Tag: ರೈಲ್ವೆ ಸ್ಟೇಷನ್

  • 250ಕ್ಕೂ ಹೆಚ್ಚು ಮಂದಿಗೆ ವಂಚನೆ – ಗುಜರಾತ್‌, ಯುಪಿಯಲ್ಲೂ ಮ್ಯಾಟ್ರಿಮೋನಿ ವರನ ಪಾರುಪತ್ಯ ಅಷ್ಟಿಷ್ಟಲ್ಲ

    250ಕ್ಕೂ ಹೆಚ್ಚು ಮಂದಿಗೆ ವಂಚನೆ – ಗುಜರಾತ್‌, ಯುಪಿಯಲ್ಲೂ ಮ್ಯಾಟ್ರಿಮೋನಿ ವರನ ಪಾರುಪತ್ಯ ಅಷ್ಟಿಷ್ಟಲ್ಲ

    – ಅಪ್ಪ, ಚಿಕ್ಕಪ್ಪ, ದೊಡ್ಡಪ ಮಾವ ಎಲ್ಲರೂ ಅವನೊಬ್ಬನೆ – ಧ್ವನಿ ಬದಲಿಸಿ ಮಾತನಾಡ್ತಿದ್ದ ಕಿಲಾಡಿ

    ಬೆಂಗಳೂರು: ಮ್ಯಾಟ್ರಿಮೋನಿಯಲ್ಲಿ (Matrimony) ಸಿಕ್ಕ ವರನನ್ನು ಹುಡುಕಿಕೊಂಡು ಬರುತ್ತಿದ್ದ ಪೋಷಕರಿಗೆ ವಂಚಿಸುತ್ತಿದ್ದ ಆರೋಪಿಯ ಒಂದೊಂದೇ ಮುಖವಾಡಗಳು ಬಯಲಾಗುತ್ತಿವೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಗುಜರಾತ್‌, ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನಗಳಲ್ಲೂ ದೋಖಾ ಮಾಡಿರುವ ರಹಸ್ಯ ವಿಚಾರಣೆ ವೇಳೆ ಬಯಲಾಗಿದೆ.

    45 ವರ್ಷ ವಯಸ್ಸಿನ ಆರೋಪಿ (Accused) ನರೇಶ್ ಗೋಸ್ವಾಮಿ ತಾನೇ ಯುವಕನ ತಂದೆ, ಚಿಕ್ಕಪ್ಪ, ದೊಡ್ಡಪ್ಪ, ಮಾವ ಅಂತ ಹೇಳಿಕೊಂಡು ಧ್ವನಿ ಬದಲಿಸಿ ಮಾತನಾಡುತ್ತಿದ್ದ ಅನ್ನೋದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಪರಿಸ್ಥಿತಿಗೆ ತಕ್ಕಂತೆ ಧ್ವನಿ ಬದಲಿಸಿ ಚಿಕ್ಕಪ್ಪನಿಗೆ ಆಕ್ಸಿಡೆಂಟ್‌ ಆಗಿದೆ, ಮಾವ ಆಸ್ಪತ್ರೆಯಲ್ಲಿದ್ದಾರೆ ಅಂತ ಹೇಳಿ, ಹಣ ಪಡೆದು ಫೋನ್‌ ಸ್ವಿಚ್‌ ಆಫ್‌ ಮಾಡಿಕೊಳ್ಳುತ್ತಿದ್ದ. ಕೆಲ ಪೋಷಕರ ಬಳಿ ವರದಕ್ಷಿಣೆ ರೂಪದಲ್ಲಿ ಮುಂಚಿತವಾಗಿಯೇ ಹಣ ಪಡೆದು ನಂತರ ಮೊಬೈಲ್‌ ಸ್ವಿಚ್‌ಆಫ್‌ ಮಾಡಿಕೊಳ್ಳುತ್ತಿದ್ದ. ಕೇವಲ ಕರ್ನಾಕದಲ್ಲಿ ಮಾತ್ರವಲ್ಲ, ಗುಜರಾತ್, ಉತ್ತರ ಪ್ರದೇಶ, ದೆಹಲಿ, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಲ್ಲೂ ಇದೇ ರೀತಿ ದೋಖಾ ಮಾಡಿರುವುದು ಕಂಡುಬಂದಿದೆ ಎಂದು ಪೊಲೀಸ್‌ ಅಧಿಕಾರಿಗಳು (Bengaluru Police) ತಿಳಿಸಿದ್ದಾರೆ.

    ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?
    ಕೆಲ ದಿನಗಳ ಹಿಂದೆಯಷ್ಟೇ ತಮಿಳುನಾಡು ಕೊಯಮತ್ತೂರಿನ ದಂಪತಿ ಮಗಳ 2ನೇ ಮದುವೆಗೆ ಮ್ಯಾಟ್ರಿಮೋನಿಯಲ್ಲಿ ಹುಡುಗನನ್ನ ಹುಡುಕುತ್ತಿದ್ದರು. ಈ ವೇಳೆ ಬೆಂಗಳೂರಿನ ರಾಜಾಜಿನಗರ ನಿವಾಸಿ ಪವನ್ ಅಗರವಾಲ್ ಎಂಬಾತ ಪರಿಚಯವಾಗಿದ್ದ. ನಿಮ್ಮ ಮಗಳು ನನಗೆ ಇಷ್ಟವಾಗಿದ್ದಾಳೆ. ನಾನು ಮದುವೆ ಆಗುವುದಾಗಿ ವರ ಪವನ್‌ ಅಗರವಾಲ್‌ ಹೇಳಿದ್ದ. ಪವನ್‌ ಮಾತನ್ನು ನಂಬಿ ಮಾತುಕತೆಗೆ ಅಂತಾ ಯುವತಿಯ ಪೋಷಕರು ರೈಲಿನಲ್ಲಿ ಬೆಂಗಳೂರಿಗೆ ಬಂದಿದ್ದರು.

    ಮೆಜೆಸ್ಟಿಕ್‌ ರೈಲು ನಿಲ್ದಾಣಕ್ಕೆ ಬಂದು ಫೋನ್‌ ಮಾಡಿದ ನಂತರ ಪವನ್, ನನಗೆ ಮನೆ ಹತ್ತಿರ ಕೆಲಸ ಇದೆ. ನನ್ನ ಬದಲು ನನ್ನ ಚಿಕ್ಕಪ್ಪ ಬಂದು ನಿಮ್ಮನ್ನ ಮನೆಗೆ ಕರೆದುಕೊಂಡು ಬರ್ತಾರೆ ಎಂದು ಹೇಳಿದ್ದ. ಅದರಂತೆ ಒಬ್ಬ ವ್ಯಕ್ತಿ ಮೆಜೆಸ್ಟಿಕ್‌ ರೈಲು ನಿಲ್ದಾಣಕ್ಕೆ ಬಂದಿದ್ದ. ಆತ ಬಂದ ಕೂಡಲೇ ಮತ್ತೆ ಕರೆ ಮಾಡಿದ ಪವನ್‌, ನನ್ನ ಚಿಕ್ಕಪ್ಪ ಟಿಕೆಟ್‌ ಬುಕ್ಕಿಂಗ್‌ ಮಾಡಬೇಕು, ಪರ್ಸ್‌ ಮರೆತು ಬಂದಿದ್ದಾರೆ. ನೀವು ಅವರಿಗೆ 10 ಸಾವಿರ ರೂ.‌ ಕೊಡಿ, ಮನೆಗೆ ಬಂದ ಮೇಲೆ ವಾಪಸ್ ಕೊಡುತ್ತೇನೆ ಅಂತ ಹೇಳಿದ್ದಾನೆ. ಪವನ್ ಮಾತು ನಂಬಿದ ದಂಪತಿ ಪವನ್ ಚಿಕ್ಕಪ್ಪ ಎಂದು ಹೇಳಿಕೊಂಡ ವ್ಯಕ್ತಿಗೆ 10 ಸಾವಿರ ರೂ. ಕೊಟ್ಟಿದ್ದಾರೆ.

    ಹಣ ಪಡೆದ ವ್ಯಕ್ತಿ ಟಿಕೆಟ್‌ ಬುಕ್ಕಿಂಗ್‌ ಮಾಡಿ ಬರ್ತೀನಿ ಅಂತ ಹೋದವನು ಮತ್ತೆ ವಾಪಸ್‌ ಬರಲೇ ಇಲ್ಲ. ಪವನ್ ಮತ್ತು ಆತನ ಚಿಕ್ಕಪ್ಪ ಎಂದು ಹೇಳಿಕೊಂಡ ವ್ಯಕ್ತಿಗೆ ಕರೆ ಮಾಡಿದ್ರೆ ಫೋನ್‌ ಸ್ವಿಚ್ ಆಫ್‌ ಆಗಿತ್ತು. ಬಳಿಕ ತಮ್ಮ ಸಂಬಂಧಿ ಮನೆಗೆ ಹೋಗಿ ಘಟನೆ ಬಗ್ಗೆ ತಿಳಿಸಿದ್ದಾರೆ. ನಂತರ ಸಿಟಿ ರೈಲ್ವೆ ಸ್ಟೇಷನ್ ಪೊಲೀಸ್ ಠಾಣೆಗೆ ದೂರು ನೀಡಿ ಕೊಯಮತ್ತೂರಿಗೆ ವಾಪಸ್ ತೆರಳಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿ ನರೇಶ್ ಗೋಸ್ವಾಮಿ ಎಂಬಾತನನ್ನು ಬಂಧಿಸಿದ್ದಾರೆ. ನಂತರ ಈತನನ್ನು ವಿಚಾರಣೆಗೆ ಒಳಪಡಿಸಿದಾಗಲೇ ಆಸಾಮಿ ಬರೋಬ್ಬರಿ 250 ಜನರಿಗೆ ಇದೇ ರೀತಿ ವಂಚನೆ ಮಾಡಿರೋದು ಬೆಳಕಿಗೆ ಬಂದಿತ್ತು.

  • ಮ್ಯಾಟ್ರಿಮೋನಿ ವರನನ್ನು ಅರಸಿ ಬಂದ ಪೋಷಕರಿಗೆ ಪಂಗನಾಮ – 250ಕ್ಕೂ ಹೆಚ್ಚು ಮಂದಿಗೆ ವಂಚಿಸಿದ್ದ ಆರೋಪಿ ಅಂದರ್‌

    ಮ್ಯಾಟ್ರಿಮೋನಿ ವರನನ್ನು ಅರಸಿ ಬಂದ ಪೋಷಕರಿಗೆ ಪಂಗನಾಮ – 250ಕ್ಕೂ ಹೆಚ್ಚು ಮಂದಿಗೆ ವಂಚಿಸಿದ್ದ ಆರೋಪಿ ಅಂದರ್‌

    – ಆರೋಪಿ ಸ್ಕೆಚ್‌ ಹಾಕ್ತಿದ್ದು ಹೇಗೆ?

    ಬೆಂಗಳೂರು: ಮ್ಯಾಟ್ರಿಮೋನಿಯಲ್ಲಿ (Matrimony) ಸಿಕ್ಕ ವರನನ್ನು ಹುಡುಕಿಕೊಂಡು ಬಂದಿದ್ದ ಪೋಷಕರಿಗೆ ಪಂಗನಾಮ ಹಾಕುತ್ತಿದ್ದ ಖತರ್ನಾಕ್‌ ಒಬ್ಬನನ್ನು ಪೊಲೀಸರು (Bengaluru Police) ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ.

    ರಾಜಾಜಿನಗರ (Rajajinagar) ನಿವಾಸಿ ಪವನ್ ಅಗರವಾಲ್ ಬಂಧಿತ ಆರೋಪಿ. ನಿಮ್ಮ ಮಗಳು ನನಗೆ ಇಷ್ಟ ಆಗಿದ್ದಾಳೆ, ಮದುವೆಯಾಗುತ್ತೇನೆ ಎಂದು ನಂಬಿಸಿ ಬರೋಬ್ಬರಿ 250ಕ್ಕೂ ಅಧಿಕ ಮಂದಿಗೆ ವಂಚಿಸಿದ್ದಾನೆ. ತಮಿಳುನಾಡು (Tamil Nadu) ಮೂಲದ ದಂಪತಿಗೆ ವಂಚನೆ ಕೇಸ್‌ ತನಿಖೆ ನಡೆಸುತ್ತಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ವಿದೇಶದಲ್ಲಿ ನೆಲೆಸಿರೋ ಭಾರತೀಯರಿಗೂ ರಕ್ಷಣೆ ಸಿಕ್ತಿದೆ: ಜೈಶಂಕರ್ ಶ್ಲಾಘನೆ

    ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?
    ಕೆಲ ದಿನಗಳ ಹಿಂದೆಯಷ್ಟೇ ತಮಿಳುನಾಡು ಕೊಯಮತ್ತೂರಿನ ದಂಪತಿ ಮಗಳ 2ನೇ ಮದುವೆಗೆ ಮ್ಯಾಟ್ರಿಮೋನಿಯಲ್ಲಿ ಹುಡುಗನನ್ನ ಹುಡುಕುತ್ತಿದ್ದರು. ಈ ವೇಳೆ ಬೆಂಗಳೂರಿನ ರಾಜಾಜಿನಗರ ನಿವಾಸಿ ಪವನ್ ಅಗರವಾಲ್ ಎಂಬಾತ ಪರಿಚಯವಾಗಿದ್ದ. ನಿಮ್ಮ ಮಗಳು ನನಗೆ ಇಷ್ಟವಾಗಿದ್ದಾಳೆ. ನಾನು ಮದುವೆ ಆಗುವುದಾಗಿ ವರ ಪವನ್‌ ಅಗರವಾಲ್‌ ಹೇಳಿದ್ದ. ಪವನ್‌ ಮಾತನ್ನು ನಂಬಿ ಮಾತುಕತೆಗೆ ಅಂತಾ ಯುವತಿಯ ಪೋಷಕರು ರೈಲಿನಲ್ಲಿ ಬೆಂಗಳೂರಿಗೆ ಬಂದಿದ್ದರು. ಇದನ್ನೂ ಓದಿ: ಲೋಕಸಭಾ ಚುನಾವಣೆಗೂ ಮುನ್ನ I.N.D.I.A ಒಕ್ಕೂಟದಲ್ಲಿ ಒಡಕು – ಚೂರನ್ನು ಮತ್ತೆ ಜೋಡಿಸುತ್ತಾ ಕಾಂಗ್ರೆಸ್‌?

    ಮೆಜೆಸ್ಟಿಕ್‌ ರೈಲು ನಿಲ್ದಾಣಕ್ಕೆ ಬಂದು ಫೋನ್‌ ಮಾಡಿದ ನಂತರ ಪವನ್, ನನಗೆ ಮನೆ ಹತ್ತಿರ ಕೆಲಸ ಇದೆ. ನನ್ನ ಬದಲು ನನ್ನ ಚಿಕ್ಕಪ್ಪ ಬಂದು ನಿಮ್ಮನ್ನ ಮನೆಗೆ ಕರೆದುಕೊಂಡು ಬರ್ತಾರೆ ಎಂದು ಹೇಳಿದ್ದ. ಅದರಂತೆ ಒಬ್ಬ ವ್ಯಕ್ತಿ ಮೆಜೆಸ್ಟಿಕ್‌ ರೈಲು ನಿಲ್ದಾಣಕ್ಕೆ ಬಂದಿದ್ದ. ಆತ ಬಂದ ಕೂಡಲೇ ಮತ್ತೆ ಕರೆ ಮಾಡಿದ ಪವನ್‌, ನನ್ನ ಚಿಕ್ಕಪ್ಪ ಟಿಕೆಟ್‌ ಬುಕ್ಕಿಂಗ್‌ ಮಾಡಬೇಕು, ಪರ್ಸ್‌ ಮರೆತು ಬಂದಿದ್ದಾರೆ. ನೀವು ಅವರಿಗೆ 10 ಸಾವಿರ ರೂ.‌ ಕೊಡಿ, ಮನೆಗೆ ಬಂದ ಮೇಲೆ ವಾಪಸ್ ಕೊಡುತ್ತೇನೆ ಅಂತ ಹೇಳಿದ್ದಾನೆ. ಪವನ್ ಮಾತು ನಂಬಿದ ದಂಪತಿ ಪವನ್ ಚಿಕ್ಕಪ್ಪ ಎಂದು ಹೇಳಿಕೊಂಡ ವ್ಯಕ್ತಿಗೆ 10 ಸಾವಿರ ರೂ. ಕೊಟ್ಟಿದ್ದಾರೆ.

    ಹಣ ಪಡೆದ ವ್ಯಕ್ತಿ ಟಿಕೆಟ್‌ ಬುಕ್ಕಿಂಗ್‌ ಮಾಡಿ ಬರ್ತೀನಿ ಅಂತ ಹೋದವನು ಮತ್ತೆ ವಾಪಸ್‌ ಬರಲೇ ಇಲ್ಲ. ಪವನ್ ಮತ್ತು ಆತನ ಚಿಕ್ಕಪ್ಪ ಎಂದು ಹೇಳಿಕೊಂಡ ವ್ಯಕ್ತಿಗೆ ಕರೆ ಮಾಡಿದ್ರೆ ಫೋನ್‌ ಸ್ವಿಚ್ ಆಫ್‌ ಆಗಿತ್ತು. ಬಳಿಕ ತಮ್ಮ ಸಂಬಂಧಿ ಮನೆಗೆ ಹೋಗಿ ಘಟನೆ ಬಗ್ಗೆ ತಿಳಿಸಿದ್ದಾರೆ. ನಂತರ ಸಿಟಿ ರೈಲ್ವೆ ಸ್ಟೇಷನ್ ಪೊಲೀಸ್ ಠಾಣೆಗೆ ದೂರು ನೀಡಿ ಕೊಯಮತ್ತೂರಿಗೆ ವಾಪಸ್ ತೆರಳಿದ್ದರು. ಇದನ್ನೂ ಓದಿ: ದಿ ಸಾಬರಮತಿ ರಿಪೋರ್ಟ್ ಟ್ರೈಲರ್ ರಿಲೀಸ್: ಚರ್ಚೆಗೆ ಕಾರಣವಾಯಿತು ಮತ್ತೊಂದು ಚಿತ್ರ

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿ ನರೇಶ್ ಗೋಸ್ವಾಮಿ ಎಂಬಾತನನ್ನು ಬಂಧಿಸಿದ್ದಾರೆ. ನಂತರ ಈತನನ್ನು ವಿಚಾರಣೆಗೆ ಒಳಪಡಿಸಿದಾಗಲೇ ಆಸಾಮಿ ಬರೋಬ್ಬರಿ 250 ಜನರಿಗೆ ಇದೇ ರೀತಿ ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ.

  • ರೈಲ್ವೆ ಸ್ಟೇಷನ್ ಬಳಿ ವ್ಯಾಪಾರಿಗಳಿಂದ 17ರ ಹುಡುಗಿ ಮೇಲೆ ಅತ್ಯಾಚಾರ

    ರೈಲ್ವೆ ಸ್ಟೇಷನ್ ಬಳಿ ವ್ಯಾಪಾರಿಗಳಿಂದ 17ರ ಹುಡುಗಿ ಮೇಲೆ ಅತ್ಯಾಚಾರ

    ನವದೆಹಲಿ: 17 ವರ್ಷದ ಹುಡುಗಿಯ ಮೇಲೆ ಇಬ್ಬರು ವ್ಯಾಪಾರಿಗಳು ಅತ್ಯಾಚಾರ ಎಸಗಿದ ಘಟನೆ ರಾಷ್ಟ್ರ ರಾಜಧಾನಿಯ ತಿಲಕ್ ಸೇತುವೆ ಬಳಿ ನಡೆದಿದೆ.

    ತಿಲಕ್ ಸೇತುವೆ ಬಳಿ ರೈಲ್ವೆ ಹಳಿಗಳ ಬಳಿ ಈ ಘಟನೆ ನಡೆದಿದೆ. ಹುಡುಗಿಯು ಗುಜರಾತ್ ಮೂಲದವರಾಗಿದ್ದು, ಸ್ನೇಹಿತನ ಜೊತೆ ರೈಲ್ವೆ ಸ್ಟೇಷನ್‍ಗೆ ಬಂದಿದ್ದಳು. ಆದರೆ ಹುಡುಗಿಗೂ ಸ್ನೇಹಿತನಿಗೂ ಜಗಳವಾಗಿದೆ. ಇದಾದ ನಂತರ ಸ್ನೇಹಿತನು ಅವಳನ್ನು ಅಲ್ಲೇ ಬಿಟ್ಟು ಹೋಗಿದ್ದನು. ಆ ಸಂದರ್ಭದಲ್ಲಿ ವ್ಯಾಪಾರಿಗಳು 17 ವರ್ಷದ ಹುಡುಗಿಯನ್ನು ರೈಲಿಗೆ ಹತ್ತಿಸುವ ನೆಪದಲ್ಲಿ ಆಕೆಯನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ.

    ಹುಡುಗಿಯು ವ್ಯಾಪಾರಿಗಳ ಬಳಿ ತನ್ನ ಮನೆಗೆ ಕರೆ ಮಾಡಲು ಮೊಬೈಲ್‍ನ್ನು ನೀಡುವಂತೆ ಕೇಳಿದ್ದಾಳೆ. ಇದಾದ ಬಳಿಕ ರೈಲನ್ನು ಹತ್ತಲು ಸಹಾಯ ಮಾಡುವಂತೆ ಯುವತಿ ವ್ಯಾಪಾರಿಗಳನ್ನು ಕೇಳಿದ್ದಾರೆ. ಆ ಸಂದರ್ಭದಲ್ಲಿ ವ್ಯಾಪಾರಿಗಳು ಈ ನಿಲ್ದಾಣದಲ್ಲಿ ರೈಲಿಲ್ಲ. ಬದಲಿಗೆ ಬೇರೆ ನಿಲ್ದಾಣದಲ್ಲಿ ರೈಲು ಲಭ್ಯವಿರುತ್ತೆ ಎಂದು ಹೇಳಿ ಬೇರೆ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಮಹಿಳೆಯರ ಮುಂದೆ ನಗ್ನತೆ ಪ್ರದರ್ಶನ – ವ್ಯಕ್ತಿಯ ಖಾಸಗಿ ಅಂಗಕ್ಕೆ ಬೆಂಕಿ ಹಚ್ಚಿದ ಜನ

    ನಂತರ ಅಲ್ಲಿ ಇಬ್ಬರು ವ್ಯಾಪಾರಿಗಳು ಸೇರಿ ಹುಡುಗಿಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಘಟನೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: 16 ವರ್ಷದ ಮಗನ ಮುಂದೆಯೇ ತಂದೆಯನ್ನು ಹತ್ಯೆ ಮಾಡಿದ ದುಷ್ಕರ್ಮಿ

    Live Tv
    [brid partner=56869869 player=32851 video=960834 autoplay=true]

  • ಮಹಾರಾಷ್ಟ್ರ ಪ್ರಯಾಣಿಕರಿಂದ ಮತ್ತೆ ಉದ್ಧಟತನ – ಕೋವಿಡ್ ಟೆಸ್ಟ್‌ಗೆ ಹೆದರಿ ಜಂಪ್

    ಮಹಾರಾಷ್ಟ್ರ ಪ್ರಯಾಣಿಕರಿಂದ ಮತ್ತೆ ಉದ್ಧಟತನ – ಕೋವಿಡ್ ಟೆಸ್ಟ್‌ಗೆ ಹೆದರಿ ಜಂಪ್

    -ಗ್ರಾಮೀಣ ಭಾಗದಲ್ಲಿ ಕೊರೊನಾ ಎರಡನೇ ಅಲೆ ಹಬ್ಬುವ ಆತಂಕ

    ಯಾದಗಿರಿ: ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್ ಡೌನ್ ಭೀತಿ ಹಿನ್ನೆಲೆ ಮಹಾರಾಷ್ಟ್ರ ತೊರೆದು ಯಾದಗಿರಿ ಜಿಲ್ಲೆಗೆ ಬರುತ್ತಿರುವ ಕಾರ್ಮಿಕರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಮತ್ತೆ ಉದ್ಧಟತನ ತೋರುತ್ತಿದ್ದಾರೆ.

    ಅಂತರ್ ರಾಜ್ಯ ಪ್ರಯಾಣಿಕರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಹಿನ್ನೆಲೆ ರೈಲ್ವೆ ನಿಲ್ದಾಣದ ಮುಖ್ಯ ಗೇಟ್‍ನಲ್ಲಿ ಕೋವಿಡ್ ಟೆಸ್ಟ್ ಕೇಂದ್ರವನ್ನು ಸ್ಥಾಪಿಸಲಾಗಿದೆ. ಪ್ರಯಾಣಿಕರು ಕೋವಿಡ್ ಟೆಸ್ಟ್ ಮಾಡಿಸಿದರೆ ಮಾತ್ರ, ರೈಲ್ವೆ ನಿಲ್ದಾಣದಿಂದ ಹೊರಗಡೆ ತೆರಳಬಹುದು. ಆದರೆ ಕೋವಿಡ್ ಟೆಸ್ಟ್ ಮಾಡಿಸಲು ಮತ್ತು ಒಂದು ವೇಳೆ ಪಾಸಿಟಿವ್ ಬಂದರೆ ಆಸ್ಪತ್ರೆ ಸೇರುವ ಭಯದಿಂದ, ಕಾರ್ಮಿಕರು, ಹಿರಿಯರ ನಾಗರಿಕರು ಮತ್ತು ಮಹಿಳೆಯರು ಸಹ ಪ್ರಾಣಾಪಾಯವನ್ನು ಲೆಕ್ಕಿಸದೆ ರೈಲ್ವೆ ನಿಲ್ದಾಣದಲ್ಲಿ ಗೋಡೆ, ಬೇಲಿಯನ್ನು ಹಾರುತ್ತಿದ್ದಾರೆ. ಆರೋಗ್ಯ ಸಿಬ್ಬಂದಿ ಎಷ್ಟೇ ಮನವಿ ಮಾಡಿಕೊಂಡರು, ತಲೆ ಕೆಡಿಸಿಕೊಳ್ಳದ ಮಹಾರಾಷ್ಟ್ರ ಪ್ರಯಾಣಿಕರು ಕೋವಿಡ್ ನಿಯಮವನ್ನು ಉಲ್ಲಂಘನೆ ಮಾಡಿ ಊರು ಸೇರುತ್ತಿದ್ದಾರೆ.

    ಯಾವುದೇ ಟೆಸ್ಟ್ ಮಾಡಿಸದೇ ಊರಿಗೆ ಸೇರುವ ಕಾರ್ಮಿಕರಿಂದ ಯಾದಗಿರಿ ಜಿಲ್ಲೆಗೆ ಕೊರೊನಾ ಎರಡನೇ ಅಲೆ ಆತಂಕ ಶುರುವಾಗಿದೆ. ಕಳ್ಳದಾರಿ ಹಿಡಿದು ಹಳ್ಳಿಗಳತ್ತ ಓಡುತ್ತಿರುವ ಕಾರ್ಮಿಕರಿಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ.

  • ಕರ್ನಾಟಕ ಬಂದ್ – ಮೆಜೆಸ್ಟಿಕ್ ಬಸ್ ನಿಲ್ದಾಣ ಖಾಲಿ ಖಾಲಿ

    ಕರ್ನಾಟಕ ಬಂದ್ – ಮೆಜೆಸ್ಟಿಕ್ ಬಸ್ ನಿಲ್ದಾಣ ಖಾಲಿ ಖಾಲಿ

    ಬೆಂಗಳೂರು: ಯಾವಾಗಲೂ ಜನ ಸಂದಣಿಯಿಂದ ಕೂಡಿರುತ್ತಿದ್ದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲೋದಕ್ಕೆ ಬಿಡುತ್ತಿರಲಿಲ್ಲ ಜನ ಓಡೋಡಿ ಬರುತ್ತಿದ್ದರು. ಆದರೆ ಇಂದು ಬಸ್‍ಗಳ ಸಂಚಾರವಿದ್ದರೂ ಪ್ರಯಾಣಿಕರು ಮಾತ್ರ ಬೆರಳೆಣಿಕೆಯಷ್ಟು ಮಾತ್ರ ಕಾಣಸಿಗುತ್ತಿದ್ದಾರೆ.

    ಹೌದು. ಇಂದು ಸರೋಜಿನ ಮಹಿಷಿ ವರದಿಯನ್ನ ಜಾರಿಗೆ ತರುವಂತೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್‍ಗೆ ಕರೆ ಕೊಟ್ಟಿದೆ. ಈ ಹಿನ್ನೆಲೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದು, ನಾವು ಅರ್ಧ ಗಂಟೆಯಿಂದ ಕಾದರೂ ಜನ ಬರುತ್ತಿಲ್ಲ ಬಂದ್ ಅಂತ ಜನ ಭಯಪಡುತ್ತಿದ್ದಾರೆ. ವೋಲ್ವೋದಲ್ಲಂತೂ ಎರಡು ಪ್ರಯಾಣಿಕರು ಇದ್ದರೆ ಹೆಚ್ಚು ಎಂದು ಬಿಎಂಟಿಸಿ ಬಸ್ ಚಾಲಕ, ನಿರ್ವಾಹಕರು ಅಳಲು ತೋಡಿಕೊಂಡರು. ಬಂದ್ ಪರಿಣಾಮ ಬಿಎಂಟಿಸಿ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೆ ಸಂಪೂರ್ಣ ಭಣಗುಟ್ಟುತ್ತಿದೆ.

    ಇತ್ತ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಎಲ್ಲೆಡೆ ಪೊಲೀಸರ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ. ಪ್ರತಿ ಸರ್ಕಲ್‍ಗೂ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಬಸ್ ಸಂಚಾರ ಯಥಾಸ್ಥಿತಿಯಿದ್ದು, ಎಂದಿನಂತೆ ಬಿಎಂಟಿಸಿ, ಕೆಎಸ್ಆರ್‌ಟಿಸಿ ಬಸ್‍ಗಳು ಸಂಚರಿಸುತ್ತಿದೆ. ಆದರೆ ಜನರಿಲ್ಲದೆ ಮೆಜೆಸ್ಟಿಕ್ ಬಸ್ ನಿಲ್ದಾಣ ಮಾತ್ರ ಖಾಲಿ ಖಾಲಿ ಕಾಣಿಸುತ್ತಿದೆ.

    ಡಿಸಿಪಿ ರಮೇಶ್ ಬಾನೋತ್ ನೇತೃತ್ವದಲ್ಲಿ ಭದ್ರತೆ ನಿಯೋಜಿಸಲಾಗಿದೆ. ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಕೂಡ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಮೆಜೆಸ್ಟಿಕ್‍ನಿಂದ ಫ್ರೀಡಂ ಪಾರ್ಕ್ ವರೆಗೂ ರ‍್ಯಾಲಿ ನಡೆಯಲಿರುವ ಹಿನ್ನೆಲೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಭಧ್ರತೆ ಒದಗಿಸಲಾಗಿದೆ. 1 ಕೆಎಸ್‌ಆರ್‌ಪಿ ತುಕಡಿ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹೊಯ್ಸಳ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಹಾಗೆಯೇ ರೈಲ್ವೆ ಸಂಚಾರದಲ್ಲಿ ಯಾವುದೇ ವ್ಯತ್ಯಯವಿರುವುದಿಲ್ಲ. ಎಂದಿನಂತೆ ರೈಲುಗಳು ಸಂಚರಿಸಲಿದೆ. ಆದರೆ ಪ್ರಯಾಣಿಕರ ಸಂಖ್ಯೆಯಲ್ಲಿ ಶೇಕಡಾ 50ರಷ್ಟು ಇಳಿಕೆಯಾಗಿದೆ.

  • ರೈಲ್ವೇ ಸ್ಟೇಷನ್‍ಗೆ ಹೋಗಿ ನಿತ್ಯ ರೈಲಿನಲ್ಲಿ ಓದುತ್ತಿರುವ ಮಕ್ಕಳು

    ರೈಲ್ವೇ ಸ್ಟೇಷನ್‍ಗೆ ಹೋಗಿ ನಿತ್ಯ ರೈಲಿನಲ್ಲಿ ಓದುತ್ತಿರುವ ಮಕ್ಕಳು

    ಬೆಂಗಳೂರು: ದುಡಿಯುವವನಿಗೆ ಒಂದು ಕಾಲ, ಹಾಗೇ ಅರಸನಿಗೆ ಒಂದು ಕಾಲ ಎಂಬ ಮಾತು ಕೇಳ್ತಿರಾ. ಈಗ ಇದು ಕೊಂಚ ಅಪ್‍ಡೇಟ್ ಆಗಿದೆ. ಖಾಸಗಿ ಶಾಲೆಗಳ ಟ್ರೆಂಡ್ ಒಂದ್ ಕಾಲ, ಈಗ ಸರ್ಕಾರಿ ಶಾಲೆಗಳ ಟ್ರೆಂಡ್ ಕಾಲ ಶುರುವಾಗಿದೆ.

    ಬೆಂಗಳೂರಿನ ಮೂಡಲಪಾಳ್ಯದಲ್ಲಿರೊ ರೈಲ್ವೇ ಸ್ಟೇಷನ್‍ನಲ್ಲಿ ನಿತ್ಯ ಮಕ್ಕಳು ಓದುವುದಕ್ಕಾಗಿ ರೈಲು ಹತ್ತುತ್ತಾರೆ ಹಾಗೂ ಇಳಿಯುತ್ತಾರೆ. ಬಡ ಮಕ್ಕಳನ್ನು ಆಕರ್ಷಿಸಲು ಹಾಗೂ ಸರ್ಕಾರಿ ಶಾಲೆಗೆ ಹೊಸ ಲುಕ್ ಕೊಡಲು ಹೀಗೆ ವಿಭಿನ್ನ ಪೇಂಟಿಂಗ್ ಮಾಡಲಾಗಿದೆ. ಈ ಸರ್ಕಾರಿ ಶಾಲೆಯನ್ನು ನಂಬಿರುವ ಬಡ ಮಕ್ಕಳಿಗೆ ಈಗ ವಿದ್ಯೆ ಜೊತೆಗೆ ಖುಷಿಯೂ ಫ್ರೀ ಆಗಿ ಸಿಕ್ಕಿದೆ. ಕರ್ನಾಟಕ ರಾಜ್ಯ ನಾಮಫಲಕ ಕಲಾವಿದರ ಸಂಘದ ವತಿಯಿಂದ ಹೀಗೆ ಶಾಲೆಗೆ ಹೊಸ ರಂಗು ನೀಡಿದ್ದಾರೆ.

    ಸರ್ಕಾರಿ ಶಾಲೆ ಎಂದರೆ ಮಕ್ಕಳು ಬರುವ ಸಂಖ್ಯೆ ಕಡಿಮೆ ಆಗಿದೆ. ಸರ್ಕಾರಿ ಶಾಲೆ ಮಕ್ಕಳನ್ನು ಆರ್ಕಷಿಸುವ ಸಲುವಾಗಿ ಇಲ್ಲಿ ಬದಲಾವಣೆ ಮಾಡಬೇಕು ಎಂದು ನಮ್ಮ ವಾರ್ಡಿನ ರಾಜ್ಯ ನಾಮಫಲಕ ಕಲಾವಿದರ ಸಂಘದ ಯುವಕರು ಸೇರಿ ರೈಲಿನ ಪೇಟಿಂಗ್ ಮಾಡಲಾಗಿದೆ. ಈಗಾಗಲೇ ಬೇರೆ ಶಾಲೆಯಲ್ಲಿ ಗಿಡ-ಮರ ಚಿತ್ರ, ಸಾಹಿತಿಗಳ ಚಿತ್ರ ಕಾಮನ್ ಆಗಿತ್ತು. ವಿಭಿನ್ನವಾಗಿ ಇರಲಿ ಎಂದು ಈ ರೈಲಿನ ಪೇಟಿಂಗ್ ಮಾಡಿದ್ದೇವೆ ಎಂದು ಕಾರ್ಪೋರೇಟರ್ ದಾಸೇಗೌಡರು ತಿಳಿಸಿದ್ದಾರೆ.

    ಸರ್ಕಾರಿ ಶಾಲೆ ಉಳಿಸಿ ಆಂದೋಲನ ಸಮಿತಿ ಸಿಎಂಗೆ ಪತ್ರ ಬರೆದು 3 ವರ್ಷ ಸರ್ಕಾರಿ ಶಾಲೆ ಹೈಟೆಕ್ ಮಾಡ್ತೀವಿ. ಇದರಲ್ಲಿ ನಟ ರಿಷಭ್ ಶೆಟ್ಟಿ, ನಟಿ ಪ್ರಣಿತಾ ಹೀಗೆ ಹಲವರು ಕೈ ಜೋಡಿಸ್ತಾರೆ ಎಂದಿದ್ದು, ಸಿಎಂ ಸಹ ಶಿಕ್ಷಣ ಇಲಾಖೆ ಗಮನ ಹರಿಸುವಂತೆ ಸೂಚನೆ ನೀಡಿದ್ದಾರೆ.