Tag: ರೈಲ್ವೆ ಗೇಟ್

  • ರೌಡಿಸಂ ತೋರಿಸೋದಕ್ಕೆ ಹೋಗಿ ಹೆಣವಾದ ಬೈಕ್ ಸವಾರ

    ರೌಡಿಸಂ ತೋರಿಸೋದಕ್ಕೆ ಹೋಗಿ ಹೆಣವಾದ ಬೈಕ್ ಸವಾರ

    ಬೆಂಗಳೂರು: ರೈಲ್ವೆ ಗೇಟ್ ಕ್ರಾಸಿಂಗ್ ಜಾಗದಲ್ಲಿ ಬೈಕ್ ಸವಾರನೊಬ್ಬ ರೌಡಿಸಂ ತೋರಿಸೋದಕ್ಕೆ ಹೋಗಿ ಮೃತಪಟ್ಟ ಘಟನೆಯೊಂದು ನಡೆದಿದೆ.

    ರೈಲ್ ಪಾಸ್ ಆದಮೇಲೆ ಗೇಟ್ ಓಪನ್ ಆಗಿದ್ದು, ಈ ಸಂದರ್ಭದಲ್ಲಿ ಸವಾರನೊಬ್ಬ ಪೋನಿನಲ್ಲಿ ಮಾತನಾಡಿಕೊಂಡು ರಸ್ತೆ ಮಧ್ಯೆ ಬೈಕ್ ನಿಲ್ಲಿಸಿಕೊಂಡು ಬಿಲ್ಡಪ್ ಕೊಡುತ್ತಿದ್ದನು. ಈ ವೇಳೆ ಹಿಂದೆಯಿಂದ ವಾಹನ ಸವಾರರು ಹಾರ್ನ್ ಮಾಡಿದಾಗ ಬೈಕ್ ನಿಲ್ಲಿಸಿ ಆವಾಜ್ ಹಾಕಿದ್ದಾನೆ. ಅಲ್ಲದೆ ತನ್ನ ಬೈಕ್ ನಲ್ಲಿದ್ದ ಕತ್ತಿಯನ್ನು ತೆಗೆದು ರೌಡಿಸಂ ತೋರಿಸಲು ಮುಂದಾಗಿದ್ದಾನೆ.

    ಇದೇ ಸಮಯದಲ್ಲಿ ಮತ್ತೊಬ್ಬ ಬೈಕ್ ಸವಾರ ಆತನ ಕೈಯಲ್ಲಿದ್ದ ಕತ್ತಿಯನ್ನು ಕಿತ್ತುಕೊಂಡು ಒಂದೇ ಏಟು ಕುತ್ತಿಗೆಗೆ ಹೊಡೆದಿದ್ದಾನೆ. ಅಷ್ಟೇ ಒಂದೇ ಏಟಿಗೆ ನೆಲಕ್ಕುರಿಳಿದ ಆ ಪುಡಿ ರೌಡಿ ಕೊನೆಯುಸಿರೆಳೆದಿದ್ದಾನೆ. ಸುಮ್ಮನೆ ಕಾಲು ಕೆರೆದುಕೊಂಡು ಗಲಾಟೆ ಮಾಡುಲು ಹೋದವ ಸ್ಮಶಾನ ಸೇರಿದ್ದಾನೆ.

    ರಸ್ತೆಯಲ್ಲಿ ರೌಡಿಸಂ ಮಾಡಲು ಹೋದವನಿಗೆ ಆತನ ಕತ್ತಿಯಲ್ಲೇ ಹೊಡೆದ ವ್ಯಕ್ತಿ ನನಗೂ ಇದಕ್ಕೂ ಸಂಬಂಧವೇ ಇಲ್ಲದವನಂತೆ ತನ್ನ ಬೈಕಿನಲ್ಲಿ ಹೋಗಿದ್ದಾನೆ. ಈ ಘಟನೆಯ ದೃಶ್ಯ ರೈಲ್ವೆ ಗೇಟಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

    ಈ ಘಟನೆ ಯಾವ ಪ್ರದೇಶದಲ್ಲಿ ಆಗಿದೆ ಎನ್ನುವ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ. ಆದರೆ ಇದು ಉತ್ತರ ಭಾರತದ ಕಡೆ ಕಳೆದ ಗುರುವಾರ ನಡೆದಿರುವ ಘಟನೆ ಎಂದು ಹೇಳಲಾಗುತ್ತಿದೆ.

  • ರೈಲ್ವೆ ಗೇಟ್ ದಾಟುವಾಗ ಏಕಾಏಕಿ ಬಂದ ಎಂಜಿನ್- 5 ಸೆಕೆಂಡ್‍ನಲ್ಲಿ ಪ್ರಯಾಣಿಕರ ಜೀವ ಉಳಿಸಿದ ಬಸ್ ಚಾಲಕ

    ರೈಲ್ವೆ ಗೇಟ್ ದಾಟುವಾಗ ಏಕಾಏಕಿ ಬಂದ ಎಂಜಿನ್- 5 ಸೆಕೆಂಡ್‍ನಲ್ಲಿ ಪ್ರಯಾಣಿಕರ ಜೀವ ಉಳಿಸಿದ ಬಸ್ ಚಾಲಕ

    ಧಾರವಾಡ: ಜಿಲ್ಲೆಯ ಹೊರವಲಯದ ಶ್ರೀನಗರ ರೈಲ್ವೆ ಗೇಟಿನಲ್ಲಿ ಭಾರೀ ಅನಾಹುತವೊಂದು ತಪ್ಪಿದೆ.

    ಗುರುವಾರ ಬೆಳಗ್ಗಿನ ಜಾವ ಧಾರವಾಡದಿಂದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹೊರಟಿದ್ದ ಬಸ್, ರೈಲ್ವೆ ಗೇಟ್ ದಾಟುವಾಗ ಏಕಾಏಕಿ ರೈಲಿನ ಎಂಜಿನ್ ಬಂದಿದೆ. ಇದನ್ನು ನೋಡಿದ ಸಾರಿಗೆ ಬಸ್ ಚಾಲಕ 5 ಸೆಕೆಂಡಿನಲ್ಲಿ ಈ ಬಸ್‍ನ್ನು ಬಚಾವ್ ಮಾಡಿದ್ದಾರೆ.

    ಇದು ರೈಲ್ವೆ ಗೇಟಿನ ಗೇಟ್‍ಮ್ಯಾನ್ ಅಜಾರೂಕತೆಯೋ ಅಥವಾ ರೈಲಿನ ಲೋಕೊಪೈಲಟ್‍ನ ಅಜಾರೂಕತೆಯೋ ಗೊತ್ತಿಲ್ಲ. ಆದರೆ ರೈಲಿನ ಎಂಜಿನ್ ಬಸ್ಸಿಗೆ ಡಿಕ್ಕಿ ಹೊಡೆದಿದ್ದರೆ 40ಕ್ಕೂ ಹೆಚ್ಚು ಜನರ ಜೀವ ಹೋಗುತ್ತಿತ್ತು. ಆದರೆ ಈ ಘಟನೆ ತಪ್ಪಿದೆ. ಈ ಘಟನೆಗೆ ಲೋಕೊಪೈಲಟಿನ ತಪ್ಪೇ ಕಾರಣ ಎಂದು ರೈಲ್ವೆ ಗೇಟ್ ಮ್ಯಾನ್ ಹೇಳುತ್ತಾನೆ.ಇದನ್ನೂ ಓದಿ: ಬಸ್ಸನ್ನು ನಿರಂತರವಾಗಿ ತನ್ನ ಲಾರಿಗೆ ಗುದ್ದಿಸಿಕೊಂಡು 70 ಜನರ ಪ್ರಾಣ ಉಳಿಸಿದ ಚಾಣಾಕ್ಷ ಚಾಲಕ

    ನನಗೆ ಸಿಗ್ನಲ್ ಕೂಡಾ ಕೊಡದೇ ರೈಲು ಚಾಲಕ ಬಂದಿದ್ದಾನೆ ಎಂದು ಗೇಟ್ ಮ್ಯಾನ್ ಹೇಳಿದ್ದಾನೆ. ಜನರ ಜೀವ ಉಳಿಸಿ ಬಸ್ ಚಾಲಕ ಕೂಡ ಇದ ನಮ್ಮ ಪುಣ್ಯ, ಟ್ರೈನ್ ನೋಡಿದ ತಕ್ಷಣ ಬಸ್ ಸ್ಪೀಡ್ ಮಾಡಿದ್ದೇ ಪ್ರಯಾಣಿಕರು ಉಳಿಯಲು ಕಾರಣ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಣ್ಣು ಕೀಳಲು ಹೋದ ಬಾಲಕರಿಂದ ತಪ್ಪಿದ ರೈಲು ದುರಂತ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv