Tag: ರೇವಣ್ಣ

  • ಮಕ್ಕಳಿಗೆ ಕಳಪೆ ಗುಣಮಟ್ಟದ ಚಿಕ್ಕಿ – ತನಿಖೆಗೆ ರೇವಣ್ಣ ಆಗ್ರಹ

    ಮಕ್ಕಳಿಗೆ ಕಳಪೆ ಗುಣಮಟ್ಟದ ಚಿಕ್ಕಿ – ತನಿಖೆಗೆ ರೇವಣ್ಣ ಆಗ್ರಹ

    ಹಾಸನ: ಸರ್ಕಾರ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅವರಿಗೆ ಪೌಷ್ಟಿಕ ಆಹಾರ ನೀಡಲು ಮತ್ತು ಅಂಗನವಾಡಿ ಪರಿಕರ ಖರೀದಿಸಲು ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ ಈ ಪೌಷ್ಟಿಕ ಆಹಾರ ನೀಡಲು ಸರಿಯಾದ ಮಾನದಂಡ ನಿಗದಿಪಡಿಸದ ಕಾರಣ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರದಲ್ಲೂ ಹಾಸನದಲ್ಲಿ ಹಣ ಲೂಟಿಯಾಗುತ್ತಿದೆ ಮತ್ತು ಗುಣಮಟ್ಟಣ ಆಹಾರ ಕೂಡ ಪೂರೈಕೆಯಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತಂತೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರೇವಣ್ಣ ತನಿಖೆ ನಡೆಸಲು ಆಗ್ರಹಿಸಿದ್ದಾರೆ. ಇದನ್ನೂ ಓದಿ:  ಗಾಂಧಿ ಜಯಂತಿ ವಿಶೇಷ – ವಿಜಯಪುರದ ಗ್ರಾಮ ಸಭೆ ವೀಕ್ಷಣೆ ಮಾಡಲಿದ್ದಾರೆ ಮೋದಿ

    ಸರ್ಕಾರ ಇಡೀ ರಾಜ್ಯದ ಅಂಗನವಾಡಿ ಮಕ್ಕಳಿಗೆ ಚಿಕ್ಕಿಕೊಡುತ್ತಿದ್ದು, ಪ್ರತಿ ಚಿಕ್ಕಿಗೆ 2 ರೂಪಾಯಿ ದರ ನಿಗದಿ ಮಾಡಿದೆ. ಚಿಕ್ಕಿಗೆ ಶೇಂಗಾ, ಬೆಲ್ಲ ಬಳಸುತ್ತಾರೆ. ಆದರೆ ಹಾಸನದಲ್ಲಿ ನೀಡುತ್ತಿರುವ ಚಿಕ್ಕಿ ಕಡಿಮೆ ತೂಕದ್ದಾಗಿದ್ದು, ಒಂದು ಚಿಕ್ಕಿಗೆ ಮೂಲಭೂತವಾಗಿ 80 ಪೈಸೆ ಬೀಳುತ್ತಿದೆ. ಸರ್ಕಾರ ಒಂದು ಚಿಕ್ಕಿ ಎಷ್ಟು ತೂಕ ಇರಬೇಕು ಎಂದು ಮಾನದಂಡ ನಿಗದಿಪಡಿಸದ ಕಾರಣ ಮಕ್ಕಳಿಗೆ ಮೋಸ ಮಾಡಲಾಗುತ್ತಿದೆ ಎಂದು ಆರೋಪ ಕೇಳಿ ಬಂದಿದೆ. ಪ್ರತಿ ತಿಂಗಳು ಹಾಸನ ಜಿಲ್ಲೆಯೊಂದಕ್ಕೆ 25 ಲಕ್ಷ ಚಿಕ್ಕಿ ಬೇಕು. ಪ್ರತಿ ತಿಂಗಳು ಮಕ್ಕಳಿಗೆ ನೀಡುವ ಚಿಕ್ಕಿಗೆ ಸುಮಾರು 50 ಲಕ್ಷ ಬಿಲ್ ಆಗುತ್ತಿದೆ. ಆದರೆ ಇವರು ಕಡಿಮೆ ದರಕ್ಕೆ ಚಿಕ್ಕಿ ಖರೀದಿಸಿ ಹೆಚ್ಚು ಬಿಲ್ ಹಾಕಿಕೊಂಡು ಹಣ ನುಂಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರವಲ್ಲದೆ, ಅಂಗನವಾಡಿಗೆ ಖರೀದಿಸುವ ಪ್ರಚಾರ ಪರಿಕರದಲ್ಲೂ ಅಕ್ರಮ ಎಸಗಿದ್ದಾರೆ ಎಂದು ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ರೇವಣ್ಣ ಆರೋಪ ಮಾಡುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು, ಸಂಬಂಧ ಪಟ್ಟ ಸಚಿವರಿಗೆ ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲಅಂತಿದ್ದಾರೆ. ಈ ಬಗ್ಗೆ ಹಾಸನದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಪರಶುರಾಮ್ ಶೆಟ್ಟಪ್ಪನವರ್ ಅವರನ್ನು ಕೇಳಿದರೆ, ನಾನು ಈ ಬಗ್ಗೆ ಕೂಡಲೇ ಗಮನಹರಿಸಿ ಪ್ರಚಾರ ಪರಿಕರ ಮತ್ತು ಚಿಕ್ಕಿ ನೀಡುವಲ್ಲಿ ಅವ್ಯವಹಾರ ಆಗಿದ್ದರೆ ತನಿಖೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದ ಹಲವೆಡೆ ವರುಣನ ಅಬ್ಬರ- ಸಿಡಿಲಿಗೆ ಯುವಕ ಬಲಿ, ಮನೆಗಳಿಗೆ ನುಗ್ಗಿದ ನೀರು

    ಒಟ್ಟಾರೆ ಅಂಗನವಾಡಿಗೆ ಹೋಗುವ ಮಕ್ಕಳ ಅನುಕೂಲಕ್ಕಾಗಿ ಸರ್ಕಾರ ಹಲವಾರು ಯೋಜನೆ ಜಾರಿಗೆ ತಂದು ಪ್ರತಿ ವರ್ಷ ಕೋಟಿ, ಕೋಟಿ ಹಣ ಬಿಡುಗಡೆ ಮಾಡುತ್ತಿದೆ. ಆದರೆ ಕೆಲವು ಅಧಿಕಾರಿಗಳು ಮತ್ತು ರಾಜಕಾರಣಿಗಳು ಪುಟಾಣಿ ಮಕ್ಕಳ ಅನುಕೂಲಕ್ಕಾಗಿ ಸರ್ಕಾರ ಬಿಡುಗಡೆ ಮಾಡುವ ಹಣವನ್ನೂ ಲೂಟಿ ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಸರ್ಕಾರ ತನಿಖೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.

  • ದೇವರು ಕಣ್ಬಿಟ್ಟು ಕಾಂಗ್ರೆಸ್ ಕ್ಲೋಸ್ ಮಾಡಿಸುತ್ತಿದ್ದಾನೆ: ಹೆಚ್‍.ಡಿ.ರೇವಣ್ಣ

    ದೇವರು ಕಣ್ಬಿಟ್ಟು ಕಾಂಗ್ರೆಸ್ ಕ್ಲೋಸ್ ಮಾಡಿಸುತ್ತಿದ್ದಾನೆ: ಹೆಚ್‍.ಡಿ.ರೇವಣ್ಣ

    ಹಾಸನ: ಸುಳ್ಳು ಜಾಸ್ತಿ ದಿನ ನಡೆಯಲ್ಲ, ಧರ್ಮಕ್ಕೆ ಜಯ ಇದ್ದೇ ಇರುತ್ತೆ. ದೇವರು ಕಣ್ಬಿಟ್ಟು ಈಗ ಕಾಂಗ್ರೆಸ್ ಪಕ್ಷವನ್ನು ಕ್ಲೋಸ್ ಮಾಡಿಸುತ್ತಿದ್ದಾನೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಅ. 7 ರಿಂದ13 ರವರೆಗೆ ನಿತ್ಯ ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ: ಎಸ್.ಟಿ.ಸೋಮಶೇಖರ್

    ಹಾಸನದಲ್ಲಿ ಮಾತನಾಡಿದ ಅವರು, ಜೆಡಿಎಸ್‍ನ ಕೆಲ ಶಾಸಕರು ಕಾಂಗ್ರೆಸ್‍ಗೆ ಸೇರ್ಪಡೆ ಆಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಮಿಷನ್ ಓಡುತ್ತಿದೆ. ಕಾಂಗ್ರೆಸ್ ಜೆಡಿಎಸ್‍ನ ಮಿಷನ್‍ಗೆ ಕೈ ಹಾಕಿ, ನಮ್ ಮಿಷನ್ ತೆಗೆದುಕೊಂಡು ಓರಲ್ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ನಮ್ ಮಿಷನ್ ಎಷ್ಟುಗಟ್ಟಿ ಇದೆ ಲೆಕ್ಕ ಹಾಕಲಿ ಎಂದಿದ್ದಾರೆ. ಇದನ್ನೂ ಓದಿ: ಕೊವೀಡ್‍ನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ- ಕೇಂದ್ರದಿಂದ 7,274 ಕೋಟಿ ರೂ. ಬಿಡುಗಡೆ

    ನಮ್ಮ ಮಿಷನ್ ಮುಳುಗುತ್ತಿದೆ ಅಂಥಾ ಬಿಜೆಪಿ ಲೀಡರ್ ಹೇಳಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಈ ಪರಿಸ್ಥಿತಿ ಬಂತಲ್ಲಾ ಅಂಥಾ ವ್ಯಥೆಯಾಗುತ್ತಿದೆ. ದೇವರು ಕಣ್ಬಿಟ್ಟು ಕಾಂಗ್ರೆಸ್ ಪಕ್ಷವನ್ನು ಕ್ಲೋಸ್ ಮಾಡಿಸುತ್ತಿದ್ದಾನೆ. ಈಗಾಗಲೇ ಪಂಜಾಬ್‍ನಲ್ಲಿ ಕ್ಲೋಸ್ ಆಗುತ್ತಿದೆ. ಸುಳ್ಳು ಜಾಸ್ತಿ ದಿನ ನಡೆಯಲ್ಲ, ಧರ್ಮಕ್ಕೆ ಜಯ ಇದ್ದೇ ಇರುತ್ತದೆ. ನಮ್ಮದು ಫ್ಯಾಕ್ಟರಿ, 1983 ರಿಂದ ಹುಟ್ಟು ಹಾಕಿದ್ದೀವಿ. ನಮ್ಮ ಹತ್ರ ಟ್ರೈನಿಂಗ್ ತೆಗೆದುಕೊಳ್ಳುತ್ತಾರೆ. ಜಾಸ್ತಿ ಸಂಬಳ ಕೊಡುವ ಕಡೆ ಹೋಗುತ್ತಾರೆ ಎಂದು ರೇವಣ್ಣ ಪಕ್ಷ ಬಿಡುವವರ ಬಗ್ಗೆಯೂ ವ್ಯಂಗ್ಯವಾಡಿದ್ದಾರೆ.

  • ಬೊಮ್ಮಾಯಿಗೆ ಸಹಕಾರ ಇರುತ್ತೆ – ಕೇಂದ್ರ ಸಮಸ್ಯೆ ಮಾಡದೇ ಇದ್ದರೆ ರಾಜ್ಯಸಭೆಯಲ್ಲೂ ಬೆಂಬಲ: ಎಚ್‍ಡಿಡಿ

    ಬೊಮ್ಮಾಯಿಗೆ ಸಹಕಾರ ಇರುತ್ತೆ – ಕೇಂದ್ರ ಸಮಸ್ಯೆ ಮಾಡದೇ ಇದ್ದರೆ ರಾಜ್ಯಸಭೆಯಲ್ಲೂ ಬೆಂಬಲ: ಎಚ್‍ಡಿಡಿ

    ಬೆಂಗಳೂರು: ಬೊಮ್ಮಾಯಿ ಅವರಿಗೆ ನಮ್ಮ ಸಹಕಾರ ಇರುತ್ತೆ. ಕೇಂದ್ರ ಸರ್ಕಾರದಿಂದ ಸಮಸ್ಯೆ ಇಲ್ಲ ಅಂದ್ರೆ ನಾವು ರಾಜ್ಯಸಭೆಯಲ್ಲೂ ಸಹಕಾರ ಕೊಡುತ್ತೇವೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ.

    ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಪದ್ಮನಾಭನಗರದಲ್ಲಿನ ನಿವಾಸಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ತೆಗಿಬೇಕು ಅಂತಾ ನಾವು ಹೇಳಿಲ್ಲ. 75 ವರ್ಷ ಅಂತಾ ನಿಬಂಧನೆ ಇದೆ ಅಂತಾ ಅವರ ಪಕ್ಷದವರು ಮನವಿ ಮಾಡಿದ್ದಾರೆ. ಅದಕ್ಕೆ ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟಿದ್ದಾರೆ. ಇದೀಗ ಬೊಮ್ಮಾಯಿ ಅವರು ನೂತನ ಸಿಎಂ ಆಗಿದ್ದಾರೆ. ಇವರಿಗೆ ನಮ್ಮ ಸಹಕಾರ ಇರುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ಪದ್ಮನಾಭಗರದ ನಿವಾಸಕ್ಕೆ ತೆರಳಿ ಎಚ್‍ಡಿಡಿ ಆಶೀರ್ವಾದ ಪಡೆದ ಸಿಎಂ

    ಯಡಿಯೂರಪ್ಪ ಆಶೀರ್ವಾದ ಇಲ್ಲದೆ ಸರ್ಕಾರ ನಡೆಯಲ್ಲ. ಸರ್ಕಾರ ನಡೆಯಬೇಕಾದ್ರೆ ಯಡಿಯೂರಪ್ಪ ಆಶೀರ್ವಾದ ಇರಬೇಕು. ಯಡಿಯೂರಪ್ಪ ಅವರಿಂದಲೇ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾರೆ ಎಂದರು.

    ದೆಹಲಿಯಲ್ಲಿ ಇದ್ದಾಗ ನಿಮ್ಮ ಭೇಟಿಗೆ ಬರುತ್ತೇನೆ ಎಂದು ಬೊಮ್ಮಾಯಿ ಅವರು ಹೇಳಿದ್ದರು. ಆಗ ಸಾಕಷ್ಟು ಬ್ಯುಸಿ ಶೆಡ್ಯೂಲ್ ಇತ್ತು ಆಗಲಿಲ್ಲ ಇವತ್ತು ಭೇಟಿಗೆ ಸಮಯವಕಾಶ ನಿಗದಿಮಾಡಲಾಗಿತ್ತು. ಕೆಳಗೆ ಇಳಿದು ಹತ್ರ ಹೋಗಿ ಸ್ವಾಗತ ಮಾಡಲು ಆಗಲ್ಲ ಅಂತಾ ಹಾಸನದಲ್ಲಿ ಇದ್ದ ರೇವಣ್ಣ ಅವರನ್ನು ಕರೆಸಿದ್ದೆ. ರೇವಣ್ಣ ಸಿಎಂ ಅವರನ್ನು ಸ್ವಾಗತ ಮಾಡಿ ಕರೆದುಕೊಂಡು ಬಂದ್ರು. ನಾನು, ಅವರ ತಂದೆ ಒಟ್ಟಾಗಿ ಕೆಲಸ ಮಾಡಿದ್ದೇವೆ. ಅವರ ತಂದೆ ಕಾಲದ ಹಿರಿ ಮನುಷ್ಯ ನಾನೊಬ್ಬನೇ ಈಗ. ಆಶೀರ್ವಾದ ಪಡೆಯಲು ಬರ್ತೀನಿ ಅಂದ್ರು, ಬನ್ನಿ ಎಂದು ಹೇಳಿದ್ದೆ ಎಂದರು.

    ಎಲ್ಲರೂ ಮುಖ್ಯಮಂತ್ರಿ ಆಗಲು ಆಗಲ್ಲ:
    ಜನತಾದಳದಿಂದ ಸಿದ್ದರಾಮಯ್ಯ ಜೊತೆಯಲ್ಲಿ ಹೋದವರು ಎಲ್ಲ ಮುಖ್ಯಮಂತ್ರಿಯಾಗಿದ್ದಾರಾ? ಸಿದ್ದರಾಮಯ್ಯ ಜೊತೆ ಬಹಳ ಜನ ಹೋಗಿದ್ದಾರೆ. ಎಲ್ಲರೂ ಮುಖ್ಯಮಂತ್ರಿ ಆಗಲೂ ಸಾಧ್ಯವಿಲ್ಲ. ಎಲ್ಲರೂ ಮಿನಿಸ್ಟರ್ ಆಗುವುದಕ್ಕೂ ಆಗಲಿಲ್ಲ. ಬೊಮ್ಮಾಯಿ ಅವರು ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್ ಜೊತೆ ಮಿನಿಸ್ಟರ್ ಆಗಿ ಕೆಲಸ ಮಾಡಿದ್ದಾರೆ. ಬಿಜೆಪಿಯಲ್ಲಿ ನಡೆದುಕೊಂಡ ರೀತಿ ನೋಡಿ ಬೊಮ್ಮಾಯಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿದ್ದಾರೆ ಎಂದು ನುಡಿದರು.

    ಕೆಲಸ ಮಾಡಲು ವಯಸ್ಸು ಮುಖ್ಯ ಅಲ್ಲ, ವಯಸ್ಸಿದ್ದೂ ಮನೆಯಲ್ಲಿ ಮಲಗಿದ್ರೆ ಏನು ಪ್ರಯೋಜನ? ಮಹಾಭಾರತದಲ್ಲಿ ಭೀಷ್ಮ 10 ದಿನ ಹೋರಾಟ ಮಾಡುತ್ತಾನೆ, ಕರ್ಣ ಒಂದೂವರೆ ದಿನ ಹೋರಾಟ ಮಾಡುತ್ತಾನೆ, ವಯಸ್ಸು ಮುಖ್ಯ ಆಗಲ್ಲ. ಯಡಿಯೂರಪ್ಪ ಅವರಿಗೆ ನನಗಿಂತ ಇನ್ನೂ ವಯಸ್ಸಿದೆ, ನನಗೆ 89 ವರ್ಷ ವಯಸ್ಸು, ಯಡಿಯೂರಪ್ಪಗೆ 78 ವರ್ಷ ವಯಸ್ಸು ಅವರಿಗೆ ಇನ್ನೂ ಶಕ್ತಿ ಇದೆ. ಜಿಲ್ಲೆಗಳಿಗೆ ಹೋಗಬಹುದು. ನಾನು ಎಲ್ಲ ಜಿಲ್ಲೆಗಳಿಗೂ ಹೋಗಲು ಆಗುವುದಿಲ್ಲ ಆದರೆ ಕೆಲವು ಕಡೆ ನಾನು ಪ್ರವಾಸ ಮಾಡುತ್ತೇನೆ ಎಂದು ತಿಳಿಸಿದರು.

  • ಜನತಾ ಪರಿವಾರದಿಂದ ಬಂದವರೇ ಹೆಚ್ಚು ಜನ ಮುಖ್ಯಮಂತ್ರಿಯಾಗಿರೋದು: ರೇವಣ್ಣ

    ಜನತಾ ಪರಿವಾರದಿಂದ ಬಂದವರೇ ಹೆಚ್ಚು ಜನ ಮುಖ್ಯಮಂತ್ರಿಯಾಗಿರೋದು: ರೇವಣ್ಣ

    ಹಾಸನ: ಜನತಾ ಪರಿವಾರದಿಂದ ಬಂದವರೇ ಹೆಚ್ಚು ಜನ ಮುಖ್ಯಮಂತ್ರಿಯಾಗಿದ್ದಾರೆ ಎಂದು ಮಾಜಿ ಸಚಿವ ಹೆಚ್‍ಡಿ ರೇವಣ್ಣ ಹೇಳಿದ್ದಾರೆ.

    ಯುವ ಮುಖಂಡ ಮುಖ್ಯಮಂತ್ರಿ ಆಗಿರುವುದು ಸಂತೋಷ. ಅವರು ಭ್ರಷ್ಟಾಚಾರ ತೆಗೆಯೋದು ನಮ್ಮಗುರಿ ಅಂದಿದ್ದಾರೆ. ಆ ನಿಟ್ಟಿನಲ್ಲಿ ಕೆಲಸ ಮಾಡಲಿ ಎಂದು ನೂತನ ಮುಖ್ಯಮಂತ್ರಿಗೆ ರೇವಣ್ಣ ಸಲಹೆ ನೀಡಿದ್ದಾರೆ.

    ಚನ್ನರಾಯಪಟ್ಟಣ ತಾಲೂಕಿನ ಉದಯಪುರದಲ್ಲಿ ಕೃಷಿ ಯಂತ್ರಧಾರೆ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಮಾಧ್ಯನದವರೊಂದಿಗೆ ಮಾತನಾಡಿದ ಅವರು, ಹಿಂದಿನ ಎರಡು ವರ್ಷ ಸುಲಿಗೆ ನಡೆಯುತ್ತಿತ್ತು. ಈಗಿನ ಮುಖ್ಯಮಂತ್ರಿ ಒಳ್ಳೆ ಕೆಲಸ ಮಾಡಿ ಜನರ ವಿಶ್ವಾಸ ಗಳಿಸಲಿ. ಹಾಸನ ಜಿಲ್ಲೆಯ ಕೆಲಸ ತಡೆ ಹಿಡಿದದ್ದಾಗಿ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ. ಈಗ ಹೊಸ ಮುಖ್ಯಮಂತ್ರಿ ಬಂದಿದ್ದಾರೆ. ಅವರು ರೈತಪರ, ಒಳ್ಳೆಯ ಕೆಲಸ ಮಾಡಲಿ. ಜನತಾ ಪರಿವಾರದಿಂದ ಬಂದವರೇ ಹೆಚ್ಚು ಜನ ಮುಖ್ಯಮಂತ್ರಿಗಳಾಗಿರುವುದು. ಆ ಭಗವಂತ ಅವರಿಗೆ ಒಳ್ಳೆಯದು ಮಾಡಲಿ ಎಂದು ರೇವಣ್ಣ ಶುಭ ಹಾರೈಸಿದ್ದಾರೆ.

    ಇದೇ ವೇಳೆ, ನಾನು ಸಂತೋಷ್ ಅವರ ಮನೆಗಾಗಲಿ, ಪ್ರಹ್ಲಾದ್ ಜೋಶಿ ಅವರ ಮನೆಗಾಗಲಿ ಹೋಗಿಲ್ಲ. ನನಗೆ ಅದರ ಅವಶ್ಯಕತೆ ಇಲ್ಲ. ಹಿಂದೆ ಗಡ್ಕರಿ ಅವರೇ ಬಂದು ಕೆಲವು ಯೋಜನೆಗಳಿಗೆ ಅಡಿಗಲ್ಲು ಹಾಕಿದ್ದರು. ಹೀಗಾಗಿ ಆ ಬಗ್ಗೆ ಮಾತಾಡಲು ದೆಹಲಿಗೆ ಹೋಗಿದ್ದೆ. ನಾನು ಯಾವುದೇ ರಾಜಕೀಯ ಕಾರಣಕ್ಕೆ ದೆಹಲಿಗೆ ಹೋಗಿರಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ ನಿರ್ಧಾರಕ್ಕೆ ಬದ್ಧ: ಮಾಜಿ ಸಚಿವ ನಿರಾಣಿ

  • ಯಾರಿಂದಲೂ ದೇವೇಗೌಡರ ಕುಟುಂಬವನ್ನು ಒಡೆಯಲು ಸಾಧ್ಯವಿಲ್ಲ: ರೇವಣ್ಣ ಆಕ್ರೋಶ

    ಯಾರಿಂದಲೂ ದೇವೇಗೌಡರ ಕುಟುಂಬವನ್ನು ಒಡೆಯಲು ಸಾಧ್ಯವಿಲ್ಲ: ರೇವಣ್ಣ ಆಕ್ರೋಶ

    ಹಾಸನ: ಯಾರಿಂದಲೂ ಸಹ ದೇವೇಗೌಡರ ಕುಟುಂಬವನ್ನು ಒಡೆಯಲು ಸಾಧ್ಯವಿಲ್ಲ ಎಂದು ಹೇಳಿ ಮಂಡ್ಯ ಸಂಸದೆ ಸುಮಲತಾ ವಿರುದ್ಧ ಎಚ್. ಡಿ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜೆಡಿಎಸ್ ಪಕ್ಷ ಉಳಿಯುವುದಾದರೆ ಪ್ರಜ್ವಲ್ ರೇವಣ್ಣ ಅವರಿಂದ ಮಾತ್ರ ಎಂಬ ಸುಮಲತಾ ಹೇಳಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರು.

    ಇಂತಹ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಲು ಹೋದರೆ ನಾವು ಸಣ್ಣವರಾಗುತ್ತೇವೆ. ಕುಟುಂಬ ಒಡೆಯುವ ಇಂತಹ ಹೇಳಿಕೆಯನ್ನು ಸಂಸದೆ ಸುಮಲತಾ ಅವರು ನೀಡಬಾರದು. ಅಕ್ರಮ ಗಣಿಗಾರಿಕೆ ಮಾಡಿದ್ದರೆ ತನಿಖೆ ಮಾಡಿ ಕ್ರಮ ಕೈಗೊಂಡು ಮುಟ್ಟುಗೋಲು ಹಾಕಬೇಕು. ಅದನ್ನು ಅದನ್ನು ಬಿಟ್ಟು ಕುಟುಂಬ ಒಡೆಯುವ ಕೆಲಸಕ್ಕೆ ಮುಂದಾಗಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

    ಸುಮಲತಾ ಅವರ ಹೇಳಿಕೆ ಸಂಬಂಧ ಪ್ರಜ್ವಲ್ ರೇವಣ್ಣ ನನಗೆ ಫೋನ್  ಮಾಡಿ ನನ್ನ ಹೆಸರು ಏಕೆ ತರುತ್ತಿದ್ದಾರೆ ಎಂದು ಕೇಳಿದ್ದರು. ದಿವಂಗತ ನಟ ಅಂಬರೀಶ್ ಬಗ್ಗೆ ಅಪಾರವಾದ ಗೌರವವಿದೆ. ಕುಮಾರಸ್ವಾಮಿ ಹಾಗೂ ಅಂಬರೀಶ್ ಅವರೊಂದಿಗಿನ ಸಂಬಂಧ ಹೇಗಿತ್ತು ಎಂದು ನಾನು ಕಂಡಿದ್ದೇನೆ. ಕುಮಾರಸ್ವಾಮಿ ಎಂದಿಗೂ ಸಹ ದ್ವೇಷದ ರಾಜಕಾರಣ ಮಾಡಿಲ್ಲ. ಬಡವರ ಬಗ್ಗೆ ಕರುಣೆ ಇರುವ ರಾಜಕಾರಣ ಕುಮಾರಸ್ವಾಮಿ. ದೇವೇಗೌಡರ ಕುಟುಂಬ ಯಾರಿಂದಲೂ ಸಂಸ್ಕೃತಿ ಕಲಿಯಬೇಕಾಗಿಲ್ಲ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಸುಮಲತಾರಿಗೆ ರಾಜಕಾರಣದಲ್ಲಿ ಅನುಭವದ ಕೊರತೆ ಇದೆ: ನಿಖಿಲ್

    ಪ್ರಜ್ವಲ್ ನನ್ನು ಎತ್ತಿಕಟ್ಟಿ ಕುಟುಂಬವನ್ನು ಒಡೆಯುವ ಕಾರ್ಯಕ್ರಮ ಯಾರಿಂದಲೂ ಆಗುವುದಿಲ್ಲ. ಜೆಡಿಎಸ್ ಪಕ್ಷ ಉಳಿಸಲು ಕಾರ್ಯಕರ್ತರಿದ್ದಾರೆ. ಕುಟುಂಬದಿಂದ ಪಕ್ಷ ಉಳಿಯಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ ಅವರು ನಮ್ಮದೇನಾದರೂ ಕ್ರಷರ್ ಇದ್ಯಾ? ಕಾಲೇಜುಗಳಿವೆಯಾ? ಕುಮಾರಸ್ವಾಮಿ ದುಡ್ಡು ಹೊಡೆಯುತ್ತಾನೆ ಎನ್ನುತ್ತಾರಲ್ಲ. ಅದು ನ್ಯಾಯವೇ? ಒಬ್ಬ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರು ಅಂಬರೀಶ್ ಮೃತರಾದ ಮಂಡ್ಯಕ್ಕೆ ಹೆಲಿಕಾಪ್ಟರ್ ನಲ್ಲಿ ತೆಗೆದುಕೊಂಡು ಹೋದರು. ಕುಮಾರಸ್ವಾಮಿ ಪ್ರಚಾರ ಪಡೆಯಲು ಕೆಲಸ ಮಾಡಿಲ್ಲ. ಯಡಿಯೂರಪ್ಪ ಸರ್ಕಾರದ ಅಧಿಕಾರಿಗಳೇ ಕೆಆರ್‍ಎಸ್‍ಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ ಎಂದರು.

  • ಸುಮಲತಾ ಜ್ಯೋತಿಷಿಯಲ್ಲ –  ತಿರುಗೇಟು ನೀಡಿದ ಎಚ್‌ಡಿಡಿ

    ಸುಮಲತಾ ಜ್ಯೋತಿಷಿಯಲ್ಲ – ತಿರುಗೇಟು ನೀಡಿದ ಎಚ್‌ಡಿಡಿ

    ಬೆಂಗಳೂರು: ಜೆಡಿಎಸ್‍ನಲ್ಲಿ ಮುಂದಿನ ಭವಿಷ್ಯ ಪ್ರಜ್ವಲ್ ರೇವಣ್ಣ ಅಂತ ಹೇಳಿಕೆ ನೀಡಿದ್ದ ಸುಮಲತಾ ಹೇಳಿಕೆಗೆ ಮಾಜಿ ಪ್ರಧಾನಿ ದೇವೇಗೌಡ ತಿರುಗೇಟು ನೀಡಿದ್ದಾರೆ. ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಪಕ್ಷದ ಮುಂದಿನ ಪ್ರಜ್ವಲ್ ಭವಿಷ್ಯ ಅಂತ ಹೇಳೋಕೆ ಸುಮಲತಾ ಏನು ಜ್ಯೋತಿಷಿಗಳಾ? ಅವರು ಜ್ಯೋತಿಷಿಗಳಾಗಿ ಹೇಳಿದರೆ ತುಂಬಾ ಸಂತೋಷ. ನನಗೆ ಗೊತ್ತಿಲ್ಲ ಸುಮಲತಾ ಜ್ಯೋತಿಷಿಗಳು ಅಂತ ಎಂದು ತಿರುಗೇಟು ನೀಡಿದರು.

    ಸುಮಲತಾ ಬಗ್ಗೆ ನನ್ನ ಬಳಿ ಯಾಕೆ ಮಾತಾಡಿಸ್ತೀರಾ. ದಯಮಾಡಿ ಮಾತಾಡಬೇಡಿ ಎಂದು ಮನವಿ ಮಾಡಿದರು. ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ನಡುವಿನ ಕಿತ್ತಾಟದ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಇದರ ಬಗ್ಗೆ ನಾನೇನು ರಿಯಾಕ್ಟ್ ಮಾಡೋದಿಲ್ಲ. ನನಗೆ ವಿಷಯ ಗೊತ್ತಿದೆ. ನಾನು ಇದರಲ್ಲಿ ಮಧ್ಯೆ ಪ್ರವೇಶ ಮಾಡುವುದಿಲ್ಲ. ಮಂಡ್ಯದಲ್ಲಿ ಏನಾಗುತ್ತೆ ಅಂತ ಮುಂದೆ ಗೊತ್ತಾಗುತ್ತೆ. 2023, 2024 ರಲ್ಲಿ ಕರ್ನಾಟಕ, ಮಂಡ್ಯದ ವಿಷಯ ಏನಾಗುತ್ತೆ ಅಂತ ನಾವು ಇಲ್ಲಿ ಕೂತು ಚರ್ಚೆ ಮಾಡೋದು ಸರಿಯಲ್ಲ ಎಂದರು. ಇದನ್ನೂ ಓದಿ: ನಾನು ಕ್ಷಮೆ ಕೇಳೋದಿಲ್ಲ ಸುಮಲತಾ ಕುತಂತ್ರಿ: ಎಚ್‍ಡಿಕೆ

    ಅಕ್ರಮ ಗಣಿಗಾರಿಕೆ ಬಗ್ಗೆ ಯಡಿಯೂರಪ್ಪ ಸರ್ಕಾರದಲ್ಲಿ ದೊಡ್ಡ ಚರ್ಚೆ ಆಯ್ತು. ಯಡಿಯೂರಪ್ಪ ಅವರು ಕ್ರಮ ತಗೋತೀನಿ ಅಂತ ಹೇಳಿದ್ದರು. ಈಗ ಯಡಿಯೂರಪ್ಪ ಏನ್ ಮಾಡ್ತಾರೋ ನನಗೆ ಗೊತ್ತಿಲ್ಲ. ಕೆ.ಎಸ್.ಆರ್ ಡ್ಯಾಂ ಬಿರುಕು ಬಿಟ್ಟಿದೆ ಅನ್ನೋ ಆರೋಪ ವಿಚಾರಕ್ಕೆ ಮಾತನಾಡಿದ ಅವರು, ಎಲ್ಲಾ ವಿಷಯ ಗೊತ್ತಿದೆ. ಈ ಬಗ್ಗೆ ಚರ್ಚೆ ಯಾಕೆ ಬಿಡಿ ಅಂದರು.

    ಚೆನ್ನಾಗಿ ಕೆಲಸ ಮಾಡಲಿ:
    ಕೇಂದ್ರ ಸಚಿವ ಸಂಪುಟ ಪುನರ್ ರಚನೆ ವಿಚಾರವಾಗಿ ಮಾತನಾಡಿದ ದೇವೇಗೌಡರು, ಕೇಂದ್ರದಲ್ಲಿ ಈಗ ನಮ್ಮ ರಾಜ್ಯದ ಸ್ಥಾನ 4-5 ಆಗಿದೆ. ಇದು ಸಂತೋಷದ ವಿಚಾರ ಎಲ್ಲರೂ ಚೆನ್ನಾಗಿ ಕೆಲಸ ಮಾಡಲಿ. ರಾಜ್ಯಕ್ಕೆ ಹೆಚ್ಚು ಹಣ ತಂದು ಅಭಿವೃದ್ಧಿ ಕೆಲಸ ಮಾಡಿದ್ರೆ ಅವ್ರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

  • ಆಕ್ಸಿಜನ್ ಆಯ್ತು, ಈಗ ಮಂಡ್ಯದಲ್ಲಿ ಶುರುವಾಗಿದೆ ಅಂಬುಲೆನ್ಸ್ ಪಾಲಿಟಿಕ್ಸ್

    ಆಕ್ಸಿಜನ್ ಆಯ್ತು, ಈಗ ಮಂಡ್ಯದಲ್ಲಿ ಶುರುವಾಗಿದೆ ಅಂಬುಲೆನ್ಸ್ ಪಾಲಿಟಿಕ್ಸ್

    – ಫೋಟೋ, ಹೆಸರು ಇದೆ ಅಂತ ಅಂಬುಲೆನ್ಸ್ ಸೀಜ್
    – ತಹಶೀಲ್ದಾರ್, ಶಾಸಕರ ಕ್ರಮಕ್ಕೆ ದಾನಿ ರೇವಣ್ಣ ಆಕ್ರೋಶ

    ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಜನರಿಗೆ ಕೊರೊನಾ ಕಾಲದಲ್ಲಿ ಉಚಿತ ಸೇವೆಗೆಂದು ಸಮಾಜ ಸೇವಕ ಬಿ.ರೇವಣ್ಣ ಅವರು ಮೂರು ಅಂಬುಲೆನ್ಸ್ ಅನ್ನು ನೀಡಿದ್ದರು. ಆದರೆ ಇದೀಗ ಅಂಬುಲೆನ್ಸ್ ಗಳ ಮೇಲೆ ರೇವಣ್ಣ ಅವರ ಭಾವಚಿತ್ರವುಳ್ಳ ಸ್ಟಿಕರ್ ಇದೆ ಎಂದು ಪಾಂಡವಪುರ ತಹಶೀಲ್ದಾರ್ ಪ್ರಮೋದ್ ಪಾಟೀಲ್ ಅವರು ಸೀಜ್ ಮಾಡಿದ್ದಾರೆ.

    ಸದ್ಯ ಮಂಡ್ಯ ಜಿಲ್ಲೆಯಲ್ಲಿ ಅಂಬುಲೆನ್ಸ್ ಸಮಸ್ಯೆ ಎದುರಾಗಿದ್ದು, ಇದನ್ನು ನೀಗಿಸಲು ರೇವಣ್ಣ ಅವರು ಪಾಂಡವಪುರ ತಾಲೂಕಿನ ವ್ಯಾಪ್ತಿಯ ಜನರಿಗೆ ಉಚಿತವಾಗಿ ಅಂಬುಲೆನ್ಸ್ ಸೇವೆ ನೀಡಲು ಕಳೆದ ಐದು ದಿನಗಳ ಹಿಂದೆ ಮೂರು ಅಂಬುಲೆನ್ಸ್ ಗಳಿಗೆ ಚಾಲನೆ ನೀಡಿದ್ದರು. ಈ ವೇಳೆ ಪಾಂಡವಪುರ ತಹಶೀಲ್ದಾರ್ ಪ್ರಮೋದ್ ಪಾಟೀಲ್ ಅವರೇ ಮೂರು ಅಂಬುಲೆನ್ಸ್ ಗಳಿಗೆ ಚಾಲನೆ ನೀಡಿದ್ದರು. ಇದೀಗ ತಹಶೀಲ್ದಾರ್ ಅವರೇ ಈ ಅಂಬುಲೆನ್ಸ್ ಗಳ ಮೇಲೆ ಬಿ.ರೇವಣ್ಣ ಅವರ ಭಾವಚಿತ್ರ ಮತ್ತು ಅವರ ಹೆಸರು ಇದೆ ಎಂದು ರೋಗಿಯನ್ನು ಕರೆದುಕೊಂಡು ಹೋಗುತ್ತಿದ್ದ ಅಂಬುಲೆನ್ಸ್ ಗಳನ್ನು ಸೀಜ್ ಮಾಡಿದ್ದಾರೆ. ಇದನ್ನೂ ಓದಿ: `ಆಮ್ಲಜನಕ’ ಸರ್ಕಾರವೇ ಸುಳ್ಳಿನ ಮಂಟಪದಿಂದ ಕೆಳಗಿಳಿಸಿ ನಡೆಸೆನ್ನನು..!

    ಪ್ರಮೋದ್ ಪಾಟೀಲ್ ಅವರು ಮೇಲುಕೋಟೆ ಕ್ಷೇತ್ರದ ಶಾಸಕ ಪುಟ್ಟರಾಜು ಅವರ ಒತ್ತಡದಿಂದ ಈ ಕೆಲಸವನ್ನು ಮಾಡಿದ್ದಾರೆ. ಪುಟ್ಟರಾಜು ಅವರು ನನ್ನ ಏಳಿಗೆಯನ್ನು ಸಹಿಸಲಾಗದೇ ನನ್ನ ಅಂಬುಲೆನ್ಸ್ ಗಳನ್ನು ಸೀಜ್ ಮಾಡಲು ತಹಶೀಲ್ದಾರ್ ಮೇಲೆ ಒತ್ತಡ ಹಾಕಿದ್ದಾರೆ ಎಂದು ಸಮಾಜ ಸೇವಕ ರೇವಣ್ಣ ಪುಟ್ಟರಾಜು ಅವರ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಆಮ್ಲಜನಕ ಪೂರೈಸುವುದಕ್ಕೆ ಸರ್ಕಾರ ಏದುಸಿರು ಬಿಡುತ್ತಿದೆ: ಎಚ್‍ಡಿಕೆ

    ನಾನು ಮೂರು ಅಂಬ್ಯುಲೆನ್ಸ್ ನೀಡಿದ್ದರೆ ಪುಟ್ಟರಾಜು ಅವರು 30 ಅಂಬುಲೆನ್ಸ್ ನೀಡಿ ಸಮಾಜ ಸೇವೆ ಮಾಡಬೇಕು. ಅದನ್ನು ಬಿಟ್ಟು ಫೋಟೋ ಇದೆ ಹೆಸರು ಇದೆ ಎಂಬ ಕಾರಣಗಳನ್ನು ಹೇಳಿ ಅಧಿಕಾರಿಗಳಿಗೆ ಒತ್ತಡ ಹಾಕಿ ಸೀಜ್ ಮಾಡುವ ಕೆಲಸ ಮಾಡಬಾರದು. ರಾಜ್ಯದ ಹಲವು ಜಿಲ್ಲೆಯಲ್ಲಿ ಮೂರು ಪಕ್ಷದ ಮುಖಂಡರು ಅವರು ನೀಡಿರುವ ಅಂಬುಲೆನ್ಸ್ ಗಳ ಮೇಲೆ ಅವರವರ ಭಾವಚಿತ್ರ ಹಾಗೂ ಹೆಸರುಗಳನ್ನು ಹಾಕಿಸಿಕೊಂಡಿದ್ದಾರೆ. ಅಲ್ಲಿ ಅವುಗಳನ್ನು ಸೀಜ್ ಮಾಡಿಲ್ಲ. ಆದರೆ ಪಾಂಡವಪುರದಲ್ಲಿ ಮಾತ್ರ ಹೊಸ ಕಾನೂನು ಇದೆ. ಇದು ರಾಜಕೀಯ ದ್ವೇಷಕ್ಕಾಗಿ ಪುಟ್ಟರಾಜು ಅವರು ಈ ರೀತಿಯ ಕೆಲಸ ಮಾಡಿರುವುದು ಸರಿಯಲ್ಲಿ ಎಂದು ಬಿ.ರೇವಣ್ಣ ಅವರು ಆಕ್ರೋಶ ಹೊರಹಾಕಿದ್ದಾರೆ.

  • ಭದ್ರಕೋಟೆ ಹಾಸನದಲ್ಲಿ ಜೆಡಿಎಸ್‌ ಕಳಚಿ ಬಿದ್ದಿದೆ – ಪ್ರೀತಂಗೌಡ

    ಭದ್ರಕೋಟೆ ಹಾಸನದಲ್ಲಿ ಜೆಡಿಎಸ್‌ ಕಳಚಿ ಬಿದ್ದಿದೆ – ಪ್ರೀತಂಗೌಡ

    ಹಾಸನ : ಸರ್ವಾಧಿಕಾರಿ ಧೋರಣೆಯಿಂದಾಗಿ ಹಾಸನ ಜೆಡಿಎಸ್ ಭದ್ರಕೋಟೆ ಎಂಬ ಬೇಲಿ ಕಳಚಿ ಬಿದ್ದಿದೆ ಎಂದು ಶಾಸಕ ಪ್ರೀತಂಗೌಡ ಪರೋಕ್ಷವಾಗಿ ಹೆಚ್‍ಡಿ ರೇವಣ್ಣ ವಿರುದ್ಧ ಠೀಕಾಪ್ರಹಾರ ನಡೆಸಿದ್ದಾರೆ.

    ಹಾಸನದಲ್ಲಿ ಮಾತನಾಡಿದ ಅವರು, ಮತದಾರರ ನೀರಿಕ್ಷೆಗೆ ತಕ್ಕಂತೆ ಕೆಲಸ ಮಾಡಿದ್ದರಿಂದ ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ, ಸಾಲಗಾಮೆ ಹೋಬಳಿಯ ಐದು ಪಂಚಾಯ್ತಿಗಳಲ್ಲಿ ಪ್ರತಿಸ್ಪರ್ಧಿ ಇಲ್ಲದೆ ಬಿಜೆಪಿ ಅಧಿಕಾರ ಹಿಡಿದಿದೆ. ಮೂವತ್ತು-ನಲವತ್ತು ವರ್ಷಗಳಿಂದ ಯಾವ ಪಕ್ಷಕ್ಕೂ ಸಿಗದ ಅಧಿಕಾರ ಈಗ ಬಿಜೆಪಿ ಪಕ್ಷಕ್ಕೆ ದೊರೆತಿದೆ ಎಂದು ಹೇಳಿದರು.

    ಮತದಾರರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ್ದರಿಂದ ಜಯ ಸಿಕ್ಕಿದೆ. ಐದು ಪಂಚಾಯತಿಗಳಲ್ಲಿ ಒಂದು ಪಂಚಾಯತಿಯಲ್ಲೂ ಪ್ರತಿಸ್ಪರ್ಧಿಯೇ ಇಲ್ಲ, ಜೆಡಿಎಸ್ ಒಬ್ಬರು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿಲ್ಲ. ನಾಮಪತ್ರ ಸಲ್ಲಿಸದ ಪರಿಸ್ಥಿತಿ ಜೆಡಿಎಸ್‍ಗೆ ಬಂದಿದೆ. ಸಾಲಗಾಮೆ ಹೋಬಳಿಯ ಎಲ್ಲಾ ಮತದಾರರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

    ಜಿಲ್ಲೆಯ ಹೆಡ್ ಕ್ವಾರ್ಟರ್ ಹಾಸನದಲ್ಲಿ ಬಿಜೆಪಿ ಗೆದ್ದಿರುವುದು ಆಕಸ್ಮಿಕ, ಪ್ರೀತಂಗೌಡ ಆಕಸ್ಮಿಕ ಶಾಸಕ, ಇನ್ನು ಕೂಸು ಎಂದು ಮಾಜಿ ಸಚಿವ ರೇವಣ್ಣ ಜರೆದಿದ್ದರು. ಸಾಲಗಾಮೆ ಜನತೆ ಇದಕ್ಕೆ ತಕ್ಕ ಉತ್ತರ ಕೊಟ್ಟಿದ್ದಾರೆ. ಹಾಸನ ಜೆಡಿಎಸ್ ಭದ್ರಕೋಟೆ ಎಂದು ಬೇಲಿ ಹಾಕಿಕೊಂಡಿದ್ದರು. ಅದು ಈಗ ಕಳಚಿ ಬಿದ್ದಿದೆ. ಜೆಡಿಎಸ್ ಪಕ್ಷದವರು ಸರ್ವಾಧಿಕಾರಿ ಧೋರಣೆ ತೋರಿದ್ದರು. ನಾವು ಇದೇ ರೀತಿ ಮಾಡಿದರೆ ಮುಂದೆ ನಮಗೂ ಅದೇ ಪರಿಸ್ಥಿತಿ ಬರುತ್ತದೆ. ಹಾಗಾಗಿ ಜನರ ಅಪೇಕ್ಷೆಗೆ ತಕ್ಕಂತೆ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

  • ಕಾಲೇಜು ಕಟ್ಟುವ ಮುನ್ನ ರಸ್ತೆ ಮಾಡಬೇಕಿತ್ತು – ರೇವಣ್ಣ ವಿರುದ್ಧ ಪ್ರೀತಂ ಗೌಡ ಕಿಡಿ

    ಕಾಲೇಜು ಕಟ್ಟುವ ಮುನ್ನ ರಸ್ತೆ ಮಾಡಬೇಕಿತ್ತು – ರೇವಣ್ಣ ವಿರುದ್ಧ ಪ್ರೀತಂ ಗೌಡ ಕಿಡಿ

    ಹಾಸನ: ಇಷ್ಟು ದೊಡ್ಡ ಕಾಲೇಜು ಕಟ್ಟುವ ಮೊದಲು ರಸ್ತೆ ನಿರ್ಮಾಣ ಮಾಡಬೇಕಿತ್ತು ಇದನ್ನು ಹೊರತುಪಡಿಸಿ ಅವರು ನಾವು ಹೆಲಿಕಾಪ್ಟರ್ ನಲ್ಲಿ ಬರುವುದಲ್ಲವೇ ಎಂಬ ರೀತಿ ಪ್ಲಾನ್ ಮಾಡಿದ್ದಾರೆ. ಹಾಗಾಗಿ ಇಂತಹದೊಂದು ಸಮಸ್ಯೆಯಾಗಿದೆ ಎಂದು ಶಾಸಕ ಪ್ರೀತಂ ಜೆ. ಗೌಡ ಮತ್ತೊಮ್ಮೆ ರೇವಣ್ಣ ವಿರುದ್ಧ ಪರೋಕ್ಷವಾಗಿ ಗುಡುಗಿದ್ದಾರೆ.

     

    ಹಾಸನದ ಪಶುಸಂಗೋಪನಾ ಮತ್ತು ಸಂಶೋಧನಾ ಸಂಸ್ಥೆಗೆ ಇಂದು ಸಚಿವ ಪ್ರಭು ಚೌಹ್ಹಾಣ್ ಜೊತೆಯಲ್ಲಿ ಪ್ರೀತಂ ಗೌಡ ಭೇಟಿ ನೀಡಿದ ವೇಳೆ ಕಾಲೇಜು ಆಡಳಿತ ಮಂಡಳಿಯವರು, ರಿಂಗ್ ರಸ್ತೆಯಿಂದ ಕಾಲೇಜಿಗೆ ಬರಲು ಸರಿಯಾದ ರಸ್ತೆಯಿಲ್ಲ. ದಯಮಾಡಿ ಕಾಲೇಜಿಗೊಂದು ಸೂಕ್ತ ರಸ್ತೆ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಮನವಿ ಮಾಡಿಕೊಂಡರು.

    ಈ ಹಿಂದೆ ರಸ್ತೆಗಾಗಿ 5-10 ಕೋಟಿ ಖರ್ಚಾಗುತ್ತಿತ್ತು. ಆದರೆ ಈಗ 20-30ಕೋಟಿ ಖರ್ಚಾಗುತ್ತೆ ಎಂದು ಸಚಿವರಿಗೆ ಮನವಿ ಮಾಡಿದಾಗ ಸ್ಥಳೀಯ ಶಾಸಕರ ಗಮನಕ್ಕೆ ತಂದು ಕೂಡಲೇ ಸಮಸ್ಯೆಯನ್ನು ಬಗೆಹರಿಸುವುದಾಗಿ ಸಚಿವರು ತಿಳಿಸಿದರು. ಈ ವೇಳೆ ಮಾತಿನ ಮಧ್ಯೆ ಪ್ರವೇಶಿಸಿ ಮಾತನಾಡಿದ ಪ್ರೀತಂ ಗೌಡ, ನಾನು ಇಷ್ಟು ದೊಡ್ಡ ಕಾಲೇಜು ನಿರ್ಮಾಣ ಮಾಡುತ್ತಿರುವಾಗ ಮೊದಲು ರಸ್ತೆ ಮಾಡಬೇಕು. ನಂತರ ಕಾಲೇಜು ಮಾಡಬೇಕು ಎಂಬ ವಿಚಾರ ಈ ಹಿಂದೆ ಕಾಮಗಾರಿ ಮಾಡಿದವರಿಗೆ ಗೊತ್ತಿರಬೇಕಿತ್ತು. ಆದರೆ ಅವರು ನಾವು ಹೆಲಿಕಾಪ್ಟರ್ ನಲ್ಲಿ ಬರುವುದಲ್ಲವೇ ಎಂಬ ಯೋಚನೆಯಿಂದ ಪ್ಲಾನ್ ಮಾಡಿದ್ದಾರೆ. ಹಾಗಾಗಿ ಕಾಲೇಜಿಗೆ ರಸ್ತೆ ಸಮಸ್ಯೆಯಾಗಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಿರುದ್ಧ ಪರೋಕ್ಷವಾಗಿ ಮಾತಿನ ಚಾಟಿ ಬೀಸಿದರು.

    2006-07ರಲ್ಲಿದ್ದ 20-20 ಸರ್ಕಾರದಲ್ಲಿ ಹಾಸನಕ್ಕೆ ಬೃಹತ್ ಕಟ್ಟಡವನ್ನು ಹೊಂದಿರು ಪಶುವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಲಾಗಿತ್ತು. ಆ ಬಳಿಕ ಅಲ್ಲಿಂದ ಇಲ್ಲಿಯ ತನಕ ರಸ್ತೆಯ ವಿಚಾರವಾಗಿ ಸ್ಥಳೀಯರು ನ್ಯಾಯಾಲಯದ ಮೆಟ್ಟಿಲೇರಿದ್ದು, ಕಾಲೇಜಿನ ರಸ್ತೆ ಸಂಪರ್ಕ ಇನ್ನು ಕಗ್ಗಂಟಾಗಿಯೇ ಉಳಿದಿದೆ.

  • ನನ್ನ ಜೀವಿತಾವಧಿಯೊಳಗೆ ಹಾಸನದಲ್ಲಿ ವಿಮಾನ ನಿಲ್ದಾಣ ಆಗಲಿ: ಹೆಚ್.ಡಿ.ದೇವೇಗೌಡರು

    ನನ್ನ ಜೀವಿತಾವಧಿಯೊಳಗೆ ಹಾಸನದಲ್ಲಿ ವಿಮಾನ ನಿಲ್ದಾಣ ಆಗಲಿ: ಹೆಚ್.ಡಿ.ದೇವೇಗೌಡರು

    – ಹಣೆಬರಹ ಚೆನ್ನಾಗಿದ್ರೆ ಬಿಎಸ್‍ವೈ ಮತ್ತೆ ಸಿಎಂ ಆಗಬಹುದು

    ಹಾಸನ: ಯಡಿಯೂರಪ್ಪ ನಾಲ್ಕು ಸಲ ಮುಖ್ಯಮಂತ್ರಿಯಾದರೂ ಹಾಸನ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. 2023ರ ಬಳಿಕ ಯಾರನ್ನು ಸಿಎಂ ಮಾಡ್ತಾರೆ ಅನ್ನೋದು ಬಿಜೆಪಿಗೆ ಬಿಟ್ಟ ವಿಚಾರ. ಅವರಿಗೆ ಹಣೆಬರಹ ಇದ್ದರೆ ಇನ್ನೊಂದು ಬಾರಿ ಮುಖ್ಯಮಂತ್ರಿ ಆಗಲಿ ಎಂದು ಯಡಿಯೂರಪ್ಪ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.

    ಹಾಸನದಲ್ಲಿ ಮಾತನಾಡಿದ ದೇವೇಗೌಡರು, ಶಿವಮೊಗ್ಗ ಅಭಿವೃದ್ಧಿ ಮಾಡಿರುವ ಕುರಿತು ನನಗೆ ಅಸೂಯೆ ಇಲ್ಲ. ನನ್ನ ಜಿಲ್ಲೆಯನ್ನು ಸ್ವಲ್ಪ ಗಮನಿಸಿ ಎಂದು ನಾಳೆ ಕೃಷ್ಣಾ ನಿವಾಸದಲ್ಲಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕೇಳುತ್ತೇನೆ. 2023ರ ವರೆಗೆ ಅವರೇ ಸಿಎಂ ಆಗಿರುತ್ತಾರೆ, ಆಗಲಿ ಎಂದು ಮೊದಲೇ ಹೇಳಿದ್ದೇನೆ. ನಮ್ಮಿಂದ ಇದಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಸ್ಥಳೀಯ ಶಾಸಕರ ಯೋಜನೆಗೆ ನಾನು ವಿರೋಧಪಡಿಸುವುದಿಲ್ಲ. ಆದರೆ ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ಅಡ್ಡಗಾಲಾಗಿರುವುದು ಸರಿಯಲ್ಲ ಎಂದರು.

    ನಾವು ಅಧಿಕಾರದಲ್ಲಿದ್ದಾಗ ಬೆಂಗಳೂರು ಸಿಟಿ ಅಷ್ಟೇ ಅಲ್ಲ ಎಲ್ಲಾ ಸಿಟಿಯನ್ನು ಸಮಾನಾಂತರವಾಗಿ ನೋಡಿದ್ದೇವೆ. ಹಾಸನ ವಿಮಾನ ನಿಲ್ದಾಣ ಕಾಮಗಾರಿ ಅಭಿವೃದ್ಧಿ ಮಾಡಲು ಹೊರಟು ಅದು ಹಾಗೇ ಉಳಿದಿದೆ. ಅದನ್ನು ಕೂಡ ಮುಂದಿನ ದಿನಗಳಲ್ಲಿ ಕಾಮಗಾರಿ ಮಾಡಲು ಅನುವು ಮಾಡಿಕೊಡಬೇಕು ಜೊತೆಗೆ ಬೇಲೂರಿನಿಂದ ಬಿಳಿಕೆರೆವರೆಗೆ ನಾಲ್ಕು ಪಥದ ರಸ್ತೆ ಕಾಮಗಾರಿ ಸೇರಿದಂತೆ ಕುಮಾರಸ್ವಾಮಿ-ಯಡಿಯೂರಪ್ಪ ಸರ್ಕಾರ ಇದ್ದಾಗ ಹಾಸನದಲ್ಲಿ ಐಐಟಿ ಮಾಡಲು ನಿರ್ಧರಿಸಲಾಗಿತ್ತು. ಆದರೆ ಅದು ಕೂಡ ಈಗ ಮರೀಚಿಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಈ ದೇಶದ ಪ್ರಧಾನಿಗಳು ಬಡವರೆಲ್ಲ ವಿಮಾನದಲ್ಲಿ ಓಡಾಡುವ ಪರಿಸ್ಥಿತಿಯನ್ನು ನಿರ್ಮಿಸುವುದಾಗಿ ತಿಳಿಸಿದ್ದರು. ಈಗಾಗಲೇ ಹಾಸನ ವಿಮಾನ ನಿಲ್ದಾಣಕ್ಕೆ 550 ಎಕರೆ ಭೂಮಿಯನ್ನು ವಶಕ್ಕೆ ಕೊಡಲಾಗಿದೆ. ಯಡಿಯೂರಪ್ಪನವರಿಗೆ ಗೌರವದಿಂದ ಕೇಳಿಕೊಳ್ಳುತ್ತೇನೆ, ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಹಾಸನದಿಂದ ರಫ್ತು ಮಾಡುವ ಸಲುವಾಗಿಯೇ ಹೆಚ್ಚು ಒತ್ತುಕೊಟ್ಟು ಇಲ್ಲೊಂದು ವಿಮಾನನಿಲ್ದಾಣ ಆಗಬೇಕೆಂಬುದು ಆಸೆಯಿತ್ತು. ವೈಯಕ್ತಿಕವಾಗಿ ಏನು ಇಲ್ಲ ಆದರೆ ಜಿಲ್ಲೆಯ ಅಭಿವೃದ್ಧಿಗೆ ನಿಮ್ಮ ಕಾಲದಲ್ಲಿ ಗಮನ ಕೊಡಿ ಎಂದು ಮನವಿ ಮಾಡಿಕೊಂಡರು.

    ನನಗೆ ಇನ್ನೂ 4 ತಿಂಗಳು ಕಳೆದರೆ 88 ವರ್ಷ ಮುಗಿಯುತ್ತದೆ. ಯಡಿಯೂರಪ್ಪ ಅವರ ಅಧಿಕಾರ ಅವಧಿ ಮುಗಿಯುವುದರೊಳಗೆ ನನಗೆ 90 ವರ್ಷ ಆಗಲಿದೆ. ಆಗ ನನಗೆ ನಡೆಯಲು ಆಗುತ್ತದೊ ಗೊತ್ತಿಲ್ಲ. ಆದರೆ ನನ್ನ ಜೀವಿತ ಅವಧಿಯ ಕೊನೆಯ ಒಳಗೆ ಯಡಿಯೂರಪ್ಪನವರೇ, ವಿಮಾನನಿಲ್ದಾಣ ಓಪನ್ ಮಾಡಿ ಕೋಡಿ ಎಂದು ವಿನಂತಿಸಿದರು.

    ಇದುವರೆಗೆ ನನ್ನ ಜಿಲ್ಲೆಗೆ ಅವರು ಏನು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುದನ್ನು ಅವರೇ ಯೋಚನೆ ಮಾಡಲಿ. ನಾನು ಈ ಎಲ್ಲಾ ವಿಷಯ ಚರ್ಚೆ ಮಾಡಲು ಕೃಷ್ಣಗೆ ಹೋಗಿ ಮನವಿ ಮಾಡಿಕೊಳ್ಳುತ್ತೇನೆ. ನಾನು ಸೇಡಿನಿಂದ ಯಾವುದೇ ವಿಚಾರವನ್ನು ಮಾತನಾಡುವುದಿಲ್ಲ ಅಧಿಕಾರದಲ್ಲಿದ್ದವರನ್ನು ಕೇಳುವುದು ನಮ್ಮ ಧರ್ಮ ಈ ಬಗ್ಗೆ ಕುಮಾರಸ್ವಾಮಿ, ರೇವಣ್ಣ ಅವರೆಲ್ಲರೂ ಪತ್ರ ಬರೆದಿದ್ದಾರೆ ಎಂದರು.