Tag: ರೈಲು ತಡೆ

  • ಜ. 9ರಂದು ರಾಜ್ಯಾದ್ಯಂತ ರೈಲು ತಡೆ: ವಾಟಾಳ್ ನಾಗರಾಜ್

    ಜ. 9ರಂದು ರಾಜ್ಯಾದ್ಯಂತ ರೈಲು ತಡೆ: ವಾಟಾಳ್ ನಾಗರಾಜ್

    – ಮರಾಠಿ ಅಭಿವೃದ್ಧಿ ನಿಗಮ ವಿರೋಧಿಸಿ ತಡೆ

    ಚಾಮರಾಜನಗರ: ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿ ಜನವರಿ 9ರಂದು ರಾಜ್ಯಾದ್ಯಂತ ರೈಲು ತಡೆ ನಡೆಸಲಾಗುವುದು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.

    ಗಡಿ ಜಿಲ್ಲೆ ಚಾಮರಾಜನಗರದ ಡಿಸಿ ಕಚೇರಿ ಮುಂಭಾಗ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ಮರಾಠ ಅಭಿವೃದ್ಧಿ ನಿಗಮ ರದ್ದಿಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ವಾಟಾಳ್ ನಾಗರಾಜ್ ಜ.9 ರಂದು ರಾಜ್ಯಾದ್ಯಂತ ರೈಲು ತಡೆ ನಡೆಸುವ ಎಚ್ಚರಿಕೆ ನೀಡಿದರು.

    ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ರೈಲು ಹಳಿಗಳ ಮೇಲೆ ಸತ್ಯಾಗ್ರಹ ಕೂರಿಸ್ತಿವಿ. ಜನಗಳ ಮೇಲೆ ರೈಲು ಬಿಡಬೇಕು ಹೊರತು, ರೈಲು ಹೋಗಲೂ ಸಾಧ್ಯವಿಲ್ಲ. ಬೀದರ್ ನಿಂದ ಚಾಮರಾಜನಗರದವರೆಗೆ, ಮಂಗಳೂರಿನಿಂದ ಕೋಲಾರದವರೆಗೆ ರೈಲು ನಿಲ್ದಾಣ ಸೇರಿದಂತೆ ಹಳಿಗಳ ಮೇಲೆ ಕುಳಿತು ಹೋರಾಟ ಮಾಡ್ತೀವಿ. ಎರಡು ಸಾವಿರ ಸಂಘಟನೆಯಿಂದ ರೈಲು ತಡೆಗೆ ಬೆಂಬಲ ಸಿಕ್ಕಿದ್ದು, ಅಂದು ಯಾರೂ ಕೂಡ ಸಾರ್ವಜನಿಕರು ರೈಲಿನಲ್ಲಿ ಪ್ರಯಾಣಿಸಬೇಡಿ. ನಿಲ್ದಾಣಕ್ಕೆ ಬರಬೇಡಿ ಎಂದು ವಾಟಾಳ್ ನಾಗರಾಜ್ ಮನವಿ ಮಾಡಿದರು.

  • ಕೇಂದ್ರ ರೈತ ವಿರೋಧಿ ನೀತಿಗೆ ಖಂಡನೆ- ದಾವಣಗೆರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ರೈಲು ತಡೆಗೆ ಯತ್ನ

    ಕೇಂದ್ರ ರೈತ ವಿರೋಧಿ ನೀತಿಗೆ ಖಂಡನೆ- ದಾವಣಗೆರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ರೈಲು ತಡೆಗೆ ಯತ್ನ

    ದಾವಣಗೆರೆ: ಕೇಂದ್ರ ಸರ್ಕಾರದ ವೈಫಲ್ಯ ಖಂಡಿಸಿ ದಾವಣಗೆರೆಯಲ್ಲಿ ಯೂತ್ ಕಾಂಗ್ರೆಸ್ ವತಿಯಿಂದ ರೈಲು ತಡೆ ಯತ್ನ ನಡೆಸಲಾಯ್ತು.

    ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ, ಪ್ರಧಾನಿ ನರೇಂದ್ರ ಮೋದಿ ಆಡಳಿತ ವೈಫಲ್ಯ, ಹಾಗೂ ರೈತರ ಮೇಲೆ ನಡೆದ ಗೋಲಿಬಾರ್ ತೀವ್ರವಾಗಿ ಖಂಡಿಸಿದ್ರು. ಅಲ್ಲದೇ ನಗರದ ರೈಲ್ವೆ ನಿಲ್ದಾಣದಲ್ಲಿ ಇಂಟರ್ ಸಿಟಿ ರೈಲನ್ನು ತಡೆಯಲು ಕಾರ್ಯಕರ್ತರು ಯತ್ನಿಸಿದ್ರು.

    ರೈಲು ತಡೆಗೆ ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ತಡೆದ ರೈಲ್ವೆ, ನಾಗರಿಕ ಪೊಲೀಸ್ ಹಾಗೂ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ರೈಲ್ವೆ ನಿಲ್ದಾಣದ ಹೊರಭಾಗದಲ್ಲಿ ಕಾರ್ಯಕರ್ತರನ್ನ ಬಂಧಿಸಿ ಕರೆದೊಯ್ದರು.