Tag: ರೈತ ಸಮಾವೇಶ

  • ಇಡೀ ವಿಶ್ವದಲ್ಲೇ ರೈತನಿಗೆ ಯಾವುದೇ ಜಾತಿ ಇಲ್ಲ: ಡಿಕೆಶಿ

    ಇಡೀ ವಿಶ್ವದಲ್ಲೇ ರೈತನಿಗೆ ಯಾವುದೇ ಜಾತಿ ಇಲ್ಲ: ಡಿಕೆಶಿ

    – ಕಾಂಗ್ರೆಸ್ಸಿಗೆ ರೈತರೇ ಜೀವಾಳ

    ಮಂಡ್ಯ: ಇಡೀ ವಿಶ್ವದಲ್ಲೇ ರೈತನಿಗೆ ಯಾವುದೇ ಜಾತಿ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.

    ಇಂದು ಕಾಂಗ್ರೆಸ್ ಪಕ್ಷದಿಂದ ಮಂಡ್ಯದಲ್ಲಿ ರೈತ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ. ಈ ಸಮಾವೇಶದಲ್ಲಿ ಮಾತನಾಡಿದ ಡಿಕೆಶಿ, ಇದು ದೊಡ್ಡ ಸಮಾವೇಶ ಅಲ್ಲ. ಇಲ್ಲಿ ಕೊಡುವ ಸಂದೇಶ ಮುಖ್ಯ. ಸಂಬಳ, ಪ್ರಮೋಷನ್, ಲಂಚ, ನಿವೃತ್ತಿ ಇಲ್ಲದ ರೈತನನ್ನು ಕಾಪಾಡಬೇಕು. ಇಡೀ ವಿಶ್ವದಲ್ಲೇ ರೈತನಿಗೆ ಯಾವುದೇ ಜಾತಿ ಇಲ್ಲ ಎಂದರು.

    ಇಡೀ ದೇಶದಲ್ಲೇ ನಮ್ಮ ಸಂಸ್ಕೃತಿ ಪರಂಪರೆ ಉಳಿಸಿಕೊಂಡು ಬಂದವರು ಅನ್ನದಾತರು. ನಮ್ಮ ಹಳ್ಳಿ ಸೊಗಡು, ಸಂಸ್ಕೃತಿಯನ್ನು ಕಾಪಾಡುತ್ತಿರುವವರು ಇದೇ ಮಣ್ಣಿನ ಮಕ್ಕಳು. ಯಾವ ಕಾರ್ಖಾನೆ, ವ್ಯಾಪಾರ ನಿಂತರೂ ಕೂಡ ಅನ್ನ ನೀರು ಕೊಟ್ಟು ಜೀವ ಉಳಿಸುವ ಅನ್ನದಾತರ ಕೆಲಸ ನಿಲ್ಲಲಿಲ್ಲ. ಈ ರೀತಿಯ ರೈತರ ಸ್ಮರಿಸಲು ಈ ಸಮಾವೇಶ ಮಾಡುತ್ತಿದ್ದೇವೆ ಎಂದು ಹೇಳುವ ಮೂಲಕ ಸಮಾವೇಶದಲ್ಲಿ ಡಿಕೆಶಿ ರೈತರ ಗುಣಗಾನ ಮಾಡಿದರು. ಇದನ್ನು ಓದಿ: ಕಾಂಗ್ರೆಸ್‍ಗೆ ಮಂಡ್ಯದ ರೈತರ ಮೇಲೆ ದಿಢೀರ್ ಪ್ರೀತಿ ಬಂದಿದೆ: ಹೆಚ್‍ಡಿಕೆ

    ನಾನು ಕೂಡ ಕೃಷಿ ಕುಟುಂಬ ಹಿನ್ನೆಲೆಯಿಂದ ಬಂದವನು. ನಮ್ಮ ಶಾಲು ಕಾಂಗ್ರೆಸ್ ಪಕ್ಷದ ಶಾಲಲ್ಲ. ಸೂರ್ಯನಿಗೂ ಭೂಮಿಗೂ ಇರುವ ಸಂಬಂಧವನ್ನು ಉಳಿಸಿಕೊಂಡು ಬರುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ನಮಗೆ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಇತಿಹಾಸ ಇದೆ. ನಮಗೆ ಸ್ವಾಭಿಮಾನ ಶಕ್ತಿ ಉಸಿರನ್ನು ನೀಡಿದವರು ಹಸಿರು ಶಾಲು ತೊಟ್ಟವರು. ಕಾಂಗ್ರೆಸ್‍ಗೆ ರೈತರೆ ಜೀವಾಳ. ಹೀಗಾಗಿ ಅನ್ನದಾತನಿಗೆ ಹೇಗೆ ನೆರವಾಗಲು ಸಾಧ್ಯ ಎಂಬುದನ್ನು ತಿಳಿಯಲು ಈ ಸಮಾವೇಶ ಮಾಡುತ್ತಿದ್ದೇವೆ ಎಂದು ತಿಳಿಸಿದರು.

    ಇವತ್ತು ಯಾರಾದರೂ ಒಬ್ಬ ರೈತನಿಗೆ, ವ್ಯಾಪಾರಿ, ವಿದ್ಯಾರ್ಥಿ, ಕಾರ್ಮಿಕರು ಮತ್ತು ಯುವಕರಿಗೆ ಸಮಾಧಾನ ಇದೆಯಾ? ದೆಹಲಿ, ಬಾಂಬೆಯಲ್ಲಿರುವ ದೊಡ್ಡ ದೊಡ್ಡ ಕುಳಗಳಿಗೆ ಸಮಾಧಾನ ಆಗಿರೋದರು ಬಿಟ್ಟರೆ ಇನ್ನಾರಿಗೂ ಸಮಾಧಾನವಿಲ್ಲ. ಐದತ್ತು ಸಾವಿರಕ್ಕೆ ಮಡದಿ ಮಕ್ಕಳ ಚಿನ್ನವನ್ನು ಅಡವಿಡುವ ಪರಿಸ್ಥಿತಿ ರೈತರಿಗೆ ಬಂದಿದೆ. ಅನ್ನದಾತರನ್ನ ಗಾಣದಲ್ಲಾಕಿ ಅರೆದು ಬಿಟ್ಟಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸರ್ಕಾರ ರೈತನ ನೆರವಿಗೆ ಬರಲಿಲ್ಲ. ರೈತನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅವರಿಗೆ ಸ್ಪಂದಿಸದ ಬಿಎಸ್‍ವೈ ಅಧಿಕಾರದಲ್ಲಿ ಯಾಕಿರಬೇಕು ಎಂದು ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ ಮಾಡಿದರು.

  • ಧರ್ಮಸ್ಥಳದ ಮುಂದೆ ನಿಂತು ಹೇಳಿದ್ರಲ್ಲ ಹಾಗಾದ್ರೆ, ಎಷ್ಟು ಜನಕ್ಕೆ ಋಣಮುಕ್ತ ಪತ್ರ ಕೊಟ್ಟಿದ್ರಿ- ಎಚ್‍ಡಿಕೆಗೆ ಕರಂದ್ಲಾಜೆ ಪ್ರಶ್ನೆ

    ಧರ್ಮಸ್ಥಳದ ಮುಂದೆ ನಿಂತು ಹೇಳಿದ್ರಲ್ಲ ಹಾಗಾದ್ರೆ, ಎಷ್ಟು ಜನಕ್ಕೆ ಋಣಮುಕ್ತ ಪತ್ರ ಕೊಟ್ಟಿದ್ರಿ- ಎಚ್‍ಡಿಕೆಗೆ ಕರಂದ್ಲಾಜೆ ಪ್ರಶ್ನೆ

    ಬೆಳಗಾವಿ: ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲೇ ರೈತರ ಸಂಪೂರ್ಣ ಸಾಲಮನ್ನಾ ಮಾಡುತ್ತೀರೆಂದು ಧರ್ಮಸ್ಥಳದ ಮುಂದೆ ನಿಂತು ಹೇಳಿದ್ದೀರಿ. ಹಾಗಾದರೆ ಇಲ್ಲಿಯವರೆಗೂ ಎಷ್ಟು ರೈತರಿಗೆ ಋಣಮುಕ್ತ ಪತ್ರ ಕೊಟ್ಟಿದ್ದೀರೆಂದು ಸಂಸದೆ ಶೋಭಾ ಕರಂದ್ಲಾಜೆ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಪ್ರಶ್ನಿಸಿದ್ದಾರೆ.

    ರೈತ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಅಧ್ಯಕ್ಷರಾಗಿರುವ ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಸುವರ್ಣಸೌಧ ಕಟ್ಟಲಾಯಿತು. ಆದರೆ ಅದಾದ ನಂತರ ಬಂದ ಸರ್ಕಾರಗಳು ಸುವರ್ಣ ಸೌಧದಲ್ಲಿ ಯಾವುದೇ ಕೆಲಸಗಳನ್ನು ನಡೆಸುತ್ತಿಲ್ಲ. ಸಿಎಂ ಕುಮಾರಸ್ವಾಮಿ ಮಾತನಾಡುತ್ತಿರುವುದನ್ನು ನೋಡಿದರೆ, ನಮಗೆ ನ್ಯಾಯ ಸಿಗುತ್ತೆ ಎಂದು ಅನಿಸುತ್ತಿಲ್ಲ. ರೈತ ಹೋರಾಟಗಾರರ ಬಗ್ಗೆ ಸಿಎಂ ಕೀಳಾಗಿ ಮಾತನಾಡುತ್ತಾರೆ. ಅಲ್ಲದೇ ಏನು ಕಿಸಿಯೋಕೆ ರೈತ ಹೋರಾಟ ಮಾಡುತ್ತಾರೆಂದು ಕೇಳಿದ್ದಾರೆ. ಮಾತನಾಡುವ ಭಾಷೆ ಯಾವ ರೀತಿ ಇದೇ ಎನ್ನುವುದು ಅವರ ಮಾನಸಿಕ ಸ್ಥಿತಿಯನ್ನೇ ತೋರಿಸುತ್ತದೆಂದು ಕಿಡಿಕಾರಿದರು.

    ಅಧಿಕಾರಕ್ಕೆ 24 ಗಂಟೆಗಳಲ್ಲೆ ರೈತರ ಸಾಲಮನ್ನಾ ಮಾಡುತ್ತೇನೆಂದು ಧರ್ಮಸ್ಥಳ ಹಾಗೂ ಶೃಂಗೇರಿ ದೇವಾಲಯಗಳ ಮುಂದೆ ನಿಂತು ಹೇಳಿದ್ದಿರಿ. ಆದರೆ ಈಗ ಎಷ್ಟು ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ನೀಡಿದ್ದೀರಿ ಎಂಬುದನ್ನು ತೋರಿಸಿ. ಅಲ್ಲದೇ ಉತ್ತರಕರ್ನಾಟಕ ಭಾಗದ ಜನರ ಎಷ್ಟು ಮಂದಿಯ ಸಾಲ ಮನ್ನಾ ಆಗಿದೆ? ಕುಮಾರಸ್ವಾಮಿ ಈ ಬಗ್ಗೆ ಎಚ್ಚರಿಕೆಯಿಂದ ಮಾತನಾಡಬೇಕು. ನಾಲ್ಕು ಜನರಿಗಾದರೂ ಋಣಮುಕ್ತ ಪತ್ರ ನೀಡಿದ್ದೀರಾ ಎಂದು ಸವಾಲು ಹಾಕಿದರು.

    ನಮಗೆ ಹೆಮ್ಮೆ ಇದೆ. ಬಿಜೆಪಿ ಸರ್ಕಾರ 70 ವರ್ಷದ ಕೆಲಸವನ್ನು ಮಾಡಿದೆ. ರೈತರ ಸಾಲಮನ್ನಾ, ಹಾಲಿಗೆ ಪ್ರೋತ್ಸಹ ಧನ, ಉಚಿತ ಪಂಪ್‍ಸೆಟ್ ವಿದ್ಯುತ್ ಕೊಟ್ಟಿದ್ದೆವು. ಅಲ್ಲದೇ ಜಲ ಸಂಪನ್ಮೂಲ ಸಚಿವರು ಮೈಸೂರಿನಲ್ಲಿ ಡಿಸ್ನಿ ಲ್ಯಾಂಡ್ ಮಾಡುತ್ತಾರಂತೆ. ಮೊದಲು ನದಿಯಲ್ಲಿ ತುಂಬಿರುವ ಹುಳುವನ್ನು ಸ್ವಚ್ಛಗೊಳಿಸಿ. ಕೃಷ್ಣೆ ಮೇಲಾಣೆ ಹಾಕಿ ಪಾದಯಾತ್ರೆ ಮಾಡಿ, ತೊಡೆ ತಟ್ಟಿದ್ದೀರಿ. ಆದರೆ ಯಾವುದೇ ಕೆಲಸ ಮಾತ್ರ ಆಗಿಲ್ಲ. ಇದು ನಿಮ್ಮ ಸರ್ಕಾರದ ಅಂಧಾ ದರ್ಬಾರ್ ಆಗಿದೆ. ಅಲ್ಲದೇ ಕೇಂದ್ರದ ಹಣವನ್ನು ರಾಜ್ಯ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ. ನೀವು ರಾಜ್ಯಕ್ಕೆ ಮುಖ್ಯಮಂತ್ರಿಯೇ ಹೊರತು, ಮೂರು ಜಿಲ್ಲೆಗಳಿಗೆ ಮಾತ್ರ ಸೀಮಿತವಲ್ಲ. ಇಂದಿನ ನಮ್ಮ ಹೋರಾಟ ಕೇವಲ ಆರಂಭ ಮಾತ್ರ. ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಡುತ್ತೇವೆ. ದೇವರು ಇವರಿಗೆ ಸರಿಯಾದ ಬುದ್ಧಿ ಕೊಡಲಿ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮತ್ತೆ ರಾಜ್ಯಕ್ಕೆ ಮೋದಿ ಆಗಮನ, ದಾವಣಗೆರೆಯ ರೈತ ಸಮಾವೇಶದಲ್ಲಿ ಪ್ರಧಾನಿ ಭಾಗಿ

    ಮತ್ತೆ ರಾಜ್ಯಕ್ಕೆ ಮೋದಿ ಆಗಮನ, ದಾವಣಗೆರೆಯ ರೈತ ಸಮಾವೇಶದಲ್ಲಿ ಪ್ರಧಾನಿ ಭಾಗಿ

    ಬೆಂಗಳೂರು,ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತೆ ರಾಜ್ಯಕ್ಕೆ ಆಗಮಿಸಲಿದ್ದು, ದಾವಣಗೆರೆಯಲ್ಲಿ ನಡೆಯುವ ರೈತ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.

    ಮೋದಿ ಅವರು ಇಂದು ಸಂಜೆ 4 ಗಂಟೆಗೆ ದಾವಣಗೆರೆಗೆ ಆಗಮಿಸಲಿದ್ದಾರೆ. ಬಳಿಕ ಸುಮಾರು ಒಂದು ಗಂಟೆ ಕಾಲ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ರೈತ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಇದೇ ವೇಳೆ ಹುಟ್ಟು ಹಬ್ಬದ ಪ್ರಯುಕ್ತ ಬಿಎಸ್ ಯಡಿಯೂರಪ್ಪರಿಗೆ 4 ಕೆಜಿ ತೂಕದ ತೇಗದ ನೇಗಿಲು ನೀಡಿ ಸನ್ಮಾನ ಮಾಡಲಿದ್ದಾರೆ. ಜೊತೆಗೆ ಮುಷ್ಠಿ ಅಕ್ಕಿ ಅಭಿಯಾನಕ್ಕೂ ಚಾಲನೆ ನೀಡಲಿದ್ದಾರೆ.

    ರಾಜ್ಯದ ರೈತರಿಂದ ಮುಷ್ಠಿ ಅಕ್ಕಿ ಸಂಗ್ರಹಿಸಿ ನಿಮ್ಮ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದು ಬಿಜೆಪಿ ನಾಯಕರು ಪ್ರತಿಜ್ಞೆ ಮಾಡಲಿದ್ದು, 15 ದಿನಗಳ ಕಾಲ ಈ ಅಭಿಯಾನ ನಡೆಯಲಿದೆ. ರಾಜ್ಯದ 6028 ಗ್ರಾಮ ಪಂಚಾಯಿತಿಗಳಲ್ಲೂ ಬಿಜೆಪಿ ಕಾರ್ಯಕರ್ತರು ಮುಷ್ಠಿ ಅಕ್ಕಿ ಅಭಿಯಾನ ನಡೆಸಲಿದ್ದಾರೆ.

    ಪ್ರಧಾನಿ ಮೋದಿಯ ಇಂದಿನ ಭಾಷಣ ತೀವ್ರ ಕುತೂಹಲ ಕೆರಳಿಸಿದ್ದು, ರೈತರ ಸಮಸ್ಯೆ, ಮಹದಾಯಿ ವಿವಾದ, ರೈತರ ಸಾಲಮನ್ನಾದ ಬಗ್ಗೆ ಮಾತನಾಡ್ತಾರಾ ಎಂದು ಕಾದು ನೋಡಬೇಕಿದೆ. ಇನ್ನು ದಾವಣಗೆರೆ, ಚಿತ್ರದುರ್ಗ, ತುಮಕೂರು, ಹಾವೇರಿ, ಶಿವಮೊಗ್ಗ, ಬಳ್ಳಾರಿ ಸೇರಿದಂತೆ ಇತರೆ ಜಿಲ್ಲೆಗಳ ರೈತರನ್ನ ದೃಷ್ಟಿಯಲ್ಲಿಟ್ಟುಕೊಂಡು ಮಧ್ಯ ಕರ್ನಾಟಕದಲ್ಲಿ ಸಮಾವೇಶ ಆಯೋಜಿಸಲಾಗಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಇದನ್ನು ಓದಿ: Commission ಸರ್ಕಾರವನ್ನು ತೊಲಗಿಸಿ Mission ಸರ್ಕಾರವನ್ನು ತನ್ನಿ: ಪ್ರಧಾನಿ ಮೋದಿ

    ಪ್ರಧಾನಿ ಮೋದಿ ವೇಳಾಪಟ್ಟಿ

    * ಮಧ್ಯಾಹ್ನ 12.30ಕ್ಕೆ ದೆಹಲಿಯ ವಿಮಾನ ನಿಲ್ದಾಣದಿಂದ ಬಿಬಿಜೆ ಏರ್‍ಕ್ರಾಫ್ಟ್‍ನಲ್ಲಿ ಪ್ರಯಾಣ (ವಿಮಾನದಲ್ಲಿ ಊಟ)
    * ಮಧ್ಯಾಹ್ನ 2.55ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮನ
    * ಮಧ್ಯಾಹ್ನ 3.00ಕ್ಕೆ ವಿಶೇಷ ಹೆಲಿಕಾಪ್ಟರ್ ನಲ್ಲಿ ಹೊರಟು 3.55ಕ್ಕೆ ದಾವಣಗೆರೆಗೆ ಆಗಮನ
    * ಸಂಜೆ 4.00ಕ್ಕೆ ರಸ್ತೆ ಮೂಲಕವೇ ರೈತ ಸಮಾವೇಶಕ್ಕೆ ಆಗಮನ
    * ಸಂಜೆ 5.05ಕ್ಕೆ ಸಮಾವೇಶದ ವೇದಿಕೆಯಿಂದ ನಿರ್ಗಮಿಸಿ, ಹೆಲಿಪ್ಯಾಡ್‍ನತ್ತ
    * ಸಂಜೆ 5.15ಕ್ಕೆ ದಾವಣಗೆರೆಯಿಂದ ಹೊರಟು ಸಂಜೆ 6.05ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮನ
    * ಸಂಜೆ 6.10ಕ್ಕೆ ಹುಬ್ಬಳ್ಳಿಯಿಂದ ನಿರ್ಗಮಿಸಿ, 8.35ಕ್ಕೆ ದೆಹಲಿ ತಲುಪಲಿರುವ ಪ್ರಧಾನಿ ಮೋದಿ (ವಿಮಾನದಲ್ಲೇ ಊಟ)

  • ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿಲ್ಲ, ಕಮಿಷನ್ ಏಜೆಂಟ್ ಆಗಿದ್ದಾರೆ: ಬಿಎಸ್‍ವೈ

    ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿಲ್ಲ, ಕಮಿಷನ್ ಏಜೆಂಟ್ ಆಗಿದ್ದಾರೆ: ಬಿಎಸ್‍ವೈ

    ಮೈಸೂರು: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಕೆಲಸ ಮಾಡದೆ ಪ್ರತಿ ಕಾಮಗಾರಿಯಲ್ಲೂ ಕಮಿಷನ್ ಪಡೆದು ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆರೋಪಿಸಿದರು.

    ಮೈಸೂರಿನಲ್ಲಿಂದು ನಡೆದ ಬಿಜೆಪಿ ಬೃಹತ್ ರೈತ ಸಮಾವೇಶದಲ್ಲಿ ಮಾತನಾಡಿದ ಯಡಿಯೂರಪ್ಪ, ಸಿದ್ದರಾಮಯ್ಯ ಅವರನ್ನು ದೇವರು ಕ್ಷಮಿಸಿದರೂ ಜನತೆ ಪಾಠ ಕಲಿಸುವುದನ್ನು ಮರೆಯಬಾರದು. ಸಿಎಂ ರಾಜ್ಯವನ್ನು ಹಗಲು ದರೋಡೆ ಮಾಡ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಕೆಲಸ ಮಾಡದೆ ಪ್ರತಿ ಕಾಮಗಾರಿಯಲ್ಲೂ ಶೇಕಡಾ 20 ರಷ್ಟು ಕಮಿಷನ್ ಪಡೆದು ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಯಡಿಯೂರಪ್ಪ ಅಂದ ತಕ್ಷಣ ಅಭಿವೃದ್ಧಿ ಕಾರ್ಯ ನೆನಪಾಗುತ್ತೆ. ಆದರೆ ಸಿದ್ದರಾಮಯ್ಯ ಅಂದ ಕೂಡಲೇ ನಿದ್ದೆ ನೆನಪಾಗುತ್ತದೆ. ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಅನ್ನೋ ಹಾಗೇ, ಕೇಂದ್ರದ ಹಣ ಸಿದ್ದರಾಮಯ್ಯನ ಜಾತ್ರೆ ಅನ್ನೋ ರೀತಿ ಆಡಳಿತ ನಡೆಯುತ್ತಿದೆ ಎಂದು ಸಿಎಂ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.

    ಸಿದ್ದರಾಮಯ್ಯ ನಾನೇ ದಸರಾ ಉದ್ಘಾಟಿಸುತ್ತೇನೆ, ನಾನೇ ಎಲ್ಲಾ ಶಂಕುಸ್ಥಾಪನೆ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಆದರೆ ಜನ ಅವರಿಗೆ ಈ ಬಾರಿ ಬುದ್ಧಿ ಕಲಿಸುತ್ತಾರೆ ಅನ್ನೋದು ಗೊತ್ತಿಲ್ಲ. ಎಲ್ಲದಕ್ಕೂ ನಾನು ನಾನು ಅಂತಾ ಸಿದ್ದರಾಮಯ್ಯ ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ ಮಂದಿನ ಬಾರಿ ನಾನೇ ಅಂಬಾರಿ ಹೊರುತ್ತೇನೆ ಅಂತಾ ಮಾತ್ರ ಸಿದ್ದರಾಮಯ್ಯನವರು ಹೇಳುತ್ತಿಲ್ಲ ಎಂದು ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ವ್ಯಂಗ್ಯವಾಡಿದರು.