Tag: ರೈಲು ನಿಲ್ದಾಣ

  • ರೈಲಿಗೂ ಲಗೇಜ್ ಪಾಲಿಸಿ – ಲಗೇಜ್‌ ಮಿತಿ ಎಷ್ಟು? ಪಾವತಿ ಮಾಡಬೇಕಾದ ಹಣ ಎಷ್ಟು?

    ರೈಲಿಗೂ ಲಗೇಜ್ ಪಾಲಿಸಿ – ಲಗೇಜ್‌ ಮಿತಿ ಎಷ್ಟು? ಪಾವತಿ ಮಾಡಬೇಕಾದ ಹಣ ಎಷ್ಟು?

    – ಟಿಕೆಟ್‌ಗೆ ಅನುಸಾರವಾಗಿ ಲಗೇಜ್‌ ಪ್ರಮಾಣ ನಿಗದಿ
    – ಆದಾಯ ಹೆಚ್ಚಳಕ್ಕೆ ರೈಲ್ವೆ ಇಲಾಖೆ ಪ್ಲ್ಯಾನ್‌

    ಬೆಂಗಳೂರು: ಬೇರೊಂದು ಊರಿಗೆ ಪ್ರಯಾಣ ಮಾಡಬೇಕು ಅಂದುಕೊಂಡಿರುವವರು ಹೆಚ್ಚಾಗಿ ಅಗ್ಗದ ಮತ್ತು ಆರಾಮದಾಯಕವಾದ ರೈಲು ಪ್ರಯಾಣವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ರೈಲಿನಲ್ಲಿ ಪ್ರಯಾಣ ಮಾಡುವಾಗ ಹಲವಾರು ವಸ್ತುಗಳನ್ನು, ಲಗೇಜ್‌ಗಳನ್ನು ಹೊತ್ತೊಯ್ಯಬಹುದಾಗಿತ್ತು. ಆದ್ರೆ ಈಗ ಅದಕ್ಕೆ ಭಾರತೀಯ ರೈಲ್ವೆ (Indian Railways) ಇಲಾಖೆ ಬ್ರೇಕ್‌ ನೀಡಲು ಮುಂದಾಗಿದೆ.

    ಯೆಸ್‌. ಆದಾಯ ಹೆಚ್ಚಳಕ್ಕೆ ಮುಂದಾಗಿರುವ ಭಾರತೀಯ ರೈಲ್ವೆ ಇಲಾಖೆ ಶೀಘ್ಯದಲ್ಲೇ ಹೊಸ ರೂಲ್ಸ್‌ ಜಾರಿಗೊಳಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಅದರಂತೆ ಇನ್ಮುಂದೆ ರೈಲಿನಲ್ಲಿ ಪ್ರಯಾಣಿಸುವಾಗ ಹೆಚ್ಚುವರಿ ಲಗೇಜ್‌ಗೆ ಹೆಚ್ಚುವರಿ ಮೊತ್ತವನ್ನ ಪಾವತಿಸಬೇಕಾಗುತ್ತದೆ. ವಿಮಾನಗಳ ಮಾದರಿಯಲ್ಲಿಯೇ ರೈಲಿನಲ್ಲೂ ಲಗೇಜ್‌ ಸಾಗಿಸುವಂತೆ ಮಾಡಲು ರೈಲ್ವೆ ಇಲಾಖೆ ಈ ನಿಮಯ ಜಾರಿಗೆ ತರಲು ಮುಂದಾಗಿದೆ. ಕೋಚ್‌ ಶ್ರೇಣಿಗಳ ಆಧಾರದ ಮೇಲೆ ಹೆಚ್ಚುವರಿ ಲಗೇಜ್‌ಗೆ ಹೆಚ್ಚುವರ ದರ ನಿಗಡಿ ಮಾಡಲಿದೆ. ಹಾಗಾದರೆ ಎಷ್ಟು ಕೆ.ಜಿ ಲಗೇಜ್‌ಗೆ ಎಷ್ಟು ಹಣ ಪಾವತಿ ಮಾಡಬೇಕು ಗೊತ್ತಾ? ಮುಂದೆ ಓದಿ…

    AI Image
    AI Image

    ಹೊಸ ನಿಯಮಗಳ ಪ್ರಕಾರ, ಎಸಿ ಮೊದಲನೇ ದರ್ಜೆಯಲ್ಲಿ 70 ಕೆ.ಜಿ, ಎಸಿ ಎರಡನೇ ದರ್ಜೆಯಲ್ಲಿ 50 ಕೆ.ಜಿ, ಎಸಿ ಮೂರನೇ ದರ್ಜೆ ಹಾಗೂ ಸ್ಲೀಪರ್ ಕೋಚ್‌ನಲ್ಲಿ 40 ಕೆ.ಜಿಗೆ ಅವಕಾಶವಿರುತ್ತದೆ. ಟಿಕೆಟ್‌ಗೆ ಅನುಗುಣವಾಗಿ ಲಗೇಜ್‌ಗೆ ದರ ನಿಗದಿ ಮಾಡಲಾಗುತ್ತದೆ. ನಿಯಮಿತಕ್ಕಿಂತಲೂ ಹೆಚ್ಚಿನ ತೂಕದ ಲಗೇಜ್‌ ಇದ್ದರೆ, ಉಳಿದ ಲಗೇಜ್‌ಗೆ ಹೆಚ್ಚುವರು ಹಣ ಪಾವತಿ ಮಾಡಬೇಕಾಗುತ್ತದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

    ಇದಕ್ಕಾಗಿ ನಿಲ್ದಾಣದಲ್ಲಿ ಎಲೆಕ್ಟ್ರಾನಿಕ್ ವೇಯ್ಟ್‌ ಚೆಕಿಂಗ್‌ ಮಿಷಿನ್ ಕೂಡ ಇರಿಸಲಾಗುತ್ತದೆ. ಇದರಲ್ಲಿ ಲಗೇಜ್‌ ತೂಕ ಪರಿಶೀಲಿಸಿದ ಬಳಿಕವೇ ರೈಲು ಪ್ರಯಾಣಕ್ಕೆ ಅವಕಾಶ ಇರಲಿದೆ. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಉತ್ತರ ಪ್ರದೇಶದ ಪ್ರಯಾಗ್ ರಾಜ್ ರೈಲ್ವೆ ನಿಲ್ದಾಣದಲ್ಲಿ ಜಾರಿಗೆ ತರಲು ಚಿಂತನೆ ನಡೆಸಲಾಗಿದ್ದು, ಬಳಿಕ ದೇಶಾದ್ಯಂತ ರೈಲು ನಿಲ್ದಾಣದಲ್ಲಿ ಈ ನಿಯಮವನ್ನು ಜಾರಿಗೊಳಿಸಲಾಗುತ್ತದೆ.

  • ಏರ್‌ಪೋರ್ಟ್ ಮಾದರಿಯಲ್ಲೇ ಇನ್ಮುಂದೆ ರೈಲಿಗೂ ಲಗೇಜ್ ಪಾಲಿಸಿ

    ಏರ್‌ಪೋರ್ಟ್ ಮಾದರಿಯಲ್ಲೇ ಇನ್ಮುಂದೆ ರೈಲಿಗೂ ಲಗೇಜ್ ಪಾಲಿಸಿ

    – ಪ್ರಯಾಗರಾಜ್, ಕಾನ್ಪುರ, ಮಿರ್ಜಾಪುರ್, ಅಲೀಗಢ ರೈಲು ನಿಲ್ದಾಣದಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ನಿರ್ಧಾರ

    ನವದೆಹಲಿ: ವಿಮಾನ ನಿಲ್ದಾಣಗಳಲ್ಲಿ ಪಾಲಿಸುವಂತೆ ಇದೀಗ ರೈಲು ನಿಲ್ದಾಣಗಳಲ್ಲಿಯೂ ಕೂಡ ಲಗೇಜ್ ಬ್ಯಾಗ್‌ಗೆ ನಿಯಮಗಳನ್ನು ಜಾರಿಗೆ ತರಲು ಭಾರತೀಯ ರೈಲ್ವೆ ನಿರ್ಧರಿಸಿದೆ.

    ಮೂಲಗಳ ಪ್ರಕಾರ, ಪ್ರಯಾಣಿಕರು ತಮ್ಮ ಲಗೇಜ್‌ನ್ನು ರೈಲ್ವೆ ಪ್ಲಾಟ್‌ಫಾರ್ಮ್‌ಗೆ ತೆಗೆದುಕೊಂಡು ಹೋಗುವ ಮುನ್ನ ಎಲೆಕ್ಟಾನಿಕ್ ತೂಕ ಮಾಡುವ ಯಂತ್ರದಲ್ಲಿ ಚೆಕ್ ಮಾಡಿಸಿಕೊಂಡು ಹೋಗಬೇಕು. ರೈಲ್ವೆ ಇಲಾಖೆಯಿಂದ ನಿಗದಿಗೊಳಿಸಿದ ತೂಕದ ಮಿತಿಯಲ್ಲಿಯೇ ಲಗೇಜ್‌ಗಳನ್ನು ಕೊಂಡೊಯ್ಯಬೇಕು. ಒಂದು ವೇಳೆ ನಿಗದಿತ ತೂಕ್ಕಕಿಂತ ಹೆಚ್ಚಾದಾಗ ಅಥವಾ ಕಡಿಮೆ ತೂಕದ ದೊಡ್ಡ ಸಾಮಾನುಗಳನ್ನು ಕೊಂಡೊಯ್ಯುವುದಾದರೆ ದಂಡ ಪಾವತಿಸಬೇಕಾಗುತ್ತದೆ ಎಂದು ತಿಳಿದು ಬಂದಿದೆ.ಇದನ್ನೂ ಓದಿ: ಬಿಬಿಎಂಪಿಯ ಪಂಚ ಪಾಲಿಕೆಗೆ ಆಯುಕ್ತರ ನೇಮಕ – ಗ್ರೇಟರ್ ಬೆಂಗಳೂರು ತಿದ್ದುಪಡಿ ವಿಧೇಯಕ ಅಂಗೀಕಾರ

    ರೈಲಿನಲ್ಲಿ ಕೊಂಡೊಯ್ಯುವ ತೂಕದ ಮಿತಿಯು ರೈಲಿನ ದರ್ಜೆಗಳ ಅನುಸಾರವಾಗಿ ಬದಲಾಗುತ್ತದೆ. ಎಸಿ ಮೊದಲನೇ ದರ್ಜೆಯಲ್ಲಿ 70 ಕೆ.ಜಿ, ಎಸಿ ಎರಡನೇ ದರ್ಜೆಯಲ್ಲಿ 50 ಕೆ.ಜಿ, ಎಸಿ ಮೂರನೇ ದರ್ಜೆ ಹಾಗೂ ಸ್ಲೀಪರ್ ಕೋಚ್‌ನಲ್ಲಿ 40 ಕೆ.ಜಿಗೆ ಅವಕಾಶವಿರುತ್ತದೆ. ಇನ್ನುಳಿದಂತೆ ಸಾಮಾನ್ಯ ದರ್ಜೆಯಲ್ಲಿ 35 ಕೆ.ಜಿ ಕೊಂಡೊಯ್ಯಬಹುದಾಗಿದೆ.

    ಇನ್ನೂ ಕೆಲವು ಪುನರ್ ಅಭಿವೃದ್ಧಿಗೊಂಡ ರೈಲ್ವೆ ನಿಲ್ದಾಣಗಳಲ್ಲಿ ಮಳಿಗೆಗಳನ್ನು ತೆರೆಯಲು ನಿರ್ಧರಿಸಿದೆ. ಬಟ್ಟೆ, ಪಾದರಕ್ಷೆ, ಎಲೆಕ್ಟಾನಿಕ್ಸ್‌ ಉಪಕರಣಗಳು ಸೇರಿದಂತೆ ಪ್ರಯಾಣಿಕರಿಗೆ ಅನೂಕೂಲವಾಗುವಂತಹ ವಸ್ತುಗಳು ನಿಲ್ದಾಣಗಳಲ್ಲಿಯೇ ಸಿಗಬೇಕು ಹಾಗೂ ಈ ಮೂಲಕ ರೈಲ್ವೆ ಆದಾಯವೂ ಹೆಚ್ಚಾಗುತ್ತದೆ ಎಂಬ ಉದ್ದೇಶದೊಂದಿಗೆ ಈ ನಿರ್ಧಾರ ಕೈಗೊಂಡಿದೆ. ಜೊತೆಗೆ ಇದರಿಂದ ರೈಲು ನಿರ್ಧಾರವೂ ವಿಮಾನ ನಿಲ್ದಾಣದ ಅನುಭವ ನೀಡುತ್ತದೆ.

    ಆರಂಭದಲ್ಲಿ ಪ್ರಯಾಗ್‌ರಾಜ್ ಜಂಕ್ಷನ್, ಪ್ರಯಾಗರಾಜ್ ಛೋಕಿ, ಸುಬೇದರ್‌ಗಂಜ್, ಕಾನ್ಪುರ್ ಸೆಂಟ್ರಲ್, ಮಿರ್ಜಾಪುರ, ತುಂಡ್ಲಾ, ಅಲಿಗಢ್ ಜಂಕ್ಷನ್, ಗೋವಿಂದಪುರಿ ಮತ್ತು ಇಟಾವಾ ಸೇರಿದಂತೆ ಎನ್‌ಸಿಆರ್ ವಲಯದ ಅಡಿಯಲ್ಲಿ ಬರುವ ರೈಲು ನಿಲ್ದಾಣಗಳಲ್ಲಿ ಈ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಪ್ರಯಾಣಿಕರು ತಮ್ಮ ಲಗೇಜ್‌ಗಳನ್ನು ತೂಕ ಮಾಡಿಸಿದ ನಂತರವೇ ಪ್ಲಾಟ್‌ಫಾರ್ಮ್‌ಗೆ ತೆರಳಲು ಅನುಮತಿಯಿರುತ್ತದೆ.

    ಇನ್ನೂ ಪ್ರಯಾಣಿಕರ ಬಳಿ ಟಿಕೆಟ್ ಇದ್ದರೆ ಮಾತ್ರ ಪ್ಲಾಟ್‌ಫಾರ್ಮ್‌ಗೆ ತೆರಳಬಹುದು, ಪ್ರಯಾಣಿಕರಲ್ಲದೇ ಇದ್ದರೆ ಪ್ಲಾಟ್‌ಫಾರ್ಮ್ ಟಿಕೆಟ್ ಇರಲೇಬೇಕು ಎಂದು ರೈಲ್ವೆ ಇಲಾಖೆ ತಿಳಿಸಿದ್ದು, 2026ರ ಡಿಸೆಂಬರ್‌ನಿಂದು ಇದು ಅನ್ವಯಿಸಲಿದೆ ಎಂದು ಮಾಹಿತಿ ನೀಡಿದೆ.ಇದನ್ನೂ ಓದಿ: ಅಪ್ಪುಗೆ ಮಾಡಿದ ದ್ವಿತ್ವ ಕಥೆ ವೆಬ್ ಸಿರೀಸ್ ಆಗಲಿದೆ: ಪವನ್‌ಕುಮಾರ್

    +

  • 3ಡಿ ಪ್ರಿಂಟ್ ತಂತ್ರಜ್ಞಾನ ಬಳಸಿ 6 ಗಂಟೆಯಲ್ಲಿ ರೈಲು ನಿಲ್ದಾಣ ನಿರ್ಮಿಸಿದ ಜಪಾನ್

    3ಡಿ ಪ್ರಿಂಟ್ ತಂತ್ರಜ್ಞಾನ ಬಳಸಿ 6 ಗಂಟೆಯಲ್ಲಿ ರೈಲು ನಿಲ್ದಾಣ ನಿರ್ಮಿಸಿದ ಜಪಾನ್

    ಟೋಕಿಯೊ: ಕೇವಲ 6 ಗಂಟೆಗಳಲ್ಲಿ 3ಡಿ-ಪ್ರಿಂಟ್‌ ತಂತ್ರಜ್ಞಾನ ಬಳಸಿ ರೈಲು ನಿಲ್ದಾಣವನ್ನು ಜಪಾನ್‌ ನಿರ್ಮಿಸಿದೆ. ವಿಶ್ವದಲ್ಲೇ ಮೊದಲ ಬಾರಿಗೆ ಹೊಸ ಸಾಹಸವನ್ನು ಜಪಾನ್‌ (Japan) ಮಾಡಿದೆ.

    ರೈಲು ಮೂಲಸೌಕರ್ಯ ನಾವೀನ್ಯತೆಯಲ್ಲಿ ಮಹತ್ವದ ಹೆಜ್ಜೆ ಇದಾಗಿದೆ. 1948 ರ ಹಿಂದಿನ ಹಳೆಯ ಮರದ ರಚನೆಯನ್ನು ಬದಲಾಯಿಸಿ, ಹೊಸ ಹಟ್ಸುಶಿಮಾ ನಿಲ್ದಾಣ ನಿರ್ಮಿಸಲಾಯಿತು. 2018 ರಿಂದಲೂ ಈ ನಿಲ್ದಾಣವು ಪ್ರತಿದಿನ ಸುಮಾರು 530 ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿದೆ.

    ಐತಿಹಾಸಿಕ ನಿರ್ಮಾಣವನ್ನು ವೀಕ್ಷಿಸಲು ನೂರಾರು ಸಂಖ್ಯೆಯಲ್ಲಿ ಸ್ಥಳೀಯರು ಜಮಾಯಿಸಿದ್ದರು. ಅಂತಿಮ ರೈಲು ರಾತ್ರಿ 11:57 ಕ್ಕೆ ಹೊರಟ ನಂತರ ಕಾರ್ಮಿಕರು ನಿರ್ಮಾಣ ಕೆಲಸ ಆರಂಭಿಸಿದರು. ಕೆಲವೇ ಗಂಟೆಗಳಲ್ಲಿ ನಿರ್ಮಾಣ ಕಾರ್ಯ ಮುಗಿಸಿದರು. 100 ಚದರ ಅಡಿಗಳಿಗಿಂತ ಸ್ವಲ್ಪ ಹೆಚ್ಚು ಅಳತೆಯ ಮುಖ್ಯ ರಚನೆಯನ್ನು ಮರುದಿನ ಬೆಳಗ್ಗೆ 5:45 ಕ್ಕೆ ಮೊದಲ ರೈಲು ಬರುವ ಮುನ್ನ ಪೂರ್ಣಗೊಳಿಸಿದರು.

    ಕಟ್ಟಡ ಪೂರ್ಣವಾಗಿ ನಿರ್ಮಾಣವಾಗಿದೆ. ಐಸಿ ಕಾರ್ಡ್ ರೀಡರ್‌ ಅಳವಡಿಕೆಯ ಸಣ್ಣಪುಟ್ಟ ಕೆಲಸಗಳಿವೆ. ನಿಲ್ದಾಣವು ಜುಲೈನಲ್ಲಿ ಪ್ರಯಾಣಿಕರಿಗೆ ಮುಕ್ತವಾಗುವ ನಿರೀಕ್ಷೆಯಿದೆ.

  • ಪ್ಲಾಟ್‌ಫಾರ್ಮ್‌, ರೈಲು ಹೆಸರಿನಲ್ಲಿ ಉಂಟಾದ ಗೊಂದಲವೇ ಕಾಲ್ತುಳಿತಕ್ಕೆ ಕಾರಣ: ದೆಹಲಿ ಪೊಲೀಸ್‌

    ಪ್ಲಾಟ್‌ಫಾರ್ಮ್‌, ರೈಲು ಹೆಸರಿನಲ್ಲಿ ಉಂಟಾದ ಗೊಂದಲವೇ ಕಾಲ್ತುಳಿತಕ್ಕೆ ಕಾರಣ: ದೆಹಲಿ ಪೊಲೀಸ್‌

    – ಉನ್ನತಮಟ್ಟದ ಸಮಿತಿಯಿಂದ ತನಿಖೆ ಶುರು

    ನವದೆಹಲಿ: ಕೊನೇ ಕ್ಷಣದಲ್ಲಿ ಪ್ಲಾಟ್‌ಫಾರ್ಮ್‌ ಹಾಗೂ ರೈಲು ಹೆಸರಿನಲ್ಲಿ ಉಂಟಾದ ಗೊಂದಲವೇ ಕಾಲ್ತುಳಿತಕ್ಕೆ ಕಾರಣವಾಗಿರಬಹುದು ಎಂದು ಹಿರಿಯ ದೆಹಲಿ ಪೊಲೀಸ್‌ (Delhi Police) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ನವದೆಹಲಿ ರೈಲು ನಿಲ್ದಾಣದ (Delhi Railway Station) ಪ್ಲಾಟ್‌ಫಾರ್ಮ್ ಸಂಖ್ಯೆ 13 ಮತ್ತು 14 ಜನದಟ್ಟಣೆಯಿಂದ ಕೂಡಿತ್ತು. ಅನೇಕ ಜನರು ಎರಡು ರೈಲುಗಳನ್ನು ಹತ್ತಲು ಕಾಯುತ್ತಿದ್ದರು. ಮಾಗ್ಧ್ ಎಕ್ಸ್‌ಪ್ರೆಸ್‌ ಮತ್ತು ಜಮ್ಮು ಕಡೆಗೆ ಹೋಗುವ ಇನ್ನೊಂದು ರೈಲು ವಿಳಂಬವಾಯಿತು. ಈ ಮಧ್ಯೆ, ಮಹಾ ಕುಂಭಕ್ಕಾಗಿ ವಿಶೇಷ ರೈಲು, ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್‌, ರಾತ್ರಿ 10:10ಕ್ಕೆ ಪ್ಲಾಟ್‌ಫಾರ್ಮ್ ಸಂಖ್ಯೆ 14 ರಿಂದ ಹೊರಡಬೇಕಿತ್ತು. ಪ್ರಯಾಗ್‌ರಾಜ್‌ಗೆ ರೈಲು (Prayagraj Express Train) ಹೋಗುವ ಸಮಯ ಹತ್ತಿರವಾಗುತ್ತಿದ್ದಂತೆ, ಹೆಚ್ಚು ಹೆಚ್ಚು ಜನರು ಪ್ಲಾಟ್‌ಫಾರ್ಮ್‌ಗೆ ಧಾವಿಸಲು ಪ್ರಾರಂಭಿಸಿದರು. ಇದು ಜನದಟ್ಟಣೆಯನ್ನು ಹೆಚ್ಚಿಸಿತು ಎಂದು ಅಧಿಕಾರಿ ಹೇಳಿದ್ದಾರೆ.

    ಪ್ಲಾರ್ಟ್‌ಫಾರ್ಮ್‌ನಲ್ಲಿ ಗೊಂದಲ:
    ಪ್ಲಾಟ್‌ಫಾರ್ಮ್ 16ಕ್ಕೆ ಪ್ರಯಾಗ್‌ರಾಜ್ ವಿಶೇಷ ಆಗಮಿಸಲಿದೆ ಎಂಬ ರೈಲ್ವೆ ಸಿಬ್ಬಂದಿಯ ಘೋಷಣೆ ಜನರ ಗೊಂದಲಕ್ಕೆ ಕಾರಣವಾಯಿತು. ಇದರಿಂದ ಕಾಲ್ತುಳಿತ ಸಂಭವಿಸಿದೆ ಎಂದು ದೆಹಲಿ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಶಾಶ್ವತ ರಸ್ತೆಗಾಗಿ ವೈಟ್ ಟ್ಯಾಪಿಂಗ್ ಯೋಜನೆ: ಡಿಕೆಶಿ

    ಏಕೆಂದರೆ ಪ್ರಯಾಗರಾಜ್ ಎಕ್ಸ್‌ಪ್ರೆಸ್ ವಿಶೇಷ ರೈಲು ಆಗಲೇ ಪ್ಲಾಟ್‌ಫಾರ್ಮ್ 14 ರಲ್ಲಿತ್ತು. ಈ ವೇಳೆ 16ನೇ ಪ್ಲಾಟ್‌ಫಾರ್ಮ್‌ಗೆ ತಲುಪಲಿದೆ ಎಂಬ ಘೋಷಣೆಯೊಂದು ಹೊರಬಿದ್ದಿತು. ಪ್ಲಾಟ್‌ಫಾರ್ಮ್ 14 ರಲ್ಲಿ ತಮ್ಮ ರೈಲನ್ನು ತಲುಪಲು ಸಾಧ್ಯವಾಗದ ಜನರು 16ಕ್ಕೆ ಆಗಮಿಸುತ್ತಿದೆ ಎಂದು ಭಾವಿಸಿ ಅತ್ತ ನುಗ್ಗಲು ಪ್ರಾರಂಭಿಸಿದ್ರು. ಇದರಿಂದಾಗಿ ಕಾಲ್ತುಳಿತ ಸಂಭವಿಸಿರಬಹುದು ಎಂದು ಹೇಳಿದ್ದಾರೆ.

    ಘಟನೆಯ ಕುರಿತು ತನಿಖೆ ನಡೆಸಲು ರೈಲ್ವೆಯು ಇಬ್ಬರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ಕೂಡ ರಚಿಸಿದೆ. ಉತ್ತರ ರೈಲ್ವೆಯ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ನರಸಿಂಗ್ ದೇವು ಮತ್ತು ಉತ್ತರ ರೈಲ್ವೆಯ ಪ್ರಧಾನ ಮುಖ್ಯ ಭದ್ರತಾ ಆಯುಕ್ತ ಪಂಕಜ್ ಗಂಗ್ವಾರ್ ಸಮಿತಿಯ ಭಾಗವಾಗಿದ್ದಾರೆ. ತನಿಖೆ ಆರಂಭಿಸಿರುವ ಸಮಿತಿಯು, ನವದೆಹಲಿ ರೈಲು ನಿಲ್ದಾಣದ ಎಲ್ಲಾ ವಿಡಿಯೋ ತುಣುಕನ್ನು ಪಡೆದುಕೊಳ್ಳಲು ಆದೇಶ ನೀಡಿದೆ. ಇದನ್ನೂ ಓದಿ: ಮುಂಬೈ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ – ಇಬ್ಬರು ಕಾರ್ಮಿಕರು ಸಜೀವ ದಹನ

    ನಿನ್ನೆ ರಾತ್ರಿ ನವದೆಹಲಿ ರೈಲು ನಿಲ್ದಾಣದಲ್ಲಿ ಎರಡು ರೈಲುಗಳು ವಿಳಂಬವಾಗಿ ಬಂದ ಕಾರಣ ಮತ್ತು ಮಹಾ ಕುಂಭಮೇಳಕ್ಕೆ ತೆರಳಲು ವಿಶೇಷ ಎಕ್ಸ್ಪ್ರೆಸ್ ರೈಲು ಸಂಚಾರ ವಿಳಂಬವಾದ ಪರಿಣಾಮ ಕಾಲ್ತುಳಿತ ಉಂಟಾಯಿತು. ಪರಿಣಾಮ 11 ಮಹಿಳೆಯರು ಮತ್ತು ಐದು ಮಕ್ಕಳು ಸೇರಿದಂತೆ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: 422 ವಸ್ತುಗಳನ್ನು ಗುರುತಿಸಿ, ನೊಬೆಲ್ ವರ್ಲ್ಡ್ ರೆಕಾರ್ಡ್ ಪುಟ ಸೇರಿದ 9 ತಿಂಗಳ ಐರಾ

  • ದೀಪಾವಳಿ ಹಬ್ಬಕ್ಕೆಂದು ಊರಿಗೆ ತೆರಳುವಾಗ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ – 10 ಮಂದಿಗೆ ಗಾಯ

    ದೀಪಾವಳಿ ಹಬ್ಬಕ್ಕೆಂದು ಊರಿಗೆ ತೆರಳುವಾಗ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ – 10 ಮಂದಿಗೆ ಗಾಯ

    ಮುಂಬೈ: ಮುಂಬೈನ ಬಾಂದ್ರಾ ಟರ್ಮಿನಸ್‌ನಲ್ಲಿಂದು (Bandra Terminus) ಭಾರಿ ಕಾಲ್ತುಳಿತ (Stampede) ಸಂಭವಿಸಿ, 10 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಗಂಭಿರವಾಗಿದೆ ಎಂದು ವರದಿಯಾಗಿದೆ.

    ಪ್ರಯಾಣಿಕರ ಓಡಾಟದ ವೇಳೆ ಗೋರಖ್‌ಪುರಕ್ಕೆ ತೆರಳುತ್ತಿದ್ದ ಬಾಂದ್ರಾ-ಗೋರಖ್‌ಪುರ ಅಂತ್ಯೋದಯ ಎಕ್ಸ್‌ಪ್ರೆಸ್‌ (Bandra-Gorakhpur Antyodaya Express) ರೈಲು ಹತ್ತಲು ಜನ ಏಕಾಏಕಿ ಮುಗಿಬಿದ್ದಾಗ ಘಟನೆ ಸಂಭವಿಸಿದೆ ಎಂದು ಸ್ಥಳೀಯ ಪೊಲೀಸ್‌ ಹಾಗೂ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ಮುಂಜಾನೆ 2:45ರ ಸುಮಾರಿಗೆ ಘಟನೆ ನಡೆದಿದ್ದು, ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ (Social Media) ವೈರಲ್‌ ಆಗಿದೆ. ಈ ಬೆನ್ನಲ್ಲೇ ರೈಲು ನಿಲ್ದಾಣದ ಅವ್ಯವಸ್ಥೆ ವಿರುದ್ಧ ಜನ ಆಕ್ರೋಶ ಹೊರಹಾಕಿದ್ದಾರೆ.

    ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿ ಮತ್ತು ಸ್ಥಳೀಯ ಪ್ರಯಾಣಿಕರು ಗಾಯಾಳುಗಳನ್ನ ತಕ್ಷಣವೇ ಭಾಭಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: Lucknow | 10 ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ – 46 ಲಕ್ಷಕ್ಕೆ ಬೇಡಿಕೆ

    ಮುಂಬರುವ ದೀಪಾವಳಿ ಮತ್ತು ಪ್ರಸಿದ್ಧ ಛಾತ್ ಹಬ್ಬದ ಹಿನ್ನೆಲೆ ಜನ ತಮ್ಮ ಊರುಗಳಿಗೆ ತೆರಳುತ್ತಿದ್ದರು. ಬಾಂದ್ರಾ ಟರ್ಮಿನಸ್‌ನಲ್ಲಿ ತಮ್ಮ ಊರುಗಳಿಗೆ ತೆರಳಲು ಜನ ಕಿಕ್ಕಿರಿದಿದ್ದರು. ರೈಲು ಪ್ಲಾಟ್‌ಫಾರ್ಮ್‌ಗೆ ಬರುತ್ತಿದ್ದಂತೆ ಸೀಟು ಕಾಯ್ದಿರಿಸಿದ್ದ ಪ್ರಯಾಣಿಕರು ರೈಲು ಹತ್ತಲು ಮುಂದಾದರು, ಇದೇ ವೇಳೆ ಪ್ಲಾಟ್‌ಫಾರಂನಲ್ಲಿದ್ದ ಎಲ್ಲ ಪ್ರಯಾಣಿಕರು ಸೀಟು ಹಿಡಿದುಕೊಳ್ಳಲು ಆತುರದಲ್ಲಿ ರೈಲು ಹತ್ತಲು ಮುಗಿಬಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.

    22 ಬೋಗಿಗಳನ್ನು ಹೊಂದಿರುವ ಬಾಂದ್ರಾ-ಗೋರಖ್‌ಪುರ ಅಂತ್ಯೋದಯ ಎಕ್ಸ್‌ಪ್ರೆಸ್‌ ರೈಲು ಭಾನುವಾರ ಮುಂಜಾನೆ 2:45ರಕ್ಕೆ ನಿಲ್ದಾಣಕ್ಕೆ ಬಂದಿತ್ತು. ಮುಂಜಾನೆ 5.10ಕ್ಕೆ ಗೋರಖ್‌ಪುರಕ್ಕೆ ಹೊರಡಬೇಕಿತ್ತು. ಇದನ್ನೂ ಓದಿ: ಆದಷ್ಟು ಬೇಗ ದರ್ಶನ್ ಬಿಡುಗಡೆಯಾಗಲಿ: ಹಾಸನಾಂಬೆ ಸನ್ನಿಧಿಯಲ್ಲಿ ತರುಣ್ ಸುಧೀರ್ ಮಾತು

  • ತುಮಕೂರು ರೈಲು ನಿಲ್ದಾಣ ಮೇಲ್ದರ್ಜೆಗೇರಿಸಲು 88 ಕೋಟಿ ಅನುದಾನ: ವಿ.ಸೋಮಣ್ಣ

    ತುಮಕೂರು ರೈಲು ನಿಲ್ದಾಣ ಮೇಲ್ದರ್ಜೆಗೇರಿಸಲು 88 ಕೋಟಿ ಅನುದಾನ: ವಿ.ಸೋಮಣ್ಣ

    ತುಮಕೂರು: ನಗರದ ರೈಲು ನಿಲ್ದಾಣವನ್ನು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೇರಿಸಲು ₹88.41 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ (V Somanna) ತಿಳಿಸಿದ್ದಾರೆ.

    ರೈಲ್ವೆ ನಿಲ್ದಾಣವನ್ನು ( Railway Station) ಸಿದ್ದಗಂಗಾ ಮಠದ ಮಾದರಿಯ ವಾಸ್ತುಶಿಲ್ಪದ ವಿನ್ಯಾಸದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಬಹುಮಹಡಿ ಕಟ್ಟಡ, ಸುಸಜ್ಜಿತ ವಾಹನ ನಿಲುಗಡೆ ವ್ಯವಸ್ಥೆ, ಆಗಮನ- ನಿರ್ಗಮನಕ್ಕೆ ಪ್ರತ್ಯೇಕ ದ್ವಾರಗಳು, ಏರ್- ಕಾನ್‌ಕೋರ್ಸ್, ಲಿಫ್ಟ್, ಎಸ್ಕಲೇಟ‌ರ್, ವಾಣಿಜ್ಯ ಕಟ್ಟಡ ನಿರ್ಮಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೇಸ್ ಅರೆಬಿಯನ್ ನೈಟ್ಸ್ ಕಥೆಯಂತಿದೆ: ದರ್ಶನ್ ಪರ ಸಿ.ವಿ ನಾಗೇಶ್ ವಾದ ಹೇಗಿತ್ತು?

    ಬೆಂಗಳೂರಿನಂತೆ (Bengaluru) ತುಮಕೂರು ಕೂಡ ಅತಿವೇಗವಾಗಿ ಬೆಳೆಯುತ್ತಿದ್ದು, ಸಾಮಾನ್ಯ ರೈಲ್ವೆ ಪ್ರಯಾಣಿಕರಿಗೂ ವಿಶ್ವ ದರ್ಜೆಯ ಸೌಲಭ್ಯಗಳು ಸಿಗಬೇಕೆಂಬ ಉದ್ದೇಶದಿಂದ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪೂರ್ವಜನ್ಮದ ಪುಣ್ಯದಿಂದ ಮಂತ್ರಿ ಆಗಿದ್ದೇವೆ – ಸಚಿವ ಚೆಲುವರಾಯಸ್ವಾಮಿ

    ಈಗಾಗಲೇ ನಿಲ್ದಾಣದ ಯೋಜನೆಯ ನೀಲನಕ್ಷೆ ಸಿದ್ಧವಾಗಿದ್ದು, ಮುಂದಿನ ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದಿದ್ದಾರೆ. ಇದನ್ನೂ ಓದಿ: ನಮ್ಮ ಮೆಟ್ರೋದಿಂದ ಮತ್ತೊಂದು ಗುಡ್‌ನ್ಯೂಸ್ – ಹೊಸ ವರ್ಷದಿಂದ್ಲೇ ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ರೈಲು!

  • ಅಯೋಧ್ಯೆಯಲ್ಲಿ ಬೆಂಗಳೂರಿನಿಂದ ಅಳಿಲು ಸೇವೆ!

    ಅಯೋಧ್ಯೆಯಲ್ಲಿ ಬೆಂಗಳೂರಿನಿಂದ ಅಳಿಲು ಸೇವೆ!

    ಬೆಂಗಳೂರು: ಅಯೋಧ್ಯೆ ಶ್ರೀರಾಮ ಮಂದಿರದ (Ram Mandir) ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದೆ. ಈ ಅದ್ದೂರಿ ರಾಮೋತ್ಸವಕ್ಕೆ ದೇಶದೆಲ್ಲೆಡೆ ಭರದ ಸಿದ್ದತೆಗಳು ಸಾಗುತ್ತಿದ್ದು, ಕರ್ನಾಟಕದಿಂದ (Karnataka) ಶ್ರೀರಾಮನಿಗೆ ಅಳಿಲು (Squarrel) ಸೇವೆ ಸಲ್ಲಲಿದೆ.

    ಹೌದು. ಅಯೋಧ್ಯೆಯ ಮುಖ್ಯ ರೈಲ್ವೆ ನಿಲ್ದಾಣವಾದ ಅಯೋಧ್ಯೆಧಾಮದ ಮುಖ್ಯ ದ್ವಾರದಲ್ಲಿ ಬೆಂಗಳೂರಿನ ಗಿನ್ನಿಸ್ ವರ್ಲ್ಡ್ ಚಿತ್ರಶಿಲ್ಪಿ ಕಲ್ಯಾಣ್ ಎಸ್ ರಾಥೋಡ್ ಅವರು ನಿರ್ಮಿಸಿದ ಅಳಿಲು ಮೂರ್ತಿಯನ್ನು ಇಡಲಾಗುತ್ತಿದೆ.  ಇದನ್ನೂ ಓದಿ: ಜ.22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆ – ವಿಶ್ವದ ದೊಡ್ಡಣ್ಣ ಅಮೆರಿಕದಲ್ಲೂ ನೇರಪ್ರಸಾರ

    ಭಾರತೀಯ ರೈಲ್ವೆ ಇಲಾಖೆಯಿಂದ ಗುತ್ತಿಗೆ ಪಡೆದು ಕಲ್ಯಾಣ್ ಎಸ್ ರಾಥೋಡ್ ಈ ಅಳಿಲು ಪುತ್ಥಳಿಯನ್ನು ನಿರ್ಮಿಸಿದ್ದಾರೆ. ಸುಮಾರು ಎರಡೂವರೆ ಟನ್ ಕಾರ್ಟನ್ ಸ್ಟೀಲ್ ಬಳಸಿ,15 ಅಡಿ ಎತ್ತರ, 8 ಅಡಿ ಅಗಲ,13 ಅಡಿ ಉದ್ದದಲ್ಲಿ ಈ ಬೃಹತ್ ಅಳಿಲಿನ ಪುತ್ಥಳಿ ನಿರ್ಮಾಣವಾಗಿದೆ.

    ಕಾರ್ಟನ್ ಸ್ಟೀಲ್ ಬಳಸಿರುವುದರಿಂದ ಈ ಮೂರ್ತಿ ತುಕ್ಕು  ಹಿಡಿಯುವ ಸಾಧ್ಯತೆ ಕಡಿಮೆ. ಅಳಿಲು ಪುತ್ಥಳಿ ಈಗ ಟ್ರಕ್ ನಲ್ಲಿ ಅಯೋಧ್ಯೆಯತ್ತ ಹೊರಟ್ಟಿದ್ದು, ಜ.11 ರಂದು ಅಯೋಧ್ಯೆಗೆ ತಲುಪಲಿದೆ.

     

  • ಜನರಲ್ ಟಿಕೆಟ್‍ಗಾಗಿ ರೈಲು ಪ್ರಯಾಣಿಕರ ನೂಕಾಟ

    ಜನರಲ್ ಟಿಕೆಟ್‍ಗಾಗಿ ರೈಲು ಪ್ರಯಾಣಿಕರ ನೂಕಾಟ

    ರಾಯಚೂರು: ರೈಲ್ವೆ ಜನರಲ್ ಟಿಕೆಟ್‍ಗಾಗಿ ಪ್ರಯಾಣಿಕರು ಪರದಾಡುತ್ತಿರುವ ಘಟನೆ ನಗರದ ರೈಲು ನಿಲ್ದಾಣದಲ್ಲಿ ನಡೆದಿದೆ.

    ನೂರಾರು ಪ್ರಯಾಣಿಕರು ಜನರಲ್ ಟಿಕೆಟ್ ಪಡೆಯಲು ಮುಗಿಬಿದ್ದಿದ್ದಾರೆ. 3 ಟಿಕೆಟ್ ಕೌಂಟರ್ ಇದ್ದರೂ ಕೇವಲ ಒಂದೇ ಕೌಂಟರ್‍ನಲ್ಲಿ ಜನರಲ್ ಟಿಕೆಟ್ ವಿತರಣೆ ಮಾಡಲಾಗುತ್ತಿದೆ. ಹಾಗಾಗಿ ನೂರಾರು ಪ್ರಯಾಣಿಕರು ಲಗೇಜ್ ಹಿಡಿದು ಕ್ಯೂ ನಿಂತಿದ್ದಾರೆ. ಇದನ್ನೂ ಓದಿ: ವಾರಣಾಸಿ ಜಿಲ್ಲಾ ಕೋರ್ಟ್‍ನಲ್ಲಿ ಕಾಶಿ ಮಸೀದಿ ವಿಚಾರಣೆ – ಜ್ಞಾನವಾಪಿ ಮಸೀದಿಯಲ್ಲಿ ಮತ್ತೊಂದು ಶಿವಲಿಂಗ?

    ಪ್ರಯಾಣಿಕರು ಬೆಂಗಳೂರು, ಮುಂಬೈ, ತಿರುಪತಿ, ಹೈದರಾಬಾದ್ ತೆರಳಲು ರೈಲ್ವೆ ನಿಲ್ದಾಣಕ್ಕೆ ಬಂದಿದ್ದು, ತಿಕ್ಕಾಟ, ನೂಕಾಟ ಮಾಡುತ್ತಾ ಟಿಕೆಟ್ ಪಡೆಯುತ್ತಿದ್ದಾರೆ. ಪ್ರಯಾಣಿಕರ ನೂಕಾಟ ತಪ್ಪಿಸುವಂತೆ ಜನರು ಆಗ್ರಹಿಸಿ, ರಾತ್ರಿ ವೇಳೆ ಎರಡು-ಮೂರು ಟಿಕೆಟ್ ವಿತರಣೆ ಕೌಂಟರ್ ತೆರೆಯಲು ಮನವಿ ಮಾಡಕೊಂಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಶಾಂತನಾದ ವರುಣ, ತಗ್ಗಿದ ಪ್ರವಾಹ – ಚಿಕ್ಕಬಳ್ಳಾಪುರದ ಡ್ಯಾಮ್‍ನಲ್ಲಿ ಯುವಕನ ಕೋತಿಯಾಟ

  • ನ್ಯೂಯಾರ್ಕ್ ರೈಲು ನಿಲ್ದಾಣದಲ್ಲಿ ಗುಂಡಿನ ದಾಳಿ – 13 ಮಂದಿಗೆ ಗಾಯ

    ನ್ಯೂಯಾರ್ಕ್ ರೈಲು ನಿಲ್ದಾಣದಲ್ಲಿ ಗುಂಡಿನ ದಾಳಿ – 13 ಮಂದಿಗೆ ಗಾಯ

    ನ್ಯೂಯಾರ್ಕ್: ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಸುರಂಗಮಾರ್ಗದ ರೈಲು ನಿಲ್ದಾಣದಲ್ಲಿ ಮಂಗಳವಾರ ಹಲವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ದಾಳಿಯಲ್ಲಿ 13ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ ಎಂದು ವರದಿಗಳು ತಿಳಿಸಿವೆ.

    ಗುಂಡಿನ ದಾಳಿ ನಡೆಸಿರುವವರನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ಆದರೂ ಶೂಟರ್ ನಿಲ್ದಾಣದಲ್ಲಿಯೇ ಇದ್ದು, ಮತ್ತೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಸ್ಥಳೀಯ ಮಾಧ್ಯಮಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಿನ್ನನ್ನು ಸ್ವರ್ಗದಲ್ಲಿ ಭೇಟಿಯಾಗುತ್ತೇನೆ- ರಷ್ಯಾ ದಾಳಿಗೆ ಮಡಿದ ತಾಯಿ 9 ವರ್ಷದ ಹುಡುಗಿ ಭಾವುಕ ಪತ್ರ

    ದಾಳಿ ನಡೆದ ಸ್ಥಳದಲ್ಲಿ ಬೆಳಗ್ಗೆ ಜನ ದಟ್ಟನೆಯಿದ್ದ ಸಮಯದಲ್ಲಿ ಸ್ಫೋಟಕಗಳು ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ರೈಲು ಸಂಚಾರಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಭಾರತದೊಂದಿಗೆ ಶಾಂತಿಯುತ, ಸಹಕಾರಿ ಬಾಂಧವ್ಯ ಬಯಸುತ್ತೇವೆ: ಮೋದಿಗೆ ಪಾಕ್ ಪ್ರಧಾನಿ ಪ್ರತಿಕ್ರಿಯೆ

    ಹಲವರು ಈ ದಾಳಿಯನ್ನು ಭಯೋತ್ಪಾದಕರು ನಡೆಸಿರಬಹುದು ಎಂದು ಶಂಕಿಸಿದ್ದಾರೆ. ಆದರೆ ಇದು ಭಯೋತ್ಪಾದಕರ ದಾಳಿ ಹೌದೋ ಅಲ್ಲವೋ ಎಂಬುದನ್ನು ಅಧಿಕಾರಿಗಳು ಸದ್ಯ ಖಚಿತಪಡಿಸಿಲ್ಲ.

  • ರೆಸ್ಟೋರೆಂಟ್ ಆನ್ ವೀಲ್ಸ್- ಹಳೆಯ ರೈಲ್ವೆ ಕೋಚ್ ಈಗ ರೆಸ್ಟೋರೆಂಟ್

    ರೆಸ್ಟೋರೆಂಟ್ ಆನ್ ವೀಲ್ಸ್- ಹಳೆಯ ರೈಲ್ವೆ ಕೋಚ್ ಈಗ ರೆಸ್ಟೋರೆಂಟ್

    ನವದೆಹಲಿ: ಹಳೆಯ ರೈಲ್ವೆ ಕೋಚ್‍ನ್ನು ಕೇಂದ್ರ ರೈಲ್ವೆ ವಲಯವು ರೆಸ್ಟೋರೆಂಟ್ ಆಗಿ ಮಾರ್ಪಾಡು ಮಾಡಿದೆ. ನಾಗ್ಪುರ ರೈಲು ನಿಲ್ದಾಣದಲ್ಲಿರುವ (Restaurant on wheels) ಈ ವಿಶೇಷ ರೆಸ್ಟೋರೆಂಟ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    ಈ ಹೊಸ ಪರಿಕಲ್ಪನೆಯ ಬಗ್ಗೆ ರೈಲ್ವೆ ಖಾತೆ ರಾಜ್ಯ ಸಚಿವ ದರ್ಶನ ಜರ್ದೋಶ್ ಟ್ವೀಟ್ ಮಾಡಿದ್ದು, ನಾಗ್ಪುರ ರೈಲು ನಿಲ್ದಾಣದಲ್ಲಿ ಭಾರತೀಯ ರೈಲ್ವೆ ತಂದಿರುವ ರೆಸ್ಟೋರೆಂಟ್ ಆನ್ ವೀಲ್ಸ್ ಮೂಲಕ ಕೋಚ್‍ನೊಳಗೆ ಅನನ್ಯ ಭೋಜನದ ಅನುಭವವನ್ನು ಆನಂದಿಸಿ. ನೀವು ಭೇಟಿ ನೀಡಿದಾಗ ನಿಮ್ಮ ಫೋಟೋಗಳನ್ನು ಹಂಚಿಕೊಳ್ಳಲು ಮರೆಯಬೇಡಿ ಎಂದು ಟ್ವೀಟ್ ಮಾಡಿದ್ದಾರೆ. ಈ ಹೊಸ ಯೋಜನೆಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಜಾತ್ಯಾತೀತ ನಿಲುವು ಶಿಥಿಲವಾಗುತ್ತಿದೆ- JDS ವಿರುದ್ಧ ದತ್ತ ಅಸಮಾಧಾನ

    ನಾಗ್ಪುರ ವಿಭಾಗದ ಡಿವಿಜನಲ್ ರೈಲ್ವೇ ಮ್ಯಾನೇಜರ್ ರಿಚಾ ಖರೆ ಮಾತನಾಡಿ, ನಾವು ಹಳೆಯ ಕೋಚ್ ಅನ್ನು ರೆಸ್ಟೋರೆಂಟ್ ಆಗಿ ಅಭಿವೃದ್ಧಿಪಡಿಸಲು ಟೆಂಡರ್ ಕರಿದಿದ್ದೇವೆ. ಗ್ರಾಹಕರಿಗೆ ಈ ರೆಸ್ಟೋರೆಂಟ್ ಇಷ್ಟವಾಗುತ್ತದೆ. ಈ ರೆಸ್ಟೋರೆಂಟ್‍ಗಳನ್ನು ನಾವು ಇತರ ಜಿಲ್ಲೆಗಳಲ್ಲಿ ಆರಂಭಿಸಬೇಕು ಎನ್ನುವ ಯೋಜನೆಯನ್ನು ಹೊಂದಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಾರೂಖ್ ಜೊತೆ ಪ್ರಾರ್ಥನೆ ಮಾಡಿದ್ದು ಪತ್ನಿ ಗೌರಿ ಖಾನ್ ಅಲ್ಲ

    ಇದೊಂದು ಸುಂದರವಾದ ಪರಿಕಲ್ಪನೆಯಾಗಿದೆ. ಇಲ್ಲಿ ಆಹಾರ, ತಂಪು ಪಾನೀಯಗಳು ಎಲ್ಲವೂ ಲಭ್ಯವಿದೆ. ಇದು ತ್ರಿ ಸ್ಟಾರ್ ಅಥವಾ ಪಂಚತಾರಾ ರೆಸ್ಟೋರೆಂಟ್‍ನಂತೆ ಕಾಣುತ್ತದೆ ಎಂದು ಗ್ರಾಹಕರೊಬ್ಬರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.