Tag: ರೈಲ್ವೆ ಸಿಬ್ಬಂದಿ

  • ರೈಲು ಬರುತ್ತಿದ್ದಂತೆ ಹಳಿಗೆ ತಲೆಕೊಟ್ಟ ವ್ಯಕ್ತಿ – ಓಡಿ ಹೋಗಿ ರಕ್ಷಿಸಿದ ಮಹಿಳಾ ಕಾನ್‌ಸ್ಟೇಬಲ್!

    ರೈಲು ಬರುತ್ತಿದ್ದಂತೆ ಹಳಿಗೆ ತಲೆಕೊಟ್ಟ ವ್ಯಕ್ತಿ – ಓಡಿ ಹೋಗಿ ರಕ್ಷಿಸಿದ ಮಹಿಳಾ ಕಾನ್‌ಸ್ಟೇಬಲ್!

    ಕೋಲ್ಕತ್ತಾ: ರೈಲು ಬರುತ್ತಿರುವುದನ್ನು ಕಂಡ ತಕ್ಷಣ ಹೋಗಿ ಹಳಿಗೆ ತಲೆ ಕೊಟ್ಟ ವ್ಯಕ್ತಿಯನ್ನು ರೈಲ್ವೆ ಸಿಬ್ಬಂದಿ ರಕ್ಷಿಸಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ವ್ಯಕ್ತಿಯನ್ನು ಸಿಬ್ಬಂದಿ ರಕ್ಷಿಸುತ್ತಿರುವ ದೃಶ್ಯದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

    ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿ ಪಶ್ಚಿಮ ಬಂಗಾಳದ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರನ್ನು ರಕ್ಷಿಸುವ ಮೂಲಕ ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಗಳನ್ನು ಆರ್‌ಪಿಎಫ್ ಇಂಡಿಯಾ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದೆ. ಇದನ್ನೂ ಓದಿ: ಮೇಕೆಯ ಮೇಲೆ ಲೈಂಗಿಕ ದೌರ್ಜನ್ಯ ಓರ್ವ ಅರೆಸ್ಟ್

    ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಹಠಾತ್ತನೆ ಹಳಿ ಮೇಲೆ ತಲೆ ಕೊಟ್ಟು ಮಲಗಿದ್ದಾನೆ. ಇದನ್ನು ಗಮನಿಸಿದ ರೈಲ್ವೆ ಸಿಬ್ಬಂದಿ ತಕ್ಷಣ ಟ್ರ್ಯಾಕ್‌ ಬಳಿ ತೆರಳಿ ವ್ಯಕ್ತಿಯನ್ನು ಎಳೆದುಕೊಂಡಿದ್ದಾರೆ. ಈ ವೇಳೆ ಪ್ಲಾಟ್‌ಫಾರ್ಮ್‌ನಲ್ಲಿ ಇನ್ನಿಬ್ಬರು ಸಿಬ್ಬಂದಿ ನೆರವಿಗೆ ಧಾವಿಸಿದ್ದಾರೆ. ಈ ವೇಳೆ ರೈಲೊಂದು ಪಾಸ್‌ ಆಗುತ್ತದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಈ ವೀಡಿಯೋವನ್ನು ಪೋಸ್ಟ್‌ ಮಾಡಿರುವ ಆರ್‌ಪಿಎಫ್‌ ಇಂಡಿಯಾ, “ಪೂರ್ವ ಮೇದಿನಿಪುರ ರೈಲ್ವೇ ನಿಲ್ದಾಣದಲ್ಲಿ ಚಲಿಸುತ್ತಿತ್ತು. ಈ ವೇಳೆ ಹಳಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ. ತಕ್ಷಣ ಮಹಿಳಾ ಕಾನ್‌ಸ್ಟೇಬಲ್‌ ಕೆ.ಸುಮತಿ ಆತನನ್ನು ರಕ್ಷಿಸಿದ್ದಾರೆ. ಪ್ರಯಾಣಿಕರ ಸುರಕ್ಷತೆ ವಿಚಾರದಲ್ಲಿ ಅವರ ಬದ್ಧತೆಗೆ ಸೆಲ್ಯೂಟ್‌” ಎಂದು ಬರೆದುಕೊಂಡಿದೆ. ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪ – ಕುಸ್ತಿಪಟುಗಳಿಂದ ವೀಡಿಯೋ ಸಾಕ್ಷಿ ಕೇಳಿದ ಪೊಲೀಸರು

    ವ್ಯಕ್ತಿಯನ್ನು ರಕ್ಷಿಸಿ ಆರ್‌ಪಿಎಫ್‌ ಸಿಬ್ಬಂದಿಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಬದ್ಧತೆಯಿಂದ ಕೆಲಸ ಮಾಡಿದ್ದಾರೆ ಅಭಿನಂದನೆಗಳು ಎಂದು ಮತ್ತೊಬ್ಬರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

  • ಮದ್ವೆಯಾದ ಐದು ತಿಂಗ್ಳಿಗೆ ರೈಲ್ವೆ ಸಿಬ್ಬಂದಿ ನೇಣಿಗೆ ಶರಣು

    ಮದ್ವೆಯಾದ ಐದು ತಿಂಗ್ಳಿಗೆ ರೈಲ್ವೆ ಸಿಬ್ಬಂದಿ ನೇಣಿಗೆ ಶರಣು

    – ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಶಂಕೆ
    – ಮೃತದೇಹದ ಬಳಿ ಡೆತ್‍ನೋಟ್ ಪತ್ತೆಯಾಗಿಲ್ಲ

    ಹೈದರಾಬಾದ್: ಮದುವೆಯಾದ ಐದೇ ತಿಂಗಳಿಗೆ ರೈಲ್ವೆ ಸಿಬ್ಬಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಆಂಧ್ರ ಪ್ರದೇಶದ ಹೈದರಾಬಾದ್‍ನಲ್ಲಿ ನಡೆದಿದೆ.

    ರಾಹುಲ್ ಯಾದವ್(26) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸೋಮವಾರ ರಾಹುಲ್ ಮೃತದೇಹ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೌಟುಂಬಿಕ ಕಲಹದಿಂದ ರಾಹುಲ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗುತ್ತಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ಐದು ತಿಂಗಳ ಹಿಂದೆ ರಾಹುಲ್ ಮದುವೆಯಾಗಿದ್ದನು. ಸೋಮವಾರ ಬೆಳಗ್ಗೆ ರಾಹುಲ್ ಕೆಲಸಕ್ಕೆ ಹೋಗಬೇಕಿತ್ತು. ಆದರೆ ಆತ ಸುತ್ತಮುತ್ತ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಆತನನ್ನು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಆತ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ತಕ್ಷಣ ಕುಟುಂಬಸ್ಥರು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆಗ ವೈದ್ಯರು ರಾಹುಲ್ ಮೃತಪಟ್ಟಿದ್ದಾನೆ ಅಂತ ತಿಳಿಸಿದರು ಎಂದರು.

    ಈ ಘಟನೆ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದರು. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆಗಾಗಿ ಆತನ ಮೃತದೇಹವನ್ನು ಗಾಂಧಿ ಆಸ್ಪತ್ರೆಗೆ ರವಾನಿಸಿದರು. ಕೌಟುಂಬಿಕ ಸಮಸ್ಯೆಯಿಂದ ರಾಹುಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಸದ್ಯ ರಾಹುಲ್ ಮೃತದೇಹದ ಬಳಿ ಪೊಲೀಸರಿಗೆ ಯಾವುದೇ ಡೆತ್‍ನೋಟ್ ಸಿಕ್ಕಿಲ್ಲ.

    ಈ ಬಗ್ಗೆ ನೆರೆಡ್ಮೆಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

  • ಗ್ರಹಣದ ದಿನವೇ ತಪ್ಪಿದ ಭಾರೀ ದುರಂತ – ರೈಲಿನಲ್ಲಿ ಆಕಸ್ಮಿಕ ಬೆಂಕಿ ಅವಘಡ

    ಗ್ರಹಣದ ದಿನವೇ ತಪ್ಪಿದ ಭಾರೀ ದುರಂತ – ರೈಲಿನಲ್ಲಿ ಆಕಸ್ಮಿಕ ಬೆಂಕಿ ಅವಘಡ

    ಬೆಂಗಳೂರು: ಸಿಲಿಕಾನ್ ಸಿಟಿಯ ಯಶವಂತಪುರದಿಂದ ರಾಜಸ್ಥಾನದ ಬಿಕಾನೇರ್ ಹೋಗುವ ರೈಲಿನಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ.

    ಯಶವಂತಪುರ-ಬಿಕಾನೇರ್ ರೈಲಿನ ಎಸಿ ಕೋಚ್‍ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಬೆಂಗಳೂರು ಹೊರವಲಯದ ಚಿಕ್ಕಬಾಣಾವರ ಬಳಿಯ ರೈಲ್ವೆ ನಿಲ್ದಾಣದ ಬಳಿ ಎಸಿ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ರೈಲ್ವೆ ಸಿಬ್ಬಂದಿ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಕೂಡಲೇ ಬೆಂಕಿಯನ್ನು ನಂದಿಸಿದ್ದಾರೆ.

    ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಬೋಗಿಯಲ್ಲಿದ್ದ ಕೆಲ ಸೀಟ್‍ಗಳು ಸುಟ್ಟು ಹೋಗಿದೆ. ರೈಲಿನಲ್ಲಿ ಬೆಂಕಿ ಹೇಗೆ ಹೊತ್ತಿಕೊಂಡಿತು ಎನ್ನುವ ಬಗ್ಗೆ ಯಾವುದೇ ನಿಖರ ಮಾಹಿತಿ ಲಭ್ಯವಾಗಿಲ್ಲ.

  • ಹಾಸನದಲ್ಲಿ ಬಂದೂಕುಧಾರಿಗಳು ಪ್ರತ್ಯಕ್ಷ – ಪೊಲೀಸರಿಂದ ಶೋಧ

    ಹಾಸನದಲ್ಲಿ ಬಂದೂಕುಧಾರಿಗಳು ಪ್ರತ್ಯಕ್ಷ – ಪೊಲೀಸರಿಂದ ಶೋಧ

    ಹಾಸನ: ಜಿಲ್ಲೆಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಬಂದೂಕು ತೋರಿಸಿ ಬೆದರಿಕೆ ಹಾಕಿರುವ ಪ್ರಕರಣ ಕಂಡುಬಂದಿದ್ದು, ಪೊಲೀಸರು ಪಶ್ಚಿಮ ಘಟ್ಟದಲ್ಲಿ ಶೋಧಕಾರ್ಯ ಮಾಡುತ್ತಿದ್ದಾರೆ.

    ಹಾಸನ ಮಂಗಳೂರು ನಡುವಿನ ರೈಲ್ವೆ ಹಳಿಯ ಯಡಕುಮೇರಿ ಬಳಿ ಪ್ರತ್ಯಕ್ಷವಾಗಿದ್ದ ಇಬ್ಬರು ಶಸ್ತ್ರಾಸ್ತ್ರಧಾರಿಗಳು, ಎರಡು ದಿನಗಳ ಹಿಂದೆ ರೈಲ್ವೆ ಸಿಬ್ಬಂದಿಗೆ ಬಂದೂಕು ತೋರಿಸಿ ಬೆದರಿಸಿದ್ದಾರೆ.

    ಬಂದೂಕುದಾರಿಗಳನ್ನು ನಕ್ಸಲರೆಂಬ ಅನುಮಾನ ವ್ಯಕ್ತಪಡಿಸಿರುವ ಪೊಲೀಸರು, ಅರಣ್ಯ ಇಲಾಖೆ, ರೈಲ್ವೇ ಪೊಲೀಸ್, ಮತ್ತು ಸಕಲೇಶಪುರ ಗ್ರಾಮಾಂತರ ಪೊಲೀಸರಿಂದ ಜಂಟಿಯಾಗಿ ಕಡಗರವಳ್ಳಿ ಮತ್ತು ಯಡಕುಮೇರಿ ಭಾಗದಲ್ಲಿ ಶೋಧಕಾರ್ಯ ಮಾಡುತ್ತಿದ್ದಾರೆ.

  • ಚಲಿಸ್ತಿದ್ದ ರೈಲು ಹತ್ತಲು ಹೋಗಿ ಜಾರಿ ಬಿದ್ದ ಪ್ರಯಾಣಿಕ

    ಚಲಿಸ್ತಿದ್ದ ರೈಲು ಹತ್ತಲು ಹೋಗಿ ಜಾರಿ ಬಿದ್ದ ಪ್ರಯಾಣಿಕ

    ಬಳ್ಳಾರಿ: ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಆಯತಪ್ಪಿ ಹಳಿಗೆ ಬೀಳುತ್ತಿದ್ದ ಪ್ರಯಾಣಿಕನನ್ನು ರೈಲ್ವೆ ಭದ್ರತಾ ಸಿಬ್ಬಂದಿ ಬದುಕುಳಿಸಿದ ಘಟನೆ ಹೊಸಪೇಟೆಯಲ್ಲಿ ನಡೆದಿದೆ.

    ಭಾನುವಾರ ಸಂಜೆ ಹೊಸಪೇಟೆಯಿಂದ ತಿರುಪತಿಗೆ ತೆರಳುತ್ತಿದ್ದ ರೈಲಿಗೆ ಕೊನೆಗಳಿಗೆಯಲ್ಲಿ ಯಮನಪ್ಪ ಎನ್ನುವ ಪ್ರಯಾಣಿಕ ಚಲಿಸುವ ರೈಲು ಹತ್ತಲು ಮುಂದಾದ್ದರು. ಈ ವೇಳೆ ಪ್ರಯಾಣಿಕ ಯಮನಪ್ಪ ಕಾಲುಜಾರಿ ಹಳಿಗೆ ಬಿಳುವುದರಲ್ಲಿ ಇದ್ದರು.

    ಈ ವೇಳೆ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಎಸ್ ಕಾಳಣ್ಣರ ಸಮಯ ಪ್ರಜ್ಞೆಯಿಂದ ಪ್ರಯಾಣಿಕನನ್ನು ಹೊರಗೆ ಎಳೆದು ಹಾಕಿ ಬದುಕುಳಿಸಿದ್ದಾರೆ. ರೈಲ್ವೆ ಭದ್ರತಾ ಸಿಬ್ಬಂದಿ ಕಾಳಣ್ಣರ ಧೈರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಭದ್ರತಾ ಸಿಬ್ಬಂದಿಯ ರಕ್ಷಣಾ ಕಾರ್ಯಾಚರಣೆ ಸಿಸಿಟಿವಿ ಕ್ಯಾಮಾರಾದಲ್ಲಿ ಸೆರೆಯಾಗಿದೆ.