Tag: ರೇವಂತ್ ರೆಡ್ಡಿ

  • ABVPಯಿಂದ ತೆಲಂಗಾಣ ಸಿಎಂ ಹುದ್ದೆಯವರೆಗೆ – ರೇವಂತ್ ರೆಡ್ಡಿ ಹಿನ್ನೆಲೆ ಏನು?

    ABVPಯಿಂದ ತೆಲಂಗಾಣ ಸಿಎಂ ಹುದ್ದೆಯವರೆಗೆ – ರೇವಂತ್ ರೆಡ್ಡಿ ಹಿನ್ನೆಲೆ ಏನು?

    ನವದೆಹಲಿ: ತೆಲಂಗಾಣದ (Telangana) ನೂತನ ಮುಖ್ಯಮಂತ್ರಿಯಾಗಿ (CM) ರೇವಂತ್ ರೆಡ್ಡಿ (Revanth Reddy) ಆಯ್ಕೆಯಾಗಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೇರಿದ್ದ ಕಾಂಗ್ರೆಸ್ (Congress) ಮಂಗಳವಾರ ಎಐಸಿಸಿ ಅಧ್ಯಕ್ಷರ ಸಮ್ಮುಖದಲ್ಲಿ ಸುದೀರ್ಘ ಚರ್ಚೆ ಬಳಿಕ ಶಾಸಕರ ಅಭಿಪ್ರಾಯದ ಮೇರೆಗೆ ರೇವಂತ್ ರೆಡ್ಡಿ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಲಾಗಿದೆ.

    ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ರೇವಂತ್ ರೆಡ್ಡಿ ಹೆಸರು ಘೋಷಿಸಿದರು. ನಾಳೆ ಬೆಳಗ್ಗೆ 11 ಗಂಟೆಗೆ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಈ ನಡುವೆ ರೇವಂತ್ ರೆಡ್ಡಿ ಯಾರು? ಅವರ ರಾಜಕೀಯ ಪ್ರಭಾವ ಎಷ್ಟಿದೆ? ಅವರನ್ನು ಸಿಎಂ ಮಾಡಲು ಕಾರಣಗಳೇನು? ಎಂದು ಚರ್ಚೆಯಾಗುತ್ತಿದೆ.

    ಸದ್ಯ ತೆಲಂಗಾಣ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿರುವ ರೇವಂತ್ ರೆಡ್ಡಿ ಅವರು 1967ರ ನವೆಂಬರ್ 8 ರಂದು ಅವಿಭಜಿತ ಆಂಧ್ರಪ್ರದೇಶದ ನಾಗರ್‌ಕರ್ನೂಲ್‌ನ ಕೊಂಡರೆಡ್ಡಿ ಪಲ್ಲಿ ಎಂಬ ಸ್ಥಳದಲ್ಲಿ ಜನಿಸಿದರು. ರೇವಂತ್ ತಂದೆಯ ಹೆಸರು ಅನುಮುಲ ನರಸಿಂಹ ರೆಡ್ಡಿ ಮತ್ತು ತಾಯಿ ಅನುಮುಲಾ ರಾಮಚಂದ್ರಮ್ಮ. ಅವರು ಹೈದರಾಬಾದಿನ ಎವಿ ಕಾಲೇಜಿನಲ್ಲಿ (ಉಸ್ಮಾನಿಯಾ ವಿಶ್ವವಿದ್ಯಾನಿಲಯ) ಲಲಿತಕಲೆಯಲ್ಲಿ ಪದವಿ ಪಡೆದಿದ್ದಾರೆ. ಕಾಲೇಜಿನ ಬಳಿಕ ಪ್ರಿಂಟಿಂಗ್ ಪ್ರೆಸ್ ಆರಂಭಿಸಿದರು.

    1992ರ ಮೇ 7 ರಂದು ರೇವಂತ್ ರೆಡ್ಡಿ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಜೈಪಾಲ್ ರೆಡ್ಡಿ ಅವರ ಸೋದರ ಸೊಸೆ ಅನುಮುಲಾ ಗೀತಾ ಅವರನ್ನು ವಿವಾಹವಾದರು. ಆದರೆ ಆರಂಭದಲ್ಲಿ ವೃತ್ತಿ ಆಯ್ಕೆಯಿಂದಾಗಿ ಕುಟುಂಬ ಸದಸ್ಯರು ಈ ಸಂಬಂಧವನ್ನು ವಿರೋಧಿಸಿದ್ದರು. ಬಳಿಕ ಮನೆಯವರು ಒಪ್ಪಿ ಗೀತಾ ಜತೆ ವೈವಾಹಿಕ ಸಂಬಂಧ ಆರಂಭಿಸಿದ್ದರು. ಅವರಿಗೆ ನ್ಯಾಮಿಷಾ ಎಂಬ ಮಗಳಿದ್ದಾಳೆ.

    ಮದುವೆಯ ನಂತರ ರೇವಂತ್ ರೆಡ್ಡಿ ಅವರ ರಾಜಕೀಯ ಪಯಣ ಆರಂಭವಾಯಿತು. ವಿದ್ಯಾರ್ಥಿ ದಿನಗಳಲ್ಲಿ ಅವರು ಆರ್‌ಎಸ್‌ಎಸ್‌ನ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನೊಂದಿಗೆ ಗುರುತಿಸಿಕೊಂಡಿದ್ದರು. 2006ರಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮಿಡ್ಜಿಲ್ ಮಂಡಲದಿಂದ ಜಿಲ್ಲಾ ಪರಿಷತ್ ಪ್ರಾದೇಶಿಕ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದರು.

    ನಂತರ 2007 ರಲ್ಲಿ ಆಂಧ್ರಪ್ರದೇಶದ ವಿಧಾನ ಪರಿಷತ್ತಿನ ಸದಸ್ಯರಾದರು. ಈ ಅವಧಿಯಲ್ಲಿ ಅವರು ಎನ್ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷದ ಭಾಗವಾದರು. 2009 ರಲ್ಲಿ ರೇವಂತ್ ಟಿಡಿಪಿ ಟಿಕೆಟ್‌ನಲ್ಲಿ ತಮ್ಮ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರು ಮತ್ತು 6,989 ಮತಗಳಿಂದ ಗೆದ್ದರು. ಕೊಡಂಗಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ರೇವಂತ್ 5 ಬಾರಿ ಕಾಂಗ್ರೆಸ್ ಶಾಸಕರಾಗಿದ್ದ ಗುರುನಾಥರೆಡ್ಡಿ ಅವರನ್ನು ಸೋಲಿಸುವ ಮೂಲಕ ಮೊದಲ ಬಾರಿಗೆ ಶಾಸಕರಾದರು. ಇದನ್ನೂ ಓದಿ: ಡಾಲಿ ‘ಲಿಡ್ಕರ್’ಗೆ ರಾಯಭಾರಿ: ಸಿಎಂ ಅಧಿಕೃತ ಘೋಷಣೆ

    ತೆಲಂಗಾಣ ರಚನೆಗೂ ಮುನ್ನ 2014ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರೇವಂತ್ ಮತ್ತೊಮ್ಮೆ ಕೊಡಂಗಲ್‌ನಿಂದ ಟಿಡಿಪಿ ಅಭ್ಯರ್ಥಿಯಾದರು. ಟಿಆರ್‌ಎಸ್ ಅಭ್ಯರ್ಥಿಯಾಗಿದ್ದ ಗುರುನಾಥರೆಡ್ಡಿ ಅವರನ್ನು ಸೋಲಿಸಿದರು. 2014ರ ವಿಧಾನಸಭಾ ಚುನಾವಣೆಯಲ್ಲಿ ರೇವಂತ್ 14,614 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇದಾದ ನಂತರ ಟಿಡಿಪಿ ರೇವಂತ್ ಅವರನ್ನು ತೆಲಂಗಾಣ ವಿಧಾನಸಭೆಯ ನಾಯಕನನ್ನಾಗಿ ಮಾಡಿತು. ಆದಾಗ್ಯೂ 2017ರ ಅಕ್ಟೋಬರ್ 25 ರಂದು ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಬಹಿರಂಗವಾದ ನಂತರ ಟಿಡಿಪಿ ರೇವಂತ್ ಅವರನ್ನು ಹುದ್ದೆಯಿಂದ ವಜಾಗೊಳಿಸಿತು. ಅಂತಿಮವಾಗಿ 2017ರ ಅಕ್ಟೋಬರ್ 31 ರಂದು ರೇವಂತ್ ಕಾಂಗ್ರೆಸ್ ಸದಸ್ಯರಾದರು.

    2018ರ ಸೆಪ್ಟೆಂಬರ್ 20 ರಂದು ಅವರು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ 3 ಕಾರ್ಯಾಧ್ಯಕ್ಷರಲ್ಲಿ ಒಬ್ಬರಾಗಿ ನೇಮಕಗೊಂಡರು. 2018ರ ತೆಲಂಗಾಣ ವಿಧಾನಸಭೆಯಲ್ಲಿ, ರೇವಂತ್ 3ನೇ ಬಾರಿಗೆ ಕೊಡಂಗಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದ ರೇವಂತ್ ಬಿಆರ್‌ಎಸ್‌ನ ಪಟ್ನಂ ನರೇಂದ್ರ ರೆಡ್ಡಿ ಅವರ ಕೈಯಲ್ಲಿ ಮೊದಲ ಸೋಲು ಅನುಭವಿಸಿದರು.

    ಅಸೆಂಬ್ಲಿ ಸೋಲಿನ ನಂತರ ರೇವಂತ್ 2019ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿದರು. 2019ರ ಚುನಾವಣೆಯಲ್ಲಿ ಗೆದ್ದ ತೆಲಂಗಾಣದ ಮೂವರು ಕಾಂಗ್ರೆಸ್ ಸಂಸದರಲ್ಲಿ ರೇವಂತ್ ಒಬ್ಬರು. ಮಲ್ಕಾಜ್‌ಗಿರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿಆರ್‌ಎಸ್‌ನ ಎಂ ರಾಜಶೇಖರ ರೆಡ್ಡಿ ಅವರನ್ನು 10,000ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದಾರೆ. 2021ರ ಜೂನ್‌ನಲ್ಲಿ ರೇವಂತ್ ಅವರನ್ನು ಕಾಂಗ್ರೆಸ್ ತನ್ನ ತೆಲಂಗಾಣ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿದಾಗ ದೊಡ್ಡ ಜವಾಬ್ದಾರಿಯನ್ನು ಪಡೆದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರೇವಂತ್ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಕಾಮರೆಡ್ಡಿ ವಿಧಾನಸಭಾ ಕ್ಷೇತ್ರದಲ್ಲಿ ಈ ಸ್ಪರ್ಧೆ ಏರ್ಪಟ್ಟಿತ್ತು. ಇದನ್ನೂ ಓದಿ: ಚುನಾವಣೆಯಲ್ಲಿ ಸೋಲಿನ ಹೊಣೆ ಹೊತ್ತು ಕಮಲ್ ನಾಥ್ ರಾಜೀನಾಮೆ?

  • ತೆಲಂಗಾಣ ನೂತನ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಡಿ.7ಕ್ಕೆ ಪ್ರಮಾಣ ವಚನ

    ತೆಲಂಗಾಣ ನೂತನ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಡಿ.7ಕ್ಕೆ ಪ್ರಮಾಣ ವಚನ

    ಹೈದರಾಬಾದ್: ತೆಲಂಗಾಣದ (Telangana) ನೂತನ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಲು ರೇವಂತ್ ರೆಡ್ಡಿಯವರು (Revanth Reddy) ಸಜ್ಜಾಗಿದ್ದು, ಡಿಸೆಂಬರ್ 7 ರಂದು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದು ಅಧಿಕೃತವಾಗಿ ಪ್ರಕಟಿಸಲಾಗಿದೆ.

    ರೇವಂತ್ ರೆಡ್ಡಿಯವರ ಜೊತೆ ಇತರ ಕೆಲವು ಸಚಿವರುಗಳು ಕೂಡ ಪ್ರಮಣ ವಚನ ಸ್ವೀಕಾರ ಮಾಡಲಿದ್ದಾರೆ. ಹೈದರಾಬಾದ್‍ನಲ್ಲಿ ನಡೆದ ಸಿಎಲ್‍ಪಿ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದ್ದು, ಸಿಎಂ ನೇಮಕದ ಅಂತಿಮ ನಿರ್ಧಾರವನ್ನು ಪಕ್ಷದ ಹೈಕಮಾಂಡ್‍ ಕೈಗೊಂಡಿದೆ.

    ಈ ಹಿಂದೆ ಡಿಸೆಂಬರ್‌ 9 ರಂದು ಸೋನಿಯಾ ಗಾಂಧಿಯವರ ಜನ್ಮದಿನವಿದ್ದು, ಇದೇ ದಿನ ರೇವಂತ್‌ ರೆಡ್ಡಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎಂದು ಹೇಳಲಾಗಿತ್ತು. ತೆಲಂಗಾಣ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ (Telangana Vidhanasabha Election Results) ತೆಲಂಗಾಣದಲ್ಲಿ ಕಾಂಗ್ರೆಸ್ (Congress) ಅಭೂತಪೂರ್ವ ಜಯಗಳಿಸಿತ್ತು. 119 ಸ್ಥಾನಗಳ ಪೈಕಿ 69 ಸ್ಥಾನಗಳನ್ನು ಗಳಿಸುವ ಮೂಲಕ ಸ್ಪಷ್ಟಬಹುಮತ ಪಡೆದಿತ್ತು.

    ಯಾರು ಈ ರೇವಂತ್‌ ರೆಡ್ಡಿ?: ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷ 56 ವರ್ಷದ ಅನುಮುಲಾ ರೇವಂತ್ ರೆಡ್ಡಿ ಪಕ್ಷದ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಆದರೆ ಇದಕ್ಕೂ ಮೊದಲು ರೇವಂತ್‌ ರೆಡ್ಡಿ ಆರ್‌ಎಸ್‌ಎಸ್‌ ಮತ್ತು ಎಬಿವಿಪಿಯಿಂದ ಗುರುತಿಸಿಕೊಂಡಿದ್ದವರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ರೆಡ್ಡಿ ಅವರು ಕಾಂಗ್ರೆಸ್‌ ಸೇರಿದರು. ಕಾಂಗ್ರೆಸ್‌ ಪರ ಅವರು ಕ್ಯಾಂಪೇನ್‌ ನಡೆಸುತ್ತಿದ್ದಾಗ, ಅವರ ಹಿನ್ನೆಲೆ ಹೆಚ್ಚು ಚರ್ಚೆಯಾಗಿತ್ತು.

    ರೇವಂತ್‌ ರೆಡ್ಡಿ ಆರ್‌ಎಸ್‌ಎಸ್‌ (RSS) ಕೈಗೊಂಬೆ ಎಂದು ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್‌ ಓವೈಸಿ ಅನೇಕ ಬಾರಿ ಟೀಕಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ ಕೆಲವು ಕ್ಷೇತ್ರಗಳಲ್ಲಿ ಒಂದಾಗಿ ಕೆಲಸ ಮಾಡುತ್ತಿವೆ ಎಂದೂ ಸಹ ಓವೈಸಿ ಹಿಂದಿನ ದಿನಗಳಲ್ಲಿ ಆರೋಪಿಸಿದ್ದರು.

    ರೇವಂತ್ ರೆಡ್ಡಿ ಅವರು ಎಬಿವಿಪಿಯಿಂದ (ABVP) ರಾಜಕೀಯ ಜೀವನ ಆರಂಭಿಸಿದರು. ನಂತರ ಟಿಡಿಪಿಗೆ (TDP) ಹೋದರು. 2009 ಮತ್ತು 2014 ರ ಚುನಾವಣೆಯಲ್ಲಿ ಕೊಡಂಗಲ್ ಕ್ಷೇತ್ರದಿಂದ ಗೆಲುವು ಸಾಧಿಸಿದರು. ಲಂಚ ಹಗರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದ ನಂತರ ಅವರು ಟಿಡಿಪಿ ತೊರೆದರು. 2017 ರ ಅಕ್ಟೋಬರ್‌ನಲ್ಲಿ ಕಾಂಗ್ರೆಸ್‌ ಸೇರಿದರು. 2018 ರ ಚುನಾವಣೆಯಲ್ಲಿ ಬಿಆರ್‌ಎಸ್‌ (BRS) ವಿರುದ್ಧ ಸ್ಪರ್ಧಿಸಿ ಕೊಡಂಗಲ್‌ನಿಂದ ಸೋತರು. ಆದರೆ ಮತ್ತೆ ಪುಟಿದೆದ್ದು 2019 ರ ಲೋಕಸಭೆ ಚುನಾವಣೆಯಲ್ಲಿ ಮಲ್ಕಾಜ್‌ಗಿರಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದರು. ಜೂನ್ 2021 ರಲ್ಲಿ ಅವರನ್ನು TPCC ಮುಖ್ಯಸ್ಥರನ್ನಾಗಿ ನೇಮಿಸಲಾಯಿತು.

    ಯಾವುದೇ ಪಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ, ಆ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷರೇ ಸಿಎಂ ಸ್ಥಾನ ಅಲಂಕರಿಸುವುದು (ಕರ್ನಾಟಕ ಹೊರತುಪಡಿಸಿ) ಸಾಮಾನ್ಯ. ಅಂತೆಯೇ 4 ರಾಜ್ಯ ಚುನಾವಣಾ ಫಲಿತಾಂಶದಲ್ಲಿ ತೆಲಂಗಾಣದಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸುವುದು ನಿಚ್ಚಳವಾಗಿದೆ. ಹೀಗಾಗಿ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ರೇವಂತ್‌ ರೆಡ್ಡಿಯೇ ಸಿಎಂ ಆಗಬಹುದು ಎಂದು ಮೂಲಗಳು ತಿಳಿಸಿವೆ.

  • ರೇವಂತ್ ರೆಡ್ಡಿಯನ್ನು ಭೇಟಿಯಾದ ತೆಲಂಗಾಣ ಡಿಜಿಪಿ ಅಮಾನತು

    ರೇವಂತ್ ರೆಡ್ಡಿಯನ್ನು ಭೇಟಿಯಾದ ತೆಲಂಗಾಣ ಡಿಜಿಪಿ ಅಮಾನತು

    ಹೈದರಾಬಾದ್: ತೆಲಂಗಾಣ (Telangana) ವಿಧಾನಸಭಾ ಚುನಾವಣೆಯ (Election) ಮತ ಎಣಿಕೆ ನಡೆಯುತ್ತಿದ್ದ ವೇಳೆ ತೆಲಂಗಾಣ ಕಾಂಗ್ರೆಸ್ (Congress) ಮುಖ್ಯಸ್ಥ ರೇವಂತ್ ರೆಡ್ಡಿ (Revanth Reddy) ಅವರನ್ನು ಭೇಟಿ ಮಾಡಿದ್ದಕ್ಕಾಗಿ ತೆಲಂಗಾಣದ ಪೊಲೀಸ್ ಮಹಾನಿರ್ದೇಶಕ ಅಂಜನಿ ಕುಮಾರ್ ಅವನ್ನು ಚುನಾವಣಾ ಆಯೋಗ ಅಮಾನತುಗೊಳಿಸಿದೆ.

    ಅಂಜನಿ ಕುಮಾರ್ ಮತ್ತು ಇತರ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ವಿವರಣೆಯನ್ನು ಸಲ್ಲಿಸುವಂತೆ ಕೇಳಲಾಗಿದೆ.

    ಅಂಜನಿ ಕುಮಾರ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ಇಂದು (ಭಾನುವಾರ) ಮುಂಜಾನೆ ಹೈದರಾಬಾದ್‌ನಲ್ಲಿರುವ ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಲು ಅವರ ನಿವಾಸಕ್ಕೆ ತೆರಳಿದ್ದರು. ಕಾಂಗ್ರೆಸ್ ಮುಖ್ಯಸ್ಥರಿಗೆ ಉನ್ನತ ಪೊಲೀಸ್ ಪುಷ್ಪಗುಚ್ಛ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಡಿಜಿಪಿ ಅಭ್ಯರ್ಥಿಯೊಬ್ಬರನ್ನು ಭೇಟಿಯಾಗಿರುವುದು ಒಂದು ಪಕ್ಷಕ್ಕೆ ತೋರಿದ ಒಲವು ಎಂಬ ಸ್ಪಷ್ಟ ಸೂಚನೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಸ್ವೀಟೆಸ್ಟ್‌ ವಿಕ್ಟರಿ – ರೇವಂತ್‌ ರೆಡ್ಡಿಗೆ ಅಭಿನಂದನೆ ಸಲ್ಲಿಸಿದ ನಟಿ ರಮ್ಯಾ

    ಸತತ 2 ಬಾರಿ ಗೆದ್ದು 10 ವರ್ಷಳಿಂದ ತೆಲಂಗಾಣದಲ್ಲಿ ಅಧಿಕಾರದಲ್ಲಿದ್ದ ಭಾರತ ರಾಷ್ಟ್ರ ಸಮಿತಿಯನ್ನು ಈ ಬಾರಿ ಸೋಲಿಸಿದ ಕಾಂಗ್ರೆಸ್ 3ನೇ ಬಾರಿ ಅಧಿಕಾರ ಹಿಡಿಯುವುದನ್ನು ತಡೆದಿದೆ. ಇದನ್ನೂ ಓದಿ: RSS, ABVP ಕಾರ್ಯಕರ್ತ ರೇವಂತ್‌ ರೆಡ್ಡಿ ಈಗ ಕಾಂಗ್ರೆಸ್‌ ಸಿಎಂ ರೇಸ್‌ನಲ್ಲಿ – ತೆಲಂಗಾಣಕ್ಕೆ ಸಿಎಂ ಯಾರು?

    
    
  • Giant-Killer – ಹಾಲಿ ಸಿಎಂ ಕೆಸಿಆರ್‌, ಭಾವಿ ಸಿಎಂ ರೇವಂತ್‌ ರೆಡ್ಡಿಯನ್ನೇ ಸೋಲಿಸಿದ ಬಿಜೆಪಿಯ ಅಭ್ಯರ್ಥಿ

    Giant-Killer – ಹಾಲಿ ಸಿಎಂ ಕೆಸಿಆರ್‌, ಭಾವಿ ಸಿಎಂ ರೇವಂತ್‌ ರೆಡ್ಡಿಯನ್ನೇ ಸೋಲಿಸಿದ ಬಿಜೆಪಿಯ ಅಭ್ಯರ್ಥಿ

    ಹೈದರಾಬಾದ್‌: ತೆಲಂಗಾಣದಲ್ಲಿ (Telangana) ಬಿಜೆಪಿಯ ವೆಂಕಟ ರಮಣ ರೆಡ್ಡಿ (Katipally Venkata Ramana Reddy) ಹಾಲಿ ಸಿಎಂ ಕೆ ಚಂದ್ರಶೇಖರ್‌ ರಾವ್‌ (KCR) ಮತ್ತು ಭಾವಿ ಸಿಎಂ ಎಂದೇ ಬಿಂಬಿತರಾಗಿರುವ ಕಾಂಗ್ರೆಸ್ಸಿನ ರೇವಂತ್‌ ರೆಡ್ಡಿ (Revanth Reddy) ಅವರನ್ನು ಸೋಲಿಸಿ Giant-Killer ಆಗಿ ಹೊರ ಹೊಮ್ಮಿದ್ದಾರೆ.

    ಕಾಮರೆಡ್ಡಿ (Kamareddy)ವಿಧಾನಸಭಾ ಕ್ಷೇತ್ರದಲ್ಲಿ ಕೆಸಿಆರ್‌ ಮಧ್ಯೆ ಫೈಟ್‌ ನಡೆಯಲಿದೆ ಎಂದೇ ವಿಶ್ಲೇಷಿಸಲಾಗಿತ್ತು. ಆದರೆ ಅಂತಿಮ ಹಣಾಹಣಿಯಲ್ಲಿ ವೆಂಕಟ ರಮಣ ರೆಡ್ಡಿ ಜಯಗಳಿಸಿದ್ದಾರೆ. ಇದನ್ನೂ ಓದಿ: ಲೋಕ ಸಮರಕ್ಕೆ ಬೂಸ್ಟ್‌ – ಸೆಮಿಫೈನಲ್‌ ಗೆದ್ದ ಮೋದಿ

     

    ಚುನಾವಣೆಯಲ್ಲಿ ವೆಂಕಟ ರಮಣ ರೆಡ್ಡಿ48.7 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದರು. ಉತ್ತರ ತೆಲಂಗಾಣದಲ್ಲಿ ಬರುವ ಈ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತದಾರರು 14.73% ಇದ್ದರೆ ಪರಿಶಿಷ್ಟ ಪಂಗಡದವರು 4.67% ಇದ್ದಾರೆ.  ಇದನ್ನೂ ಓದಿ: ತೆಲಂಗಾಣದಲ್ಲಿ ಬಿಆರ್‌ಎಸ್‌ ಸೋಲು – ತನ್ನನ್ನು ತಾನೇ ಟ್ರೋಲ್‌ ಮಾಡಿಕೊಂಡ ಕೆಸಿಆರ್‌ ಪುತ್ರ

    2018ರ ಚುನಾವಣೆಯಲ್ಲಿ ಟಿಆರ್‌ಎಸ್‌ನ ಗಂಪ ಗೋವರ್ಧನ್‌ 68,167 ಮತಗಳನ್ನು ಪಡೆದರೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮೊಹಮ್ಮದ್‌ ಅಲಿ ಶಬ್ಬೀರ್‌ 63,610 ಮತಗಳನ್ನು ಪಡೆದಿದಿದ್ದರು. ಬಿಜೆಪಿ 15,439 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿತ್ತು.

     

  • ಕಾಂಗ್ರೆಸ್‌ಗೆ ಸ್ವೀಟೆಸ್ಟ್‌ ವಿಕ್ಟರಿ – ರೇವಂತ್‌ ರೆಡ್ಡಿಗೆ ಅಭಿನಂದನೆ ಸಲ್ಲಿಸಿದ ನಟಿ ರಮ್ಯಾ

    ಕಾಂಗ್ರೆಸ್‌ಗೆ ಸ್ವೀಟೆಸ್ಟ್‌ ವಿಕ್ಟರಿ – ರೇವಂತ್‌ ರೆಡ್ಡಿಗೆ ಅಭಿನಂದನೆ ಸಲ್ಲಿಸಿದ ನಟಿ ರಮ್ಯಾ

    ಹೈದರಾಬಾದ್: ಪಂಚರಾಜ್ಯ ಚುನಾವಣೆಯ ಪೈಕಿ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ (4 State Election Results) ಹೊರಬಿದ್ದಿದ್ದು, ತೆಲಂಗಾಣದಲ್ಲಿ ಕಾಂಗ್ರೆಸ್‌ ಜಯ ಸಾಧಿಸಿದೆ. 119 ಸ್ಥಾನಗಳ ಪೈಕಿ 69 ಸ್ಥಾನಗಳಲ್ಲಿ ಸ್ಪಷ್ಟ ಬಹುಮತ ಕಾಯ್ದುಕೊಂಡಿದ್ದು, ಅಧಿಕೃತ ಘೋಷಣೆ ಆಗಬೇಕಿದೆ. ಆಡಳಿತಾರೂಢ BRS ಹಿಂದಿಕ್ಕಿ ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಕಾಂಗ್ರೆಸ್‌ ಮುನ್ನಡೆಸಿದ ಶ್ರೇಯ ರೇವಂತ್ ರೆಡ್ಡಿ (Revanth Reddy) ಅವರಿಗೆ ಸಲ್ಲುತ್ತದೆ ಎಂಬುದನ್ನು ‘ಕೈ’ ನಾಯಕರು ಪ್ರತಿಪಾದಿಸಿದ್ದಾರೆ.

    ಈ ಬೆನ್ನಲ್ಲೇ ಕಾಂಗ್ರೆಸ್ ಮಾಜಿ ಸಂಸದೆ ಹಾಗೂ ಸ್ಯಾಂಡಲ್‌ವುಡ್‌ ನಟಿ ರಮ್ಯಾ (Actor Ramya), ರೇವಂತ್‌ ರೆಡ್ಡಿ ಹಾಗೂ ಕಾಂಗ್ರೆಸ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ಸೋಶಿಯಲ್‌ ಮೀಡಿಯಾ X ಖಾತೆಯಲ್ಲಿ ರೇವಂತ್‌ ರೆಡ್ಡಿ ಫೋಟೋ ಹಂಚಿಕೊಂಡಿದ್ದು, ಕಾಂಗ್ರೆಸ್‌ಗೆ ಸ್ವೀಟೆಸ್ಟ್‌ ವಿಕ್ಷರಿ (ಅತ್ಯಂತ ಸಿಹಿಯಾದ ಜಯ) ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ ಅನ್ನು ರೇವಂತಿ ರೆಡ್ಡಿ ಹಾಗೂ ರಾಷ್ಟ್ರೀಯ ಕಾಂಗ್ರೆಸ್‌ಗೆ ಟ್ಯಾಗ್‌ ಮಾಡಿದ್ದಾರೆ. ಇದನ್ನೂ ಓದಿ: RSS, ABVP ಕಾರ್ಯಕರ್ತ ರೇವಂತ್‌ ರೆಡ್ಡಿ ಈಗ ಕಾಂಗ್ರೆಸ್‌ ಸಿಎಂ ರೇಸ್‌ನಲ್ಲಿ – ತೆಲಂಗಾಣಕ್ಕೆ ಸಿಎಂ ಯಾರು?

    ಸದ್ಯ ಪಕ್ಷದ ಗೆಲುವಿಗೆ ಕಾರಣರಾಗಿರುವ ರೇವಂತ್‌ ರೆಡ್ಡಿ ಅವರು ಸಿಎಂ ರೇಸ್‌ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ರೇವಂತ್ ರೆಡ್ಡಿ ಹೈದರಾಬಾದ್‌ನಲ್ಲಿರುವ ಪಕ್ಷದ ಕಚೇರಿಗೆ ಆಗಮಿಸುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ‘ಸಿಎಂ.. ಸಿಎಂ’ ಎಂದು ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: 51,000 ಮತಗಳ ಅಂತರದ ಜಯ – ಗೆಲುವನ್ನು ಮೋದಿಗೆ ಅರ್ಪಿಸಿದ ವಸುಂಧರಾ ರಾಜೆ

    ಯಾರು ಈ ರೇವಂತ್ ರೆಡ್ಡಿ?
    ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (TPCC) ಅಧ್ಯಕ್ಷ ಅನುಮುಲಾ ರೇವಂತ್ ರೆಡ್ಡಿ, (56) ಅವರು ಪಕ್ಷದ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಆದರೆ ಇದಕ್ಕೂ ಮೊದಲು ರೇವಂತ್ ರೆಡ್ಡಿ ಆರ್‌ಎಸ್‌ಎಸ್ ಮತ್ತು ಎಬಿವಿಪಿ ಯಿಂದ ಗುರುತಿಸಿಕೊಂಡಿದ್ದವರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ರೆಡ್ಡಿ ಅವರು ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ ಪರ ಅವರು ಕ್ಯಾಂಪೇನ್ ನಡೆಸುತ್ತಿದ್ದಾಗ, ಅವರ ಹಿನ್ನೆಲೆ ಹೆಚ್ಚು ಚರ್ಚೆಯಾಗುತ್ತಿದೆ. ರೇವಂತ್ ರೆಡ್ಡಿ ಆರ್‌ಎಸ್‌ಎಸ್ ಕೈಗೊಂಬೆ ಎಂದು ಅನೇಕರು ಟೀಕಿಸಿದ್ದೂ ಉಂಟು.

    ರೇವಂತ್ ರೆಡ್ಡಿ ಅವರು ಎಬಿವಿಪಿಯಿಂದ ರಾಜಕೀಯ ಜೀವನ ಆರಂಬಿಸಿದರು. ನಂತರ ಟಿಡಿಪಿಗೆ ಹೋದರು. 2009 ಮತ್ತು 2014 ರ ಚುನಾವಣೆಯಲ್ಲಿ ಕೊಡಂಗಲ್ ಕ್ಷೇತ್ರದಿಂದ ಗೆಲುವು ಸಾಧಿಸಿದರು. ಲಂಚ ಹಗರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದ ನಂತರ ಅವರು ಟಿಡಿಪಿ ತೊರೆದರು. 2017 ರ ಅಕ್ಟೋಬರ್‌ನಲ್ಲಿ ಕಾಂಗ್ರೆಸ್‌ ಸೇರಿದರು. 2018 ರ ಚುನಾವಣೆಯಲ್ಲಿ ಬಿಆರ್‌ಎಸ್‌ ವಿರುದ್ಧ ಸ್ಪರ್ಧಿಸಿ ಕೊಡಂಗಲ್‌ನಿಂದ ಸೋತರು. ಆದರೆ ಮತ್ತೆ ಪುಟಿದೆದ್ದು 2019 ರ ಲೋಕಸಭೆ ಚುನಾವಣೆಯಲ್ಲಿ ಮಲ್ಕಾಜ್‌ಗಿರಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದರು. ಜೂನ್ 2021 ರಲ್ಲಿ ಅವರನ್ನು TPCC ಮುಖ್ಯಸ್ಥರನ್ನಾಗಿ ನೇಮಿಸಲಾಯಿತು.

  • RSS, ABVP ಕಾರ್ಯಕರ್ತ ರೇವಂತ್‌ ರೆಡ್ಡಿ ಈಗ ಕಾಂಗ್ರೆಸ್‌ ಸಿಎಂ ರೇಸ್‌ನಲ್ಲಿ – ತೆಲಂಗಾಣಕ್ಕೆ ಸಿಎಂ ಯಾರು?

    RSS, ABVP ಕಾರ್ಯಕರ್ತ ರೇವಂತ್‌ ರೆಡ್ಡಿ ಈಗ ಕಾಂಗ್ರೆಸ್‌ ಸಿಎಂ ರೇಸ್‌ನಲ್ಲಿ – ತೆಲಂಗಾಣಕ್ಕೆ ಸಿಎಂ ಯಾರು?

    ಹೈದರಾಬಾದ್: ತೆಲಂಗಾಣದಲ್ಲಿ (Telangana) ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ. ಈ ಹೊತ್ತಿನಲ್ಲೇ ಪಕ್ಷದಿಂದ ಯಾರು ಸಿಎಂ ಆಗುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಎಬಿವಿಪಿ ಸದಸ್ಯರಾಗಿ ಗುರುತಿಸಿಕೊಂಡಿದ್ದ ರೇವಂತ್‌ ರೆಡ್ಡಿ (Revanth Reddy) ಈಗ ಕಾಂಗ್ರೆಸ್‌ನ ಸಿಎಂ ರೇಸ್‌ನಲ್ಲಿದ್ದಾರೆ.

    ರೇವಂತ್‌ ರೆಡ್ಡಿ ಅವರು ಈಗ ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿದ್ದಾರೆ. ಪಕ್ಷದ ಗೆಲುವಿನ ಸೂಚನೆಯೊಂದಿಗೆ ರೇವಂತ್ ರೆಡ್ಡಿ ಹೈದರಾಬಾದ್‌ನಲ್ಲಿರುವ ಪಕ್ಷದ ಕಚೇರಿಗೆ ಆಗಮಿಸುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ‘ಸಿಎಂ.. ಸಿಎಂ’ ಎಂದು ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: 51,000 ಮತಗಳ ಅಂತರದ ಜಯ – ಗೆಲುವನ್ನು ಮೋದಿಗೆ ಅರ್ಪಿಸಿದ ವಸುಂಧರಾ ರಾಜೆ

    ತೆಲಂಗಾಣದಲ್ಲಿ ಆಡಳಿತಾರೂಢ ಬಿಆರ್‌ಎಸ್‌ ಹಿಂದಿಕ್ಕಿ ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸಿದ ಶ್ರೇಯ ರೇವಂತ್‌ ರೆಡ್ಡಿ ಅವರಿಗೆ ಸಲ್ಲುತ್ತದೆ ಎಂಬುದನ್ನು ‘ಕೈ’ ನಾಯಕರು ಪ್ರತಿಪಾದಿಸಿದ್ದಾರೆ. ಅಷ್ಟಕ್ಕೂ ಯಾರು ಈ ರೇವಂತ್‌ ರೆಡ್ಡಿ? ಇವರು ತೆಲಂಗಾಣದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸಿಎಂ ಆಗುತ್ತಾರಾ ಎಂಬ ಪ್ರಶ್ನೆ ಮೂಡಿದೆ.

    ಯಾರು ಈ ರೇವಂತ್‌ ರೆಡ್ಡಿ?
    ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷ ಅನುಮುಲಾ ರೇವಂತ್ ರೆಡ್ಡಿ, (56) ಅವರು ಪಕ್ಷದ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಆದರೆ ಇದಕ್ಕೂ ಮೊದಲು ರೇವಂತ್‌ ರೆಡ್ಡಿ ಆರ್‌ಎಸ್‌ಎಸ್‌ ಮತ್ತು ಎಬಿವಿಪಿ ಯಿಂದ ಗುರುತಿಸಿಕೊಂಡಿದ್ದವರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ರೆಡ್ಡಿ ಅವರು ಕಾಂಗ್ರೆಸ್‌ ಸೇರಿದರು. ಕಾಂಗ್ರೆಸ್‌ ಪರ ಅವರು ಕ್ಯಾಂಪೇನ್‌ ನಡೆಸುತ್ತಿದ್ದಾಗ, ಅವರ ಹಿನ್ನೆಲೆ ಹೆಚ್ಚು ಚರ್ಚೆಯಾಗುತ್ತಿದೆ. ಇದನ್ನೂ ಓದಿ: ದೇಶಾದ್ಯಂತ ಜಾತಿ ಗಣತಿಗೆ ಮುಂದಾಗಿದ್ದ ಕಾಂಗ್ರೆಸ್‌ಗೆ ಬಿಗ್‌ ಶಾಕ್‌

    ರೇವಂತ್‌ ರೆಡ್ಡಿ ಆರ್‌ಎಸ್‌ಎಸ್‌ ಕೈಗೊಂಬೆ ಎಂದು ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್‌ ಓವೈಸಿ ಅನೇಕ ಬಾರಿ ಟೀಕಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ ಕೆಲವು ಕ್ಷೇತ್ರಗಳಲ್ಲಿ ಒಂದಾಗಿ ಕೆಲಸ ಮಾಡುತ್ತಿವೆ ಎಂದೂ ಸಹ ಓವೈಸಿ ಹಿಂದಿನ ದಿನಗಳಲ್ಲಿ ಆರೋಪಿಸಿದ್ದರು.

    ರೇವಂತ್ ರೆಡ್ಡಿ ಅವರು ಎಬಿವಿಪಿಯಿಂದ ರಾಜಕೀಯ ಜೀವನ ಆರಂಬಿಸಿದರು. ನಂತರ ಟಿಡಿಪಿಗೆ ಹೋದರು. 2009 ಮತ್ತು 2014 ರ ಚುನಾವಣೆಯಲ್ಲಿ ಕೊಡಂಗಲ್ ಕ್ಷೇತ್ರದಿಂದ ಗೆಲುವು ಸಾಧಿಸಿದರು. ಲಂಚ ಹಗರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದ ನಂತರ ಅವರು ಟಿಡಿಪಿ ತೊರೆದರು. 2017 ರ ಅಕ್ಟೋಬರ್‌ನಲ್ಲಿ ಕಾಂಗ್ರೆಸ್‌ ಸೇರಿದರು. 2018 ರ ಚುನಾವಣೆಯಲ್ಲಿ ಬಿಆರ್‌ಎಸ್‌ ವಿರುದ್ಧ ಸ್ಪರ್ಧಿಸಿ ಕೊಡಂಗಲ್‌ನಿಂದ ಸೋತರು. ಆದರೆ ಮತ್ತೆ ಪುಟಿದೆದ್ದು 2019 ರ ಲೋಕಸಭೆ ಚುನಾವಣೆಯಲ್ಲಿ ಮಲ್ಕಾಜ್‌ಗಿರಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದರು. ಜೂನ್ 2021 ರಲ್ಲಿ ಅವರನ್ನು TPCC ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಇದನ್ನೂ ಓದಿ: UPಗೆ ಯೋಗಿ ಆದಿತ್ಯನಾಥ್‌, ರಾಜಸ್ಥಾನಕ್ಕೆ ಬಾಲಕನಾಥ್‌ – ಸಿಎಂ ರೇಸ್‌ನಲ್ಲಿ ಮತ್ತೊಬ್ಬರು ಯೋಗಿ

    ಯಾವುದೇ ಪಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ, ಆ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷರೇ ಸಿಎಂ ಸ್ಥಾನ ಅಲಂಕರಿಸುವುದು (ಕರ್ನಾಟಕ ಹೊರತುಪಡಿಸಿ) ಸಾಮಾನ್ಯ. ಅಂತೆಯೇ 4 ರಾಜ್ಯ ಚುನಾವಣಾ ಫಲಿತಾಂಶದಲ್ಲಿ ತೆಲಂಗಾಣದಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸುವುದು ನಿಚ್ಚಳವಾಗಿದೆ. ಹೀಗಾಗಿ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ರೇವಂತ್‌ ರೆಡ್ಡಿಯೇ ಸಿಎಂ ಆಗಬಹುದು ಎಂದು ಮೂಲಗಳು ತಿಳಿಸಿವೆ.

  • ಕಾಂಗ್ರೆಸ್ ಸಂಸದ ರೇವಂತ್ ರೆಡ್ಡಿಗೆ ಕೊರೊನಾ ಪಾಸಿಟಿವ್

    ಕಾಂಗ್ರೆಸ್ ಸಂಸದ ರೇವಂತ್ ರೆಡ್ಡಿಗೆ ಕೊರೊನಾ ಪಾಸಿಟಿವ್

    ಹೈದರಾಬಾದ್: ಲೋಕಸಭೆ ಸಂಸದ ರೇವಂತ್ ರೆಡ್ಡಿ ಅವರಿಗೆ ಕೋವಿಡ್-19 ದೃಢಪಟ್ಟಿದ್ದು, ತಮಗೆ ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

    ನನಗೆ ಕೊರೊನಾ ವೈರಸ್ ದೃಢಪಟ್ಟಿದ್ದು, ಕೆಲವು ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದೇನೆ. ನನ್ನೊಂದಿಗೆ ಸಂಪರ್ಕ ಹೊಂದಿದ್ದವರೆಲ್ಲಾ ದಯವಿಟ್ಟು ಮುನ್ನೆಚ್ಚರಿಕೆ ವಹಿಸಿ ಕೊರೊನಾಪರೀಕ್ಷೆಗೆ ಒಳಗಾಗಿ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ರಾಜಕೀಯ ಬಿಕ್ಕಟ್ಟು – ಸುಡಾನ್‌ ಪ್ರಧಾನಿ ರಾಜೀನಾಮೆ ಘೋಷಣೆ

    ರೇವಂತ್ ರೆಡ್ಡಿ ತೆಲಂಗಾಣದ ಮಲ್ಕಾಜ್‍ಗಿರಿ ಸಂಸದರಾಗಿದ್ದು, ತೆಲಂಗಾಣದ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಈ ಹಿಂದೆ ಅವರು ತೆಲುಗು ದೇಶಂ ಪಕ್ಷದಿಂದ ಎರಡು ಬಾರಿ ಶಾಸಕರಾಗಿದ್ದರು. ಹಾಗೂ 2017ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

    ಕೋವಿಡ್-19 ರೂಪಾಂತರ ತಳಿ ಓಮಿಕ್ರಾನ್ ಹರಡುವಿಕೆ ಭಾರತದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ದೇಶದಲ್ಲಿ ಸೋಮವಾರ 24 ಗಂಟೆಗಳಲ್ಲಿ 33,750 ಹೊಸ ಕೋವಿಡ್ ಪ್ರಕರಣಗಳು ಮತ್ತು 123 ಸಾವುಗಳು ವರದಿಯಾಗಿದೆ. ಇದನ್ನೂ ಓದಿ: YSRPC ಸದಸ್ಯನಿಂದ NTR ಪ್ರತಿಮೆ ಧ್ವಂಸಗೊಳಿಸಲು ಯತ್ನ – ವೀಡಿಯೋ ವೈರಲ್

  • ಕತ್ತೆ ಅಂತ ಕರೆದು ವಿವಾದ – ಶಶಿ ತರೂರ್ ಕ್ಷಮೆಯಾಚಿಸಿದ ಕಾಂಗ್ರೆಸ್ ಮುಖ್ಯಸ್ಥ

    ಕತ್ತೆ ಅಂತ ಕರೆದು ವಿವಾದ – ಶಶಿ ತರೂರ್ ಕ್ಷಮೆಯಾಚಿಸಿದ ಕಾಂಗ್ರೆಸ್ ಮುಖ್ಯಸ್ಥ

    ಹೈದರಾಬಾದ್: ಶಶಿ ತರೂರ್ ಅವರನ್ನು ಕತ್ತೆ ಎಂದು ಕರೆದು ವಿವಾದಕ್ಕೀಡಾದ ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ ಅವರು ಕ್ಷಮೆ ಕೇಳಿದ್ದಾರೆ.

    ನಾನು ಈ ಮಾತುಗಳನ್ನು ಹಿಂತೆಗೆದುಕೊಳ್ಳುತ್ತೇನೆ ಮತ್ತು ನನ್ನ ಹಿರಿಯ ಸಹೋದ್ಯೋಗಿಯನ್ನು ಅತ್ಯುನ್ನತ ಗೌರವದಲ್ಲಿರಿಸುವೆ ಎಂದು ಪುನರುಚ್ಚರಿಸುತ್ತೇನೆ ಎಂದು ತಿಳಿಸಲು ಶಶಿ ತರೂರ್ ಅವರೊಂದಿಗೆ ಮಾತನಾಡಿದ್ದೇನೆ . ನನ್ನ ಮಾತುಗಳಿಂದ ಅವರಿಗೆ ಉಂಟಾದ ನೋವಿಗೆ ನಾನು ವಿಷಾದಿಸುತ್ತೇನೆ. ನಾವು ಕಾಂಗ್ರೆಸ್ ಪಕ್ಷದ ಮೌಲ್ಯಗಳು ಮತ್ತು ನೀತಿಗಳಲ್ಲಿ ನಮ್ಮ ನಂಬಿಕೆಯನ್ನು ಇರಿಸಿದ್ದೇವೆ ಎಂದು ರೆಡ್ಡಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: 1 ಸಾಲಿನಲ್ಲಿ ಪ್ರಧಾನಿಗೆ ವಿಶ್ ಮಾಡಿದ ರಾಹುಲ್ ಗಾಂಧಿ

    ರೆಡ್ಡಿಯವರ ಟ್ವೀಟ್‍ಗೆ ಪ್ರತಿಕ್ರಿಯಿಸಿದ ತರೂರ್, ಪಕ್ಷದ ನಾಯಕನಿಂದ ಕರೆಯನ್ನು ಸ್ವೀಕರಿಸಿದ್ದೇನೆ ಎಂದು ಹೇಳಿದರು. ನಾನು ಅವರ ವಿಷಾದದ ಅಭಿವ್ಯಕ್ತಿಯನ್ನು ಸ್ವೀಕರಿಸುತ್ತೇನೆ ಮತ್ತು ಈ ದುರದೃಷ್ಟಕರ ಪ್ರಸಂಗವನ್ನು ಹಿಂದೆ ಸರಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:  ಆರ್ಡರ್ ಮಾಡಿದ ಬರ್ಗರ್​ನಲ್ಲಿ ಸಿಕ್ತು ಕೈ ಬೆರಳು

    ರೆಡ್ಡಿ ತರೂರ್ ಅವರನ್ನು ಕತ್ತೆ ಎಂದು ಕರೆದರು ಮತ್ತು ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಹೇಳಿದ್ದರು. ರೆಡ್ಡಿ ಅವರ ಈ ಹೇಳಿಕೆ ವಿವಾದವನ್ನುಂಟುಮಾಡಿದ್ದು, ಹಿರಿಯ ನಾಯಕನ ಬಗ್ಗೆ ಈ ರೀತಿ ಮಾತನಾಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಅವರು ಕ್ಷಮೆ ಕೇಳಿರುವುದು ಸುದ್ದಿಯಾಗಿದೆ.