Tag: ರೈತ ಗೀತೆ

  • ಕಾದು ನಿಂತು ರೈತ ಗೀತೆ ಹಾಡಿಸಿದ ಸಿಎಂ ಯಡಿಯೂರಪ್ಪ

    ಕಾದು ನಿಂತು ರೈತ ಗೀತೆ ಹಾಡಿಸಿದ ಸಿಎಂ ಯಡಿಯೂರಪ್ಪ

    ಬೆಂಗಳೂರು: ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಸಹಕಾರ ಇಲಾಖೆಯ ಸಾಲ ವಿತರಣೆ ಕಾರ್ಯಕ್ರಮದಲ್ಲಿ ರೈತ ಗೀತೆಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಕಾದು ನಿಂತ ಘಟನೆ ನಡೆದಿದೆ.

    ಕಾರ್ಯಕ್ರಮದಲ್ಲಿ ಭಾಷಣಕ್ಕೆ ಮುಂದಾದ ಸಿಎಂ ಯಡಿಯೂರಪ್ಪ ಡಯಸ್‍ಗೆ ನಡೆದುಕೊಂಡು ಬರುತ್ತಿದ್ದಂತೆ ರೈತ ಗೀತೆ ಹಾಡ್ತೀರೇನಪ್ಪ ಎಂದು ಹಾಡುಗಾರರನ್ನ ಕೇಳಿದರು.ಮುಖ್ಯಮಂತ್ರಿಗಳ ಅನಿರೀಕ್ಷಿತ ಪ್ರೆಶ್ನೆಯಿಂದ ತಬ್ಬಿಬ್ಬಾದ ಹಾಡುಗಾರರು ಹಾಡ್ತೀವಿ ಸಾರ್ ಎಂದು ಹಾಡಲು ಮುಂದಾದರು. ಇದನ್ನೂ ಓದಿ:ಗಾಳಿ-ಮಳೆಗೆ ಉರುಳುತ್ತಿರುವ ಮರಗಳ ರಕ್ಷಣೆಗೆ ಸರ್ಕಾರದ ಹೊಸ ಪ್ಲ್ಯಾನ್

    ಮ್ಯೂಸಿಕ್ ಕಂಪೋಸ್ ತಡವಾದ ಕಾರಣ ಹಾಡಲು ತಡ ಮಾಡಿದರು. ಆಗ ಮತ್ತೆ ಮಾತನಾಡಿದ ಸಿಎಂ ಯಡಿಯೂರಪ್ಪ ಹಾಗೆ ಹಾಡಿ ಪರವಾಗಿಲ್ಲ ಎಂದು ಮ್ಯೂಸಿಕ್ ಇಲ್ಲದೆ ಹಾಡಲು ಸೂಚಿಸಿದರು.

    ತಮ್ಮ ಭಾಷಣ ಆರಂಭಿಸಿದೆ ನಿಂತುಕೊಂಡು ರೈತ ಗೀತೆ ಹಾಡಿಸಿದ ಸಿಎಂ ನಿಂತಲ್ಲೆ ರೈತ ಗೀತೆಯನ್ನ ಕೇಳಿಸಿಕೊಂಡರು. ರೈತ ಗೀತೆ ಮುಗಿದ ನಂತರ ತಮ್ಮ ಭಾಷಣವನ್ನ ಸಿಎಂ ಯಡಿಯೂರಪ್ಪ ಆರಂಭಿಸಿದರು.