Tag: ರೇವಣ್ಣ

  • ಏನೂ ತಪ್ಪು ಮಾಡ್ದೆ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ರೇವಣ್ಣ ಕಣ್ಣೀರಿಟ್ರು: ಜಿ.ಟಿ ದೇವೇಗೌಡ

    ಏನೂ ತಪ್ಪು ಮಾಡ್ದೆ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ರೇವಣ್ಣ ಕಣ್ಣೀರಿಟ್ರು: ಜಿ.ಟಿ ದೇವೇಗೌಡ

    – ರೇವಣ್ಣಗೆ ಈಗಲೂ ಅಭಿವೃದ್ಧಿಯದ್ದೇ ಚಿಂತೆ

    ಬೆಂಗಳೂರು: ಏನೂ ತಪ್ಪು ಮಾಡದೇ ಪ್ರಕರಣದಲ್ಲಿ ಸಿಲುಕಿಸಿ, ಜೈಲಿಗೆ ಹಾಕಿದ್ದಾರೆ ಎಂಬ ನೋವಿನಲ್ಲಿ ರೇವಣ್ಣ (H.D Revanna) ಹತ್ತು ನಿಮಿಷಗಳ ಕಾಲ ಕಣ್ಣೀರು ಹಾಕಿದರು ಎಂದು ಜೆಡಿಎಸ್ ಮುಖಂಡ ಜಿ.ಟಿ ದೇವೇಗೌಡ (G.T Devegowda) ಅವರು ಹೇಳಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana Agrahara) ರೇವಣ್ಣ ಅವರನ್ನು ಬೇಟಿಯಾದ ಬಳಿಕ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ.

    ರೇವಣ್ಣ ಜೈಲಿಗೆ ಹೋದ ದಿನದಿಂದ ಅವರ ಭೇಟಿಗೆ ಬಂದಿರಲಿಲ್ಲ. ಇಂದು (ಸೋಮವಾರ) ಅವರನ್ನು ಭೇಟಿಯಾಗಿದ್ದೇನೆ. ಅವರು ಆರಾಮವಾಗಿ ಕೂತಿದ್ದು, ಜೊತೆಯಲ್ಲಿ ಚಹಾ ಕುಡಿದು, ಹಳೆಯ ವಿಚಾರಗಳನ್ನು ಮೆಲುಕು ಹಾಕಿದ್ರು. ಅವರಿಗೆ ಈಗಲೂ ಅಭಿವೃದ್ಧಿ ಕಾರ್ಯಕ್ರಮಗಳದ್ದೇ ಚಿಂತೆ. ಅಲ್ಲದೇ ನಾನೇನೂ ತಪ್ಪು ಮಾಡಿದ್ದೇನೆ ಎಂಬ ಚಿಂತೆಯಲ್ಲಿದ್ದಾರೆ ಎಂದರು.

    ನನ್ನ ಬಳಿ ಅವರು ಮಾತನಾಡಿ, ಸಂತ್ರಸ್ತ ಮಹಿಳೆ ಜೊತೆ ಮಾತನಾಡಿ ಆರು ವರ್ಷಗಳಾಗಿವೆ. ನನ್ನನ್ನು ಈ ಪ್ರಕರಣದಲ್ಲಿ ಸೇರಿಸಿ ಹೀಗೆ ಮಾಡಿದ್ದಾರೆ. ನಾನು ತಪ್ಪು ಮಾಡಿದ್ರೆ ಇನ್ನೂ ಶಿಕ್ಷೆ ಕೊಡಲಿ ಅನುಭವಿಸಬಹುದಿತ್ತು ಎಂದು ರೇವಣ್ಣ ಭಾವುಕರಾದರು ಎಂದು ಅವರು ಹೇಳಿದ್ದಾರೆ.

    ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಿದ ಅವರು, ರಾಜಕೀಯ ಹೇಗೆ ನಡೆಯುತ್ತಿದೆ? ನಾವು ಎಲ್ಲೆಲ್ಲಿ ಎಡವಿದ್ದೇವೆ? ನಮ್ಮ ಸರ್ಕಾರದ ಇದ್ದಾಗ ಕಾರ್ಯಕರ್ತರಿಗೆ ಏನೂ ಮಾಡಲು ಆಗಲಿಲ್ಲ. ಅಲ್ಪಾವಧಿ ಅಧಿಕಾರ ಬಂತು. ಅಧಿಕಾರ ಅನುಭವಿಸಿದವರು ಹೊರಟು ಹೋದ್ರು. ಮಂತ್ರಿಯಾಗಿದ್ದವರು ಹೊರಟು ಹೋದ್ರು. ನೀವು ಗೌಡರಿಗೋಸ್ಕರ ಪಕ್ಷದಲ್ಲಿ ಉಳಿದು ಗೌಡರಿಗೆ ನೆಮ್ಮದಿ ಕೊಟ್ಟಿದ್ದೀರಿ ಎಂದು ವಿಚಾರ ಹಂಚಿಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣ (Prajwal Revanna) ವಿಚಾರವಾಗಿ ಯಾವುದೇ ಚರ್ಚೆ ಮಾಡಲಿಲ್ಲ. ರೇವಣ್ಣ ಕೂಡ ಪ್ರಜ್ವಲ್ ಬಗ್ಗೆ ಏನೂ ಹೇಳಲಿಲ್ಲ ಎಂದರು.

    ನವೀನ್ ಗೌಡ ಮತ್ತು ಕಾರ್ತಿಕ್ ಗೌಡ ಇನ್ನೂ ಬಂಧನವಾಗದ ಬಗ್ಗೆ, ಎಸ್‍ಐಟಿ ಅಧಿಕಾರಿಗಳು ತನಿಖೆ ಮಾಡ್ತಾರೆ. ನಮಗೆ ಅವರ ಮೇಲೆ ನಂಬಿಕೆ ಇದೆ. ಸಿಬಿಐಗೆ ಕೊಡುವ ಅಗತ್ಯವಿಲ್ಲ ಎಂದು ಸಿಎಂ ಹೇಳಿದ್ದಾರೆ. ನ್ಯಾಯಯುತವಾಗಿ ತನಿಖೆ ಮಾಡ್ತಾರೆ ಎಂದು ಪದೇ ಪದೇ ಸಿಎಂ ಹೇಳ್ತಿದ್ದಾರೆ. ಪೆನ್‍ಡ್ರೈವ್ ಯಾರು ರಿಲೀಸ್ ಮಾಡಿದ್ರು? ಯಾರೂ ತಪ್ಪು ಮಾಡಿದ್ದಾರೆ ಎಲ್ಲವನ್ನೂ ತನಿಖೆ ಮಾಡಿ ಕಂಡುಹಿಡಿದು ಸಿಎಂ ಇತಿಹಾಸ ಸೃಷ್ಟಿಸಲಿ ಎಂದು ಅವರು ಹೇಳಿದ್ದಾರೆ.

    ಅರಕಲಗೂಡು ಶಾಸಕ ಎ.ಮಂಜು ಅವರಿಗೂ ಪ್ರಕರಣ ಸುತ್ತಿಕೊಂಡಿದೆ. ಪೆನ್‍ಡ್ರೈವ್ ರಿಲೀಸ್ ಮಾಡಿದವರ ಬಗ್ಗೆ ತನಿಖೆ ಪ್ರಾರಂಭವಾಗಿದೆ. ಈ ಬಗ್ಗೆ ತನಿಖೆ ಮಾಡಿ ಪತ್ತೆ ಮಾಡುತ್ತಾರೆಂದು ಸಿಎಂ ಬೆನ್ನು ತಟ್ಟಿಕೊಂಡಿದ್ದಾರೆ. ನಮಗೂ ಕೂಡ ನಂಬಿಕೆ ಬಂದಿದೆ. ಎಲ್ಲರ ಕೈವಾಡ ಹೊರಗೆ ಬರಲಿದೆ. ಸ್ವಲ್ಪ ದಿನ ಕಾಯಬೇಕು ಎಂದು ಅವರು ಹೇಳಿದ್ದಾರೆ.

    ರೇವಣ್ಣ ಜಾಮೀನಿನ ಅರ್ಜಿ ವಿಚಾರಣೆ ನಡೆಯುತ್ತಿದೆ. ಇಂದು ಅವರಿಗೆ ಜಾಮೀನು ಸಿಗುವ ನಂಬಿಕೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ಅಪರಾಧ ನಡೆದಿಲ್ಲ ಎಂದರೆ ನಿರೀಕ್ಷಣಾ ಜಾಮೀನು ಅರ್ಜಿ ಏಕೆ ತಿರಸ್ಕಾರವಾಯ್ತು: ಸಿಎಂ ಪ್ರಶ್ನೆ

    ಅಪರಾಧ ನಡೆದಿಲ್ಲ ಎಂದರೆ ನಿರೀಕ್ಷಣಾ ಜಾಮೀನು ಅರ್ಜಿ ಏಕೆ ತಿರಸ್ಕಾರವಾಯ್ತು: ಸಿಎಂ ಪ್ರಶ್ನೆ

    ಮೈಸೂರು: ಏನು ಕೇಸ್ ಇಲ್ಲ ಎಂದರೆ ರೇವಣ್ಣ (H.D Revanna) ಯಾಕೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ರು? ಅಪರಾಧ ನಡೆದಿಲ್ಲ ಎಂದರೆ ಯಾಕೆ ಆ ಅರ್ಜಿ ತಿರಸ್ಕಾರವಾಗಿದೆ? ಇದರಲ್ಲಿ ರಾಜಕೀಯ ಎಲ್ಲಿ ಬಂತು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಪ್ರಶ್ನಿಸಿದ್ದಾರೆ.

    ಮೈಸೂರಿನಲ್ಲಿ (Mysuru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ರೇವಣ್ಣ ಬಂಧನ ರಾಜಕೀಯ ಷ್ಯಡ್ಯಂತ್ರ ಎಂಬ ಆರೋಪಕ್ಕೆ ಅವರು ತಿರುಗೇಟು ಕೊಟ್ಟಿದ್ದಾರೆ. ಈ ವೇಳೆ, ಪ್ರಜ್ವಲ್ ರೇವಣ್ಣ ಪೆನ್‍ಡ್ರೈವ್ ಪ್ರಕರಣವನ್ನು (Prajwal Revanna Pendrive case) ಎಸ್‍ಐಟಿ (SIT) ತನಿಖೆ ಮಾಡುತ್ತಿದೆ. ನಮ್ಮ ಪೊಲಿಸರ ಬಗ್ಗೆ ನಂಬಿಕೆ ಇದೆ. ಈ ಪ್ರಕರಣದಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ಮಾಡಿ ವರದಿ ಕೊಡುತ್ತಾರೆ ಎಂದರು. ಇದನ್ನೂ ಓದಿ: ಪ್ರವೀಣ್ ಹತ್ಯೆಗೈದ ಎಲ್ಲರಿಗೂ ಮರಣ ದಂಡನೆ ಆಗಬೇಕು: ಪತ್ನಿ ಆಗ್ರಹ

    ಬಿಜೆಪಿ ಹಾಗೂ ಜೆಡಿಎಸ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಹೇಳುತ್ತಿವೆ. ಅವರ ಆಡಳಿತದಲ್ಲಿ ಒಂದೇ ಒಂದು ಕೇಸ್‍ನ್ನು ಸಿಬಿಐಗೆ ಕೊಡಲಿಲ್ಲ. ಬಿಜೆಪಿಯವರು ಸಿಬಿಐನ್ನು ಕರಪ್ಷನ್ ಬ್ಯೂರೋ ಆಫ್ ಇನ್ವೇಸ್ಟಿಗೇಶನ್ ಎನ್ನುತ್ತಿದ್ದರು. ಇನ್ನೂ ದೇವೇಗೌಡರು ಚೋರ್ ಬಚಾವ್ ಸಂಸ್ಥೆ ಎಂದಿದ್ದರು. ಈಗ ನೋಡಿದ್ರೆ ಸಿಬಿಐಗೆ ಕೊಡಿ ಎನ್ನುತ್ತಿದ್ದಾರೆ. ಇದರ ಅರ್ಥ ಏನು ಎಂದು ಅವರು ಪ್ರಶ್ನಿಸಿದ್ದಾರೆ.

    ಸರಿಯಾದ ದಾರಿಯಲ್ಲಿ ತನಿಖೆ ನಡೆಯುತ್ತದೆ ಎಂಬ ನಂಬಿಕೆ ನನಗಿದೆ. ನಾನು ಎಂದೂ ಪೊಲೀಸರಿಗೆ ಕಾನೂನಿನ ವಿರುದ್ಧವಾಗಿ ತನಿಖೆ ಮಾಡಿ ಎಂದು ಹೇಳುವುದಿಲ್ಲ. ಎಸ್‍ಐಟಿ ಮೇಲೆ ನಂಬಿಕೆ ಇಡಬೇಕು. ಈ ಹಿಂದೆ ಸಿಬಿಐಗೆ ನಾವೇ ಲಾಟರಿ ಕೇಸ್, ಜಾರ್ಜ್ ಕೇಸ್, ಹಾಗೂ ಡಿ.ಕೆ ರವಿ ಕೇಸ್ ಕೊಟ್ಟಿದ್ದೇವು. ಆ ಪ್ರಕರಣದಲ್ಲಿ ಯಾರಿಗಾದರೂ ಶಿಕ್ಷೆಯಾಗಿದೆಯಾ? ಹಾಗೆಂದು ನನಗೆ ಸಿಬಿಐ ಮೇಲೆ ನಂಬಿಕೆ ಇಲ್ಲ ಎಂಬ ಅರ್ಥ ಅಲ್ಲ ಎಂದರು. ಇದನ್ನೂ ಓದಿ: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಅತ್ಯಾಚಾರ ಕೇಸ್!

  • ಪ್ರಜ್ವಲ್ ರೇವಣ್ಣ ಅರೆಸ್ಟ್ ಆಗಲೇಬೇಕು: ಜೋಶಿ

    ಪ್ರಜ್ವಲ್ ರೇವಣ್ಣ ಅರೆಸ್ಟ್ ಆಗಲೇಬೇಕು: ಜೋಶಿ

    ಹುಬ್ಬಳ್ಳಿ: ವೀಡಿಯೋಗಳನ್ನು ಯಾರು ವೈರಲ್ ಮಾಡಿದ್ದಾರೆ ಎನ್ನುವುದಕ್ಕಿಂತ ಸಾರ್ವಜನಿಕ ಜೀವನದಲ್ಲಿ ಹೇಗೆ ವರ್ತಿಸುತ್ತೇವೆ ಎಂಬುದು ಮುಖ್ಯ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi ) ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಅವರ ಪೆನ್‍ಡ್ರೈವ್ ಪ್ರಕರಣ (Prajwal Revanna Pendrive Case) ಹಾಗೂ ರೇವಣ್ಣ (H.D Revanna) ಬಂಧನದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಪ್ರಕರಣದ ತನಿಖೆಯನ್ನು ಎಸ್‍ಐಟಿ ನಡೆಸುತ್ತಿದೆ. ಗಂಭೀರ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿರುವುದರಿಂದ ರೇವಣ್ಣ ಬಂಧನವಾಗಿದೆ. ಈ ರೀತಿಯ ಆಗಬಾರದಿತ್ತು. ಹಲವಾರು ಮಹಿಳೆಯರು ದೂರು ಕೊಟ್ಟಿದ್ದಾರೆ. ಪ್ರಜ್ವಲ್ ರೇವಣ್ಣ ಸಹ ಅರೆಸ್ಟ್ ಆಗಲೇಬೇಕು. ಪ್ರಕರಣದ ತನಿಖೆ ಸೂಕ್ತ ರೀತಿಯಲ್ಲಿ ಆಗಬೇಕು. ಈ ವಿಚಾರದಲ್ಲಿ ನಮ್ಮ ಪಕ್ಷದ ನಿಲವು ಸ್ಪಷ್ಟವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಆ ಯುವತಿ ನಂಬರ್‌ಗೆ ದಿನಕ್ಕೆರಡು ಬಾರಿ ಕರೆ ಮಾಡ್ತಿದ್ದಾರಂತೆ ಪ್ರಜ್ವಲ್ – ರಹಸ್ಯ ಸ್ಫೋಟ!

    ರೇವಣ್ಣರಿಗೆ ಸಾಕಷ್ಟು ವಯಸ್ಸಾಗಿದೆ ಇದು ದುರ್ದೈವ. ಸಾರ್ವಜನಿಕ ಜೀವನದಲ್ಲಿ ಹೇಗೆ ವರ್ತನೆ ಮಾಡುತ್ತೇವೆ ಎಂಬುದು ಬಹಳ ಮುಖ್ಯ. ವೀಡಿಯೋ ರಿಲೀಸ್ ಆಗಿರುವುದು ಬೇಸರದ ವಿಚಾರ. ಈ ರೀತಿಯ ಘಟನೆ ಆಗಬಾರದಿತ್ತು. ವೀಡಿಯೋ ನನ್ನದಲ್ಲಾ ಎಂದರೆ ನಾವು ಎಫ್‍ಎಸ್‍ಎಲ್‍ಗೆ ಕಳುಹಿಸುತ್ತವೆ. ವೀಡಿಯೋ ಯಾರು ರಿಲೀಸ್ ಮಾಡಿದರು ಅನ್ನೋದು ಚರ್ಚೆ ವಿಷಯ ಅಲ್ಲ. ಮಹಿಳೆಯರ ಜೊತೆಗೆ ನಡೆದುಕೊಂಡಿರುವ ರೀತಿ ಸರಿಯಾದುದಲ್ಲ ಎಂದು ಅವರು ಹೇಳಿದ್ದಾರೆ.

    ದಿಂಗಾಲೇಶ್ವರ ಶ್ರೀಗಳ ಆರೋಪದ ವಿಚಾರವಾಗಿ, ಹುಬ್ಬಳ್ಳಿ ಧಾರವಾಡದಲ್ಲಿ ಏನೇ ಆದರೂ ಅದಕ್ಕೆ ಜೋಶಿ ಕಾರಣ ಎನ್ನುವುದು ಕೆಲವರ ಮನಸ್ಥಿತಿ. ಸದ್ಯ ಕಾಂಗ್ರೆಸ್ ಸರ್ಕಾರ ಇದೆ. ನಮ್ಮ ಸರ್ಕಾರ ಇದ್ದಾಗಲೂ ಕೂಡ ನಾನು ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಕೈ ಹಾಕಿಲ್ಲ. ಈಗ ದಿಂಗಾಲೇಶ್ವರ ಶ್ರೀಗಳು ನಾನು ಕಾರ್ಯಕ್ರಮ ರದ್ದು ಮಾಡಿಸಿದೆ ಎನ್ನುತ್ತಿದ್ದಾರೆ ಎಂದರು. ಇದನ್ನೂ ಓದಿ: ಏನಿದು ಲುಕ್‌ಔಟ್ ನೋಟಿಸ್, ರೆಡ್ ಕಾರ್ನರ್, ಬ್ಲೂ ಕಾರ್ನರ್ ನೋಟಿಸ್? ಇವು ಹೇಗೆ ಕೆಲಸ ಮಾಡುತ್ತವೆ?

  • ಪ್ರಜ್ವಲ್ ಎಸ್‍ಐಟಿ ಮುಂದೆ ಶರಣಾಗಲಿದ್ದಾರೆ: ಸಿ.ಎಸ್ ಪುಟ್ಟರಾಜು ಸುಳಿವು

    ಪ್ರಜ್ವಲ್ ಎಸ್‍ಐಟಿ ಮುಂದೆ ಶರಣಾಗಲಿದ್ದಾರೆ: ಸಿ.ಎಸ್ ಪುಟ್ಟರಾಜು ಸುಳಿವು

    ಬೆಂಗಳೂರು: ಮಾಜಿ ಸಚಿವ ರೇವಣ್ಣ (H.D Revanna) ಅವರು ಜಾಮೀನು ಅರ್ಜಿ ವಜಾ ಆಗಿದ್ದರಿಂದ ಅವರೇ ದೇವೇಗೌಡರ ಆಶೀರ್ವಾದ ಪಡೆದು ಎಸ್‍ಐಟಿ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ. ಇನ್ನೂ ಸಂಸದ ಪ್ರಜ್ವಲ್ ರೇವಣ್ಣ ಅವರು ಶರಣಾಗಲಿದ್ದಾರೆ ಎಂದು ಮಾಜಿ ಶಾಸಕ ಸಿ.ಎಸ್ ಪುಟ್ಟರಾಜು (C.S Puttaraju) ಅವರು ಸುಳಿವು ಕೊಟ್ಟಿದ್ದಾರೆ.

    ಜಿ.ಟಿ ದೇವೇಗೌಡರು (G.T Devegowda) ಪ್ರತಿಕ್ರಿಯಿಸಿ, ರೇವಣ್ಣ ಎಸ್‍ಐಟಿ ತನಿಖೆಗೆ ಹಾಜರಾಗಿದ್ದಾರೆ. ಅವರೇ ಮಹಿಳೆಯನ್ನು ಅಪಹರಿಸಿದ್ದರಾ? ಅಥವಾ ಯಾರು ಅಪಹರಣ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯಲಿದೆ. ಈ ಬಗ್ಗೆ ಮಹಿಳೆಯ ಮಗ ದೂರು ದಾಖಲಿಸಿದ್ದ. ಇದರ ಪ್ರಕಾರ ತನಿಖೆ ನಡೆಯಲಿದೆ.

    ಕಾನೂನು ಏನಿದೆಯೋ ಅದರ ಪ್ರಕಾರ ಅವರು ನಡೆದುಕೊಳ್ಳಲಿದ್ದಾರೆ. ಈ ಬಗ್ಗೆ ಬಿಜೆಪಿ (BJP) ನಾಯಕರು ಹಾಗೂ ಜೆಡಿಎಸ್ (JDS) ನಾಯಕರು ಚರ್ಚೆ ನಡೆಸಲಿದ್ದೇವೆ ಎಂದು ಅವರು ಹೇಳಿದ್ದಾರೆ.

    ಏನಿದು ಪ್ರಕರಣ?: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವೀಡಿಯೋಗಳ ಪೆನ್‍ಡ್ರೈವ್ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ವೀಡಿಯೋಗಳು ವೈರಲ್ ಆಗುತ್ತಿದ್ದಂತೆ ಸಂತ್ರಸ್ತೆಯರು ಮಹಿಳಾ ಆಯೋಗದ ಮೊರೆ ಹೋಗಿದ್ದು, ಸರ್ಕಾರ ಪ್ರಕರಣದ ತನಿಖೆಗೆ ಎಸ್‍ಐಟಿ ರಚನೆ ಮಾಡಿತ್ತು. ಇದಾದ ಬೆನ್ನಲ್ಲೇ ಮಾಜಿ ಸಚಿವ ರೇವಣ್ಣ ವಿರುದ್ಧ ಸಹ ಲೈಂಗಿಕ ದೌರ್ಜನ್ಯ ಹಾಗೂ ಸಂತ್ರಸ್ತೆಯ ಅಪಹರಣದ ಆರೋಪದಡಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಎಸ್‍ಐಟಿ ತನಿಖೆ ನಡೆಸುತ್ತಿದೆ. ಇನ್ನೂ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿದ್ದು, ಅವರಿಗೆ ಲುಕೌಟ್ ನೋಟಿಸ್ ಜಾರಿಗೊಳಿಸಲಾಗಿದೆ. ಅಲ್ಲದೇ ರೇವಣ್ಣ ಸಹ ವಿದೇಶಕ್ಕೆ ತೆರಳುವ ಶಂಕೆಯ ಮೇಲೆ ಅವರ ಮೇಲೂ ಲುಕ್‍ಔಟ್ ನೋಟಿಸ್ ಜಾರಿಗೊಳಿಸಲಾಗಿದೆ.

    ಇಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ದಾಖಲಾಗಿರುವ ಲೈಂಗಿಕ ಕಿರುಕುಳ ಪ್ರಕರಣದ ತನಿಖೆ ಆರಂಭಿಸಿರುವ ಎಸ್‍ಐಟಿ ಅಧಿಕಾರಿಗಳು, ಹೊಳೆನರಸೀಪುರದ ಅವರ ನಿವಾಸದಲ್ಲಿ ಸಂತ್ರಸ್ತೆಯ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಿದ್ದು, ಪ್ರಕರಣದಲ್ಲಿ ಇಂದು ರೇವಣ್ಣ ಅವರನ್ನು ಎಸ್‍ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.

  • ನಿಖಿಲ್, ಅನಿತಾ ಕುಮಾರಸ್ವಾಮಿ ಗೆಲ್ತಾರೆ- ಭವಾನಿ ಪರ ರೇವಣ್ಣ ಬ್ಯಾಟಿಂಗ್

    ನಿಖಿಲ್, ಅನಿತಾ ಕುಮಾರಸ್ವಾಮಿ ಗೆಲ್ತಾರೆ- ಭವಾನಿ ಪರ ರೇವಣ್ಣ ಬ್ಯಾಟಿಂಗ್

    ಬೆಂಗಳೂರು: ಹಾಸನ (Hassan) ಟಿಕೆಟ್ ವಿಚಾರದಲ್ಲಿ ರೇವಣ್ಣ (HD Revanna) ವರ್ಸಸ್ ಕುಮಾರಸ್ವಾಮಿ (HD Kumaraswamy) ಗೇಮ್ ಶುರುವಾಯ್ತಾ ಅಂತ ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದೆ. ಹಾಸನದಲ್ಲಿ ದೇವೇಗೌಡ, ಕುಮಾರಸ್ವಾಮಿ ನಿರ್ಧಾರವೇ ಫೈನಲ್ ಎಂದೇ ರಾಜಕೀಯ ಆಟ ಆಡ್ತಿದ್ದಾರಾ ರೇವಣ್ಣ ಎಂಬ ಚರ್ಚೆ ಪ್ರಾರಂಭವಾಗಿದೆ.

    ಭಾನುವಾರ ಸುದ್ದಿಗೋಷ್ಠಿಯಲ್ಲಿ ನಿಖಿಲ್ ರಾಮನಗರದಿಂದ ಗೆಲ್ತಾನೆ, ಅನಿತಾ ಕುಮಾರಸ್ವಾಮಿ ಮಧುಗಿರಿಯಲ್ಲಿ ಗೆಲ್ತಾರೆ ಎಂದು ರೇವಣ್ಣ ಹೇಳಿದ್ದರು. ರೇವಣ್ಣ ಮಾತಿನ ಅರ್ಥವೇನು? ಎಂಬುದು ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಶುರುವಾಗಿದೆ.

    ಕುಮಾರಸ್ವಾಮಿ ಪತ್ನಿ, ಮಗನ ಹೆಸರು ರೇವಣ್ಣ ಪ್ರಸ್ತಾಪ ಮಾಡಿ ಭವಾನಿ ರೇವಣ್ಣಗೆ (Bhavani Revanna) ಟಿಕೆಟ್ ಕೊಡಿಸುವ ಒತ್ತಡ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾದರೆ ನಿಖಿಲ್, ಅನಿತಾ ಕುಮಾರಸ್ವಾಮಿ ಮುಂದಿಟ್ಟುಕೊಂಡು ರಾಜಕೀಯ ದಾಳ ಉರುಳಿಸಿದ್ರಾ ರೇವಣ್ಣ? ಅವರಿಗೆ ಟಿಕೆಟ್ ಕೊಟ್ಟಿದ್ದೀರಾ ನಮಗೂ ಟಿಕೆಟ್ ಕೊಡಿ ಎಂಬ ಒತ್ತಡ ತಂತ್ರನಾ? ಅವರು ಗೆಲ್ಲಬಹುದಾದರೆ ನಾವು ಗೆಲ್ಲಲೂ ಆಗೋದಿಲ್ಲವಾ ಎಂಬ ಮಾತಿನ ಅರ್ಥದಲ್ಲಿ ದಾಳ ಉರುಳಿಸಿದ್ರಾ ರೇವಣ್ಣ? ಎಂಬ ಲೆಕ್ಕಚಾರ ಶುರುವಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಸ್ವಂತ ಬಲದಲ್ಲಿ ಗೆಲ್ಲಲು ಬಿಜೆಪಿಯಿಂದ ರೆಡಿಯಾಯ್ತು ಸೀಟ್ ಶೇರಿಂಗ್ ಫಾರ್ಮುಲಾ

    ರೇವಣ್ಣ ಮಾತಿನಿಂದ ನಿಖಿಲ್, ಅನಿತಾ ಕುಮಾರಸ್ವಾಮಿ ಇಬ್ಬರು ಗೆಲ್ತಾರೆ ಎಂದು ಹೇಳಿ ಇಬ್ಬರಿಗೂ ಟಿಕೆಟ್ ಕೊಟ್ಟಿದ್ದೀರಾ ಎಂಬ ಸಂದೇಶ ಸ್ಪಷ್ಟ ಪಡಿಸೋದು. ಒಂದೇ ಕುಟುಂಬದಲ್ಲಿ ಇಬ್ಬರಿಗೂ ಟಿಕೆಟ್ ಕೊಟ್ಟಿದ್ದೀರಾ ಅಂತ ಪರೋಕ್ಷವಾಗಿ ಭವಾನಿಗೆ ಟಿಕೆಟ್ ಕೊಡಿಸುವ ತಂತ್ರ ಶುರು ಮಾಡಿದ್ರಾ? ನಿಖಿಲ್, ಅನಿತಾ ಕುಮಾರಸ್ವಾಮಿ ಸ್ವಂತ ಶಕ್ತಿಯಿಂದ ಗೆಲ್ತಾರೆ. ಅದೇ ರೀತಿ ಭವಾನಿ ರೇವಣ್ಣ ಕೂಡಾ ಸ್ವಂತ ಶಕ್ತಿ ಮೇಲೆ ಗೆಲ್ತಾರೆ ಎಂಬ ಸಂದೇಶನಾವನ್ನ ರೇವಣ್ಣ ಕೊಟ್ರಾ? ಅವರಿಗೂ ಟಿಕೆಟ್ ಕೊಟ್ಟಿದ್ದೀರಾ, ಅದೇ ರೀತಿ ನಮಗೂ ಟಿಕೆಟ್ ಕೊಡಿ ಎಂಬ ಸಂದೇಶವನ್ನು ರೇವಣ್ಣ ಕೊಟ್ಟರಾ? ಭವಾನಿ ರೇವಣ್ಣ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದಾರೆ. ಅವರು ಕೂಡಾ ಸ್ವಂತ ಶಕ್ತಿಯಿಂದ ಗೆಲ್ತಾರೆ ಎಂಬ ಸಂದೇಶ ಕೊಡೋ ಮೂಲಕ ಭವಾನಿ ಪರ ಬ್ಯಾಟಿಂಗ್ ಮಾಡಿದ್ದಾರೆ ರೇವಣ್ಣ. ಇದನ್ನೂ ಓದಿ: India China Border Rowː ಚೀನಾ ಗಡಿ ಸಂಘರ್ಷ – ಕೇಂದ್ರದ ನಡೆ ಅತ್ಯಂತ ಅಪಾಯಕಾರಿ ಎಂದ ರಾಗಾ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಜ್ಯಸಭಾ ಚುನಾವಣೆ: ರೇವಣ್ಣ ಮತ ತಿರಸ್ಕೃತವಾಗುತ್ತಾ?

    ರಾಜ್ಯಸಭಾ ಚುನಾವಣೆ: ರೇವಣ್ಣ ಮತ ತಿರಸ್ಕೃತವಾಗುತ್ತಾ?

    ಬೆಂಗಳೂರು: ಜೆಡಿಎಸ್ ಶಾಸಕ ಎಚ್‌ಡಿ ರೇವಣ್ಣ ಅವರ ಮತ ತಿರಸ್ಕೃತವಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.

    ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷಗಳು ವಿಪ್ ಜಾರಿ ಮಾಡಿದ್ದರಿಂದ ಶಾಸಕರು ಕಡ್ಡಾಯವಾಗಿ ಮತ ಹಾಕಿದ ಬಳಿಕ ತಾನು ಯಾರಿಗೆ ಮತ ಹಾಕಿದ್ದೇನೆ ಎನ್ನುವುದನ್ನು ಕೊಠಡಿಯಲ್ಲಿ ಕುಳಿತಿದ್ದ ತನ್ನ ಪಕ್ಷದ ಏಜೆಂಟ್‌ಗೆ ತೋರಿಸಬೇಕಾಗುತ್ತದೆ. ಇದನ್ನೂ ಓದಿ: ಬೇರೆಯವರು ತಾಳಿಕಟ್ಟಿದವರ ಬಳಿ ಹೋಗಿ ಲವ್ ಲೆಟರ್ ಬರೆದರೆ ಆಗುತ್ತಾ : ಸಿಎಂ ಇಬ್ರಾಹಿಂ

    ಇಂದು ನಡೆದ ಚುನಾವಣೆಯಲ್ಲಿ ರೇವಣ್ಣ ಮತವನ್ನು ಹಾಕಿದ ಬಳಿಕ ಡಿಕೆಶಿಗೆ ತೋರಿಸಿದ್ದಾರೆ. ಜೆಡಿಎಸ್ ಶಾಸಕರಿಗೆ ಮಾತ್ರ ತೋರಿಸಬೇಕಾದ ರೇವಣ್ಣ ಡಿಕೆ ಶಿವಕುಮಾರ್ ಅವರಿಗೆ ಪೇಪರ್ ತೋರಿಸಿದ್ದಕ್ಕೆ ಬಿಜೆಪಿ ಏಜೆಂಟರು ಕೊಠಡಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಬಿಜೆಪಿ ನಾಯಕರು ರೇವಣ್ಣ ಅವರ ಮತವನ್ನು ತಿರಸ್ಕೃತಗೊಳಿಸಬೇಕೆಂದು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಮೊದಲ ಅಡ್ಡಮತದಾನ

    ಈ ಬಗ್ಗೆ ಪ್ರತಿಕ್ರಿಯಿಸಿದ ರೇವಣ್ಣ, ನಾನು ಯಾಕೆ ಮತ ತೋರಿಸಿ ಹಾಕಲಿ. ವಿಡಿಯೋ ಇರುತ್ತೆ ಬೇಕಾದ್ರೆ ನೋಡಿಕೊಳ್ಳಲಿ. ಸೋಲುವ ಭೀತಿಯಿಂದ ಬಿಜೆಪಿಯವರು ಹಾಗೆ ಹೇಳ್ತಿದ್ದಾರೆ. ನಾನು ಪುಟ್ಟರಾಜು ಅವರಿಗೆ ತೋರಿಸಿ ಹಾಕಿದ್ದಾರೆ. ನಾನು ಡಿಕೆ ಶಿವಕುಮಾರ್ ಅವರಿಗೆ ಯಾಕೆ ತೋರಿಸಲಿ. ಅಲ್ಲೇ ಯಾಕೆ ದೂರು ಕೊಡಲಿಲ್ಲ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.

  • ತಾಕತ್ತಿದ್ದರೆ ನನ್ನ ವಿರುದ್ಧ ರೇವಣ್ಣ ನಿಲ್ಲಲಿ: ಪ್ರೀತಂ ಸವಾಲು

    ತಾಕತ್ತಿದ್ದರೆ ನನ್ನ ವಿರುದ್ಧ ರೇವಣ್ಣ ನಿಲ್ಲಲಿ: ಪ್ರೀತಂ ಸವಾಲು

    ಹಾಸನ: ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಬಾರದು ಅಂತ ಹೇಳಲು ರೇವಣ್ಣ ಯಾರು? Who is he.!? ಹಾಸನ ವಿಧಾನಸಭಾ ಕ್ಷೇತ್ರಕ್ಕೂ ರೇವಣ್ಣನಿಗೂ ಏನು ಸಂಬಂಧ ಎಂದು ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಂ ಗೌಡ ಕಿಡಿಕಾರಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಕೆಲದಿನದಿಂದ ಟ್ರಕ್ ಟರ್ಮಿನಲ್ ನಿರ್ಮಾಣ ವಿಚಾರವಾಗಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಂ ಗೌಡ ನಡುವಿನ ವಾಕ್ಸಮರ ಮುಂದುವರಿಸಿದ್ದು, ರೇವಣ್ಣ ಅವರ ವಿರುದ್ಧ ಪ್ರೀತಂ ಇಂದು ಹಿಗ್ಗಾಮುಗ್ಗ ವಾಗ್ಧಾಳಿ ನಡೆಸಿದರು. ಎಲ್ಲವನ್ನು ಪರಿಶೀಲನೆ ಮಾಡಿ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಜೆಡಿಎಸ್ ಅವರು ಅಭಿವೃದ್ಧಿ ಕಾಮಗಾರಿಗಳಲ್ಲಿ ರಾಜಕೀಯವನ್ನು ಬೆರೆಸುತ್ತಿದ್ದಾರೆ. ನಾನು ಯಾವುದಕ್ಕೂ ಜಗ್ಗುವುದಿಲ್ಲ. ಕುಗ್ಗುವುದು ಇಲ್ಲ ಎಂದು ಭರವಸೆ ಕೊಟ್ಟರು. ಇದನ್ನೂ ಓದಿ: ಮನೆಯಿಂದ ಹೋಗಬೇಕಾದ್ರೆ ರಾಜಕುಮಾರಿ ತರ ಹೋದ್ಳು, ಆದರೆ ಈಗ….: ಆ್ಯಸಿಡ್ ಸಂತ್ರಸ್ತೆ ತಾಯಿ ಅಳಲು 

    ತಾಕತ್ತಿದ್ದರೆ ನನ್ನ ವಿರುದ್ಧ ರೇವಣ್ಣ ನಿಲ್ಲಲಿ
    ನಾನು ಇಂದೇ ಹೇಳುತ್ತೇನೆ ಬರೆದಿಟ್ಟುಕೊಳ್ಳಿ. ನನ್ನ ವಿರುದ್ಧ ರೇವಣ್ಣ ನಿಂತರೆ ನಾನು 50,000 ಮತಗಳ ಅಂತರದಲ್ಲಿ ಗೆಲ್ಲುತ್ತೇನೆ. 50 ಸಾವಿರಕ್ಕಿಂತ ಒಂದು ಮತ ಕಡಿಮೆ ಬಂದರು ಅಂದೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ರೀ ಎಲೆಕ್ಷನ್‍ಗೆ ಹೋಗುತ್ತೇನೆ ಎಂದು ಸವಾಲು ಹಾಕಿದರು.

    ತಾಕತ್ತಿದ್ದರೆ ನೀವು ಘೋಷಣೆ ಮಾಡಿ, ಪ್ರೀತಮ್ ಗೌಡ ವಿರುದ್ಧ ಹಾಸನದಿಂದ ಸ್ಪರ್ಧಿಸುತ್ತೇನೆ ಎಂದು ಸವಾಲೆಸೆದ ಪ್ರೀತಂ, ಹಾಸನದಲ್ಲಿ ಬಂದು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯ ಅವರಿಗೆ ಇಲ್ಲ. ಆದ್ದರಿಂದ ಹತಾಶರಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಭಿವೃದ್ಧಿಗೆ ತೊಡಕು ಉಂಟುಮಾಡುತ್ತಿದ್ದಾರೆ. ನಾನು ದಾರಿಯಲ್ಲಿ ಹೋಗುವ ದಾಸಯ್ಯ ಅಲ್ಲ. ರೇವಣ್ಣ ಅವರು ಮಕ್ಕಳಂತೆ ಮಾತನಾಡುವುದನ್ನು ಬಿಟ್ಟು ಅವರ ಹುದ್ದೆಗೆ ಗಂಭೀರವಾಗಿ ನಡೆದುಕೊಳ್ಳಬೇಕು. ಡಿಸಿ ಆಫೀಸಿನಲ್ಲಿ ಅಧಿಕಾರಿಗಳನ್ನು ಬಯ್ಯುವ ಇವರು ನಂತರ ಕ್ಷಮೆ ಕೇಳುತ್ತಾರೆ. ಇಂತಹ ವರ್ತನೆ ಅವರದ್ದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ರೇವಣ್ಣ 2023ಕ್ಕೆ ಬಡ್ಡಿ ಸಮೇತ ತೀರಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಮೊದಲು ಅಸಲು ಎಲ್ಲಿದೆ ಅಂತ ಹುಡುಕಲು ಹೇಳಿ ಎಂದು ಟೀಕಿಸಿದ ಪ್ರೀತಂ, ಹಾಸನದಲ್ಲಿ ಚುನಾವಣೆಗೆ ನಿಂತು ಎರಡನೇ ಸ್ಥಾನ ಇರಲಿ, ಮೂರನೇ ಸ್ಥಾನಕ್ಕೆ ಹೋಗುತ್ತಾರೆ ಎಂದು ಎಚ್ಚರಿಸಿದರು.

    ಗ್ರಾಮ ಪಂಚಾಯಿತಿ ಮೆಂಬರ್‌ಗಳು ಇವರಿಗಿಂತ ಚೆನ್ನಾಗಿ ನಡೆದುಕೊಳ್ಳುತ್ತಾರೆ. ಏಳನೇ 10ನೇ ತರಗತಿ ಓದಿರೋರು.. ಇದೇ ತರ ಆಡುವುದು. ವಿದ್ಯಾಭ್ಯಾಸ ಮಾಡುವುದರಲ್ಲಿ ಎಂತಹ ಕಷ್ಟ ಇದೆ ಅಂತ ಗೊತ್ತಿರುವುದಿಲ್ಲ. ಅದಕ್ಕೆ ಅಧಿಕಾರಿಗಳೊಂದಿಗೆ ಇಂತಹ ವರ್ತನೆ ಮಾಡುತ್ತಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೆಸರು ಹೇಳಿ ರಾಜಕಾರಣ ಮಾಡುವವರು, ಗಾಳಿಯಲ್ಲಿ ಗುಂಡು ಹೊಡೆಯುವವರ ಬಗ್ಗೆ ನಾನು ಮಾತನಾಡುವುದಿಲ್ಲ. ನನಗೂ ಒಂದು ಶಕ್ತಿ ಇದೆ ರಾಷ್ಟ್ರೀಯ ಪಕ್ಷದಿಂದ ಶಾಸಕನಾಗಿದ್ದೇನೆ ಎಂದರು.

    ರೇವಣ್ಣ ನನಗೆ ಯಾವ ಲೆಕ್ಕ?
    ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ನಿಮ್ಮ ಕಾರ್ಯಕರ್ತರು ಎಲ್ಲಿದ್ದಾರೆ. ಅವರು ಬಹಳ ಹತಾಶರಾಗಿದ್ದಾರೆ. ಇರುವವರನ್ನು ಕಾಪಾಡಿಕೊಂಡು ಹೋಗುವುದು ನಿಮಗೆ ಒಳ್ಳೆಯದು ಎಂದು ಸಲಹೆ ಕೊಟ್ಟರು. ಮುಂದಿನ ದಿನಗಳಲ್ಲಿ ಅಸಲು ಬಡ್ಡಿ ಇಲ್ಲದಂತೆ ಖಾಲಿ ಮಾಡಬೇಕಾಗುತ್ತದೆ. ಈ ಹೇಳಿಕೆ ಹಿಟ್ಲರ್, ನಡಾಫ್ ಎಲ್ಲ ಕಳೆದು ಹೋಗಿದ್ದಾರೆ. ನನಗೆ ರೇವಣ್ಣ ಯಾವ ಲೆಕ್ಕ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರೀತಮ್ ಗೌಡ ಕೆ.ಆರ್.ಪೇಟೆ , ಶಿರಾದಲ್ಲಿ ಅವರೇ ಉಸ್ತುವಾರಿ ಏನಾಯ್ತು. ಹಾಸನಕ್ಕೆ ಬಂದರೂ ಇದೇ ಕಥೆಯಾಗುತ್ತದೆ. ಬುಟ್ಟೀಲಿ ಹಾವಿದೆ ಅಂತಾರೆ ಅದರಲ್ಲಿ ಹಾವ್ರಾಣಿನೂ ಇರುವುದಿಲ್ಲ ಎಂದು ಲೇವಡಿ ಮಾಡಿದರು.

    ಕಾಲೇಜಿಗೆ ಹೋಗುವ ಹುಡುಗ ಮಾತನಾಡಿದರೆ ಉತ್ತರ ಕೊಡ್ತೀನಿ. ಆಚಾರ-ವಿಚಾರ, ಸಂಸ್ಕಾರ-ಸಂಸ್ಕೃತಿ ಇಲ್ಲದಂತೆ ಮಾತನಾಡುತ್ತಿರುವವರಿಗೆ ಉತ್ತರ ನೀಡಲು ಸಾಧ್ಯವಿಲ್ಲ. ದೇವೇಗೌಡರ ಮಗ ಅನ್ನೋದು ಬಿಟ್ಟರೆ ಅವರಿಗೆ ಇನ್ಯಾವ ಅರ್ಹತೆಯಿದೆ. ಏಳು, 10ನೇ ತರಗತಿ ಪಾಸಾದವರಿಗೆ ಗೌರವದಿಂದ ನಡೆದುಕೊಳ್ಳಲು ಎಲ್ಲಿ ಬರುತ್ತೆ. ನಾನು ಅವನಲ್ಲ ದೇವರ ದಯೆಯಿಂದ ಡಬಲ್ ಡಿಗ್ರಿ ಪಡೆದಿದ್ದೇನೆ. ಇನ್ನಾದರೂ ರೇವಣ್ಣ ಅವರು ಗೌರವದಿಂದ ಇರಲಿ ಎಂದು ಖಾರವಾಗಿ ನುಡಿದರು.

    ಮ್ಯೂಸಿಯಂಗಾಗಿ ಜಾಗದಲ್ಲಿ ಕಲ್ಯಾಣ ಮಂಟಪ 
    ಜೆಡಿಎಸ್‍ನ ಮಾಜಿ ಸಚಿವರು ಮ್ಯೂಸಿಯಂ ಮಾಡ್ತೀವಿ ಎಂದು ಹೇಳಿ ಹುಡಾದಿಂದ ಜಾಗ ತೆಗೆದುಕೊಂಡಿದ್ದಾರೆ. ನಂತರ ಅಲ್ಲಿ ಎರಡು ಕಲ್ಯಾಣ ಮಂಟಪ ಕಟ್ಟಿ ತಿಂಗಳಿಗೆ 50 ಲಕ್ಷ ರೂ. ದುಡಿಮೆ ಮಾಡುತ್ತಿದ್ದಾರೆ. ಆದರೆ ಇದೀಗ ನನ್ನ ಅಭಿವೃದ್ಧಿ ಕೆಲಸಕ್ಕೆ ವಿರೋಧ ಮಾಡುತ್ತಿರುವುದು ಎಷ್ಟು ಸರಿ ಎಂದು ಕಿಡಿಕಾರಿದ ಪ್ರೀತಂ, ಗಾಜಿನಮನೆಯಲ್ಲಿ ಕೂತಿದ್ದೀರಾ ಸಮಾಧಾನವಾಗಿ ಇದ್ರೆ ಒಳ್ಳೆಯದು ಇಲ್ಲ ಎಂದರೆ ಎಲ್ಲ ಹಗರಣಗಳನ್ನು ಬಿಚ್ಚಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು. ಇದನ್ನೂ ಓದಿ: ಸ್ವಿಮಿಂಗ್ ಪೂಲ್‌ನಲ್ಲಿ ಕೂತು ಉರಿವ ಸೂರ್ಯನಿಗೆ ಚಾಲೇಂಜ್ ಮಾಡಿದ ಪ್ರಿಯಾಂಕಾ ಚೋಪ್ರಾ 

    ರೇವಣ್ಣ ಅವರೇನು ಸ್ವಾಮಿ ವಿವೇಕಾನಂದ ಅಲ್ಲ
    ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಿದರೆ ದೊಡ್ಡಹಳ್ಳಿ ರೀತಿ ಗೋಲಿಬಾರ್ ಆಗುತ್ತೆ ಎಂಬ ರೇವಣ್ಣ ಹೇಳಿಕೆ ವಿರುದ್ಧ ಮಾತನಾಡಿದ ಅವರು, ಆಟ 1978ರಲ್ಲಿ ಮುಗಿದು ಹೋಗಿದೆ. ಅವರು ಕರೆದೊಡನೆ ಯುವಕರು ಬರಲು ರೇವಣ್ಣ, ಸ್ವಾಮಿ ವಿವೇಕಾನಂದ ಅಲ್ಲ. ಅವರು ಅಕ್ರಮ ಮಾಡಿರುವ ಎಲ್ಲ ದಾಖಲೆಗಳು ಇದೆ ಎಂದು ತಿಳಿಸಿದರು.

    ನಾನು ಹೊಳೆ ನರಸೀಪುರದ ವಿಚಾರಕ್ಕೆ ಹೋದರೆ ಮುನಿಸಿಪಾಲಿಟಿಯಲ್ಲಿ ಏನು ಮಾಡಿದ್ದಾರೆ. ಯಾರ ಹೆಸರಿಗೆ ಡಿಡಿ ತೆಗೆದಿದ್ದಾರೆ ಗೊತ್ತಿದೆ. ಅವರ ಸ್ವಂತಕ್ಕಾಗಿ ಏನೇನು ಮಾಡಿಕೊಂಡಿದ್ದಾರೆ ಅಂತ ಕಥೆ ತೆಗೆದರೆ ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಲು ಅವರಿಗೆ ಸಮಯ ಸಾಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಮಂಡ್ಯದಲ್ಲಿ ನಿಖಿಲ್ ಸೋಲಿಗೆ ಅವರ ದೊಡ್ಡಪ್ಪನೇ ಕಾರಣ: ನಾರಾಯಣಗೌಡ

    ಮಂಡ್ಯದಲ್ಲಿ ನಿಖಿಲ್ ಸೋಲಿಗೆ ಅವರ ದೊಡ್ಡಪ್ಪನೇ ಕಾರಣ: ನಾರಾಯಣಗೌಡ

    ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ನಿಖಿಲ್ ಸೋಲುವುದಕ್ಕೆ ಅವರ ದೊಡ್ಡಪ್ಪ ರೇವಣ್ಣನೇ ಕಾರಣ ಎಂದು ಸಚಿವ ಕೆ.ಸಿ. ನಾರಾಯಣ ಹೇಳಿದ್ದಾರೆ.

    ನಗರದ ಕೆ.ಆರ್.ಪೇಟೆಯ ಸಿಂಧಘಟ್ಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ನಿಖಿಲ್ ಸೋಲಿಗೆ ಅವರ ದೊಡ್ಡಪ್ಪನೇ ಕಾರಣ. ನಿಖಿಲ್ ಕುಮಾರಸ್ವಾಮಿ ಬಗ್ಗೆ ನನಗೆ ಗೌರವ ಇದೆ. ಅವರು ಸುಮ್ಮನೆ ಮಾತನಾಡುವುದು ತಪ್ಪು. ಕುಮಾರಸ್ವಾಮಿ ಸುಪುತ್ರ ನಿಖಿಲ್ ಇನ್ನೂ ಚಿಕ್ಕ ರಾಜಕಾರಣಿ. ಪ್ರತಿಯೊಂದರ ಬಗ್ಗೆ ಮಾಹಿತಿ ತಿಳಿದಕೊಂಡು ನಿಖಿಲ್ ಮಾತನಾಡಬೇಕು. ಒಂದೂವರೆ ವರ್ಷ ಸರ್ಕಾರ ಇದ್ದಂತಹ ಸಂದರ್ಭದಲ್ಲಿ ಅವರ ದೊಡ್ಡಪ್ಪನೇ ಎನರ್ಜಿ ಮಿನಿಸ್ಟರ್ ಆಗಿದ್ದರು. ಸಾವಿರಾರು ಸಬ್ ಸ್ಟೇಷನ್ ಕೊಟ್ಟೆವು ಅಂತ ಹೇಳುತ್ತಾರೆ. ಆದರೆ ಕೆ.ಆರ್.ಪೇಟೆಗೆ ಒಂದೇ ಒಂದು ಕೊಟ್ಟಿದ್ದಾರಾ? ಒಂದೇ ಒಂದು ಬಾರಿ ಎನರ್ಜಿ ಮಿನಿಸ್ಟರ್ ಆಗಿ ತೋರಿಸಲಿ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ದೆಹಲಿ ಡಿಸಿಪಿ ಕಾರಿಗೆ ಡಿಕ್ಕಿ ಹೊಡೆದಿದ್ದ Paytm ಸಿಇಒ – ಜಾಮೀನಿನ ಮೇಲೆ ಬಿಡುಗಡೆ

    Revanna

    ಚನ್ನರಾಯಪಟ್ಟಣ ತಾಲೂಕು – ಹಾಸನ ಜಿಲ್ಲೆಗೆ ಸಾವಿರಾರು ಕೋಟಿ ಅನುದಾನ ಕೊಟ್ಟುಕೊಂಡಿದ್ದಾರೆ. ನಮ್ಮ ತಾಲೂಕಿಗೆ ಎಷ್ಟು ಕೊಟ್ಟಿದ್ದಾರೆ ಎಂದು ನಿಖಿಲ್ ಕುಮಾರ ಸ್ವಾಮಿ ಅವರ ದೊಡ್ಡಪ್ಪನನ್ನೇ ಕೇಳಲಿ. ಮಾಹಿತಿ ನೀಡಿ ಎಂಬ ಹಕ್ಕಿನಲ್ಲಿ ಕೇಳಲಿ. ಅವರ ದೊಡ್ಡಪ್ಪ ಬಂದ ಅನುದಾನವನ್ನು ಹಾಸನಕ್ಕೆ ಹಾಕಿಕೊಂಡಿರುವ ಬಗ್ಗೆ ಪಾಪ ನಿಖಿಲ್‍ಗೆ ವಿಷಯ ಗೊತ್ತಿಲ್ಲ. ಮಂಡ್ಯವನ್ನು ಖಾಲಿ ಬಿಟ್ಟರು. ನಿಖಿಲ್ ಕುಮಾರಸ್ವಾಮಿ ಸೋಲಬೇಕಾದರೆ ಕೆಲಸಗಳು ಕಾರಣ. ಕುಮಾರಸ್ವಾಮಿ ಖಾಲಿ ಪೇಪರ್ ಹಿಡಿದುಕೊಂಡು ಇಷ್ಟು ಸಾವಿರ ಕೋಟಿ ಕೊಡುತ್ತೇವೆ ಎಂದು ಹೇಳಿಕೊಂಡು ಬಂದರು. ಆದರೆ ರೇವಣ್ಣ ಅವರು ಲೆಟರ್ ಹೆಡ್ ನಲ್ಲಿ ಹಣ ಹುಡುಕಿಕೊಂಡು ಹೋಗಿ ಅವರ ಜಿಲ್ಲೆ ಅಭಿವೃದ್ಧಿ ಮಾಡಿಕೊಂಡರು. ಅಲ್ಲಿ ಅವರ ಮಗನನ್ನು ಗೆಲ್ಲಿಸಿಕೊಂಡಿರು. ನಿಖಿಲ್‍ನ ಸೋಲಿಸಿದರು. ಅದಕ್ಕಿಂತ ನಮ್ಮ ನಿಖಿಲ್ ಕುಮಾರಣ್ಣಂಗೆ ಪಾಠ ಬೇಕಾ? ಈಗಲಾದರೂ ನಿಖಿಲ್ ಸ್ವಲ್ಪ ತಿಳಿದುಕೊಂಡು ಮಾತನಾಡಲಿ ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿ ಬಿಜೆಪಿ ಏಜೆಂಟ್: ಕಾಂಗ್ರೆಸ್

  • ಹತ್ತು ವರ್ಷ ಹಾಸನ ಜಿಲ್ಲೆಗೆ ಎರಡು ಪಕ್ಷಗಳ ಕೊಡುಗೆ ಏನು: ರೇವಣ್ಣ ಪ್ರಶ್ನೆ

    ಹತ್ತು ವರ್ಷ ಹಾಸನ ಜಿಲ್ಲೆಗೆ ಎರಡು ಪಕ್ಷಗಳ ಕೊಡುಗೆ ಏನು: ರೇವಣ್ಣ ಪ್ರಶ್ನೆ

    ಹಾಸನ: ಹತ್ತು ವರ್ಷ ಹಾಸನ ಜಿಲ್ಲೆಗೆ ಎರಡು ಪಕ್ಷಗಳ ಕೊಡುಗೆ ಏನು? ಎಂದು ರಾಷ್ಟ್ರೀಯ ಪಕ್ಷಗಳ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ಕಿಡಿಕಾರಿದರು.

    ರಾಷ್ಟ್ರೀಯ ಪಕ್ಷಗಳ ಹೇಳಿಕೆ ಕುರಿತು ಮಾತನಾಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳು ಬೆಳಗ್ಗೆ ಎದ್ದರೆ ಪ್ರಾದೇಶಿಕ ಪಕ್ಷದ ಅಭ್ಯರ್ಥಿಗಳನ್ನು ಕುಟುಂಬ ರಾಜಕಾರಣ ಎಂದು ಟೀಕಿಸುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಕುಟುಂಬ ರಾಜಕಾರಣ ಇಲ್ವಾ? ಕಾಂಗ್ರೆಸ್ ನಲ್ಲಿ ಒಂದೇ ಕುಟುಂಬದ ನಾಲ್ಕು ಜನ ಎಂಎಲ್‍ಎ, ಎಂಎಲ್‍ಸಿ ಇನ್ನೂ ಬೇರೆ-ಬೇರೆ ಹುದ್ದೆಗಳಲ್ಲಿ ಇದ್ದಾರೆ. ಇವರಿಗೆ ಕುಟುಂಬ ರಾಜಕಾರಣ ಎಂದು ಮಾತನಾಡಲು ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ಹತ್ತು ಮೀಟರ್ ಆಳದಲ್ಲಿ ಸ್ಕೂಬಾ ಡೈವ್ ಮಾಡಿದ್ರು ಅಪ್ಪು

    ಬೆಳಗ್ಗೆ ಎದ್ದು ಜೆಡಿಎಸ್ ಕುಟುಂಬ ರಾಜಕಾರಣ ಅನ್ನೋದು ಬಿಟ್ಟರೆ ಜಿಲ್ಲೆಗೆ ಅವರ ಕೊಡುಗೆ ಏನು? ಹತ್ತು ವರ್ಷ ಹಾಸನ ಜಿಲ್ಲೆಗೆ ಎರಡು ಪಕ್ಷಗಳ ಕೊಡುಗೆ ಏನು? ಕಾಂಗ್ರೆಸ್ ನಲ್ಲಿ ಎಷ್ಟು ಕುಟುಂಬದವರು ರಾಜಕೀಯ ಹುದ್ದೆಯಲ್ಲಿದ್ದಾರೆ ಎಂದು ಬಹಿರಂಗಪಡಿಸಲಿ. ಪ್ರಧಾನಿ ಮೋದಿ ಅವರು ಬಿಜೆಪಿಯಲ್ಲಿ 75 ವರ್ಷ ಆದವರು ಅಧಿಕಾರದಲ್ಲಿ ಇರೋ ಹಾಗಿಲ್ಲ ಎಂಬ ಕಾನೂನು ಮಾಡಿದ್ದಾರೆ. ಅದೇ ರೀತಿ ಕುಟುಂಬದಲ್ಲಿ ಒಬ್ಬರು ರಾಜಕೀಯಕ್ಕೆ ನಿಲ್ಲಲಿ ಎಂದು ಬಿಲ್ ತರಲಿ ಎಂದು ಸವಾಲು ಹಾಕಿದರು.

    ದುಡ್ಡಿನಿಂದ ರಾಜಕೀಯ ಮಾಡಲು ಆಗಲ್ಲ. ಜನತೆ, ದೇವರ ಆಶೀರ್ವಾದ ಇರುವವರೆಗೂ ರಾಜಕೀಯ ಮಾಡಬಹುದು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಹೇಳ ಹೆಸರಿಲ್ಲದಂತಾಗುತ್ತದೆ. ಕಾಂಗ್ರೆಸ್ ಮುಖಂಡರೇ ಕಾಂಗ್ರೆಸ್ ಪಕ್ಷ ಮುಗಿಸುತ್ತಾರೆ. ನೆಹರು ಕಾಲದ ಕಾಂಗ್ರೆಸ್ ಈಗ ಇಲ್ಲ. ಕೇಂದ್ರದಲ್ಲಿ ಬಿಜೆಪಿ, ರಾಜ್ಯದಲ್ಲಿ ಕಾಂಗ್ರೆಸ್ ಡಬಲ್ ಇಂಜಿನ್ ಸರ್ಕಾರ ಇತ್ತು. ಆಗ ಕಾಡಾನೆ ಸಮಸ್ಯೆ ಏಕೆ ಪರಿಹರಿಸಲಿಲ್ಲಾ ಎಂದು ಟೀಕಿಸಿದರು.

    ಸೂರಜ್ ರೇವಣ್ಣ ವಿರುದ್ಧ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಕೆ ವಿಚಾರವಾಗಿ ಮಾತನಾಡಿದ ಅವರು, ನ್ಯಾಯಾಲಯದಲ್ಲಿರುವ ವಿಚಾರದ ಬಗ್ಗೆ ನಾನು ಮಾತನಾಡಲ್ಲ. ಯಾರು ಅರ್ಜಿ ಹಾಕಿಕೊಂಡಿದ್ದಾರೆ ಗೊತ್ತಿಲ್ಲ. ನಾವು ನ್ಯಾಯಾಲಯದ ತೀರ್ಪಿಗೆ ತಲೆ ಬಾಗುತ್ತೇವೆ. ನ್ಯಾಯಾಲಯದ ಬಗ್ಗೆ ನಮಗೆ ಗೌರವವಿದೆ. ನ್ಯಾಯಾಲಯ ಏನು ತೀರ್ಪು ಕೊಡುತ್ತೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು. ಇದನ್ನೂ ಓದಿ: ಗರ್ಭಿಣಿ ಮಗಳ ತಲೆಯನ್ನು ಕತ್ತರಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಪಾಪಿ ಅಮ್ಮ-ಮಗ 

    ರಾಜ್ಯದಲ್ಲಿ ಬಿಸಿ ಟೀಂ ಇದೆ. ಬಿ ಅಂದರೆ ಬಿಜೆಪಿ, ಸಿ ಅಂದರೆ ಕಾಂಗ್ರೆಸ್. ನಮಗೆ ಬಿಸಿ ಟೀಂ ಬೇಡ. ಬಿಸಿ ಟೀಂ ನಿಂದ ಏನು ಸಿಕ್ಕಲ್ಲ. ನಮ್ಮದು ಜೆಡಿಎಸ್, ಭತ್ತದ ತೆನೆ ಹೊತ್ತ ಮಹಿಳೆ ಗುರುತು. ಮಹಿಳೆ ಹೊಟ್ಟೆ ಹಸಿದವರಿಗೆ ಅನ್ನ ನೀಡುತ್ತಾಳೆ. ಬಡವರ ಕಷ್ಟಕ್ಕೆ ನೆರವಾಗುತ್ತಾಳೆ. ಭತ್ತದಿಂದ ಅನ್ನ, ರೈತರಿಗೆ ಅನ್ನ ನೀಡುತ್ತೇವೆ. ನಮ್ಮದು ಜೆಡಿಎಸ್, 2023ಕ್ಕೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೆ ಎಂದು ವಿಶ್ವಾಸದ ಮಾತುಗಳನ್ನು ಆಡಿದರು.

    ಕಾಂಗ್ರೆಸ್ ನ ಹಿರಿಯ ಮುಖಂಡ ಗುಲಾಬ್ ನಬಿ ಅಜಾದ್ ಅವರು ಅಲ್ಪಸಂಖ್ಯಾತರ ಮಹಾನ್ ನಾಯಕ. ಕಾಂಗ್ರೆಸ್ ನ ಸ್ತಂಭ ಅವರು. ಅಂತಹವರನ್ನೆ ಬುಡಸಮೇತ ಕಿತ್ತು ಹಾಕಿದ್ದಾರೆ. ಇಲ್ಲಿ ಒಬ್ಬ ಮುಖಂಡನನ್ನು ಇಟ್ಟುಕೊಂಡಿದ್ದಾರೆ. ಅವರಿಂದ ಮಾಜಿ ಪ್ರಧಾನಿ ದೇವೇಗೌಡರನ್ನು, ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಬೈಯುತ್ತಿದ್ದಾರೆ. ದೇವೇಗೌಡರ ಕುಟುಂಬವನ್ನು ಬೈಯ್ಯದಿದ್ದರೆ ಅವರಿಗೆ ಊಟ ಸೇರಲ್ಲ. ಕಾಂಗ್ರೆಸ್ ನನ್ನು ನಾವ್ಯಾರು ತೆಗೆಯಬೇಕಿಲ್ಲ. 26 ರಾಜ್ಯಗಳಲ್ಲಿ ಕಾಂಗ್ರೆಸ್ ಅನ್ನು ಮನೆಗೆ ಕಳುಹಿಸಿದ್ದಾರೆ. 27ನೇಯದು ಇಲ್ಲಿ, ಮನೆಗೆ ಕಳುಹಿಸುತ್ತಾರೆ ಎಂದು ವ್ಯಂಗ್ಯವಾಡಿದರು.

  • ಈಶ್ವರಪ್ಪ ಜೀವನದಲ್ಲಿ ಈವರೆಗೆ ಯಾವ ಕೆಲಸವನ್ನೂ ಸರಿಯಾಗಿ ಮಾಡಿಲ್ಲ: ಎಚ್.ಎಂ. ರೇವಣ್ಣ

    ಈಶ್ವರಪ್ಪ ಜೀವನದಲ್ಲಿ ಈವರೆಗೆ ಯಾವ ಕೆಲಸವನ್ನೂ ಸರಿಯಾಗಿ ಮಾಡಿಲ್ಲ: ಎಚ್.ಎಂ. ರೇವಣ್ಣ

    -ಜಾತಿ,ಆರ್ಥಿಕ ಗಣತಿಗೆ ಸರ್ಕಾರ ಸಬೂಬು ಹೇಳುತ್ತ ಮುಂದೂಡುತ್ತಿದೆ

    ರಾಯಚೂರು: ಕೆ.ಎಸ್.ಈಶ್ವರಪ್ಪ ಜೀವನದಲ್ಲಿ ಈವರೆಗೆ ಯಾವ ಕೆಲಸವನ್ನೂ ಸರಿಯಾಗಿ ಮಾಡಿಲ್ಲ. ರಾಯಣ್ಣ ಬ್ರಿಗೇಡ್ ಅರ್ಧಕ್ಕೆ ಬಿಟ್ಟು ಹೋದರು, ಕನಕಗೋಪುರ ವಿಚಾರನೂ ಅಷ್ಟೇ. ಜಾತಿ ಗಣತಿ ವರದಿ ತರಬೇಕು ಅಂತ ನಾನು, ಸಿದ್ದರಾಮಯ್ಯ, ಈಶ್ವರಪ್ಪ ಸೇರಿ ಎಲ್ಲಾ ಪಕ್ಷದ ಮುಖಂಡರು ಸಭೆ ಮಾಡಿದ್ದೇವು. ಈಗ ಈಶ್ವರಪ್ಪನವರು ಮಾತು ಬದಲಿಸಿದ್ದಾರೆ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಆರೋಪಿಸಿದರು.

    eshwarappa

    ರಾಯಚೂರಿನಲ್ಲಿ ಕುರುಬರ ಸಂಸ್ಕೃತಿ ದರ್ಶನ ಮಾಲಿಕೆಯ ಹದಿಮೂರು ಗ್ರಂಥಗಳ ಅನಾವರಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದುಳಿದ ಸಮುದಾಯಗಳ ಜಾತಿ ಮತ್ತು ಆರ್ಥಿಕ ಗಣತಿ ವಿಳಂಬಕ್ಕೆ ಸರ್ಕಾರ ಕೇವಲ ಸಬೂಬು ನೀಡುತ್ತಿದೆ. ಪ್ರಥಮವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿದವರು ಮೈಸೂರು ಅರಸರು. ಸಿದ್ದರಾಮಯ್ಯ ಸಿಎಂ ಇದ್ದಾಗ 172 ಕೋಟಿ ರೂ. ನೀಡಿ ಆರುವರೆ ಕೋಟಿ ಜನರ ಸಮೀಕ್ಷೆ ಮಾಡಿಸಿದ್ದರು ಎಂದರು. ಇದನ್ನೂ ಓದಿ: ದೇವೆಗೌಡ್ರು ಹುಟ್ಟುವ ಮೊದಲೇ RSS ಅಸ್ತಿತ್ವದಲ್ಲಿತ್ತು: ಕೆ.ಎಸ್ ಈಶ್ವರಪ್ಪ

    ಸರ್ಕಾರ ಬದಲಾದ ನಂತರ ಸಿಎಂ ಕುಮಾರಸ್ವಾಮಿ ಜೊತೆ ಜಾರಿ ಮಾಡುವಂತೆ ಕೇಳಿದಾಗ ಒಪ್ಪಲಿಲ್ಲ. ಇದೀಗ ಇರುವ ಸರ್ಕಾರ ಕೂಡ ಸಬೂಬು ಹೇಳುತ್ತಿದೆ, ಎಲ್ಲರೂ ಡ್ರಾಫ್ಟ್ ಗೆ ಸಹಿ ಹಾಕಿದ್ದಾರೆ. ಅಕ್ಟೋಬರ್ 30ರ ನಂತರ ಬೆಂಗಳೂರು ಚಲೋ ಚಳುವಳಿ ಮಾಡುವ ಚಿಂತನೆಯಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಎಲ್ಲರಿಗಿಂತ ಸೀನಿಯರ್, ಅರ್ಧ ಬೆಂಗಳೂರು ಉಸ್ತುವಾರಿ ಕೊಡಲಿ: ಸೋಮಣ್ಣ