Tag: ರೈಲ್ವೆ

  • ರೈಲ್ವೆಯಲ್ಲಿ 209 ಮೆಗಾವ್ಯಾಟ್‌ ಸೌರ ಸ್ಥಾವರ ಸ್ಥಾಪನೆ – ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ ಕೊಡುಗೆ

    ರೈಲ್ವೆಯಲ್ಲಿ 209 ಮೆಗಾವ್ಯಾಟ್‌ ಸೌರ ಸ್ಥಾವರ ಸ್ಥಾಪನೆ – ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ ಕೊಡುಗೆ

    – ದೇಶದ 2,249 ರೈಲು ನಿಲ್ದಾಣ & ಸೇವಾ ಕಟ್ಟಡಗಳಲ್ಲಿ ಸೌರ ಘಟಕ

    ನವದೆಹಲಿ: ಭಾರತೀಯ ರೈಲ್ವೆ (Indian Railway) ಕಳೆದೊಂದು ದಶಕದಿಂದ ಸೌರ ಶಕ್ತಿ ಉತ್ಪಾದನೆ ಮತ್ತು ಬಳಕೆಗೆ ಪ್ರಾಧಾನ್ಯತೆ ನೀಡುತ್ತಿದ್ದು, ದೇಶಾದ್ಯಂತ ಈವರೆಗೆ 2,249 ರೈಲು ನಿಲ್ದಾಣಗಳು ಮತ್ತು ಸೇವಾ ಕಟ್ಟಡಗಳಲ್ಲಿ 209 ಮೆಗಾವ್ಯಾಟ್‌ ಸೌರ ಸ್ಥಾವರಗಳನ್ನು (Solar Power Plants) ಸ್ಥಾಪಿಸಿದೆ.

    ಕಳೆದ ಹತ್ತು ವರ್ಷಗಳ ಹಿಂದೆ ಕೇವಲ 628 ಸೌರ ಘಟಕಗಳನ್ನು ಹೊಂದಿದ್ದ ಭಾರತೀಯ ರೈಲ್ವೆ ಇತ್ತೀಚಿನ ಐದು ವರ್ಷಗಳಲ್ಲಿ ಅದರ ಮೂರುಪಟ್ಟು ಸೌರ ಘಟಕಗಳನ್ನು ಸ್ಥಾಪಿಸಿ ಸೌರಶಕ್ತಿ ಬಳಕೆಯಲ್ಲಿ ಮುನ್ನಡೆಯಲ್ಲಿದೆ. ಕರ್ನಾಟಕ ಸೇರಿದಂತೆ ರಾಜಸ್ಥಾನ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಆಂಧ್ರಪ್ರದೇಶ, ಮಧ್ಯಪ್ರದೇಶ, ಒಡಿಶಾ, ಗುಜರಾತ್‌ ರಾಜ್ಯಗಳಲ್ಲಿನ ಅತಿ ಹೆಚ್ಚು ರೈಲ್ವೆ ನಿಲ್ದಾಣಗಳು ಸೌರ ಸ್ಥಾವರ ಅವಳಡಿಕೆಯಲ್ಲಿ ಮುಂದಿವೆ.

    ನವೀಕರಿಸಬಹುದಾದ ಇಂಧನ ಉತ್ಪಾದನೆ, ಪರಿಸರ ಸುಸ್ಥಿರತೆ ಮತ್ತು ದೀರ್ಘಾವಧಿ ಆರ್ಥಿಕ ಉಳಿತಾಯವನ್ನು ಸಾಧಿಸಲು ಸರ್ಕಾರದ ನೀತಿಗಳಿಗೆ ಅನುಗುಣವಾಗಿ ಸೌರ ಶಕ್ತಿಯನ್ನು ಉತ್ತೇಜಿಸಲು ಭಾರತೀಯ ರೈಲ್ವೆ ಸರ್ವ ಪ್ರಯತ್ನಗಳನ್ನು ಮಾಡುತ್ತಿದೆ. ನವೀಕರಿಸಬಹುದಾದ ಇಂಧನಕ್ಕೆ ಪರಿವರ್ತನೆ ನಿರಂತರ ಪ್ರಕ್ರಿಯೆಯಾಗಿದೆ.

    ಕಳೆದ ಐದು ವರ್ಷಗಳಲ್ಲಿ ದೇಶಾದ್ಯಂತ 1,489 ರೈಲ್ವೆ ನಿಲ್ದಾಣಗಳಲ್ಲಿ ಸೌರ ಘಟಕಗಳನ್ನು ವಿಸ್ತರಿಸಲಾಗಿದೆ. ರಾಜಸ್ಥಾನವು ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗಿಂತ ಅತಿ ಹೆಚ್ಚು ಅಂದರೆ 275 ಸೌರ ಘಟಕಗಳ ಸ್ಥಾಪನೆಯೊಂದಿಗೆ ಮುಂಚೂಣಿಯಲ್ಲಿದೆ.

    ನವೀಕರಿಸಬಹುದಾದ ಇಂಧನದತ್ತ ಯೋಜನೆ: ಭಾರತೀಯ ರೈಲ್ವೆ ಹಂತಹಂತವಾಗಿ ನವೀಕರಿಸಬಹುದಾದ ಇಂಧನ ಬಳಕೆಗೆ ಯೋಜಿಸಿದೆ. ಅದರಂತೆ ಸೌರ ಮತ್ತು ಪವನ ವಿದ್ಯುತ್‌ ಇತ್ಯಾದಿ ಒಳಗೊಂಡಿರುವ ನವೀಕರಿಸಬಹುದಾದ ವಿದ್ಯುತ್‌ಗೆ ಪರಿಹಾರವಾದ ರೌಂಡ್ ದಿ ಕ್ಲಾಕ್ (RTC) ವಿದ್ಯುತ್‌ಗಾಗಿ ಖರೀದಿ ವಿಧಾನ ಅನುಸರಿಸುತ್ತಿದೆ. ಹಂತಹಂತವಾಗಿ ನವೀಕರಿಸಬಹುದಾದ ಇಂಧನ ಸಂಗ್ರಹಿಸಲು ಯೋಜಿಸಿದೆ. ಅಲ್ಲದೇ, ರೈಲ್ವೆ ನಿಲ್ದಾಣಗಳಲ್ಲಿ ಸೌರ ಸ್ಥಾವರಗಳ ಸ್ಥಾಪನೆಗೆ ಕ್ರಮ ಕೈಗೊಂಡಿದೆ. ರೈಲ್ವೆಯು ಡೆವಲಪರ್ ಮೋಡ್ ಅಡಿಯಲ್ಲಿ ವಿದ್ಯುತ್ ಖರೀದಿ ಒಪ್ಪಂದ ಸಹ ಮಾಡಿಕೊಳ್ಳುತ್ತಿದೆ.

    ದೇಶಾದ್ಯಂತ ಈವರೆಗೆ ಒಟ್ಟು 2249 ರೈಲು ನಿಲ್ದಾಣಗಳು ಮತ್ತು ಸೇವಾ ಕಟ್ಟಡಗಳಲ್ಲಿ ಸುಮಾರು 209 ಮೆಗಾವ್ಯಾಟ್ ಸೌರ ಸ್ಥಾವರಗಳನ್ನು ಒದಗಿಸಲಾಗಿದೆ ಎಂದು ಕೇಂದ್ರ ರೈಲ್ವೆ, ಮಾಹಿತಿ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಅಶ್ವಿನಿ ವೈಷ್ಣವ್ ಸಂಸತ್‌ ಅಧಿವೇಶನದಲ್ಲಿ ನಡೆದ ಚರ್ಚೆ ವೇಳೆ ಈ ಬಗ್ಗೆ ಲಿಖಿತ ಮಾಹಿತಿ ನೀಡಿದ್ದಾರೆ.

    ರಾಜ್ಯವಾರು ವಿವರ: ರಾಜಸ್ಥಾನ 275, ಮಹಾರಾಷ್ಟ್ರ 270, ಪಶ್ಚಿಮ ಬಂಗಾಳ 237, ಉತ್ತರ ಪ್ರದೇಶ 204, ಆಂಧ್ರಪ್ರದೇಶ 198, ಕರ್ನಾಟಕ 146, ಮಧ್ಯಪ್ರದೇಶ 134, ಒಡಿಶಾ 133, ಗುಜರಾತ್ 112, ತೆಲಂಗಾಣ 95, ಬಿಹಾರ 81, ಅಸ್ಸಾಂ 78, ತಮಿಳುನಾಡು 73, ಜಾರ್ಖಂಡ್ 47, ಹರಿಯಾಣ 36, ಪಂಜಾಬ್ 30, ಉತ್ತರಾಖಂಡ 18, ಹಿಮಾಚಲ ಪ್ರದೇಶ 17, ತ್ರಿಪುರ 16, ಛತ್ತೀಸ್‌ಗಢ 16, ಕೇರಳ 13, ದೆಹಲಿ 8, ಜಮ್ಮುಕಾಶ್ಮೀರ 6, ನಾಗಾಲ್ಯಾಂಡ್ 2, ಮೇಘಾಲಯ 1, ಮಣಿಪುರ 1, ಚಂಡೀಗಢ 1 ಮತ್ತು ಪುದುಚೇರಿಯ 1 ಸೇರಿದಂತೆ ದೇಶದಲ್ಲಿ ಒಟ್ಟು 2249 ರೈಲು ನಿಲ್ದಾಣಗಳಲ್ಲಿ ಸೌರ ಸ್ಥಾವರ ಕಲ್ಪಿಸಲಾಗಿದೆ ಎಂದು ವಿವರಿಸಿದ್ದಾರೆ.

  • ಬೆಂಗಳೂರು ರೈಲ್ವೆ ನಿಲ್ದಾಣಗಳಲ್ಲಿ ನಕಲಿ ರೈಲ್ವೆ ಟಿಕೆಟ್ ಹಾವಳಿ – ಅಕ್ರಮ ತಡೆಗೆ QR ಕೋಡ್ ಟಿಕೆಟ್ ವಿತರಣೆ

    ಬೆಂಗಳೂರು ರೈಲ್ವೆ ನಿಲ್ದಾಣಗಳಲ್ಲಿ ನಕಲಿ ರೈಲ್ವೆ ಟಿಕೆಟ್ ಹಾವಳಿ – ಅಕ್ರಮ ತಡೆಗೆ QR ಕೋಡ್ ಟಿಕೆಟ್ ವಿತರಣೆ

    ಬೆಂಗಳೂರು: ರೈಲ್ವೆ ನಿಲ್ದಾಣಗಳಲ್ಲಿ ನಕಲಿ ರೈಲ್ವೆ ಟಿಕೆಟ್ ಕಳ್ಳರ ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಲು ರೈಲ್ವೆ ಅಧಿಕಾರಿಗಳು ಮುಂದಾಗಿದ್ದು, ಕ್ಯೂಆರ್ ಕೋಡ್ ಟಿಕೆಟ್ ವಿತರಣೆಗೆ ಕ್ರಮಕೈಗೊಂಡಿದ್ದಾರೆ.

    ಬೆಂಗಳೂರು ನಗರದಿಂದ ರಾಜ್ಯ, ಹೊರ ರಾಜ್ಯಗಳಿಗೆ ನಿತ್ಯ ರೈಲು ಮೂಲಕ ಲಕ್ಷಾಂತರ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ. ಇತ್ತೀಚೆಗೆ ಕೆಲ ಪ್ರಯಾಣಿಕರು ಅನ್ ರಿಸರ್ವ್ಡ್, ಜನರಲ್ ಟಿಕೆಟ್‌ಗಳನ್ನ ನಕಲು ಮಾಡಿ ಪ್ರಯಾಣ ಮಾಡುತ್ತಿದ್ದಾರೆ. ಇದರಿಂದ ಎಚ್ಚೆತ್ತ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗ, ಅಕ್ರಮ ತಡೆಯಲು ಕ್ಯೂಆರ್ ಕೋಡ್ ಟಿಕೆಟ್ ವಿತರಣೆಗೆ ಮುಂದಾಗಿದೆ.

    ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದ ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಥರ್ಮಲ್ ಪ್ರಿಂಟರ್‌ಗಳನ್ನು ಪರಿಚಯಿಸಲಾಗಿದೆ. ನಿಲ್ದಾಣದ ಮುಖ್ಯದ್ವಾರದ ಎರಡು ಕೌಂಟರ್‌ಗಳನ್ನು ತೆರೆಯಲಾಗಿದೆ. ಕೇವಲ ಎರಡೇ ಸೆಕೆಂಡ್‌ನಲ್ಲಿ ಟಿಕೆಟ್ ಪ್ರಿಂಟಿಂಗ್ ಆಗುತ್ತೆ. ಇದರಿಂದ ಕ್ಯೂ ತಪ್ಪಿಸಿ, ಸಮಯ ಉಳಿಸಬಹುದು. ಮೆಜೆಸ್ಟಿಕ್, ಎಸ್‌ಎಂವಿಟಿ ಸ್ಟೇಷನ್, ಯಶವಂತಪುರ, ಕೆಆರ್ ಪುರಂನಲ್ಲಿ ಈ ಥರ್ಮಲ್ ಪ್ರಿಂಟಿಂಗ್ ಟಿಕೆಟ್ ವ್ಯವಸ್ಥೆಯನ್ನ ಮಾಡಲಾಗಿದೆ. ಈ ಟಿಕೆಟ್ ಅಸಲಿಯೋ, ನಕಲಿಯೋ ಎಂಬುದನ್ನು ಪತ್ತೆ ಹಚ್ಚಲು ರೈಲ್ವೆ ಟಿಟಿಗಳಿಗೆ ಪ್ರತ್ಯೇಕ ಆ್ಯಪ್‌ನ ವ್ಯವಸ್ಥೆ ಮಾಡಲಾಗಿದೆ.

    ಥರ್ಮಲ್ ಪ್ರಿಂಟರ್ ಮೂಲಕ ನೀಡಿದ ಮುದ್ರಿತ ಟಿಕೆಟ್‌ಗಳನ್ನು ನಕಲು ಮಾಡುವುದು ಅಸಾಧ್ಯ. ಸಾಮಾನ್ಯ ಪ್ರಿಂಟರ್‌ಗಳಲ್ಲಿ 20 ಸೆಕೆಂಡ್‌ಗೆ ಒಂದು ಟಿಕೆಟ್ ನೀಡಿದರೆ, ಥರ್ಮಲ್ ಪ್ರಿಂಟರ್‌ನಲ್ಲಿ ಎರಡರಿಂದ 3 ಸೆಕೆಂಡ್‌ಗೆ ಒಂದು ಟಿಕೆಟ್ ನೀಡಲಾಗುತ್ತದೆ.

  • ಲಕ್ನೋದಲ್ಲಿ ಇಲಿ ಹಿಡಿಯೋದಕ್ಕೆ 69 ಲಕ್ಷ ರೂ. ಖರ್ಚು ಮಾಡಿದ ರೈಲ್ವೆ

    ಲಕ್ನೋದಲ್ಲಿ ಇಲಿ ಹಿಡಿಯೋದಕ್ಕೆ 69 ಲಕ್ಷ ರೂ. ಖರ್ಚು ಮಾಡಿದ ರೈಲ್ವೆ

    ಲಕ್ನೋ: ಉತ್ತರ ರೈಲ್ವೆಯ ಲಕ್ನೋ (Lucknow) ವಿಭಾಗವು ಇಲಿಗಳನ್ನ ಹಿಡಿಯಲು ಬರೋಬ್ಬರಿ 69.5 ಲಕ್ಷ ರೂ. ಖರ್ಚು ಮಾಡಿರುವ ಸುದ್ದಿ ಬೆಳಕಿಗೆ ಬಂದಿದೆ. ಈ ಸಂಬಂಧ ಆರ್‌ಟಿಐಗೆ ರೈಲ್ವೆ (Railway) ವಿಭಾಗ ಮಾಹಿತಿ ನೀಡಿದೆ.

    2020 ಮತ್ತು 2022 ರ ಅವಧಿಯಲ್ಲಿ 69 ಲಕ್ಷ ರೂ. ಮೊತ್ತವನ್ನು ಇಲಿ ಹಿಡಿಯುವುದಕ್ಕೆ ರೈಲ್ವೆ ಖರ್ಚು ಮಾಡಿದೆ. ಸುದ್ದಿ ಬಹಿರಂಗವಾಗುತ್ತಿದ್ದಂತೆ ಭಾರತೀಯ ರೈಲ್ವೆ ವಿರುದ್ಧ ಕಾಂಗ್ರೆಸ್‌ ಹೇಳಿಕೆ ನೀಡಿದೆ. ಭಾರತೀಯ ರೈಲ್ವೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದೆ. ಇದನ್ನೂ ಓದಿ: ಪ್ರಧಾನಿ ಜನ್ಮದಿನದಂದು ದೇಶದ ಮೊದಲ ಲಿಂಗತ್ವ ಅಲ್ಪಸಂಖ್ಯಾತರ ವಾರ್ಡ್ ತೆರೆದ  ಆರ್‌ಎಂಎಲ್ ಆಸ್ಪತ್ರೆ

    ಕಾರ್ಯಕರ್ತ ಚಂದ್ರಶೇಖರ್ ಗೌರ್ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯೆ ನೀಡಿರುವ ಲಕ್ನೋ ವಿಭಾಗವು, ಎರಡು ವರ್ಷಗಳಲ್ಲಿ ಇಲಿಗಳನ್ನು ಹಿಡಿಯುವುದಕ್ಕೆ ಸುಮಾರು 69 ಲಕ್ಷ ರೂ. ಖರ್ಚು ಮಾಡಲಾಗಿದೆ. ಈ ಅವಧಿಯಲ್ಲಿ 168 ಇಲಿಗಳನ್ನು ಹಿಡಿಯಲಾಗಿದೆ. ಒಂದು ಇಲಿ ಹಿಡಿಯುವುದಕ್ಕೆ ಸರಿಸುಮಾರು 41,000 ರೂ. ವೆಚ್ಚವಾಗಿದೆ ಎಂದು ಮಾಹಿತಿ ನೀಡಿದೆ.

    ಈ ಕುರಿತು ಕಾಂಗ್ರೆಸ್‌ ನಾಯಕ ರಣದೀಪ್‌ ಸಿಂಗ್‌ ಸುರ್ಜೇವಾಲ ವ್ಯಂಗ್ಯವಾಡಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಅವರು, ದೇಶದೆಲ್ಲೆಡೆ ‘ಭ್ರಷ್ಟಾಚಾರದ ಇಲಿಗಳು’ ಪ್ರತಿದಿನ ಜನರ ಜೇಬನ್ನು ಕಿತ್ತೊಗೆಯುತ್ತಿವೆ. ಬಿಜೆಪಿ ಆಡಳಿತದಲ್ಲಿ ಜನರು ಪ್ರತಿದಿನ ವಿಪರೀತ ಹಣದುಬ್ಬರದಿಂದ ಬಳಲುತ್ತಿದ್ದಾರೆ. ರೈಲು ಪ್ರಯಾಣ ದರದಲ್ಲಿ ವೃದ್ಧರಿಗೆ ನೀಡುತ್ತಿದ್ದ ರಿಯಾಯಿತಿಯನ್ನೂ ಕಬಳಿಸಿದೆ. ಹೀಗಿದ್ದೂ, ನಾನು ತಿನ್ನುವುದಿಲ್ಲ.. ತಿನ್ನಲು ಬಿಡುವುದಿಲ್ಲ ಎಂದು ಹೇಳುತ್ತಾರೆಂದು ಬಿಜೆಪಿ ಆಡಳಿತದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಖ್ಯಾತ ಲೇಖಕಿ, ನವೀನ್ ಪಟ್ನಾಯಕ್ ಸಹೋದರಿ ವಿಧಿವಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹುಬ್ಬಳ್ಳಿ -ಅಂಕೋಲಾ ರೈಲ್ವೆ ಮಾರ್ಗಕ್ಕೆ ಸಿಗದ ಅನುಮತಿ

    ಹುಬ್ಬಳ್ಳಿ -ಅಂಕೋಲಾ ರೈಲ್ವೆ ಮಾರ್ಗಕ್ಕೆ ಸಿಗದ ಅನುಮತಿ

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಬಹುನಿರೀಕ್ಷೆಯ ಹುಬ್ಬಳ್ಳಿ (Hubballi) -ಅಂಕೋಲಾ (Ankola) ರೈಲುಮಾರ್ಗಕ್ಕೆ (Train) ಮತ್ತೆ ಅಡಚಣೆ ಉಂಟಾಗಿದ್ದು, ಪರಿಷ್ಕೃತ ಯೋಜನೆ ಸಿದ್ಧಪಡಿಸಬೇಕೆಂದು ಕೇಂದ್ರ ವನ್ಯಜೀವಿ ಮಂಡಳಿಯ ಸಮಿತಿ ಅಭಿಪ್ರಾಯಪಟ್ಟಿದೆ‌.

    ಈಗಿರುವ ಯೋಜನೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕೆಲವು ಬದಲಾವಣೆಯನ್ನು ಮಾಡಿ ಪರಿಷ್ಕೃತ ಪ್ರಸ್ತಾಪ ಸಲ್ಲಿಸಬೇಕು. ಈಗಿರುವ ಯೋಜನೆ ಪ್ರಸ್ತಾಪ ದೊಡ್ಡ ಮಟ್ಟದ ಅರಣ್ಯನಾಶಕ್ಕೆ ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಆದರೆ ಯೋಜನೆಯನ್ನು ಸಂಪೂರ್ಣ ತೆಗೆದುಹಾಕುವ ಕುರಿತು ಹೇಳದೇ ಇರುವುದರಿಂದ ಮತ್ತೊಮ್ಮೆ ಹುಬ್ಬಳ್ಳಿ-ಅಂಕೋಲಾ ರೈಲುಮಾರ್ಗದ ಕನಸು ಚಿಗುರೊಡೆದಿದೆ.

    ಈ ಹಿಂದೆ ರೈಲ್ವೆ ಸಚಿವಾಲಯ ಜಂಟಿಯಾಗಿ ಸಭೆ ನಡೆಸಿ ಒಮ್ಮತದ ಅಭಿಪ್ರಾಯಕ್ಕೆ ಬರಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರೈಲ್ವೆ ಮಂತ್ರಾಲಯದ ಅಧಿಕಾರಿಗಳು, ರಾಜ್ಯ ಸರ್ಕಾರ, ಧಾರವಾಡದ ಪರಿಣಿತರು, ಐಐಎಸ್ ಅಧಿಕಾರಿಗಳು ಸೇರಿದಂತೆ ವನ್ಯಜೀವಿ ಮಂಡಳಿಯ ಎಡಿಜಿ ನೇತೃತ್ವದಲ್ಲಿ ಕಾರ್ಯಾಗಾರ ನಡೆಸಿ, ವಿಸ್ತೃತ ಚರ್ಚೆ ನಡೆಸಿದ ನಂತರ ಅಂತಿಮ ಹಂತದ ಯೋಜನೆ ಪ್ರಸ್ತಾವ ಸಲ್ಲಿಕೆಯಾಗಲಿದೆ ಎಂದಿತ್ತು. ಇದನ್ನೂ ಓದಿ: 9 ಲಕ್ಷಕ್ಕೂ ಹೆಚ್ಚು ವಾಹನಗಳಿಗೆ ಗೇಟ್‌ಪಾಸ್‌ – ನಿತಿನ್‌ ಗಡ್ಕರಿ

    ರಾಷ್ಟ್ರೀಯ ವನ್ಯಜೀವಿ ಮಂಡಳಿ ಕೋರಿಕೆಯಂತೆ 7 ಸದಸ್ಯರ ತಂಡ ರಚನೆ ಮಾಡಿ ಕಳೆದ ಡಿ. 26ರಂದು ಕೇಂದ್ರ ವನ್ಯಜೀವಿ ಮಂಡಳಿಯ ಸಮಿತಿಗೆ ತಂಡ ವಿಸ್ತೃತ ವರದಿ ಸಲ್ಲಿಸಿತ್ತು. ಇದನ್ನೂ ಓದಿ: ಗೋರಖನಾಥ ದೇವಸ್ಥಾನದ ಮೇಲೆ ದಾಳಿ : ಐಐಟಿಯಲ್ಲಿ ಓದಿದ ಉಗ್ರನಿಗೆ ಗಲ್ಲು ಶಿಕ್ಷೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರೈಲ್ವೆ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ – ಆತಂಕಗೊಂಡ ಪ್ರಯಾಣಿಕರು

    ರೈಲ್ವೆ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ – ಆತಂಕಗೊಂಡ ಪ್ರಯಾಣಿಕರು

    ಪಾಟ್ನಾ: ಬಿಹಾರದ ಪಾಟ್ನಾ ಜಂಕ್ಷನ್‍ನಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಕರೆ ಬಂದಿದ್ದು, ಕೆಲ ಕಾಲ ಪ್ರಯಾಣಿಕರಲ್ಲಿ ಆತಂಕವನ್ನು ಸೃಷ್ಟಿಸಿತ್ತು.

    ಬಿಹಾರದ ಪಾಟ್ನಾ (Patna) ರೈಲ್ವೆ ನಿಲ್ದಾಣದಲ್ಲಿ (Railway Station) ಬಾಂಬ್ ಇಟ್ಟಿದ್ದೇವೆ ಎಂದು ಅಪರಿಚಿತ ನಂಬರ್‌ನಿಂದ ಅಲ್ಲಿನ ಅಧಿಕಾರಿಗಳಿಗೆ ಕರೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಕೆಲ ಕಾಲ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾಗಿದ್ದು, ಅಧಿಕಾರಿಗಳಲ್ಲೂ ಗೊಂದಲ ಉಂಟಾಗಿದೆ. ಆದರೆ ಅಲ್ಲಿನ ರೈಲ್ವೆ ಅಧಿಕಾರಿಗಳು ವಿಷಯ ತಿಳಿದ ತಕ್ಷಣ ರೈಲ್ವೆ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಿದ್ದು, ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿದ್ದಾರೆ.

    ಘಟನೆಗೆ ಸಂಬಂಧಿಸಿ ಅವರು ಶೋಧ ಕಾರ್ಯಾಚರಣೆ ಹಾಗೂ ತನಿಖೆಯನ್ನು ನಡೆಸಿದ್ದಾರೆ. ಅದಾದ ಬಳಿಕ ಇದು ಹುಸಿ ಬಾಂಬ್ (Hoax Bomb) ಕರೆ ಎಂಬುದು ಖಚಿತವಾಗಿದ್ದು, ಅಲ್ಲಿದ್ದ ಪ್ರಯಾಣಿಕರು ನಿರಾಳರಾಗಿದ್ದಾರೆ. ಇದನ್ನೂ ಓದಿ: ನನಗೂ ರಾಜಕೀಯಕ್ಕೂ ಆಗಿ ಬರಲ್ಲ : ಶಿವರಾಜ್ ಕುಮಾರ್

    ಘಟನೆಗೆ ಸಂಬಂಧಿಸಿ ಪಾಟ್ನಾ ರೈಲ್ವೆ ಜಂಕ್ಷನ್‍ನ ಉಸ್ತುವಾರಿ ರಂಜಿತ್ ಕುಮಾರ್ ಮಾತನಾಡಿ, ಯಾವುದೇ ಬಾಂಬ್ ಪತ್ತೆಯಾದ ಬಗ್ಗೆ ನಮಗೆ ಮಾಹಿತಿ ಬಂದಿಲ್ಲ. ನಾವು ವಿಶೇಷ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಓದಿದ್ದು 8ನೇ ತರಗತಿ, ಆದ್ರೆ IPS ಅಧಿಕಾರಿ ಎಂದು ಮಹಿಳೆಯರನ್ನು ನಂಬಿಸಿ ಲಕ್ಷ ಲಕ್ಷ ಹಣ ದೋಚಿದ

    Live Tv
    [brid partner=56869869 player=32851 video=960834 autoplay=true]

  • ನೈಋತ್ಯ ರೈಲ್ವೆ ಸಾಧನೆ- ಪ್ಯಾಸೆಂಜರ್ ರೈಲಿನಿಂದ ದಾಖಲೆ ಆದಾಯ ಗಳಿಕೆ

    ನೈಋತ್ಯ ರೈಲ್ವೆ ಸಾಧನೆ- ಪ್ಯಾಸೆಂಜರ್ ರೈಲಿನಿಂದ ದಾಖಲೆ ಆದಾಯ ಗಳಿಕೆ

    ಹುಬ್ಬಳ್ಳಿ: ವಿಶ್ವದ ಅತಿದೊಡ್ಡ ರೈಲ್ವೆ ಫ್ಲಾಟ್ ಫಾರಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನೈಋತ್ಯ ರೈಲ್ವೆ ವಲಯ, ಈಗ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದು, ದಾಖಲೆಯ ಮಟ್ಟದಲ್ಲಿ ಆದಾಯವನ್ನು ಗಳಿಸಿದೆ.

    ಇಷ್ಟು ದಿನ ರೈಲ್ವೆ ಇಲಾಖೆ ಆದಾಯದ ಮೂಲ ಸರಕು ಸಾಗಾಣಿಕೆಯಾಗಿತ್ತು. ಆದರೆ ಈ ಮಾತನ್ನು ನೈಋತ್ಯ ರೈಲ್ವೆ ವಿಭಾಗ ಸುಳ್ಳಾಗಿಸಿದೆ. ಕೇವಲ ಪ್ಯಾಸೆಂಜರ್ ರೈಲು(Passenger Train) ಓಡಿಸಿಯೇ ಸಾವಿರಾರು ಕೋಟಿ ರೂ. ಲಾಭ ಮಾಡಿದ್ದು, ಈ ಮೂಲಕ ನೂತನ ದಾಖಲೆಯನ್ನು ನಿರ್ಮಾಣವಾಗಿದೆ.

    ಈ ವರ್ಷದ ಏಪ್ರಿಲ್‍ನಿಂದ ಆಗಸ್ಟ್ ತಿಂಗಳ ಅವಧಿಯಲ್ಲಿ ಪ್ಯಾಸೆಂಜರ್ ರೈಲು(Train) ಸಂಚಾರದಿಂದ ರೈಲ್ವೆಗೆ ಬರೊಬ್ಬರಿ 1,048 ಕೋಟಿ ರೂ. ಲಾಭವಾಗಿದೆ. ಇದು ನೈಋತ್ಯ ರೈಲ್ವೆ ವಿಭಾಗದ ಇತಿಹಾಸದಲ್ಲಿ ಮೊದಲ ದಾಖಲೆಯಾಗಿದೆ. ಕಳೆದ ವರ್ಷ ಏಪ್ರಿಲ್‍ನಿಂದ ಆಗಸ್ಟ್‌ವರೆಗೆ ಬರೀ 450 ಕೋಟಿ ರೂ. ಆದಾಯ ಬಂದಿತ್ತು. ಇದನ್ನೂ ಓದಿ: ಟೋಲ್ ಪಾವತಿ ವಿಚಾರದಲ್ಲಿ ಕಿರಿಕ್ – ಜುಟ್ಟು ಹಿಡಿದು ಕಿತ್ತಾಡಿದ ಮಹಿಳೆಯರು

    ಕೋವಿಡ್(Covid) ಸಂದರ್ಭದಲ್ಲಿ ಬಹುತೇಕ ಪ್ಯಾಸೆಂಜರ್ ರೈಲುಗಳ ಸೇವೆ ಬಂದ್ ಮಾಡಲಾಗಿತ್ತು. ಇದು ಇಲಾಖೆಗೆ ಸಾಕಷ್ಟು ಹೊಡೆತ ನೀಡಿದ್ದು ಸುಳ್ಳಲ್ಲ. ಇದನ್ನೆ ಸವಾಲಾಗಿ ಸ್ವೀಕರಿಸಿದ ಆಡಳಿತ ವಿಭಾಗ ಕೋವಿಡ್ ನಂತರ ಚೇತರಿಕೆಗೆ ಹಲವಾರು ಮಾರ್ಗಗಳನ್ನು ಕಂಡುಕೊಂಡ ಪರಿಣಾಮ ಈ ಸಾಧನೆಯಾಗಿದೆ. ಇದನ್ನೂ ಓದಿ:  ಮೇಲ್ಜಾತಿಯ ಜನರಿಗೆ ಸೇರಿದ ಮಡಿಕೆಯಿಂದ ನೀರು ಕುಡಿದ ದಲಿತನ ಮೇಲೆ ಹಲ್ಲೆ

    Live Tv
    [brid partner=56869869 player=32851 video=960834 autoplay=true]

  • ಇಯರ್‌ಫೋನ್ ಧರಿಸಿ ಹಳಿ ಮೇಲೆ ಹೋಗುತ್ತಿದ್ದ ಮೂವರು ರೈಲಿಗೆ ಸಿಲುಕಿ ಸಾವು

    ಇಯರ್‌ಫೋನ್ ಧರಿಸಿ ಹಳಿ ಮೇಲೆ ಹೋಗುತ್ತಿದ್ದ ಮೂವರು ರೈಲಿಗೆ ಸಿಲುಕಿ ಸಾವು

    ಲಕ್ನೋ: ಇಯರ್‌ಫೋನ್‍ಗಳನ್ನು ಧರಿಸಿ ರೈಲ್ವೆ ಹಳಿಗಳ ಮೇಲೆ ನಡೆಯುತ್ತಿದ್ದ ಮೂವರ ಮೇಲೆ ರೈಲು ಹರಿದು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಎರಡು ಪ್ರತ್ಯೇಕ ಸ್ಥಳಗಳಲ್ಲಿ ನಡೆದಿದೆ.

    ಭದೋಹಿ ರೈಲ್ವೆಸ್ಟೇಷನ್ ವಾರ್ಡ್‍ನಲ್ಲಿ ಇಬ್ಬರು ರೈಲಿಗೆ ಸಿಲುಕಿದ್ದರೆ, ಮತ್ತೊಬ್ಬ ಅಹಿಮಾನ್‍ಪುರದಲ್ಲಿ ರೈಲು ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ. ಈ ಮೂವರು ವಾಕಿಂಗ್‍ಗೆ ತೆರಳಿದಾಗ ಈ ಘಟನೆ ನಡೆದಿದೆ.

    ಜಲಾಲ್‍ಪುರದ ಕೃಷ್ಣ ಅಲಿಯಾಸ್ ಬಂಗಾಲಿ (20) ಮತ್ತು ಆತನ ಸ್ನೇಹಿತ ಮೋನು (18) ಇಯರ್ ಫೋನ್‌ನಲ್ಲಿ ಹಾಡು ಕೇಳುತ್ತಾ ಹಳಿಯ ಮಧ್ಯದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅತಿ ವೇಗದಲ್ಲಿ ಬರುತ್ತಿದ್ದ ಹೌರಾ ಲಾಲ್ಕುವಾಲ್ ಎಕ್ಸ್‌ಪ್ರೆಸ್‍ನ ಶಬ್ದ ಆ ಯುವಕರಿಗೆ ಕೇಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಬ್ಬರು ಯುವಕರಿಗೆ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.

    ಎಷ್ಟೇ ಹೊತ್ತಾದರೂ ಈ ಇಬ್ಬರೂ ಯುವಕರೂ ಮನೆಗೆ ಬಾರದಿದ್ದರಿಂದ, ಕುಟುಂಬಸ್ಥರು ಅವರನ್ನು ಹಡುಕಲು ಪ್ರಾರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಯುವಕರ ಮೃತದೇಹಗಳು ಪತ್ತೆ ಆಗಿವೆ. ಇದನ್ನೂ ಓದಿ: ಗರ್ಭಿಣಿ ಮೇಲೆ ಸತತ ಮೂರು ದಿನಗಳಿಂದ ಗ್ಯಾಂಗ್ ರೇಪ್

    ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ದಲ್ಪತ್‍ಪುರ ಗ್ರಾಮದ ಪಂಕಜ್ ದುಬೆ (30) ವಾರಣಾಸಿ – ಅಲಹಾಬಾದ್ ರೈಲ್ವೆ ಮಾರ್ಗದ ಅಹಿಮಾನ್‍ಪುರ ರೈಲ್ವೆ ಸ್ಟೇಷನ್‌ನ ಬಳಿ ಇಯರ್‌ಫೋನ್ ಧರಿಸಿ ನಡೆದುಕೊಂಡು ಹೋಗುತ್ತಿದ್ದಾಗ ಪ್ರಯಾಗ್‍ ರಾಜ್‍ಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ. ಇದನ್ನೂ ಓದಿ: ತಿಂಗಳಿಗೆ 2 ರೂ. ಸಂಬಳ, 4.74 ರೂ. ಪಡಿತರ – ಮುಜರಾಯಿ ಇಲಾಖೆ ದೇವಸ್ಥಾನದ ಅರ್ಚಕರ ಅಳಲು

    Live Tv
    [brid partner=56869869 player=32851 video=960834 autoplay=true]

  • 35 ರೂಪಾಯಿ ಹಿಂಪಡೆಯಲು 5 ವರ್ಷಗಳಿಂದ ಹೋರಾಟ – 3 ಲಕ್ಷ ಜನರಿಗೆ ಪ್ರಯೋಜನ

    35 ರೂಪಾಯಿ ಹಿಂಪಡೆಯಲು 5 ವರ್ಷಗಳಿಂದ ಹೋರಾಟ – 3 ಲಕ್ಷ ಜನರಿಗೆ ಪ್ರಯೋಜನ

    ಜೈಪುರ: 35 ರೂಪಾಯಿಗಳನ್ನು ಮರಳಿಪಡೆಯುವ ಸಲುವಾಗಿ ರಾಜಾಸ್ಥಾನದ ಕೋಟಾ ಮೂಲದ ವ್ಯಕ್ತಿಯೊಬ್ಬರು ಕಳೆದ 5 ವರ್ಷಗಳಿಂದ ನಡೆಸಿದ ಕಾನೂನು ಹೋರಾಟ ಕೊನೆಗೂ ಯಶಸ್ವಿಯಾಗಿದ್ದು, ಸುಮಾರು 3 ಲಕ್ಷ ಜನರು ಇದರ ಪ್ರಯೋಜನ ಪಡೆದಿದ್ದಾರೆ.

    2.98 ಬಳಕೆದಾರರಿಗೆ ಪ್ರತಿ ಟಿಕೆಟ್ ಬೆಲೆ 35 ರೂಪಾಯಿಯಂತೆ ಒಟ್ಟಾರೆ 2.43 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದ್ದು, ಬಳಕೆದಾರರು ಹಿಂಪಡೆಯಲಿದ್ದಾರೆ ಎಂದು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ ಆರ್‌ಟಿಐ ಪ್ರಶ್ನೆಗೆ ಉತ್ತರಿಸಿದೆ. ಇದನ್ನೂ ಓದಿ: ಮೂಸೆ ವಾಲಾ ಹತ್ಯೆಗೆ ಬಳಸಿದ್ದು ನಿಮಿಷಕ್ಕೆ 1,800 ಬುಲೆಟ್ ಹಾರಿಸುವ ಭಯಾನಕ ರೈಫಲ್- ಇಲ್ಲಿದೆ ಡಿಟೇಲ್ಸ್

    Railway

    ಸುಮಾರು 50 ಆರ್‌ಟಿಐ ಅರ್ಜಿ ಮತ್ತು 4 ಸರ್ಕಾರಿ ಇಲಾಖೆಗೆ ಹಲವು ಪತ್ರ ಬರೆದು ಜಿಎಸ್‌ಟಿ ಅನುಷ್ಟಾನವಾಗುವುದಕ್ಕೂ ಮುನ್ನ ತನ್ನ ಟಿಕೆಟ್ ರದ್ದಾಗಿದ್ದರೂ ಸೇವಾ ಶುಲ್ಕವಾಗಿ ಪಡೆದಿದ್ದ 35 ರೂಪಾಯಿಯನ್ನು ಹೋರಾಟದೊಂದಿಗೆ ಮತ್ತೆ ಪಡೆದುಕೊಂಡಿದ್ದಾರೆ. ಇದರಿಂದ ಇದೇ ಪರಿಸ್ಥಿತಿಯಲ್ಲಿದ್ದ 2.98 ಲಕ್ಷ ಐಆರ್ ಸಿಟಿಸಿ ಬಳಕೆದಾರರಿಗೆ ರೈಲ್ವೆಯು 2.43 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ಕೋಟಾ ಮೂಲದ ಎಂಜಿನಿಯರ್ ಸುಜೀತ್ ಸ್ವಾಮಿ ಉತ್ತರಿಸಿದ್ದಾರೆ.

    Railway

    ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವರು, ಕೇಂದ್ರ ಸಚಿವ ಅನುರಾಗ್ ಠಾಕೂರ್, ಜಿಎಸ್‌ಟಿ ಕೌನ್ಸಿಲ್ ಮತ್ತು ಹಣಕಾಸು ಸಚಿವರಿಗೆ ಪದೇ ಪದೇ ಮಾಡಿದ ಟ್ವೀಟ್ ಗಳಿಂದ 2.98 ಲಕ್ಷ ಬಳಕೆದಾರರು ರೂ.35 ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಭದ್ರತೆ ವಾಪಸ್: ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಗುಂಡಿಕ್ಕಿ ಹತ್ಯೆ

    Railway

    ಏನಿದು ಘಟನೆ?: ಜಿಎಸ್‌ಟಿ ಅನುಷ್ಠಾನವಾಗುವ ಮುನ್ನವೇ ತಾನು ಟಿಕೆಟ್ ರದ್ದುಗೊಳಿಸಿದ್ದರೂ ಸೇವಾ ಶುಲ್ಕವಾಗಿ 35 ರೂಪಾಯಿ ಹೆಚ್ಚುವರಿ ಹಣ ಪಡೆಯಲಾಗಿತ್ತು. ನಂತರ ರೈಲ್ವೆ ಮತ್ತು ಹಣಕಾಸು ಸಚಿವಾಲಯಕ್ಕೆ ಆರ್‌ಟಿಐ ಸಲ್ಲಿಸುವ ಮೂಲಕ 35 ರೂಪಾಯಿ ವಾಪಸ್ ಪಡೆದುಕೊಳ್ಳಲು ಹೋರಾಟ ಆರಂಭಿಸಿದ್ದರು. ಇದೀಗ ಹೆಚ್ಚುವರಿಯಾಗಿ ಪಡೆಯಲಾಗಿದ್ದ 35 ರೂಪಾಯಿ ತನಗೆ ವಾಪಸ್ ಬಂದಿರುವುದು ಸಂತೋಷವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

  • ರೈಲ್ವೆ ಟಿಕೆಟ್ ಕೌಂಟರ್‌ನಲ್ಲಿ ಪಾನಮತ್ತ ಸಿಬ್ಬಂದಿ- ಪ್ರಯಾಣಿಕರ ಟಿಕೆಟ್ ಅದಲು ಬದಲು

    ರೈಲ್ವೆ ಟಿಕೆಟ್ ಕೌಂಟರ್‌ನಲ್ಲಿ ಪಾನಮತ್ತ ಸಿಬ್ಬಂದಿ- ಪ್ರಯಾಣಿಕರ ಟಿಕೆಟ್ ಅದಲು ಬದಲು

    ರಾಯಚೂರು: ನಗರದ ಕೇಂದ್ರ ರೈಲ್ವೆ ನಿಲ್ದಾಣದ ಟಿಕೆಟ್ ಕೌಂಟರ್‌ನಲ್ಲಿ ಪಾನಮತ್ತ ಸಿಬ್ಬಂದಿಯೋರ್ವ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡಿದ್ದ ಹಿನ್ನೆಲೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರೈಲ್ವೆ ಟಿಕೆಟ್ ವಿತರಿಸುವ ಕೌಂಟರ್‌ನಲ್ಲಿದ್ದ ಸಿಬ್ಬಂದಿ ಜಯಪ್ರಕಾಶ್ ಒಂದು ಊರಿನ ಟಿಕೆಟ್ ಕೇಳಿದರೆ, ಮತ್ತೊಂದು ಊರಿನ ಟಿಕೆಟ್ ಕೊಟ್ಟು ಪ್ರಯಾಣಿಕರನ್ನು ಗೊಂದಲಕ್ಕೆ ಗುರಿ ಮಾಡುತ್ತಿದ್ದ. ರೈಲು ಗಾಡಿ ಸಂಖ್ಯೆ ತಪ್ಪಾಗಿ ಕೊಡುವುದನ್ನೆಲ್ಲಾ ಮಾಡುತ್ತಿದ್ದರಿಂದ ಪ್ರಯಾಣಿಕರು ಅನುಮಾನ ಬಂದು ಪ್ರಶ್ನಿಸಿದಾಗ ಸಿಬ್ಬಂದಿ ಪಾನಮತ್ತನಾಗಿರುವುದು ತಿಳಿದುಬಂದಿದೆ. ಇದನ್ನೂ ಓದಿ: ಬರಗೂರು ನನ್ನ ಜೊತೆ ಚರ್ಚೆಗೆ ಬರಲಿ – ರೋಹಿತ್‌ ಚಕ್ರತೀರ್ಥ ಓಪನ್‌ ಚಾಲೆಂಜ್‌

    ಘಟನೆ ಸಂಬಂಧಿಸಿದಂತೆ ಪ್ರಯಾಣಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ನಿಲ್ದಾಣದಲ್ಲಿ ಪ್ರಯಾಣಿಕರು ಗಲಾಟೆ ಮಾಡಿದ್ದಾರೆ. ಅಲ್ಲದೆ ಸಿಬ್ಬಂದಿಯ ವರ್ತನೆ ಬಗ್ಗೆ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ. ಪ್ರಯಾಣಿಕರಿಗೆ ತೊಂದರೆ ಆಗುತ್ತಿರುವುದನ್ನು ಗಮನಿಸಿರುವ ರೈಲ್ವೆ ಬೋರ್ಡ್ ಸದಸ್ಯ ಬಾಬುರಾವ್ ಗುಂತಕಲ್ ರೈಲ್ವೆ ಕೇಂದ್ರದ ಮುಖ್ಯಸ್ಥ ಕುಮಾರ ಗೌರವ್‍ಗೆ ವಿಷಯ ತಿಳಿಸಿದ್ದಾರೆ. ಹೀಗಾಗಿ ಸಿಬ್ಬಂದಿ ಜಯಪ್ರಕಾಶನನ್ನು ಅಮಾನತ್ತುಗೊಳಿಸಲಾಗಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ಪರಿಸರವಾದಿಗಳ ತೀವ್ರ ವಿರೋಧ

  • ಆಮ್ಲಜನಕದ ಕೊರತೆಯಿಂದ ಬಳಲುತ್ತಿದ್ದ ಮಗುವಿನ ನೆರವಿಗೆ ಬಂದ ರೈಲ್ವೆ ಅಧಿಕಾರಿಗಳು

    ಆಮ್ಲಜನಕದ ಕೊರತೆಯಿಂದ ಬಳಲುತ್ತಿದ್ದ ಮಗುವಿನ ನೆರವಿಗೆ ಬಂದ ರೈಲ್ವೆ ಅಧಿಕಾರಿಗಳು

    ನವದೆಹಲಿ: ಮಧ್ಯಪ್ರದೇಶದ ಭೋಪಾಲ್ ನಿವಾಸಿಗಳು ಗುರುವಾರ ಮಧ್ಯರಾತ್ರಿ ಆಮ್ಲಜನಕದ ಕೊರತೆಯಿಂದ ಬಳಲುತ್ತಿದ್ದ 24 ದಿನದ ಮಗುವಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ.

    ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ನಾಗ್ಪುರದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಶಿಶುವೊಂದು ವೈದ್ಯಕೀಯ ಆಮ್ಲಜನಕದ ಸಹಾಯದಿಂದ ಉಸಿರಾಡುತ್ತಿತ್ತು. ಹಾಗಾಗಿ ರೈಲಿನಲ್ಲಿ ಆಮ್ಲಜನಕದ ಕೊರತೆಯಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

    ಶಿಶುವಿನ ಪೋಷಕರು ಆಮ್ಲಜನಕದ ಸಿಲಿಂಡರ್‌ಗಾಗಿ ಮಧ್ಯರಾತ್ರಿಯ ಸುಮಾರಿಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ಕಳುಹಿಸಿದ್ದಾರೆ. ಅದು ಕೆಲವೇ ಗಂಟೆಗಳಲ್ಲಿ ವೈರಲ್ ಆಗಿತ್ತು. ಈ ವೇಳೆ ಬೆಳಗಿನ ಜಾವ 2 ಗಂಟೆಯ ಹೊತ್ತಿಗೆ ರೈಲು ಭೋಪಾಲ್ ನಿಲ್ದಾಣವನ್ನು ತಲುಪುವ ಹೊತ್ತಿಗೆ ವೈದ್ಯರು, ಎನ್‍ಜಿಒಗಳು, ರೈಲ್ವೆ ಅಧಿಕಾರಿಗಳು ಮತ್ತು ಭೋಪಾಲ್ ಸ್ಥಳೀಯರು ಸಿಲಿಂಡರ್‌ಗಳನ್ನು ತೆಗೆದುಕೊಂಡು ಬಂದು ಕಾಯುತ್ತಿದ್ದರು. ಇದನ್ನೂ ಓದಿ: ಗಾಂಧೀಜಿ ಆಶ್ರಮದಲ್ಲಿ ಚರಕ ಹಿಡಿದು ನೂಲು ತೆಗೆದ, ಭಗವಂತ್ ಮಾನ್, ಕೇಜ್ರಿವಾಲ್

    ಮಗುವಿನ ತಂದೆ ಪ್ರವೀಣ್ ಸಹಾರೆ ಅವರು ಭೋಪಾಲ್‍ನ ಕೆಲವು ಸಾಮಾಜಿಕ ಸೇವಾ ಸಂಸ್ಥೆಗಳಿಗೆ ಅವರ ಮಗುವಿನ ಸ್ಥಿತಿಯ ಬಗ್ಗೆ ತಿಳಿಸಿದ್ದಾರೆ. ಆದರೆ ನಾಗ್ಪುರದ ಅವರ ಸ್ನೇಹಿತ ಖುಶ್ರು ಯೋಚಾ ಅವರು ಸಾಮಾಜಿಕ ಜಾಲತಾಣದಲ್ಲಿ 15 ಕೆ.ಜಿ ಆಮ್ಲಜನಕ ಅಗತ್ಯವಿದೆ ಎಂದು ಪೋಸ್ಟ್ ಮಾಡಿದ್ದಾರೆ. ಪೋಸ್ಟ್‌ನಲ್ಲಿ ಅವರು ಹಲವಾರು ರೈಲ್ವೆ ಅಧಿಕಾರಿಗಳನ್ನು ಟ್ಯಾಗ್ ಮಾಡಿದ್ದಾರೆ.

    ಅವರ ಪೋಸ್ಟ್ ನಂತರ, ಖುಶ್ರು ಯೋಚಾ ಅವರನ್ನು ಭೋಪಾಲ್‍ನ ಮಾಜಿ ವಿಭಾಗೀಯ ರೈಲ್ವೇ ಮ್ಯಾನೇಜರ್ ಉದಯ್ ಬೋವಾರ್ಂಕರ್ ಅವರು ಸಂಪರ್ಕಿಸಿದರು. ಅವರು 30 ನಿಮಿಷಗಳಲ್ಲಿ ಭೋಪಾಲ್ ರೈಲ್ವೆ ನಿಲ್ದಾಣದಲ್ಲಿ ಸಿಲಿಂಡರ್ ನೀಡುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ರೈಲ್ವೆ ಇಲಾಖೆಯಿಂದ ಚಾರ್ ಧಾಮ್ ಯಾತ್ರೆಗೆ ಮೇ ತಿಂಗಳಲ್ಲಿ ವಿಶೇಷ ಆಫರ್

    ಮಧ್ಯಾಹ್ನ 2:43ಕ್ಕೆ ಭೋಪಾಲ್‍ನಲ್ಲಿ ಅವರಿಗೆ ಮೂರು ಸಿಲಿಂಡರ್‍ಗಳನ್ನು ವಿತರಿಸಲಾಯಿತು. ಅನೇಕ ಸಂಘಟನೆಗಳು ಸಿಲಿಂಡರ್‌ಗಳೊಂದಿಗೆ ನಿಲ್ದಾಣವನ್ನು ತಲುಪಿದವು. ಆದರೆ ಅವರು ಕೇವಲ ಮೂರು ಸಿಲಿಂಡರ್‌ಗಳನ್ನು ತೆಗೆದುಕೊಂಡರು ಎಂದು ಸಹಾರೆ ಹೇಳಿದರು. ವರದಿಗಳ ಪ್ರಕಾರ, ಮಗುವಿಗೆ ಈಗ ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.