Tag: ರೇವಾ

  • ಮಹಿಳೆಯ ಶವ ಫ್ರೀಜರ್‌ನಲ್ಲಿ ಪತ್ತೆ – ಪತಿಯ ಮೇಲೆ ಸಹೋದರನಿಂದ ಕೊಲೆ ಆರೋಪ

    ಮಹಿಳೆಯ ಶವ ಫ್ರೀಜರ್‌ನಲ್ಲಿ ಪತ್ತೆ – ಪತಿಯ ಮೇಲೆ ಸಹೋದರನಿಂದ ಕೊಲೆ ಆರೋಪ

    ಭೋಪಾಲ್: ಮಹಿಳೆಯ ಶವವನ್ನು ಆಕೆಯ ಪತಿ ಮನೆಯ ಫ್ರೀಜರ್‌ನಲ್ಲಿ (Freezer) ಇರಿಸಿದ್ದು, ಮೃತದೇಹವನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಮಧ್ಯಪ್ರದೇಶದ (Madhya Pradesh) ರೇವಾ (Reva) ಜಿಲ್ಲೆಯಲ್ಲಿ ನಡೆದಿದೆ.

    ಮೃತ ಮಹಿಳೆಯನ್ನು ಸುಮಿತ್ರಿ (40) ಎಂದು ಗುರುತಿಸಲಾಗಿದ್ದು, ಆಕೆಯ ಸಹೋದರ ಅಕ್ಕನ ಪತಿಯೇ ಆಕೆಯನ್ನು ಕೊಂದಿದ್ದಾನೆ ಎಂದು ಆರೋಪಿಸಿದ್ದಾನೆ. ಬಳಿಕ ಆಕೆ ಜಾಂಡಿಸ್‌ನಿಂದ ಸಾವನ್ನಪ್ಪಿದ್ದಾಳೆ ಎಂದು ಆಕೆಯ ಪತಿ ತಿಳಿಸಿದ್ದಾನೆ. ಇದನ್ನೂ ಓದಿ: ಎಲ್ಲಾ ರೀತಿಯಲ್ಲೂ ಬಳಸಿಕೊಂಡು ಮದುವೆ ನಿರಾಕರಣೆ- ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ದುರ್ಮರಣ

    CRIME

    ತನ್ನ ಪತ್ನಿ ಜಾಂಡಿಸ್‌ನಿಂದ ಬಳಲುತ್ತಿದ್ದು, ಜೂನ್ 30ರ ಶುಕ್ರವಾರ ಮರಣಹೊಂದಿದ್ದಾಳೆ. ಆಕೆಯ ಅಂತ್ಯಕ್ರಿಯೆ ಮಾಡುವ ಸಲುವಾಗಿ ಪುತ್ರ ಮುಂಬೈನಿಂದ (Mumbai) ಆಗಮಿಸಬೇಕಿತ್ತು. ಆತ ಮರಳುವವರೆಗೆ ಆಕೆಯ ಶವವನ್ನು ಫ್ರೀಜರ್‌ನಲ್ಲಿ ಇಟ್ಟಿದ್ದೇನೆ ಎಂದು ಮೃತ ಮಹಿಳೆಯ ಪತಿ ತಿಳಿಸಿದ್ದಾನೆ. ಮಹಿಳೆಯ ಶವವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆಕೆಯ ಸಾವಿನ ರಹಸ್ಯವನ್ನು ಪತ್ತೆಹಚ್ಚುವ ಸಲುವಾಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇದನ್ನೂ ಓದಿ: ಡಿಪೋ ಆವರಣದಲ್ಲಿ ನೇಣಿಗೆ ಶರಣಾದ ಸಾರಿಗೆ ನೌಕರ

    ಮಹಿಳೆಯ ಸಹೋದರ ಅಭಯ್ ತಿವಾರಿ ಅಕ್ಕನನ್ನು ತನ್ನ ಭಾವ ಯಾರಿಗೂ ತಿಳಿಯದಂತೆ ಕೊಂದಿದ್ದಾರೆ ಎಂದು ದೂರು ನೀಡಿದ ಬಳಿಕ ಪೊಲೀಸರು ಶವ ವಶಪಡಿಸಿಕೊಂಡಿರುವುದಾಗಿ ಕೊತ್ವಾಲಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಿಜಯ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ರೈಲು ಹರಿದು 60 ಮೇಕೆಗಳು ದಾರುಣ ಸಾವು

    ಅಕ್ಕನ ನಿಧನದ ಬಗ್ಗೆ ಭಾವ ಅಥವಾ ಅವರ ಕುಟುಂಬದವರು ನಮಗೆ ಮತ್ತು ನಮ್ಮ ಕುಟುಂಬದವರಿಗೆ ಯಾರಿಗೂ ತಿಳಿಸಲಿಲ್ಲ. ಈ ಕುರಿತು ಇಂದು ಬೆಳಗ್ಗೆ ನನಗೆ ಮಾಹಿತಿ ತಿಳಿದಿದೆ. ಅಲ್ಲದೇ ಭಾವ ಅಕ್ಕನನ್ನು ಥಳಿಸುತ್ತಿದ್ದರು. ಇದರಿಂದ ಆಕೆ ಸಾವನ್ನಪ್ಪಿರಬಹುದು ಎಂದು ಆರೋಪಿಸಿ ದೂರು ನೀಡಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಶವಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯ್ ಸಿಂಗ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಗುವಿನ ಹತ್ಯೆ ಮಾಡಿ ದೃಶ್ಯಂ ಸಿನಿಮಾ ರೀತಿಯಲ್ಲಿ ಶವ ವಿಲೇವಾರಿ ಮಾಡಿದ ತಾಯಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶೆಟ್ಟಿಗೆರೆ ಗ್ರಾಮವನ್ನು ದತ್ತು ಪಡೆಯಲಿದೆ ರೇವಾ ವಿಶ್ವವಿದ್ಯಾಲಯ

    ಶೆಟ್ಟಿಗೆರೆ ಗ್ರಾಮವನ್ನು ದತ್ತು ಪಡೆಯಲಿದೆ ರೇವಾ ವಿಶ್ವವಿದ್ಯಾಲಯ

    ಬೆಂಗಳೂರು: ವಿಶ್ವ ಪರಿಸರ ದಿನಾಚಾರಣೆಯ ಅಂಗವಾಗಿ ರೇವಾ ವಿಶ್ವವಿದ್ಯಾಲಯ ತನ್ನ ವ್ಯಾಪ್ತಿಯಲ್ಲಿ ಬರುವ ಗ್ರಾಮವನ್ನು ದತ್ತು ತೆಗೆದುಕೊಳ್ಳಲು ಮುಂದಾಗಿದೆ.

    ಶನಿವಾರ ಬೆಳಗ್ಗೆ 11 ಗಂಟೆಗೆ ತನ್ನ ವ್ಯಾಪ್ತಿಯಲ್ಲಿ ಬರುವ ಶೆಟ್ಟಿಗೆರೆ ಗ್ರಾಮವನ್ನು ದತ್ತು ಪಡೆದು ಮಾದರಿ ಗ್ರಾಮವನ್ನಾಗಿ ಮಾಡಲು ರೇವಾ ವಿವಿ ಮುಂದಾಗಿದೆ.

    ಈ ಕಾರ್ಯಕ್ರಮದಲ್ಲಿ ರೇವಾ ವಿವಿಯ ಕುಲಾಧಿಪತಿ ಡಾ. ಪಿ. ಶ್ಯಾಮರಾಜು, ಕುಲಪತಿ ಡಾ.ಎಸ್. ವೈ ಕುಲಕರ್ಣಿ, ಶೆಟ್ಟಿಗರೆ ಗ್ರಾಮ ಪಂಚಾಯತ್ ಅಧ್ಯಕ್ಷ ಆನಂದ ಸೇರಿದಂತೆ ಹಲವು ಅತಿಥಿಗಳು ಭಾಗವಹಿಸಲಿದ್ದಾರೆ.

    ಮಾದರಿ ಗ್ರಾಮವನ್ನಾಗಿ ಹೇಗೆ ಮಾಡಲಾಗುತ್ತೆ?
    ಆರ್ಥಿಕ ಅಭಿವೃದ್ಧಿಗೋಸ್ಕರ ಕೌಶಲ್ಯ ತರಬೇತಿ, ಸಂಚಾರಿ ಆರೋಗ್ಯ ಘಟಕ, ಐಸಿಟಿ ಸೌಲಭ್ಯಗಳೊಂದಿಗೆ ಶಾಲೆ/ಉನ್ನತ ಶಿಕ್ಷಣವನ್ನು ಮೇಲ್ದರ್ಜೆಗೇರಿಸುವುದು, ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ಸೌಲಭ್ಯ, ಘನ ಮತ್ತು ಹಸಿ ತ್ಯಾಜ್ಯ ನಿರ್ವಹಣೆ ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿ ವ್ಯವಸ್ಥೆ, ಬೀದಿ ದೀಪಗಳು, ರಸ್ತೆ ಸಂಪರ್ಕ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಸುಧಾರಣೆ, ಡಿಜಿಟಲ್ ಸಾಕ್ಷರತೆ, ಮಹಿಳಾ ಸಬಲೀಕರಣ, ಹೆಣ್ಣು ಮಕ್ಕಳ ಶಿಕ್ಷಣ, ಅಪೌಷ್ಟಿಕತೆ ರಹಿತ ಗ್ರಾಮ, ಮಾಲಿನ್ಯ ಮುಕ್ತ ಗ್ರಾಮ, ಪರಿಸರ ಸಂರಕ್ಷಣೆ:ಸಸಿ ನೆಡುವ ಕಾರ್ಯಕ್ರಮ, ಆರೋಗ್ಯ ಮತ್ತು ಮಕ್ಕಳ ಕಲ್ಯಾಣ, ಹಿಂದುಳಿದ ವರ್ಗದವರಿಗೆ ಉತ್ತೇಜನ ಮತ್ತು ಮಾಹಿತಿ.