಸ್ಥಳೀಯ ನಗರ ಸಾರಿಗೆಗೂ ಇ-ಟಿಕೆಟ್

    ನವದೆಹಲಿ: ದೆಹಲಿಯ ಸ್ಥಳೀಯ ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ ಪ್ರಯಾಣಿಕರು, ಸಿಬ್ಬಂದಿಯ ನಡುವೆ ದೈಹಿಕ ಸಂಪರ್ಕ ತಪ್ಪಿಸುವ ಹಿನ್ನೆಲೆಯಲ್ಲಿ ಇ-ಟಿಕೆಟ್ ವ್ಯವಸ್ಥೆ ಮಾಡಲು ತಿರ್ಮಾನಿಸಿದೆ. ಆರಂಭದಲ್ಲಿ ಇದು ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಜಾರಿ ಬರಲಿದ್ದು ಬಳಿಕ ಪೂರ್ಣ ದೆಹಲಿಗೆ ವಿಸ್ತರಿಸುವ ಚಿಂತನೆ ಇದೆ.

    ರೈಲ್ವೆ ಮತ್ತು ವಿಮಾನಗಳ ಟಿಕೆಟ್ ಬುಕ್ಕಿಂಗ್ ಮಾದರಿಯಲ್ಲೇ ಸ್ಥಳೀಯ ಬಸ್‍ಗಳ ಟಿಕೆಟ್ ಬುಕ್ಕಿಂಗ್ ಮಾಡಲು ತಂತ್ರಜ್ಞಾನ ರೂಪಿಸಿದ್ದು, ಇದರ ಹೊಣೆಯನ್ನು ರಾಜ್ಯ ಸರ್ಕಾರ ಇಂದ್ರಪ್ರಸ್ಥ ಇನ್‍ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಅಂಡ್ ಟೆಕ್ನಾಲಜಿ (ಐಐಐಟಿ)ಗೆ ವಹಿಸಿದೆ.

    ಡಿಟಿಸಿ ಬಸ್‍ಗಳಲ್ಲಿ ಟಿಕೆಟ್ ಬಳಕೆಯಿಂದ ದೈಹಿಕ ಸಂಪರ್ಕಕ್ಕೆ ಅವಕಾಶ ಮಾಡಿಕೊಟ್ಟಂತೆ ಮತ್ತು ಪೇಪರ್ ಮೂಲಕವೂ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಐಐಐಟಿಯ ಸಹಾಯಕ ಪ್ರಾಧ್ಯಾಪಕ ಡಾ.ಪ್ರವೀಶ್ ಬಿಯಾನಿ ಹೇಳಿದ್ದಾರೆ.

    ಈ ಹಿನ್ನೆಲೆ ಇ-ಟಿಕೆಟ್ ವ್ಯವಸ್ಥೆ ಮಾಡಿದ್ದು ಪ್ರಯಾಣ ವಿವರಗಳನ್ನು ಮತ್ತು ಪ್ರಾಥಮಿಕ ವೈಯಕ್ತಿಕ ಮಾಹಿತಿ ಭರ್ತಿ ಮಾಡಿ ಭೀಮ್ ಯುಪಿಐ, ಪೇಟಿಎಂ, ಗೂಗಲ್-ಪೇ ಮುಂತಾದ ಡಿಜಿಟಲ್ ಪಾವತಿಯ ಮೂಲಕ ಮೊತ್ತವನ್ನು ಪಾವತಿಸಬೇಕು. ಇದು ಸಂಪೂರ್ಣ ಸಂಪರ್ಕವಿಲ್ಲದ ಪ್ರಕ್ರಿಯೆಯಾಗಿದ್ದು, ಇದರಿಂದ ಸೋಂಕು ಹರಡುವ ವೇಗಕ್ಕೆ ಕಡಿವಾಣ ಹಾಕಬಹುದು ಎನ್ನುವುದು ತಜ್ಞರ ಅಭಿಪ್ರಾಯ.

    ಈಗಾಗಲೇ ಕಂಟೈನ್ಮೆಂಟ್ ಝೋನ್ ನಲ್ಲಿ ಸಂಚರಿಸುವ ಕೆಲವು ಬಸ್‍ಗಳಲ್ಲಿ ಪ್ರಯೋಗ ನಡೆಸಿದ್ದು ಮುಂದಿನ ದಿನಗಳಲ್ಲಿ ಹಾಟಸ್ಫಾಟ್‍ಗಳಲ್ಲಿ ವಿಸ್ತರಣೆಯಾಗಲಿದೆ. ಬಳಿಕ ಪೂರ್ಣ ದೆಹಲಿಗೆ ಈ ತಂತ್ರಜ್ಞಾನ ಪರಿಚಯಿಸಲು ತಿರ್ಮಾನಿಸಿದೆ.

  • 200 ಹೆಚ್ಚುವರಿ ಶ್ರಮಿಕ್ ರೈಲು ಓಡಿಸಲು ಮುಂದಾದ ಕೇಂದ್ರ

    200 ಹೆಚ್ಚುವರಿ ಶ್ರಮಿಕ್ ರೈಲು ಓಡಿಸಲು ಮುಂದಾದ ಕೇಂದ್ರ

    – ಕೆಲವೇ ದಿನಗಳಲ್ಲಿ ಅನ್‍ಲೈನ್ ಬುಕಿಂಗ್ ಆರಂಭ
    – ಯಾವುದೇ ನಿಲ್ದಾಣದಲ್ಲಿ ಟಿಕೆಟ್ ನೀಡಲ್ಲ

    ನವದೆಹಲಿ: ಈಗಾಗಲೇ 1,600 ರೈಲುಗಳ ಮೂಲಕ 21 ಲಕ್ಷಕ್ಕೂ ಅಧಿಕ ಕಾರ್ಮಿಕರನ್ನು ಶ್ರಮಿಕ್ ವಿಶೇಷ ರೈಲುಗಳ ಮೂಲಕ ಅವರ ಊರುಗಳಿಗೆ ತಲುಪಿಸಲಾಗಿದೆ. ಇದೀಗ ಜೂನ್ 1ರಿಂದ ಹೆಚ್ಚುವರಿಯಾಗಿ 200 ನಾನ್ ಎಸಿ ರೈಲುಗಳನ್ನು ಓಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

    ಈ ಕುರಿತು ರೈಲ್ವೆ ಸಚಿವಾಲಯ ಟ್ವೀಟ್ ಮಾಡಿದ್ದು, ಶ್ರಮಿಕ್ ರೈಲುಗಳನ್ನು ಮುಂದುವರಿಸಲು ಭಾರತೀಯ ರೇಲ್ವೆ ನಿರ್ಧರಿಸಿದೆ. ಈಗಾಗಲೇ 1,600 ರೈಲುಗಳು ಮೂಲಕ 21.5 ಲಕ್ಷಕ್ಕೂ ಅಧಿಕ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲಾಗಿದೆ. ಇದೀಗ ಹೊಸದಾಗಿ 200 ರೈಲುಗಳ ಸಂಚಾರವನ್ನು ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದೆ.

    ಅಲ್ಲದೆ ಎಲ್ಲ ರಾಜ್ಯ ಸರ್ಕಾರಗಳಿಗೂ ಈ ಕುರಿತು ಸೂಚನೆ ನೀಡಿದ್ದು, ಆಯಾ ರಾಜ್ಯಗಳಲ್ಲಿ ಪ್ರಮುಖ ರೈಲ್ವೆ ನಿಲ್ದಾಣಗಳ ಹತ್ತಿರವಿರುವ ಕಾರ್ಮಿಕರ ಮಾಹಿತಿಯನ್ನು ನೀಡುವಂತೆ ಕೋರಿದೆ. ಇಂತಹವರ ಪಟ್ಟಿ ನೀಡಿದಲ್ಲಿ ವಿವಿಧ ಸ್ಥಳದ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದೆ.

    ಜೂನ್ 1ರಿಂದ ಹೆಚ್ಚುವರಿ 200 ಶ್ರಮಿಕ್ ರೈಲುಗಳು ಸಂಚರಿಸಲಿದ್ದು, ಆನ್‍ಲೈನ್‍ನಲ್ಲಿ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ. ಸಧ್ಯದಲ್ಲೇ ಈ ಕುರಿತು ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ತಿಳಿಸಿದೆ.

    ಕಾರ್ಮಿಕರು ಆತುರ ಪಡದೆ ಸಾವಧಾನವಾಗಿ ತಾವು ಇರುವ ಸ್ಥಳದಲ್ಲೇ ಕಾಯಬೇಕು. ನಿಮ್ಮ ಊರುಗಳಿಗೆ ತಲುಪಿಸಲು ಈಗಾಗಲೇ ರೈಲ್ವೆ ಇಲಾಖೆ ಸಿದ್ಧತೆ ನಡೆಸಿದೆ. ರಾಜ್ಯ ಸರ್ಕಾರಗಳ ಸಹಾಯದೊಂದಿಗೆ ನಿಮ್ಮ ಊರುಗಳಿಗೆ ತಲುಪಿಸಲಾಗುವುದು. ಅಲ್ಲದೆ ಈ 200 ಹೊಸ ರೈಲುಗಳ ಸಂಚಾರದ ಮಾರ್ಗ ಹಾಗೂ ವೇಳಾಪಟ್ಟಿಯನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು. ಕೆಲವೇ ದಿನಗಳಲ್ಲಿ ಆನ್‍ಲೈನ್ ಬುಕಿಂಗ್ ಸಹ ಆರಂಭವಾಗಲಿದೆ. ಎಲ್ಲ ಬೋಗಿಗಳು ನಾನ್ ಎಸಿ ಆಗಿರಲಿದ್ದು, ಟಿಕೆಟ್‍ಗಳನ್ನು ಯಾವುದೇ ಕಾರಣಕ್ಕೂ ಯಾವುದೇ ರೈಲು ನಿಲ್ದಾಣದಲ್ಲಿ ನೀಡುವುದಿಲ್ಲ. ಟಿಕೆಟ್ ಪಡೆಯಕಲು ಯಾವುದೇ ಪ್ರಯಾಣಿಕರು ರೈಲು ನಿಲ್ದಾಣಕ್ಕೆ ತೆರಳಬಾರದು ಎಂದು ರೈಲ್ವೆ ಸಚಿವಾಲಯ ಮನವಿ ಮಾಡಿದೆ.

    ಕಳೆದ 19 ದಿನಗಳಲ್ಲಿ 21.5 ಲಕ್ಷಕ್ಕೂ ಅಧಿಕ ಕಾರ್ಮಿಕರನ್ನು ಈಗಾಗಲೇ ಅವರ ಊರುಗಳಿಗೆ ತಲುಪಿಸಲಾಗಿದ್ದು, ಮೇ 19ರ ವರೆಗೆ ಒಟ್ಟು 1,600 ಶ್ರಮಿಕ್ ರೈಲುಗಳನ್ನು ಓಡಿಸಲಾಗಿದೆ.