Tag: ರೈತರ ಮನೆ

  • ರೈತನ ಮನೆಯೊಳಗೆ ನುಗ್ಗಿ ವಿಶ್ರಾಂತಿ ಪಡೆದ ಸಿಂಹರಾಜ

    ರೈತನ ಮನೆಯೊಳಗೆ ನುಗ್ಗಿ ವಿಶ್ರಾಂತಿ ಪಡೆದ ಸಿಂಹರಾಜ

    ಅಹಮದಾಬಾದ್: ರೈತರೊಬ್ಬರ ಮನೆಗೆ ಸಿಂಹ ನುಗ್ಗಿ, ಮನೆಯಲ್ಲೇ ವಿಶ್ರಾಂತಿ ಪಡೆದ ಘಟನೆ ಗುಜರಾತ್‍ನ ಅಂರೇಲಿ ಜಿಲ್ಲೆಯ ಪಟ್ಲಾ ಎಂಬ ಹಳ್ಳಿಯಲ್ಲಿ ಭಾನುವಾರದಂದು ನಡೆದಿದ್ದು, ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಪಟ್ಲಾ ಹಳ್ಳಿಯು ಗಿರ್ ಅರಣ್ಯ ಪ್ರದೇಶದ ಗಡಿಭಾಗದಲ್ಲಿರುವ ಜಿಲುಬಾಯಿ ವಾಲಾ ಅವರ ಮನೆಗೆ ಸಿಂಹ ನುಗ್ಗಿತ್ತು. ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಮನೆಗೆ ಸಿಂಹ ನುಗ್ಗಿ, ಶೇಂಗಾ ತುಂಬಿಟ್ಟ ಕೋಣೆಯಲ್ಲಿ ಸೇರಿದಷ್ಟೇ ಅಲ್ಲದೆ ದಾರಿಯಲ್ಲಿ ಜಿಲುಬಾಯಿ ಅವರ ಒಂದು ಎಮ್ಮೆಯನ್ನು ಸಹ ಕೊಂದು ಹಾಕಿತ್ತು.

    ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ್ದಾರೆ. ಅರಣ್ಯ ಸಿಬ್ಬಂದಿ ಎರಡು ಗಂಟೆಗಳ ಸತತ ಪ್ರಯತ್ನ ಪಟ್ಟು ಬಳಿಕ ಸಿಂಹವನ್ನು ಸೆರೆಹಿಡಿದು, ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.

    ಈ ಅರಣ್ಯದಲ್ಲಿ ಏಷ್ಯಾಟಿಕ್ ತಳಿಯ ಸಿಂಹಗಳು ಹೆಚ್ಚಾಗಿ ಕಾಣಸಿಗುತ್ತದೆ. ಪಟ್ಲಾ ಹಳ್ಳಿಯು ಗಿರ್ ಅರಣ್ಯ ಪ್ರದೇಶಕ್ಕೆ ಸಮೀಪದಲ್ಲಿ ಇರುವುದರಿಂದ ಸಿಂಹಗಳು ಹೀಗೆ ಹಳ್ಳಿಗಳಿಗೆ ನುಗ್ಗುವುದು ಈ ಭಾಗದಲ್ಲಿ ಸಾಮಾನ್ಯವಾಗಿರುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews