Tag: ರೈತರ ಹೋರಾಟ

  • ಎರಡನೇ ವಿಮಾನ ನಿಲ್ದಾಣ – ಶಾಸಕ ಸ್ಥಾನ ಪಣಕ್ಕಿಟ್ಟು ರೈತರ ಪರ ನಿಲ್ತೀನಿ: ಎನ್.ಶ್ರೀನಿವಾಸ್

    ಎರಡನೇ ವಿಮಾನ ನಿಲ್ದಾಣ – ಶಾಸಕ ಸ್ಥಾನ ಪಣಕ್ಕಿಟ್ಟು ರೈತರ ಪರ ನಿಲ್ತೀನಿ: ಎನ್.ಶ್ರೀನಿವಾಸ್

    ಬೆಂಗಳೂರು: ನೆಲಮಂಗಲ (Nelamangala) ಬಳಿ ವಿಮಾನ ನಿಲ್ದಾಣ ನಿರ್ಮಾಣದ ಸಲುವಾಗಿ ರೈತರ ಭೂಮಿಯನ್ನು ವಶ ಪಡಿಸಿಕೊಳ್ಳಲು ನಾನು ಬಿಡಲ್ಲ. ಅಂತಹ ಸಂದರ್ಭ ಬಂದರೆ ಶಾಸಕ ಸ್ಥಾನ ಪಣಕ್ಕಿಟ್ಟು ರೈತರ ಪರ ನಿಲ್ಲುತ್ತೇನೆ ಎಂದು ನೆಲಮಂಗಲ ಶಾಸಕ ಎನ್.ಶ್ರೀನಿವಾಸ್ (N Srinivas) ಹೇಳಿದ್ದಾರೆ.

    ನೆಲಮಂಗಲ ಬಳಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಕ್ಷೇತ್ರದ ಜನತೆಗೆ ಭೂತ ಬಿಡುವ ಕೆಲಸ ಮಾಡಲ್ಲ. ಭೂತ ಬಿಡಿಸುತ್ತೇನೆ. ಯಾವುದೇ ಕಾರಣಕ್ಕೂ ರೈತರ ಭೂಮಿ ವಶಕ್ಕೆ ಬಿಡಲ್ಲ. ಅಂತಹ ಸಂದರ್ಭ ಬಂದರೆ ಶಾಸಕ ಸ್ಥಾನ ಪಣಕ್ಕಿಟ್ಟು ರೈತರ ಪರ ನಿಲ್ಲುತ್ತೇನೆ ಎಂದರು. ಇದನ್ನೂ ಓದಿ: 52ನೇ ಸಿಜೆಐ ಆಗಿ ನ್ಯಾ.ಬಿಆರ್ ಗವಾಯಿ ನೇಮಕ

    ರಾಜಕೀಯ ಉದ್ದೇಶದಿಂದ ಕೇಂದ್ರದ ತಂಡ ಬಂದು ಸರ್ವೆ ಮಾಡಿದ್ದಾರೆ. ಇಲ್ಲಿ ಯಾವುದೇ ಕಾರಣಕ್ಕೂ ವಿಮಾನ ನಿಲ್ದಾಣ ಮಾಡಲು ಬಿಡಲ್ಲ. ಜನತೆಗೆ ಯಾವುದೇ ಉಪಯೋಗ ಕೂಡಾ ಇಲ್ಲ. ದೇವನಹಳ್ಳಿಯಿಂದ ಇಲ್ಲಿಗೆ ಅಂತರ ಕಡಿಮೆ. 150 ಕಿ.ಮೀ ದೂರ ಇರಬೇಕು, ಇಲ್ಲದಿದ್ದರೆ ಟ್ರಾಫಿಕ್ ಸಮಸ್ಯೆ ಜಾಸ್ತಿಯಾಗುತ್ತದೆ. ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದ್ದೇನೆ. ಬೆಂಗಳೂರು ದಕ್ಷಿಣ ಭಾಗದಲ್ಲಿ ಮಾಡಿದ್ರೆ ಒಳ್ಳೆಯದು. ರಾಮನಗರ, ಮೈಸೂರು, ಮಂಡ್ಯ ಚಾಮರಾಜನಗರ ಇನ್ನಿತರ ಜಿಲ್ಲೆಗಳಿಗೆ ಅನುಕೂಲ ಆಗುತ್ತದೆ. ಇಲ್ಲೇ ವಿಮಾನ ನಿಲ್ದಾಣ ಮಾಡಿದ್ರೆ, ರೈತರ ಪರವಾಗಿ ನಿಂತು ಹೋರಾಟ ಮಾಡುತ್ತೇನೆ ಹಾಗೂ ರೈತರ ಪರ ನಿಲ್ಲುತ್ತೇನೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಟೈಂ ನೋಡಿ ಪಾಕ್‌ಗೆ ಹೊಡೆಯಿರಿ- ಸೇನೆಗೆ ಪರಮಾಧಿಕಾರ ಕೊಟ್ಟ ಮೋದಿ

    ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಎರಡನೇ ವಿಮಾನ ನಿಲ್ದಾಣಕ್ಕೆ ರೈತರ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮೋಟಗಾನಹಳ್ಳಿ, ಲಕ್ಕೇನಹಳ್ಳಿ ಹಾಗೂ ಗುಡೇಮಾರನಹಳ್ಳಿ ಗ್ರಾಮದ ಜನರು ಪ್ರತಿಭಟನೆ ಮಾಡಿದರು.

    ರೈತರು ಕೆಂಪೇಗೌಡ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದ್ದು, ಸಾವಿರಕ್ಕೂ ಅಧಿಕ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಪ್ರತಿಭಟನೆ ಬಳಿಕ ನೆಲಮಂಗಲ ಶಾಸಕ ಶ್ರೀನಿವಾಸ್, ಸ್ಥಳೀಯ ಸ್ವಾಮೀಜಿ ಹಾಗೂ ರೈತ ಮುಖಂಡರು ಸಾರ್ವಜನಿಕ ಸಭೆ ನಡೆಸಿದರು. ಸಭೆಯಲ್ಲಿ ಹೋರಾಟದ ಬಗ್ಗೆ ಚರ್ಚೆ ನಡೆಸಿದ್ದು, ಜೀವಕೊಟ್ಟರೂ ಭೂಮಿ ಕೊಡೆವು ಎಂದು ರೈತರು ತೀರ್ಮಾಸಿದರು. ಇದನ್ನೂ ಓದಿ: ಹಿಂದೂಗಳ ನರಮೇಧದಲ್ಲೂ ಪೋಸ್ಟರ್ ವಾರ್; ಕಾಂಗ್ರೆಸ್‌ನಿಂದ ಮೋದಿ ʻಗಾಯಬ್ʼ ಗೇಲಿ – ನೀವು ಪಾಕ್ ಏಜೆಂಟ್‌ಗಳು ಅಂತ ಬಿಜೆಪಿ ತಿರುಗೇಟು

    ಕೇಂದ್ರ ವಿಮಾನಯಾನ ಪ್ರಾಧಿಕಾರ ಅಧಿಕಾರಿಗಳು ಸರ್ವೆ ನಡೆಸಿದ ನಂತರ 6000 ಸಾವಿರ ಎಕ್ರೆ ಪ್ರದೇಶದ 15ಕ್ಕೂ ಹೆಚ್ಚು ಹಳ್ಳಿಗಳ ಸ್ಥಳಾಂತರ ಬಗ್ಗೆ ರೈತರಲ್ಲಿ ಭೀತಿ ಉಂಟಾಗಿದೆ. ಬಾಳಿ ಬೆಳೆದ ಊರುಗಳನ್ನು ಬಿಡಲು ಒಪ್ಪದ ರೈತರು ಬೃಹತ್ ಪ್ರತಿಭಟನೆ ಮುಂದಾಗಿದ್ದಾರೆ.

  • ದೇಶದ ಅನ್ನದಾತರಿಗೆ ವಾಟಾಳ್ ನಾಗರಾಜ್ ಅಭಿನಂದನೆ

    ದೇಶದ ಅನ್ನದಾತರಿಗೆ ವಾಟಾಳ್ ನಾಗರಾಜ್ ಅಭಿನಂದನೆ

    ಬೆಂಗಳೂರು: ಕೊನೆಗೂ ಅನ್ನದಾತರ ಹೋರಾಟಕ್ಕೆ ಕೇಂದ್ರ ಸರ್ಕಾರ ಮಣಿದಿದ್ದು, ಈ ಹಿನ್ನೆಲೆಯಲ್ಲಿ ರೈತರಿಗೆ ಕನ್ನಡ ಚಳವಳಿ ವಾಟಾಳ್ ಪಕ್ಷ ಅಧ್ಯಕ್ಷ ವಾಟಾಳ್ ನಾಗರಾಜ್ ಅಭಿನಂದನೆ ಸಲ್ಲಿಸಿದ್ದಾರೆ.

    PM MODI

    ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಸತತವಾಗಿ 15 ತಿಂಗಳುಗಳಿಂದ ಮೂರು ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ನಡೆಸಿದ ಹೋರಾಟಕ್ಕೆ ದೇಶಾದ್ಯಂತ ರೈತರು, ಹೋರಾಟಗಾರರು ಜೊತೆಗೂಡಿ ಕೇಂದ್ರ ಸರ್ಕಾರದ ಮೊಂಡುತನದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸಿದ್ದರು. ಕರ್ನಾಟಕದಲ್ಲಿ ಕೂಡ ರೈತರ ಪರವಾಗಿ 3 ಕೃಷಿ ಕಾಯ್ದೆ ವಿರುದ್ಧ ಹೋರಾಟ ನಡೆಸಿದ್ದು, ಇದೀಗ ಈ ಹೋರಾಟಕ್ಕೆ ಪ್ರತಿಫಲ ಸಿಕ್ಕಿದೆ. ಹೀಗಾಗಿ ಮತ್ತೊಮ್ಮೆ ದೇಶದ ಅನ್ನದಾತರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೃಷಿ ಕಾಯ್ದೆ ವಾಪಸ್ ಪಡೆದ ಮೋದಿ ಸರ್ಕಾರ

    ವಿವಾದಿತ ಕೃಷಿ ಕಾಯ್ದೆಯನ್ನು ವಾಪಸ್ ಪಡೆದುಕೊಂಡಿದೆ. ದೇಶದ ರೈತರ 355 ದಿನಗಳ ಹೋರಾಟದ ನಂತರ ಫಲ ಸಿಕ್ಕಂತಾಗಿದೆ. ಕೃಷಿ ಕಾನೂನು ಹೋರಾಟದಲ್ಲಿ 600ಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ನಾನು ಭಾರತದ ಕೋವಿಶೀಲ್ಡ್ ವ್ಯಾಕ್ಸಿನ್ ಪಡೆದಿದ್ದೇನೆ: ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷ ಅಬ್ದುಲ್ಲಾ ಶಾಹಿದ್

  • ದಿಶಾ ರವಿ ಮುಗ್ದೆ, ರೈತರ ಪರವಾಗಿ ಹೋರಾಟ ಮಾಡುವುದು ತಪ್ಪೇ- ರಮ್ಯಾ

    ದಿಶಾ ರವಿ ಮುಗ್ದೆ, ರೈತರ ಪರವಾಗಿ ಹೋರಾಟ ಮಾಡುವುದು ತಪ್ಪೇ- ರಮ್ಯಾ

    ಬೆಂಗಳೂರು: ಕರ್ನಾಟಕ ಸರ್ಕಾರವು ದಿಶಾ ರವಿ ಪರವಾಗಿ ನಿಲ್ಲಬೇಕು. ಆಕೆ ಮುಗ್ದೆ ಎಂದು ನಟಿ ರಮ್ಯಾ ಹೇಳಿದ್ದಾರೆ.

    ಈ ಸಂಬಂಧ ಇನ್‌ಸ್ಟಾದಲ್ಲಿ ಸ್ಟೇಟಸ್‌ ಅಪ್‌ಡೇಟ್‌ ಮಾಡಿರುವ ರಮ್ಯಾ, ರೈತರನ್ನು ಬೆಂಬಲಿಸುವುದು ಕ್ರಿಮಿನಲ್ ಅಪರಾಧವಲ್ಲ. ಸರ್ಕಾರದ ನಡೆಯಿಂದ ದೇಶಕ್ಕೆ ಕೆಟ್ಟ ಹೆಸರು ಬರುವಂತಾಗಿದೆ ಎಂದು ಹೇಳಿದ್ದಾರೆ.

    ನಾವೆಲ್ಲರು ಜೈಲಿನಲ್ಲಿದ್ದೇವೆ. ಪ್ರಜಾಪ್ರಭುತ್ವ, ಸ್ವತಂತ್ರ, ನಮ್ಮ ಹಕ್ಕು ಯಾವುದು ಇಲ್ಲ ಎಂಬಂತೆ ಭಾಸವಾಗುತ್ತಿದೆ. ರೈತರ ಪರವಾಗಿ ಹೋರಾಟ ಮಾಡುವುದು ತಪ್ಪೇ ಎಂದು ಪ್ರಶ್ನಿಸಿದ್ದಾರೆ.

    ನೀವು ಯಾರಿಗೆ ಮತ ಹಾಕಿದ್ದೀರಿ ಎನ್ನುವುದು ಮುಖ್ಯವಲ್ಲ. ರೈತರ ಪರವಾಗಿ ಮಾತನಾಡಿದ್ದಕ್ಕೆ ದೇಶದ್ರೋಹದ ಆರೋಪ ಮಾಡುವುದು ಎಷ್ಟು ಸರಿ? ಯಾವುದೇ ಪ್ರತಿಭಟನೆ ಅಥವಾ ಆಂದೋಲನ ದೊಡ್ಡ ಮಟ್ಟದಲ್ಲಿ ಮಾಡುವ ಸಂದರ್ಭದಲ್ಲಿ ಟೂಲ್‌ ಕಿಟ್ ತಯಾರು‌ ಮಾಡಲಾಗುತ್ತದೆ. ಇದರಲ್ಲಿ ಯಾವುದೇ ಅಂತರಾಷ್ಟ್ರೀಯ ಷಡ್ಯಂತ್ರವಿಲ್ಲ. ದಿಶಾಳ ಮೇಲೆ ಸುಳ್ಳು ಆರೋಪ ಮಾಡಿ ಹೋರಾಟದ ಹಾದಿಯನ್ನು ತಪ್ಪಿಸಲಾಗುತ್ತಿದೆ ಎಂದು ರಮ್ಯಾ ದೂರಿದ್ದಾರೆ.

    ಇನ್‌ಸ್ಟಾ ಪೋಸ್ಟ್‌ನಲ್ಲಿ ದಿಶಾಳನ್ನು ಬಿಡುಗಡೆ ಮಾಡುವಂತೆ ಪ್ರತಿಭಟನೆ ನಡೆಸಿದ ಫೋಟೋವನ್ನು ಹಾಕಿಕೊಂಡಿದ್ದಾರೆ.

     

  • ಇದು ರಾಷ್ಟ್ರೀಯ ಭಯೋತ್ಪಾದನೆ – ಭಾರತದ ವಿರುದ್ಧ ಮುಂದುವರಿದ ವಿದೇಶಿ ಪಿತೂರಿ

    ಇದು ರಾಷ್ಟ್ರೀಯ ಭಯೋತ್ಪಾದನೆ – ಭಾರತದ ವಿರುದ್ಧ ಮುಂದುವರಿದ ವಿದೇಶಿ ಪಿತೂರಿ

    ನವದೆಹಲಿ: ಭಾರತದ ವಿರುದ್ಧ ಅಂತಾರಾಷ್ಟ್ರೀಯ ಪಿತೂರಿ ಮುಂದುವರಿದಿದೆ. ರೈತರ ಹೋರಾಟ ದೇಶದ ಆಂತರಿಕ ವಿಚಾರ ಎಂದು ಕೇಂದ್ರ ಸರ್ಕಾರ ಹೇಳುತ್ತಿದ್ದರೂ ಅದನ್ನು ಕೇಳಿಸಿಕೊಳ್ಳೋಕೆ ಪಿತೂರಿದಾರರು ತಯಾರಿಲ್ಲ.  ಬದಲಿಗೆ ನಾಲಗೆ ಹರಿಬಿಡುವುದನ್ನು ಮುಂದುವರಿಸಿದ್ದಾರೆ. ಅದರಲ್ಲೂ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೊಸೆ, ವಕೀಲೆ ಮೀನಾ ಹ್ಯಾರೀಸ್ ಮಾಡುತ್ತಿರುವ ಟ್ವೀಟ್‍ಗಳು ಭಾರತದ ಘನತೆಗೆ ಮಸಿ ಬಳಿಯುವಂತಿವೆ.

    https://twitter.com/meenaharris/status/1357772428982669312

    ಇದು ಕೇವಲ ಕೃಷಿ ನೀತಿ ವಿಚಾರವಲ್ಲ. ಇದು ಧಾರ್ಮಿಕ ಅಲ್ಪಸಂಖ್ಯಾತರ ಕಿರುಕುಳ, ಪೊಲೀಸ್ ಹಿಂಸೆ, ರಾಷ್ಟ್ರೀಯ ಭಯೋತ್ಪಾದನೆ, ಕಾರ್ಮಿಕ ಹಕ್ಕುಗಳ ಮೇಲಿನ ದಾಳಿಗಳಿಗೆ ಸಂಬಂಧಿಸಿದ್ದು. ನಿಮ್ಮ ಆಂತರಿಕ ವ್ಯವಹಾರಗಳಿಂದ ದೂರ ಇರಲು ಹೇಳಬೇಡಿ.. ಇವೆಲ್ಲವೂ ನಮ್ಮ ಸಮಸ್ಯೆಗಳೇ ಎಂದು ಮೀನಾ ಹ್ಯಾರೀಸ್ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.

    https://twitter.com/meenaharris/status/1357784804750577665

    ಅಷ್ಟೇ ಅಲ್ಲದೇ ಸಿಂಘು ಗಡಿಯಲ್ಲಿ ಅರೆಸ್ಟ್ ಆಗಿದ್ದ ನೊದೀಪ್ ಕೌರ್ ಎಂಬ ದಲಿತ ಕಾರ್ಯಕರ್ತೆಗೆ ಪೊಲೀಸ್ ಕಸ್ಟಡಿಯಲ್ಲಿ ಲೈಂಗಿಕ ಕಿರುಕುಳ ನೀಡಲಾಗ್ತಿದೆ. 20 ದಿನಗಳಿಂದ ಕೋರ್ಟ್‍ಗೂ ಹಾಜರುಪಡಿಸದೇ ಹಿಂಸೆ ನೀಡಲಾಗುತ್ತಿದೆ. ಭಾರತದಲ್ಲಿ ದಮನಕಾರಿ ಪ್ರವೃತ್ತಿ ಹೆಚ್ಚುತ್ತಿದೆ ಎಂದೆಲ್ಲಾ ಆರೋಪ ಮಾಡಿದ್ದಾರೆ.

    ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಡಿವಿ ಸದಾನಂದ ಗೌಡ, ದೇಶದ್ರೋಹಿಗಳ ಒಂದು ಗುಂಪು ರೈತರ ಹಿಂದೆ ನಿಂತು ವ್ಯವಸ್ಥಿತ ಷಡ್ಯಂತ್ರ್ಯ ನಡೆಸಿದೆ ಎಂದು ಆರೋಪಿಸಿದ್ದಾರೆ. ಹಾಲಿವುಡ್, ಬಾಲಿವುಡ್ ನಟರೇನು ಉಳುಮೆ ಮಾಡಿದ್ದಾರಾ? ಸುಮ್ನೆ ಮೂಗು ತೂರಿಸ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ರೈತ ಹೋರಾಟದಲ್ಲಿ ವಿದೇಶಿ ಪಿತೂರಿ ಇಲ್ಲ ಎಂದು ರೈತ ನಾಯಕ ರಾಕೇಶ್ ಟಿಕಾಯತ್ ಸ್ಪಷ್ಟಪಡಿಸಿದ್ದಾರೆ.

  • #IndiaAgainstPropaganda -ರಾಷ್ಟ್ರಕ್ಕಾಗಿ ನಾವೆಲ್ಲ ಒಂದಾಗೋಣ ಎಂದ ಸಚಿನ್‌

    #IndiaAgainstPropaganda -ರಾಷ್ಟ್ರಕ್ಕಾಗಿ ನಾವೆಲ್ಲ ಒಂದಾಗೋಣ ಎಂದ ಸಚಿನ್‌

    ನವದೆಹಲಿ: ರೈತ ಚಳುವಳಿಯ ಹೆಸರಿನಲ್ಲಿ ಭಾರತದ ಆಂತರಿಕ ವಿಚಾರದಲ್ಲಿ ತಲೆ ಹಾಕಿದ ವಿದೇಶಿ ಸೆಲೆಬ್ರಿಟಿಗಳ ವಿರುದ್ಧ ದೇಶಿ ಸೆಲೆಬ್ರಿಟಿಗಳು ಸಿಡಿದೆದ್ದಿದ್ದಾರೆ.

    ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಅಜಯ್ ದೇವಗನ್, ಸುನೀಲ್ ಶೆಟ್ಟಿ, ನಿರ್ಮಾಪಕ ಕರಣ್ ಜೋಹರ್, ಗಾಯಕ್ ಕೈಲಾಶ್ ಖೇರ್, ಖ್ಯಾತ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ, ಟೀಂ ಇಂಡಿಯಾ ಆಟಗಾರ ಶಿಖರ್ ಧವನ್, ಸುರೇಶ್‌ ರೈನಾ ವಿದೇಶಿ ಸೆಲೆಬ್ರಿಟಿಗಳ ವಿರುದ್ಧ ಕಿಡಿ ಕಾರಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಬೇಡಿ ಎನ್ನುತ್ತಾ #IndiaAgainstPropaganda #IndiaTogether ಟ್ರೆಂಡ್ ಮಾಡಿದ್ದಾರೆ.

    ಭಾರತದ ಸಾರ್ವಭೌಮತ್ವದಲ್ಲಿ ರಾಜಿಯಾಗುವುದಿಲ್ಲ. ಬಾಹ್ಯ ಶಕ್ತಿಗಳು ಪ್ರೇಕ್ಷಕರಾಗಬಹುದು ಆದರೆ ಭಾಗವಹಿಸುವಂತಿಲ್ಲ. ಭಾರತೀಯರಿಗೆ ಭಾರತ ಏನು ಎನ್ನುವುದು ತಿಳಿದಿದೆ ಮತ್ತು ಏನು ನಿರ್ಧರಿಸಬೇಕು ಎನ್ನುವುದು ಭಾರತಕ್ಕೆ ಗೊತ್ತಿದೆ. ರಾಷ್ಟ್ರಕ್ಕಾಗಿ ನಾವೆಲ್ಲ ಒಂದಾಗೋಣ ಎಂದು ಸಚಿನ್‌ ತೆಂಡೂಲ್ಕರ್‌ ಟ್ವೀಟ್‌ ಮಾಡಿ ಮನವಿ ಮಾಡಿಕೊಂಡಿದ್ದಾರೆ.

    ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‍ಬರ್ಗ್ ರೈತ ಹೋರಾಟವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ಖ್ಯಾತ ಪಾಪ್ ಗಾಯಕಿ ರಿಹಾನಾ ಟ್ವೀಟ್ ಮಾಡಿ, ರೈತ ಹೋರಾಟ ಬೆಂಬಲಿಸಿ ಏಕೆ ಮಾತಾಡ್ತಿಲ್ಲ ಅಂತಾ ಪ್ರಶ್ನಿಸಿದ್ದಾರೆ. ಇದಕ್ಕೆ ಬಾಲಿವುಡ್ ನಟಿ ಕಂಗನಾ ರಣಾವತ್ ತಿರುಗೇಟು ನೀಡಿದ್ದಾರೆ.

    ಪ್ರತಿಭಟನೆ ನಡೆಸ್ತಿರುವವರು ರೈತರಲ್ಲ. ಅವ್ರು ದೇಶವನ್ನು ವಿಭಜಿಸಲು ನೋಡ್ತಿರುವ ಭಯೋತ್ಪಾದಕರು. ದೇಶವನ್ನು ತುಕ್ಡೆ ತುಕ್ಡೆ ಮಾಡಿ ಚೈನಾ ಕಾಲನಿಗಳನ್ನಾಗಿ ಮಾಡುವ ಉದ್ದೇಶ ಹೊಂದಿರುವವರು. ನಾವು ನಮ್ಮ ದೇಶವನ್ನು ಮಾರಿಕೊಳ್ಳಲು ನೋಡ್ತಿಲ್ಲ. ಅದಕ್ಕೆ ನಾವು ಮಾತಾಡ್ತಿಲ್ಲ. ನೀವು ಸುಮ್ಮನಿರಿ ಎಂದು ಟ್ವೀಟ್ ಮಾಡಿ ಆಕ್ರೊಶ ಹೊರಹಾಕಿದ್ದಾರೆ.

    ವಿದೇಶಿ ಪ್ರಮುಖರ ಹೇಳಿಕೆ ಖಂಡಿಸಿ ವಿದೇಶಾಂಗ ಸಚಿವಾಲಯ ಕೂಡ ಪ್ರಕಟಣೆ ಹೊರಡಿಸಿದೆ. ಸೆಲೆಬ್ರಿಟಿಗಳ ಹೇಳಿಕೆಗಳು ಅವಾಸ್ತವ, ಬೇಜವಬ್ದಾರಿತನದಿಂದ ಕೂಡಿವೆ. ಕೆಲ ಸ್ವಾರ್ಥಿಗಳು ಹೋರಾಟದ ಹೆಸರಲ್ಲಿ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಗಿಟ್ಟಿಸಿಕೊಳ್ಳಲು ನೋಡ್ತಿದ್ದಾರೆ. ಇವರ ಸುಳ್ಳುಗಳಿಂದ ವಿದೇಶಗಳಲ್ಲಿ ಗಾಂಧಿ ಪ್ರತಿಮೆಯನ್ನು ಅಪವಿತ್ರ ಮಾಡುವ ಕೆಲಸ ನಡೆದಿದೆ. ಇದು ಭಾರತಕ್ಕೆ ಅತೀವ ನೋವು ತಂದಿದೆ ಎಂದಿದೆ. ಅಲ್ಲದೇ, ಇದಕ್ಕೆ #IndiaAgainstPropaganda #IndiaTogether ಹೆಸರಿನ ಹ್ಯಾಷ್‍ಟ್ಯಾಗನ್ನು ವಿದೇಶಾಂಗ ಸಚಿವಾಲಯ ಜೋಡಿಸಿದೆ.

    https://twitter.com/KanganaTeam/status/1356640083546406913

  • ಬೆಳಗ್ಗೆ ಬಂದ್‍ಗೆ ಸಪೋರ್ಟ್, ಮಧ್ಯಾಹ್ನ ಬಿಲ್‍ಗೆ ಬೆಂಬಲ- ಮೇಲ್ಮನೆಯಲ್ಲಿ ಭೂಸುಧಾರಣೆ ಮಸೂದೆ ಪಾಸ್

    ಬೆಳಗ್ಗೆ ಬಂದ್‍ಗೆ ಸಪೋರ್ಟ್, ಮಧ್ಯಾಹ್ನ ಬಿಲ್‍ಗೆ ಬೆಂಬಲ- ಮೇಲ್ಮನೆಯಲ್ಲಿ ಭೂಸುಧಾರಣೆ ಮಸೂದೆ ಪಾಸ್

    – ಜೆಡಿಎಸ್ ಇಬ್ಬಗೆ ನೀತಿಗೆ ಆಕ್ರೋಶ

    ಬೆಂಗಳೂರು: ಭಾರತ್ ಬಂದ್ ನಡುವೆಯೇ ವಿವಾದಾತ್ಮಕ ಭೂಸುಧಾರಣಾ ತಿದ್ದುಪಡಿ ವಿಧೇಯಕ ಮೇಲ್ಮನೆಯಲ್ಲಿ ಪಾಸ್ ಆಗಿದೆ. ಸದನದ ಹೊರಗೆ ರೈತರ ಹೋರಾಟವನ್ನು ಬೆಂಬಲಿಸಿದ್ದ ಜೆಡಿಎಸ್, ಪರಿಷತ್‍ನಲ್ಲಿ ಮಾತ್ರ ವಿಧೇಯಕವನ್ನು ಇದ್ದಕ್ಕಿದ್ದಂತೆ ಬೆಂಬಲಿಸಿ ಅಚ್ಚರಿ ಮೂಡಿಸಿತು.

    ಮರಿತಿಬ್ಬೇಗೌಡ ಹೊರತುಪಡಿಸಿ ಉಳಿದೆಲ್ಲಾ ಜೆಡಿಎಸ್ ಸದಸ್ಯರು ವಿಧೇಯಕದ ಪರವಾಗಿ ಎದ್ದು ನಿಂತು ಬೆಂಬಲ ಸೂಚಿಸಿದರು. ಇದನ್ನು ಬಿಜೆಪಿ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು. ವಿಧೇಯಕದ ಪರ 37 ಮತ ಬಿದ್ದರೆ, ವಿರುದ್ಧ 21 ಮತ ಬಿದ್ದವು. ಜೆಡಿಎಸ್ ನಡೆ ಎಲ್ಲರನ್ನು ಅಚ್ಚರಿಯಲ್ಲಿ ಮುಳುಗಿಸಿತು. ಇದಕ್ಕೂ ಮುನ್ನ ಭೂಸುಧಾರಣೆ ತಿದ್ದುಪಡಿ ಮಸೂದೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಯಡಿಯೂರಪ್ಪ, ರೈತರಿಗೆ ನಾನಾಗಲಿ, ಮೋದಿಯವರಾಗಲಿ ರೈತರಿಗೆ ಅನ್ಯಾಯ ಮಾಡಲ್ಲ ಎಂಬ ಭರವಸೆ ನೀಡಿದರು.

    ಸಿಎಂ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಬಿಕೆ ಹರಿಪ್ರಸಾದ್, ರೈತರ ವಿಚಾರದಲ್ಲಿ ಕೈ ಹಾಕಿ ಎಷ್ಟೊ ಸರ್ಕಾರಗಳು, ಸಂಸ್ಥಾನಗಳು ಬಿದ್ದು ಹೋಗಿವೆ ಎಂದು ಎಚ್ಚರಿಸಿದರು. ಬಿಜೆಪಿ ಯಾಕೆ ಈ ಕಾಯ್ದೆ ತರಲು ಇಷ್ಟು ಆತುರ ಪಡುತ್ತಿದೆ ಎಂದ ಕಾಂಗ್ರೆಸ್ ಸದಸ್ಯ ನಾರಾಯಣಸ್ವಾಮಿಗೆ ಸಚಿವ ಅಶೋಕ್ ತಿರುಗೇಟು ನೀಡಿದರು.

    ಈ ಕಾಯ್ದೆ ಬಾರದೇ ಹೋದ್ರೆ ಅಧಿಕಾರಿಗಳು ದುಡ್ಡು ಹೊಡೆಯುತ್ತಾರೆ ಅಂತ ಈ ಹಿಂದಿನ ಅಧಿವೇಶನದಲ್ಲಿ ಡಿಕೆಶಿ ಮಾತಾಡಿದ್ದಾರೆ. ನಿಮಗೇನು ಪ್ರಾಬ್ಲಂ ಅಂದ್ರು. ಅಶೋಕ್ ಮಾತಿಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತು. ಅದು ಡಿಕೆ ಶಿವಕುಮಾರ್ ವೈಯಕ್ತಿಕ ಅಭಿಪ್ರಾಯ. ಕಾಂಗ್ರೆಸ್ ಅಭಿಪ್ರಾಯ ಅಲ್ಲ ಅಂತಾ ಹರಿಪ್ರಸಾದ್ ಸ್ಪಷ್ಟನೆ ನೀಡೋಕೆ ಯತ್ನಿಸಿದರು. ಈ ವೇಳೆ ಗದ್ದಲ ಗಲಾಟೆ ನಡೀತು.

    ಇನ್ನು ಬಿಲ್ ಪಾಸ್‍ಗೆ ರೈತ ಮುಖಂಡರು ಕಿಡಿಕಾರಿದ್ದಾರೆ. ಜೆಡಿಎಸ್‍ನವರು ಹೇಳೋದೊಂದು ಮಾಡೋದೊಂದು. ರೇವಣ್ಣ ಬಹಳ ಕುತಂತ್ರಿ. ಬೆಳಗ್ಗೆ ನಮ್ಮ ಜೊತೆ ಪ್ರತಿಭಟನೆಗೆ ಬರ್ತಾರೆ. ಮಧ್ಯಾಹ್ನ ಅಲ್ಲಿ ಹೋಗಿ ವಿಧೇಯಕ್ಕೆ ಒಪ್ಪಿಗೆ ಸೂಚಿಸುತ್ತಾರೆ. ದ್ರೋಹ ಬಗೆದವರಿಗೆ ರೈತರೇ ಬುದ್ಧಿ ಕಲಿಸ್ತಾರೆ ಎಂದು ಕುರುಬೂರು ಶಾಂತ ಕುಮಾರ್ ಆಕ್ರೋಶ ಹೊರಹಾಕಿ ರಸ್ತೆ ತಡೆ ನಡೆಸಿದರು.

  • ಸಿಎಂ `ಗೂಂಡಾ’ ಮಾತಿನ ರಿಯಾಲಿಟಿ ಚೆಕ್ – ಪ್ರಕರಣಕ್ಕೆ ಹೊಸ ಟ್ವಿಸ್ಟ್

    ಸಿಎಂ `ಗೂಂಡಾ’ ಮಾತಿನ ರಿಯಾಲಿಟಿ ಚೆಕ್ – ಪ್ರಕರಣಕ್ಕೆ ಹೊಸ ಟ್ವಿಸ್ಟ್

    ಬೆಳಗಾವಿ: ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿದ್ದ ರೈತರನ್ನು ಗೂಂಡಾಗಳು ಎಂದು ಕರೆದಿದ್ದ ಸಿಎಂ ಕುಮಾರಸ್ವಾಮಿ ಅವರು ಆಡಿದ್ದ ಮಾತಿನ ಬಗ್ಗೆ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಡೆಸಿದ್ದು, ಇಡೀ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರುವ ರೈತ ಹೋರಾಟಗಾರ ಅಶೋಕ್ ಅವರು, ನಾನು ರೈತ ಸಂಘ ಸೇರುವ ಮೊದಲು ಜೆಡಿಎಸ್ ಪಕ್ಷದ ಕಾರ್ಯಕರ್ತನಾಗಿದ್ದೆ. ಆದರೆ ರೈತರಿಗೆ ರಾಜಕೀಯ ಪಕ್ಷಗಳಿಂದ ಸರಿಯಾದ ಬೆಂಬಲ ಸಿಗದ ಕಾರಣ ರಾಜಕೀಯ ಪಕ್ಷ ತೊರೆದು ರೈತ ಸಂಘ ಸೇರಿದೆ. ಆದ್ದರಿಂದ ಮುಖ್ಯಮಂತ್ರಿಗಳು ನನ್ನ ಮೇಲೆ ಈ ರೀತಿ ಆರೋಪ ಮಾಡಿದ್ದಾರೆ. ಅವರ ಮಾತಿನ ಶೈಲಿ ಅವರಿಗೆ ಪ್ರಿಯವಾಗಬೇಕು. ನಾನು ರೈತನೇ ಅಲ್ಲ ಎನ್ನುವುದಾರೆ ದಾಖಲೆ ಪರಿಶೀಲನೆ ನಡೆಸಲಿ. 2010ರ ಬಳಿಕ ನಾನು ಪ್ರತಿವರ್ಷ ಕಾರ್ಖಾನೆಗೆ ಕಬ್ಬು ನೀಡಿದ್ದಾಗಿ ತಿಳಿಸಿದ್ದಾರೆ.

    ನಾನು ಈ ಹಿಂದೆ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದೇನೆ. ಸಿಎಂ ನನಗೆ ಮೊದಲಿನಿಂದಲೂ ತುಂಬಾ ಪರಿಚಯ. ಅವರು ನಮ್ಮ ಮನೆಗೂ ಒಮ್ಮೆ ಭೇಟಿ ಕೂಡ ನೀಡಿದ್ದರು. ಆದರೆ ನಾನು ಜೆಡಿಎಸ್ ಪಕ್ಷದಿಂದ ಹೊರ ಬಂದು ರೈತ ಸಂಘ ಸೇರಿದೆ. ಹೀಗಾಗಿ ಸಿಎಂ ಅವರು ಈ ರೀತಿ ಆರೋಪ ಮಾಡಿರಬಹುದು ಎಂದು ಅಶೋಕ್ ಹೇಳಿದರು.

    ರೈತರಿಗೆ ಪಾವತಿ ಆಗಬೇಕಾದ ಹಣದ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದ ಕಾರಣ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವು. ಆದರೆ ರಸ್ತೆಗಿಳಿದು ಹೋರಾಟ ನಡೆಸಲು ಮುಂದಾದರೆ ಜನ ಸಾಮಾನ್ಯರಿಗೆ ಹೆಚ್ಚಿನ ತೊಂದರೆ ಉಂಟಾಗುತ್ತದೆ. ಅದ್ದರಿಂದ ಸುವರ್ಣ ಸೌಧದ ಮುಂದೆಯೇ ಹೋರಾಟ ನಡೆಸಲು ಮುಂದಾಗಿದ್ದೇವು. ಈ ವೇಳೆ ಪೊಲೀಸರು ಅಡ್ಡಿಪಡಿಸಿದ ಕಾರಣ ಅನಿವಾರ್ಯವಾಗಿ ಬೀಗ ಮುರಿದು ಒಳಹೋಗುವ ಪ್ರಯತ್ನ ನಡೆಸಲಾಯಿತು. ನಮ್ಮ ಹೋರಾಟ ಕೇವಲ ಇಲ್ಲಿಗೆ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

    ಸಿಎಂ ಕುಮಾರಸ್ವಾಮಿ ಅವರೊಂದಿಗೆ ಮಂಗಳವಾರ ನಡೆದ ಸಭೆ ಯಶಸ್ವಿಯಾಗಿಲ್ಲ. ಸುಪ್ರೀಂ ಕೋರ್ಟ್ ರೈತರಿಗೆ 15 ದಿನಗಳಲ್ಲಿ ಬಿಲ್ ನೀಡಲು ಸೂಚನೆ ನೀಡಿದೆ. ಆದರೆ ಕಾರ್ಖಾನೆ ಮಾಲೀಕರು ನ್ಯಾಯಾಲಯ ಸೂಚನೆ ಅನುಸರಿಸುತ್ತಿಲ್ಲ. ಅದ್ದರಿಂದ ನಮ್ಮ ಹೋರಾಟ ಮುಂದುವರಿಸುತ್ತೇವೆ. ಮುಂದಿನ ಚಳಿಗಾಲದ ಅಧಿವೇಶನದಲ್ಲೂ ನಮ್ಮ ಹೋರಾಟ ಮುಂದುವರಿಯುತ್ತದೆ. ಸರ್ಕಾರವೇ ರೈತರ ಪರ ನಿರ್ಣಯ ಕೈಗೊಂಡು ಸಂಕಷ್ಟದಲ್ಲಿರುವ ರೈತರಿಗೆ ನೆರವು ನೀಡಬೇಕಿದೆ ಎಂದು ಮನವಿ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv