Tag: ರೈನಾ

  • ಈ ಬಾರಿಯ ಐಪಿಎಲ್‍ನಲ್ಲಿ ಕಾಣಸಿಗಲ್ಲ ಈ ಜೋಡಿ ಆಟಗಾರರ ಕಮಾಲ್

    ಈ ಬಾರಿಯ ಐಪಿಎಲ್‍ನಲ್ಲಿ ಕಾಣಸಿಗಲ್ಲ ಈ ಜೋಡಿ ಆಟಗಾರರ ಕಮಾಲ್

    ಮುಂಬೈ: 15ನೇ ಆವೃತ್ತಿ ಐಪಿಎಲ್‍ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ಈ ಬಾರಿ ಅಭಿಮಾನಿಗಳು ತಮ್ಮ ನೆಚ್ಚಿನ ಜೋಡಿ ಆಟಗಾರರ ಆಟವನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.

    ಈವರೆಗಿನ ಐಪಿಎಲ್‍ನಲ್ಲಿ ಕೆಲ ಆಟಗಾರರು ಜೊತೆಯಾಗಿ ಆಡಿ ತಂಡಕ್ಕೆ ಅದೆಷ್ಟೋ ಗೆಲುವನ್ನು ತಂದುಕೊಟ್ಟಿರುವ ಪಂದ್ಯಗಳಿವೆ. ಅದರಲ್ಲೂ ಕೆಲ ಸ್ಟಾರ್ ಜೋಡಿ ಅಭಿಮಾನಿಗಳನ್ನು ರಂಜಿಸುತ್ತಿತ್ತು. ಆದರೆ ಈ ಬಾರಿ ಪ್ರಮುಖ ಮೂರು ಸ್ಟಾರ್ ಜೋಡಿಗಳು ಬೇರ್ಪಟ್ಟಿದೆ. ಇದನ್ನೂ ಓದಿ: IPL 2022 – ಡೆಲ್ಲಿ ತಂಡ ಸೇರಿಕೊಂಡ ಶೇನ್ ವಾಟ್ಸನ್

    ಐಪಿಎಲ್‍ನಲ್ಲಿ ಆಟಗಾರರ ನಡುವೆ ಉತ್ತಮ ಸಂಬಂಧ ವಿರುತ್ತದೆ. ಹಲವು ದೇಶದ ಆಟಗಾರರು ಒಂದೇ ತಂಡಕ್ಕಾಗಿ ಆಡುತ್ತಾರೆ. ಹಾಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಹಲವು ವರ್ಷಗಳಿಂದ ಆಡುತ್ತಿದ್ದಾರೆ. ಇವರಿಬ್ಬರು ಜೊತೆಯಾಟ ಆರಂಭಿಸಿದರೆ ಪಂದ್ಯದ ಚಿತ್ರಣವೇ ಬದಲಾಗುತ್ತಿತ್ತು. ಈ ಜೋಡಿಯನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಿದ್ದರು. ಇವರಿಬ್ಬರು ಐಪಿಎಲ್‍ನಲ್ಲಿ ಎರಡು ಬಾರಿ 200 ರನ್‍ಗಳ ಜೊತೆಯಾಟವಾಡಿ ಮಿಂಚಿದ್ದರು. ಆದರೆ ಈ ಬಾರಿ ಕೊಹ್ಲಿ ಜೊತೆ ಎಬಿಡಿ ಕಾಣಿಸುವುದಿಲ್ಲ. ಈಗಾಗಲೇ ಎಬಿಡಿ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿರುವುದರಿಂದಾಗಿ ಆರ್​ಸಿಬಿ ತಂಡದಲ್ಲಿ ಎಬಿಡಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಕೊಹ್ಲಿ ಮಾತ್ರ ಆರ್​ಸಿಬಿ ತಂಡದಲ್ಲಿದ್ದಾರೆ.

    ಎಬಿಡಿ, ಕೊಹ್ಲಿಯಂತೆ ಉತ್ತಮ ಸಂಬಂಧ ಹೊಂದಿರುವ ಇನ್ನೊಂದು ಸ್ಟಾರ್ ಜೋಡಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರಾದ ಮಹೇಂದ್ರ ಸಿಂಗ್ ಧೋನಿ ಮತ್ತು ಸುರೇಶ್ ರೈನಾ ಜೋಡಿ ಇವರಿಬ್ಬರು ಸಿಎಸ್‍ಕೆ ತಂಡದ ಶಕ್ತಿಯಾಗಿದ್ದರು. ಅದರಲ್ಲೂ ರೈನಾ ಸಿಎಸ್‍ಕೆ ತಂಡದ ರನ್ ಮೆಷಿನ್ ಆದರೆ, ಧೋನಿ ತಂಡದ ನಾಯಕನಾಗಿ ಜೊತೆಯಾಗಿರುತ್ತಿದ್ದರು. ಮಿಡಲ್ ಆರ್ಡರ್‌ನಲ್ಲಿ ಅಬ್ಬರಿಸುತ್ತಿದ್ದ ಈ ಜೋಡಿಯ ಆಟ ಈ ಬಾರಿ ಅಭಿಮಾನಿಗಳಿಗೆ ಕಣ್ತುಂಬಿಕೊಳ್ಳಲು ಸಿಗುವುದಿಲ್ಲ. ಧೋನಿ ಸಿಎಸ್‍ಕೆ ತಂಡದಲ್ಲಿದ್ದರೂ ಕೂಡ, ರೈನಾ ತಂಡದಲ್ಲಿಲ್ಲ. ಹಾಗಾಗಿ ಈ ಸ್ಟಾರ್ ಜೋಡಿ ಇನ್ಮುಂದೆ ಸಿಎಸ್‍ಕೆ ತಂಡದಲ್ಲಿ ಜೊತೆಯಾಗಿ ಕಾಣಿಸುವುದು ಕನಸಿನ ಮಾತಾಗಿದೆ. ಇದನ್ನೂ ಓದಿ: ಐಪಿಎಲ್ 2022: ಅಗ್ರ ವಿದೇಶಿ ಆಟಗಾರರು ಲೀಗ್‍ನ ಮೊದಲ ವಾರದಲ್ಲಿ ಲಭ್ಯವಿರಲ್ಲ

    ಈ ಎರಡು ಜೋಡಿಗಳ ಮಧ್ಯೆ ಗಮನ ಸೆಳೆದ ಇನ್ನೊಂದು ಜೋಡಿ ಕನ್ನಡಿಗರ ಜೋಡಿ. ಹೌದು ಕೆ.ಎಲ್ ರಾಹುಲ್ ಮತ್ತು ಮಯಾಂಕ್ ಅಗರ್‌ವಾಲ್‌ ಕಳೆದ ಎರಡು ವರ್ಷ ಪಂಜಾಬ್ ಕಿಂಗ್ಸ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದು ಅಬ್ಬರಿಸುತ್ತಿದ್ದರು. ಇವರಿಬ್ಬರೂ ಜೊತೆಯಾಗಿ ಆಡುವ ಜೊತೆಯಾಟ ನೋಡುವುದೇ ಹಬ್ಬದಂತಿತ್ತು. ಕರ್ನಾಟಕ ತಂಡದಿಂದ ಹಿಡಿದು ಆರಂಭವಾಗಿದ್ದ ಈ ಜೋಡಿಯ ಆಟ ಟೀಂ ಇಂಡಿಯಾ ಮತ್ತು ಐಪಿಎಲ್‍ನಲ್ಲೂ ಅಭಿಮಾನಿಗಳು ನೋಡಿದ್ದರು. ಆದರೆ ಈ ಬಾರಿ ಈ ಜೋಡಿ ಬೇರೆ, ಬೇರೆಯಾಗಿದೆ. ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾದರೆ, ಮಯಾಂಕ್ ಪಂಜಾಬ್ ತಂಡದ ನಾಯಕರಾಗಿ ಪರಸ್ಪರ ಎದುರುಬದುರಾಗಲಿದ್ದಾರೆ.

  • ರೈನಾ ಫಿಫ್ಟಿಗೆ ಪ್ರಧಾನಿ ಮೋದಿ ಫಿದಾ

    ರೈನಾ ಫಿಫ್ಟಿಗೆ ಪ್ರಧಾನಿ ಮೋದಿ ಫಿದಾ

    ನವದೆಹಲಿ: ಕೊರೊನಾ ವೈರಸ್ ವಿರುದ್ಧ ಹೋರಾಡಲು ಭಾರತ ತಂಡದ ಕ್ರಿಕೆಟ್ ಆಟಗಾರ ಸುರೇಶ್ ರೈನಾ ಅವರು, 52 ಲಕ್ಷವನ್ನು ದೇಣಿಗೆ ನೀಡಿದ್ದು, ಟ್ವೀಟ್ ಮೂಲಕ ಪ್ರಧಾನಿ ಮೋದಿ ಮೆಚ್ಚುಗೆ ಸೂಚಿಸಿದ್ದಾರೆ.

    ಕೊರೊನಾ ವೈರಸ್‍ನಿಂದ ದೇಶ ಅರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ. ಈಗಾಗಲೇ 21 ದಿನ ಲಾಕ್‍ಡೌನ್ ಆಗಿರುವ ಭಾರತಕ್ಕೆ ಚಿತ್ರನಟರು ಮತ್ತು ಕ್ರೀಡಾಪಟುಗಳು ಕೊರೊನಾ ವಿರುದ್ಧ ಹೋರಾಡಲು ಶಕ್ತಿ ತುಂಬುತ್ತಿದ್ದಾರೆ. ಅದಕ್ಕಾಗಿಯೇ ಸುರೇಶ್ ರೈನಾ ಅವರು ಪ್ರಧಾನ ಮಂತ್ರಿ ನಿಧಿಗೆ ಮತ್ತು ಉತ್ತರ ಪ್ರದೇಶ ಸಿಎಂ ವಿಪತ್ತು ಪರಿಹಾರ ನಿಧಿಗೆ 52 ಲಕ್ಷ ದೇಣಿಗೆ ನೀಡಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ರೈನಾ ಅವರು, ಕೊರೊನಾ ವೈರಸ್ ಅನ್ನು ತಡೆಗಟ್ಟಲು ನಮ್ಮ ಕೈಯಲ್ಲಿ ಆದ ಸಹಾಯವನ್ನು ದೇಶಕ್ಕೆ ಮಾಡಬೇಕಿದೆ. ನಾನು ಕೂಡ 52 ಲಕ್ಷ ರೂ. ಗಳನ್ನು ಕೊರೊನಾ ವಿರುದ್ಧ ಹೋರಾಟಕ್ಕೆ ನೀಡುತ್ತಿದ್ದೇನೆ. ಅದರಲ್ಲಿ 31 ಲಕ್ಷವನ್ನು ಪ್ರಧಾನಿ ಅವರ ನಿಧಿಗೆ ಮತ್ತು ಉಳಿದ 21 ಲಕ್ಷವನ್ನು ಉತ್ತರ ಪ್ರದೇಶದ ಸಿಎಂ ವಿಪತ್ತು ಪರಿಹಾರ ನಿಧಿಗೆ ನೀಡುತ್ತಿದ್ದೇನೆ. ನಿಮ್ಮ ಕೈಯಲ್ಲಿ ಆದ ಸಹಾಯವನ್ನು ನೀವು ಮಾಡಿ ಎಂದು ಟ್ವೀಟ್ ಮಾಡಿದ್ದಾರೆ.

    ರೈನಾ ಅವರು ದೇಶಕ್ಕಾಗಿ ಮಾಡಿದ ಸೇವೆಗೂ ಮತ್ತು ದೇಶದ ಮೇಲಿರುವ ಅವರ ಪ್ರೀತಿಗೂ ಮೆಚ್ಚಿದ ಪ್ರಧಾನಿ ಮೋದಿ ಅವರು, ರೈನಾ ಅವರ ಟ್ವೀಟ್‍ಗೆ ರೀಟ್ವೀಟ್ ಮಾಡಿದ್ದಾರೆ. ಇದರಲ್ಲಿ ಇದು ಅದ್ಭುತವಾದ ಫಿಫ್ಟಿ ಎಂದು ಬರೆದುಕೊಂಡಿದ್ದಾರೆ. ರೈನಾ ಅವರ ದೇಶಪ್ರೇಮವನ್ನು ಕಂಡ ಅವರ ಅಭಿಮಾನಿಗಳು ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ ಸಹೋದರ ಜೈಹಿಂದ್ ಎಂದು ಕಮೆಂಟ್ ಮಾಡಿದ್ದಾರೆ.

    ಕೊರೊನಾ ವೈರಸ್‍ನಿಂದ ದೇಶ ಸಂಕಷ್ಟಕ್ಕೆ ಸಿಲುಕಿದೆ. ಹಾಗಾಗಿ ದೇಶದ ಸಹಾಯಕ್ಕೆ ಬಂದಿರುವ ಸೆಲೆಬ್ರಿಟಿಗಳು ದೇಶಕ್ಕಾಗಿ ಧನ ಸಹಾಯ ಮಾಡುತ್ತಿದ್ದಾರೆ. ಇನ್ನೂ ಕೆಲವರು ಅವರೇ ಹಸಿದವರಿಗೆ ಊಟದ ವ್ಯವಸ್ಥೆ, ನೀರು ಮಾಸ್ಕ್ ಗಳನ್ನು ನೀಡುತ್ತಿದ್ದಾರೆ. ದಕ್ಷಿಣ ಭಾರತದ ನಟರಾದ ಪವನ್ ಕಲ್ಯಾಣ್, ಪ್ರಭಾಸ್, ಮಹೇಶ್ ಬಾಬು, ರಾಮ್ ಚರಣ್ ಎಲ್ಲರೂ ದೇಶಕ್ಕಾಗಿ ಧನಸಹಾಯ ಮಾಡುತ್ತಿದ್ದಾರೆ.

    ಇಂದು ಕೂಡ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು, ಕೊರೊನಾ ವಿರುದ್ಧ ದೇಶ ಹೋರಾಡಲು ಬರೋಬ್ಬರಿ 25 ಕೋಟಿ ಧನಸಹಾಯ ಮಾಡಿದ್ದಾರೆ. ಈ ಸಮಯದಲ್ಲಿ ಜನರ ಪ್ರಾಣವೇ ಎಲ್ಲಕ್ಕಿಂತ ಮುಖ್ಯ. ಅದಕ್ಕಾಗಿ ಏನೆಲ್ಲ ಸಾಧ್ಯವೋ ಅದೆಲ್ಲವನ್ನು ನಾವು ಮಾಡಬೇಕು. ನಾನು ನನ್ನ ಉಳಿತಾಯದ ಹಣದಲ್ಲಿ 25 ಕೋಟಿ ರೂ. ಗಳನ್ನು ನರೇಂದ್ರ ಮೋದಿಯವರ ಪರಿಹಾರ ನಿಧಿಗೆ ನೀಡುವುದಾಗಿ ಪ್ರಮಾಣಿಸುತ್ತಿದ್ದೇನೆ. ನಾವೆಲ್ಲ ಒಂದಾಗಿ ಜೀವ ಉಳಿಸೋಣ. ಜೀವ ಇದ್ದರೆ ಜಗತ್ತು ಎಂದು ಟ್ವೀಟ್ ಮಾಡಿದ್ದಾರೆ.