Tag: ರೈಲು

  • ಕುಷ್ಟಗಿ ರೈಲು ಸಂಚಾರ ಶೀಘ್ರವೇ ಆರಂಭ: ಬಸವರಾಜ ರಾಯರೆಡ್ಡಿ

    ಕುಷ್ಟಗಿ ರೈಲು ಸಂಚಾರ ಶೀಘ್ರವೇ ಆರಂಭ: ಬಸವರಾಜ ರಾಯರೆಡ್ಡಿ

    ಗದಗ: ವಾಡಿ ರೈಲ್ವೆ ಮಾರ್ಗದಲ್ಲಿ ಗದಗದಿಂದ ಕುಷ್ಟಗಿವರೆಗೆ (Kushtagi) ಶೀಘ್ರದಲ್ಲೇ ಸಂಚಾರ ಆರಂಭವಾಗಲಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ (Basavaraja Rayareddy) ಹೇಳಿದರು.

    ಸಂಸದ ರಾಜಶೇಖರ ಹಿಟ್ನಾಳ್ (Chandrashekhar Hitnal) ಅವರೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಗದಗದಿಂದ ಕುಷ್ಟಗಿವರೆಗೆ ರೈಲ್ವೆ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಾಯೋಗಿಕವಾಗಿ ರೈಲು ಓಡಿಸಲಾಗಿದೆ. ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರೊಂದಿಗೆ ಈಗಾಗಲೇ ಮಾತನಾಡಿದ್ದೇವೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಜೊತೆಗೆ ಮಾತನಾಡಿ ಉದ್ಘಾಟನೆ ದಿನಾಂಕವನ್ನು ಶೀಘ್ರವೇ ನಿಗದಿ ಮಾಡಲಾಗುವುದು ಎಂದರು. ಇದನ್ನೂ ಓದಿ: ವಾಹನ ಕಂಪನಿಗಳಿಗೆ ತಾತ್ಕಾಲಿಕ ವಿನಾಯತಿ – ಟ್ರಂಪ್‌ ಯೂಟರ್ನ್‌

    ರೈಲ್ವೆ ಸಚಿವರ ಸಮಯ ನೋಡಿಕೊಂಡು ಯಲಬುರ್ಗಾ ಅಥವಾ ಕುಷ್ಟಗಿಯಲ್ಲಿ ಉದ್ಘಾಟನೆ ಕಾರ್ಯಕ್ರಮ ನಿಗದಿ ಮಾಡಲಾಗುವುದು. ಇದೀಗ ಕುಷ್ಟಗಿಯಿಂದ ಸುರಪುರದವರೆಗೆ ಒಂದೇ ಟೆಂಡರ್ ಕರೆದಿದ್ದಾರೆ. ಮುಂದಿನ 3 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು

    ಯಲಬುರ್ಗಾ ತಾಲೂಕು ಇಟಗಿ (Itagi) ಗ್ರಾಮದಲ್ಲಿ ರೈಲ್ವೆ ನಿಲ್ದಾಣ ಮಂಜೂರಾಗಿದೆ. ಐತಿಹಾಸಿಕ ಸ್ಥಳ ಇಟಗಿಯಲ್ಲಿ ಇಟಗಿ ಮಹದೇವ್ ರೈಲ್ವೆ ನಿಲ್ದಾಣ ಎಂಬ ಹೆಸರಿನಲ್ಲಿ ನಿರ್ಮಾಣ ಆಗಲಿದೆ. ರಾಜ್ಯ ಸರ್ಕಾರ ಅರ್ಧ ಹಣ ಕೊಟ್ಟು ಭೂಮಿ ನೀಡುತ್ತಿದೆ ಎಂದರು. ಇದನ್ನೂ ಓದಿ: ಬ್ರಾಹ್ಮಣರ ಸಂಖ್ಯೆ 15 ಲಕ್ಷ ಅಲ್ಲ, ನಮ್ಮ ಸಂಖ್ಯೆ 45 ಲಕ್ಷ: ಅಶೋಕ್ ಹಾರನಹಳ್ಳಿ

    ಗದಗ-ವಾಡಿ ರೈಲ್ವೆ ಯೋಜನೆಗೆ ಅಗತ್ಯ ಇರುವ ಪೂರ್ಣ ಪ್ರಮಾಣದ ಭೂಸ್ವಾಧೀನ ಆಗಿದೆ. ಗದಗ-ವಾಡಿ ರೈಲ್ವೆ ಹಳಿ ನಿರ್ಮಾಣ ಕಾಮಗಾರಿಯಲ್ಲಿ ಅಂಡರ್‌ಪಾಸ್ ಕೆಲಸದಲ್ಲಿ ತಾಂತ್ರಿಕ ಸಮಸ್ಯೆ ಆಗಿರುವ ಹಾಗೂ ಕಳಪೆ ಕಾಮಗಾರಿ ನಡೆದ ಬಗ್ಗೆ ಮಾಹಿತಿ ಇದೆ. ಕೂಡಲೇ ಸರಿಪಡಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ. ಆರಂಭದಲ್ಲಿ ಕೇವಲ 2 ಸಾವಿರ ಕೋಟಿ ರೂ. ಅಂದಾಜು ವೆಚ್ಚದ ಕಾಮಗಾರಿ ಇದಾಗಿತ್ತು. ಇದೀಗ 4 ಸಾವಿರ ಕೋಟಿ ರೂ.ವರೆಗೆ ಹೆಚ್ಚುವರಿಯಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: Haveri | ಬಿರುಗಾಳಿ ಸಹಿತ ಮಳೆ – 20ಕ್ಕೂ ಅಧಿಕ ಮರಗಳು ಧರಾಶಾಹಿ, ಕಾರುಗಳು ಜಖಂ

    ಮುನಿರಾಬಾದ್‌ನಿಂದ ಮೆಹಬೂಬ್ ರೈಲ್ವೆ ಮಾರ್ಗದ ಯೋಜನೆ ಕರ್ನಾಟಕದಲ್ಲಿ ಸಿಂಧನೂರುವರೆಗೆ ಪೂರ್ಣಗೊಂಡು, ಅಲ್ಲಿಂದ ರಾಯಚೂರುವರೆಗೆ ಕಾಮಗಾರಿ ನಡೆಯುತ್ತಿದೆ. ಆಂಧ್ರದಲ್ಲಿ ಈ ಲೈನ್ ಕಂಪ್ಲೀಟ್ ಆಗಿದೆ. ಕರ್ನಾಟಕದಲ್ಲಿ ಭೂ ಸ್ವಾಧೀನ ಸಮಸ್ಯೆಯಿಂದ ವಿಳಂಬ ಆಗಿತ್ತು. ಖರ್ಗೆ ಅವರ ಒತ್ತಾಸೆಯಿಂದ ಯೋಜನೆ ಮಂಜೂರಾಗಿತ್ತು ಎಂದು ಮಾಹಿತಿ ನೀಡಿದರು.

  • ಅತ್ಯಾಚಾರಕ್ಕೆ ಯತ್ನ – ಕಾಮುಕನಿಂದ ತಪ್ಪಿಸಿಕೊಳ್ಳಲು ಚಲಿಸುತ್ತಿದ್ದ ರೈಲಿಂದ ಜಿಗಿದ ಮಹಿಳೆ

    ಅತ್ಯಾಚಾರಕ್ಕೆ ಯತ್ನ – ಕಾಮುಕನಿಂದ ತಪ್ಪಿಸಿಕೊಳ್ಳಲು ಚಲಿಸುತ್ತಿದ್ದ ರೈಲಿಂದ ಜಿಗಿದ ಮಹಿಳೆ

    ಹೈದರಾಬಾದ್: ರೈಲಿನಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಹಿನ್ನೆಲೆ ಮಹಿಳೆಯು ರೈಲಿನಿಂದ ಹಾರಿದ ಪರಿಣಾಮ ಗಂಭೀರ ಗಾಯಗೊಂಡ ಘಟನೆ ತೆಲಂಗಾಣದಲ್ಲಿ (Telangana) ನಡೆದಿದೆ.

    ಖಾಸಗಿ ವಲಯದ ಉದ್ಯೋಗಿಯಾಗಿರುವ ಮಹಿಳೆ, ಮೊಬೈಲ್ ಫೋನ್ ಸರಿಮಾಡಲು ಮೆಡ್ಚಲ್‌ನಿಂದ ಸಿಕಂದರಾಬಾದ್‌ಗೆ (Secunderabad) ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಇದನ್ನೂ ಓದಿ: ನಾನು ಸಿಎಂ ಆದ್ರೆ ಸಾವಿರ ಜೆಸಿಬಿ ಆರ್ಡರ್, ಪ್ರತಿ ತಾಲೂಕಿಗೆ 35 ಇಡ್ತೀನಿ: ಯತ್ನಾಳ್‌

    ಮಾ. 22ರಂದು ಸಂಜೆ ಸಿಕಂದರಾಬಾದ್ ರೈಲ್ವೆ ನಿಲ್ದಾಣದಿಂದ ಮೆಡ್ಚಲ್‌ಗೆ (Medchal) ಹೋಗುವ ಮಲ್ಟಿ ಮಾಡಲ್ ಟ್ರಾರ್ನ್ಸ್‌ಪೋರ್ಟ್‌ ಸರ್ವಿಸ್ ರೈಲಿನ ಮಹಿಳಾ ಕೋಚ್‌ನಲ್ಲಿ ಒಂಟಿಯಾಗಿ ಪ್ರಯಾಣಿಸುತ್ತಿದ್ದೆ. ಅಲ್ವಾಲ್ ರೈಲ್ವೆ ನಿಲ್ದಾಣದಲ್ಲಿ (Alwal railway station) ಹತ್ತಿದ ಸುಮಾರು 25 ವಯಸ್ಸಿನ ಒಬ್ಬ ಅಪರಿಚಿತ ವ್ಯಕ್ತಿ ಲೈಂಗಿಕ ಕ್ರಿಯೆಗೆ ಬೇಡಿಕೆ ಇಟ್ಟಿದ್ದ. ಆತನಿಗೆ ಸಹಕರಿಸಲು ನಿರಾಕರಿಸಿದಾಗ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದನು. ಆತನಿಂದ ತಪ್ಪಿಸಿಕೊಳ್ಳಲು ಚಲಿಸುವ ರೈಲಿನಿಂದ ಹೊರಗೆ ಹಾರಿದೆ ಎಂದು ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದರು. ಇದನ್ನೂ ಓದಿ: ನ್ಯಾ.ಯಶವಂತ್ ವರ್ಮಾ ನ್ಯಾಯಾಂಗ ಕರ್ತವ್ಯ ನಿರ್ವಹಣೆ ಮಾಡುವಂತಿಲ್ಲ: ದೆಹಲಿ ಹೈಕೋರ್ಟ್

    ಮಹಿಳೆಯ ತಲೆ, ಗಲ್ಲ, ಬಲಗೈ ಮತ್ತು ಸೊಂಟದ ಮೇಲೆ ತೀವ್ರ ಗಾಯಗಳಾಗಿದ್ದು, ರೈಲ್ವೆ ಹಳಿ ಬಳಿ ಹೋಗುತ್ತಿದ್ದ ಕೆಲವರು ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು. ಮಹಿಳೆಯ ದೂರಿನ ಆಧಾರದ ಮೇಲೆ ಬಿಎನ್‌ಎಸ್‌ನ (BNS) ಸೆಕ್ಷನ್ 75 ಮತ್ತು 131 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಹನಿಟ್ರ್ಯಾಪ್‌ ಕೇಸ್‌- ಮಂಗಳವಾರ ರಾಜಣ್ಣ ದೂರು, ಎಸ್‌ಐಟಿ ರಚನೆ ಸಾಧ್ಯತೆ

  • ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಹೇಮಾವತಿ ನದಿಗೆ ಬಿದ್ದ ವಿದ್ಯಾರ್ಥಿ – ಪ್ರಾಣಾಪಾಯದಿಂದ ಪಾರು

    ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಹೇಮಾವತಿ ನದಿಗೆ ಬಿದ್ದ ವಿದ್ಯಾರ್ಥಿ – ಪ್ರಾಣಾಪಾಯದಿಂದ ಪಾರು

    ಹಾಸನ: ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ವಿದ್ಯಾರ್ಥಿಯೋರ್ವ ನದಿಗೆ ಬಿದ್ದ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದೆ.

    ಮುಜಾಮಿಲ್ (17) ನದಿಗೆ ಬಿದ್ದ ವಿದ್ಯಾರ್ಥಿ. ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಈತ ಕೆ.ಆರ್ ನಗರದಿಂದ ಹಾಸನಕ್ಕೆ ಎಕ್ಸ್ಪ್ರೆಸ್ ರೈಲಿನಲ್ಲಿ ತೆರಳುತ್ತಿದ್ದ. ಚಲಿಸುತ್ತಿದ್ದ ರೈಲಿನ ಬೋಗಿಯ ಮೆಟ್ಟಿಲ ಮೇಲೆ ಮುಜಾಮಿಲ್ ಒಂದು ಕಾಲಿಟ್ಟು, ಇನ್ನೊಂದು ಕಾಲು ಬೋಗಿಯಿಂದ ಹೊರಗೆ ಹಾಕಿ ನಿಂತಿದ್ದ. ಈ ವೇಳೆ ಆಯತಪ್ಪಿ 70 ರಿಂದ 80 ಅಡಿ ಎತ್ತರದಿಂದ ಹೇಮಾವತಿ ನದಿಗೆ ಬಿದ್ದಿದ್ದಾನೆ. ಇದನ್ನೂ ಓದಿ: 3 ವರ್ಷದ ಹಿಂದೆ ನಡೆದ ಪರಿಷತ್ ಚುನಾವಣೆ | ಕೈ ಅಭ್ಯರ್ಥಿಗೆ 6 ಮತಗಳ ಸೋಲು – ಮರು ಮತ ಎಣಿಕೆಗೆ ಹೈಕೋರ್ಟ್ ಸೂಚನೆ

    ಹೇಮಾವತಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆ ಇದ್ದಿದ್ದರಿಂದ ಬಂಡೆ ಹಿಡಿದು ಮುಜಾಮಿಲ್ ಕಿರುಚಾಡುತ್ತಿದ್ದ. ಮುಜಾಮಿಲ್ ಕಿರುಚಾಟ ಕೇಳಿದ ಸ್ಥಳೀಯರು ನದಿಗೆ ಇಳಿದು ಆತನನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಮುಜಾಮಿಲ್ ಹೊಳೆನರಸೀಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಳೆನರಸೀಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: Kumbh Mela Stampede | ಇಂದು ಸಂಜೆ ದೆಹಲಿಯಿಂದ ಬೆಳಗಾವಿಗೆ ಬರಲಿದೆ ನಾಲ್ವರ ಶವ

  • ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ ವಿಶೇಷ ರೈಲಿಗೆ ಕಲ್ಲು ಎಸೆತ

    ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ ವಿಶೇಷ ರೈಲಿಗೆ ಕಲ್ಲು ಎಸೆತ

    ಭೋಪಾಲ್: ಝಾನ್ಸಿಯಿಂದ ಪ್ರಯಾಗ್‌ರಾಜ್‌ಗೆ (Prayagraj) ಹೋಗುತ್ತಿದ್ದ ಮಹಾಕುಂಭ ಮೇಳದ (Kumbh Mela) ವಿಶೇಷ ರೈಲಿಗೆ ಹತ್ತಲು ಹೋದಾಗ ಬಾಗಿಲು ಮುಚ್ಚಿದಕ್ಕೆ ಪ್ರಯಾಣಿಕರು ಆಕ್ರೋಶಗೊಂಡು ರೈಲಿಗೆ (Rail) ಕಲ್ಲು ಎಸೆದಿರುವ ಘಟನೆ ಮಧ್ಯಪ್ರದೇಶದ ಹರ್ಪಾಲ್‌ಪುರ ರೈಲ್ವೆ ನಿಲ್ದಾಣದಲ್ಲಿ (Harpalpur Railway station) ನಡೆದಿದೆ.

     

    ಪ್ರಯಾಣಿಕರು ರೈಲಿಗೆ ಕಲ್ಲು ಎಸೆದಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social Media) ಭಾರೀ ಹರಿದಾಡುತ್ತಿದೆ. ಮಹಾ ಕುಂಭಮೇಳಕ್ಕೆ ಹೋಗುತ್ತಿದ್ದ ವಿಶೇಷ ರೈಲು ಝಾನ್ಸಿ ರೈಲ್ವೆ ನಿಲ್ದಾಣದಿಂದ ರಾತ್ರಿ 8 ಗಂಟೆಗೆ ಹೊರಟಿತ್ತು. ಹರ್ಪಾಲ್‌ಪುರ ನಿಲ್ದಾಣಕ್ಕೆ ಬರುತ್ತಿದ್ದಂತೆ ರೈಲಿನ ಬಾಗಿಲು ಹಾಕಿದ್ದರಿಂದ ಪ್ರಯಾಣಿಕರಿಗೆ ಹತ್ತಲು ಸಾಧ್ಯವಾಗಿರಲಿಲ್ಲ. ಇದರಿಂದ ಕೋಪಗೊಂಡ ಪ್ರಯಾಣಿಕರು ರೈಲಿಗೆ ಕಲ್ಲು ಎಸೆದಿದ್ದಾರೆ. ಇದನ್ನೂ ಓದಿ: ಅಕ್ರಮ ಮತಾಂತರವು ಡಕಾಯಿತಿ, ಅತ್ಯಾಚಾರ, ಕೊಲೆಯಷ್ಟು ಗಂಭೀರ ಅಪರಾಧವಲ್ಲ: ಸುಪ್ರೀಂ ಕೋರ್ಟ್

     

    ಕೆಲವು ವರದಿಗಳ ಪ್ರಕಾರ – ಹರ್ಪಾಲ್‌ಪುರ ಮಹಾ ಕುಂಭಮೇಳಕ್ಕೆ ಹೋಗುವ ವಿಶೇಷ ರೈಲಿಗಾಗಿ ಪ್ರಯಾಣಿಕರು ಕಾಯುತ್ತಿದ್ದರು. ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಪ್ರಯಾಣಿಕರು ಹತ್ತಲು ಹೋದಾಗ ಬಾಗಿಲು ಲಾಕ್ ಆಗಿದೆ. ಇದರಿಂದ ಕೋಪಗೊಂಡ ಪ್ರಯಾಣಿಕರು ಬೋಗಿಗಳ ಮೇಲೆ ಹಾಗೂ ಬಾಗಿಲು, ಕಿಟಕಿಗಳ ಮೇಲೂ ಕಲ್ಲು ಎಸೆದಿದ್ದಾರೆ. ಇದರಿಂದ ರೈಲಿನೊಳಗಿದ್ದ ಪ್ರಯಾಣಿಕರು ಭಯಭೀತರಾಗಿ ಕಿರುಚಾಡಿದ್ದಾರೆ. ಇದನ್ನೂ ಓದಿ: Microfinance | ಮನೆ, ಶಾಲೆಗೆ ಬಂದು ಟಾರ್ಚರ್‌ – ಶಿಕ್ಷಕಿಯ ಶವ ಎರಡು ದಿನದ ನಂತರ ಪತ್ತೆ

    ನಸುಕಿನ ಜಾವ 2 ಗಂಟೆಗೆ ರೈಲು ಹರ್ಪಾಲ್ ಪುರ ರೈಲ್ವೇ ನಿಲ್ದಾಣಕ್ಕೆ ತಲುಪುತ್ತಿದ್ದಂತೆ ಜನರು ರೈಲಿನ ಮೇಲೆ ಕಲ್ಲು ಎಸೆದಿದ್ದಾರೆ ಎಂದು ಹರ್ಪಾಲ್ ಪುರ ಪೊಲೀಸ್ ಠಾಣೆಯ ಉಸ್ತುವಾರಿ ಪುಷ್ಪಕ್ ಶರ್ಮ ತಿಳಿಸಿದ್ದಾರೆ.

     

  • ಉತ್ತರ ಭಾರತದ ರಾಜ್ಯಗಳಲ್ಲಿ ದಟ್ಟವಾದ ಮಂಜು – ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ

    ಉತ್ತರ ಭಾರತದ ರಾಜ್ಯಗಳಲ್ಲಿ ದಟ್ಟವಾದ ಮಂಜು – ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ದಟ್ಟವಾದ ಮಂಜಿನ (Fog) ಪದರ ಆವೃತಗೊಂಡಿದ್ದು, ತೀವ್ರ ಶೀತ ವಾತವರಣ ನಿರ್ಮಾಣವಾಗಿದೆ. ಇದರ ಪರಿಣಾಮ ವಿಮಾನ (Flights) ಮತ್ತು ರೈಲುಗಳ (Train) ಸಂಚಾರದಲ್ಲಿ ಭಾರಿ ವ್ಯತ್ಯಯವಾಗಿದೆ.

    ಫ್ಲೈಟ್ ಮಾನಿಟರಿಂಗ್ ವೆಬ್‌ಸೈಟ್ ಫ್ಲೈಟ್‌ರಾಡಾರ್ ಪ್ರಕಾರ, ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರು ವಿಮಾನಗಳನ್ನು ರದ್ದುಗೊಳಿಸಲಾಗಿದೆ. 215 ವಿಮಾನಗಳ ಆಗಮನ ವಿಳಂಬವಾಗಿದೆ. ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ 17 ಹೊರಡುವ ವಿಮಾನಗಳು ವಿಳಂಬಗೊಂಡಿದ್ದು, 10 ವಿಮಾನಗಳು ರದ್ದಾಗಿದೆ. 36 ಆಗಮಿಸುವ ವಿಮಾನಗಳು ವಿಳಂಬವಾಗಿವೆ. ಇದನ್ನೂ ಓದಿ: ಬೇರೆ ರೂಟ್‌ಗೆ ಕರೆದೊಯ್ದ ಚಾಲಕ – ಭಯಗೊಂಡು ಚಲಿಸುತ್ತಿದ್ದ ಆಟೋದಿಂದ ಜಿಗಿದ ಮಹಿಳೆ

    ಶುಕ್ರವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ರನ್‌ವೇ ಗೋಚರತೆ ಶೂನ್ಯವಾಗಿತ್ತು. ವಿಮಾನ ಕಾರ್ಯಾಚರಣೆಗಳಿಗೆ ಸಂಭಾವ್ಯ ಅಡಚಣೆಗಳ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಎಚ್ಚರಿಸಿದ್ದಾರೆ. ಇಂಡಿಗೋ ಮತ್ತು ಸ್ಪೈಸ್‌ಜೆಟ್ ಹವಾಮಾನ ವಿಳಂಬಗಳ ವಿರುದ್ಧ ಎಚ್ಚರಿಕೆ ನೀಡಿವೆ. ಇದನ್ನೂ ಓದಿ: ಬೆಂಗಳೂರು| ಟ್ಯೂಷನ್ ಟೀಚರ್‌ನಿಂದಲೇ ವಿದ್ಯಾರ್ಥಿನಿ ಕಿಡ್ನ್ಯಾಪ್ – ಆರೋಪಿ ಸುಳಿವು ಕೊಟ್ಟವರಿಗೆ ಬಹುಮಾನ ಘೋಷಣೆ

    ಮಂಜಿನ ವಾತಾವರಣದಿಂದಾಗಿ ಹಲವಾರು ದೂರದ ಸೇವೆಗಳು ಸೇರಿದಂತೆ ಕನಿಷ್ಠ 24 ರೈಲುಗಳು ತಡವಾಗಿ ಓಡುತ್ತಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಇವುಗಳಲ್ಲಿ ಕೆಲವು ರೈಲುಗಳು 4-5 ಗಂಟೆಗಳವರೆಗೆ ವಿಳಂಬವಾಗಿವೆ. ಕರ್ನಾಟಕ ಎಕ್ಸ್‌ಪ್ರೆಸ್ ಮತ್ತು ಬಿಹಾರ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್, ಭಟಿಂಡಾ-ಬಾಲೂರ್‌ಘಾಟ್ ಫರಕ್ಕಾ ಎಕ್ಸ್‌ಪ್ರೆಸ್, ಆಂಧ್ರಪ್ರದೇಶ ಎಕ್ಸ್‌ಪ್ರೆಸ್, ಅಯೋಧ್ಯೆ ಎಕ್ಸ್‌ಪ್ರೆಸ್ ರೈಲುಗಳು ವಿಳಂಬವಾಗುತ್ತಿವೆ. ಇದನ್ನೂ ಓದಿ: ಸಿಎಂ ತವರು ಕ್ಷೇತ್ರದಲ್ಲೇ ದಲಿತ ಕುಟುಂಬಕ್ಕೆ 4 ವರ್ಷದಿಂದ ದಲಿತರಿಂದಲೇ ಬಹಿಷ್ಕಾರ

    ನೋಯ್ಡಾದಲ್ಲಿ, ಜ.8ರವರೆಗೆ ಶಾಲಾ ತರಗತಿಗಳಿಗಳನ್ನು ಮುಚ್ಚಲಾಗುವುದು ಎಂದು ಜಿಲ್ಲಾ ಅಧಿಕಾರಿಗಳು ಘೋಷಿಸಿದ್ದಾರೆ. ನೋಯ್ಡಾದಲ್ಲಿ ಶುಕ್ರವಾರ ಕನಿಷ್ಠ 8 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗೋಚರತೆ ಕಡಿಮೆಯಾದ ಕಾರಣ ಪಂಜಾಬ್‌ನ ಬಟಿಂಡಾದಲ್ಲಿ ಖಾಸಗಿ ಬಸ್ ಮತ್ತು ಟ್ರಕ್ ಡಿಕ್ಕಿ ಹೊಡೆದು 20 ರಿಂದ 25 ಪ್ರಯಾಣಿಕರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಹಾಲಿನ ದರ 10 ರೂ. ಹೆಚ್ಚಳಕ್ಕೆ ಬೇಡಿಕೆ ಇದೆ: ಸಚಿವ ವೆಂಕಟೇಶ್

    ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ಪಂಜಾಬ್ ಮತ್ತು ಬಿಹಾರ ಸೇರಿದಂತೆ ರಾಜ್ಯಗಳಲ್ಲಿ ದಟ್ಟವಾದ ಮಂಜಿನ ಜೊತೆಗೆ ತೀವ್ರವಾದ ಚಳಿ ಅಲೆಯನ್ನು ಅನುಭವಿಸುತ್ತಿದೆ. ಪಾಟ್ನಾ ಸೇರಿದಂತೆ ಬಿಹಾರದ ಹಲವಾರು ಭಾಗಗಳಲ್ಲಿ ಹವಮಾನ ಕುಸಿದಿರುವುದರಿಂದ, ಮುಂದಿನ ಮೂರರಿಂದ ನಾಲ್ಕು ದಿನಗಳಲ್ಲಿ ಕನಿಷ್ಠ ತಾಪಮಾನವು 6-11 ಡಿಗ್ರಿ ಸೆಲ್ಸಿಯಸ್ ನಡುವೆ ಉಳಿಯುವ ನಿರೀಕ್ಷೆಯಿದೆ. ಇದಕ್ಕೆ ಸ್ಪಂದಿಸಿದ ಸರ್ಕಾರ ಶಾಲಾ ಸಮಯದಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಇದನ್ನೂ ಓದಿ: ಪೀಣ್ಯ ಬಸವೇಶ್ವರ ಬಸ್ ನಿಲ್ದಾಣವಾಗುತ್ತಾ ಕಲ್ಯಾಣ ಮಂಟಪ, ಮಾಲ್?

  • ಬೆಂಗಳೂರು| ರೈಲಿಗೆ ಸಿಲುಕಿ ಇಬ್ಬರು ಯುವಕರು ದಾರುಣ ಸಾವು

    ಬೆಂಗಳೂರು| ರೈಲಿಗೆ ಸಿಲುಕಿ ಇಬ್ಬರು ಯುವಕರು ದಾರುಣ ಸಾವು

    ಬೆಂಗಳೂರು: ರೈಲಿಗೆ ಸಿಲುಕಿ ಇಬ್ಬರು ಯುವಕರು ದಾರುಣ ಸಾವಿಗೀಡಾಗಿರುವ ಘಟನೆ ಬುಧವಾರ ಮಾಗಡಿ ರಸ್ತೆಯ ರೈಲ್ವೆ ಗೇಟ್‌ ಬಳಿ ನಡೆದಿದೆ.

    ಮೃತ ಯುವಕರು ಸೂರ್ಯ, ಶರತ್‌ ಎಂದು ಗುರುತಿಸಲಾಗಿದೆ. ಮೃತಪಟ್ಟ ಯುವಕರು ಬಿನ್ನಿಪೇಟೆ, ಕೆ.ಪಿ ಅಗ್ರಹಾರದವರು ಎಂದು ಹೇಳಲಾಗುತ್ತಿದೆ. ರಾತ್ರಿ 10:30ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ.

    ಬಿನ್ನಿಪೇಟೆಯ ಸೂರ್ಯ ಮತ್ತು ಶರತ್ ಎಂಬಾತ ಕೆಪಿ ಅಗ್ರಹಾರದವ. ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ರೈಲಿಗೆ ಸಿಲುಕಿ ದುರ್ಮರಣಕ್ಕೀಡಾಗಿದ್ದಾರೆ. ಘಟನೆ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಇಬ್ಬರು ಯುವಕರು ರೈಲ್ವೆ ಟ್ರ್ಯಾಕ್ ಮೇಲೆ ಕೂತಿರುವಾಗ ರೈಲು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರ ಕಾಲುಗಳು ಮುರಿದಿದೆ. ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ.

  • ಕ್ರಿಸ್‌ಮಸ್ ಪ್ರಯುಕ್ತ ನೈಋತ್ಯ ರೈಲ್ವೆಯಿಂದ ವಿಶೇಷ ರೈಲುಗಳ ಸಂಚಾರ

    ಕ್ರಿಸ್‌ಮಸ್ ಪ್ರಯುಕ್ತ ನೈಋತ್ಯ ರೈಲ್ವೆಯಿಂದ ವಿಶೇಷ ರೈಲುಗಳ ಸಂಚಾರ

    ಬೆಂಗಳೂರು: ಕ್ರಿಸ್‌ಮಸ್‌ (Christmas) ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಪೂರೈಸಲು ಬೆಂಗಳೂರಿನ ಸರ್‌ ಎಂ.ವಿಶ್ವೇಶ್ವರಯ್ಯ-ತಿರುವನಂತಪುರಂ ನಾರ್ತ್‌ ನಿಲ್ದಾಣಗಳ ನಡುವೆ ಪ್ರತಿ ದಿಕ್ಕಿನಲ್ಲಿ ಒಂದು ಟ್ರಿಪ್‌ ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

    ಎಸ್ಎಂವಿಟಿ ಬೆಂಗಳೂರು-ತಿರುವನಂತಪುರಂ ನಾರ್ತ್ ಮಧ್ಯ ಒಂದು ಟ್ರಿಪ್ ವಿಶೇಷ ರೈಲು (06507/06508) ಸಂಚಾರ ಮಾಡಲಿದೆ. ಡಿ.23 (ಸೋಮವಾರ) ರಂದು ರಾತ್ರಿ 11:00 ಗಂಟೆಗೆ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ಹೊರಟು, ಮರುದಿನ ಸಂಜೆ 4:30 ಕ್ಕೆ ತಿರುವನಂತಪುರಂ ನಾರ್ತ್ ತಲುಪಲಿದೆ. ಇದನ್ನೂ ಓದಿ: ಬೆಳಗಾವಿ ಅಧಿವೇಶನದಲ್ಲಿ ಸರ್ಕಾರವನ್ನ ಕಟ್ಟಿ ಹಾಕೋ ಕೆಲಸ ಬಿಜೆಪಿ ಮಾಡಿದೆ: ಆರ್.ಅಶೋಕ್‌

    ಹಿಂತಿರುಗುವಾಗ, ಈ ರೈಲು (06508) ಡಿ.24 (ಮಂಗಳವಾರ) ರಂದು ತಿರುವನಂತಪುರಂ ನಾರ್ತ್ ನಿಲ್ದಾಣದಿಂದ ಸಂಜೆ 5:55 ಕ್ಕೆ ಹೊರಟು, ಮರುದಿನ ಬೆಳಿಗ್ಗೆ 11:15 ಕ್ಕೆ ಸರ್ ಎಂ.ವಿಶ್ವೇಶ್ವರಯ್ಯ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.

    ಎರಡೂ ಮಾರ್ಗಗಳಲ್ಲಿ ಈ ರೈಲು ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರ್, ಪೊದನೂರು, ಪಾಲಕ್ಕಾಡ್, ತ್ರಿಶೂರ್, ಅಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಿಂಗವನಂ, ತಿರುವಲ್ಲಾ, ಚೆಂಗನ್ನೂರು, ಮಾವೇಲಿಕರ, ಕಾಯಂಕುಲಂ ಮತ್ತು ಕೊಲ್ಲಂ ನಿಲ್ದಾಣಗಳಲ್ಲಿ ನಿಲ್ಲಲಿದೆ. ಇದನ್ನೂ ಓದಿ: ನನ್ನ ವಿರುದ್ಧ ಸಂಚು: ನ್ಯಾಯಾಂಗ ತನಿಖೆಗೆ ಆಗ್ರಹಿಸಿದ ಸಿಟಿ ರವಿ

  • ಮೆಟ್ರೋ ರೈಲಿನ ಒಳಗಡೆ ಭಿಕ್ಷಾಟನೆ, ದಂಗಾದ ಪ್ರಯಾಣಿಕರು!

    ಮೆಟ್ರೋ ರೈಲಿನ ಒಳಗಡೆ ಭಿಕ್ಷಾಟನೆ, ದಂಗಾದ ಪ್ರಯಾಣಿಕರು!

    ಬೆಂಗಳೂರು: ಟ್ರಾಫಿಕ್‌ ಸಿಗ್ನಲ್‌, ಬಸ್‌ ನಿಲ್ದಾಣ, ದೇವಸ್ಥಾನಗಳಲ್ಲಿ ಭಿಕ್ಷುಕರು (Beggars) ಇರುವುದು ಸಾಮಾನ್ಯ. ಆದರೆ ಈಗ ಭಿಕ್ಷುಕರು ನಮ್ಮ ಮೆಟ್ರೋಗೂ (Namma Metro) ಲಗ್ಗೆ ಇಟ್ಟಿದ್ದಾರೆ.

    ಹೌದು. ನಮ್ಮ ಮೆಟ್ರೋ ರೈಲು ಒಳಗಡೆ ವಿಶೇಷ ಚೇತನ ವ್ಯಕ್ತಿಯೊಬ್ಬ ಭಿಕ್ಷಾಟನೆ ಮಾಡಿದ್ದಾನೆ. ಚಲ್ಲಘಟ್ಟದಿಂದ ವೈಟ್ ಫೀಲ್ಡ್‌ ಮಾರ್ಗದ ಮೆಟ್ರೋದಲ್ಲಿ ಪ್ರಯಾಣಿಕರಂತೆ ಬಂದ ವ್ಯಕ್ತಿ ಭಿಕ್ಷೆ ಬೇಡಿದ್ದಾನೆ. ಇದನ್ನೂ ಓದಿ: ನಟ ಅಲ್ಲು ಅರ್ಜುನ್ ಬಂಧನ – ಪೊಲೀಸರ ನಡೆ ಸಮರ್ಥಿಸಿಕೊಂಡ ತೆಲಂಗಾಣ ಸಿಎಂ


    ತನ್ನ ದೈಹಿಕ ಊನವನ್ನು ತೋರಿಸಿ ಭಿಕ್ಷಾಟನೆ ಮಾಡಿದ್ದನ್ನು ಕಂಡು ಪ್ರಯಾಣಿಕರು ದಂಗಾಗಿದ್ದಾರೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್‌ ಪಡೆದು ಭಿಕ್ಷೆ ಬೇಡಿದ್ದು ಹಲವರ ಅಚ್ಚರಿಗೆ ಕಾರಣವಾಗಿದೆ.

    ಮೆಟ್ರೋ ರೈಲಿನಲ್ಲಿ ಭಿಕ್ಷೆ ಬೇಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್‌ ಆಗಿದೆ. ನಮ್ಮ‌ ಮೆಟ್ರೊದಲ್ಲೂ ಭಿಕ್ಷುಕರು ಭಿಕ್ಷೆ ಬೇಡುವುದಕ್ಕೂ ಶುರು ಮಾಡಿದ್ರಾ ಎಂಬ ಪ್ರಶ್ನೆಗಳನ್ನು ನೆಟ್ಟಿಗರು ಕೇಳುತ್ತಿದ್ದಾರೆ.

  • Ramanagara| ರೈಲಿಗೆ ತಲೆಕೊಟ್ಟು ಬಿ.ಇ ಪದವೀಧರ ಆತ್ಮಹತ್ಯೆ

    Ramanagara| ರೈಲಿಗೆ ತಲೆಕೊಟ್ಟು ಬಿ.ಇ ಪದವೀಧರ ಆತ್ಮಹತ್ಯೆ

    ರಾಮನಗರ: ರೈಲಿಗೆ (Train) ತಲೆಕೊಟ್ಟು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರ (Ramanagara) ರೈಲ್ವೆ ನಿಲ್ದಾಣದ ಸಮೀಪ ನಡೆದಿದೆ.

    ಬೆಂಗಳೂರಿನ ನಾಗರಬಾವಿ ಮೂಲದ ಬಿ.ಇ ಪದವೀಧರ (B.E Graduate) ಯುವಕ ಮಧು (23) ಆತ್ಮಹತ್ಯೆ ಮಾಡಿಕೊಂಡ ಯುವಕ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಧು, ಬುಧವಾರ ರಾತ್ರಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಇದನ್ನೂ ಓದಿ: ಉಕ್ಕು ಕ್ಷೇತ್ರದಲ್ಲಿ ಹಸಿರು ಕ್ರಾಂತಿ – ಪ್ರಧಾನಿ ಮೋದಿ ಕನಸು ಅನಾವರಣಗೊಳಿಸಿದ ಹೆಚ್‌ಡಿಕೆ 

    ರೈಲು ಹರಿದ ರಭಸಕ್ಕೆ ಯುವಕನ ದೇಹ ಛಿದ್ರ ಛಿದ್ರವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಬಳಿಕ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಒಂದು ದೇಶ, ಒಂದು ಚುನಾವಣೆ ಮಸೂದೆಗೆ ಮೋದಿ ಸಂಪುಟ ಅನುಮೋದನೆ

  • ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ – 45 ದಿನಗಳಲ್ಲಿ 13,000 ರೈಲುಗಳ ಸಂಚಾರ

    ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ – 45 ದಿನಗಳಲ್ಲಿ 13,000 ರೈಲುಗಳ ಸಂಚಾರ

    – ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ

    ಲಕ್ನೋ: ಜನವರಿ 13ರಿಂದ ಫೆಬ್ರವರಿ 26ರವರೆಗೆ ಪ್ರಯಾಗ್‌ರಾಜ್‌ನಲ್ಲಿ (Prayagraj) ಮಹಾ ಕುಂಭಮೇಳ (Maha Kumbh Mela) ನಡೆಯಲಿದೆ. ಈ ಹಿನ್ನೆಲೆ ಭಕ್ತರಿಗೆ ಸ್ಥಳಾವಕಾಶ ಕಲ್ಪಿಸಲು 3,000 ವಿಶೇಷ ರೈಲುಗಳನ್ನು ಒಳಗೊಂಡಂತೆ 45 ದಿನಗಳಲ್ಲಿ ಒಟ್ಟು 13,000 ರೈಲುಗಳು (Train) ಕಾರ್ಯ ನಿರ್ವಹಿಸಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

    ಮಹಾಕುಂಭ ಮೇಳದ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಮಹಾ ಕುಂಭಕ್ಕಾಗಿ ನಾಲ್ಕು ರಿಂಗ್ ರೈಲ್ ಸರ್ಕಲ್‌ಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ವಾರಣಾಸಿ-ಪ್ರಯಾಗ್‌ರಾಜ್, ಪ್ರಯಾಗ್‌ರಾಜ್-ಅಯೋಧ್ಯೆ, ಅಯೋಧ್ಯೆ-ಕಾಶಿ ಮತ್ತು ಪ್ರಯಾಗ್‌ರಾಜ್ ಸರ್ಕಲ್ ಸೇರಿವೆ. ದೇಶದ ವಿವಿಧ ರಾಜ್ಯಗಳ 50 ನಗರಗಳಿಂದ ಪ್ರಯಾಗ್‌ರಾಜ್‌ಗೆ ವಿಶೇಷ ರೈಲುಗಳು ಕಾರ್ಯನಿರ್ವಹಿಸಲಿದೆ ಎಂದರು. ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ನೇಣಿಗೆ ಶರಣಾದ 10ರ ಬಾಲಕ

     

    ಮಹಾ ಕುಂಭಮೇಳದ ಅವಧಿಯಲ್ಲಿ 18,000 ಆರ್‌ಪಿಎಫ್ ಮತ್ತು ಜಿಆರ್‌ಪಿ ಯೋಧರನ್ನು ನಿಯೋಜಿಸಲಾಗಿದೆ. ಇದರಲ್ಲಿ ಆರ್‌ಪಿಎಫ್ ಯೋಧರ ಸಂಖ್ಯೆ 8,000 ಮತ್ತು ಜಿಆರ್‌ಪಿ ಸೈನಿಕರ ಸಂಖ್ಯೆ 10,000 ಇರಲಿದೆ. ಇದಲ್ಲದೇ ದೇಶಾದ್ಯಂತ 13,000 ರೈಲ್ವೆ ಅಧಿಕಾರಿಗಳು ಮತ್ತು ನೌಕರರನ್ನು ಇಲ್ಲಿಗೆ ನಿಯೋಜಿಸಲಾಗುತ್ತಿದೆ. ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ ದಕ್ಷಿಣ ಭಾರತ, ಪಂಜಾಬಿ, ಬೆಂಗಾಲಿ, ಮರಾಠಿ, ಗುಜರಾತಿ ಇತ್ಯಾದಿ ಮಾತನಾಡಬಲ್ಲ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕೊನೆಗೂ ಪಂಚಮಸಾಲಿ ಹೋರಾಟಕ್ಕೆ ಬೆಳಗಾವಿ ಜಿಲ್ಲಾಡಳಿತ ಅನುಮತಿ

    ಇನ್ನು ಪ್ರಯಾಗ್‌ರಾಜ್‌ನಲ್ಲಿ ಮೊದಲ ಬಾರಿಗೆ ಮೊಬೈಲ್ ಅನ್ ರಿಸರ್ವ್ಡ್ ಟಿಕೆಟ್ ಸಿಸ್ಟಂ (UTS) ಅನ್ನು ಪರಿಚಯಿಸಲಾಗಿದೆ. ಇದಕ್ಕೂ ಮೊದಲು ಪುರಿಯಲ್ಲಿ ರಥಯಾತ್ರೆಯ ಸಮಯದಲ್ಲಿ ಈ ಸಿಸ್ಟಂ ಅನ್ನು ಬಳಸಲಾಗಿತ್ತು. ಮಹಾ ಕುಂಭದ ಸಿದ್ಧತೆಗಾಗಿ ಕಳೆದ 2 ವರ್ಷಗಳಿಂದ 5,000 ಕೋಟಿ ರೂ.ಗೂ ಹೆಚ್ಚು ಹಣವನ್ನು ಬಳಸಲಾಗಿದೆ ಎಂದು ಅಶ್ವಿನಿ ವೈಷ್ಣವ್ (Ashwini Vaishnaw) ತಿಳಿಸಿದ್ದಾರೆ. ಇದನ್ನೂ ಓದಿ: ಕಾರ್ಮಿಕರ ಮೇಲೆ ಕಾಡಾನೆ ದಾಳಿ – ನಾಲ್ವರಿಗೆ ಗಾಯ