Tag: ರೈತ ಸಂಘಟನೆ ಟ್ರಾಕ್ಟರ್ ರ್ಯಾಲಿ

  • ಜಾಮೀನು ಬೆನ್ನಲ್ಲೇ ನಟ ದೀಪ್ ಸಿಧು ಮತ್ತೆ ಅರೆಸ್ಟ್

    ಜಾಮೀನು ಬೆನ್ನಲ್ಲೇ ನಟ ದೀಪ್ ಸಿಧು ಮತ್ತೆ ಅರೆಸ್ಟ್

    ನವದೆಹಲಿ: ಗಣರಾಜ್ಯೋತ್ಸವ ದಿನ ರೈತ ಸಂಘಟನೆಗಳ ಟ್ರಾಕ್ಟರ್ ರ‍್ಯಾಲಿಯಲ್ಲಿ ಕೆಂಪು ಕೋಟೆ ಮೇಲೆ ಬಾವುಟ ಹಾರಿಸಿದ್ದ ನಟ ದೀಪ್ ಸಿಧುಗೆ ಇಂದು ಬೆಳಗ್ಗೆ ದೆಹಲಿ ಕೋರ್ಟ್ ಜಾಮೀನು ನೀಡಿತ್ತು. ಆದರೆ ಈ ಬೆನ್ನಲ್ಲೇ ನಟ ಸಂಜೆ ಮತ್ತೆ ಅರೆಸ್ಟ್ ಆಗಿದ್ದಾರೆ.

    ಜನವರಿ 26ರ ಹಿಂಸಾಚಾರ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ದೀಪ್ ಸಿಧುಗೆ ಶನಿವಾರ ಜಾಮೀನು ನೀಡಿತ್ತು. ಕಳೆದ ವಿಚಾರಣೆಯ ವೇಳೆ, ಜನವರಿ 26 ರಂದು ಕೆಂಪು ಕೋಟೆಗೆ ಹೋಗುವಂತೆ ಆಂದೋಲನ ನಡೆಸುತ್ತಿರುವ ರೈತರಿಗೆ ಯಾವುದೇ ಕರೆ ನೀಡಿಲ್ಲ ಎಂದು ಸಿಧು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ರೈತ ಮುಖಂಡರು ಪ್ರತಿಭಟನೆಗಾಗಿ ಕರೆ ನೀಡಿದ್ದು, ದೀಪು ಸಿಧು ರೈತ ಸಂಘದ ಸದಸ್ಯ ಅಲ್ಲ. ಸಿಧು ಜನಸಮೂಹವನ್ನು ಸಜ್ಜುಗೊಳಿಸಿದ್ದಕ್ಕೆ ಯಾವುದೇ ಪುರಾವೆಗಳಿಲ್ಲ. ಹಿಂಸಾಚಾರದಲ್ಲಿ ಪಾಲ್ಗೊಂಡಿಲ್ಲ ಎಂದು ದೀಪ್ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಹಾಗಾಗಿ ದೀಪ್ ಸಿಧು ಅವರಿಗೆ ಇಂದು ಬೆಳಗ್ಗೆ ಜಾಮೀನು ಸಿಕ್ಕಿತ್ತು. ಆದರೆ ಸಂಜೆ ಮತ್ತೆ ದೆಹಲಿ ಪೊಲೀಸ್ ಅಪರಾಧ ದಳ ದೀಪ್ ಸಿಧುವನ್ನು ಬಂಧಿಸಿದೆ. ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ ದಾಖಲಿಸಿದ್ದ ಎಫ್‍ಐಆರ್ ಗೆ ಸಂಬಂಧಿಸಿದಂತೆ ದೀಪ್ ಸಿಧು ಬಂಧನವಾಗಿದೆ.

    ಪ್ರಕರಣ ಹಿನ್ನೆಲೆ:
    ಕೃಷಿಕಾನೂನು ಮತ್ತು ಎಪಿಎಂಸಿ ಕಾನೂನು ವಿರೋಧಿಸಿ ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆ ಹಿಂಸಾಚಾರ ಮತ್ತು ಕೆಂಪು ಕೋಟೆ ಮೇಲೆ ಧಾರ್ಮಿಕ ಧ್ವಜ ಹಾರಿಸಲು ಸಹಕರಿಸಿದ್ದನು. ಅಷ್ಟೇ ಅಲ್ಲದೇ ಅಲ್ಲಿಂದಲೇ ಫೇಸ್‍ಬುಕ್ ಲೈವ್ ಮಾಡಿದ್ದನು. ಸಿಧುನಿಂದಲೇ ಪ್ರತಿಭಟನೆ ಹಾದಿ ತಪ್ಪಿತು ಎಂದು ರೈತ ಮುಖಂಡರು ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿಧು ಬಂಧನವಾಗಿತ್ತು. ಈ ಸಂಬಂಧ ದೆಹಲಿಯ ವಿಶೇಷ ಪೊಲೀಸ್ ತಂಡ ನಟ, ಗಾಯಕ ದೀಪ್ ಸಿಧುನನ್ನು ಬಂಧಿಸಿತ್ತು. ನಂತರ ಶನಿವಾರ ಬೆಳಗ್ಗೆ ಜಾಮೀನು ಸಿಕ್ಕಿತ್ತು. ಇಂದು ಸಂಜೆ ಮತ್ತೆ ನಟ ಅರೆಸ್ಟ್ ಆಗಿದ್ದಾರೆ.