ನವದೆಹಲಿ: ರೈಲು ಪ್ರಯಾಣ ಪ್ರಿಯರಿಗೆ ರೈಲ್ವೆ ಇಲಾಖೆ ಗುಡ್‌ನ್ಯೂಸ್ ನೀಡಿದೆ. ಇದೀಗ ಬುಕ್ ಆದ ಟಿಕೆಟ್‌ನ (Train Ticket) ದಿನಾಂಕ ಬದಲಾವಣೆಗೆ ಜನವರಿಯಿಂದ ಅವಕಾಶ ನೀಡಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ತಿಳಿಸಿದ್ದಾರೆ.
ಇಲ್ಲಿಯವರೆಗೆ ಒಮ್ಮೆ ರೈಲ್ವೆ ಟಿಕೆಟ್ ಬುಕ್ ಮಾಡಿದರೆ ಪ್ರಯಾಣದ ದಿನಾಂಕ ಬದಲಾವಣೆಗೆ ಅವಕಾಶ ಇರಲಿಲ್ಲ. ಆದರೆ ಇದೀಗ ಬುಕ್ ಆದ ರೈಲ್ವೆ ಟಿಕೆಟ್ ದಿನಾಂಕ ಬದಲಿಸಲು ಅವಕಾಶ ಇರಲಿದೆ. ಇದನ್ನೂ ಓದಿ: ರೆಸಾರ್ಟ್‌ನಲ್ಲೂ ಬಿಗ್‌ಬಾಸ್ ನಿಯಮ ಅನ್ವಯ!
ಮೊದಲೆಲ್ಲ ಟಿಕೆಟ್ ಬುಕಿಂಗ್ ಆದ್ರೆ, ದಿನಾಂಕ ಬದಲಾವಣೆಗೆ ಮೊದಲಿನ ಬುಕಿಂಗ್ ರದ್ದು ಮಾಡಿ, ನಂತರ ಹೊಸ ಟಿಕೆಟ್ ಬುಕಿಂಗ್ ಮಾಡಬೇಕಿತ್ತು. ಆದರೆ ರೈಲ್ವೆ ಇಲಾಖೆ ಈ ನಿಯಮ ಬದಲಾವಣೆಗೆ ಮುಂದಾಗಿದೆ. ದಿನಾಂಕ ಬದಲಾವಣೆಗೆ ಯಾವುದೇ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ತಿಳಿಸಿದೆ.
ಅಲ್ಲದೇ ರದ್ದತಿ ವೇಳೆ ಆಗುವ ಹಣ ಕಡಿತದಂತೆ ಇಲ್ಲಿ ಆಗುವುದಿಲ್ಲ ಎನ್ನುವ ಮೂಲಕ ರೈಲ್ವೆ ಟಿಕೆಟ್ ಬುಕಿಂಗ್ ವೇಳೆ ಇದ್ದ ನಿಯಮ ಸಡಿಲಿಕೆಗೆ ಇಲಾಖೆ ಮುಂದಾಗಿದೆ.
ಬಾಗಲಕೋಟೆ: ಜಿಲ್ಲೆಯ ಕಲಾದಗಿ ಗ್ರಾಮದ ವ್ಯಕ್ತಿಯೊಬ್ಬರು ಇಂದು ಮುಂಜಾನೆ ತಿರುಪತಿಯಿಂದ (Tirupati) ಕಲಾದಗಿ ಕಡೆಗೆ ಬರುವಾಗ ರೈಲಿನಲ್ಲಿ ಹೃದಯಘಾತದಿಂದ (Heart Attack) ಮೃತಪಟ್ಟಿದ್ದಾರೆ.
ಮುಂಜಾನೆ 7:30 ರ ವೇಳೆಗೆ ಯಲ್ಲಪ್ಪ ಮೃತಪಟ್ಟಿದ್ದಾರೆ. ಸದ್ಯ ಶವ ಆಂಧ್ರಪ್ರದೇಶದ ನಂದನೂರು ರೈಲ್ವೆ ನಿಲ್ದಾಣದಲ್ಲಿ ಇಳಿಸಿಕೊಳ್ಳಲಾಗಿದ್ದು, ರೈಲ್ವೆ ಪೊಲೀಸರು ಮೃತನ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ.
ಬೆಂಗಳೂರು: ಆಗಸ್ಟ್ 24ರಂದು ಅರಸೀಕೆರೆ-ಬಾಣಾವರ ಹಾಗೂ ಅರಸೀಕೆರೆ-ಹಬ್ಬನಘಟ್ಟ ನಿಲ್ದಾಣಗಳ ನಡುವೆ ಪ್ರಮುಖ ಸಿಗ್ನಲಿಂಗ್ ಮತ್ತು ಬ್ಲಾಕ್ ಇನ್‌ಸ್ಟ್ರುಮೆಂಟ್ ಬದಲಾವಣೆ ಕಾಮಗಾರಿಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ, ಅಂದು ಕೆಲವು ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ, ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ ಮತ್ತು ಕೆಲವು ರೈಲುಗಳ ಮರು ನಿಗದಿಪಡಿಸಲಾಗುತ್ತದೆ ಮತ್ತು ನಿಯಂತ್ರಿಸಲಾಗಿದೆ.
ಆಗಸ್ಟ್ 23ರಂದು, ರೈಲು ಸಂಖ್ಯೆ 06270 ಎಸ್‌ಎಂವಿಟಿ ಬೆಂಗಳೂರು-ಮೈಸೂರು ಡೈಲಿ ಪ್ಯಾಸೆಂಜರ್ ರೈಲು ರದ್ದುಗೊಳ್ಳಲಿದೆ. ಆಗಸ್ಟ್ 24ರಂದು ಮೈಸೂರು-ಎಸ್‌ಎಂವಿಟಿ ಬೆಂಗಳೂರು ಡೈಲಿ ಪ್ಯಾಸೆಂಜರ್ (06269), ಶಿವಮೊಗ್ಗ ಟೌನ್-ಮೈಸೂರು ಡೈಲಿ ಎಕ್ಸ್‌ಪ್ರೆಸ್ (16226), ಮೈಸೂರು-ಶಿವಮೊಗ್ಗ ಟೌನ್ ಡೈಲಿ ಎಕ್ಸ್‌ಪ್ರೆಸ್ (16225), ಅರಸೀಕೆರೆ-ಮೈಸೂರು ಡೈಲಿ ಪ್ಯಾಸೆಂಜರ್ (56267), ಮೈಸೂರು-ಅರಸೀಕೆರೆ ಡೈಲಿ ಪ್ಯಾಸೆಂಜರ್ (56268), ಮೈಸೂರು-ಅರಸೀಕೆರೆ ಡೈಲಿ ಪ್ಯಾಸೆಂಜರ್ (56266) ಮತ್ತು ಅರಸೀಕೆರೆ-ಮೈಸೂರು ಡೈಲಿ ಪ್ಯಾಸೆಂಜರ್ (56265) ರೈಲುಗಳು ಒಂದು ದಿನ ರದ್ದುಗೊಳ್ಳಲಿವೆ.
ಆಗಸ್ಟ್ 24ರಂದು ರೈಲು ಸಂಖ್ಯೆ 56271 ಶಿವಮೊಗ್ಗ ಟೌನ್-ಚಿಕ್ಕಮಗಳೂರು ಡೈಲಿ ಪ್ಯಾಸೆಂಜರ್ ರೈಲು ಶಿವಮೊಗ್ಗ ಟೌನ್ ಮತ್ತು ಬೀರೂರು ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಬೀರೂರಿನಿಂದ ಅದರ ನಿಗದಿತ ಸಮಯದಲ್ಲಿ ಪ್ರಯಾಣ ಆರಂಭಿಸಲಿದೆ.
ಆಗಸ್ಟ್ 24ರಂದು ಹೊರಡುವ ಈ ಕೆಳಗಿನ ರೈಲುಗಳ ಪ್ರಯಾಣದಲ್ಲಿ ನಿಯಂತ್ರಣವಿರುತ್ತದೆ. ರೈಲು ಸಂಖ್ಯೆ 16587 ಯಶವಂತಪುರ-ಬಿಕಾನೇರ್ ದ್ವಿ-ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ಯಶವಂತಪುರದಿಂದ 60 ನಿಮಿಷ ತಡವಾಗಿ ಹೊರಡಲಿದೆ ಮತ್ತು ಮಾರ್ಗಮಧ್ಯೆ 90 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ. ರೈಲು ಸಂಖ್ಯೆ 18112 ಯಶವಂತಪುರ-ಟಾಟಾನಗರ ಸಾಪ್ತಾಹಿಕ ಎಕ್ಸ್‌ಪ್ರೆಸ್, 12649 ಯಶವಂತಪುರ-ಹಜರತ್ ನಿಜಾಮುದ್ದೀನ್ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್, ಮತ್ತು 12725 ಕೆಎಸ್‌ಆರ್ ಬೆಂಗಳೂರು-ಧಾರವಾಡ ಸಿದ್ಧಗಂಗಾ ದೈನಿಕ ಎಕ್ಸ್‌ಪ್ರೆಸ್ ರೈಲುಗಳನ್ನು ಮಾರ್ಗಮಧ್ಯೆ 60-75 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ ಮತ್ತು ರೈಲು ಸಂಖ್ಯೆ 17325 ಬೆಳಗಾವಿ-ಮೈಸೂರು ವಿಶ್ವಮಾನವ ದೈನಿಕ ಎಕ್ಸ್‌ಪ್ರೆಸ್ ಮಾರ್ಗಮಧ್ಯೆ 90 ನಿಮಿಷಗಳ ಕಾಲ ನಿಯಂತ್ರಣವಾಗಲಿದೆ.
ಬೆಂಗಳೂರು: ಆಂಧ್ರಪ್ರದೇಶ ಮತ್ತು ಕರ್ನಾಟಕದ ಮಲೆನಾಡು ಪ್ರದೇಶದ ನಡುವೆ ರೈಲು ಸಂಪರ್ಕವನ್ನು ವಿಸ್ತರಿಸುವ ಉದ್ದೇಶದಿಂದ, ರೈಲ್ವೆ ಮಂಡಳಿ ತಿರುಪತಿ ಮತ್ತು ಚಿಕ್ಕಮಗಳೂರು (Chikkamagaluru) ನಡುವಿನ ಹೊಸ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ಸೇವೆ ಪ್ರಾರಂಭಕ್ಕೆ ಅನುಮೋದನೆ ನೀಡಿದೆ.
ಉದ್ಘಾಟನಾ ವಿಶೇಷ ರೈಲು:
ಈ ಸೇವೆಯ ಪ್ರಾರಂಭವನ್ನು ಸೂಚಿಸುವಂತೆ, ದಕ್ಷಿಣ ಮಧ್ಯ ರೈಲ್ವೆ ಒಂದು ಬಾರಿ ನಡೆಯುವ ಉದ್ಘಾಟನಾ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ನಡೆಸಲಿದೆ. ರೈಲು ಸಂಖ್ಯೆ 07424 ಚಿಕ್ಕಮಗಳೂರು–ತಿರುಪತಿ ಉದ್ಘಾಟನಾ ವಿಶೇಷ ಎಕ್ಸ್‌ಪ್ರೆಸ್ ಜುಲೈ 11 (ಶುಕ್ರವಾರ) ರಂದು ಚಲಿಸಲಿದ್ದು, ಮಧ್ಯಾಹ್ನ 12 ಕ್ಕೆ ಚಿಕ್ಕಮಗಳೂರಿನಿಂದ ಹೊರಟು, ಮರುದಿನ ಬೆಳಗ್ಗೆ 02:30 ಕ್ಕೆ ತಿರುಪತಿಗೆ ತಲುಪಲಿದೆ. ಈ ರೈಲಿಗೆ ಒಟ್ಟು 18 ಎಲ್‌ಹೆಚ್‌ಬಿ ಕೋಚ್‌ಗಳು ಇರುತ್ತವೆ. ಇದನ್ನೂ ಓದಿ: SSLC ಫಲಿತಾಂಶ ಹೆಚ್ಚಳಕ್ಕೆ ಕ್ರಮ – 29 ಅಂಶಗಳ ಕಾರ್ಯಕ್ರಮ ಅನುಷ್ಠಾನಗೊಳಿಸಿದ ಶಿಕ್ಷಣ ಇಲಾಖೆ
ನಿಯಮಿತ ರೈಲು ಸೇವೆಗಳು:
1. ರೈಲು ಸಂಖ್ಯೆ 17423 ತಿರುಪತಿ – ಚಿಕ್ಕಮಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ 2025 ಜುಲೈ 17 (ಗುರುವಾರ)ರಿಂದ ನಿಯಮಿತ ಸೇವೆ ಪ್ರಾರಂಭವಾಗಲಿದೆ.
2. ರೈಲು ಸಂಖ್ಯೆ 17424 ಚಿಕ್ಕಮಗಳೂರು – ತಿರುಪತಿ ಸಾಪ್ತಾಹಿಕ ಎಕ್ಸ್‌ಪ್ರೆಸ್ 2025 ಜುಲೈ 18 (ಶುಕ್ರವಾರ)ರಿಂದ ನಿಯಮಿತ ಸೇವೆ ಆರಂಭವಾಗಲಿದೆ.
ವೇಳಾಪಟ್ಟಿ ಮತ್ತು ನಿಲ್ದಾಣಗಳು: ರೈಲು ಸಂಖ್ಯೆ 17423 ತಿರುಪತಿ – ಚಿಕ್ಕಮಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ಪ್ರತಿ ಗುರುವಾರ ರಾತ್ರಿ 9 ಗಂಟೆಗೆ ತಿರುಪತಿಯಿಂದ ಹೊರಟು, ಶುಕ್ರವಾರ ಬೆಳಗ್ಗೆ 10:30 ಕ್ಕೆ ಚಿಕ್ಕಮಗಳೂರಿಗೆ ತಲುಪಲಿದೆ. ಈ ಮಾರ್ಗದಲ್ಲಿ ರೈಲು ಈ ಕೆಳಗಿನ ನಿಲ್ದಾಣಗಳಲ್ಲಿ ನಿಲ್ಲಲಿದೆ:
ಪಕಾಲಾ (21:28/21:30), ಚಿತ್ತೂರು (21:58/22:00), ಕಾಟ್ಪಾಡಿ (23:08/23:10), ಜೋಲಾರಪೇಟೆ (00:28/00:30 – ಶುಕ್ರವಾರ), ಕುಪ್ಪಂ (01:10/01:12), ಬಂಗಾರಪೇಟೆ (01:39/01:41), ವೈಟ್‌ಫೀಲ್ಡ್ (02:10/02:12), ಕೃಷ್ಣರಾಜಪುರಂ (02:23/02:25), ಎಸ್‌ಎಂವಿಟಿ ಬೆಂಗಳೂರು (03:05/03:15), ಚಿಕ್ಕಬಾಣಾವರ (03:50/03:52), ತುಮಕೂರು (04:43/04:45), ತಿಪಟೂರು (05:58/06:00), ಅರಸೀಕೆರೆ (07:30/07:50), ದೇವನೂರು (08:10/08:12), ಕಡೂರು (08:26/08:28), ಬೀರೂರು (08:50/09:10), ಬಿಸಲೇಹಳ್ಳಿ (09:26/09:27), ಹಾಗೂ ಸಖರಾಯಪಟ್ಟಣ (09:39/09:40). ಇದನ್ನೂ ಓದಿ: 2ಎ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ – ತನಿಖೆಗೆ ತಡೆ ನೀಡಲು ಹೈಕೋರ್ಟ್ ನಕಾರ
ರೈಲು ಸಂಖ್ಯೆ 17424 ಚಿಕ್ಕಮಗಳೂರು – ತಿರುಪತಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ಪ್ರತಿ ಶುಕ್ರವಾರ ಸಂಜೆ 17:30 ಕ್ಕೆ ಚಿಕ್ಕಮಗಳೂರಿನಿಂದ ಹೊರಟು, ಶನಿವಾರ ಬೆಳಗ್ಗೆ 07:40 ಕ್ಕೆ ತಿರುಪತಿಗೆ ತಲುಪಲಿದೆ. ಈ ಮಾರ್ಗದಲ್ಲಿ ರೈಲು ಈ ನಿಲ್ದಾಣಗಳಲ್ಲಿ ನಿಲ್ಲಲಿದೆ:
ಕೋಚ್ ಸಂಯೋಜನೆ: ಈ ರೈಲುಗಳಲ್ಲಿ ಒಟ್ಟು 18 ಎಲ್‌ಹೆಚ್‌ಬಿ ಕೋಚ್‌ಗಳು ಇರುತ್ತವೆ. ಇವುಗಳಲ್ಲಿ:
2 ಎಸಿ ಟು ಟೈಯರ್ ಕೋಚ್,
4 ಎಸಿ ತ್ರಿ ಟೇಯರ್ ಕೋಚ್, 6 ಸ್ಲೀಪರ್ ಕ್ಲಾಸ್ ಕೋಚ್,
4 ಸಾಮಾನ್ಯ ದ್ವಿತೀಯ ಶ್ರೇಣಿ ಕೋಚ್, 1 ದ್ವಿತೀಯ ಶ್ರೇಣಿಯ ಸಾಮಾನು ಮತ್ತು ಬ್ರೇಕ್ ವ್ಯಾನ್ – ದಿವ್ಯಾಂಗ ಜನರಿಗಾಗಿ ವಿಶಿಷ್ಟ ವಿಭಾಗ,
1 ಸಾಮಾನು/ಜನರೇಟರ್/ಬ್ರೇಕ್ ವ್ಯಾನ್ ಕೋಚ್.
ಈ ಹೊಸ ಸಾಪ್ತಾಹಿಕ ಎಕ್ಸ್‌ಪ್ರೆಸ್ ಸೇವೆಯು ತಿರುಪತಿಯ ದೇವಾಲಯ ನಗರದ ಮತ್ತು ಚಿಕ್ಕಮಗಳೂರಿನ ಕಾಫಿ ನಾಡಿನ ಪ್ರದೇಶದ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಅನುಕೂಲಕರ ಸಾರಿಗೆ ಆಯ್ಕೆಯಾಗಿ ಸೇವೆ ನೀಡಲಿದೆ. ಜೊತೆಗೆ, ಮಧ್ಯಂತರ ಪಟ್ಟಣಗಳು ಹಾಗೂ ಜಿಲ್ಲೆಗಳ ಜನತೆಗೂ ಇದರಿಂದ ಲಾಭವಾಗಲಿದೆ.
ರಾಂಚಿ: ಕಾಡಾನೆಯೊಂದು (Elephant) ರೈಲ್ವೆ ಹಳಿಗಳ ಮೇಲೆ ಮರಿಗೆ ಜನ್ಮ ನೀಡಿದ ಪರಿಣಾಮ ಜಾರ್ಖಂಡ್‌ನಲ್ಲಿ (Jarkhand) ಸುಮಾರು ಎರಡು ಗಂಟೆಗಳ ಕಾಲ ರೈಲು ಸಂಚಾರ ಸ್ಥಗಿತಗೊಳಿಸಿದ ಅಪರೂಪದ ಘಟನೆ ನಡೆದಿದೆ.
ಆನೆ ಮತ್ತು ಅದರ ಮರಿ ಸುರಕ್ಷಿತವಾಗಿವೆ. ಈ ಅಪರೂಪದ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ಈ ವೀಡಿಯೊವನ್ನು X ನಲ್ಲಿ ಹಂಚಿಕೊಂಡಿದ್ದು, ಇದು ಕರುಣೆಗೆ ಉದಾಹರಣೆ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ಕಳ್ಳ ಸಂಬಂಧ ಆರೋಪ – ಯುವಕನನ್ನ ಥಳಿಸಿ ಚಿಕ್ಕಮ್ಮನೊಂದಿಗೆ ಮದುವೆ ಮಾಡಿಸಿದ ಗ್ಯಾಂಗ್
Beyond the news of human-animal conflicts, happy to share this example of human-animal harmonious existence.
A train in Jharkhand waited for two hours as an elephant delivered her calf. The 📹 shows how the two later walked on happily.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC), ರೈಲ್ವೆ ಸಚಿವಾಲಯದ ಸಮನ್ವಯದೊಂದಿಗೆ ಭಾರತದಾದ್ಯಂತ 3,500 ಕಿಮೀ ರೈಲ್ವೆ ಹಳಿಗಳನ್ನು ಸಮೀಕ್ಷೆ ಮಾಡಿದ ನಂತರ 110 ಕ್ಕೂ ಹೆಚ್ಚು ಸೂಕ್ಷ್ಮ ವನ್ಯಜೀವಿ ವಲಯಗಳನ್ನು ಗುರುತಿಸಿದೆ ಎಂದು ಯಾದವ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಈ ಉಪಕ್ರಮವು ಪ್ರಾಣಿಗಳಿಗೆ ಸಂಬಂಧಿಸಿದ ಅಪಘಾತಗಳನ್ನು ತಡೆಗಟ್ಟುವ ಗುರಿಯನ್ನು ಹೊಂದಿದೆ. ವಿಶೇಷವಾಗಿ ಹಳಿಗಳು ಹೆಚ್ಚಾಗಿ ವನ್ಯಜೀವಿ ಕಾರಿಡಾರ್‌ಗಳೊಂದಿಗೆ ಛೇದಿಸುವ ಅರಣ್ಯ ಪ್ರದೇಶಗಳಲ್ಲಿವೆ.
ಬೆಂಗಳೂರು: ಏಳು ಕೊಂಡಲವಾಡ ತಿರುಪತಿಯ (Tirupati) ಶ್ರೀನಿವಾಸನಿಗೆ ವಿಶ್ವದೆಲ್ಲೆಡೆ ಭಕ್ತಗಣವಿದೆ. ರಾಜ್ಯದ ಲಕ್ಷಾಂತರ ಜನ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಿಂದ ತಿರುಪತಿಗೆ ತೆರಳುವ ಭಕ್ತಾದಿಗಳಿಗೆ ರೈಲ್ವೆ ಇಲಾಖೆ ಗುಡ್ ನ್ಯೂಸ್ ಕೊಟ್ಟಿದೆ.
ವೆಂಕಟೇಶ್ವರನ ದರ್ಶನಕ್ಕಾಗಿ ರಾಜ್ಯದ ಚಿಕ್ಕಮಗಳೂರಿನಿಂದ (Chikkamagaluru) ನೂತನ ರೈಲು (Train) ಸಂಚಾರ ಆರಂಭವಾಗಿದ್ದು, ಚಿಕ್ಕಮಗಳೂರಿನಿಂದ ತಿರುಪತಿಗೆ ವಾರಕ್ಕೊಮ್ಮೆ ರೈಲು ಸಂಚರಿಸಲಿದೆ. ಪ್ರತಿ ಗುರುವಾರ ತಿರುಪತಿಯಿಂದ ಚಿಕ್ಕಮಗಳೂರಿಗೆ ರೈಲು ಸಂಚರಿಸಲಿದ್ದು, ಪ್ರತಿ ಶುಕ್ರವಾರ ಚಿಕ್ಕಮಗಳೂರಿನಿಂದ ತಿರುಪತಿಗೆ ನೂತನ ರೈಲು ಹೊರಡಲಿದೆ. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಮಾಡಿದ್ದೇ ವಿಜಯೇಂದ್ರ: ಮತ್ತೆ ಗುಡುಗಿದ ಯತ್ನಾಳ್
ಪ್ರಮುಖವಾಗಿ ಈ ರೈಲು ಚಿತ್ತೂರು, ಕಟ್ಪಾಡಿ, ಕುಪ್ಪಂ, ಬಂಗಾರಪೇಟೆ, ವೈಟ್ ಫೀಲ್ಡ್, ಕೆಆರ್ ಪುರಂ, ಬೆಂಗಳೂರು, ಚಿಕ್ಕಬಾಣಾವರ, ತುಮಕೂರು, ತಿಪಟೂರು, ಬಿರೂರು, ಕಡೂರು ಸೇರಿದಂತೆ ಹಲವು ನಿಲ್ದಾಣಗಳನ್ನು ಹೊಂದಿದೆ. ಹೀಗಾಗಿ ಮಲೆನಾಡು, ತುಮಕೂರು, ಬೆಂಗಳೂರು ಹಾಗೂ ಕೋಲಾರ ಭಾಗದ ಭಕ್ತರು ಈ ಸೌಲಭ್ಯ ಬಳಸಿಕೊಳ್ಳುವಂತೆ ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ `ಧರ್ಮ ಚಕ್ರವರ್ತಿ’ ಬಿರುದು ಪ್ರದಾನ
ನವದೆಹಲಿ: ಗ್ವಾಲಿಯರ್‌ನಿಂದ ಬೆಂಗಳೂರಿಗೆ (Bengaluru- Gwalior) ಹೊಸ ರೈಲು ಸಂಪರ್ಕವನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಉದ್ಘಾಟಿಸಿದ್ದಾರೆ.
ಬಳಿಕ ಮಾತನಾಡಿದ ಸಚಿವರು, ಈ ರೈಲು ಗ್ವಾಲಿಯರ್, ಗುಣ, ಭೋಪಾಲ್ ಮತ್ತು ಮಧ್ಯಪ್ರದೇಶದ ಎಲ್ಲರಿಗೂ ಪ್ರಯೋಜನವನ್ನು ನೀಡುತ್ತದೆ. ಪ್ರಧಾನಿಯವರು ಮಧ್ಯಪ್ರದೇಶದ ಅಭಿವೃದ್ಧಿಗೆ ಹಲವು ಉಪಕ್ರಮಗಳನ್ನು ಕೈಗೊಂಡರು. 11 ವರ್ಷಗಳಲ್ಲಿ 2651 ಕಿಮೀ ಉದ್ದದ ಹಳಿಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂದು ವೈಭವದ ಪುರಿ ಜಗನ್ನಾಥ ರಥಯಾತ್ರೆ
ಇದು ಡೆನ್ಮಾರ್ಕ್‌ನಂತಹ ದೇಶಗಳ ಒಟ್ಟು ರೈಲ್ವೆ ಜಾಲಕ್ಕಿಂತ ಹೆಚ್ಚು. ಗ್ವಾಲಿಯರ್ ಸೇರಿದಂತೆ 80 ನಿಲ್ದಾಣಗಳು ನಿರ್ಮಾಣ ಹಂತದಲ್ಲಿವೆ. ಗ್ವಾಲಿಯರ್ ಮತ್ತು ಆಗ್ರಾ ನಡುವೆ ರೈಲು ಪ್ರಾರಂಭಿಸಲು ಪ್ರಯತ್ನಗಳು ನಡೆಯುತ್ತಿವೆ. ಸುಮಾರು 24,000 ಕೋಟಿ ರೂ. ಮೌಲ್ಯದ ಹೊಸ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಕುಂಭಕ್ಕೆ ಮಹಾ ಕುಂಭದಂತೆ ಸಿದ್ಧತೆಗಳನ್ನು ಮಾಡಲಾಗುವುದು ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಾತನಾಡಿ, ಇದು ಈ ಪ್ರದೇಶಕ್ಕೆ ಒಂದು ದೊಡ್ಡ ಕೊಡುಗೆಯಾಗಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಗ್ವಾಲಿಯರ್ ಬೆಂಗಳೂರಿನೊಂದಿಗೆ ಸಂಪರ್ಕ ಹೊಂದಿದೆ. ಗ್ವಾಲಿಯರ್-ಚಂಬಲ್ ವಿಭಾಗದ ನಿವಾಸಿಗಳು ಬೆಂಗಳೂರಿಗೆ ರೈಲು ಹಿಡಿಯಲು ಕೋಟಾ, ಬಿನಾ ಮತ್ತು ಭೋಪಾಲ್‌ಗೆ ಪ್ರಯಾಣಿಸಬೇಕಾಗಿತ್ತು. ಪ್ರಯಾಣಿಕರಿಗೆ ಹೆಚ್ಚುವರಿಯಾಗಿ ಆರರಿಂದ ಎಂಟು ಗಂಟೆಗಳ ಪ್ರಯಾಣದ ಸಮಯವಿದೆ. ಇಂದು, ಪ್ರಧಾನ ಮಂತ್ರಿಗಳ ಆಶೀರ್ವಾದ ಮತ್ತು ರೈಲ್ವೆ ಸಚಿವರ ಸಹಾಯದಿಂದ ಅದೇ ಪ್ರಯಾಣ ಸುಲಭವಾಗಿದೆ. ಈಗ, ನಾವು ಗ್ವಾಲಿಯರ್‌ನಿಂದ ಬೆಂಗಳೂರಿಗೆ 30 ಗಂಟೆಗಳಲ್ಲಿ ತಲುಪಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಂತರಿಕ್ಷ ನಿಲ್ದಾಣದಲ್ಲಿ ಶುಭಾಂಶು ಶುಕ್ಲಾ – ಭಾರತದಿಂದ ‘ಸಪ್ತ ಸಂಶೋಧನೆ’
ಮಾಸ್ಕೋ: ರಷ್ಯಾದ (Russia) ಪಶ್ಚಿಮ ಬ್ರಿಯಾನ್ಸ್ಕ್ ಪ್ರದೇಶದಲ್ಲಿ ಶನಿವಾರ ತಡರಾತ್ರಿ ರೈಲು ಸೇತುವೆ ಕುಸಿದ (Bridge Collapse) ಪರಿಣಾಮ ರೈಲು ಹಳಿ ತಪ್ಪಿ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದು, 30 ಜನರು ಗಾಯಗೊಂಡಿದ್ದಾರೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.
A bridge collapse in the Bryansk Region led to an accident involving a train and several vehicles, local authorities confirmed. One child is in serious condition, and the train operator was… pic.twitter.com/lFOIB59bAJ
ಸಾರಿಗೆ ಕಾರ್ಯಾಚರಣೆಗಳ ಮೇಲಿನ ಅಕ್ರಮ ದಾಳಿಯಿಂದ ಉಕ್ರೇನ್ (Ukraine) ಗಡಿ ಭಾಗಗಲ್ಲಿರುವ ರೈಲ್ವೆ ಬ್ರಿಡ್ಜ್ ಕುಸಿದು ಬಿದ್ದಿದೆ. ಕ್ಲಿಮೊವೊದಿಂದ ಮಾಸ್ಕೋಗೆ ರೈಲು ಬರುತ್ತಿದ್ದಾಗ ಈ ಸೇತುವೆ ಕುಸಿದಿದೆ. ಪರಿಣಾಮ ರೈಲು ಹಳಿ ತಪ್ಪಿ ದುರಂತ ಸಂಭವಿಸಿದೆ ಎಂದು ರಷ್ಯಾದ ರೈಲ್ವೆ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಪಾಕ್ ದಾಳಿಯಿಂದ ನಮ್ಮ ಫೈಟರ್ ಜೆಟ್‌ಗಳಿಗೂ ಹಾನಿ? – ಮೊದಲ ಬಾರಿಗೆ ಸಿಡಿಎಸ್ ಪ್ರತಿಕ್ರಿಯೆ ಏನು?
ಸೇತುವೆ ಕುಸಿದ ನಂತರ ಪಶ್ಚಿಮ ರಷ್ಯಾದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಶನಿವಾರ ರಾತ್ರಿ 10.40ರ ಸುಮಾರಿಗೆ ರೈಲ್ವೆ ಬ್ರಿಡ್ಜ್ ಕುಸಿದು 7 ಮಂದಿ ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆ ಮಾಡಲಾಗುತ್ತಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ ಎಂದು ರಷ್ಯಾ ಕೇಂದ್ರ ಸಚಿವಾಲಯ ಮಾಹಿತಿ ನೀಡಿದೆ. ಇದನ್ನೂ ಓದಿ: Miss World | ಥಾಯ್ಲೆಂಡ್‌ನ ಒಪಾಲ್ ಸುಚಾತಾಗೆ 72ನೇ ವಿಶ್ವ ಸುಂದರಿ ಕಿರೀಟ
ಕದನ ವಿರಾಮಕ್ಕೆ ಟ್ರಂಪ್ ಒತ್ತಾಯ
ರಷ್ಯಾ ಹಾಗೂ ಉಕ್ರೇನ್ ಎರಡೂ ದೇಶಗಳು ಕದನ ವಿರಾಮ ಮಾಡುವಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಒತ್ತಾಯಿಸುತ್ತಿದ್ದಾರೆ. ಈ ಹಿಂದೆ ಹಲವು ಬಾರಿ ಎರಡೂ ದೇಶಗಳ ನಡುವೆ ನಡೆದ ಶಾಂತಿ ಒಪ್ಪಂದ ವಿಫಲವಾಗಿತ್ತು. ಮುಂದಿನ ವಾರ ಇಸ್ತಾನ್‌ಬುಲ್‌ನಲ್ಲಿ ಉಕ್ರೇನ್ ಅಧಿಕಾರಿಗಳೊಂದಿಗೆ ಎರಡನೇ ಸುತ್ತಿನ ವೈಯಕ್ತಿಕ ಮಾತುಕತೆ ನಡೆಸಲು ಮುಂದಾಗಿರುವುದನ್ನು ರಷ್ಯಾ ತಿಳಿಸಿದೆ.
ಹಾಸನ: ಸುರಕ್ಷತೆ ಮತ್ತು ವಿದ್ಯುದ್ದೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಹಾಸನ (Hassan) ಜಿಲ್ಲೆಯಲ್ಲಿ ಓಡಾಡುವ ಪ್ರಮುಖ ರೈಲುಗಳ ಸಂಚಾರವನ್ನು ಕೆಲ ದಿನಗಳ ಕಾಲ ರದ್ದು ಮಾಡಿ ರೈಲ್ವೆ ಇಲಾಖೆ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದಲ್ಲಿ ಜೂನ್ 1 ರಿಂದ ನವೆಂಬರ್ 1 ರವರೆಗೆ ಬಂದ್ ಆಗಲಿದ್ದು, ಮೇ 31 ರಿಂದ ನವೆಂಬರ್ 1 ರವರೆಗೆ ಪ್ರತಿ ಶನಿವಾರ ಸಂಚರಿಸುವ ಯಶವಂತಪುರ-ಮಂಗಳೂರು ಎಕ್ಸ್ಪ್ರೆಸ್ ಸಂಚಾರವನ್ನು (ರೈಲು ಸಂಖ್ಯೆ 16539) ರದ್ದು ಮಾಡಲಾಗಿದೆ. ಜೂನ್ 1 ರಿಂದ ನವೆಂಬರ್ 2 ರವರೆಗೆ ಪ್ರತಿ ಭಾನುವಾರ ಮಂಗಳೂರು-ಯಶವಂತಪುರ ಸಾಪ್ತಾಹಿಕ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16540), ಜೂನ್ 1 ರಿಂದ ಅಕ್ಟೋಬರ್ 30 ರವರೆಗೆ ಮಂಗಳವಾರ, ಗುರುವಾರ ಮತ್ತು ಭಾನುವಾರ ಸಂಚರಿಸುವ ಯಶವಂತಪುರ-ಮಂಗಳೂರು ಜಂಕ್ಷನ್ ಟ್ರೈ-ವೀಕ್ಲಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16575) ಮತ್ತು ಜೂನ್ 2 ರಿಂದ ಅಕ್ಟೋಬರ್ 31 ರವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಚರಿಸುವ ಮಂಗಳೂರು-ಯಶವಂತಪುರ ಟ್ರೈ-ವೀಕ್ಲಿ ಎಕ್ಸ್ಪ್ರೆಸ್ ಕೂಡ ತುರ್ತು ಕಾಮಗಾರಿಗಾಗಿ (ರೈಲು ಸಂಖ್ಯೆ 16576) ರದ್ದು ಮಾಡಲಾಗಿದೆ. ಇದನ್ನೂ ಓದಿ: ಇಂದಿನಿಂದ 5 ದಿನ 3 ಗಂಟೆಗಳ ಕಾಲ ಹೆಬ್ಬಾಳ ಫ್ಲೈಓವರ್ ಬಂದ್
ಇದಲ್ಲದೇ ಜೂನ್ 2 ರಿಂದ ಅಕ್ಟೋಬರ್ 31 ರವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಚರಿಸುವ ಯಶವಂತಪುರ-ಕಾರವಾರ ಟ್ರೈ-ವೀಕ್ಲಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16515) ರೈಲು ಮತ್ತು ಜೂನ್ 3 ರಿಂದ ನವೆಂಬರ್ 1, ರವರೆಗೆ ಮಂಗಳವಾರ, ಗುರುವಾರ ಮತ್ತು ಶನಿವಾರ ಸಂಚರಿಸುವ ಕಾರವಾರ-ಯಶವಂತಪುರ ಟ್ರೈ-ವೀಕ್ಲಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16516) ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ.
ಜಗತ್ತಿನಲ್ಲೇ ಅತಿ ದೊಡ್ಡ ರೈಲು ಸಂಪರ್ಕ ಜಾಲವನ್ನು ಹೊಂದಿರುವ ವ್ಯವಸ್ಥೆಯೆಂದರೆ ಅದು ಭಾರತೀಯ ರೈಲ್ವೆ (Indian Railway). ಈ ವಲಯ ಹಲವು ಸುಧಾರಿತ ಕ್ರಮಗಳೊಂದಿಗೆ ಪ್ರಯಾಣಿಕ ಸ್ನೇಹಿಯಾಗುವತ್ತ ಹೆಜ್ಜೆ ಇಟ್ಟಿದೆ. ಮನುಷ್ಯ ಹೋದಲ್ಲಿ ಬಂದಲ್ಲಿ, ನಿಂತಲ್ಲಿ ಕುಂತಲ್ಲಿ ಎಲ್ಲಾ ಸೌಕರ್ಯಗಳು ಕೈಗೆ ಸಿಗುವಂತಿದ್ದರೆ ಆ ಕಡೆ ಹೆಚ್ಚು ಒಲವು ತೋರುವುದುಂಟು. ಇದನ್ನರಿತು ರೈಲ್ವೆಯು ಹೊಸ ವ್ಯವಸ್ಥೆಯೊಂದನ್ನು ಜಾರಿಗೊಳಿಸಿದೆ. ರೈಲಿನಲ್ಲೇ ಎಟಿಎಂ (ATM on Train) ಸ್ಥಾಪಿಸಿ ಜನರ ಕೈಗೆ ಸುಲಭವಾಗಿ ಹಣ ಸಿಗುವಂತೆ ಮಾಡಿದೆ. ರೈಲ್ವೆಯ ಹೊಸ ಕ್ರಮದಿಂದ ಪ್ರಯಾಣಿಕರು ಖುಷಿಪಟ್ಟಿದ್ದಾರೆ.
ಭಾರತಕ್ಕೆ ರೈಲು ಬಂದಿದ್ಯಾವಾಗ?
1853 ರಲ್ಲಿ ಭಾರತಕ್ಕೆ ಮೊದಲ ಬಾರಿಗೆ ರೈಲು ವ್ಯವಸ್ಥೆ ಬಂದಿತು. ಮುಂಬೈ (ಆಗ ಬಾಂಬೆ) ಮತ್ತು ಥಾಣೆ ನಡುವೆ ಮೊದಲ ಪ್ರಯಾಣಿಕ ರೈಲು ಓಡಾಟ ಆರಂಭಿಸಿತು. ಆರಂಭದಲ್ಲಿ, ಪ್ರಮುಖ ಬಂದರು ನಗರಗಳನ್ನು ಸಂಪರ್ಕಿಸುವುದು, ಸರಕುಗಳ ವ್ಯಾಪಾರ ಮತ್ತು ಸಾಗಣೆಯನ್ನು ಸುಗಮಗೊಳಿಸುವತ್ತ ಗಮನ ಹರಿಸಲಾಯಿತು. ವರ್ಷಗಳು ಕಳೆದಂತೆ ಈ ಜಾಲವು ವಿಸ್ತರಿಸಿತು. ವಿವಿಧ ಪ್ರದೇಶಗಳನ್ನು ಸಂಪರ್ಕಿಸಲು ಮತ್ತು ರಾಷ್ಟ್ರೀಯ ಏಕೀಕರಣದಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಇದನ್ನೂ ಓದಿ: ಭಾರತದ ಮೊದಲ ಆನ್-ಬೋರ್ಡ್ ಎಟಿಎಂ ಪ್ರಯೋಗ ಯಶಸ್ವಿ – ಇನ್ಮುಂದೆ ರೈಲಿನಲ್ಲೂ ಇರಲಿದೆ ಎಟಿಎಂ!
ದೇಶದಲ್ಲಿ ಎಷ್ಟು ರೈಲುಗಳಿವೆ?
ಭಾರತದಲ್ಲಿ 7,349 ನಿಲ್ದಾಣಗಳು, 13,169 ಪ್ಯಾಸೆಂಜರ್ ರೈಲುಗಳು, 8,479 ಸರಕು ರೈಲುಗಳಿವೆ. 2.3 ಕೋಟಿ ಪ್ರಯಾಣಿಕರಿಗೆ ಮತ್ತು 7,349 ನಿಲ್ದಾಣಗಳಿಂದ ಪ್ರತಿದಿನ 30 ಲಕ್ಷ ಟನ್ ಸರಕು ಸಾಗಣೆಗೆ ಸೇವೆ ಸಲ್ಲಿಸುತ್ತಿವೆ. ಕರ್ನಾಟಕದಲ್ಲಿ 200 ಕ್ಕೂ ಹೆಚ್ಚು ರೈಲು ನಿಲ್ದಾಣಗಳಿವೆ. ರಾಜ್ಯದಲ್ಲಿ ಪಟ್ಟಿಯಲ್ಲಿ ಸೇರಿಸದ ಕೆಲವು ನಿಲ್ದಾಣಗಳಿವೆ. ಇದರಲ್ಲಿ ಸಣ್ಣ ನಿಲ್ದಾಣಗಳು ಮತ್ತು ನಿರ್ದಿಷ್ಟ ರೈಲು ಮಾರ್ಗಗಳಲ್ಲಿರುವ ನಿಲ್ದಾಣಗಳು ಸೇರಿರಬಹುದು. ಸಾಮಾನ್ಯ ನಿಲ್ದಾಣಗಳು ಮತ್ತು ಸಣ್ಣ ನಿಲ್ದಾಣಗಳು ಸೇರಿದಂತೆ ಒಟ್ಟು ನಿಲ್ದಾಣಗಳ ಸಂಖ್ಯೆ ಸುಮಾರು 262 ಎಂದು ಅಂದಾಜಿಸಲಾಗಿದೆ.
ದೇಶದಲ್ಲೇ ಮೊದಲು
ದೇಶದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ರೈಲ್ವೆಯು ರೈಲಿನೊಳಗೆ ಎಟಿಎಂ ಯಂತ್ರವನ್ನು ಸ್ಥಾಪಿಸಿದೆ. ಇನ್ಮುಂದೆ ರೈಲಿನಲ್ಲೂ ಎಟಿಎಂ ಮೂಲಕ ಹಣ ಪಡೆಯಬಹುದು. ಹೌದು, ಮುಂಬೈ-ಮನಮಾಡ್ ಪಂಚವಟಿ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಾಯೋಗಿಕವಾಗಿ ಎಟಿಎಂ ಯಂತ್ರ ಅಳವಡಿಸಲಾಗಿದೆ. ಸಾರ್ವಜನಿಕರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ. ತನ್ನ 172ನೇ ವರ್ಷಾಚರಣೆಯ ಪ್ರಯುಕ್ತ ಈ ವ್ಯವಸ್ಥೆಯನ್ನು ಭಾರತೀಯ ರೈಲ್ವೆ ಜಾರಿಗೆ ತಂದಿದೆ. ಪ್ರಯಾಣಿಕರಿಗೆ ಬ್ಯಾಂಕಿಂಗ್ ಸೇವೆಗಳನ್ನು ಸುಗಮಗೊಳಿಸಲು ಒಂದು ಹೆಜ್ಜೆ ಮುಂದಿಟ್ಟಿದೆ. ಕೇಂದ್ರ ರೈಲ್ವೆ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಸೃಜನಶೀಲ ಕಾರ್ಯಕ್ಕೆ ಕೈಜೋಡಿಸಿವೆ. ಸಾರಿಗೆಯೊಂದಿಗೆ ಆರ್ಥಿಕ ಪ್ರವೇಶವನ್ನು ಬೆಸೆಯುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ. ಇದನ್ನೂ ಓದಿ: Explainer| ಏನಿದು ಪಬ್ಲಿಕ್ ಟಿವಿ ವಿದ್ಯಾಪೀಠ? ವಿದ್ಯಾರ್ಥಿಗಳಿಗೆ ಏನು ಲಾಭ? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
🚨 ATM facility in Indian train for the first time, announces Ashwini Vaishnaw. pic.twitter.com/n7Jp5RTNlJ
ಅತಿ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುವ ರೈಲು
ಪಂಚವಟಿ ಎಕ್ಸ್‌ಪ್ರೆಸ್ ಮಹಾರಾಷ್ಟ್ರದ ಮನಮಾಡ್-ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಡುವೆ ಸಂಚರಿಸುವ ದೈನಂದಿನ ಅಂತರನಗರ ಸೂಪರ್ ಫಾಸ್ಟ್ ರೈಲಾಗಿದೆ. ಬಹಳಷ್ಟು ಪ್ರಯಾಣಿಕರನ್ನು ಹೊತ್ತೊಯ್ಯುವ ರೈಲು ಎಂದು ಹೆಸರುವಾಸಿಯಾಗಿದೆ. ಹೀಗಾಗಿ, ಪ್ರಾಯೋಗಿಕವಾಗಿ ಈ ರೈಲಿನ ಒಂದು ಬೋಗಿಯಲ್ಲಿ ಎಟಿಎಂ ಅಳವಡಿಸಲಾಗಿದೆ. ರೈಲಿನಲ್ಲೂ ಪ್ರಯಾಣಿರಿಗೆ ಸುಲಭವಾಗಿ ಹಣಕಾಸು ಸೇವೆ ಒದಗಿಸಲು ಇದು ಸಹಕಾರಿಯಾಗಿದೆ.
ಹೇಗೆ ಕೆಲಸ ಮಾಡುತ್ತೆ?
ರೈಲಿನ ಎಸಿ ಕೋಚ್‌ನಲ್ಲಿ ಎಟಿಎಂ ಯಂತ್ರವನ್ನು ಅಳವಡಿಸಲಾಗಿದೆ. ನಿಲ್ದಾಣಗಳು, ನಗರಗಳಲ್ಲಿನ ಇತರೆ ಎಟಿಎಂಗಳಂತೆಯೇ ಇದು ಕಾರ್ಯನಿರ್ವಹಿಸುತ್ತದೆ. ಹಣ ಡ್ರಾ, ಚೆಕ್ ಬುಕ್ ಆರ್ಡರ್, ಬ್ಯಾಂಕ್ ಸ್ಟೇಟ್‌ಮೆಂಟ್ ಪಡೆಯಬಹುದು. ನಗದು ಹಿಂಪಡೆಯಲು ಪ್ರಯಾಣಿಕರು ವಿವಿಧ ಬ್ಯಾಂಕ್‌ಗಳ ಡೆಬಿಟ್ ಕಾರ್ಡ್‌ಗಳನ್ನು ಬಳಸಬಹುದು. ಈ ಎಟಿಎಂ ಅನ್ನು ಬೋಗಿಯ ಹಿಂಭಾಗದಲ್ಲಿರುವ ಒಂದು ಕ್ಯೂಬಿಕಲ್‌ನಲ್ಲಿ ಇರಿಸಲಾಗಿದೆ. ಈ ಪ್ರದೇಶದಲ್ಲಿ ಹಿಂದೆ ತಾತ್ಕಾಲಿಕ ಪ್ಯಾಂಟ್ರಿಯಾಗಿ ಕಾರ್ಯನಿರ್ವಹಿಸಲಾಗುತ್ತಿತ್ತು. ಭದ್ರತೆ ಕಾಪಾಡಲು ಮತ್ತು ಯಾವುದೇ ಅವಘಡಗಳನ್ನು ತಪ್ಪಿಸಲು ಆ ಜಾಗವನ್ನು ಶಟರ್‌ನಿಂದ ಲಾಕ್ ಮಾಡಲಾಗಿದೆ. 24*7 ಸಿಸಿಟಿವಿ ಕಣ್ಗಾವಲಿನಲ್ಲಿ ಇರಿಸಲಾಗಿದೆ. ಎಕ್ಸ್‌ಪ್ರೆಸ್‌ನ ಎಲ್ಲಾ 22 ಕೋಚ್‌ಗಳು ಒಂದಕ್ಕೊಂದು ಸಂಪರ್ಕ ಹೊಂದಿರುವುದರಿಂದ, ಎಲ್ಲಾ ಪ್ರಯಾಣಿಕರು ಇದನ್ನು ಬಳಸಬಹುದು.
ಪ್ರಾಯೋಗಿಕ ಅವಧಿಯಲ್ಲಿ ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ತಾಂತ್ರಿಕ ತೊಂದರೆಗಳ ಸಂದರ್ಭದಲ್ಲಿ ನೆರವು ನೀಡಲು ಎಸ್‌ಬಿಐ ಪ್ರತಿನಿಧಿ ಸಹ ಮಂಡಳಿಯಲ್ಲಿರುತ್ತಾರೆ. ರೈಲಿನ ವಿದ್ಯುತ್ ವ್ಯವಸ್ಥೆಗಳನ್ನು ಯಂತ್ರಕ್ಕೆ ವಿದ್ಯುತ್ ಪೂರೈಸಲು ಹೊಂದಿಸಲಾಗಿದೆ. ಯಾವುದೇ ಅಲಭ್ಯತೆಯನ್ನು ತಡೆಗಟ್ಟಲು ಬ್ಯಾಕ್‌ಅಪ್ ಸ್ಥಳದಲ್ಲಿದೆ. ಇದನ್ನೂ ಓದಿ: PublicTV Explainer: ‘ಕೆಜಿಎಫ್’ಗೆ ಕಂಟಕ – ಸರ್ಕಾರ V/S ವಿದ್ಯಾರ್ಥಿಗಳು; ಏನಿದು ವಿವಾದ?
ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ
ಈ ಉಪಕ್ರಮವು ಭಾರತ ಸರ್ಕಾರದ ಡಿಜಿಟಲ್ ಇಂಡಿಯಾ ಅಭಿಯಾನದ ವಿಶಾಲ ಗುರಿಗಳಿಗೆ ಅನುಗುಣವಾಗಿದೆ. ಇದು ವಿಶ್ವಾದ್ಯಂತ ಡಿಜಿಟಲ್ ಬ್ಯಾಂಕಿಂಗ್ ಪ್ರವೇಶ ಮತ್ತು ಆರ್ಥಿಕ ಸೇರ್ಪಡೆಯನ್ನು ಮುನ್ನಡೆಸುವ ಗುರಿಯನ್ನು ಹೊಂದಿದೆ. ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರು, ಎಟಿಎಂಗಳಿಲ್ಲದ ಸ್ಥಳಗಳಿಗೆ ಮತ್ತು ಸೀಮಿತ ಹಣಕಾಸು ಸೇವೆಗಳಿರುವ ಪ್ರದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಇದು ಸಹಕಾರಿಯಾಗಿದೆ.
ಆನ್‌ಬೋರ್ಡ್ ಎಟಿಎಂ ತುರ್ತು ಸಂದರ್ಭಗಳಲ್ಲಿ ಪ್ರಯಾಣಿಸುವಾಗ, ನಗದು ಅಗತ್ಯವಿರುವಾಗ, ಆಗಾಗ್ಗೆ ಪ್ರಯಾಣಿಕರಿಗೆ ಅನುಕೂಲಕರವಾಗಿ ಸಹಾಯ ಮಾಡುತ್ತದೆ. ಮೊಬೈಲ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್‌ಗಳ ಪರಿಚಯವಿಲ್ಲದ ಹಿರಿಯ ವ್ಯಕ್ತಿಗಳು ಮತ್ತು ಪ್ರಯಾಣಿಕರು ಸಹ ಇದರಿಂದ ಪ್ರಯೋಜನ ಪಡೆಯುತ್ತಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Explainer | ಯಾರಿದು ಹೌತಿ ಉಗ್ರರು? ಅಮೆರಿಕ ದಾಳಿ ನಡೆಸಿದ್ದು ಯಾಕೆ? ವಿಶ್ವಕ್ಕೆ ಸಮಸ್ಯೆ ಏನು?
ಮುಂದೇನು?
ಈ ಪ್ರಯೋಗವು ಯಶಸ್ವಿಯಾದರೆ ಹೆಚ್ಚಿನ ರೈಲುಗಳಲ್ಲಿ ಎಟಿಎಂ ಯಂತ್ರವನ್ನು ಸ್ಥಾಪಿಸಲಾಗುವುದು. ಮುಂದೆ ರಾಜಧಾನಿ, ದುರಂತೋ ಮತ್ತು ವಂದೇ ಭಾರತ್ ಎಕ್ಸ್‌ಪ್ರೆಸ್‌ನಂತಹ ದೀರ್ಘ ಪ್ರಯಾಣ ಮತ್ತು ಪ್ರೀಮಿಯಂ ರೈಲುಗಳಲ್ಲಿ ಹಣಕಾಸು ಸೇವೆಗಳನ್ನು ಸಂಯೋಜಿಸುವ ಬಗ್ಗೆ ಭಾರತೀಯ ರೈಲ್ವೇ ಯೋಚಿಸಿದೆ. ರೈಲು ಪ್ರಯಾಣವನ್ನು ಪ್ರಯಾಣಿಕರ ಸ್ನೇಹಿಯಾಗಿ ಮಾಡಲು ಕ್ರಮ ವಹಿಸಲಿದೆ. ಇಂತಹ ಯೋಜನೆಗಳು ಡಿಜಿಟಲ್ ಬ್ಯಾಂಕಿಂಗ್ ಸಲಹೆ ಸೇವೆಗಳು ಮತ್ತು ಸ್ಮಾರ್ಟ್ ಟಿಕೆಟಿಂಗ್ ಕಿಯೋಸ್ಕ್‌ಗಳನ್ನು ಸಹ ಅಳವಡಿಸಿಕೊಳ್ಳಬಹುದು.