Tag: ರೈತರು

  • ʻನನ್ನ ಸಾವಿಗೆ ಸಚಿವ ಜಮೀರ್ ಕಾರಣʼ – ರಕ್ತದಲ್ಲಿ ಡೆತ್‌ನೋಟ್‌ ಬರೆದು ಹೈಡ್ರಾಮಾ!

    ʻನನ್ನ ಸಾವಿಗೆ ಸಚಿವ ಜಮೀರ್ ಕಾರಣʼ – ರಕ್ತದಲ್ಲಿ ಡೆತ್‌ನೋಟ್‌ ಬರೆದು ಹೈಡ್ರಾಮಾ!

    – ತೆಲಂಗಾಣದ ಮೆಕ್ಕೆಜೋಳ ಉದ್ಯಮಿಗಳ ಪರ ನಿಂತ್ರಾ ಜಮೀರ್‌?

    ಚಿಕ್ಕಬಳ್ಳಾಪುರ: ರಾಜ್ಯದ ಮೆಕ್ಕೆಜೋಳದ (Corn) ವ್ಯಾಪಾರಿ ಹಾಗೂ ರೈತರಿಗೆ ಸಹಕಾರ ನೀಡುವ ಬದಲು ತೆಲಂಗಾಣದ ಮೆಕ್ಕೆಜೋಳದ ಉದ್ಯಮಿಗಳಿಗೆ ಸಪೋರ್ಟ್ ಮಾಡಿದ್ದಾರೆ ಅಂತ ಸಚಿವ ಜಮೀರ್ ಅಹಮದ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸಚಿವರ ನಡೆ ಖಂಡಿಸಿ, ವ್ಯಾಪಾರಿ ರಾಮಕೃಷ್ಣ ಆಲಿಯಾಸ್ ಜೊನ್ನಲ ಕಿಟ್ಟಿ ಸಚಿವ ಜಮೀರ್ ವಿರುದ್ಧ ಭಾರೀ ಆಕ್ರೋಶ ಹೊರಹಾಕಿದರು. ನನ್ನ ಸಾವಿಗೆ ಸಚಿವ ಜಮೀರ್ ಅಹಮದ್ (Zameer Ahmed Khan) ಕಾರಣ ಅಂತ ರಕ್ತದಲ್ಲಿ ಡೆತ್‍ನೋಟ್ ಬರೆದು ತಂದು ಹೈಡ್ರಾಮಾ ನಡೆಸಿದರು.

    ಏನಿದು ವಿವಾದ?
    ರೈತ (Farmer) ರಾಮಕೃಷ್ಣ ಅಲಿಯಾಸ್ ಜೊನ್ನಲಕಿಟ್ಟಿ, ರಕ್ತದಲ್ಲಿ ಬರೆದ ಡೆತ್ ನೋಟ್ (Deathnote) ತಂದು ಸಚಿವ ಜಮೀರ್ ಸಮ್ಮುಖದಲ್ಲೇ ನನಗೆ ಹಣ ಕೊಡಿಸಿ, ಇಲ್ಲದಿದ್ರೆ ನಾನು ವಿಷ ಕುಡಿದು ಸಾಯ್ತೀನಿ, ನೇಣು ಹಾಕೋತಿನಿ ಅಂತ ಕಣ್ಣೀರು ಹಾಕಿದ್ದಾರೆ. ರಾಮಕೃಷ್ಣ ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಬಳಿಯ ದಿಗೂರು ನಿವಾಸಿ. ದಕ್ಷಿಣ ಭಾರತದಲ್ಲೇ (South India) ಅತಿ ಹೆಚ್ಚು ಮೆಕ್ಕೆಜೋಳದ ಬ್ಯುಸಿನೆಸ್ ಮಾಡುವ ಈ ರಾಮಕೃಷ್ಣ ಕಳೆದ 4-5 ತಿಂಗಳ ಹಿಂದೆ ಹೈದರಾಬಾದ್ ನ ಅಕ್ಬರ್, ಸದ್ದಾಂ, ನಾಸೀರ್ ಅನ್ನೋ ಮೂವರು ಅಣ್ಣ ತಮ್ಮಂದಿರಿಗೆ 1 ಕೋಟಿ 89 ಲಕ್ಷ ರೂಪಾಯಿ ಮೆಕ್ಕೆಜೋಳ ಸೇಲ್ ಮಾಡಿದ್ರು. ಆದ್ರೆ ಮೂವರು ಅಣ್ಣ ತಮ್ಮಂದಿರು ರಾಮಕೃಷ್ಣಗೆ ಹಣ ನೀಡದೇ ಸತಾಯಿಸುತ್ತಿದ್ದರು. ಇದ್ರಿಂದ ನೊಂದ ರಾಮಕೃಷ್ಣ ಪೇರೇಸಂದ್ರ ಪೊಲೀಸ್ ಠಾಣೆಯಲ್ಲಿ ಅಕ್ಬರ್, ಸದ್ದಾಂ, ನಾಸೀರ್ ವಿರುದ್ಧ ದೂರು ದಾಖಲಿಸಿದ್ರು. ಹೀಗಾಗಿ ಪೇರೇಸಂದ್ರ ಪಿಎಸ್‍ಐ (PSI) ಜಗದೀಶ್ ರೆಡ್ಡಿ ಅಕ್ಬರ್ ಪಾಷಾ ನನ್ನ ಬಂಧಿಸಿ ಕರೆತಂದಿದ್ರು. ಈ ವೇಳೆ ಪಿಎಸ್‌ಐಗೆ ಕರೆ ಮಾಡಿ ಮಾತನಾಡಿದ್ದ ಸಚಿವ ಜಮೀರ್ ಅಹಮದ್, ಅವರು ನಮ್ಮ ರಿಲೇಶನ್ ಇದ್ದಾರೆ ಸ್ವಲ್ಪ ಟೈಂ ಕೊಡಿ ಸೆಟಲ್ ಮಾಡಿಕೊಡ್ತಾರೆ ಅಂತ ಮಾತನಾಡಿದ್ರು. ಈಗ ಇದೇ ಮಾತು ಸಚಿವ ಜಮೀರ್ ಅಹಮದ್ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ

    ಸಚಿವ ಜಮೀರ್ ಅಹಮದ್ ಹೇಳಿದ್ದೇನು..?
    ಅಂದಹಾಗೆ ಕಳೆದ 1 ವಾರದ ಹಿಂದೆ ಈ ಆಡಿಯೋ ವೈರಲ್ ಆಗಿ ಸಚಿವ ಜಮೀರ್ ಮಾತುಗಳು ಪಿಎಸ್‍ಐ ಮೇಲೆ ಪ್ರಭಾವ ಬೀರಿರೋದು ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ಇಂದು ಚಿಕ್ಕಬಳ್ಳಾಪುರ ನಗರದ ಷಾದಿ ಮಹಲ್‌ಗೆ ಕಾರ್ಯಕ್ರಮ ನಿಮಿತ್ತ ಆಗಮಿಸಿದ್ದ ಸಚಿವ ಜಮೀರ್ ಅಹಮದ್ ಎದುರೇ ಆಗಮಿಸಿದ ದೂರುದಾರ ರೈತ ಹಾಗೂ ವ್ಯಾಪಾರಿ ರಾಮಕೃಷ್ಣ ರಕ್ತದಲ್ಲಿ ಬರೆದ ಡೆತ್ ನೋಟ್ ಹಿಡಿದು ಬಂದು, ಸರ್ ನನಗೆ ಹಣ ಕೊಡಿಸಿ ಇಲ್ಲ ಅಂದ್ರೆ ಡೆತ್ ನೋಟ್ ತಂದಿದ್ದೀನಿ, ನಾನು ವಿಷ ಕುಡಿದು ನೇಣು ಹಾಕ್ಕೊಂಡು ಸಾಯ್ತೀನಿ ಅಂತ ಸಚಿವ ಜಮೀರ್ ಅಹಮದ್ ಎದುರೇ ಕಣ್ಣೀರು ಹಾಕಿದರು. ಈ ವೇಳೆ ರಾಮಕೃಷ್ಣ ವಿರುದ್ದವೇ ಸಚಿವ ಜಮೀರ್ ಸಿಡಿಮಿಡಿಗೊಂಡರು. ನಂತರ ರೈತ-ವ್ಯಾಪಾರಿ ರಾಮಕೃಷ್ಣನನ್ನ ಸಮಾಧಾನ ಮಾಡಿ ಪೊಲೀಸರು ಕಾರ್ಯಕ್ರಮದಿಂದ ಹೊರೆಗೆ ಕರೆತಂದರು. ಕಾರ್ಯಕ್ರಮ ಮುಗಿದ ನಂತರ ಈ ಬಗ್ಗೆ ಮಾತನಾಡಿದ ಜಮೀರ್ ಅಹಮದ್ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿ ನಾನು ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ, ನಾಳೆಯೇ ತೆಲಂಗಾಣದ ಉದ್ಯಮಿ ಅಕ್ಬರ್ ನನ್ನ ಕರೆಸಿ ಅವರಿಗೆ ಹಣ ಸೆಟ್ಲ್‍ಮೆಂಟ್ ಮಾಡಿಕೊಳ್ಳುವಂತೆ ಹೇಳುತ್ತೇನೆ ಅಂತ ಹೇಳಿ ಚಿಕ್ಕಬಳ್ಳಾಪುರದಿಂದ ಹೊರಟರು.

    ಸಚಿವ ಜಮೀರ್ ಅಹಮದ್ ವಿರುದ್ಧ ರೈತರ ಆಕ್ರೋಶ!
    ಇನ್ನೂ ರೈತ ರಾಮಕೃಷ್ಣಗೆ ಮೆಕ್ಕೆಜೋಳ ಮಾರಾಟ ಮಾಡಿರೋ ರೈತರು ಸಹ ಕಾರ್ಯಕ್ರಮಕ್ಕೆ ಆಗಮಿಸಿ ಸಚಿವ ಜಮೀರ್ ಅಹಮದ್ ವಿರುದ್ಧ ಆಕ್ರೋಶ ಹೊರಹಾಕಿದರು. ಸಚಿವರ ಮಧ್ಯ ಪ್ರವೇಶ ಮಾಡಿ ಪಿಎಸ್‍ಐಗೆ ಪೋನ್ ಮಾಡಿದ್ರಿಂದಲೇ ದುಡ್ಡು ಕೊಡ್ತೀವಿ ಅಂತ ಬಂದ ಆರೋಪಿಗಳು ದುಡ್ಡು ಕೊಡದೆ ವಾಪಸ್ ಹೋಗಿದ್ದಾರೆ. ನಮಗೆ ಈಗ ದುಡ್ಡು ಕೋಡೋವರು ಯಾರು? ಜಮೀರ್ ಅಹಮದ್ ಅವರು ಕೊಡ್ತಾರಾ ಅಂತ ಅವರ ವಿರುದ್ದವೇ ಆಕ್ರೋಶ ಹೊರಹಾಕಿದರು. ರಾಜ್ಯದ ಮೆಕ್ಕೆಜೋಳದ ವ್ಯಾಪಾರಿ-ರೈತರ ಪರ ನಿಲ್ಲುವ ಬದಲು ಸಚಿವ ಜಮೀರ್ ಅಹಮದ್ ತೆಲಂಗಾಣ ಮೂಲದ ಮೆಕ್ಕೆಜೋಳದ ಉದ್ಯಮಿಗಳು ವಂಚಕರ ಪರ ನಿಂತು ಈಗ ಇರಲಾರದೆ ಇರುವೆ ಬಿಟ್ಟುಕೊಂಡೇ ಎಂಬಂತಾಗಿದ್ದಾರೆ.

  • ಕೊಡಗು | ಅಕಾಲಿಕ ಮಳೆಗೆ ಬೆಳೆ ಹಾನಿ – ಮುಸುಕಿನ ಜೋಳ ಬೆಳೆದ ರೈತರಿಗೆ ಸಂಕಷ್ಟ

    ಕೊಡಗು | ಅಕಾಲಿಕ ಮಳೆಗೆ ಬೆಳೆ ಹಾನಿ – ಮುಸುಕಿನ ಜೋಳ ಬೆಳೆದ ರೈತರಿಗೆ ಸಂಕಷ್ಟ

    ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಕಳೆದ 4-5 ದಿನಗಳಿಂದ ರಾತ್ರಿ ಸಮಯ ಸುರಿಯುತ್ತಿರುವ ಮಳೆಯಿಂದ (Rain) ಜಿಲ್ಲೆಯಲ್ಲಿ ನಾನಾ ರೀತಿಯ ಅವಾಂತರಗಳು ಸೃಷ್ಟಿಯಾಗಿದೆ.

    ಅದರಲ್ಲೂ ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ಶಿರಂಗಾಲ, ತೊರೆನೂರು, ಅಳುವಾರ, ಸಿದ್ಧಲಿಂಗಪುರ, 6ನೇ ಹೊಸಕೋಟೆ ಸೇರಿದಂತೆ ಹಲವು ಕಡೆಗಳಲ್ಲಿ ಜೋಳ ಬೆಳೆದ ರೈತರಿಗೆ ಸಂಕಷ್ಟ ಬಂದಿದೆ.

    ಹೌದು. ಈ ಭಾಗದ ರೈತರು ಸಾವಿರಾರು ಎಕ್ರೆ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯುವದು ರೂಢಿ. ಇನ್ನೇನು ಬೆಳೆ ಕಟಾವಿಗೆ ಬಂದಿರುವ ಹೊತ್ತಿನಲ್ಲಿ ಅಕಾಲಿಕ ಮಳೆಗೆ ಹಾನಿಯಾಗಿದೆ. ರಾತ್ರಿ ಮಳೆಗೆ ಅಪಾರ ಪ್ರಮಾಣದ ಜೋಳದ ಬೆಳೆ ನೆಲ ಕಚ್ಚಿವೆ.

    ನೆಲಕ್ಕುರುಳಿರುವ ಜೋಳದ ಕಾಳುಗಳು ಮಳೆಯಿಂದ ಮೊಳಕೆಯೊಡೆಯುತ್ತಿವೆ. ಇದರಿಂದಾಗಿ ಜೋಳದ ತೂಕ ಕಡಿಮೆಯಾಗುತ್ತಿದೆ. ಅಲ್ಲದೇ ಮೊಳಕೆ ಬಂದ ಜೋಳ ಖರೀದಿಸಲು ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಒಂದು ಕ್ವಿಂಟಲ್ ಜೋಳ 1,200 ರಿಂದ 1,400 ರೂ.ಗಳಿಗೆ ಇಳಿಕೆಯಾಗಿದೆ. ಇದರಿಂದ ಸಾಲ ಮಾಡಿ ಬೆಳೆ ಬೆಳೆದ ರೈತರು ಕಣ್ಣೀರು ಹಾಕುವಂತಾಗಿದೆ.

    ಜೋಳ ಸೇರಿದಂತೆ ಶುಂಠಿ, ಅಡಿಕೆ, ಮೆಣಸು ಬೆಳೆಗಳೂ ಸಹ ಕೊಳೆಯುವ ಹಂತಕ್ಕೆ ತಲುಪಿದೆ. ಹೀಗಾಗಿ ರಾಜ್ಯ ಸರ್ಕಾರ ರೈತರ ಸಮಸ್ಯೆ ಆಲಿಸಿ ರೈತರಿಗೆ ಪರಿಹಾರ ನೀಡಬೇಕು ಎಂದು ನೂರಾರು ರೈತರು ಆಗ್ರಹಿಸಿದ್ದಾರೆ.

  • ರೈತರ ಸಮಸ್ಯೆ ಬಗೆಹರಿಸಲಿಲ್ಲ ಅಂದ್ರೆ ಮುಖಕ್ಕೆ ಹೊಡೆಯುತ್ತೇನೆ – ಅಧಿಕಾರಿಗಳಿಗೆ ಶಾಸಕ ಬಾಲಕೃಷ್ಣ ತರಾಟೆ

    ರೈತರ ಸಮಸ್ಯೆ ಬಗೆಹರಿಸಲಿಲ್ಲ ಅಂದ್ರೆ ಮುಖಕ್ಕೆ ಹೊಡೆಯುತ್ತೇನೆ – ಅಧಿಕಾರಿಗಳಿಗೆ ಶಾಸಕ ಬಾಲಕೃಷ್ಣ ತರಾಟೆ

    ರಾಮನಗರ: ರೈತರ (Farmers) ಸಮಸ್ಯೆ ಬಗೆಹರಿಸಲಿಲ್ಲ ಅಂದರೆ ಮುಖಕ್ಕೆ ಹೊಡೆಯುತ್ತೇನೆ. ನೀವು ಮಾಡುವ ಕೆಲಸಕ್ಕೆ ಜನ ನಮ್ಮ ಮುಖಕ್ಕೆ ಉಗಿಯುತ್ತಿದ್ದಾರೆ ಎಂದು ಜನಸ್ಪಂದನಾ ಸಭೆಯಲ್ಲಿ (Janaspandana Meeting) ಅಧಿಕಾರಿಗಳನ್ನ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ (HC Balakrishna) ತರಾಟೆಗೆ ತೆಗೆದುಕೊಂಡಿದ್ದಾರೆ.

    ಮಾಗಡಿ (Magadi) ತಾಲೂಕು ಕಚೇರಿಯಲ್ಲಿ ನಡೆದ ಜನಸ್ಪಂದನಾ ಸಭೆಯಲ್ಲಿ ಮಾಗಡಿ ತಹಶೀಲ್ದಾರ್ ಶರತ್ ಹಾಗೂ ಎಡಿಎಲ್‌ಆರ್ ಆನಂದ್‌ಗೆ ಶಾಸಕ ಹೆಚ್.ಸಿ.ಬಾಲಕೃಷ್ಣ ಹಿಗ್ಗಾಮುಗ್ಗ ಜಾಡಿಸಿದ್ದಾರೆ. ಸಭೆಯಲ್ಲಿ ಪೋಡಿ ದುರಸ್ತಿ ಬಗ್ಗೆ ಅಧಿಕಾರಿಗಳ ವಿರುದ್ಧ ರೈತ ದೂರು ನೀಡಿದ ಹಿನ್ನೆಲೆ ಆಕ್ರೋಶಗೊಂಡ ಶಾಸಕ, ಅಧಿಕಾರಿಗಳು ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಿದ್ದೀರಿ. ಇಬ್ಬರಿಗೂ ಮುಖಕ್ಕೆ ಹೊಡೆಯುತ್ತೇನೆ. ನೀವು ಬಂದಾಗಿನಿಂದ ರೈತರ ಒಂದು ಸಮಸ್ಯೆ ಬಗೆಹರಿಸಲಾಗಿಲ್ಲ. ನಿಮ್ಮಿಬ್ಬರ ಕೆಲಸಕ್ಕೆ ಜನ ನಮ್ಮ ಮುಖಕ್ಕೆ ಉಗಿಯುತ್ತಿದ್ದಾರೆ ಎಂದು ಕ್ಲಾಸ್ ತೆಗೆದುಕೊಂಡರು. ಇದನ್ನೂ ಓದಿ: ಕೊಡಗು | ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಗೂಡ್ಸ್‌ ವಾಹನ ಪಲ್ಟಿ

    ರೈತರ ವಿಚಾರದಲ್ಲಿ ತಮಾಷೆ ಮಾಡುತ್ತಿದ್ದೀರಾ? ರಸ್ತೆಯಲ್ಲಿ ನಿಲ್ಲಿಸಿ ಇಬ್ಬರಿಗೂ ಹಾರ ಹಾಕಿ ಸನ್ಮಾನ ಮಾಡಿಸುತ್ತೇನೆ. ನಾಚಿಕೆ ಆಗಲ್ವಾ ನಿಮಗೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: RSS ಇಂದಿರಾ ಗಾಂಧಿಗೆ ಹೆದರಿಲ್ಲ, ನೆಹರೂ ಮುಂದೆ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?- ಸುನಿಲ್ ಕುಮಾರ್

  • ಚಿತ್ರದುರ್ಗ | ಚಳ್ಳಕೆರೆಯಲ್ಲಿ ಮಳೆ ಇಲ್ಲದೆ ಒಣಗಿದ ಶೇಂಗಾ ಬೆಳೆ – ರೈತರು ಕಂಗಾಲು

    ಚಿತ್ರದುರ್ಗ | ಚಳ್ಳಕೆರೆಯಲ್ಲಿ ಮಳೆ ಇಲ್ಲದೆ ಒಣಗಿದ ಶೇಂಗಾ ಬೆಳೆ – ರೈತರು ಕಂಗಾಲು

    ಚಿತ್ರದುರ್ಗ: ಅತಿ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲೊಂದಾದ ಚಿತ್ರದುರ್ಗ (Chitradurga) ಜಿಲ್ಲೆಯ ಚಳ್ಳಕೆರೆ (Challakere) ತಾಲೂಕಿನಾದ್ಯಂತ ಮಳೆ (Rain) ಕಣ್ಣಾ ಮುಚ್ಚಾಲೆಯಾಡಿದ ಪರಿಣಾಮ ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆಯಾದ ಶೇಂಗಾ ಬೆಳೆ (Groundnut Crop) ಸಂಪೂರ್ಣ ಒಣಗಿದೆ. ಹೀಗಾಗಿ ಸಾಲಸೂಲ ಮಾಡಿ ಬಂಡವಾಳ ಹೂಡಿದ್ದ ರೈತರು ಕಂಗಾಲಾಗಿದ್ದಾರೆ.

    ಈ ಬಾರಿ ಬಿತ್ತನೆ ವೇಳೆ ಸಕಾಲಕ್ಕೆ ಮಳೆಯಾದ ಪರಿಣಾಮ ಸಾಲ ಸೂಲ ಮಾಡಿ ಬೀಜ ಗೊಬ್ಬರ ತಂದು ಬಿತ್ತನೆ ಮಾಡಿದ್ದ ರೈತನಿಗೆ (Farmers) ಮಳೆ ಕೈಕೊಟ್ಟ ಪರಿಣಾಮ ಬೆಳೆಗಳು ಒಣಗುತ್ತಿದ್ದು, ಅಪಾರ ಲಾಭದ ನಿರೀಕ್ಷೆಯಲ್ಲಿದ್ದ ರೈತನಿಗೆ ಬೆಳೆ ಒಣಗುತ್ತಿರುವುದು ಬರಸಿಡಿಲು ಬಡಿದಂತಾಗಿದೆ. ಇದನ್ನೂ ಓದಿ: ಚೆನ್ನೈ ಕಸ್ಟಮ್ಸ್‌ ಭಾರೀ ಲಂಚ- ಭಾರತದ ಕಾರ್ಯಾಚರಣೆ ನಿಲ್ಲಿಸುತ್ತೇವೆ ಎಂದ ಲಾಜಿಸ್ಟಿಕ್ಸ್ ಕಂಪನಿ

    ಕೈಗೆ ಬಂದ ಬೆಳೆ ಸಂಪೂರ್ಣ ಕಮರಿ ಹೋಗುತ್ತಿದ್ದು, ಈ ಬಾರಿಯೂ ರೈತನ ಬೆಳೆ ಕೈಗೆ ಸಿಗದೆ ಮತ್ತೆ ಸಂಕಷ್ಟ ಅನುಭವಿಸುವಂತಾಗಿದೆ. ಭೂಮಿಗೆ ಹಾಕಿದ ಬಂಡವಾಳವು ಕೈಗೆ ಸಿಗದೇ ಖಾಲಿ ಚೀಲವನ್ನು ಹೆಗಲ ಮೇಲೆ ಹಾಕಿಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರದಿಂದ ಬೆಳೆ ವಿಮೆ ಅಥವಾ ಬೆಳೆ ಹಾನಿ ಪರಿಹಾರವಾದರೂ ಸಿಗುತ್ತಾ ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರದಿಂದ ಪ್ರಜಾಪ್ರಭುತ್ವದ ಮೇಲೆ ದಾಳಿ – ಕೊಲಂಬಿಯಾದಲ್ಲಿ ರಾಹುಲ್‌ ವಾಗ್ದಾಳಿ

  • ಡಿಸಿಎಂ ಅವರೇ ರೈತರ ಮುಂದೆ ತೊಡೆ ತಟ್ಟುತ್ತಿದ್ದೀರಿ, ನಿಮ್ಮ ತೊಡೆ ಮುರಿಯುವ ಕಾಲ ದೂರವಿಲ್ಲ: ನಿಖಿಲ್

    ಡಿಸಿಎಂ ಅವರೇ ರೈತರ ಮುಂದೆ ತೊಡೆ ತಟ್ಟುತ್ತಿದ್ದೀರಿ, ನಿಮ್ಮ ತೊಡೆ ಮುರಿಯುವ ಕಾಲ ದೂರವಿಲ್ಲ: ನಿಖಿಲ್

    – ರೈತರ ಒಂದಿಂಚೂ ಭೂಮಿಯನ್ನ ಕಸಿಯಲು ಬಿಡಲ್ಲ

    ರಾಮನಗರ: ಸರ್ಕಾರ ಎಷ್ಟೇ ದಬ್ಬಾಳಿಕೆ ಮಾಡಿದರೂ ರೈತರಿಂದ ಒಂದಿಂಚು ಭೂಮಿಯನ್ನ ಕಸಿದುಕೊಳ್ಳಲು ನಾವು ಬಿಡುವುದಿಲ್ಲ. ರೈತರ ಮುಂದೆ ತೊಡೆ ತಟ್ಟುವ ಉಪಮುಖ್ಯಮಂತ್ರಿಗಳೇ ನಿಮ್ಮ ತೊಡೆ ಮುರಿಯುವ ಕಾಲ ದೂರ ಇಲ್ಲ ಎಂದು ಡಿಸಿಎಂ ಡಿಕೆಶಿ (DK Shivakumar) ವಿರುದ್ಧ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ವಾಗ್ದಾಳಿ ನಡೆಸಿದ್ದಾರೆ.

    ಬಿಡದಿಯಲ್ಲಿ ಟೌನ್ ಶಿಪ್ (Bidadi Township) ಯೋಜನೆ ವಿರೋಧಿಸಿ ರೈತರಿಗೆ ಬೆಂಬಲ ಸೂಚಿಸಿ ಬಿಡದಿಯ ಭೈರಮಂಗಲ ಗ್ರಾಮದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾದ ನಿಖಿಲ್ ಕುಮಾರಸ್ವಾಮಿ, ರೈತರನ್ನ ಉದ್ದೇಶಿಸಿ ಮಾತನಾಡಿದರು. ಸರ್ಕಾರ ಟೌನ್ ಶಿಪ್ ಯೋಜನೆಯನ್ನು ಹಿಂಪಡೆಯದಿದ್ದರೇ ಭೈರಮಂಗಲ ಗ್ರಾಮದಿಂದ ಪಾದಯಾತ್ರೆ ಮೂಲಕ ವಿಧಾನಸೌಧಕ್ಕೆ ಹಾಗೂ ಮುಖ್ಯಮಂತ್ರಿಗಳ ನಿವಾಸ ಕೃಷ್ಣ ಕಛೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. 80%ರಷ್ಟು ರೈತರು ಭೂಮಿಯನ್ನು ನೀಡುವುದಿಲ್ಲ. ರೈತರ ಮೇಲೆ ದಿನನಿತ್ಯ ಅಧಿಕಾರಿಗಳ ಮೂಲಕ ದಬ್ಬಾಳಿಕೆ, ದೌರ್ಜನ್ಯ ಮಾಡುತ್ತಿರುವುದು ಯಾವ ಉದ್ದೇಶಕ್ಕೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಡ್ರಗ್ಸ್‌ ಗ್ಯಾಂಗ್‌ನಿಂದ ಅರ್ಜೆಂಟೀನಾದ 3 ಯುವತಿಯರ ಬರ್ಬರ ಹತ್ಯೆ

    ರಾಜ್ಯದ ಉಪ ಮುಖ್ಯಮಂತ್ರಿಗಳು ರೈತರ ವಿರುದ್ಧ ತೊಡೆ ತಟ್ಟಿದ್ದಾರೆ. ಅವರಿಗೆ ರೈತರ ತಾಕತ್ತಿನ ಬಗ್ಗೆ ಅರಿವಿಲ್ಲ. ರೈತರಿಗೆ ಅಧಿಕಾರ ಕೊಡುವುದೂ ಗೊತ್ತು, ತೊಡೆ ಮುರಿಯುವುದೂ ಗೊತ್ತು. ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಈ ಯೋಜನೆಯನ್ನ ಕೈ ಬಿಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಕೊನೆಯ ಹಂತದವರೆಗೂ ರೈತರ ಧ್ವನಿಯಾಗಿ ನಿಲ್ಲುತ್ತೇವೆ. ಜೆಡಿಎಸ್ ರೈತರ ಪಕ್ಷ. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ. ಈ ಯೋಜನೆಯ ಸಾಧಕ- ಬಾಧಕಗಳ ಬಗ್ಗೆ ವಿಚಾರ ಮಾಡದೇ ರೈತರ ಮೇಲೆ ದಬ್ಬಾಳಿಕೆ ಮಾಡಿ ಭೂಮಿ ಕಸಿದುಕೊಳ್ಳುತ್ತಿರುವುದು ಯಾವ ಉದ್ದೇಶಕ್ಕಾಗಿ? ರಿಯಲ್ ಎಸ್ಟೇಟ್ ಮಾಫಿಯಾ ನಡೆಸುವುದಕ್ಕಾ? ರೈತರ ಜಮೀನು ಮಾರಾಟ ಮಾಡದಂತೆ ಆದೇಶ ಮಾಡಿದ್ದೀರಾ? ಅವರ ಮಕ್ಕಳ ಜೀವನಕ್ಕೆ ಏನು ಮಾಡಬೇಕು. ರೈತ ಬೀದಿಗೆ ಬರ್ತಾನೆ ಅದಕ್ಕೆ ಸಾಮಾಜಿಕ ಸಮೀಕ್ಷೆ ಮಾಡಿದ್ದೀರಾ? ಜಿಲ್ಲೆಯಲ್ಲಿ ನಾಲ್ಕು ಕಾಂಗ್ರೆಸ್ ಶಾಸಕರು ಇದ್ದಾರೆ. 10 ಹಳ್ಳಿಗಳ ರೈತರ ಜೊತೆ ಮಾತನಾಡಿದ್ದೀರಾ ಎಂದು ಗುಡುಗಿದರು. ಇದನ್ನೂ ಓದಿ: ರಾಯಚೂರು | ಜಾತಿಗಣತಿ ಸಮೀಕ್ಷಾ ಕಾರ್ಯಕ್ಕೆ ನಿರ್ಲಕ್ಷ್ಯ ತೋರಿದ ಅಧಿಕಾರಿ ಅಮಾನತು

  • ಈರುಳ್ಳಿಗೆ ಸೂಕ್ತ ಬೆಲೆ ಸಿಗದೆ ಕಂಗಾಲಾದ ರೈತರು – ಡಿಸಿ ಕಚೇರಿ ಆವರಣದಲ್ಲಿ ಸುರಿದು ಆಕ್ರೋಶ

    ಈರುಳ್ಳಿಗೆ ಸೂಕ್ತ ಬೆಲೆ ಸಿಗದೆ ಕಂಗಾಲಾದ ರೈತರು – ಡಿಸಿ ಕಚೇರಿ ಆವರಣದಲ್ಲಿ ಸುರಿದು ಆಕ್ರೋಶ

    – ಸರ್ಕಾರಕ್ಕೆ ಉಗ್ರ ಹೋರಾಟದ ಎಚ್ಚರಿಕೆ ಕೊಟ್ಟ ಅನ್ನದಾತರು

    ಚಿತ್ರದುರ್ಗ: ಇತ್ತೀಚಿಗೆ ಸುರಿದ ಅಕಾಲಿಕ ಮಳೆ ಹಾಗು ಬೆಲೆ ಕುಸಿತದಿಂದಾಗಿ ಈರುಳ್ಳಿಯನ್ನು (Onion) ಕೇಳುವವರಿಲ್ಲದಂತಾಗಿದೆ. ಹೀಗಾಗಿ ಆಕ್ರೋಶಗೊಂಡ ರೈತರು (Farmers) ಈರುಳ್ಳಿಯನ್ನು ಡಿಸಿ ಕಚೇರಿ ಆವರಣದಲ್ಲಿ ಸುರಿದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿರುವ ಘಟನೆ ಚಿತ್ರದುರ್ಗದಲ್ಲಿ (Chitradurga) ನಡೆದಿದೆ.

    ಹೌದು, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮೂರು ಸೇರಿದಂತೆ ಹಿರಿಯೂರು ತಾಲೂಕುಗಳ ರೈತರ ಪ್ರಮುಖ ವಾಣಿಜ್ಯ ಬೆಳೆ ಈರುಳ್ಳಿ. ಹೀಗಾಗಿ ಈ ಭಾಗದ ಈರುಳ್ಳಿಗೆ ಎಲ್ಲಡೆ ಭಾರೀ ಬೇಡಿಕೆ ಇದೆ. ಅಲ್ಲದೇ ಮಧ್ಯ ಕರ್ನಾಟಕದ ಸೇಬಿನಾಕಾರದ ಈರುಳ್ಳಿ ಎಂಬ ಖ್ಯಾತಿ ಪಡೆದಿರುವ ಈರುಳ್ಳಿಯು ರೈತರ ಪಾಲಿಗೆ ಬಂಗಾರದಂತ ಲಾಭ ಕೊಡುವ ಬೆಳೆ ಎನಿಸಿದೆ. ಆದರೆ ಇತ್ತೀಚಿಗೆ ಸುರಿದ ಅಕಾಲಿಕ ಮಳೆಯಿಂದಾಗಿ ಕೆಲವೆಡೆ ಈರುಳ್ಳಿ ಕೊಳೆತು ಹೋಗಿದ್ದು, ಹಲವಡೆ ಉತ್ತಮ ಇಳುವರಿ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಮಾತ್ರ ಈರುಳ್ಳಿ ಬೆಲೆ ನೆಲಕ್ಕೆ ಕುಸಿದಿದೆ. ಹೀಗಾಗಿ ಒಂದು ಕೆಜಿ ಈರುಳ್ಳಿ ಕೇವಲ 2 ರೂಪಾಯಿಯಿಂದ 3 ರೂಪಾಯಿಗೆ ಮಾತ್ರ ಸೇಲ್ ಆಗುತ್ತಿದೆ. ಹೀಗಾಗಿ ಸಾಲ ಮಾಡಿ ಈರುಳ್ಳಿ ಬೆಳೆದ ರೈತರು, ಸೂಕ್ತ ಬೆಲೆ ಸಿಗದೇ ಕಂಗಾಲಾಗಿದ್ದಾರೆ. ಈರುಳ್ಳಿಯನ್ನು ಡಿಸಿ ಕಚೇರಿ ಆವರಣದಲ್ಲಿ ಸುರಿದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಇಂದು ಮಹಿಷ ದಸರಾ – ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿ

    ಇನ್ನು ರೈತರ ನಿರೀಕ್ಷಯಂತೆ, ಉತ್ತಮ ಬೆಳೆ ಬಂದರೂ ಸಹ ಲಾಭ ಸಿಗಲಾರದೇ ರೈತರು ದಿಕ್ಕು ತೋಚದಂತಾಗಿದ್ದಾರೆ. ಹೀಗಾಗಿ ರೈತರು ಬೆಳೆದಿರೋ ಈರುಳ್ಳಿಗೆ ಸರ್ಕಾರ ಕೂಡಲೇ ವೈಜ್ಞಾನಿಕವಾಗಿ ಬೆಂಬಲ ಬೆಲೆ ನಿಗದಿ ಪಡಿಸಬೇಕು. ಸರ್ಕಾರ ಕೂಡಲೇ ಸೂಕ್ತ ಪರಿಹಾರ ಒದಗಿಸುವ ಮೂಲಕ ಅನ್ನದಾತರನ್ನು ಸಂಕಷ್ಟದಿಂದ ಪಾರು ಮಾಡಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ. ಇದನ್ನೂ ಓದಿ: ದೇಶದ ಮೊದಲ ವಂದೇ ಭಾರತ್‌ ಸ್ಲೀಪರ್ ರೈಲು -‌ ವಿಶೇಷತೆಗಳೇನು? ಟಿಕೆಟ್‌ ದರ ಎಷ್ಟು?

    ಇನ್ನು ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಅಲ್ಬೂರು ಗ್ರಾಮದ ರೈತ ಕೊಚ್ಚಾಲಿ ಮಂಜುನಾಥ 9 ಎಕರೆಯಲ್ಲಿ ಈರುಳ್ಳಿ ಬೆಳೆದು, ದರ ಕುಸಿತದಿಂದ ಕಣ್ಣಿರು ಹಾಕುವ ಸ್ಥಿತಿ ಬಂದೊದಗಿದೆ. 9 ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದ ರೈತ ಮಂಜುನಾಥ, 8ರಿಂದ 9 ಲಕ್ಷ ಖರ್ಚು ಮಾಡಿದ್ದರು. ಇನ್ನೇನು ಕಟಾವು ಮಾಡಿ ಈರುಳ್ಳಿ ಮಾರಾಟ ಮಾಡಬೇಕು ಎನ್ನುವಷ್ಟರಲ್ಲಿ ಧಿಡೀರ್ ಅಂತಾ ದರ ಪಾತಾಳಕ್ಕೆ ಕುಸಿದಿದೆ. ಸದ್ಯ ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಚೀಲ ಒಂದಕ್ಕೆ ಕೇವಲ 50 ರೂ. ಕೇಳುತ್ತಿದ್ದಾರೆ. ಇತ್ತ ಖರೀದಿ ಕೇಂದ್ರವಿಲ್ಲದೆ, ಬೆಂಬಲ ಬೆಲೆ ಇಲ್ಲದೆ ಅನ್ನದಾತರ ಬದುಕು ಬೀದಿಗೆ ಬಂದಿದೆ. ಇದನ್ನೂ ಓದಿ: ಸಬ್‌ ಮರಿನ್‌ಗಳನ್ನೇ ಬೇಟೆಯಾಡೋ ರಣ ಬೇಟೆಗಾರ  ʻಅಂಡ್ರೋತ್‌ʼ! 

    ಒಟ್ಟಾರೆ ಪ್ರಕೃತಿ ಕೋಪಕ್ಕೆ ಸಿಲುಕಿ ನಷ್ಟ ಅನುಭವಿಸುತ್ತಿದ್ದ ಅನ್ನದಾತರು ಇದೀಗ ಈರುಳ್ಳಿ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಹೀಗಾಗಿ ರೈತರ ಶ್ರಮಕ್ಕೆ ಫಲ ಇಲ್ಲದಂತಾಗಿದೆ. ಇದನ್ನೂ ಓದಿ: ಯಲ್ಲಾಪುರ ಕಾನೂರು ಜಲಪಾತದಲ್ಲಿ ಫೋಟೋಶೂಟ್ ವೇಳೆ ಕಾಲುಜಾರಿ ಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ ಕಾಣೆ

  • ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಾಂತ ಧಾರಾಕಾರ ಮಳೆ – ಅಂಡರ್ ಪಾಸ್ ಮುಳುಗಡೆ; ಬೆಳೆಗಳು ಜಲಾವೃತ

    ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಾಂತ ಧಾರಾಕಾರ ಮಳೆ – ಅಂಡರ್ ಪಾಸ್ ಮುಳುಗಡೆ; ಬೆಳೆಗಳು ಜಲಾವೃತ

    ಚಿಕ್ಕಬಳ್ಳಾಪುರ: ಬರದನಾಡು ಅಂದೇ ಖ್ಯಾತಿ ಪಡೆದಿದ್ದ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆ, ಇದೀಗ ಮಲೆನಾಡಿನಂತಾಗಿದೆ. ಕಳೆದ ಮೂರು ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ-ಕುಂಟೆ, ಜಲಾಶಯಗಳು ಮೈದುಂಬಿ ಹರಿಯುತ್ತಿವೆ. ಬಾಗೇಪಲ್ಲಿ ತಾಲೂಕಿನ ಚಿತ್ರಾವತಿ ಜಲಾಶಯ ನೀರಿನಿಂದ ತುಂಬಿ ಹರಿಯುತ್ತಿರುವುದು ಜನರಲ್ಲಿ ಹರ್ಷ ಮೂಡಿಸಿದೆ.

    ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯದಿಂದ 80 ಅಡಿ ಎತ್ತರದಿಂದ ಧುಮ್ಮುಕ್ಕುತ್ತಿರುವ ನೀರು ನಯನ ಮನೋಹರ ದೃಶ್ಯ ಸೃಷ್ಟಿಸಿದೆ. ಮಂಚೇನಹಳ್ಳಿ ರಾಯನಕಲ್ಲು ಕೆರೆ ಹಾಗೂ ಗೌರಿಬಿದನೂರು ತಾಲೂಕಿನ ಉತ್ತರ ಪಿನಾಕಿನಿ ನದಿಗೂ ಮಳೆ ಜೀವ ತುಂಬಿದೆ. ಆದರೆ, ಭಾರೀ ಮಳೆಯಿಂದ (Heavy Rain) ಚಿಕ್ಕಬಳ್ಳಾಪುರ ನಗರದಲ್ಲಿ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಮಂಚನಬಲೆ ಅಂಡರ್ ಪಾಸ್ ನೀರಿನಿಂದ ಮುಳುಗಡೆಯಾಗಿ ವಾಹನ ಸವಾರರು ಪರದಾಡುವಂತಾಗಿದೆ. ಇದನ್ನೂ ಓದಿ: ದುರಹಂಕಾರದ ಮಾತು ಬಿಟ್ಟು, ಜನಪರ ಕೆಲಸ ಮಾಡಿ – ಉದ್ಯಮಿಗಳ ಬಗ್ಗೆ ಡಿಕೆಶಿ ಹೇಳಿಕೆಗೆ ಅಶ್ವಥ್ ನಾರಾಯಣ್‌ ಖಂಡನೆ

    ರೈತರಿಗೆ ಸಂಕಷ್ಟ:
    ಮುಷ್ಟೂರು ಕೆರೆ ಕೋಡಿ ಹರಿದು, ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಹಿಂಭಾಗದ ರಾಜಕಾಲುವೆಗಳ ಬದಲಿಗೆ ಹೊಲ-ತೋಟಗಳಿಗೆ ನೀರು ನುಗ್ಗಿದೆ. ದ್ರಾಕ್ಷಿ, ಗುಲಾಬಿ, ಎಲೆ ಕೋಸು, ಬದನೆಕಾಯಿ, ರಾಗಿ ಸೇರಿದಂತೆ ಹಲವು ಬೆಳೆಗಳು ಹಾನಿಗೊಳಗಾಗಿವೆ. ರಾಜಕಾಲುವೆಗಳು ಹಾಗೂ ಚರಂಡಿಗಳು ಮುಚ್ಚಿಕೊಂಡಿರುವುದೇ ಹೊಲ-ತೋಟಗಳಿಗೆ ನೀರು ನುಗ್ಗಲು ಕಾರಣ ಎಂದು ರೈತರು (Farmers) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಿಜಯಪುರ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ 270 ಕೋಟಿ ಕೊಡಲು ಒಪ್ಪಿಗೆ: ಎಂ.ಬಿ ಪಾಟೀಲ್

    ನಗರಸಭೆ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಕೆರೆ-ಜಲಾಶಯಗಳು ತುಂಬಿ ಹರಿಯುತ್ತಿರುವುದು ಸಂತಸದ ಸಂಗತಿ. ಆದ್ರೆ, ರಾಜಕಾಲುವೆ ನಿರ್ವಹಣೆಯಲ್ಲಿ ನಿರ್ಲಕ್ಷ್ಯದಿಂದ ನಮ್ಮ ಬೆಳೆಗಳು ಹಾನಿಯಾಗಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 88% ಅಂಕ ಪಡೆದ್ರೂ ಹಾಸ್ಟೆಲ್‌ ಸಿಗದ್ದಕ್ಕೆ ವೇದಿಕೆಯಲ್ಲೇ ಸನ್ಮಾನ ತಿರಸ್ಕರಿಸಿ ವಿದ್ಯಾರ್ಥಿನಿಯಿಂದ ಆಕ್ರೋಶ!

    ಒಟ್ಟಿನಲ್ಲಿ ಈ ಬಾರಿ ಉತ್ತಮ ಮಳೆಯಾಗಿ ಜಲಾಶಯಗಳು ತುಂಬಿ ಸಂತಸ ತಂದಿದ್ದರೂ, ಬೆಳೆ ನಷ್ಟ ಮತ್ತು ನಗರದಲ್ಲಿ ಜಲಾವೃತ ಸಮಸ್ಯೆಗಳು ಜನರಿಗೆ ಕಹಿ ಅನುಭವವಾಗಿವೆ.

  • ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ, ಕೂಡಲೇ ಕೈಬಿಡಿ: ಆರ್.ಅಶೋಕ್

    ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ, ಕೂಡಲೇ ಕೈಬಿಡಿ: ಆರ್.ಅಶೋಕ್

    ರಾಮನಗರ: ಬಿಡದಿ, ಬೈರಮಂಗಲ ಮತ್ತು ಕಂಚುಗಾರನಹಳ್ಳಿಯಲ್ಲಿ ಭೂ ಸ್ವಾಧೀನ ಮಾಡುತ್ತಿರುವುದು ಅಕ್ರಮವಾಗಿದೆ. ಇದನ್ನು ಸರ್ಕಾರ ಕೂಡಲೇ ಕೈ ಬಿಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಆಗ್ರಹಿಸಿದರು.

    ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು (Greater Bengaluru) ಹೆಸರಲ್ಲಿ ಕಾಂಗ್ರೆಸ್ ಸರ್ಕಾರ ಬಿಡದಿ, ಬೈರಮಂಗಲ ಮತ್ತು ಕಂಚುಗಾರನಹಳ್ಳಿಯಲ್ಲಿ 9,600 ಎಕರೆ ಜಮೀನನ್ನು ಸ್ವಾಧೀನ ಮಾಡುತ್ತಿದೆ. ಈ ಪೈಕಿ 6,500 ಎಕರೆ ಕೃಷಿಭೂಮಿ ಇದೆ. ಇಲ್ಲಿ 10 ಲಕ್ಷಕ್ಕೂ ಅಧಿಕ ತೆಂಗು ಹಾಗೂ ಮಾವಿನ ಮರಗಳಿವೆ. ಪ್ರತಿ ದಿನ 6 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಿ ಕೆಎಂಎಫ್‌ಗೆ ತಲುಪುತ್ತಿದೆ. 3 ಸಾವಿರಕ್ಕೂ ಅಧಿಕ ರೈತರು ಹಾಗೂ ಕಾರ್ಮಿಕರು ಕೃಷಿಯನ್ನು ನಂಬಿಕೊಂಡಿದ್ದಾರೆ. ಇಷ್ಟು ಫಲವತ್ತಾದ ಜಮೀನುಗಳನ್ನು ಸ್ವಾಧೀನ ಮಾಡಿಕೊಂಡು ಸೈಟುಗಳನ್ನು ನೀಡಲಾಗುತ್ತಿದೆ ಕಿಡಿಕಾರಿದರು. ಇದನ್ನೂ ಓದಿ: ಬಿಡದಿ ಇಂಟಿಗ್ರೇಟೆಡ್ ಟೌನ್‌ಶಿಪ್ ವಿರೋಧಿಸಿ ರೈತರ ಹೋರಾಟ – ಬಿಜೆಪಿ ನಾಯಕರು ಸಾಥ್

    ಹೌಸಿಂಗ್ ಬೋರ್ಡ್‌ನಿಂದ 560 ಎಕರೆ ಜಮೀನು ಸ್ವಾಧೀನಕ್ಕೆ ಪಡೆದು ಸೈಟುಗಳನ್ನು ನಿರ್ಮಿಸಿದೆ. ಆದರೂ ಇಲ್ಲಿ ಯಾರೂ ಮನೆಗಳನ್ನು ನಿರ್ಮಿಸಿಲ್ಲ. ಕೆಂಪೇಗೌಡ ಬಡಾವಣೆ, ಶಿವರಾಮ ಕಾರಂತ ಬಡಾವಣೆಗಳಲ್ಲೇ ಖಾಲಿ ಇದೆ. ಇಷ್ಟು ಖಾಲಿ ಇರುವಾಗ ಫಲವತ್ತಾದ ಭೂಮಿಯನ್ನು ಸ್ವಾಧೀನ ಮಾಡಿಕೊಂಡರೆ ಅದು ರೈತರಿಗೆ ಮಾಡುವ ವಂಚನೆ. ಈ ಹಿಂದೆ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಸ್ವಾಧೀನ ಬೇಡವೆಂದು ರೈತರಿಗೆ ಜಮೀನು ಬಿಟ್ಟಿದ್ದರು. ಈಗ ಕಾಂಗ್ರೆಸ್ ಸರ್ಕಾರ ಕುತಂತ್ರ ಮಾಡಿ ಜಮೀನು ಲೂಟಿ ಮಾಡಿ ರಿಯಲ್ ಎಸ್ಟೇಟ್‌ನಿಂದ ಹಣ ಹೊಡೆಯಲು ಪ್ಲಾನ್ ಮಾಡಿದೆ. ರಾಮನಗರದಲ್ಲಿ ಸೈಟು ಬೇಕೆಂದು ಯಾರು ಕೇಳಿದ್ದಾರೆ? ಮಾಡಿರುವ ಸೈಟುಗಳೇ ಖಾಲಿ ಇದೆ. ಇದು ಅಕ್ರಮ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ರಸ್ತೆ ಅಪಘಾತ ಸಂತ್ರಸ್ತರ ಚಿಕಿತ್ಸಾ ವೆಚ್ಚ 2.5 ಲಕ್ಷಕ್ಕೆ ಹೆಚ್ಚಿಸಿದ ರಾಜ್ಯ ಸರ್ಕಾರ

    ರೈತರ ಹೋರಾಟಕ್ಕೆ ನಾವೆಲ್ಲರೂ ಬೆಂಬಲ ನೀಡಿದ್ದೇವೆ. ಕೂಡಲೇ ಸರ್ಕಾರ ಈ ಸ್ವಾಧೀನ ಕ್ರಮವನ್ನು ಕೈ ಬಿಡಬೇಕು. ಸರ್ಕಾರದಿಂದ ಯಾರಾದರೂ ಬಂದು ರೈತರ ಅಹವಾಲು ಆಲಿಸಬೇಕಿತ್ತು. ರೈತರನ್ನು ಸಮಾಧಾನ ಮಾಡಿ ಮಾತನಾಡಬೇಕಿತ್ತು. ಅದನ್ನು ಬಿಟ್ಟು ದೌರ್ಜನ್ಯ ಮಾಡಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ರೈತರ ಬದುಕಿಗೆ ಕೊಳ್ಳಿ ಇಡುವ ಕೆಲಸ ಬೇಡ ಎಂದರು. ಇದನ್ನೂ ಓದಿ: ವಿಜಯಪುರ-ಚಿಕ್ಕಲಕಿ ಕ್ರಾಸ್‌ವರೆಗೆ ಸಂಚರಿಸುವ ನೂತನ ಬಸ್‌ಗಳಿಗೆ ಚಾಲನೆ

    ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಡಿನೋಟಿಫಿಕೇಶನ್ ಮಾಡದೆಯೇ ಹಾಗೆಯೇ ಬಿಟ್ಟುಬಿಡಬೇಕು. ಯಾವುದೇ ಸವಲತ್ತು ಬೇಡವೆಂದು ರೈತರು ಹೇಳಿದ್ದಾರೆ. ಬಹುತೇಕ ರೈತರು ಹೀಗೆಯೇ ಇರಲಿ ಎಂದು ಹೇಳಿದ್ದಾರೆ. ಆದ್ದರಿಂದ ಹೆಚ್ಚಿನ ಸಂಖ್ಯೆಯ ರೈತರ ಮಾತಿಗೆ ಬೆಲೆ ನೀಡಬೇಕು. ಮುಂದೆ ನಮ್ಮ ಸರ್ಕಾರ ಬಂದಾಗ ರೈತರಿಗೆ ಅನುಕೂಲ ಮಾಡಿಕೊಡುತ್ತೇವೆ. ಈ ಕುರಿತು ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿದ್ದೇನೆ. ಇದನ್ನು ಯಾವ ಝೋನ್ ಮಾಡಬೇಕೆಂದು ಸರ್ಕಾರ ರೈತರೊಂದಿಗೆ ಚರ್ಚಿಸಲಿ ಎಂದು ಹೇಳಿದರು. ಇದನ್ನೂ ಓದಿ: 4.8 ಕೋಟಿ ಪತ್ತೆ ಕೇಸ್‌ – ಸುಧಾಕರ್‌ಗೆ ಹೈಕೋರ್ಟ್‌ನಿಂದ ಬಿಗ್‌ ರಿಲೀಫ್‌, FIR ರದ್ದು

  • ಬಿಡದಿ ಇಂಟಿಗ್ರೇಟೆಡ್ ಟೌನ್‌ಶಿಪ್ ವಿರೋಧಿಸಿ ರೈತರ ಹೋರಾಟ – ಬಿಜೆಪಿ ನಾಯಕರು ಸಾಥ್

    ಬಿಡದಿ ಇಂಟಿಗ್ರೇಟೆಡ್ ಟೌನ್‌ಶಿಪ್ ವಿರೋಧಿಸಿ ರೈತರ ಹೋರಾಟ – ಬಿಜೆಪಿ ನಾಯಕರು ಸಾಥ್

    – ಪ್ರತಿಭಟನೆ ವೇಳೆ ರೈತರಿಂದ ವಿಷ ಸೇವನೆಗೆ ಯತ್ನ

    ರಾಮನಗರ: ಬಿಡದಿ ಇಂಟಿಗ್ರೇಟೆಡ್ ಟೌನ್‌ಶಿಪ್ (Bidadi Integrated Township) ವಿರೋಧಿಸಿ ರೈತರ (Farmers) ಅಹೋರಾತ್ರಿ ಧರಣಿ ಮುಂದುವರೆದಿದ್ದು, 5ನೇ ದಿನಕ್ಕೆ ರೈತರ ಹೋರಾಟ ಕಾಲಿಟ್ಟಿದೆ. ಬಿಡದಿಯ ಭೈರಮಂಗಲ ಗ್ರಾಮದಲ್ಲಿ ನಡೆಯುತ್ತಿರೋ ಪ್ರತಿಭಟನೆಗೆ ಇಂದು ವಿಪಕ್ಷ ನಾಯಕ ಅಶೋಕ್, ಮಾಜಿ ಡಿಸಿಎಂ ಅಶ್ವಥ್ ನಾರಾಯಣಗೌಡ ಹಾಗೂ ಸಂಸದ ಡಾ.ಮಂಜುನಾಥ್ ಸಾಥ್ ನೀಡಿದ್ದಾರೆ.

    ಗ್ರಾಮಕ್ಕೆ ಎತ್ತಿನಬಂಡಿಯಲ್ಲಿ ಆಗಮಿಸಿದ ಆರ್.ಅಶೋಕ್ (R Ashok) ರೈತರ ಜೊತೆ ಕೂತು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಯಾವುದೇ ಕಾರಣಕ್ಕೂ ಟೌನ್‌ಶಿಪ್ ಯೋಜನೆಗೆ ಕೃಷಿ ಭೂಮಿ ಬಳಕೆ ಮಾಡಬಾರದು. ರೈತರನ್ನ ಒಕ್ಕಲೆಬ್ಬಿಸುವ ಸರ್ಕಾರದ ವಿರುದ್ಧ ಒಟ್ಟಾಗಿ ಹೋರಾಟ ಮಾಡೋಣ. ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತೇನೆ. ರೈತರ ಪರವಾಗಿ ನಾವು ಹೋರಾಟ ಮಾಡುತ್ತೇವೆ ಎಂದು ಅಶೋಕ್ ರೈತರಿಗೆ ಭರವಸೆ ನೀಡಿದರು. ಇದನ್ನೂ ಓದಿ:  ಉಳ್ಳವರು ಮೀಸಲಾತಿ ಬಿಟ್ಟು ಕೊಡಬೇಕು – ಖರ್ಗೆ ಮಗನಿಗೂ ಮೀಸಲಾತಿ, ಇದು ಸರಿನಾ: ವಿಶ್ವನಾಥ್ ಪ್ರಶ್ನೆ

    ಇನ್ನೂ ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ನಾಯಕರು ಮಾತನಾಡುತ್ತಿರುವಾಗಲೇ, ರೈತರು ಭೂಸ್ವಾಧೀನ ವಿರೋಧಿಸಿ ಆತ್ಮಹತ್ಯೆಗೆ ಯತ್ನಿಸಿದರು. ಇಬ್ಬರು ರೈತ ಮಹಿಳೆಯರು ಹಾಗೂ ಓರ್ವ ರೈತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ಈ ವೇಳೆ ಕೂಡಲೇ ಪೊಲೀಸರು ರೈತರ ಕೈಯಿಂದ ಕ್ರಿಮಿನಾಶಕದ ಬಾಟಲಿಗಳನ್ನ ಕಿತ್ತು ಬಿಸಾಕಿದರು. ವಿಷ ಕುಡಿಯಲು ಯತ್ನಿಸಿದವರನ್ನು ಅಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಇದನ್ನೂ ಓದಿ: ಬಂಗ್ಲೆಗುಡ್ಡೆಯಲ್ಲಿ ಉತ್ಖನನ ಮಾಡುವಂತೆ ರಿಟ್ ಅರ್ಜಿ – ಅರಣ್ಯ ಇಲಾಖೆಯಿಂದಲೂ ಮಾಹಿತಿ ಪಡೆದ ಎಸ್‌ಐಟಿ

    ಈ ವೇಳೆ ಯಾರೂ ಆತ್ಮಹತ್ಯೆ ನಿರ್ಧಾರ ಮಾಡಬೇಡಿ, ನಿಮ್ಮ ಭೂಮಿ ಉಳಿಸಿಕೊಡುವ ಕೆಲಸ ನಾವು ಮಾಡುತ್ತೇವೆ ಎಂದು ರೈತರಿಗೆ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಮನವಿ ಮಾಡಿದರು. ಇದನ್ನೂ ಓದಿ: Malur Election | ಸ್ವತಂತ್ರ ಅಭ್ಯರ್ಥಿಗಳು ಪಡೆದ ಮತ ಗೆದ್ದವರಿಗೆ ಸೇರಿಸಿದ್ದಾರೆ: ಕೆ.ಎಸ್‌ ಮಂಜುನಾಥ್‌ ಗೌಡ

  • ಬೆಳೆ ಪರಿಹಾರ ಆದಷ್ಟು ಬೇಗ ಕೊಡ್ತೀವಿ, ದುಡ್ಡಿಗೆ ಕೊರತೆ ಇಲ್ಲ: ಸಿಎಂ

    ಬೆಳೆ ಪರಿಹಾರ ಆದಷ್ಟು ಬೇಗ ಕೊಡ್ತೀವಿ, ದುಡ್ಡಿಗೆ ಕೊರತೆ ಇಲ್ಲ: ಸಿಎಂ

    ಧಾರವಾಡ: ಈ ಬಾರಿ ಅತಿಯಾದ ಮಳೆಯಿಂದ ರಾಜ್ಯದಾದ್ಯಂತ ಸಾಕಷ್ಟು ಬೆಳೆ ನಾಶವಾಗಿದ್ದು, ಈಗಾಗಲೇ ಜಂಟಿ ಸಮೀಕ್ಷೆ ಮಾಡಲು ಹೇಳಿದ್ದೇವೆ. ರೈತರಿಗೆ ಆದಷ್ಟು ಬೇಗ ಪರಿಹಾರ (Crop Relief) ಕೊಡುತ್ತೇವೆ. ದುಡ್ಡಿಗೆ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.

    ಧಾರವಾಡದ (Dharwad) ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಕೃಷಿ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಧಾರವಾಡದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮುತುವರ್ಜಿಯಿಂದ ಶೀಘ್ರ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದ್ದಾರೆ ಎಂದು ಡಿಸಿ ಹಾಗೂ ಸಚಿವರಿಗೆ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: ದಸರಾ ಉದ್ಘಾಟಕಿ ಬಾನು ಮುಷ್ತಾಕ್‌ಗೆ ಹೈಕೋರ್ಟ್ ಸಿಗ್ನಲ್ – ವಾದ, ಪ್ರತಿವಾದ ಹೇಗಿತ್ತು?

    ನಮ್ಮ ದೇಶ ಕೃಷಿ ಪ್ರಧಾನ ರಾಷ್ಟ್ರ. ನಾಗರಿಕತೆ ಆರಂಭ ಆದ ಮೇಲೆ ಕೃಷಿಯನ್ನೇ ಮಾಡುತ್ತ ಬರಲಾಗಿದೆ. ಭಾರತದಲ್ಲಿ ಜನಸಂಖ್ಯೆ ಏರುತ್ತಿದೆ. ಇಡೀ ಜಗತ್ತಲ್ಲೇ ಹೆಚ್ಚು ಜನಸಂಖ್ಯೆ ಇರುವ ದೇಶ ಭಾರತ. ಚೀನಾ ಜನಸಂಖ್ಯೆಯಲ್ಲಿ ಮುಂದೆ ಇತ್ತು. ಈಗ ನಾವು ಅವರನ್ನು ಹಿಂದೆ ಹಾಕಿ ಮುಂದೆ ಬಂದಿದ್ದೇವೆ. ಇಷ್ಟೂ ಜನರಿಗೆ ಆಹಾರ ಹಾಕಬೇಕು. ದೇಶದಲ್ಲಿ ಹಸಿರು ಕ್ರಾಂತಿ ಆದ ಮೇಲೆ ಆಹಾರ ಭದ್ರತೆ ಬಂದಿದೆ. ಆಹಾರ ಉತ್ಪಾದನೆ ಈಗ ಆಗುತ್ತಿಲ್ಲ, ಅದು ಸ್ಥಗಿತ ಆಗಿದೆ. ಇದಕ್ಕೆ ಕಾರಣ ಮಣ್ಣಿನ ಫಲವತ್ತತೆ. ಇದನ್ನು ಕೃಷಿ ವಿವಿಯವರು ಗಮನಕ್ಕೆ ತೆಗೆದುಕೊಳ್ಳಬೇಕು ಎಂದರು. ಇದನ್ನೂ ಓದಿ: Hassan Tragedy – ಸಂತ್ರಸ್ತರ ಕುಟುಂಬಕ್ಕೆ ಸಾಂತ್ವನ ಹೇಳಿದ ನಿಶ್ಚಲಾನಂದನಾಥ ಶ್ರೀ

    ಜನಸAಖ್ಯೆ ಬೆಳೆದಂತೆ ಹೆಚ್ಚು ಆಹಾರ ಉತ್ಪಾದನೆ ಮಾಡಬೇಕು. ಸ್ವತಂತ್ರ ಬಂದಾಗ ಆಹಾರ ಉತ್ಪಾದನೆ ಇರಲಿಲ್ಲ, ಸ್ವಾವಲಂಬನೆ ಇತ್ತು. ಬೇರೆ ದೇಶದಿಂದ ಆಗ ಆಹಾರ ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ರಪ್ತು ಮಾಡುತ್ತಿದ್ದೇವೆ. ಜನಸಂಖ್ಯೆಗೆ ತಕ್ಕ ಆಹಾರ ಇರಬೇಕು. ಕೃಷಿ ವಿವಿ ಇದನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ಸರ್ಕಾರ ಕೃಷಿಗೆ ಆದ್ಯತೆ ಕೊಟ್ಟಿದೆ. ಮುಂದೆಯೂ ಕೊಡುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಧಾರವಾಡ-ಬೆಳಗಾವಿ ನೇರ ರೈಲು ಯೋಜನೆ ವಿಳಂಬಕ್ಕೆ ರಾಜ್ಯ ಸರ್ಕಾರ, ಸಂತೋಷ್‌ ಲಾಡ್‌ ಕಾರಣ: ಸೋಮಣ್ಣ

    ನಮ್ಮ ರಾಜ್ಯ ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಗುಜರಾತ್ ಒಂದನೇ ಸ್ಥಾನದಲ್ಲಿದೆ. ಒಂದು ಕೋಟಿ ಲೀಟರ್ ಹಾಲು ಉತ್ಪಾದನೆ ನಮ್ಮ ರಾಜ್ಯದಲ್ಲಾಗುತ್ತಿದೆ. ಮುಂದೆ ನಂಬರ್ ಒನ್ ಸ್ಥಾನಕ್ಕೆ ನಾವು ಹೋಗಬೇಕು. ಒಂದೇ ಬೆಳೆ ಬೇಳೆಯುವಂತೆ ಆಗಬಾರದು. ತೋಟಗಾರಿಕೆ, ತರಕಾರಿ, ಭತ್ತ, ರಾಗಿ ಬೆಳೆಯಬೇಕು. ಬಹಳ ಜನರಿಗೆ ಈಗ ಮಧುಮೇಹ ಇದೆ. ಹೀಗಾಗಿ ಸಿರಿಧಾನ್ಯ ಬೆಳೆಯಲು ನಾವು ಸಬ್ಸಿಡಿ ಕೊಡುತ್ತಿದ್ದೇವೆ. ಹೆಚ್ಚು ಸಿರಿ ಧಾನ್ಯ ಬೆಳೆಯಬೇಕು. ಮನುಷ್ಯನಿಗೆ ಆಹಾರ ಪದ್ಧತಿಯಿಂದ ದೈಹಿಕ ಕಾಯಿಲೆ ಬರುತ್ತಿವೆ. ಕೃಷಿ ವಿಜ್ಞಾನಿಗಳು ಇದನ್ನ ಗಮನಕ್ಕೆ ತೆಗೆದುಕೊಳ್ಳಬೇಕು. ಅಕ್ಕಿ, ಗೋಧಿಯಲ್ಲಿ ಸಕ್ಕರೆ ಇದೆ. ಸಿರಿಧಾನ್ಯದಲ್ಲಿ ಸಕ್ಕರೆ ಕಡಿಮೆ ಇದೆ. ಹೀಗಾಗಿ ಅವುಗಳನ್ನು ಬೆಳೆಯಬೇಕು. ಸಂಶೋಧನೆಗೆ ಹೆಚ್ಚು ಒತ್ತು ಕೊಡಬೇಕು. ಹೊಸ ತಳಿ ಬಂದ ಮೇಲೆ ಅವು ರೈತರಿಗೆ ತಲುಪಬೇಕು. ಲ್ಯಾಬ್ ಟು ಲ್ಯಾಂಡ್ ಆಗಬೇಕು ಮತ್ತು ಲ್ಯಾಂಡ್ ಟು ಲ್ಯಾಬ್ ಆಗಬೇಕು. ಇವತ್ತು ಮತ್ತು ನಿನ್ನೆ ಕೃಷಿ ಮೇಳಕ್ಕೆ 6 ಲಕ್ಷ ರೈತರು ಬಂದಿದ್ದಾರೆ. ನಾವು ಭಾಗವಹಿಸಿ ಹೇಳೋದು ಒಂದು ಭಾಗ. ಆದರೆ, ರೈತರು ಭಾಗವಹಿಸುವುದು ಮುಖ್ಯ. ಹೊಸ ತಳಿ, ಹೊಸ ಬೀಜ, ಹೊಸತು ಏನೆಲ್ಲಾ ಇದೆ ಎಂದು ತಿಳಿಯಬೇಕು. ಇದರಿಂದ ಸಮೃದ್ಧಿ ಆಗಲಿದೆ ಎಂದು ನುಡಿದರು. ಇದನ್ನೂ ಓದಿ: ಹಾಸನ ದುರಂತ – ಕಂಬನಿ ಮಿಡಿದ ಟ್ರಕ್ ಚಾಲಕನ ಗ್ರಾಮಸ್ಥರು

    ಹಿಂದೆ ಗ್ರಾಮಸೇವಕರು ಇದ್ದರು. ಈಗ ಅವರು ಕಡಿಮೆಯಾಗಿದ್ದಾರೆ. ಅವರು ರೋಗಕ್ಕೆ ಔಷಧಿ ಕೊಡುತ್ತಿದ್ದರು, ಈಗ ಅದು ಕಡಿಮೆಯಾಗಿದೆ. ಕೃಷಿ ಇಲಾಖೆ ಮತ್ತು ಕೃಷಿ ವಿವಿ, ರೈತರ ನಡುವೆ ಸೇತುವೆ ನಿರ್ಮಾಣ ಮಾಡಬೇಕು. ನವಲಗುಂದದಲ್ಲಿ ಬೆಣ್ಣೆ ಹಳ್ಳ ಇದೆ. ಅದಕ್ಕೆ ಪ್ರವಾಹ ಬಂದಾಗ ರೈತರಿಗೆ ತೊಂದರೆ ಆಗುತ್ತಿದೆ. ಅದಕ್ಕಾಗಿ ನಮ್ಮ ಸರ್ಕಾರ 200 ಕೋಟಿ ಕೊಟ್ಟಿದೆ. ಟೆಂಡರ್ ಕೂಡ ಆಗಲಿದೆ ಎಂದರು. ಇದನ್ನೂ ಓದಿ: 14 ಸೈಟ್ ನುಂಗಿದ ನೀವು ನನಗೆ ಹೇಳಲು ಬರೋದು ಬೇಡ: ಸಿಎಂಗೆ ಪ್ರತಾಪ್‌ ತಿರುಗೇಟು