Tag: ರೇಷ್ಮೆ ಮಾರುಕಟ್ಟೆ

  • ಕೆಎಸ್‍ಎಂಬಿ ಬ್ರಾಂಚ್‍ಗೆ ಜಾಗ ಗುರುತಿಸಿದ ಯುಪಿ ಸರ್ಕಾರ

    ಕೆಎಸ್‍ಎಂಬಿ ಬ್ರಾಂಚ್‍ಗೆ ಜಾಗ ಗುರುತಿಸಿದ ಯುಪಿ ಸರ್ಕಾರ

    ವಾರಣಾಸಿ: ವಾರಣಾಸಿಯಲ್ಲಿ ಕರ್ನಾಟಕ ರೇಷ್ಮೆ ಮಾರುಕಟ್ಟೆ ಸ್ಥಾಪನೆಗೆ ರೇಷ್ಮೆ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರ ಪ್ರಸ್ತಾಪಕ್ಕೆ ಉತ್ತರ ಪ್ರದೇಶ ಸರ್ಕಾರ ತಕ್ಷಣವೇ ಸ್ಪಂದಿಸಿದೆ.

    ವಾರಣಾಸಿಯ ಸಾರಂಗ್ ತಲಾಬ್ ಪ್ರದೇಶದಲ್ಲಿ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಶಾಖೆ ತೆರೆಯಲು ಯುಪಿ ಸರ್ಕಾರ ಜಾಗ ನೀಡಲು ಒಪ್ಪಿದೆ. ಸಾರಂಗ್ ತಲಾಬ್ ಪ್ರದೇಶದಲ್ಲಿ ಕೆಎಸ್‍ಎಂಬಿ ಶಾಖೆ ತೆರೆಯಲು ಒಪ್ಪಿಗೆ ನೀಡಲಾಗಿದ್ದು, ಕಟ್ಟಡದ ಜಾಗಕ್ಕೆ ನಾರಾಯಣಗೌಡ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಬಟ್ಟೆ ಬಿಚ್ಚಿ ತಿರುಗುವವರಿಗೇನ್‌ ಗೊತ್ತು ಗಾಂಧಿ ಮೌಲ್ಯ: ಕಂಗನಾ ವಿರುದ್ಧ ರಮೇಶ್‌ ಕುಮಾರ್‌ ಕಿಡಿ

    ಕೆಎಸ್‍ಎಂಬಿ ಕಚೇರಿ ಹಾಗೂ ಗೋದಾಮಿಗೆ ನೀಡಲು ಉದ್ದೇಶಿತ ಕಟ್ಟಡ ಪರಿಶೀಲನೆ ನಡೆಸಿ, ಶೀಘ್ರವೇ ಯುಪಿ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಂಡು, ಕೂಡಲೇ ಅಗತ್ಯವಿರುವ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಇದನ್ನೂ ಓದಿ: ನಿಮ್ಮ ತಟ್ಟೆಯಲ್ಲಿ ಬಿದ್ದಿರುವ ಕತ್ತೆಯನ್ನು ತೆಗೆಯಿರಿ – ಕಾಂಗ್ರೆಸ್ ವಿರುದ್ಧ ಶ್ರೀರಾಮುಲು ಕಿಡಿ

  • ಕೆಮ್ಮಿದ್ದನ್ನು ಪ್ರಶ್ನಿಸಿದ್ದಕ್ಕೆ ಕೊರೊನಾ ಇದೆ ಎಂದು ರೈತ ತಮಾಷೆ- ಮಾರುಕಟ್ಟೆ ಅಲ್ಲೋಲ ಕಲ್ಲೋಲ

    ಕೆಮ್ಮಿದ್ದನ್ನು ಪ್ರಶ್ನಿಸಿದ್ದಕ್ಕೆ ಕೊರೊನಾ ಇದೆ ಎಂದು ರೈತ ತಮಾಷೆ- ಮಾರುಕಟ್ಟೆ ಅಲ್ಲೋಲ ಕಲ್ಲೋಲ

    – ತಹಶೀಲ್ದಾರ್ ಗೆ ದೂರು, ವೈದ್ಯಾಧಿಕಾರಿಗಳ ವಿಚಾರಣೆ

    ಚಾಮರಾಜನಗರ: ರೈತರೊಬ್ಬರು ರೇಷ್ಮೆ ಮಾರುಕಟ್ಟೆಯಲ್ಲಿ ಕೆಮ್ಮಿದ್ದು, ಪ್ರಶ್ನಿಸಿದ್ದಕ್ಕೆ ಕೊರೊನಾ ಇದೆ ಎಂದು ತಮಾಷೆ ಮಾಡಿದ್ದಾರೆ. ಇಷ್ಟಕ್ಕೆ ಮಾರುಕಟ್ಟೆಯಲ್ಲಿ ರಾದ್ಧಾಂತ ನಡೆದಿದೆ.

    ಜಿಲ್ಲೆಯ ಕೊಳ್ಳೇಗಾಲದ ಮುಡಿಗುಂಡ ಬಳಿ ಘಟನೆ ನಡೆದಿದ್ದು, ಪದೇ ಪದೇ ಕೆಮ್ಮಿದ್ದರಿಂದ ಆತಂಕಗೊಂಡು ಅಕ್ಕಪಕ್ಕದವರು ವಿಚಾರಿಸಿದ್ದಾರೆ. ಈ ವೇಳೆ ತನಗೆ ಕೊರೊನಾ ಇದೆ ಎಂದು ರೈತ ತಮಾಷೆಗೆ ಹೇಳಿದ್ದಾರೆ. ಇದರಿಂದ ಬೆಚ್ಚಿಬಿದ್ದ ರೇಷ್ಮೆಗೂಡಿನ ಮಾರುಕಟ್ಟೆ ವ್ಯಾಪಾರಿಗಳು, ತೀವ್ರ ಆತಂಕಗೊಂಡಿದ್ದು, ತಕ್ಷಣವೇ ರೇಷ್ಮೆ ರೀಲರ್ಸ್ ಗಳು ತಹಸೀಲ್ದಾರ್‍ಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಕೊಳ್ಳೇಗಾಲ ತಹಶೀಲ್ದಾರ್ ಕುನಾಲ್ ಅವರು ದೌಡಾಯಿಸಿದ್ದು, ರೈತಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿದ್ದಾರೆ. ಅಲ್ಲದೆ ಕನಕಪುರದ ವೈದ್ಯಾಧಿಕಾರಿಗಳಿಗೆ ಕರೆ ಮಾಡಿ ರೈತನ ಬಗ್ಗೆ ವಿಚಾರಿಸಿದ್ದಾರೆ.

    ಕನಕಪುರದ ಅಚ್ಚಲು ಗ್ರಾಮದಿಂದ ರೈತ ರೇಷ್ಮೆಗೂಡು ತಂದಿದ್ದ. ಕೆಮ್ಮಿದ್ದನ್ನು ಪ್ರಶ್ನಿಸಿದ್ದಕ್ಕೆ ತಮಾಷೆಗಾಗಿ ಕೊರೊನಾ ಇದೆ ಎಂದು ಹೇಳಿದೆ ಎಂದು ರೈತ ತಿಳಿಸಿದ್ದಾರೆ. ನಂತರ ರೈತನನ್ನು ಅವರ ಗ್ರಾಮಕ್ಕೆ ಮರಳಿ ಕಳುಹಿಸಲಾಗಿದೆ. ಆದರೆ ಅವರು ತಂದಿದ್ದ ರೇಷ್ಮೆ ಗೂಡನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗಿದೆ.

  • ರಸ್ತೆಯಲ್ಲಿಯೇ ನಿಂತು ರೇಷ್ಮೆ ಮಾರುಕಟ್ಟೆ ವೀಕ್ಷಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವ

    ರಸ್ತೆಯಲ್ಲಿಯೇ ನಿಂತು ರೇಷ್ಮೆ ಮಾರುಕಟ್ಟೆ ವೀಕ್ಷಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವ

    – ಸಚಿವ ನಾರಾಯಣಗೌಡ ವಿರುದ್ಧ ರೈತರ ಆಕ್ರೋಶ

    ರಾಮನಗರ: ರೇಷ್ಮೆ ಸಚಿವರು ನಾರಾಯಣಗೌಡ ಅವರು ರಸ್ತೆಯಲ್ಲಿಯೇ ನಿಂತು ಏಷ್ಯಾದ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ ವೀಕ್ಷಿಸಿ, ಅಧಿಕಾರಿಗಳ ಜೊತೆ ಒಂದೈದು ನಿಮಿಷ ಚರ್ಚಿಸಿ ಬೆಂಗಳೂರಿಗೆ ರೈಟ್ ಹೇಳಿದ ಪ್ರಸಂಗ ರಾಮನಗರದಲ್ಲಿ ನಡೆದಿದೆ.

    ಮಂಡ್ಯದಿಂದ ಬೆಂಗಳೂರಿಗೆ ತೆರಳುತ್ತಿದ್ದ ರೇಷ್ಮೆ ಸಚಿವ ನಾರಾಯಣಗೌಡ ಅವರು ಮಾರ್ಗ ಮಧ್ಯೆ ಕಾಟಚಾರಕ್ಕೆ ಎಂಬಂತೆ ರಾಮನಗರದ ರೇಷ್ಮೆ ಮಾರುಕಟ್ಟೆ ಎದುರು ಕಾರು ನಿಲ್ಲಿಸಿ ಮಾರುಕಟ್ಟೆಗೂ ಭೇಟಿ ನೀಡದೇ ಕೇವಲ ರಸ್ತೆಯಲ್ಲಿಯೇ ವೀಕ್ಷಣೆ ನಡೆಸಿದರು. ಅಷ್ಟೇ ಅಲ್ಲದೆ ಕಾರಿನ ಡೋರ್ ಬಳಿಯೇ ನಿಂತಿದ್ದ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದು ಕೆಲವು ಸೂಚನೆ ನೀಡಿ ಬೆಂಗಳೂರಿನತ್ತ ಹೊರಟೇ ಬಿಟ್ಟರು.

    ರೈತರಿಲ್ಲದ ಸಮಯದಲ್ಲಿ ರೇಷ್ಮೆ ಮಾರುಕಟ್ಟೆಗೆ ಆಗಮಿಸಿ, ಕೇವಲ 5 ನಿಮಿಷಗಳಲ್ಲಿಯೇ ಹೀಗೆ ಬಂದು, ಹಾಗೇ ಹೋದರು. ಮೂರು ಕಡೆ ಮಾರುಕಟ್ಟೆ ತೆರೆಯಿರಿ ಎಂದು ನಡು ರಸ್ತೆಯಲ್ಲಿಯೇ ಅಧಿಕಾರಿಗಳಿಗೆ ಸೂಚನೆ ನೀಡಿ ಕಾರು ಏರಿದ ಸಚಿವರು, ರೇಷ್ಮೆ ಬೆಳೆಗಾರರ ಸಮಸ್ಯೆಗಳನ್ನು ಕೇಳಲು ರೆಡಿ ಇರಲಿಲ್ಲ ಎಂಬುದು ವಿರ್ಪಯಾಸ.

    ಮೂರು ಕಡೆ ಮಾರುಕಟ್ಟೆ ಮಾಡಿ ಎಂದು ರೇಷ್ಮೆ ಸಚಿವರು ಹೇಳಿದ್ದಾರೆ. ಆದರೆ ಎಲ್ಲಿ ಮಾರುಕಟ್ಟೆ ಸ್ಥಾಪಿಸಬೇಕು. ಮುಂದಿನ ದಿನಗಳಲ್ಲಿ ಬೆಳೆಗಾರರು ಯಾವ್ಯಾವ ಸಮಸ್ಯೆ ಎದುರಿಸುತ್ತಿದ್ದಾರೆ. ಅವರಿಗೆ ಯಾವ ರೀತಿ ಪರಿಹಾರ ಕಲ್ಪಿಸಬಹುದು ಎಂಬುದರ ಬಗ್ಗೆಯು ಸಚಿವರು ಚರ್ಚೆ ನಡೆಸಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಕೊರೊನಾ ಆತಂಕದಲ್ಲಿದ್ದ ರಾಮನಗರದ ಜನರಿಗೆ ಸ್ವಲ್ಪ ನಿಟ್ಟುಸಿರು ಬಿಡುವಂತೆ ಮಾಡಿದ್ದು ರೇಷ್ಮೆ ಮಾರುಕಟ್ಟೆ ಬಂದ್. ಆದರೆ ಇದೀಗ ಪುನಃ ರೇಷ್ಮೆ ಮಾರುಕಟ್ಟೆ ಆರಂಭವಾಗಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಕಷ್ಟಕರವಾಗಿದೆ. ಹೊರ ಜಿಲ್ಲೆ, ರಾಜ್ಯಗಳಿಂದಲೂ ರೈತರು ಬರುತ್ತಿದ್ದಾರೆ. ಅದರಲ್ಲೂ ಕೊರೊನಾ ಸೋಂಕಿತರಿರುವ ಜಿಲ್ಲೆಗಳಿಂದಲೂ ರೈತರು ರಾಮನಗರಕ್ಕೆ ಬರ್ತಿರುವುದು ಸಾಕಷ್ಟು ಆತಂಕವನ್ನುಂಟು ಮಾಡಿದೆ.

    ರಾಮನಗರ ಜಿಲ್ಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ರೇಷ್ಮೆ ಮಾರುಕಟ್ಟೆಯಲ್ಲಿ ಜನಸಂದಣಿ ಉಂಟಾಗದಂತೆ ಕಾರ್ಯನಿರ್ವಹಿಸಲು ಇನ್ನೂ 2 ಸ್ಥಳಗಳನ್ನು ಗುರುತಿಸಿ ರೇಷ್ಮೆ ವಹಿವಾಟು ನಡೆಸುವಂತೆ ಹಾಗೂ ರೇಷ್ಮೆ ಬೆಳೆಗಾರರು ರೇಷ್ಮೆ ಮಾರಾಟವಾಗದಿದ್ದಲ್ಲಿ ಕಷ್ಟಕ್ಕೆ ಸಿಲುಕುತ್ತಾರೆ. ಕೋವಿಡ್-19 ಹರಡದಂತೆ ಬೇಕಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿ ಎಂದು ರಸ್ತೆಯಲ್ಲಿಯೇ ರೇಷ್ಮೆ, ತೋಟಗಾರಿಕೆ ಹಾಗೂ ಪೌರಾಡಳಿತ ಸಚಿವ ನಾರಾಯಣ ಗೌಡ ಅವರು ತಿಳಿಸಿದ್ದಾರೆ.

    ಹಾಪ್‍ಕಾಮ್ಸ್ ಗಳು ಈಗಾಗಲೇ ರೈತರು ಬೆಳೆದ ತರಕಾರಿಗಳನ್ನು ಕೆಲ ಬಡಾವಣೆಗಳನ್ನು ಗುರುತಿಸಿ ಮಾರಾಟ ಮಾಡುತ್ತಿವೆ. ಅದೇ ರೀತಿ ಮಾವಿನ ಹಣ್ಣುಗಳನ್ನು ಹಾಪ್‍ಕಾಮ್ಸ್ ಮೂಲಕ ಮಾರಾಟ ಮಾಡಲು ವ್ಯವಸ್ಥೆ ಮಾಡಬೇಕು ಎಂದು ಸಚಿವರು ಸೂಚನೆ ನೀಡಿದ್ದಾರೆ.

  • ಎಚ್‍ಡಿಕೆ, ಡಿಕೆಶಿ ಒತ್ತಾಯದ ಮೇರೆಗೆ ರೇಷ್ಮೆ ಮಾರುಕಟ್ಟೆ ತೆರೆಯಲಾಗಿದೆ: ಡಿಸಿಎಂ

    ಎಚ್‍ಡಿಕೆ, ಡಿಕೆಶಿ ಒತ್ತಾಯದ ಮೇರೆಗೆ ರೇಷ್ಮೆ ಮಾರುಕಟ್ಟೆ ತೆರೆಯಲಾಗಿದೆ: ಡಿಸಿಎಂ

    ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರ ಒತ್ತಾಯ ಹಾಗೂ ರೈತರ ಹಿತದೃಷ್ಟಿಯಿಂದ ರಾಮನಗರ ಜಿಲ್ಲೆಯ ರೇಷ್ಮೆ ಮಾರುಕಟ್ಟೆಗಳನ್ನು ತೆರೆದು ವಹಿವಾಟು ನಡೆಸಲು ಸರ್ಕಾರ ಹಾಗೂ ರೇಷ್ಮೆ ಸಚಿವರು ಆದೇಶಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಸ್ಪಷ್ಟಪಡಿಸಿದ್ದಾರೆ.

    ಕೊರೊನಾ ತಡೆಗೆ ರಾಮನಗರ ಜಿಲ್ಲಾಡಳಿತ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮವನ್ನು ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ಅಲ್ಲದೆ ಕೋವಿಡ್-19 ಐಸೋಲೇಷನ್ ವಾರ್ಡ್ ಗೆ ಭೇಟಿ ನೀಡಿ ಪರಿಶೀಲಿಸಿದರು.

    ನಂತರ ಮಾತನಾಡಿದ ಅವರು, ಕೋವಿಡ್- 19 ವಿಚಾರದಲ್ಲಿ ಈಗಾಗಲೇ ಜಿಲ್ಲಾಡಳಿತ ಪೂರ್ವಭಾವಿ ತಯಾರಿ ನಡೆಸಿದೆ. ಇನ್ನೂ ಹೆಚ್ಚು ನಿಯಂತ್ರಣ ಮಾಡಲು ಮುನ್ನೆಚರಿಕಾ ದೃಷ್ಟಿಯಿಂದ ರೇಷ್ಮೆ ಮಾರುಕಟ್ಟೆಯನ್ನು ಮೂರು ಕಡೆ ವಿಸ್ತರಿಸಲಾಗುವುದು. ರೈತರಿಗೆ ಫಿವರ್ ಪರೀಕ್ಷೆ, ಮಾಸ್ಕ್ ಹಾಕಿ ಬರುವಂತೆ ಸೂಚನೆ ನೀಡಲಾಗಿದೆ. ರೋಗದ ಲಕ್ಷಣಗಳ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ. ಇಡೀ ತಿಂಗಳ ಪೂರ್ತಿ ಮೂರು ಕಡೆ ರೇಷ್ಮೆ ಮಾರುಕಟ್ಟೆ ನಡೆಯಲಿದೆ ಎಂದು ತಿಳಿಸಿದರು.

    ಮುಂದಿನ ಮೂರು ತಿಂಗಳ ಕಾಲ ನಮ್ಮ ಹುಷಾರಿನಲ್ಲಿ ನಾವು ಇರಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಹ ಎಚ್ಚರದಿಂದ ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯ ಎಲ್ಲರಿಗೂ ಮಾಸ್ಕ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ನಾಲ್ಕು ತಿಂಗಳು ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ. ಕಂಟ್ರೋಲ್ ರೂಂ ಮೂಲಕ ಮಾಹಿತಿ ಪಡೆಯುವ ಕೆಲಸವೂ ನಾಲ್ಕು ತಿಂಗಳ ಕಾಲ ನಡೆಯಲಿದೆ. ಔಷಧಿ ಸಿಂಪಡಣೆ ವಾಹನಗಳು ಪ್ರಸ್ತುತ ಎರಡಿದ್ದು, ಅವುಗಳನ್ನು ಐದಕ್ಕೆ ಹೆಚ್ಚಿಸಲಾಗುವುದು. ಜನ ಸಂದಣಿ ಪ್ರದೇಶಗಳಲ್ಲಿ ನಿತ್ಯ ಔಷಧ ಸಿಂಪಡಿಸಲಾಗುವುದು ಎಂದರು.

    ಜಿಲ್ಲೆಯ ಹಳೆ ಕಂದಾಯ ಭವನದಲ್ಲಿ ನಿರ್ಮಿಸಿರುವ ಕೋವಿಡ್-19 ಆಸ್ಪತ್ರೆಯಲ್ಲಿ ಸದ್ಯ ನೂರು ಹಾಸಿಗೆ ವ್ಯವಸ್ಥೆ ಇದೆ. 200 ಹಾಸಿಗೆಗಳಿಗೆ ವಿಸ್ತರಿಸುವುದರ ಜೊತೆಗೆ ಅಗತ್ಯ ಕ್ರಮ ಕೈಗೊಳ್ಳುವದಲ್ಲದೇ 10 ವೆಂಟಿಲೇಟರ್ ಗಳ ವ್ಯವಸ್ಥೆ ಹಾಗೂ ಪಿಪಿ ಕಿಟ್, ಮಾಸ್ಕ್, ಸೇರಿದಂತೆ ಎಲ್ಲವನ್ನೂ ನೀಡಲಾಗುವುದು.

    ರೇಷ್ಮೆ ಮಾರುಕಟ್ಟೆ ಸಂಬಂಧ ಮೊದಲೇ ಎಚ್ಚೆತ್ತುಕೊಳ್ಳಬೇಕಿತ್ತು. ಎರಡು ದಿನ ಮುನ್ನವೇ ಮೂರು ಕಡೆ ಮಾರಾಟಕ್ಕೆ ಅವಕಾಶ ನೀಡಬೇಕಿತ್ತು. ಭಾನುವಾರದಿಂದ ಮೂರು ಕಡೆ ರೇಷ್ಮೆ ಮಾರುಕಟ್ಟೆಗೆ ಅವಕಾಶ ನೀಡಲಾಗುವುದು. ಅಲ್ಲದೆ ಜಿಲ್ಲೆಯಲ್ಲಿ ಒಟ್ಟು ಮೂರು ಮಾವು ಮಾರುಕಟ್ಟೆ ತೆರೆಯಲಾಗುವುದು. ಖಾಸಗಿ ಕಂಪನಿಯು ಇದಕ್ಕೆ ಉತ್ಸಕತೆ ತೋರಿದೆ. ಹೀಗಾಗಿ ಮುನ್ನೆಚರಿಕಾ ಕ್ರಮ ವಹಿಸಿಯೇ, ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.

  • ಇಂದಿನಿಂದ ಏಷ್ಯಾದ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ ಓಪನ್

    ಇಂದಿನಿಂದ ಏಷ್ಯಾದ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ ಓಪನ್

    – ಕೊರೊನಾ ಭೀತಿ ನಡುವೆ ವಹಿವಾಟು

    ರಾಮನಗರ: ಕೊರೊನಾ ಪ್ರಕರಣಗಳು ಪತ್ತೆಯಾಗದೆ ನೆಮ್ಮದಿಯಾಗಿದ್ದ ರೇಷ್ಮೆನಗರಿಗೆ ಮುಂದಿನ ದಿನಗಳಲ್ಲಿ ರೇಷ್ಮೆ ಮಾರುಕಟ್ಟೆಯೇ ಕಂಟಕವಾಗಲಿದೆಯೇ ಎಂಬ ಆತಂಕ ಜಿಲ್ಲಾಡಳಿತಕ್ಕೆ ಇದೀಗ ಎದುರಾಗಿದೆ. ಸರ್ಕಾರದ ಆದೇಶದಂತೆ ಇಂದಿನಿಂದ ಏಷ್ಯಾದ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆಯನ್ನು ತೆರೆಯಲಾಗುತ್ತಿದೆ.

    ಸಾವಿರಾರು ಜನರು ಒಟ್ಟಿಗೆ ಸೇರುವ ಮಾರುಕಟ್ಟೆಯಲ್ಲಿ ಸಮಾಜಿಕ ಅಂತರ ಕಾಯ್ದುಕೊಳ್ಳುವುದು ಹೇಗೆ ಎಂಬ ಚಿಂತೆ ಜಿಲ್ಲಾಡಳಿತಕ್ಕೆ ಕಾಡುತ್ತಿದೆ. ಇತ್ತ ಮಾರುಕಟ್ಟೆ ಸ್ಥಗಿತಗೊಂಡಿದ್ದರಿಂದ ರೈತರು ಸಂಕಷ್ಟಕ್ಕೊಳಗಾಗಿದ್ದರು. ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.

    ಏಷ್ಯಾದಲ್ಲೇ ಅತೀ ಹೆಚ್ಚು ವಹಿವಾಟು ನಡೆಸುವ ರಾಮನಗರದ ರೇಷ್ಮೆ ಮಾರುಕಟ್ಟೆಯ ಒಂದು ದಿನದ ಆದಾಯ ಸರಾಸರಿ 2 ಕೋಟಿ ರೂ.ಗಳಷ್ಟಿದೆ. ಆದರೆ ಇಲ್ಲಿ ರೈತರು, ಮಾರುಕಟ್ಟೆ ಅಧಿಕಾರಿಗಳು, ಡೀಲರ್ಸ್ ಸೇರಿ ಕನಿಷ್ಟ ಮೂರು ಸಾವಿರ ಮಂದಿ ಏಕಕಾಲದಲ್ಲಿ ಜಮಾವಣೆ ಆಗುತ್ತಾರೆ. ಗೂಡಿನಂತಿರುವ ಈ ಮಾರುಕಟ್ಟೆಯಲ್ಲಿ ಉಸಿರಾಟಕ್ಕೂ ಕಷ್ಟವಾಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.

    ರೇಷ್ಮೆ ಮಾರುಕಟ್ಟೆ ತೆರೆದರೆ, ಮಾರುಕಟ್ಟೆಗೆ ಬರುವ ವಾಹನಗಳಿಗೆ ಮುಕ್ತ ಪ್ರವೇಶ ನೀಡಬೇಕಾಗುತ್ತದೆ. ದೂರದ ಜಿಲ್ಲೆಗಳಿಂದ ಬರುವವರು ಸಹ ಇದೇ ಕಾರಣ ಕೊಟ್ಟು ಗಡಿ ದಾಟಬಹುದು. ಮಾತ್ರವಲ್ಲದೆ ಚಾಲಕರಿಗೆ, ಬೆಳೆಗಾರರಿಗೆ ಊಟ, ವಿಶ್ರಾಂತಿ, ಟೀ-ಕಾಫಿ ಎಲ್ಲ ವ್ಯವಸ್ಥೆಗಳಿಗಾಗಿ ಹೋಟಲ್‍ಗಳನ್ನು ಸಹ ತೆರೆಯಬೇಕಾಗುತ್ತದೆ. ಬೇಕರಿಗಳು ಸಹ ಜಿಲ್ಲಾಡಳಿತದ ದುಂಬಾಲು ಬೀಳುವುದು ಸರ್ವೇ ಸಾಮಾನ್ಯವಾಗುತ್ತದೆ.

    ಲಾಕ್‍ಡೌನ್ ಆಗಿರುವ ಹಿನ್ನೆಲೆಯಲ್ಲಿ ನಗದು ಕೊರತೆ ನೆಪದಿಂದಾಗಿ ಚೆಕ್ ವ್ಯವಹಾರ ಮತ್ತೆ ಶುರುವಾದರೂ ಅಚ್ಚರಿ ಪಡಬೇಕಿಲ್ಲ. ಸುರಕ್ಷತೆ, ಸ್ವಚ್ಛತೆ, ಮುಂಜಾಗೃತಾ ಕ್ರಮವಾಗಿ ಹ್ಯಾಂಡ್ ವಾಶ್, ಸ್ಯಾನಿಟೈಸರ್, ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜಿಲ್ಲಾಡಳಿತ ಸೂಚಿಸಿದೆ. ಅಲ್ಲದೆ ಥರ್ಮಲ್ ಸ್ಕ್ಯಾನರ್ ನೀಡುವಂತೆ ಸರ್ಕಾರಕ್ಕೆ ಬೇಡಿಕೆಯಿಟ್ಟಿದ್ದು, ಥರ್ಮಲ್ ಸ್ಕ್ಯಾನರ್ ಬಂದ ಬಳಿಕ ರೈತರು, ಅಧಿಕಾರಿಗಳನ್ನೆಲ್ಲ ತಪಾಸಣೆ ನಡೆಸಿ ಒಳಗೆ ಬಿಡಲು ಜಿಲ್ಲಾಡಳಿತ ತೀರ್ಮಾನಿಸಿದೆ.

  • ಏಷ್ಯಾದ ಅತೀ ದೊಡ್ಡ ರೇಷ್ಮೆ ಮಾರುಕಟ್ಟೆಯಲ್ಲಿ ದಾಖಲೆ ಸೃಷ್ಟಿಸಿದ ಆವಕ

    ಏಷ್ಯಾದ ಅತೀ ದೊಡ್ಡ ರೇಷ್ಮೆ ಮಾರುಕಟ್ಟೆಯಲ್ಲಿ ದಾಖಲೆ ಸೃಷ್ಟಿಸಿದ ಆವಕ

    ರಾಮನಗರ: ಜಿಲ್ಲೆಯಲ್ಲಿ ಏಷ್ಯಾದ ಅತೀ ದೊಡ್ಡ ರೇಷ್ಮೆ ಮಾರುಕಟ್ಟೆ ಇತಿಹಾಸದಲ್ಲೇ ಮೊದಲ ಬಾರಿಗೆ 75 ಟನ್ ಗೂಡು ಮಾರುಕಟ್ಟೆ ಪ್ರವೇಶಿಸಿಸುವ ಮೂಲಕ ದಾಖಲೆ ಬರೆದುಕೊಂಡಿದೆ.

    ಅಷ್ಟೇ ಅಲ್ಲದೇ ಸರ್ಕಾರಿ ರಜೆಯನ್ನು ಹೊರತು ಪಡಿಸಿ, ಕೊರೊನಾ ಹೊಡೆತಕ್ಕೆ ಮೊದಲ ಬಾರಿಗೆ ಮಾರುಕಟ್ಟೆ ಬಂದ್ ಕೂಡ ಆಗುತ್ತಿದೆ. ಇದರೊಂದಿಗೆ ಹೊರ ರಾಜ್ಯದ ಬೆಳೆಗಾರರ ಮೇಲೆ ನಿರ್ಬಂಧ ಹೇರಲಾಗಿದೆ.

    ದಿನನಿತ್ಯ ಸಾವಿರಾರು ಜನರಿಂದ ತುಂಬಿ ತುಳುಕುವ ರಾಮನಗರದ ರೇಷ್ಮೆ ಮಾರುಕಟ್ಟೆ ಕೊರೊನಾ ಕಾಟಕ್ಕೆ ತತ್ತರಿಸಿದೆ. ಹಾಗಾಗಿ ನಾಳೆ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ರೇಷ್ಮೆ ಮಾರುಕಟ್ಟೆ ಬಂದ್ ಮಾಡಲಾಗಿದ್ದು, ಮಾರುಕಟ್ಟೆಗೆ ಅಧಿಕಾರಿಗಳು ರಜೆ ಘೋಷಣೆ ಮಾಡಿದ್ದಾರೆ.

    ಏಷ್ಯದಲ್ಲೇ ಅತೀ ದೊಡ್ಡಮಟ್ಟದ ವಹಿವಾಟು ಹೊಂದಿರುವ ರಾಮನಗರದ ರೇಷ್ಮೆ ಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿಗೆ 75 ಟನ್ ಗೂಡು ಮಾರುಕಟ್ಟೆ ಪ್ರವೇಶಿಸಿಸುವ ಮೂಲಕ ದಾಖಲೆ ಮಾಡಿದೆ. 1,300ಕ್ಕೂ ಹೆಚ್ಚು ಲಾಟ್ ಒಮ್ಮೆಯೇ ಮಾರುಕಟ್ಟೆಗೆ ಬಂದಿದೆ. ಹೀಗಾಗಿ ಗೂಡಿನ ದರವು ಕುಸಿತಕಂಡಿದ್ದು, ಇಷ್ಟು ಪ್ರಮಾಣದ ಗೂಡಿನ ನಿರ್ವಹಣೆ, ತೂಕ ಮಾಡುವ ಕೆಲಸವು ಮಾರುಕಟ್ಟೆ ಅಧಿಕಾರಿಗಳಿಗೆ ತಲೆಬಿಸಿ ತಂದಿತ್ತು.

    ಈ ಮೊದಲು ದಿನಕ್ಕೆ 30ರಿಂದ 32 ಟನ್ ರೇಷ್ಮೆ ಗೂಡು ಮಾರುಕಟ್ಟೆ ಪ್ರವೇಶಿಸುತ್ತಿತ್ತು. ಕೊರೊನಾದಿಂದಾಗಿ ಭಾನುವಾರ ಮಾರುಕಟ್ಟೆ ಬಂದ್ ಆಗಲಿದೆ. ಹೀಗಾಗಿ ಶನಿವಾರ 75 ಟನ್ ರೇಷ್ಮೆ ಆವಕಗೊಂಡಿರುವುದು ವಿಶೇಷವಾಗಿದೆ. ಮಾರುಕಟ್ಟೆಯಲ್ಲಿ ರೇಷ್ಮೆಗೂಡು ಹೆಚ್ಚಾದ ಹಿನ್ನೆಲೆಯಲ್ಲಿ ಬೆಳೆಗಾರರು ಮಾರುಕಟ್ಟೆಯಲ್ಲಿ ಜಾಲರಿ ಸಿಗದೇ ನೆಲದ ಮೇಲೆಯೇ ಗೂಡು ಹರಡಿಕೊಂಡು ಹರಾಜಿಗಾಗಿ ಕಾದು ಕುಳಿತ್ತಿದ್ದರು.

  • ಕೊರೊನಾ ವೈರಸ್ ಎಫೆಕ್ಟ್, ರೇಷ್ಮೆ ಗೂಡಿನ ಬೆಲೆ ಇಳಿತ, ಕಂಗಾಲಾದ ರೈತರು

    ಕೊರೊನಾ ವೈರಸ್ ಎಫೆಕ್ಟ್, ರೇಷ್ಮೆ ಗೂಡಿನ ಬೆಲೆ ಇಳಿತ, ಕಂಗಾಲಾದ ರೈತರು

    ರಾಮನಗರ: ಮಹಾಮಾರಿ ಕೊರೊನಾ ವೈರೆಸ್ ಎಫೆಕ್ಟ್ ಇದೀಗ ಸದ್ದಿಲ್ಲದೇ ರೇಷ್ಮೆ ಬೆಳೆ ಮೇಲೆ ಪರಿಣಾಮ ಬೀರಿದೆ. ಒಂದೆಡೆ ರೈತರು ರೇಷ್ಮೆಗೂಡಿನ ಬೆಲೆ ಕುಸಿತಕ್ಕೆ ಕಂಗಾಲಾಗಿದರೆ ರೀಲರ್ಸ್ ಗಳು ತಮ್ಮ ಕಚ್ಚಾ ರೇಷ್ಮೆ ಸೇಲ್ ಆಗುತ್ತಿಲ್ಲ ಅಂತ ಕಂಗಾಲಾಗಿದ್ದಾರೆ. ಮಾರುಕಟ್ಟೆಗೆ ರೇಷ್ಮೆಗೂಡು ಟನ್‍ಗಟ್ಟಲೇ ದಿನನಿತ್ಯ ಬರುತ್ತಿದ್ದು ಅಲ್ಪ ಹಣದಲ್ಲೇ ಪೆಚ್ಚು ಮೋರೆ ಹಾಕಿಕೊಂಡು ರೈತರು ಮನೆಗೆ ತೆರಳುವಂತಾಗಿದೆ.

    ಕೊರೊನಾ ರಾಜ್ಯಕ್ಕೆ ಕಾಲಿಡುವ ಮುನ್ನ ಸಾಕಷ್ಟು ಖುಷಿಯಲ್ಲಿ ಮಾರುಕಟ್ಟೆಗೆ ಬಂದು ರೇಷ್ಮೆಗೂಡು ಮಾರಾಟ ಮಾಡಿ ಹೋಗುತ್ತಿದ್ದ ರೈತರಿಗೆ ಇದೀಗ ಏಕಾಏಕಿ ಸಿಡಿಲು ಬಡಿದದಂತಾಗಿದೆ. ಕೊರೊನಾ ಎಫೆಕ್ಟ್‍ನಿಂದ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ದಿಢೀರ್ ಕುಸಿತ ಕಂಡಿದ್ದು ರೈತರು ಪರದಾಡುವಂತಾಗಿದೆ.

    ಕೊರೊನಾ ಮಹಾಮಾರಿಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ರೇಷ್ಮೆ ಮಾರುಕಟ್ಟೆಗಳು ಸಹ ಬಂದ್ ಆಗಿವೆ. ಈ ಹಿನ್ನೆಲೆಯಲ್ಲಿ ರೈತರು ರಾಮನಗರದ ರೇಷ್ಮೆ ಮಾರುಕಟ್ಟೆಯತ್ತ ಮುಖ ಮಾಡಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಅಷ್ಟೇ ಅಲ್ಲದೆ ಹೊರರಾಜ್ಯಗಳಿಂದಲೂ ಸಹ ರೇಷ್ಮೆಗೂಡು ಮಾರುಕಟ್ಟೆಗೆ ಬರುತ್ತಿರುವುದು ಬೆಲೆ ಕುಸಿಯುವಂತಾಗಿದೆ.

    ಅದರಲ್ಲೂ ರೀಲರ್ಸ್ ಗಳು ತಮ್ಮಲ್ಲಿನ ಕಚ್ಚಾ ರೇಷ್ಮೆಯೇ ಮಾರಾಟವಾಗುತ್ತಿಲ್ಲ. ಈ ರೇಷ್ಮೆ ತೆಗೆದುಕೊಂಡು ಏನ್ ಮಾಡೋದು ಎಂದು ವಾರದಲ್ಲಿ 2 ದಿನಗಳು ಮಾತ್ರವೇ ರೇಷ್ಮೆಗೂಡು ಖರೀದಿಗೆ ಮುಂದಾಗಿದ್ದಾರೆ. ಇನ್ನುಳಿದ ದಿನಗಳಲ್ಲಿ ಸುಮ್ಮನೆ ಕುಳಿತಿದ್ದಾರೆ. ಇದರಿಂದ ರೈತರಿಗೆ ಸಾಕಷ್ಟು ನಷ್ಟ ಉಂಟಾಗಿದೆ.

    ಕೊರೊನಾ ವೈರಸ್ ರಾಜ್ಯಕ್ಕೆ ಕಾಲಿಡುವ ಮುನ್ನ ರೇಷ್ಮೆ ಬೆಳೆಗೆ ಉತ್ತಮವಾದ ಬೆಲೆಯಿತ್ತು. ಪ್ರತಿನಿತ್ಯ ರೇಷ್ಮೆ ಮಾರುಕಟ್ಟೆಯಲ್ಲಿ ರೀಲರ್ಸ್ ಗಳು ಸಹ ಪೈಪೋಟಿ ನಡೆಸಿ ರೇಷ್ಮೆಗೂಡು ಖರೀದಿಯ ಮಾಡುತ್ತಿದ್ದರು. ಆದರೆ ಕೊರೊನಾ ವೈರಸ್ ಕಾಲಿಡುತ್ತಿದ್ದಂತೆ ರೇಷ್ಮೆಗೂಡಿನ ಬೆಲೆ ಸಹ ಕುಸಿತ ಕಂಡಿದೆ.

    ಕಳೆದ 15 ದಿನಗಳ ಹಿಂದೆ ಪ್ರತಿನಿತ್ಯ 32ರಿಂದ 35 ಟನ್ ರೇಷ್ಮೆಗೂಡು ಮಾರುಕಟ್ಟೆಗೆ ಬರುತ್ತಿತ್ತು. ಆದರೆ ಇದೀಗ ಪ್ರತಿನಿತ್ಯ ಮಾರುಕಟ್ಟೆಗೆ 45ರಿಂದ 50 ಟನ್ ರೇಷ್ಮೆಗೂಡು ಮಾರುಕಟ್ಟೆಗೆ ಬರುತ್ತಿದೆ. ಅಲ್ಲದೇ ರೇಷ್ಮೆ ಮಾರುಕಟ್ಟೆಯಲ್ಲಿ 400 ಲಾಟ್‍ಗಳಷ್ಟಿದ್ದ ಗೂಡು 670 ಲಾಟ್‍ಗೆ ಏರಿಕೆಯಾಗಿದೆ. ಇದರಿಂದಾಗಿ ಹಳದಿ ಗೂಡಿನ ಬೆಲೆ ಪ್ರತಿ ಕೆಜಿಗೆ ಸರಾಸರಿ 280 ರೂಪಾಯಿಗೆ ಇಳಿದರೆ, ಬಿಳಿ ರೇಷ್ಮೆಗೂಡು 270 ರೂಪಾಯಿಗಳಷ್ಟಿದೆ. ಆದರೆ ಹಿಂದಿನ ದರದಲ್ಲಿ ಬರೋಬ್ಬರಿ 100 ರೂಪಾಯಿಗಳಷ್ಟು ಇಳಿಕೆಯಾಗಿರುವುದು ರೈತರಲ್ಲಿ ಸಾಕಷ್ಟು ಆತಂಕವನ್ನುಂಟು ಮಾಡಿದೆ.

    ಈ ಎಲ್ಲ ಬೆಳವಣಿಗೆಯಿಂದ ರೀಲರ್ಸ್ ಗಳು ಹಾಗೂ ರೈತರು ಸಹ ಪರದಾಡುವಂತಾಗಿದೆ. ಪ್ರತಿ ವರ್ಷವೂ ಈ ಸಮಯಕ್ಕೆ ರೇಷ್ಮೆಗೂಡಿನ ಬೆಲೆ ಏರಿಕೆಯಾಗುತ್ತಿತ್ತು. ಇದೀಗ ಕೊರೊನಾ ಎಫೆಕ್ಟ್ ರೇಷ್ಮೆ ಬೆಳೆಗಾರರಿಗೆ ಕೈ ಕೊಡುವಂತೆ ಮಾಡಿದ್ದು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.

  • ಮತ್ತೆ ಹಳೇ ಪದ್ಧತಿಗೆ ಮರಳಿದ ರೇಷ್ಮೆ ಮಾರುಕಟ್ಟೆ – ರೈತರ ಗೋಳು ಕೇಳೋರು ಯಾರು?

    ಮತ್ತೆ ಹಳೇ ಪದ್ಧತಿಗೆ ಮರಳಿದ ರೇಷ್ಮೆ ಮಾರುಕಟ್ಟೆ – ರೈತರ ಗೋಳು ಕೇಳೋರು ಯಾರು?

    ರಾಮನಗರ: ಆರ್.ಟಿ.ಜಿ.ಎಸ್ (ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ ) ಮೂಲಕ ರೈತರ ಖಾತೆಗೆ ನೇರವಾಗಿ ಹಣ ಪಾವತಿಸುವ ರಾಜ್ಯದ ಮೊದಲ ಮಾರುಕಟ್ಟೆ ಎಂಬ ಖ್ಯಾತಿಗಳಿಸಿದ್ದ ರಾಮನಗರದ ರೇಷ್ಮೆ ಮಾರುಕಟ್ಟೆ ಇದೀಗ ಆರ್.ಟಿ.ಜಿ.ಎಸ್ ಸ್ಥಗಿತಗೊಳಿಸುವ ಮೂಲಕ ಹಳೆ ಪದ್ಧತಿ ನೇರವಾಗಿ ಹಣವನ್ನ ರೈತರ ಕೈಗೆ ನೀಡುವ ವ್ಯವಸ್ಥೆಗೆ ಜಾರುವ ಮೂಲಕ ರೇಷ್ಮೆ ರೈತರನ್ನ ಸಂಕಷ್ಟಕ್ಕೆ ದೂಡಿದೆ. ಅದು ಕೂಡಾ ಮಾರುಕಟ್ಟೆಯ ಉಪನಿರ್ದೆಶಕ ಆಸ್ಪತ್ರೆಗೆ ದಾಖಲಾಗಿದ್ದಕ್ಕೆ ಇದೀಗ ಹಳೇ ಪದ್ಧತಿಯನ್ನು ಮತ್ತೆ ಆರಂಭಿಸಲಾಗಿದೆ.

    ಏಷ್ಯಾದ ಅತೀ ದೊಡ್ಡ ರೇಷ್ಮೆ ಮಾರುಕಟ್ಟೆ ಎಂಬ ಖ್ಯಾತಿಯನ್ನ ಗಳಿಸಿರುವ ರಾಮನಗರದ ಮಾರುಕಟ್ಟೆ ಇದೀಗ ಪುನಃ ಹಳೆಯ ಕೆಲಸಕ್ಕೆ ಕೈ ಹಾಕಿದ್ದು, ರೇಷ್ಮೆಗೂಡು ಮಾರಾಟ ಮಾಡಿದ ರೈತರಿಗೆ ನೇರವಾಗಿ ಹಣವನ್ನ ನೀಡುವಂತಹ ಕೆಲಸವನ್ನ ಮಾಡ್ತಿದೆ. ಆರ್.ಟಿ.ಜಿ.ಎಸ್ ಸ್ಥಗಿತವಾಗಿರೋದ್ರಿಂದ ರೈತರಿಗೆ ಸಾಕಷ್ಟು ಅನಾನುಕೂಲಗಳು ಎದುರಾಗಿವೆ. ಅದರಲ್ಲೂ ಆರ್.ಟಿ.ಜಿ.ಎಸ್ ಅಳವಡಿಸಿಕೊಂಡಿದ್ದ ವೇಳೆ ಡೀಲರ್ಸ್‍ಗಳು ಹಣವನ್ನು ಮಾರುಕಟ್ಟೆಯಲ್ಲಿ ಕಟ್ಟಿ ನಂತರ ಗೂಡು ಖರೀದಿ ಮಾಡುತ್ತಿದ್ದರು. ಆದ್ರೆ ಇದೀಗ ಸರಿಯಾದ ಸಮಯಕ್ಕೆ ಮಾರುಕಟ್ಟೆಗೆ ಹಣವನ್ನು ಸಹ ಕಟ್ಟುತ್ತಿಲ್ಲ. ಅಲ್ಲದೇ ರೈತರ ರೇಷ್ಮೆಗೂಡನ್ನು ಬಿಡ್ ಮಾಡಿ ನಂತರ ತೂಕವನ್ನೂ ಮಾಡದೇ ದಿನನಿತ್ಯ ರೈತರನ್ನ ಕಾಯಿಸ್ತಿದ್ದಾರೆ. ಗೂಡು ಮಾರಾಟವಾದ ನಂತರವೂ ಹಣವಿಲ್ಲದೇ ರೈತರು ಮಾರುಕಟ್ಟೆಯಲ್ಲಿಯೇ ಅಲೆದಾಡುವಂತಾಗಿದೆ.

    ರೇಷ್ಮೆ ಮಾರುಕಟ್ಟೆಯ ಉಪನಿರ್ದೇಶಕರಾದ ಮುನ್ಷಿ ಬಸಯ್ಯ ಕಳೆದ 15 ದಿನಗಳ ಹಿಂದೆ ರಾಮನಗರದಲ್ಲಿ ಕಚೇರಿ ಕಾರ್ಯ ಮುಗಿಸಿ ಬೆಂಗಳೂರಿನಲ್ಲಿನ ಮನೆಗೆ ತರಳುವ ವೇಳೆ ಅಪಘಾತ ಸಂಭವಿಸಿದೆ. ಬಸ್‍ನಿಂದ ಇಳಿದು ರಸ್ತೆ ದಾಟುವ ವೇಳೆ ಮತ್ತೊಂದು ಬಸ್ ಡಿಕ್ಕಿ ಹೊಡೆದ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಆಸ್ಪತ್ರೆಗೆ ದಾಖಲಾದ ದಿನದಿಂದ ಇಲ್ಲಿಂದಿನ ತನಕ ಆನ್‍ಲೈನ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಉಪನಿರ್ದೇಶಕರು ತಮ್ಮ ಆರೋಗ್ಯ ಸುಧಾರಣೆಯಾಗುವ ತನಕ ರೈತರು ಮಾತ್ರ ಹಣಕ್ಕಾಗಿ ಮಾರುಕಟ್ಟೆಯನ್ನು ಸುತ್ತುವುದೇ ಕಾಯಕವಾಗಲಿದೆ.

    ಮಾರುಕಟ್ಟೆಯ ಉಪನಿರ್ದೇಶಕ ಮುನ್ಷಿ ಬಸಯ್ಯ ಹೊರತು ಪಡಿಸಿದ್ರೆ ಯಾವೊಬ್ಬ ಅಧಿಕಾರಿಗೂ, ಮಾರುಕಟ್ಟೆಯ ಉಸ್ತುವಾರಿ ನೋಡಿಕೊಳ್ತಿರುವ ವಿಶೇಷ ಅಧಿಕಾರಿಗೂ ಸಹ ಆರ್.ಟಿ.ಜಿ.ಎಸ್ ಮೂಲಕ ರೈತರಿಗೆ ಹಣ ಪಾವತಿಸುವುದು ತಿಳಿದಿಲ್ಲ. ಹಾಗಾಗಿ ರೈತರಿಗೆ ಆರ್.ಟಿ.ಜಿ.ಎಸ್ ಮೂಲಕ ಹಣವನ್ನ ನೀಡುವಂತಹ ವ್ಯವಸ್ಥೆಗೆ ಬ್ರೇಕ್ ಹಾಕಲಾಗಿದೆ. ದಿನನಿತ್ಯ ಮಾರುಕಟ್ಟೆಯಲ್ಲಿ 40 ಟನ್‍ನಷ್ಟು ರೇಷ್ಮೆಗೂಡಿನ ವಹಿವಾಟು ನಡೆಯುತ್ತಿದೆ. ರಾಜ್ಯದ ಹಲವು ಜಿಲ್ಲೆಗಳಿಂದ ಅಲ್ಲದೇ ಹೊರ ರಾಜ್ಯಗಳಿಂದಲೂ ಸಹ ರೈತರು ಮಾರುಕಟ್ಟೆಗೆ ಗೂಡನ್ನು ದಿನನಿತ್ಯ ತಂದು ಮಾರಾಟ ಮಾಡ್ತಿದ್ದು, ಇತ್ತ ಆರ್.ಟಿ.ಜಿ.ಎಸ್ ಇಲ್ಲದೇ, ಅತ್ತ ಸರಿಯಾದ ಸಮಯಕ್ಕೆ ನೇರವಾಗಿ ಹಣ ಕೂಡಾ ಸಿಗದೇ ಪರದಾಡುವಂತಾಗಿದೆ.

    ಬೆಳೆದ ರೇಷ್ಮೆ ಬೆಳೆಗೆ ಬೆಲೆ ಕುಸಿತವಾಗ್ತಿದ್ದು ರೈತರು ಒಂದೆಡೆ ರೇಷ್ಮೆ ಸಹವಾಸ ಬೇಡ ಎಂಬಂತಾಗಿದ್ದಾರೆ. ಅದ್ರೆ ಇದೀಗ ಉತ್ತಮ ಬೆಲೆ ಇದ್ದು ಬೆಳೆದ ಬೆಳೆ ಮಾರಾಟ ಮಾಡಿದ್ರು ಸರಿಯಾಗಿ ಹಣ ಮಾತ್ರ ರೈತರ ಕೈಗೆ ಸಿಕ್ತಿಲ್ಲ. ಹೀಗಾಗಿ ಡಿಡಿ ಒಬ್ಬರಿಗೆ ಆರ್.ಟಿ.ಜಿ.ಎಸ್ ಗೊತ್ತಿದ್ರೆ ಸಾಲದು ಬೇರೆ ಅಧಿಕಾರಿಗಳಿಗೂ ಅದರ ಮಾಹಿತಿ ಇರಬೇಕು ಈ ಬಗ್ಗೆ ರೇಷ್ಮೆ ಇಲಾಖೆ ಕ್ರಮ ತೆಗೆದುಕೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

  • ವಿಡಿಯೋ: ಮಾರುಕಟ್ಟೆಯಲ್ಲಿಯ ಮೋಸವನ್ನು ಪ್ರಶ್ನಿಸಿದ್ದಕ್ಕೆ ರೈತನ ಮೇಲೆ ಡೀಲರ್ಸ್ ಹಲ್ಲೆ

    ವಿಡಿಯೋ: ಮಾರುಕಟ್ಟೆಯಲ್ಲಿಯ ಮೋಸವನ್ನು ಪ್ರಶ್ನಿಸಿದ್ದಕ್ಕೆ ರೈತನ ಮೇಲೆ ಡೀಲರ್ಸ್ ಹಲ್ಲೆ

    ರಾಮನಗರ: ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಮೋಸವನ್ನು ಪ್ರಶ್ನಿಸಿದ್ದಕ್ಕೆ ರೈತರೊಬ್ಬರ ಮೇಲೆ ಶುಕ್ರವಾರ ಡೀಲರ್ಸ್‍ಗಳು ಹಲ್ಲೆ ಮಾಡಿರುವ ಘಟನೆ ರಾಮನಗರದ ರೇಷ್ಮೆ ಮಾರುಕಟ್ಟೆಯಲ್ಲಿ ನಡೆದಿದೆ.

    ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವೈ.ಎನ್ ಹೊಸಕೋಟೆಯ ರೈತ 63 ವರ್ಷದ ನಾಗಭೂಷಣ್ ಹಲ್ಲೆಗೊಳಗಾದ ರೈತ. 121 ಕೆಜಿ ರೇಷ್ಮೆಗೂಡು ಮಾರಾಟಕ್ಕೆ ತಂದಿದ್ದ ರೈತ ನಾಗಭೂಷಣ್ ಮಾರಾಟ ಮಾಡಿ ಹಣಕ್ಕಾಗಿ ಕುಳಿತಿದ್ರು. ವೇಳೆ ಪಕ್ಕದಲ್ಲಿಯೇ ರೈತರೊಬ್ಬರಿಗೆ ಡೀಲರ್ಸ್‍ಗಳಿಂದ ಆಗುತ್ತಿದ್ದ ಮೋಸವನ್ನ ಪ್ರಶ್ನಿಸಿದ್ದಾರೆ.

    ಇದರಿಂದ ಕೋಪಗೊಂಡು ನಾಲ್ವರು ಡೀಲರ್ಸ್‍ಗಳು ನಾಗಭೂಷಣ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಡೀಲರ್ಸ್‍ಗಳು ಹಲ್ಲೆ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಹಲ್ಲೆಯಿಂದ ಉಸಿರಾಟದ ತೊಂದರೆಗೆ ಒಳಗಾಗಿರುವ ರೈತ ನಾಗಭೂಷಣ್ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚಿಗೆ ರೇಷ್ಮೆ ಮಾರುಕಟ್ಟೆಯಲ್ಲಿ ಡೀಲರ್ಸ್‍ಗಳು ರೈತರಿಗೆ ಮೋಸ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

    https://www.youtube.com/watch?v=KD2ilqY3F3k