Tag: ರೈಲು ದುರಂತ

  • ಒಡಿಶಾ ರೈಲು ದುರಂತ- ಗಾಯಾಳುಗಳಿಗೆ ರಕ್ತದಾನ ಮಾಡಲು ಸಾಲುಗಟ್ಟಿ ನಿಂತ ಯುವಜನತೆ

    ಒಡಿಶಾ ರೈಲು ದುರಂತ- ಗಾಯಾಳುಗಳಿಗೆ ರಕ್ತದಾನ ಮಾಡಲು ಸಾಲುಗಟ್ಟಿ ನಿಂತ ಯುವಜನತೆ

    ಭುವನೇಶ್ವರ: ಒಡಿಶಾದ (Odisha) ಬಾಲಸೋರ್‌ನಲ್ಲಿ (Balasore) ಭೀಕರ ರೈಲು ಅಪಘಾತ (Train Accident) ನಡೆದಿದ್ದು, ಅಪಘಾತದ ನಂತರ ಗಾಯಾಳುಗಳಿಗೆ ರಕ್ತದಾನ (Blood Donation) ಮಾಡುವ ಸಲುವಾಗಿ ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ.

    ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 261ಕ್ಕೆ ಏರಿಕೆಯಾಗಿದ್ದು, 900ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡು ಬಾಲಸೋರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆ ಜನರು ಸ್ವಯಂಪ್ರೇರಿತರಾಗಿ ಗಾಯಾಳುಗಳಿಗೆ ರಕ್ತದಾನ ಮಾಡಲು ಕ್ಯೂನಲ್ಲಿ ನಿಂತಿದ್ದಾರೆ. ಅಪಘಾತದ ಸುದ್ದಿ ಹೊರಬೀಳುತ್ತಿದ್ದಂತೆ ರಾತ್ರಿಯಿಂದಲೇ ಸ್ಥಳೀಯ ನಿವಾಸಿಗಳು, ಅದರಲ್ಲೂ ಯುವಕರು ರಕ್ತದಾನ ಮಾಡಲು ಆಸ್ಪತ್ರೆಗೆ ಬಂದು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತಕ್ಕೆ ಸಿಗ್ನಲ್ ಕಾರಣ- ಪ್ರಾಥಮಿಕ ವರದಿ

    ಸುಮಾರು 25 ಸ್ವಯಂಸೇವಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಬಂದಿದ್ದೇವೆ. ನಮ್ಮ ರಕ್ತ ಒಬ್ಬರ ಜೀವ ಉಳಿಸಿದರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ ಎಂದು ಸರತಿ ಸಾಲಿನಲ್ಲಿ ನಿಂತಿದ್ದ ಸ್ವಯಂ ಸೇವಕರೊಬ್ಬರು ಹೇಳಿದ್ದಾರೆ. ಒಡಿಶಾದ ಮುಖ್ಯ ಕಾರ್ಯದರ್ಶಿ ಪ್ರದೀಪ್ ಕುಮಾರ್ ಜೆನಾ (Pradeep Kumar Jena) ಕೂಡ ಇಂತಹ ದುರಂತದ ಸಮಯದಲ್ಲಿ ರಕ್ತದಾನ ಮಾಡಿದ ಸ್ವಯಂಸೇವಕರಿಗೆ ಟ್ವೀಟ್ ಮೂಲಕ ಧನ್ಯವಾದ ಹೇಳಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬ, ಗಾಯಾಳುಗಳಿಗೆ ಪರಿಹಾರ ಘೋಷಣೆ

    ಬಾಲಾಸೋರ್‌ನಲ್ಲಿ ರಾತ್ರಿಯಿಡೀ 500 ಯೂನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ. ಪ್ರಸ್ತುತ 900 ಯೂನಿಟ್  ದಾಸ್ತಾನು ಇದೆ. ಇದು ಅಪಘಾತಕ್ಕೊಳಗಾದವರಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ರಕ್ತದಾನ ಮಾಡಿದ ಎಲ್ಲಾ ಸ್ವಯಂಸೇವಕರಿಗೆ ನಾನು ವೈಯಕ್ತಿಕವಾಗಿ ಋಣಿಯಾಗಿದ್ದೇನೆ ಮತ್ತು ಕೃತಜ್ಞನಾಗಿದ್ದೇನೆ ಎಂದು ಜೆನಾ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ರೈಲು ದುರಂತ – ಕನ್ನಡಿಗರ ಸುರಕ್ಷತೆ ಮೇಲ್ವಿಚಾರಣೆಗೆ ಸಚಿವ ಸಂತೋಷ್ ಲಾಡ್ ನಿಯೋಜನೆ

  • 8 ಮಂದಿಯ ಜೀವ ಉಳಿಸಿ ಪ್ರಾಣ ತ್ಯಾಗ ಮಾಡಿದ ವೀರ ರಾವಣ

    8 ಮಂದಿಯ ಜೀವ ಉಳಿಸಿ ಪ್ರಾಣ ತ್ಯಾಗ ಮಾಡಿದ ವೀರ ರಾವಣ

    ಚಂಡೀಗಢ: ವಿಜಯದಶಮಿಯ ಪ್ರಯುಕ್ತ ಅಮೃತಸರದ ಜೋದಾ ಪಾಟ್ಕರ್ ನಲ್ಲಿ ರಾಮಲೀಲಾ ಕಾರ್ಯಕ್ರಮ ನಡೆಯುತ್ತಿತ್ತು. ರಾವಣನ ವೇಷಧಾರಿಯಾದ 24 ವರ್ಷದ ದಲ್ಬೀರ್ ಸಿಂಗ್ ರೈಲು ಹಳಿಯ ಮೇಲೆ ನಿಂತಿದ್ದ ಜನರನ್ನ ದೂಡಿ ತನ್ನ ಪ್ರಾಣ ತ್ಯಾಗ ಮಾಡಿ 8 ಮಂದಿಯ ಜೀವವನ್ನ ಉಳಿಸಿದ್ದಾರೆ.

    ರಾಮಲೀಲಾ ಕಾರ್ಯಕ್ರಮವನ್ನ ವೀಕ್ಷಿಸಲು ಸಾವಿರಾರು ಮಂದಿ ಸೇರಿದ್ದರು. ರಾವಣ ದಹನ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ರೈಲಿನ ಹಳಿಯ ಮೇಲೆ ನಿಂತಿದ್ದ ಜನರ ಮೇಲೆ ರೈಲು ಬರುವುದನ್ನ ಗಮನಿಸಿದ ದಲ್ಬೀರ್ ಸಿಂಗ್, ಜನರನ್ನ ಹಳಿ ಬಿಟ್ಟು ಹೋಗುವಂತೆ ಕೂಗಿ ಹೇಳಿದ್ದಾರೆ. ಅಲ್ಲದೆ ಹಲವರನ್ನು ಹಳಿಯಿಂದ ಹೊರಗೆ ದೂಡಿದ್ದಾರೆ. ಆದರೆ ಕೊನೆಯಲ್ಲಿ ಹಳಿಯಿಂದ ಹೊರಬರಲಾಗದೇ ತಾವೇ ಪ್ರಾಣ ಕಳೆದುಕೊಂಡಿದ್ದಾರೆ.

    ಎಲ್ಲರ ಮೆಚ್ಚಿನ ಪಾತ್ರಧಾರಿಯಾದ ದಲ್ಬೀರ್ ಸಿಂಗ್, ಪ್ರತಿ ವರ್ಷ ರಾವಣ ವೇಷಧಾರಿಯಾಗಿ ಎಲ್ಲರನ್ನ ಮನರಂಜಿಸುತ್ತಿದ್ದರು ಎಂದು ಅವರ ಸ್ನೇಹಿತ ರಾಜೇಶ್ ಹೇಳಿದ್ದಾರೆ.

    ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾರ್ಯಕ್ರಮ ಆಯೋಜಿಸಿದ್ದ ಸ್ಥಳದ ಸಮೀಪವೇ ರೈಲು ಮಾರ್ಗ ಹಾದುಹೋಗಿತ್ತು. ಜನ ರೈಲು ಹಳಿಯ ಮೇಲೆ ನಿಂತು ಕಾರ್ಯಕ್ರಮ ವೀಕ್ಷಿಸುತ್ತಿದ್ದರು. ಕಾರ್ಯಕ್ರಮದಲ್ಲಿ ದೊಡ್ಡದಾದ ಪಟಾಕಿಗಳನ್ನು ಹೊಡೆಯುತ್ತಿದ್ದರಿಂದ ರೈಲು ಬರುತ್ತಿರುವ ಶಬ್ಧ ಯಾರಿಗೂ ಕೇಳಿಸಲಿಲ್ಲ. ಒಮ್ಮೆಲೆ ರೈಲು ಜನರ ಮೇಲೆಯೇ ಹರಿದಿತ್ತು. ಸ್ಥಳದಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಸುಮಾರು 700 ಮಂದಿ ಇದ್ದರು ಎಂದು ಹೇಳಿದ್ದಾರೆ. ಇದನ್ನೂ ಓದಿ: 20 ಜನರ ಪ್ರಾಣ ಉಳಿಸಿ ಗೋಕಾಕ್‍ನ ವೀರಯೋಧ ಹುತಾತ್ಮ!

    ಈ ದುರಂತದಲ್ಲಿ ದಲ್ಬೀರ್ ಸಿಂಗ್ ಸೇರಿದಂತೆ 61 ಮಂದಿ ಮೃತಪಟ್ಟಿದ್ದು, 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಳಿಪಟ ನಿರ್ಮಾಣ ಮಾಡುವ ದಲ್ಬೀರ್ ಸಿಂಗ್ ಅವರು ತಮ್ಮ ಮನೆಯಲ್ಲಿ ಅಂಗಡಿ ಹೊಂದಿದ್ದು, ತಾಯಿ, ಪತ್ನಿ ಹಾಗೂ 8 ತಿಂಗಳ ಮಗುವನ್ನು ಅಗಲಿದ್ದಾರೆ. ಈ ದುರಂತದ ನಂತರ ತನ್ನ ಸೊಸೆಗೆ ಸರ್ಕಾರ ಉದ್ಯೋಗ ನೀಡಲಿ ಎಂದು ದಲ್ಬೀರ್ ಸಿಂಗ್ ತಾಯಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರಿಗೆ ಬೇಡಿಕೆ ಇಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉತ್ತರಪ್ರದೇಶದಲ್ಲಿ ಮತ್ತೊಂದು ರೈಲು ದುರಂತ- ಹಳಿ ತಪ್ಪಿದ ಶಕ್ತಿಪುಂಜ್ ಎಕ್ಸ್ ಪ್ರೆಸ್

    ಉತ್ತರಪ್ರದೇಶದಲ್ಲಿ ಮತ್ತೊಂದು ರೈಲು ದುರಂತ- ಹಳಿ ತಪ್ಪಿದ ಶಕ್ತಿಪುಂಜ್ ಎಕ್ಸ್ ಪ್ರೆಸ್

     

    ಲಕ್ನೋ: ಉತ್ತರಪ್ರದೇಶದಲ್ಲಿ ಮತ್ತೊಂದು ರೈಲು ಸುರಂತ ಸಂಭವಿಸಿದೆ. ಹೌರಾ-ಜಬಲ್‍ಪುರ್-ಶಕ್ತಿಪುಂಜ್ ಎಕ್ಸ್ ಪ್ರೆಸ್‍ನ 7 ಬೋಗಿಗಳು ಹಳಿ ತಪ್ಪಿವೆ.

    ಇಂದು ಬೆಳಿಗ್ಗೆ 6.30ರ ಸುಮಾರಿಗೆ ಸೋನ್‍ಭದ್ರಾದ ಓಬ್ರಾ ಹಾಗೂ ಪಾಫ್ರಾಕುಂದ್ ನಿಲ್ದಾಣಗಳ ಮಧ್ಯೆ ಈ ಘಟನೆ ನಡೆದಿದೆ. ಪ್ರಯಾಣಿಕರಿಗೆ ಗಾಯಗಳಾಗಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ ಎಂದು ಭಾರತೀಯ ರೈಲ್ವೆಯ ವಕ್ತಾರರು ತಿಳಿಸಿದ್ದಾರೆ.

    ಕಳೆದ 20 ದಿನಗಳಲ್ಲಿ ನಡೆದ ನಾಲ್ಕನೇ ರೈಲು ದುರಂತ ಇದಾಗಿದೆ. ಘಟನೆಯಿಂದಾಗ ರೈಲು ಸಂಚಾರ ವ್ಯತ್ಯಯವಾಗಿದೆ.

    ಇಂದು ಬೆಳಿಗ್ಗೆ 6.25ಕ್ಕೆ ಈ ಘಟನೆ ನಡೆದಿದೆ. ಘಟನಾ ಸ್ಥಳವನ್ನ ಈಗಾಗಲೇ ತೆರವುಗೊಳಿಸಿದ್ದೇವೆ ಎಂದು ರೈಲ್ವೆ ಸಚಿವಾಲಯದ ವಕ್ತಾರರಾದ ಅನಿಲ್ ಸಕ್ಸೇನಾ ಹೇಳಿದ್ದಾರೆ.

    ಹಳಿ ತಿಪ್ಪಿದ ಬೋಗಿಗಳಲ್ಲಿದ್ದ ಪ್ರಯಾಣಿಕರನ್ನು 7.28ರ ವೇಳೆಗೆ ಉಳಿದ ಬೋಗಿಗಳಿಗೆ ಶಿಫ್ಟ್ ಮಡಲಾಗಿದೆ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಅವಘಡದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

    ರೈಲು ಗಂಟೆಗೆ 40 ಕಿ.ಮೀ ವೇಗದಲ್ಲಿ ಹೋಗುತ್ತಿದ್ದರಿಂದ ಯಾವುದೇ ಹಾನಿಯಾಗಿಲ್ಲ ಎಂಧು ಅಧಿಕಾರಿಗಳು ಹೇಳಿದ್ದಾರೆ.

    ಆಗಸ್ಟ್ 29ರಂದು ನಾಗ್ಪುರ ಮುಂಬೈ ದುರಂತೋ ಎಕ್ಸ್ ಪ್ರೆಸ್‍ನ 9 ಬೋಗಿಗಳು ಮಹಾರಾಷ್ಟ್ರದ ಕಲ್ಯಾಣ್‍ನ ತಿತ್ವಾಲಾ ನಿಲ್ದಾಣದ ಬಳಿ ಹಳಿ ತಪ್ಪಿದ್ದವು. ಈ ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿರಲಿಲ್ಲ.

    ಆಗಸ್ಟ್ 23ರಂದು ಕೈಫಿಯಾತ್ ಎಕ್ಸ್ ಪ್ರೆಸ್ ಹಳಿ ತಪ್ಪಿತ್ತು. ಈ ಘಟನೆಯಲ್ಲಿ 80 ಜನರಿಗೆ ಗಾಯಗಳಾಗಿತ್ತು. ಆಗಸ್ಟ್ 19ರಂದು ಉತ್ಕಲ್ ಎಕ್ಸ್ ಪ್ರೆಸ್ ನ 14 ಬೋಗಿಗಳು ಹಳಿ ತಪ್ಪಿ 24 ಮಂದಿ ಸಾವನ್ನಪ್ಪಿದ್ದರು. ಈ ಘಟನೆಯಲ್ಲಿ 156 ಮಂದಿ ಗಾಯಗೊಂಡಿದ್ದರು. ಈ ಎರಡೂ ಘಟನೆಗಳು ಉತ್ತರಪ್ರದೇಶದಲ್ಲಿ ನಡೆದಿತ್ತು.

  • ನೈತಿಕ ಹೊಣೆ ಹೊತ್ತು  ರೈಲ್ವೇ ಸಚಿವ ಸುರೇಶ್ ಪ್ರಭು ರಾಜೀನಾಮೆ? ಮೋದಿ ಹೇಳಿದ್ದೇನು?

    ನೈತಿಕ ಹೊಣೆ ಹೊತ್ತು ರೈಲ್ವೇ ಸಚಿವ ಸುರೇಶ್ ಪ್ರಭು ರಾಜೀನಾಮೆ? ಮೋದಿ ಹೇಳಿದ್ದೇನು?

    ನವದೆಹಲಿ: ಒಂದು ವಾರದೊಳಗಡೆ ಎರಡು ರೈಲು ದುರಂತ ಸಂಭವಿಸಿ ಟೀಕೆಗೆ ಒಳಗಾಗಿರುವ ಸುರೇಶ್ ಪ್ರಭು ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

    ಕೈಫಿಯತ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ 70 ಜನ ಗಾಯಗೊಂಡಿರುವ ಘಟನೆಯ ಬಳಿಕ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸುರೇಶ್ ಪ್ರಭು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.

    ಭೇಟಿ ವೇಳೆ ಸ್ವಲ್ಪ ಸಮಯ ಕಾಯಿರಿ ಎನ್ನುವುದಾಗಿ ಮೋದಿ ನನಗೆ ಹೇಳಿದ್ದಾರೆ ಎಂದು ಸುರೇಶ್ ಪ್ರಭು ಟ್ವೀಟ್ ಮಾಡಿದ್ದಾರೆ.

    ಉತ್ತರ ಪ್ರದೇಶದ ರೈಲು ದುರಂತದ ಬಳಿಕ ಸರಣಿ ಟ್ವೀಟ್ ಮಾಡಿರುವ ಸುರೇಶ್ ಪ್ರಭು ಅವರು ಘಟನೆಯಿಂದ ನನಗೆ ತುಂಬಾ ನೋವಾಗಿದೆ. ಕಳೆದ ಮೂರು ವರ್ಷ ನಾನು ರೈಲ್ವೇಯ ಬೆಳವಣಿಗೆ ತುಂಬಾ ಶ್ರಮ ಪಟ್ಟಿದ್ದೇನೆ. ಕಳೆದ ಎರಡು ದಶಕಗಳಿಂದ ಹದೆಗೆಟ್ಟಿದ್ದ ರೈಲ್ವೇಯನ್ನು ಮೇಲಕ್ಕೆ ಎತ್ತಲು ಮೋದಿ ಸರ್ಕಾರ ತುಂಬಾ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

    ಉತ್ಕಲ್ ರೈಲು ದುರಂತ ನೆನಪು ಮಾಸುವ ಮುನ್ನವೇ ಉತ್ತರ ಪ್ರದೇಶದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಕೈಫಿಯತ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ 70 ಜನ ಗಾಯಗೊಂಡಿರುವ ಘಟನೆ ಮಂಗಳವಾರ ಅವೌರೇಯಾ ಜಿಲ್ಲೆಯಲ್ಲಿ ನಡೆದಿದೆ. ಶನಿವಾರ ಉತ್ಕಲ್ ರೈಲು ದುರಂತ ಸಂಭವಿಸಿ 22 ಮಂದಿ ಮೃತಪಟ್ಟಿದ್ದರು.

    ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೂರು ವರ್ಷಗಳ ಕಾಲ ರೈಲ್ವೇ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಸುರೇಶ್ ಪ್ರಭು ಅವರು ಖಾಸಗಿ ಸಂಸ್ಥೆಗಳು ನಡೆಸುವ ‘ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಚಿವರ’ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿದ್ದರು. ಇತ್ತೀಚೆಗೆ ಇಂಡಿಯಾ ಟುಡೇ ಅವರು ಮೋದಿ ಸಂಪುಟದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಟಾಪ್ -5 ಮಂತ್ರಿಗಳ ಪಟ್ಟಿಯಲ್ಲೂ ಸುರೇಶ್ ಪ್ರಭು ಸ್ಥಾನವನ್ನು ಪಡೆದುಕೊಂಡಿದ್ದರು.

    ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ರೈಲು ದುರಂತ ಸಂಭವಿಸಿದ್ದು ಹೇಗೆ ವಿಡಿಯೋ ನೋಡಿ