Tag: ರೈಲ್ವೆ ಕ್ರಾಸಿಂಗ್

  • ರೈಲು ಬರ್ತಿದ್ದಾಗಲೇ ದಾಟಲು ಮುಂದಾದ – ಟ್ರ್ಯಾಕ್‍ನಲ್ಲಿ ಸಿಲುಕಿ ಬೈಕ್ ಜಖಂ

    ರೈಲು ಬರ್ತಿದ್ದಾಗಲೇ ದಾಟಲು ಮುಂದಾದ – ಟ್ರ್ಯಾಕ್‍ನಲ್ಲಿ ಸಿಲುಕಿ ಬೈಕ್ ಜಖಂ

    – ಭಯಾನಕ ವೀಡಿಯೋ ವೈರಲ್

    ಹೈದರಾಬಾದ್: ರೈಲ್ವೆ ಕ್ರಾಸಿಂಗ್ ವೇಳೆ ಅಸಡ್ಡೆ ತೋರಿಸುವ ಮಂದಿಗೆ ಭಾರತೀಯ ರೈಲ್ವೆ ಇಲಾಖೆ ಹಲವಾರು ಎಚ್ಚರಿಕೆ ಮತ್ತು ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಿದೆ. ಆದರೂ ವ್ಯಕ್ತಿಯೊಬ್ಬ ರೈಲ್ವೆ ಗೇಟ್ ಹಾಕಿದ್ದರೂ ಹಳಿ ದಾಟಲು ಮುಂದಾಗಿ ಬೈಕರ್ ಅಪಘಾತದಿಂದ ಅಚಾನಕ್ ಆಗಿ ತಪ್ಪಿಸಿಕೊಂಡಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಬೈಕರ್ ಒಬ್ಬ ರೈಲ್ವೆ ಗೇಟ್ ಹಾಕಿದ್ದರೂ ಕೂಡ ಹಳಿದಾಟಲು ಪ್ರಯತ್ನಿಸಿದ್ದಾನೆ. ಇದೇ ವೇಳೆ ವೇಗವಾಗಿ ಬರುತ್ತಿದ್ದ ರೈಲನ್ನು ನೋಡಿ ಬ್ರೇಕ್ ಹಾಕಿದ್ದಾನೆ. ಆದರೆ ನಿಯಂತ್ರಣ ಕಳೆದುಕೊಂಡ ಬೈಕ್ ಟ್ರ್ಯಾಕ್ ನಲ್ಲಿ ಸಿಲುಕಿ ಛಿದ್ರ ಛಿದ್ರವಾಗಿದೆ. ಅದೃಷ್ಟವಶಾತ್ ಬೈಕಿನಿಂದ ವ್ಯಕ್ತಿ ಹಾರಿದ ಪರಿಣಾಮ ಆತನಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಟ್ರ್ಯಾಕ್ ನಲ್ಲಿ ಸಿಲುಕಿಕೊಂಡ ಬೈಕ್ ಜಖಂ ಆಗಿದೆ.

    ಇದೀಗ ಈ ಭಯಾನಕ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೆಲ ನೆಟ್ಟಿಗರು ಬೈಕ್ ಸವಾರ ತನ್ನ ಜೀವಕ್ಕೆ ಅಪಾಯ ತಂದಿಟ್ಟುಕೊಂಡಿದ್ದಲ್ಲದೆ ಅಲ್ಲಿದ್ದ ಸ್ಥಳೀಯರ ಜೀವ ಕೂಡ ಬಾಯಿಗೆ ಬರುವಂತೆ ಮಾಡಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಸದ್ಯ ಅಪಾಯದಿಂದ ಪಾರಾಗಿದ್ದಾನೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

  • ರೈಲ್ವೇ ಮೇಲ್ಸೇತುವೆಯಿಂದ ಬಿದ್ದು ಅಪ್ಪಚ್ಚಿಯಾಯ್ತು ಟ್ರ್ಯಾಕ್ಟರ್- 4 ಸಾವು, 20 ಮಕ್ಕಳು ಸೇರಿ 48 ಮಂದಿ ಗಂಭೀರ ಗಾಯ

    ರೈಲ್ವೇ ಮೇಲ್ಸೇತುವೆಯಿಂದ ಬಿದ್ದು ಅಪ್ಪಚ್ಚಿಯಾಯ್ತು ಟ್ರ್ಯಾಕ್ಟರ್- 4 ಸಾವು, 20 ಮಕ್ಕಳು ಸೇರಿ 48 ಮಂದಿ ಗಂಭೀರ ಗಾಯ

    ಲಕ್ನೋ: ರೈಲ್ವೇ ಮೇಲ್ಸೇತುವೆಯಿಂದ ಕೆಳಗೆ ಇಳಿಯುವಾಗ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಉರುಳಿ ಬಿದ್ದ ಪರಿಣಾಮ 4 ಜನರು ಸಾವನ್ನಪ್ಪಿದ್ದು, 48 ಜನ ಗಂಭೀರವಾಗಿ ಗಾಯಗೊಂಡ ಘಟನೆ ಬಿಹಾರದಲ್ಲಿ ನಡೆದಿದೆ.

    ಉತ್ತರ ಪ್ರದೇಶ ರಾಜ್ಯದ ಲಕ್ನೋ ಜಿಲ್ಲೆಯ ಪಾರಾ ಕ್ಷೇತ್ರದ ಭಾಪರಮೂ ರೈಲ್ವೆ ಕ್ರಾಸಿಂಗ್ ಬಳಿ ಅಪಘಾತ ನಡೆದಿದೆ. ಟ್ರಾಕ್ಟರ್ ನಲ್ಲಿದ್ದವರೆಲ್ಲರೂ ಕನೌಜ್ ಪಟ್ಟಣದ ದೇವ ಶರೀಫ ಜಾತ್ರೆ ನೋಡಿಕೊಂಡು ಹಿಂದಿರುಗುತ್ತಿದ್ರು. ಈ ವೇಳೆ ರೈಲ್ವೆ ಕ್ರಾಸಿಂಗ್ ನ ಓವರ್ ಬ್ರಿಡ್ಜ್ ದಾಟುವಾಗ ಅಪಘಾತ ಸಂಭವಿಸಿದೆ.


    ಅದೃಷ್ಟವಶಾತ್ ಟ್ರ್ಯಾಕ್ಟರ್ ಬ್ರಿಡ್ಜ್ ನಿಂದ ಬೀಳುವಾಗ ಕೆಳಗೆ ಯಾವುದೇ ರೈಲು ಸಂಚರಿಸುತ್ತಿರಲಿಲ್ಲ. ಮಹಿಳೆ ಸೇರಿದಂತೆ ಮೂವರು ಪುರಷರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 20 ಮಕ್ಕಳು ಸೇರಿದಂತೆ ಒಟ್ಟು 48 ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಲಕ್ನೋ ಟ್ರಾಮಾ ಸೆಂಟರ್ ಆಸ್ಪತ್ರೆಗೆ ರವಾನಿಸಲಾಗಿದೆ.

    ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಎಸ್‍ಎಸ್‍ಪಿ ದೀಪಕ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಸ್ಥಳೀಯರ ನೆರವಿನಿಂದ ಎಲ್ಲ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

    ಓವರ್ ಬ್ರಿಡ್ಜ್ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಡಿವೈಡರ್ ಗಳ ನಿರ್ಮಾಣವಾಗಿಲ್ಲ. ಈ ಹಿಂದೆಯೂ ಇದೇ ಸ್ಥಳದಲ್ಲಿ ಅಪಘಾತಗಳು ನಡೆದಿವೆ. ಆದ್ರೂ ಅಧಿಕಾರಿಗಳು ಮುಂಜಾಗ್ರತೆಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

  • ಕೂದಲೆಳೆ ಅಂತರದಲ್ಲಿ ಪಾರಾಯ್ತು ಹಳಿಯಲ್ಲಿದ್ದ ಟ್ರಾಕ್ಟರ್: ವಿಡಿಯೋ ನೋಡಿ

    ಕೂದಲೆಳೆ ಅಂತರದಲ್ಲಿ ಪಾರಾಯ್ತು ಹಳಿಯಲ್ಲಿದ್ದ ಟ್ರಾಕ್ಟರ್: ವಿಡಿಯೋ ನೋಡಿ

    ಲಂಡನ್: ಟ್ರಾಕ್ಟರ್‍ವೊಂದು ಹಳಿ ದಾಟುವಾಗ ರೈಲಿನಿಂದ ಡಿಕ್ಕಿಯಾಗುವುದರಿಂದ ಮಿಂಚಿನಂತೆ ಪಾರಾಗಿರುವ ಆಶ್ಚರ್ಯಕರ ಘಟನೆಯೊಂದು ಲಂಡನ್‍ನಲ್ಲಿ ನಡೆದಿದೆ.

    ಲಂಡನ್‍ನ ಲೀಸೆಸ್ಟರ್ಶೈರ್ (ಸ್ಥಳೀಯ ಪೊಲೀಸ್ ಇಲಾಖೆ) ವಿಡಿಯೋವನ್ನು ಬಿಡುಗಡೆ ಮಾಡಿದೆ. ಈ ವಿಡಿಯೋ ರೈಲು ಅತಿ ವೇಗದಿಂದ ಚಲಿಸುತ್ತಿದ್ದು, ರೈಲ್ವೆ ಕ್ರಾಸಿಂಗ್‍ನಲ್ಲಿ ಟ್ರಾಕ್ಟರ್ ಅಪಘಾತದಿಂದ ಕ್ಷಣಾರ್ಧದಲ್ಲಿ ಪಾರಾಗಿರುವ ದೃಶ್ಯಗಳು ಸೆರೆಯಾಗಿವೆ. ಜುಲೈ 27ರಂದು ಈ ಘಟನೆ ನಡೆದಿದ್ದು, ಸದ್ಯ ವಿಡಿಯೋ ವೈರಲ್ ಆಗಿದೆ.

    ಟ್ರಾಕ್ಟರನ್ನು 26 ವರ್ಷದ ಯುವಕನೊಬ್ಬ ಚಾಲನೆ ಮಾಡುತ್ತಿದ್ದನು. ಚಾಲಕ ಕ್ರಾಸಿಂಗ್ ದಾಟುವ ಮೊದಲು ಟೆಲಿಫೋನ್ ಮಾಹಿತಿ ಪಡೆಯದೇ ಮುನ್ನುಗ್ಗಿದ್ದಾನೆ. ಮಾಡಿದ ತಪ್ಪಿಗಾಗಿ 3000 ಪೌಂಡ್ ಮತ್ತು ರೈಲ್ವೆ ಚಾಲನೆಗೆ ಅಡ್ಡಿಪಡಿಸಿದಕ್ಕೆ 85 ಪೌಂಡ ದಂಡ ವಿಧಿಸಲಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

    https://twitter.com/BTPLeics/status/890549147119611906