Tag: ರೇಷನ್ ಕಿಟ್

  • ಗೋಡೌನ್ ಜಲಾವೃತ- ಕೇಜ್ರಿವಾಲ್ ಎಮರ್ಜೆನ್ಸಿ ಕಿಟ್ ನೀರುಪಾಲು

    ಗೋಡೌನ್ ಜಲಾವೃತ- ಕೇಜ್ರಿವಾಲ್ ಎಮರ್ಜೆನ್ಸಿ ಕಿಟ್ ನೀರುಪಾಲು

    ನವದೆಹಲಿ: ಗೋದಾಮು ಜಲಾವೃತಗೊಂಡ ಹಿನ್ನೆಲೆಯಲ್ಲಿ ಮಳೆಯಿಂದ ತೊಂದರೆಗೆ ಸಿಲುಕಿದ್ದವರಿಗೆ ಕೊಡುವ ರೇಷನ್ ಕಿಟ್‍ಗಳು (Ration Kit) ನೀರುಪಾಲಾದ ಘಟನೆ ದೆಹಲಿಯಲ್ಲಿ ನಡೆದಿದೆ.

    ಹೌದು. ದೆಹಲಿಯಲ್ಲಿ ಮುಂಗಾರು ಮಳೆಯ (Mansoon Rain) ಅಬ್ಬರ ಜೋರಾಗಿದೆ. ನಿರಂತರ ಮಳೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಭಾರೀ ಮಳೆಯಿಂದಾಗಿ ದೆಹಲಿಯ ಹಲವು ಭಾಗಗಳು ಜಲಾವೃತಗೊಂಡಿವೆ. ಹೀಗಾಗಿ ಸಂತ್ರಸ್ತರಿಗಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Aravind Kejriwal) ಅವರು ಪರಿಹಾರ ಕಿಟ್‍ಗಳನ್ನು ಸಿದ್ಧಪಡಿಸಿದ್ದರು. ಅಲ್ಲದೆ ಈ ಕಿಟ್‍ಗಳನ್ನು ಸರ್ಕಾರಿ ಸ್ವಾಮ್ಯದ ಗೋದಾಮಿನಲ್ಲಿ ಇರಿಸಲಾಗಿತ್ತು. ಆದರೆ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಈ ಗೋದಾಮು ಇದೀಗ ಜಲಾವೃತಗೊಂಡಿದ್ದು, ಕಿಟ್‍ಗಳು ನಾಶವಾಗಿವೆ.

    ಪ್ರವಾಹ ಸಂತ್ರಸ್ತರಿಗಾಗಿ ತಯಾರಿಸಿದ್ದ ಕಿಟ್ ಗಳನ್ನು ಜಂಗ್ಪುರದ ವಾರ್ಡ್ ಸಮಖ್ಯೆ 142 ರಲ್ಲಿ ಸಂಗ್ರಹಿಸಡಲಾಗಿತ್ತು. ಸದ್ಯ ಕಿಟ್ ಗಳು ನೀರು ಪಾಲಾಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ವಿಚಿತ್ರವಾದ್ರೂ ಸತ್ಯ- ದೇವಸ್ಥಾನದ ಹೊರಗಿದ್ದ ಚಪ್ಪಲಿ ಕದ್ದವರ ವಿರುದ್ಧ FIR

    ಮಳೆಯಿಂದ ತತ್ತರಿಸಿದ ದೆಹಲಿ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಇದು ಒಬ್ಬರು ಮತ್ತೊಬ್ಬರನ್ನು ದೂಷಿಸಿ ಮಾತನಾಡುವ ಸಮಯವಲ್ಲ. ಎಲ್ಲಾ ಪ್ರವಾಹ ಪೀಡಿತ ರಾಜ್ಯಗಳ ಸರ್ಕಾರಗಳು ಪರಿಹಾರ ನೀಡಲು ಒಟ್ಟಾಗಿ ಕೆಲಸ ಮಾಡುವುದು ಅಗತ್ಯವಿದೆ ಎಂದು ಕರೆ ಕೊಟ್ಟರು.

    ಅಲ್ಲದೆ ಜುಲೈ 8 ಮತ್ತು 9 ರಂದು ದೆಹಲಿಯಲ್ಲಿ 153 ಮಿ.ಮೀ ಮಳೆಯಾಗಿದೆ. ಈ ಮೂಲಕ ದಶಕಗಳ ದಾಖಲೆಯನ್ನು ಮುರಿದಿದೆ. ಯಮುನಾ ನದಿಯಲ್ಲಿ ನೀರಿನ ಮಟ್ಟ 206 ಮೀಟರ್ ದಾಟಿದ ನಂತರ ನದಿ ಪಾತ್ರದ ತಗ್ಗು ಪ್ರದೇಶಗಳ ಜನರನ್ನು ಸ್ಥಳಾಂತರಿಸಲು ಪ್ರಾರಂಭಿಸಲಾಗುವುದು ಎಂದು ಕೇಜ್ರಿವಾಲ್ ಹೇಳಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಲಭೆಕೋರರ ಕುಟುಂಬಕ್ಕೆ ಜಮೀರ್ ಫುಡ್‌ಕಿಟ್ ಹಂಚಿಕೆಗೆ ಬ್ರೇಕ್

    ಗಲಭೆಕೋರರ ಕುಟುಂಬಕ್ಕೆ ಜಮೀರ್ ಫುಡ್‌ಕಿಟ್ ಹಂಚಿಕೆಗೆ ಬ್ರೇಕ್

    ಬೆಂಗಳೂರು: ಹುಬ್ಬಳ್ಳಿಯಲ್ಲಿ ಗಲಭೆಕೋರರ ಕುಟುಂಬಕ್ಕೆ ರೇಷನ್ ಕಿಟ್ ಹಂಚಿಕೆ ಬ್ರೇಕ್ ಬಿದ್ದಿದ್ದು, ಶಾಸಕ ಜಮೀರ್ ಅಹ್ಮದ್‌ ಖಾನ್ ಬೆಂಬಲಿಗರಿಗೆ ಸೂಚನೆ ನೀಡಿದ್ದಾರೆ,

    ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಜಮೀರ್ ವಿರುದ್ಧವಾಗಿ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ. ರೇಷನ್ ಕಿಟ್ ಹಂಚದಂತೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಜಮೀರ್ ಅಹ್ಮದ್‌ ಖಾನ್ ರೇಷನ್ ಕಿಟ್ ವಿತರಣೆ ಮಾಡದಂತೆ ಬೆಂಬಲಿಗರಿಗೆ ಸೂಚನೆ ನಿಡಿದ್ದಾರೆ. ಇದರಿಂದಾಗಿ ಬೆಂಬಲಿಗರು ರೇಷನ್ ಕಿಟ್ ಹಂಚಿಕೆ ಕಾರ್ಯಕ್ರಮ ರದ್ದು ಪಡಿಸಿದ್ದಾರೆ.

    Hubballi Riot

    ಘಟನೆಯೇನು?:
    ಹುಬ್ಬಳ್ಳಿ ಗಲಭೆಯಲ್ಲಿ ಕಲ್ಲು ಹೊಡೆದು ಅರೆಸ್ಟ್ ಆದವರ ಪರ ಜಮೀರ್ ನಿಂತಿದ್ದು, ಗಲಭೆಕೋರರಿಗೆ ಜಮೀರ್ 5 ಸಾವಿರ ನಗದು ಹಾಗೂ ರಂಜಾನ್ ಫುಡ್‍ಕಿಟ್ ನೀಡಿ ಸಹಾಯ ಮಾಡಿದ್ದಾರೆ. ಇದನ್ನೂ ಓದಿ: ಮತ್ತೆ ಗಲಭೆಕೋರರ ಪರ ನಿಂತ ಜಮೀರ್- ಕಲ್ಲು ಹೊಡೆದವರ ಕುಟುಂಬಕ್ಕೆ 5 ಸಾವಿರ, ಫುಡ್‍ಕಿಟ್

    ಇಂದು ಮಧ್ಯಾಹ್ನ 3.30ಕ್ಕೆ ಹುಬ್ಬಳ್ಳಿಯಲ್ಲಿ ಹಣ ಹಾಗೂ ಫುಡ್‍ಕಿಟ್ ಹಂಚಿಕೆ ಮಾಡಲಾಗುತ್ತಿದ್ದು, ಕಸಬಾ ಪೇಟೆ ಪೊಲೀಸ್ ಠಾಣೆ ಬಳಿಯ ಮಸ್ತಾನ್ ಷಾ ಶಾದಿ ಮಹಲ್‍ನಲ್ಲಿ ಬೆಂಬಲಿಗರ ಮೂಲಕ ಜಮೀರ್ ಅಹ್ಮದ್ ಸಹಾಯ ಮಾಡಲಿದ್ದರು. ರಂಜನ್ ಹಿನ್ನೆಲೆ ಮೆಕ್ಕಾದಲ್ಲಿರುವ ಜಮೀರ್ ಅಹ್ಮದ್, ಅಲ್ಲಿಂದಲೇ ಗಲಭೆಕೋರರಿಗೆ ಸಹಾಯಹಸ್ತ ಚಾಚಿದ್ದರು. ಹುಬ್ಬಳ್ಳಿಯ ತಮ್ಮ ಬೆಂಬಲಿಗರ ಮೂಲಕ ರೇಶನ್ ಕಿಟ್ ಹಂಚಿಕೆ ಮಾಡಲಿದ್ದರು. ಈ ಹಿನ್ನೆಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದನ್ನೂ ಓದಿ: ಜಮೀರ್ ನಡೆಯಿಂದ ಕಾಂಗ್ರೆಸ್ ತಲೆತಗ್ಗಿಸುವ ಕೆಲಸ: ಆರಗ ಜ್ಞಾನೇಂದ್ರ

  • ಕಂಟೈನ್‍ಮೆಂಟ್ ಏರಿಯಾದಲ್ಲಿ ಶಾಸಕ ನಾಗೇಂದ್ರ ರೇಷನ್ ಕಿಟ್ ವಿತರಣೆ

    ಕಂಟೈನ್‍ಮೆಂಟ್ ಏರಿಯಾದಲ್ಲಿ ಶಾಸಕ ನಾಗೇಂದ್ರ ರೇಷನ್ ಕಿಟ್ ವಿತರಣೆ

    ಬಳ್ಳಾರಿ: ನಗರದ ಕೌಲ್ ಬಜಾರ್ ಪ್ರದೇಶ ವ್ಯಾಪ್ತಿಯ 26ನೇ ವಾರ್ಡಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಜಿಲ್ಲಾಡಳಿತ ಇಡೀ ಪ್ರದೇಶವನ್ನ ಕಂಟೈನ್‍ಮೆಂಟ್ ಝೋನ್ ಎಂದು ಘೋಷಿಸಿದೆ. ಹೀಗಾಗಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರು ರೇಷನ್ ಕಿಟ್ ವಿತರಿಸಿದ್ದಾರೆ.

    ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ಈ ದಿನ ಕಂಟೈನ್‍ಮೆಂಟ್ ಏರಿಯಾದ ನೂರಾರು ಕುಟುಂಬ ಸದಸ್ಯರಿಗೆ ರೇಷನ್ ಕಿಟ್‍ಗಳನ್ನ ಶಾಸಕ ನಾಗೇಂದ್ರ ವಿತರಿಸಿದರು.

    ಕೌಲ್ ಬಜಾರ್ ವ್ಯಾಪ್ತಿಯ 26ನೇಯ ವಾರ್ಡಿನ ಪ್ರತಿಯೊಂದು ಮನೆಗಳಿಗೆ ತೆರಳಿದ ಶಾಸಕ ಬಿ.ನಾಗೇಂದ್ರ ಅವರು, ರೇಷನ್ ಕಿಟ್, ತರಕಾರಿ, ಹಾಲು, ಮೊಸರನ್ನ ವಿತರಿಸಿದರು. ಒಂದು ವಾರಕ್ಕೆ ಆಗುವಷ್ಟು ಅಗತ್ಯ ವಸ್ತುಗಳ ಶಾಸಕ ನಾಗೇಂದ್ರ ಪೂರೈಸಿದ್ದಾರೆ.

    ಈ ವೇಳೆ ಮಾತನಾಡಿದ ಶಾಸಕ ನಾಗೇಂದ್ರ, ಅಂದಾಜು ಸಾವಿರಕ್ಕೂ ಅಧಿಕ ಕಿಟ್‍ಗಳನ್ನ ವಿತರಿಸಲಾಯಿತು. ಅದರೊಂದಿಗೆ ತರಕಾರಿ, ಹಾಲು, ಮೊಸರನ್ನ ವಿತರಿಸಲಾಗಿದೆ. ಕಂಟೈನ್‍ಮೆಂಟ್ ಝೋನ್ ಎಂದು ಈ ಪ್ರದೇಶವನ್ನು ಘೋಷಣೆ ಮಾಡಲಾಗಿದ್ದು, ಅಗತ್ಯ ವಸ್ತುಗಳ ಕೊರತೆಯಾಗಬಾರದೆಂಬ ಸದುದ್ದೇಶದೊಂದಿಗೆ ಈ ನಿರ್ಧಾರಕ್ಕೆ ಬರಲಾಗಿದೆ. ವಾರಕ್ಕೆ ಆಗುವಷ್ಟು ಅಗತ್ಯ ವಸ್ತುಗಳನ್ನ ವಿತರಿಸಲಾಗಿದೆ. ವಾರದ ನಂತರ ಬೇಡಿಕೆಯಿದ್ದರೆ ಪೂರೈಕೆಗೂ ಸದಾ ಸಿದ್ಧವಿರುವುದಾಗಿ ಶಾಸಕ ನಾಗೇಂದ್ರ ತಿಳಿಸಿದ್ದಾರೆ.