Tag: ರೈಲ್ವೆ ಅಧಿಕಾರಿಗಳು

  • ಒಡಿಶಾ ರೈಲು ಅಪಘಾತ; ಸಂಚಾರ ರದ್ದಾಗಿ ಬೆಂಗ್ಳೂರಲ್ಲೇ ನಿಂತ ಬೆಂಗಳೂರು-ಗುವಾಹಟಿ ರೈಲು

    ಒಡಿಶಾ ರೈಲು ಅಪಘಾತ; ಸಂಚಾರ ರದ್ದಾಗಿ ಬೆಂಗ್ಳೂರಲ್ಲೇ ನಿಂತ ಬೆಂಗಳೂರು-ಗುವಾಹಟಿ ರೈಲು

    ಬೆಂಗಳೂರು: ಒಡಿಶಾದಲ್ಲಿ (Odisha) 3 ರೈಲುಗಳ ನಡುವೆ ಭೀಕರ ಅಪಘಾತ ಸಂಭವಿಸಿದ ಹಿನ್ನಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಈ ಭಾಗದಲ್ಲಿ ಸಾಗಬೇಕಿದ್ದ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಇದೇ ಮಾರ್ಗವಾಗಿ ಸಂಚರಿಸಬೇಕಿದ್ದ ಬೆಂಗಳೂರು-ಗುವಾಹಟಿ ರೈಲು ಬೆಂಗಳೂರಿನಲ್ಲೇ ನಿಂತಿದೆ.

    ಒಡಿಶಾ ಅಪಘಾತದ ಹಿನ್ನಲೆಯಲ್ಲಿ ಬೆಂಗಳೂರು-ಗುವಾಹಟಿ (Guwahati) ರೈಲು ಸಂಚಾರ ರದ್ದಾಗಿದೆ. 10:40 ಕ್ಕೆ ಗುವಾಹಟಿ, ಬೈಯಪ್ಪನಹಳ್ಳಿಯ SMVT ರೈಲು ನಿಲ್ದಾಣದಿಂದ ರೈಲು ಹೊರಡಬೇಕಿತ್ತು. ಬೆಂಗಳೂರಿನಿಂದ (Bengaluru) ಒಡಿಶಾಗೆ  ತೆರಳಲು ಟಿಕೆಟ್‌ ಬುಕ್‌ ಮಾಡಿದ್ದ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಬೆಂಗಳೂರಿನ SMVT ರೈಲು ನಿಲ್ದಾಣದಲ್ಲೇ (SMT Railway Station) ಪ್ರಯಾಣಿಕರು ಪರದಾಡುವಂತಾಗಿದೆ. ಇದನ್ನೂ ಓದಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ದೊಡ್ಡಮಟ್ಟದ ಸದ್ದು ಕೇಳಿಬಂತು; ದುರಂತದ ಘನಘೋರ ದೃಶ್ಯ ಬಿಚ್ಚಿಟ್ಟ ಕನ್ನಡಿಗ

    ರೈಲು ಪ್ರಯಾಣ ರದ್ದಾಗಿರುವುದಕ್ಕೆ ಪ್ರಯಾಣಿಕರು ಅಸಮಾಧಾನ ಹೊರಹಾಕಿದ್ದಾರೆ. ಟಿಕೆಟ್‌ ಹಣ ವಾಪಸ್‌ ಪಡೆಯುವ ವಿಚಾರವಾಗಿ ಪ್ರಯಾಣಿಕರಿಂದ ವಾಗ್ವಾದ ಶುರುವಾಗಿತ್ತು. ಪರಿಣಾಮವಾಗಿ ರೈಲ್ವೆ ನಿಲ್ದಾಣದ ಬಳಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಇದನ್ನೂ ಓದಿ: Odisha Train Tragedy; ಪುಣ್ಯಕ್ಷೇತ್ರಕ್ಕೆ ಹೊರಟಿದ್ದ ಚಿಕ್ಕಮಗಳೂರಿನ 110 ಮಂದಿ ಯಾತ್ರಾರ್ಥಿಗಳು ಸೇಫ್

    ಜನರಲ್ ಟಿಕೆಟ್ ಪಡೆದಿದ್ದ ಪ್ರಯಾಣಿಕರಿಗೆ ರೈಲ್ವೆ ಅಧಿಕಾರಿಗಳು (Railway Officers) ಟಿಕಟ್ ಹಣ ವಾಪಸ್ ನೀಡುತ್ತಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಜನ ಟಿಕೆಟ್ ಹಣ ವಾಪಸ್ ಪಡೆದರು. ಇದನ್ನೂ ಓದಿ: ಒಡಿಶಾ ರೈಲು ದುರಂತ ಹೇಗಾಯ್ತು..? ಘಟನೆಗೆ ಕಾರಣ ಏನು..?

    ಹೌರ ಮಾರ್ಗವಾಗಿ ತೆರಳಬೇಕಿದ್ದ ಮೂರು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಬಾಗಲ್ಪುರ್ ಎಕ್ಸ್‌ಪ್ರೆಸ್, ಹೌರಾ ಎಕ್ಸ್‌ಪ್ರೆಸ್, ಕಾಮಾಕ್ಯ ಎಕ್ಸ್‌ಪ್ರೆಸ್‌ ರೈಲು ಸಂಚಾರ ರದ್ದುಗೊಳಿಸಲಾಗಿದೆ. ಮೂರು ರೈಲುಗಳ ಸಂಚಾರ ರದ್ದಾದ ಹಿನ್ನಲೆ ಪ್ರಯಾಣಿಕರು ಪರದಾಡುವಂತಾಗಿದೆ. ತಮ್ಮ ಊರುಗಳಿಗೆ ತೆರಳಲು ಮೂರ್ನಾಲ್ಕು ತಿಂಗಳ ಹಿಂದೆಯೇ ಟಿಕೆಟ್ ಬುಕ್ ಮಾಡಿದ್ದರು. ಸದ್ಯ ರೈಲ್ವೆ ಸಿಬ್ಬಂದಿ ಟಿಕೆಟ್ ಬುಕ್ಕಿಂಗ್ ಹಣ ಹಿಂತಿರುಗಿಸುತ್ತಿದ್ದಾರೆ. ಇದನ್ನೂ ಓದಿ: Odisha Train Accident; ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಏರಿಕೆ – 233 ಮಂದಿ ಬಲಿ, 900 ಮಂದಿಗೆ ಗಾಯ

  • ನಿಲ್ದಾಣದಲ್ಲೇ ಇಬ್ಬರು ರೈಲ್ವೆ ಅಧಿಕಾರಿಗಳಿಂದ ಯುವತಿಯ ಮೇಲೆ ಅತ್ಯಾಚಾರ

    ನಿಲ್ದಾಣದಲ್ಲೇ ಇಬ್ಬರು ರೈಲ್ವೆ ಅಧಿಕಾರಿಗಳಿಂದ ಯುವತಿಯ ಮೇಲೆ ಅತ್ಯಾಚಾರ

    – ಜ್ಯೂಸ್‍ಗೆ ಮತ್ತು ಬರುವ ಔಷಧಿ ನೀಡಿ ಕೃತ್ಯ ಎಸಗಿದ ಕಾಮುಕರು
    – ಕೆಲಸ ಕೊಡಿಸುವುದಾಗಿ ಕರೆಸಿ, ಕಚೇರಿಯಲ್ಲೇ ಅತ್ಯಾಚಾರ

    ಲಕ್ನೋ: ಇಬ್ಬರು ಕಾಮುಕ ರೈಲ್ವೆ ಅಧಿಕಾರಿಗಳು ನಿಲ್ದಾಣದ ಆವರಣದಲ್ಲಿಯೇ 22 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿ ವಿಕೃತವಾಗಿ ವರ್ತಿಸಿದ್ದಾರೆ.

    ಉತ್ತರ ಪ್ರದೇಶದ ಭೋಪಾಲ್‍ನ ಮುಖ್ಯ ರೈಲ್ವೆ ನಿಲ್ದಾಣದಲ್ಲೇ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ 45 ವರ್ಷದ ರಾಜೇಶ್ ತಿವಾರಿಯನ್ನು ಬಂಧಿಸಲಾಗಿದೆ. ಭೋಪಾಲ್ ರೈಲ್ವೆ ವಿಭಾಗದ ಸೆಕ್ಯೂರಿಟಿ ಕೌನ್ಸಲರ್ ಹಾಗೂ ವಿಪತ್ತು ನಿರ್ವಹಣಾ ಉಸ್ತುವಾರಿ ಹಾಗೂ ಮತ್ತೊಬ್ಬ ರೈಲ್ವೆ ಅಧಿಕಾರಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಪ್ರಕರಣದ ಪ್ರಮುಖ ಆರೋಪಿ ಭೋಪಾಲ್ ರೈಲ್ವೆ ವಿಭಾಗದ ರಾಜೇಶ್ ತಿವಾರಿ, ಸೆಕ್ಯೂರಿಟಿ ಕೌನ್ಸಲರ್ ಹಾಗೂ ವಿಪತ್ತು ನಿರ್ವಹಣಾ ಉಸ್ತುವಾರಿಯನ್ನು ಬಂಧಿಸಿದ್ದೇವೆ ಎಂದು ಭೋಪಾಲ್ ಸುಪರಿಂಟೆಂಡೆಂಟ್ ಆಫ್ ರೈಲ್ವೆ ಪೊಲೀಸ್(ಎಸ್‍ಆರ್ ಪಿ) ಹಿತೇಶ್ ಚೌಧರಿ ಮಾಹಿತಿ ನೀಡಿದ್ದಾರೆ.

    ಯುವತಿ ಉತ್ತರ ಪ್ರದೇಶದ ಮಾಹೋಬ್‍ನವರಾಗಿದ್ದು, ತಿವಾರಿ ಯುವತಿಯ ಫೇಸ್ಬುಕ್ ಸ್ನೇಹಿತನಾಗಿದ್ದ. ಕೆಲಸ ಕೊಡಿಸುವುದಾಗಿ ಭೋಪಾಲ್ ರೈಲ್ವೆ ನಿಲ್ದಾಣದ ಪ್ರದೇಶಕ್ಕೆ ಕರೆಸಿಕೊಂಡಿದ್ದ. ಯುವತಿ ರೈಲ್ವೆ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ವೆಸ್ಟ್ ಸೆಂಟ್ರಲ್ ರೈಲ್ವೆ ಕಚೇರಿಯ ಮೊದಲ ಮಹಡಿಯಲ್ಲಿನ ರೂಂನಲ್ಲಿ ಕೂಡಿ ಹಾಕಿದ್ದ. ನಂತರ ಅವರ ಇನ್ನೊಬ್ಬ ಸ್ನೇಹಿತ ರೈಲ್ವೆ ಅಧಿಕಾರಿಯೊಂದಿಗೆ ಮತ್ತು ಬರುವ ಔಷಧಿ ಬೆರೆಸಿದ ಪಾನೀಯವನ್ನು ನೀಡಿ, ಅತ್ಯಾಚಾರ ಎಸಗಿದರು ಎಂದು ಯುವತಿ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.

    ನಂತರ ಅವಳಿಗೆ ಪ್ರಜ್ಞೆ ಬಂದಿದ್ದು, ತಕ್ಷಣವೇ ರೈಲ್ವೆ ಪೊಲೀಸರನ್ನು ಸಂಪರ್ಕಿಸಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಮತ್ತೊಬ್ಬ ರೈಲ್ವೆ ಅಧಿಕಾರಿಯನ್ನು ನಾವು ಬಂಧಿಸಿದ್ದೇವೆ. ಆದರೆ ಯುವತಿ ಆತನನ್ನು ಗುರುತಿಸಲು ಕಾಯುತ್ತಿದ್ದೇವೆ ಎಂದು ರೈಲ್ವೆ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

  • ಜೀವದ ಹಂಗು ತೊರೆದು 1500 ಜನ್ರ ಜೀವ ಉಳಿಸಿದ ಸಾಹಸಿ ಯುವಕರು

    ಜೀವದ ಹಂಗು ತೊರೆದು 1500 ಜನ್ರ ಜೀವ ಉಳಿಸಿದ ಸಾಹಸಿ ಯುವಕರು

    ಬೆಳಗಾವಿ: ಜೀವದ ಹಂಗು ತೊರೆದು ಚಲಿಸುತ್ತಿರುವ ರೈಲಿನ ವಿರುದ್ಧ ಓಡಿ ಹೋಗಿ ರೈಲು ನಿಲ್ಲಿಸುವ ಮೂಲಕ ದೊಡ್ಡ ದುರಂತವನ್ನೇ ಯುವಕರಿಬ್ಬರು ತಪ್ಪಿಸಿದ್ದು, ಸಾವಿರಾರು ಪ್ರಯಾಣಿಕರ ಜೀವವನ್ನು ಉಳಿಸಿದ್ದಾರೆ.

    ರಿಯಾಜ್ ಹಾಗೂ ತೋಫಿಕ್ ಸಾಹಸಿ ಯುವಕರು. ಶುಕ್ರವಾರ ಸಂಜೆ ಬೆಳಗಾವಿಯ ಖಾನಾಪೂರದ ಗಾಂಧಿ ನಗರದ ರೈಲ್ವೆ ಟ್ರ್ಯಾಕ್ ನಲ್ಲಿ ಈ ಘಟನೆ ನಡೆದಿದೆ. ಕೊಲ್ಹಾಪುರ – ಹೈದರಾಬಾದ್ ರೈಲು ಹುಬ್ಬಳ್ಳಿ ಕಡೆ ಚಲಿಸುತ್ತಿತ್ತು. ಆದರೆ ರೈಲಿನ ಟ್ರ್ಯಾಕ್ ಮೇಲೆ ಏಕಾಎಕಿ ಮರ ಬಿದ್ದಿದೆ. ಇದೇ ಮಾರ್ಗವಾಗಿ ಬೈಕ್ ಮೇಲೆ ರಿಯಾಜ್ ಹಾಗೂ ತೋಫಿಕ್ ತೋಟದ ಕಡೆಗೆ ಹೋಗುತ್ತಿದ್ದರು. ಆಗ ಟ್ರ್ಯಾಕ್ ಮೇಲೆ ಮರ ಬಿದ್ದಿದ್ದನ್ನು ಗಮನಿಸಿದ್ದಾರೆ. ಇದನ್ನು  ಓದಿ: ಬಸ್‍ನಲ್ಲಿ ಕಾಣಿಸ್ತು ಬೆಂಕಿ ಕಿಡಿ – 1 ಕಿಮೀ ಹಿಂಬಾಲಿಸಿ ಬಂದು 70 ಪ್ರಯಾಣಿಕರ ಜೀವ ಉಳಿಸಿದ ಬೈಕ್ ಸವಾರ

    ಅತ್ತ ದೂರದಲ್ಲಿ ರೈಲು ಬರುವುದನ್ನು ಗಮನಿಸಿದ್ದಾರೆ. ತಕ್ಷಣ ಇಬ್ಬರು ತಮ್ಮ ಶರ್ಟ್ ಬಿಚ್ಚಿ ರೈಲಿನ ಮುಂದೆ ಓಡಿ ಅಪಾಯವಿದೆ ಎಂದು ಸೂಚಿಸಿದ್ದಾರೆ. ಇದನ್ನು ನೋಡಿದ ರೈಲು ಸಿಬ್ಬಂದಿ ತಕ್ಷಣ ಬ್ರೇಕ್ ಹಾಕಿದ್ದಾರೆ. ರೈಲು ಸರಿಯಾಗಿ ಮರದ ಹತ್ತಿರವೇ ಬಂದು ನಿಂತಿದೆ. ಒಂದು ವೇಳೆ ಯುವರಿಬ್ಬರು ಈ ಸಾಹಸ ಮಾಡಿಲ್ಲ ಎಂದಿದ್ದರೆ, ರೈಲಿನಲ್ಲಿದ್ದ ಅಷ್ಟು ಪ್ರಯಾಣಿಕರಿಗೂ ಅಪಾಯವಾಗುವ ಸಾಧ್ಯತೆ ಇತ್ತು.

    ಈ ರೈಲಿನಲ್ಲಿ 1,200 ಜನರು ಪ್ರಯಾಣ ಮಾಡುತ್ತಿದ್ದರು. ಆದರೆ ಯುವಕರಿಬ್ಬರು ಸಮಯ ಪ್ರಜ್ಞೆಯಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ರಿಯಾಜ್ ಹಾಗೂ ತೋಫಿಕ್ ಸಾಹಸದ ಬಗ್ಗೆ ನೈಋತ್ಯ ರೈಲ್ವೆ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇವರಿಬ್ಬರಿಗೆ ಶೌರ್ಯ ಪ್ರಶಸ್ತಿ ಕೊಡಬೇಕೆಂದು ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv