Tag: ರೈಲ್ವೆ

  • ರೈಲ್ವೆ ಖಾಸಗೀಕರಣಗೊಳಿಸುವ ಯೋಜನೆ ಸರ್ಕಾರದ ಮುಂದಿಲ್ಲ: ಅಶ್ವಿನಿ ವೈಷ್ಣವ್

    ರೈಲ್ವೆ ಖಾಸಗೀಕರಣಗೊಳಿಸುವ ಯೋಜನೆ ಸರ್ಕಾರದ ಮುಂದಿಲ್ಲ: ಅಶ್ವಿನಿ ವೈಷ್ಣವ್

    ನವದೆಹಲಿ: ರೈಲ್ವೆಯನ್ನು ಖಾಸಗೀಕರಣಗೊಳಿಸುವ ಯಾವುದೇ ಯೋಜನೆ ಸರ್ಕಾರದ ಮುಂದಿಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟಪಡಿಸಿದರು.

    TRAIN

    ರಾಜ್ಯಸಭೆಯಲ್ಲಿ ರೈಲ್ವೆ ಬಜೆಟ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸದ್ಯ ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: IRCTC Update: 445 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ

    2009-14ರ ಅವಧಿಯಲ್ಲಿ ರೈಲ್ವೆಯ ವಾರ್ಷಿಕ ಹೂಡಿಕೆ 45,980 ಕೋಟಿ ರೂ.ಗಳಷ್ಟಿತ್ತು. ಬಿಜೆಪಿ ಸರ್ಕಾರ ಅದನ್ನು 2014ರಲ್ಲಿ 99,511 ಕೋಟಿಗಳಿಗೆ ದ್ವಿಗುಣಗೊಳಿಸಿದೆ. ಅಲ್ಲದೆ, ಬಜೆಟ್ ಗಾತ್ರವೂ 2,45,800 ಕೋಟಿಗೆ ಹೆಚ್ಚಿದೆ.

    TRAIN

    ಇದೇ ವೇಳೆ ಬುಲೆಟ್ ಟ್ರೇನ್‌, ಕುರಿತು ಪ್ರಸ್ತಾಪಿಸಿದ ಅವರು, ಈಗಾಗಲೇ ೨೫ ದೇಶಗಳು ಹೈಸ್ಪೀಡ್ ಟ್ರೇನ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. ಜಪಾನ್‌ನಲ್ಲಿ `ಇ-3′ ಸಿರೀಸ್ ಟ್ರೇನ್ ಚಾಲ್ತಿಯಲ್ಲಿದ್ದು, ಅದನ್ನು ಭಾರತಕ್ಕೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ವಿವರಿಸಿದರು. ಇದನ್ನೂ ಓದಿ: ರೈಲ್ವೆ ಯೋಜನೆಗೆ 3ಎಕರೆ ಜಮೀನು ಕಳೆದುಕೊಂಡ ರೈತ ಮನನೊಂದು ಆತ್ಮಹತ್ಯೆ

    ಇದೇ ವೇಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ರಾಜ್ಯಸಭೆಯಲ್ಲಿ ಅಪರೂಪವಾಗಿ ಕಾಣಿಸಿಕೊಂಡಿದ್ದು, ಕರ್ನಾಟಕದಲ್ಲಿ ಹಲವಾರು ಯೋಜನೆಗಳನ್ನು ಪೂರ್ಣಗೊಳಿಸುವಂತೆ ರೈಲ್ವೆ ಸಚಿವರನ್ನು ಒತ್ತಾಯಿಸಿದರು.

  • ರೈಲ್ವೆ ಯೋಜನೆಗೆ 3ಎಕರೆ ಜಮೀನು ಕಳೆದುಕೊಂಡ ರೈತ ಮನನೊಂದು ಆತ್ಮಹತ್ಯೆ

    ರೈಲ್ವೆ ಯೋಜನೆಗೆ 3ಎಕರೆ ಜಮೀನು ಕಳೆದುಕೊಂಡ ರೈತ ಮನನೊಂದು ಆತ್ಮಹತ್ಯೆ

    ಶಿವಮೊಗ್ಗ: ರೈಲ್ವೆ ಯೋಜನೆಗೆ ತನ್ನ 3 ಎಕರೆ ಜಮೀನು ಕಳೆದುಕೊಂಡ ರೈತ, ಸರ್ಕಾರದಿಂದ ಜಮೀನಿಗೆ ಅಲ್ಪ ಪರಿಹಾರ ಬಂದಿದೆ ಎಂದು ಮನನೊಂದ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

    ಅರುಣ್ ನಾಯ್ಕ (28) ಮೃತಪಟ್ಟ ರೈತ. ಶಿವಮೊಗ್ಗ – ಶಿಕಾರಿಪುರ – ರಾಣೆಬೆನ್ನೂರು ರೈಲ್ವೆ ಯೋಜನೆಗೆ ಸರ್ಕಾರ ರೈತರ ಭೂಮಿ ವಶಪಡಿಸಿಕೊಳ್ಳುತ್ತಿದೆ. ಆದರೆ ತನ್ನ ಬೆಲೆ ಬಾಳುವ ಫಲವತ್ತಾದ ಜಮೀನಿಗೆ ಸರ್ಕಾರ ಕಡಿಮೆ ಪರಿಹಾರ ನಿಗದಿಪಡಿಸಿದೆ. ಹೀಗೆ ಈ ವಿಚಾರವಾಗಿ ಮನನೊಂದ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಾರೋಗೊಪ್ಪ ಗ್ರಾಮದಲ್ಲಿ ನಡೆದಿದೆ.

    ಮೃತ ಅರುಣ್ ನಾಯ್ಕ ಅವರ ತಂದೆ ತಿಮ್ಮನಾಯ್ಕ ಹೆಸರಿನಲ್ಲಿ ಶಿಕಾರಿಪುರ ತಾಲೂಕಿನ ಎಳೆನೀರು ಕೊಪ್ಪ ಗ್ರಾಮದಲ್ಲಿ ಸರ್ವೇ ನಂಬರ್ 13/13, 14/13ರಲ್ಲಿ ಫಸಲಿಗೆ ಬಂದಿರುವ 3 ಎಕರೆ ಅಡಕೆ ತೋಟ ರೈಲ್ವೆ ಯೋಜನೆಗೆ ಸರ್ಕಾರ ವಶಪಡಿಸಿಕೊಂಡಿದೆ. ಇವರ ಜಮೀನಿಗೆ ಎಕರೆಗೆ 5 ಲಕ್ಷ ಪರಿಹಾರ ಹಣ ನಿಗದಿಪಡಿಸಿ ನೋಟಿಸ್ ಜಾರಿ ಮಾಡಲಾಗಿತ್ತು. ಇದನ್ನೂ ಓದಿ: ಅನ್ಯ ಜಾತಿಯವನನ್ನು ಮದುವೆಯಾದ ಮಗಳು- ರುಬ್ಬುವ ಕಲ್ಲಿನಿಂದ ಚಚ್ಚಿ ಪತ್ನಿ, ಮಕ್ಕಳನ್ನು ಕೊಂದು ಪ್ರಾಣ ಬಿಟ್ಟ ತಂದೆ

    ಆದರೆ ಮೃತ ರೈತ ಕಾಮಗಾರಿ ನಡೆಸುತ್ತಿರುವ ವೇಳೆ ವಿರೋಧ ವ್ಯಕ್ತಪಡಿಸಿದ್ದರು. ಎಕರೆಗೆ 5 ಲಕ್ಷ ರೂ ಪರಿಹಾರ ಎಂದರೆ ಅನ್ಯಾಯವಾಗುತ್ತದೆ. ಪ್ರಸ್ತುತ ಪ್ರತಿ ಎಕರೆ ಜಮೀನಿಗೆ 30 ರಿಂದ 40 ಲಕ್ಷ ರೂ ಇದೆ. ಹೀಗಿರುವಾಗ ಎಕರೆಗೆ ಅಡಕೆ ತೋಟಕ್ಕೆ ಕೇವಲ 5 ಲಕ್ಷ ರೂಪಾಯಿ ಪರಿಹಾರ ಎಂದರೆ ಜೀವನ ಮಣ್ಣು ಸೇರಿದಂತೆ ಎಂದು ಅಧಿಕಾರಿಗಳ ಮುಂದೆ ರೈತರ ತನ್ನ ಅಳಲು ತೋಡಿಕೊಂಡಿದ್ದ. ಇದನ್ನೂ ಓದಿ: ವಿದ್ಯಾರ್ಥಿನಿಗೆ ಶರ್ಟ್ ಬಿಚ್ಚಿಕೊಡಲು ಮುಂದಾದ ಕಾಫಿನಾಡಿನ ಸರ್ಕಲ್ ಇನ್ಸ್‌ಪೆಕ್ಟರ್

    ಆದರೆ ಈ ಬಗ್ಗೆ ಅಧಿಕಾರಿಗಳಿಂದ ನಿರೀಕ್ಷಿತ ಉತ್ತರ ದೊರೆಯದ ಕಾರಣ ಮನನೊಂದು ತನ್ನದೇ ಅಡಿಕೆ ತೋಟದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಕುರಿತು ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಮವಸ್ತ್ರ ಜಾರಿ ಸಿ.ಡಿ.ಸಿ ನಿರ್ಧಾರ ಅಂದ್ರು ಎಜಿ- ಸೋಮವಾರ ಹೈಕೋರ್ಟ್‍ಗೆ ಮಧ್ಯಂತರ ಅರ್ಜಿ

  • ರೆಸ್ಟೋರೆಂಟ್ ಆನ್ ವೀಲ್ಸ್- ಹಳೆಯ ರೈಲ್ವೆ ಕೋಚ್ ಈಗ ರೆಸ್ಟೋರೆಂಟ್

    ರೆಸ್ಟೋರೆಂಟ್ ಆನ್ ವೀಲ್ಸ್- ಹಳೆಯ ರೈಲ್ವೆ ಕೋಚ್ ಈಗ ರೆಸ್ಟೋರೆಂಟ್

    ನವದೆಹಲಿ: ಹಳೆಯ ರೈಲ್ವೆ ಕೋಚ್‍ನ್ನು ಕೇಂದ್ರ ರೈಲ್ವೆ ವಲಯವು ರೆಸ್ಟೋರೆಂಟ್ ಆಗಿ ಮಾರ್ಪಾಡು ಮಾಡಿದೆ. ನಾಗ್ಪುರ ರೈಲು ನಿಲ್ದಾಣದಲ್ಲಿರುವ (Restaurant on wheels) ಈ ವಿಶೇಷ ರೆಸ್ಟೋರೆಂಟ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    ಈ ಹೊಸ ಪರಿಕಲ್ಪನೆಯ ಬಗ್ಗೆ ರೈಲ್ವೆ ಖಾತೆ ರಾಜ್ಯ ಸಚಿವ ದರ್ಶನ ಜರ್ದೋಶ್ ಟ್ವೀಟ್ ಮಾಡಿದ್ದು, ನಾಗ್ಪುರ ರೈಲು ನಿಲ್ದಾಣದಲ್ಲಿ ಭಾರತೀಯ ರೈಲ್ವೆ ತಂದಿರುವ ರೆಸ್ಟೋರೆಂಟ್ ಆನ್ ವೀಲ್ಸ್ ಮೂಲಕ ಕೋಚ್‍ನೊಳಗೆ ಅನನ್ಯ ಭೋಜನದ ಅನುಭವವನ್ನು ಆನಂದಿಸಿ. ನೀವು ಭೇಟಿ ನೀಡಿದಾಗ ನಿಮ್ಮ ಫೋಟೋಗಳನ್ನು ಹಂಚಿಕೊಳ್ಳಲು ಮರೆಯಬೇಡಿ ಎಂದು ಟ್ವೀಟ್ ಮಾಡಿದ್ದಾರೆ. ಈ ಹೊಸ ಯೋಜನೆಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಜಾತ್ಯಾತೀತ ನಿಲುವು ಶಿಥಿಲವಾಗುತ್ತಿದೆ- JDS ವಿರುದ್ಧ ದತ್ತ ಅಸಮಾಧಾನ

    ನಾಗ್ಪುರ ವಿಭಾಗದ ಡಿವಿಜನಲ್ ರೈಲ್ವೇ ಮ್ಯಾನೇಜರ್ ರಿಚಾ ಖರೆ ಮಾತನಾಡಿ, ನಾವು ಹಳೆಯ ಕೋಚ್ ಅನ್ನು ರೆಸ್ಟೋರೆಂಟ್ ಆಗಿ ಅಭಿವೃದ್ಧಿಪಡಿಸಲು ಟೆಂಡರ್ ಕರಿದಿದ್ದೇವೆ. ಗ್ರಾಹಕರಿಗೆ ಈ ರೆಸ್ಟೋರೆಂಟ್ ಇಷ್ಟವಾಗುತ್ತದೆ. ಈ ರೆಸ್ಟೋರೆಂಟ್‍ಗಳನ್ನು ನಾವು ಇತರ ಜಿಲ್ಲೆಗಳಲ್ಲಿ ಆರಂಭಿಸಬೇಕು ಎನ್ನುವ ಯೋಜನೆಯನ್ನು ಹೊಂದಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಾರೂಖ್ ಜೊತೆ ಪ್ರಾರ್ಥನೆ ಮಾಡಿದ್ದು ಪತ್ನಿ ಗೌರಿ ಖಾನ್ ಅಲ್ಲ

    ಇದೊಂದು ಸುಂದರವಾದ ಪರಿಕಲ್ಪನೆಯಾಗಿದೆ. ಇಲ್ಲಿ ಆಹಾರ, ತಂಪು ಪಾನೀಯಗಳು ಎಲ್ಲವೂ ಲಭ್ಯವಿದೆ. ಇದು ತ್ರಿ ಸ್ಟಾರ್ ಅಥವಾ ಪಂಚತಾರಾ ರೆಸ್ಟೋರೆಂಟ್‍ನಂತೆ ಕಾಣುತ್ತದೆ ಎಂದು ಗ್ರಾಹಕರೊಬ್ಬರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

  • ಗೆಳೆಯನನ್ನು ಕೊಂದು, ಕತೆ ಕಟ್ಟಿದ ಸ್ನೇಹಿತ ಪೊಲೀಸರ ಬಲೆಗೆ

    ಗೆಳೆಯನನ್ನು ಕೊಂದು, ಕತೆ ಕಟ್ಟಿದ ಸ್ನೇಹಿತ ಪೊಲೀಸರ ಬಲೆಗೆ

    ಮುಂಬೈ: ಯುವಕನೊಬ್ಬ ತನ್ನ ರೂಮ್‍ಮೇಟ್‍ಗೆ ಚಾಕುವಿನಿಂದ ಇರಿದು ಕೊಂದು, ಚಲಿಸುತ್ತಿದ್ದ ರೈಲಿನಡಿಗೆ ತಳ್ಳಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

    ಗಣೇಶ್ ಮೃತನಾಗಿದ್ದಾನೆ. ಆರೋಪಿ ಅಶೋಕ್ ಮುಖಿಯಾಯನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ರೈಲಿನ ಕೆಳಗೆ ಗಣೇಶ್ ದೇಹವನ್ನು ಹಾಕಿ, ಅದೊಂದು ಅಪಘಾತವೆಂದು ಕತೆ ಕಟ್ಟಲು ಪ್ರಯತ್ನಿಸಿದ್ದ ಯುವಕ ಇದೀಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. ಮೃತ ಯುವಕನ ಸ್ನೇಹಿತರ ವಿಚಾರಣೆ ಮಾಡಿದಾಗ ಅಸಲಿ ಸತ್ಯ ಬಯಲಾಗಿದೆ.

    ನಡೆದಿದ್ದೇನು?: ಇಬ್ಬರೂ ಇತರ ಕೆಲವು ಸ್ನೇಹಿತರ ಜೊತೆಗೆ ಪಾಯಿಸರ್ ಚಾಲ್‍ನ ಕೋಣೆಯಲ್ಲಿ ವಾಸಿಸುತ್ತಿದ್ದರು. ಅವರಿಬ್ಬರೂ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದರು. ರೂಮ್‍ಮೇಟ್‍ಗಳು ಎಲ್ಲಾ ಬಿಹಾರದ ಮಧುಬನಿಯ ಮೂಲದವರಾಗಿದ್ದಾರೆ. ಇದನ್ನೂ ಓದಿ: ನಮ್ಮ ನಾಯಕರ ತ್ಯಾಗ ಬಲಿದಾನದಷ್ಟು ಬೇರೆಯವರಿಗೆ ಇತಿಹಾಸ ಇಲ್ಲ: ಡಿಕೆಶಿ

    ಒಂದು ತಿಂಗಳ ಹಿಂದಷ್ಟೇ ಗಣೇಶ್ ಬಿಹಾರದಿಂದ ಬಂದಿದ್ದ. ಗಣೇಶ್ ನನ್ನ ತಾಯಿಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದ, ಆಕೆ ಬೇರೆಯವರೊಂದಿಗೆ ಸಂಬಂಧ ಇದೆ ಎಂದು ಹೇಳಿದ್ದನು. ಇದೇ ಕಾರಣಕ್ಕೆ ಆತನನ್ನ  ಕೊಲೆ ಮಾಡಿದ್ದೇನೆ ಎಂದು ಅಶೋಕ್ ಪೊಲೀಸರಿಗೆ ತಿಳಿಸಿದ್ದಾನೆ.

    ಕಂಠಪೂರ್ತಿ ಕುಡಿದಿದ್ದ ಅವರ ನಡುವೆ ಮಾತಿಗೆ ಮಾತು ಬೆಳೆದು, ಅಶೋಕ್ ಗಣೇಶ್‍ಗೆ ಚಾಕುವಿನಿಂದ ಇರಿದಿದ್ದಾನೆ. ಬಳಿಕ ನಿಧಾನವಾಗಿ ಚಲಿಸುತ್ತಿದ್ದ ಗೂಡ್ಸ್ ರೈಲಿನ ಕೆಳಗೆ ತಳ್ಳಿ ಆ ಸ್ಥಳದಿಂದ ಪರಾರಿಯಾಗಿದ್ದಾನೆ. ಕೊಲೆಯಾದವನ ರೂಮ್‍ಮೇಟ್‍ಗಳನ್ನು ವಿಚಾರಣೆ ಮಾಡಿದಾಗ ಈ ವಿಷಯ ಬೆಳಕಿಗೆ ಬಂದಿದೆ.

  • ಟಿಕೆಟ್ ಪಡೆಯದ ಪ್ರಯಾಣಿಕನಿಗೆ ಗೂಸಾ ಕೊಟ್ಟ ಪೊಲೀಸ್ ಅಧಿಕಾರಿ ವೀಡಿಯೋ ವೈರಲ್

    ಟಿಕೆಟ್ ಪಡೆಯದ ಪ್ರಯಾಣಿಕನಿಗೆ ಗೂಸಾ ಕೊಟ್ಟ ಪೊಲೀಸ್ ಅಧಿಕಾರಿ ವೀಡಿಯೋ ವೈರಲ್

    ತಿರುವನಂತಪುರಂ: ರೈಲಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಪೊಲೀಸ್ ಅಧಿಕಾರಿಯೊಬ್ಬರು ಮನಬಂದಂತೆ ಥಳಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವೈರಲ್ ವೀಡಿಯೋ ನೋಡಿದ ನೆಟ್ಟಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಯ ಅಮಾನತಿಗೆ ಕಾರಣವಾಗಿದೆ. ಈ ವೀಡಿಯೋ 20 ಸೆಕೆಂಡ್‍ಗಳಿದ್ದು, ಇದರಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಪ್ರಯಾಣಿಕನೊಬ್ಬರಿಗೆ ಕಾಲಿನಲ್ಲಿ ಒದೆಯುತ್ತಿದ್ದಾರೆ. ಪ್ರಯಾಣಿಕನ ಕೈಯನ್ನು ಕಟ್ಟಿ ಹಾಕಲಾಗಿದೆ. ಆತನ ಅಸಹಾಯಕ ಸ್ಥಿತಿಯಲ್ಲಿ ಕುಳಿತಿದ್ದಾನೆ. ಆತನಿಗೆ ಆ ಪೊಲೀಸ್ ಅಧಿಕಾರಿ ಮನಬಂದಂತೆ ಥಳಿಸುತ್ತಿದ್ದಾರೆ.

    ಮಾವಲಿ ಎಕ್ಸ್‍ಪ್ರೆಸ್‍ನಲ್ಲಿ ಈ ಘಟನೆ ನಡೆದಿದೆ. ಟಿಕೆಟ್ ಪರಿಶೀಲಿಸಲು ಪೊಲೀಸರು ರೈಲನ್ನು ಹತ್ತುತ್ತಾರೆ. ಆಗ ವ್ಯಕ್ತಿಯು ಟಿಕೆಟ್‍ನ್ನು ತೋರಿಸಲು ಸಾಧ್ಯವಾಗದೇ ಪರಿತಪಿಸುತ್ತಾನೆ. ಆತ ಕುಡಿದಿದ್ದಾನೆ ಎಂದುಕೊಂಡ ಪೊಲೀಸರು ಆತನಿಗೆ ಹೊಡೆದಿದ್ದಾರೆ. ಇದನ್ನೂ ಓದಿ: ಸೊಸೆಯನ್ನು ಕೊಡಲಿಯಿಂದ ಕೊಚ್ಚಿ ಕೊಂದು ಮಾವ ಎಸ್ಕೇಪ್

    ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಘಟನೆ ಕುರಿತು ನೆಟ್ಟಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ಪೊಲೀಸ್ ಮನಬಂದಂತೆ ಥಳಿಸುತ್ತಿದ್ದರೂ, ಅವರನ್ನು ತಡೆಯದೇ ನೋಡುತ್ತಿದ್ದ ಟಿಟಿಯನ್ನು ಅಮಾನತು ಮಾಡಲು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಆರ್‌ಬಿಐ ಪರಿಶೀಲನೆ ವೇಳೆ ನಕಲಿ ನೋಟುಗಳು ಪತ್ತೆ

    POLICE JEEP

    ಘಟನೆ ಸಂಬಂಧಿಸಿ ವಿರೋಧ ಪಕ್ಷಗಳು ತೀವ್ರ ಟೀಕೆಯನ್ನು ವ್ಯಕ್ತಪಡಿಸಿದ್ದಾರೆ. ಪೊಲೀಸರು ಕ್ರಿಮಿನಲ್‍ಗಳನ್ನು ಬಂಧಿಸುವುದರ ಬದಲು ಸಾಮಾನ್ಯ ಜನರಿಗೆ ತೊಂದರೆ ನೀಡುತ್ತಿದ್ದಾರೆ. ಪ್ರಯಾಣಿಕನ ಮೇಲೆ ನಡೆದ ಹಲ್ಲೆಯನ್ನು ಕಾನೂನು ಬದ್ಧವಾಗಿ ಇತ್ಯರ್ಥ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ತನಿಖೆ ಕೈಗೊಂಡಿದೆ.

  • ನಕಲಿ ದಾಖಲೆಯಿಂದ ರೈಲು ಇಂಜಿನ್ ಮಾರಾಟ ಮಾಡಿದ ಎಂಜಿನಿಯರ್

    ನಕಲಿ ದಾಖಲೆಯಿಂದ ರೈಲು ಇಂಜಿನ್ ಮಾರಾಟ ಮಾಡಿದ ಎಂಜಿನಿಯರ್

    ಪಾಟ್ನಾ: ನಕಲಿ ದಾಖಲೆ ಸೃಷಿಸಿ ರೈಲು ಇಂಜಿನ್‍ನನ್ನು ರೈಲ್ವೆ ಅಧಿಕಾರಿ ಮಾರಾಟ ಮಾಡಿದ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ.

    ರಾಜೀವ್ ರಂಜನ್ ಝಾ ಎಂಬ ಸಮಸ್ತಿಪುರ್ ಲೋಕೋ ಡೀಸೆಲ್ ಶೆಡ್‍ನ ರೈಲ್ವೆ ಉದ್ಯೋಗಿ ಪುರ್ನಿಯಾ ಕೋರ್ಟ್ ಸ್ಟೇಷನ್‍ನಲ್ಲಿರುವ ಹಳೆಯ ಸ್ಟೀಮ್ ಇಂಜಿನ್‍ನನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ. ಇವನ ಈ ಕೆಲಸಕ್ಕೆ ಭದ್ರತಾ ಸಿಬ್ಬಂದಿ ಮತ್ತು ಇತರೆ ಠಾಣಾ ಅಧಿಕಾರಿಗಳು ಸಹಾಯ ಮಾಡಿದ್ದಾರೆ.  ದನ್ನೂ ಓದಿ: ಮಾಜಿ ಪತ್ನಿಗೆ 5516 ಕೋಟಿ ಜೀವನಾಂಶ ನೀಡುವಂತೆ ದುಬೈ ದೊರೆಗೆ ಹೈಕೋರ್ಟ್ ಆದೇಶ

    ನಕಲಿ ದಾಖಲೆ ತೋರಿಸಿ ಸಿಬ್ಬಂದಿಗೆ ಗ್ಯಾಸ್ ಕಟರ್‌ನಿಂದ ಇಂಜಿನ್ ಕತ್ತರಿಸುವಂತೆ ಹೇಳಿದ್ದ. ಆದರೆ ಕೊನೆಗೆ ಎಂಜಿನ್‍ನ್ನು ಕತ್ತರಿಸುವಂತೆ ತೋರಿಸಿದನು. ಇಂಜಿನಿಯರ್ ಫ್ಯಾಬ್ರಿಕೇಟೆಡ್ ಡಿಎಂಐ ಪೇಪರ್ ವರ್ಕ್ ಇಟ್ಟುಕೊಂಡು ರೈಲ್ವೆ ಆಸ್ತಿಯನ್ನು ಮಾರಾಟ ಮಾಡಿದ್ದಾನೆ. ಡಿಸೆಂಬರ್ 14 ರಂದು ಅಕ್ರಮ ಮಾರಾಟ ನಡೆದಿದ್ದು, ಎರಡು ದಿನಗಳ ನಂತರ ಈ ಘಟನೆ ಬೆಳಕಿಗೆ ಬಂದಿದೆ. ದನ್ನೂ ಓದಿ: ಪಾಕ್‍ನ 20 ಯೂಟ್ಯೂಬ್ ಚಾನೆಲ್, 2 ವೆಬ್‍ಸೈಟ್‍ಗಳಿಗೆ ನಿರ್ಬಂಧ

    ಪುರ್ನಿಯಾ ಕೋರ್ಟ್ ಸ್ಟೇಷನ್ ಔಟ್ ಪೋಸ್ಟ್ ಇನ್‍ಚಾರ್ಜ್ ಎಂಎಂ ರೆಹಮಾನ್ ಅರ್ಜಿಯ ಆಧಾರದ ಮೇಲೆ ಬನ್ಮಂಖಿ ಆರ್ ಪಿ ಎಫ್ ಪೋಸ್ಟ್ ನಲ್ಲಿ ಡಿಸೆಂಬರ್ 19ರಂದು ಎಫ್‍ಐಆರ್ ದಾಖಲಿಸಲಾಗಿದೆ. ಈ ಸಂಬಂಧ ಎಂಜಿನಿಯರ್ ಮತ್ತು ಭದ್ರತಾ ಸಿಬ್ಬಂದಿಯನ್ನು ಹೊರತುಪಡಿಸಿ ಏಳು ಜನರ ಹೆಸರನ್ನು ಎಫ್‍ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.  ಇದನ್ನೂ ಓದಿ: ಆಕಾಶದಲ್ಲಿ ಅಚ್ಚರಿ – ಏನಿದು ಸ್ಟಾರ್‌ಲಿಂಕ್‌ ಉಪಗ್ರಹಗಳು? ದರ ಎಷ್ಟು? ನೆಟ್‌ ಹೇಗೆ ಸಿಗುತ್ತೆ?

  • ಟಿಕೆಟ್ ರಹಿತ ಪ್ರಯಾಣ – ನೈರುತ್ಯ ರೈಲ್ವೆ ವಲಯದಿಂದ 5.55 ಕೋಟಿ ದಂಡ ವಸೂಲಿ!

    ಟಿಕೆಟ್ ರಹಿತ ಪ್ರಯಾಣ – ನೈರುತ್ಯ ರೈಲ್ವೆ ವಲಯದಿಂದ 5.55 ಕೋಟಿ ದಂಡ ವಸೂಲಿ!

    ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ 3 ತಿಂಗಳಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಂದ ಬರೋಬ್ಬರಿ 5.55 ಕೋಟಿ ದಂಡ ವಸೂಲಿ ಮಾಡಲಾಗಿದೆ.

    ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಒಟ್ಟು 1,16,521 ಜನ ಟಿಕೆಟ್ ರಹಿತ ಪ್ರಯಾಣಿಕರನ್ನು ಹಿಡಿಯಲಾಗಿದೆ. ಇವರಿಂದ 5.52 ಕೋಟಿ ದಂಡ ವಸೂಲಿ ಮಾಡಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2435 ಪ್ರಕರಣಗಳನ್ನು ದಾಖಲಿಸಿ 13.74 ಲಕ್ಷ ದಂಡ ವಸೂಲಿ ಮಾಡಲಾಗಿತ್ತು. ಟಿಕೆಟ್ ತಪಾಸಣಾ ಸಿಬ್ಬಂದಿ ಕಾರ್ಯ ನಿರ್ವಹಣೆ ಈ ಸಲ ಪ್ರಶಂಸನೀಯವಾಗಿದೆ ಎಂದು ವಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:  ನಟಿ ಶ್ರೀಲೀಲಾ ನನ್ನ ಮಗಳಲ್ಲ – ವಿವಾದಾತ್ಮಕ ಹೇಳಿಕೆ ಕೊಟ್ಟ ಉದ್ಯಮಿ

    ಹುಬ್ಬಳ್ಳಿ ವಿಭಾಗದಲ್ಲಿ 3ತಿಂಗಳಲ್ಲಿ 20457 ಪ್ರಕರಣ ದಾಖಲಿಸಿ 89.57 ಲಕ್ಷ, ಬೆಂಗಳೂರು ವಿಭಾಗದಲ್ಲಿ 61502 ಪ್ರಕರಣಗಳನ್ನು ದಾಖಲಿಸಿ 316.05 ಲಕ್ಷ ಅಂದರೆ 3.16 ಕೋಟಿ, 24659 ಪ್ರಕರಣ ದಾಖಲಿಸಿ 1.03 ಕೋಟಿ, ಸ್ಕಾuಟಿಜeಜಿiಟಿeಜಡ್ ತಂಡವೂ 9903 ಪ್ರಕರಣ ದಾಖಲಿಸಿ 43.33 ಲಕ್ಷ ರೂ. ಸೇರಿದಂತೆ ಒಟ್ಟು 1,16521 ಪ್ರಕರಣ ದಾಖಲಿಸಿದೆ. ಇದರಿಂದ ಒಟ್ಟು 552.27 ಲಕ್ಷ ಅಂದರೆ 5.52 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ: ಹೊಸ ಬಟ್ಟೆ ಧರಿಸಿ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣು!

  • ಚಲಿಸುವ ರೈಲಿನಲ್ಲಿ ಸಾಮೂಹಿಕ ಅತ್ಯಾಚಾರ- ನಾಲ್ವರ ಬಂಧನ

    ಚಲಿಸುವ ರೈಲಿನಲ್ಲಿ ಸಾಮೂಹಿಕ ಅತ್ಯಾಚಾರ- ನಾಲ್ವರ ಬಂಧನ

    ಮುಂಬೈ: ಘಾಟ್ ಪ್ರದೇಶದಲ್ಲಿ ರೈಲು ಚಲಿಸುತ್ತಿದ್ದಾಗ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವನ್ನು ಎಸಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಶುಕ್ರವಾರ ರಾತ್ರಿ ಈ ಕೃತ್ಯ ನಡೆದಿದ್ದು, ಮುಂಬೈ ರೈಲ್ವೆ ಪೊಲೀಸರು ಈ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. ಲಕ್ನೋ- ಮುಂಬೈ ಮಾರ್ಗದ ಪುಷ್ಪಕ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ 20 ವರ್ಷದ ಯುವತಿ ಮೇಲೆ ದರೋಡೆಕೋರರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಮಹಾರಾಷ್ಟ್ರದ ಇಗತ್ಪುರಿ ಮತ್ತು ಕಾಸರ ರೈಲ್ವೆ ನಿಲ್ದಾಣಗಳ ನಡುವೆ ಈ ಅತ್ಯಾಚಾರ ನಡೆಸಲಾಗಿದ್ದು, ಯುವತಿ ನೀಡಿದ ದೂರಿನ ಆಧಾರದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ:  ಪ್ರಿಯಾಂಕಾ ಕಸ ಗುಡಿಸೋಕೆ ಲಾಯಕ್ಕು- ವೀಡಿಯೋ ವೈರಲ್‍ಗೆ ಯೋಗಿ ಪ್ರತಿಕ್ರಿಯೆ

    ಹಿನ್ನೆಲೆ:
    ಮುಂಬೈ ರೈಲ್ವೆ ಪೊಲೀಸರು ಈ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. ಈ ಬಗ್ಗೆ ತಿಳಿಸಿರುವ ಮುಂಬೈ ಜಿಆರ್‌ಪಿಯ ಪೊಲೀಸ್ ಆಯುಕ್ತ ಕೈಸೆರ್ ಖಾಲಿದ್, ಪುಷ್ಪಕ್ ಎಕ್ಸ್‌ಪ್ರೆಸ್‌ ರೈಲು ಘಾಟ್ ವಿಭಾಗದಲ್ಲಿ ಸಂಚರಿಸುವಾಗ ಯುವತಿ ಮೇಲೆ ಅತ್ಯಾಚಾರ ನಡೆಸಲಾಗಿದೆ. ಲಕ್ನೋ-ಮುಂಬೈ ಪುಷ್ಪಕ್ ಎಕ್ಸ್‌ಪ್ರೆಸ್‌ ಸ್ಲೀಪರ್ ಬೋಗಿ ಡಿ -2ನಲ್ಲಿ ಪ್ರಯಾಣಿಸುತ್ತಿದ್ದರು. ಘಾಟ್ ಪ್ರದೇಶದಲ್ಲಿ ರೈಲು ಚಲಿಸುತ್ತಿದ್ದಾಗ ಶುಕ್ರವಾರ ರಾತ್ರಿ ಈ ಕೃತ್ಯ ಎಸಗಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾ ನೌಕರರನ್ನು ಕನಿಷ್ಠ ಒಂದು ವರ್ಷ ಟಾಟಾ ಕಂಪನಿ ಮುಂದುವರಿಸಬೇಕು: ಕೇಂದ್ರ ಸರ್ಕಾರ

     

    ರೈಲು ಕಾಸರವನ್ನು ತಲುಪಿದಾಗ ಆ ಯುವತಿಯ ಸ್ಥಿತಿಯನ್ನು ನೋಡಿದ ಪ್ರಯಾಣಿಕರು ರೈಲ್ವೆ ಸಿಬ್ಬಂದಿ ಬಳಿ ಸಹಾಯ ಮಾಡುವಂತೆ ಕೋರಿದರು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು, ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದೆ. ಸಂತ್ರಸ್ತೆಗೆ 20 ವರ್ಷವಾಗಿದ್ದು, ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿದೆ. ನಾವು ಎಲ್ಲಾ ಸಾಕ್ಷಿಗಳನ್ನು ಸಂಗ್ರಹಿಸುತ್ತಿದ್ದೇವೆ. ಆರೋಪಿಗಳನ್ನು ನಮ್ಮ ತಂಡವು ಪ್ರಶ್ನಿಸುತ್ತಿದೆ. ನಾವು ಅವರ ಹಿಂದಿನ ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ. ಉಪ ಪೊಲೀಸ್ ಆಯುಕ್ತರು ಮತ್ತು ಅಪರಾಧ ವಿಭಾಗದ ತಂಡವು ಆರೋಪಿಗಳ ಬಗ್ಗೆ ತನಿಖೆ ನಡೆಸುತ್ತಿದ್ದು, ಆರೋಪಿಗಳು ರೈಲು ಪ್ರಯಾಣಿಕರಿಂದ 96,390 ರೂ. ಮೌಲ್ಯದ ವಸ್ತುಗಳನ್ನು ಕದ್ದಿದ್ದಾರೆ. ದರೋಡೆ ಮಾಡಲೆಂದೇ ರೈಲು ಹತ್ತಿದ್ದ ಅವರು ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.ಇದನ್ನೂ ಓದಿ: ಏರ್ ಇಂಡಿಯಾ ಬಿಡ್ ಗೆದ್ದ ಟಾಟಾ – ಮಾತೃ ಸಂಸ್ಥೆಗೆ ಮಾರಾಟ

  • ರೈಲ್ವೆ ಹಳಿ ತಪ್ಪಿ ಮೂವರು ಸಾವು, 50 ಮಂದಿಗೆ ಗಾಯ

    ರೈಲ್ವೆ ಹಳಿ ತಪ್ಪಿ ಮೂವರು ಸಾವು, 50 ಮಂದಿಗೆ ಗಾಯ

    ವಾಷಿಂಗ್ಟನ್: ರೈಲ್ವೆ ಅಪಘಾತದಿಂದ ಓರ್ವ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿರುವ ಘಟನೆ ಅಮೆರಿಕದ ಮೊಂಟಾನಾದಲ್ಲಿ ಶನಿವಾರ ನಡೆದಿದೆ. ಇದನ್ನೂ ಓದಿ: ದ್ವೇಷದ ವಿಷವನ್ನು ಬಿತ್ತಿರುವಾಗ ಅಮೃತ ಮಹೋತ್ಸವಕ್ಕೆ ಅರ್ಥವಿದೆಯೇ?: ರಾಹುಲ್

    ಸದ್ಯ ಸ್ಥಳೀಯ ಅಧಿಕಾರಿಗಳೊಂದಿಗೆ ರೈಲು ನಿರ್ವಾಹಕ ಅಮ್ಟ್ರಾಕ್ ಗಾಯಗೊಂಡ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಗೊಳಿಸುವ ಕೆಲಸವನ್ನು ಮಾಡುತ್ತಿದ್ದಾರೆ ಮತ್ತು ರೈಲಿನಲ್ಲಿ ಸುಮಾರು 147 ಮಂದಿ ಪ್ರಯಾಣಿಕರು ಹಾಗೂ 13 ಸಿಬ್ಬಂದಿ ಇದ್ದರು ಎನ್ನಲಾಗುತ್ತಿದೆ.

    Railway track

    ಉತ್ತರ ಮೊಂಟಾನಾದ ಜೋಪ್ಲಿನ್ ಬಳಿ ಸಂಜೆ 4 ಗಂಟೆಗೆ ರೈಲು ಹಳಿ ತಪ್ಪಿದ್ದು, ಘಟನೆ ಕುರಿತ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಘಟನಾ ಸ್ಥಳದಲ್ಲಿ ಲಗೇಜ್‍ಗಳು ಚೆಲ್ಲಾಪಿಲ್ಲಿಯಾಗಿದೆ ಮತ್ತು ಹಲವಾರು ರೈಲಿನ ಬೋಗಿಗಳು ಹಳಿಯಿಂದ ಪಕ್ಕಕ್ಕೆ ಸರಿದಿರುವುದನ್ನು ನೋಡಬಹುದಾಗಿದೆ.

    ಘಟನೆಯಲ್ಲಿ ಮೂರಕ್ಕಿಂತ ಅಧಿಕ ಮಂದಿ ಮೃತಪಟ್ಟಿದ್ದು, 50 ಮಂದಿ ಗಾಯಗೊಂಡಿದ್ದಾರೆ ಎಂದು ಮೊಂಟಾನಾದ ವಿಪತ್ತು ಮತ್ತು ತುರ್ತು ಸೇವೆಗಳ ಸಂಯೋಜಕರು ತಿಳಿಸಿದ್ದಾರೆ. ಇದನ್ನೂ ಓದಿ: ಪಂಜಾಬ್‍ನಲ್ಲಿ ನೂತನ ಸಚಿವ ಸಂಪುಟ ರಚನೆ ಕಸರತ್ತು- ಐವರು ಹಳೆ ಸಚಿವರಿಗೆ ಕೊಕ್

  • ಪ್ರೇಮ ವೈಫಲ್ಯ- ರೈಲ್ವೇ ಹಳಿಗೆ ತಲೆಕೊಟ್ಟು ವಿದ್ಯಾರ್ಥಿ ಆತ್ಮಹತ್ಯೆ

    ಪ್ರೇಮ ವೈಫಲ್ಯ- ರೈಲ್ವೇ ಹಳಿಗೆ ತಲೆಕೊಟ್ಟು ವಿದ್ಯಾರ್ಥಿ ಆತ್ಮಹತ್ಯೆ

    ಹುಬ್ಬಳ್ಳಿ: ತಾನು ಪ್ರೀತಿಸುವ ಹುಡುಗಿ ತನ್ನೊಂದಿಗೆ ಪ್ರೀತಿಯನ್ನು ಹಂಚಿಕೊಳ್ಳುತ್ತಿಲ್ಲವೆಂದು ಬೇಸರಗೊಂಡ ಕಾಲೇಜು ವಿದ್ಯಾರ್ಥಿಯೋರ್ವ ಪ್ರೇಮ ವೈಫಲ್ಯದಿಂದ ರೈಲ್ವೇ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಸಾಂದರ್ಭಿಕ ಚಿತ್ರ

    ಹುಬ್ಬಳ್ಳಿಯ ಅಮರಗೋಳದ ಬಸಯ್ಯ ವಸ್ತ್ರದ ಎಂಬ ಯುವಕ ರೈಲು ಹಳಿಗೆ ತೆಲೆ ಕೊಟ್ಟ ಸಾವನಪ್ಪಿದ ಪ್ರೇಮಿಯಾಗಿದ್ದಾನೆ. ಪಿಯುಸಿ ವ್ಯಾಸಂಗ ಮಾಡಿರುವ ಬಸಯ್ಯ, ಅಮರಗೋಳ ಪ್ರದೇಶದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಯುವತಿ ಬಸಯ್ಯನ ಪ್ರೀತಿಯನ್ನು ನಿರಾಕರಣೆ ಮಾಡಿದ್ದರಿಂದಲೇ ರೈಲು ಹಳಿಗೆ ತೆಲೆ ಕೊಟ್ಟು ಸಾವನಪ್ಪಿದ್ದಾನೆ ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ಬಾಲಕಿ ಕೆನ್ನೆ ಕಚ್ಚಿದ್ದ ಶಿಕ್ಷಕನಿಗೆ ಪೊಲೀಸರ ಮುಂದೆಯೇ ಥಳಿಸಿದ ಸ್ಥಳೀಯರು

    ಬಸಯ್ಯಗೆ ಇನ್‍ಸ್ಟಾಗ್ರಾಮ್ ನಲ್ಲಿ 9 ಸಾವಿರ ಫಾಲೋವರ್ಸ್ ಹೊಂದಿದ್ದು. ಈತನ ತಂದೆ ಸಿಎಂ ಬಸವರಾಜ ಬೊಮ್ಮಾಯಿಯವರ ತಂದೆ-ತಾಯಿಯವರನ್ನು ಅಂತ್ಯಕ್ರಿಯೆ ಮಾಡಿದ ಪುತ್ಥಳಿ ಕಾವಲು ಕೆಲಸಗಾರರಾಗಿದ್ದಾರೆ. ಘಟನೆಯ ಕುರಿತು ರೈಲ್ವೇ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.  ಇದನ್ನೂ ಓದಿ: ಐವರ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್- ಡೆತ್ ನೋಟ್‍ನಲ್ಲಿ ಅಪ್ಪನ ವಿರುದ್ಧವೇ ಮಕ್ಕಳ ಆರೋಪ