Tag: ರೇವಂತ್ ರೆಡ್ಡಿ

  • ತೆಲಂಗಾಣ | ಅಮಾನತು ಬೆನ್ನಲ್ಲೇ BRS ಪಕ್ಷ ತೊರೆದ ಕೆಸಿಆರ್‌ ಪುತ್ರಿ ಕವಿತಾ – MLC ಸ್ಥಾನಕ್ಕೂ ರಾಜೀನಾಮೆ

    ತೆಲಂಗಾಣ | ಅಮಾನತು ಬೆನ್ನಲ್ಲೇ BRS ಪಕ್ಷ ತೊರೆದ ಕೆಸಿಆರ್‌ ಪುತ್ರಿ ಕವಿತಾ – MLC ಸ್ಥಾನಕ್ಕೂ ರಾಜೀನಾಮೆ

    – ಸೋದರ ಸಂಬಂಧಿಗಳಿಂದ ಕುಟಂಬ ನಾಶಕ್ಕೆ ಯತ್ನ ಅಂತ ಕವಿತಾ ಆರೋಪ

    ಹೈದರಾಬಾದ್‌: ಪಕ್ಷ ವಿರೋಧಿ ಚಟುವಟಿಕೆ ಆರೋಪದ ಅಮಾನತುಗೊಂಡ ಮಾಜಿ ಸಿಎಂ ಕೆಸಿಆರ್‌ ಪುತ್ರಿ ಕೆ. ಕವಿತಾ (K Kavitha) ಮರುದಿನವೇ ಬಿಆರ್‌ಎಸ್‌ ಪಕ್ಷ (BRS Party) ತೊರೆದಿದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ವಿಧಾನ ಪರಿಷತ್‌ನ ಸದಸ್ಯತ್ವಕ್ಕೆ ಇಂದು ರಾಜೀನಾಮೆ ಸಲ್ಲಿಸಿದ್ದಾರೆ.

    ಕೆಸಿಆರ್ ವಿರುದ್ಧದ ಫೆಡರಲ್ ತನಿಖೆಗೆ ತಮ್ಮ ಸೋದರಸಂಬಂಧಿ, ಹಿರಿಯ ಬಿಆರ್‌ಎಸ್ ನಾಯಕ ಟಿ.ಹರೀಶ್ ರಾವ್ ಅವರನ್ನು ಕವಿತಾ ಸಾರ್ವಜನಿಕವಾಗಿ ದೂಷಿಸಿದ್ದರು. ತೆಲಂಗಾಣದ ಕಾಂಗ್ರೆಸ್ ನೇತೃತ್ವದ ಸರ್ಕಾರವು ಕಾಲೇಶ್ವರಂ ಯೋಜನೆಗೆ ಸಂಬಂಧಿಸಿದ ಅಕ್ರಮಗಳ ತನಿಖೆಯನ್ನು ಸಿಬಿಐಗೆ (CBI) ವಹಿಸಿದ ಬೆನ್ನಲ್ಲೇ ಈ ಆರೋಪ ಮಾಡಿದ್ದರು. ಹೀಗಾಗಿ ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಅವರನ್ನ ಮಂಗಳವಾರ (ಸೆ.2) ಅಮಾನತುಗೊಳಿಸಲಾಗಿತ್ತು. ಇದನ್ನೂ ಓದಿ: 2024ಕ್ಕೂ ಮುನ್ನ ದಾಖಲೆಗಳಿಲ್ಲದೇ ಪಾಕ್‌, ಅಫ್ಘಾನ್‌, ಬಾಂಗ್ಲಾದಿಂದ ಬಂದ ಅಲ್ಪಸಂಖ್ಯಾತರಿಗೆ ಭಾರತದಲ್ಲಿ ಉಳಿಯಲು ಅವಕಾಶ

    ಬಹಳ ನೋವಾಗಿದೆ
    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆ. ಕವಿತಾ ಅವರು, ಬಿಆರ್‌ಎಸ್‌ ಪಕ್ಷದಿಂದ ನನ್ನನ್ನ ಇದ್ದಕ್ಕಿದ್ದಂತೆ ಅಮಾನತುಗೊಳಿಸಿರುವುದು ಬಹಳ ನೋವಿನ ಸಂಗತಿ. ಹೀಗಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವದ ಜೊತೆಗೆ ಎಂಎಲ್‌ಸಿ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ರಾಜೀನಾಮೆ ಪತ್ರವನ್ನು ಸ್ಪೀಕರ್‌ ಕೆ. ಚಂದ್ರಶೇಖರ್‌ ರಾವ್‌ ಅವರಿಗೆ ಕಳುಸುತ್ತಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಅಮೆರಿಕ ಒತ್ತಡದ ನಡುವೆ ಭಾರತಕ್ಕೆ ರಷ್ಯಾ ಗಿಫ್ಟ್‌; ಇನ್ನಷ್ಟು S-400 ವಾಯು ರಕ್ಷಣಾ ವ್ಯವಸ್ಥೆ ಪೂರೈಕೆಗೆ ನಿರ್ಧಾರ

    ಮುಂದುವರಿದು.. ನಾನು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆ, ಹಿಂದುಳಿದ ವರ್ಗಗಳಿಗೆ ಮೀಸಲಾತಿಗಾಗಿ ಕೆಲಸ ಮಾಡಿದೆ ಜೊತೆಗೆ ಬಿಆರ್‌ಎಸ್ ಧ್ವಜ ಧರಿಸಿ ಕಾಂಗ್ರೆಸ್ ವಿರುದ್ಧ ಹೋರಾಟದಲ್ಲೂ ಕೆಲಸ ಮಾಡಿದೆ. ಇದು ಹೇಗೆ ಪಕ್ಷ ವಿರೋಧಿ ಚಟುವಟಿಕೆ ಆಗುತ್ತೆ ಅಂತ ನನಗೆ ಅರ್ಥವಾಗುತ್ತಿಲ್ಲ. ನನಗೆ ಯಾವುದೇ ಯಾವುದೇ ಹುದ್ದೆ ಮೇಲೆ ದುರಾಸೆ ಇಲ್ಲ, ಬೇರೆ ಯಾವುದೇ ಪಕ್ಷದ ಜೊತೆಗೂ ಹೋಗುತ್ತಿಲ್ಲ. ತೆಲಂಗಾಣ ಜಾಗೃತಿ ಸದಸ್ಯರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

    ಇದೇ ವೇಳೆ ಸೋದರಸಂಬಂಧಿಯೂ ಆಗಿರುವ ಬಿಆರ್‌ಎಸ್‌ನ ಹಿರಿಯ ನಾಯಕ ಟಿ ಹರೀಶ್ ರಾವ್ ಅವರ ಮೇಲೆ ಇನ್ನಷ್ಟು ಆರೋಪ ಮಾಡಿದರು. ಕಾಂಗ್ರೆಸ್‌ ಸಿಎಂ ರೇವಂತ್‌ ರೆಡ್ಡಿ (Revanth Reddy) ಹಾಗೂ ಹರೀಶ್‌ ರಾವ್‌ರಿಂದ ಕೆಎಸ್‌ಆರ್‌ ಕುಟುಂಬ ನಾಶಪಡಿಸಲು ಯತ್ನಿಸಿದ್ದಾರೆ. ಅದಕ್ಕಾಗಿ ನನ್ನ ತಂದೆ ಕೆಸಿಆರ್ ಮತ್ತು ಅವರ ಸಹೋದರ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ ಅವರನ್ನ ಗುರಿಯಾಗಿಸಲು ಸಂಚು ರೂಪಿಸಿದ್ದಾರೆ ಎಂದು ದೂರಿದರು. ಇದನ್ನೂ ಓದಿ: ಅತ್ಯಾಚಾರ ಆರೋಪದಲ್ಲಿ ಬಂಧನ; ಪೊಲೀಸರ ಮೇಲೆ ಗುಂಡು ಹಾರಿಸಿ ಆಪ್ ಶಾಸಕ ಪರಾರಿ

    ರೇವಂತ್‌ ರೆಡ್ಡಿ ಅವರು ನನ್ನ ಕುಟುಂಬದ ಕೆಟಿಆರ್ ಮತ್ತು ಕೆಸಿಆರ್ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿದ್ರು. ಆದರೆ ಹರೀಶ್ ರಾವ್ ವಿರುದ್ಧ ದಾಖಲಿಸಲಿಲ್ಲ. ಕಾಲೇಶ್ವರಂ (ನೀರಾವರಿ) ಯೋಜನೆ ಶುರುವಾದಾಗ ಹರೀಶ್ ರಾವ್ ನೀರಾವರಿ ಸಚಿವರಾಗಿದ್ದರು. ಆದ್ರೂ ರೇವಂತ್ ರೆಡ್ಡಿ ಅವರ ವಿರುದ್ಧ ಮಾತನಾಡಲಿಲ್ಲ, ಇದು ಸಂಚು ಅನ್ನೋದು ಸ್ಪಷ್ಟವಾಗಿ ತಿಳಿಯುತ್ತದೆ. ಹರೀಶ್ ರಾವ್ ಮತ್ತು ಸಂತೋಷ್ ರಾವ್ ನಮ್ಮ ಕುಟುಂಬ ಮತ್ತು ಪಕ್ಷವನ್ನ ನಾಶಮಾಡಲು ಸಂಚು ರೂಪಿಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

  • PublicTV Explainer: ‘ಕೆಜಿಎಫ್‌’ಗೆ ಕಂಟಕ – ಸರ್ಕಾರ V/S ವಿದ್ಯಾರ್ಥಿಗಳು; ಏನಿದು ವಿವಾದ?

    PublicTV Explainer: ‘ಕೆಜಿಎಫ್‌’ಗೆ ಕಂಟಕ – ಸರ್ಕಾರ V/S ವಿದ್ಯಾರ್ಥಿಗಳು; ಏನಿದು ವಿವಾದ?

    ದೇಶದಲ್ಲಿ ಈಗ ‘ಕೆಜಿಎಫ್‌’ದೇ ಸುದ್ದಿ. ಕೆಜಿಎಫ್‌ (KGF) ಎಂದರೆ ಕೋಲಾರದ ಚಿನ್ನದ ಗಣಿಯಲ್ಲ. ಅಥವಾ ಭಾರತ ಸಿನಿಮಾರಂಗದಲ್ಲಿ ಭಾರಿ ಸಂಚಲನ ಮೂಡಿಸಿದ ಯಶ್‌ ನಟನೆಯ ಸಿನಿಮಾವೂ ಅಲ್ಲ. ಇಲ್ಲಿ ತಿಳಿಸಲು ಹೊರಟಿರುವ ಕೆಜಿಎಫ್‌ ಹೋರಾಟಕ್ಕೆ ಸುದೀರ್ಘ ಇತಿಹಾಸವಿದೆ. ಕೆಜಿಎಫ್‌ ಅಂದ್ರೆ ಬೇರೇನು ಅಲ್ಲ. ಹೈದರಾಬಾದ್‌ನಲ್ಲಿರುವ ಕಾಂಚಾ ಗಚ್ಚಿಬೌಲಿ ಫಾರೆಸ್ಟ್‌ (Kancha Gachibowli Forest). ನೂರಾರು ಎಕರೆ ಹಸಿರು ಹೊದ್ದು ನಳನಳಿಸುತ್ತಿರುವ ಈ ಕಾಡಿನ ಮೇಲೆ ಸರ್ಕಾರದ ಕಣ್ಣು ಬಿದ್ದಿದೆ.

    ಗ್ರಾಮೀಣ ಭಾಗದ ಬಡವರು ಮತ್ತು ಬುಡಕಟ್ಟು ಜನಾಂಗದ ಜೀವನೋಪಾಯಕ್ಕೆ ಪೂರಕವಾದ, ಜಾಗತಿಕ ತಾಪಮಾನ ಏರಿಕೆ ತಗ್ಗಿಸುವುದು, ಫಲವತ್ತಾದ ಮಣ್ಣನ್ನು ಸಂರಕ್ಷಿಸುವುದು, ಅಳಿವಿನಂಚಿನ ವನ್ಯಜೀವಿಗಳನ್ನು ಸಂರಕ್ಷಿಸುವಲ್ಲಿ ಕಾಡುಗಳು ಪ್ರಮುಖ ಪಾತ್ರವಹಿಸುತ್ತವೆ. ಹಸಿರು ಜೀವಸಂಕುಲದ ಉಸಿರು. ಆದರೆ, ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ನಾಶ ಎಗ್ಗಿಲ್ಲದೇ ನಡೆಯುತ್ತಿದೆ. ಈಗ ಅಂಥದ್ದೇ ಸನ್ನಿವೇಶವೊಂದಕ್ಕೆ ಹೈದರಾಬಾದ್‌ ಸಾಕ್ಷಿಯಾಗಿದೆ. ನೂರಾರು ಎಕರೆ ಅರಣ್ಯ ಪ್ರದೇಶ ಸರ್ಕಾರದ ಕಣ್ಣಿಗೆ ಬಿದ್ದಿದೆ. ಆದರೆ, ಅರಣ್ಯ ಸಂರಕ್ಷಣೆಗೆ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿರುವುದು ಭರವಸೆ ಮೂಡಿಸಿದೆ. ತೆಲಂಗಾಣದ ಅರಣ್ಯ ಪ್ರದೇಶವು 27,292 ಚದರ ಕಿ.ಮೀ.. ಒಟ್ಟು ಭೌಗೋಳಿಕ ಪ್ರದೇಶದ ಸರಿಸುಮಾರು ಶೇ.24.35 ರಷ್ಟಿದೆ.

    ಏನಿದು ಕಾಂಚಾ ಗಚ್ಚಿಬೌಲಿ ಅರಣ್ಯ ಪ್ರದೇಶ ವಿವಾದ? ಸರ್ಕಾರದ ಕಣ್ಣು ಬಿದ್ದಿರೋದ್ಯಾಕೆ? ವಿದ್ಯಾರ್ಥಿಗಳ ವಿರೋಧವೇಕೆ? ಹೋರಾಟದ ಹಿನ್ನೆಲೆ ಏನು? ಸುಪ್ರೀಂ ಕೋರ್ಟ್‌ ತೀರ್ಪೇನು? ಮೊದಲಾದ ಪ್ರಶ್ನೆಗಳಿಗೆ ವಿವರ ಇಲ್ಲಿದೆ.

    ಹೈದರಾಬಾದ್‌ ‘ನಗರ ಕಾಡು’ ಕಾಂಚಾ ಗಚ್ಚಿಬೌಲಿ
    ಕಾಂಚಾ ಗಚ್ಚಿಬೌಲಿ ಒಂದು ವಿಶೇಷ ಕಾಡು. ಹೈದರಾಬಾದ್‌ನ ನಗರ ಕಾಡು ಎಂದೇ ಇದು ಪ್ರಸಿದ್ಧಿ. ಗಿಜಿಗುಡುವ ನಗರದ ಹೃದಯಭಾಗದಲ್ಲಿದೆ. ಈ ಅರಣ್ಯದಲ್ಲಿ ಹಕ್ಕಿಗಳ ನಿನಾದ, ಪ್ರಶಾಂತ ಕಾಡು ನಿಜಕ್ಕೂ ಎಂಥವರಿಗೂ ಇಷ್ಟವಾಗುತ್ತದೆ. ಹೈದರಾಬಾದ್ ವಿಶ್ವವಿದ್ಯಾನಿಲಯದ (Hyderabad University) ಪಕ್ಕದಲ್ಲೇ ಇರುವ ಕಾಂಚಾ ಗಚ್ಚಿಬೌಲಿ ಅರಣ್ಯವು ಶ್ರೀಮಂತ ಜೀವವೈವಿಧ್ಯತೆ, ಶತಮಾನಗಳ ಹಳೆಯ ಮರಗಳು ಮತ್ತು ಸ್ತಬ್ಧ ಹಾದಿಗಳಿಗೆ ಹೆಸರುವಾಸಿಯಾದ ಪ್ರಶಾಂತ ಹಸಿರು ವಿಸ್ತಾರವನ್ನು ಹೊಂದಿದೆ. ದಶಕಗಳಿಂದ ಈ ಅರಣ್ಯವು ವನ್ಯಜೀವಿಗಳಿಗೆ ಅಭಯಾರಣ್ಯ ಮಾತ್ರವಲ್ಲದೆ, ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಸ್ಥಳೀಯ ನಿವಾಸಿಗಳಿಗೆ ಬದುಕಿನ ಪಾಠದ ತಾಣ. ಹೈದರಾಬಾದ್‌ ವಿವಿ ಕ್ಯಾಂಪಸ್‌ನ ಪಕ್ಕದ ದೊಡ್ಡ ಪ್ರದೇಶದಲ್ಲಿ ಹರಡಿರುವ ಈ ಅರಣ್ಯ ಪ್ರದೇಶವು ರೋಮಾಂಚಕ ಪರಿಸರ ವ್ಯವಸ್ಥೆಯಾಗಿದೆ. ಕಾಂಕ್ರಿಟ್‌ ಕಾಡಾಗಿ ಬೆಳೆಯುತ್ತಿರುವ ಹೈದರಾಬಾದ್‌ನ ಮಧ್ಯೆ ಸಿಲುಕಿ ಕಾಂಚಾ ಗಚ್ಚಿಬೌಲಿ ಅರಣ್ಯ ವ್ಯತಿರಿಕ್ತ ಪರಿಣಾಮ ಎದುರಿಸುತ್ತಿದೆ. ಶತಮಾನದ ಹಳೆಯ ಮರಗಳು, ನೈಸರ್ಗಿಕ ಹುಲ್ಲುಗಾವಲು ಅಸ್ತವ್ಯಸ್ತವಾಗಿದೆ.

    ಜೀವವೈವಿಧ್ಯತೆಯ ಸಮೃದ್ಧಿ
    700 ಕ್ಕೂ ಹೆಚ್ಚು ಜಾತಿಯ ಹೂಬಿಡುವ ಸಸ್ಯಗಳು ಇಲ್ಲಿವೆ. ಸೂಕ್ಷ್ಮ ಆರ್ಕಿಡ್‌ಗಳಿಂದ ಹಿಡಿದು ನಳನಳಿಸುವ ಬಗೆಬಗೆಯ ಹೂವುಗಳ ವರೆಗೆ ಪ್ರತಿ ಋತುವಿನಲ್ಲಿ ಕಾಡು ಬಣ್ಣದೊಂದಿಗೆ ಜೀವಂತವಾಗಿದೆ. ನೀಲಕಂಠ, ತೆಲಂಗಾಣದ ನೀಲಿ ರಾಜ್ಯ ಪಕ್ಷಿ ಮತ್ತು ಇಂಪಾಗಿ ಕೂಗುವ ಓರಿಯಂಟಲ್ ಸ್ಕೈಲಾರ್ಕ್ ಸೇರಿದಂತೆ ಸುಮಾರು 220 ಪ್ರಭೇದದ ಪಕ್ಷಿಗಳಿವೆ. ವಲಸೆ ಪಕ್ಷಿಗಳು ಇಲ್ಲಿ ಬಂದು ನೆಲಸುತ್ತವೆ. ಜಿಂಕೆಗಳು, ಕಾಡುಹಂದಿಗಳು ಅಥವಾ ಮುಳ್ಳುಹಂದಿಗಳಿಗೂ ಈ ಕಾಡು ಆವಾಸ ಸ್ಥಾನವಾಗಿದೆ. ವಿವಿಧ ಪ್ರಭೇದದ ಹಲ್ಲಿಗಳು, ಹಾವುಗಳು ಮತ್ತು ಉಭಯಚರಗಳಿಗೂ ಕಾಡು ನೆಲೆಯಾಗಿದೆ. ಎಲ್ಲಕ್ಕಿಂತ ವಿಶೇಷವಾಗಿ, ಹೈದರಾಬಾದ್‌ ಟ್ರೀ ಟ್ರಂಕ್‌ ಸ್ಪೈಡರ್‌ಗೆ (ಜೇಡ) ಈ ಕಾಡು ಆವಾಸ ಸ್ಥಾನ.

    ಹೈದರಾಬಾದ್‌ ‘ರಕ್ಷಾ ಕವಚ’
    ಹಲವು ವಿಶೇಷತೆ ಹೊಂದಿರುವ ಈ ಕಾಡು ಹೈದರಾಬಾದ್‌ ನಗರವನ್ನೂ ರಕ್ಷಣೆ ಮಾಡುತ್ತಿದೆ. ಇಲ್ಲಿನ ಪರಿಸರ ವ್ಯವಸ್ಥೆ ನಗರ ಪ್ರದೇಶದ ಜನತೆಗೆ ಅನುಕೂಲಕರವಾಗಿದೆ. ಬೇಸಿಗೆ ಸಂದರ್ಭದಲ್ಲಿ ಹೆಚ್ಚಿನ ತಾಪಮಾನ ಉಂಟಾಗುವುದನ್ನು ತಡೆಗಟ್ಟುತ್ತಿದೆ. ಒಂದು ವೇಳೆ ಈ ಅರಣ್ಯ ಪ್ರದೇಶವನ್ನು ಕಳೆದುಕೊಂಡರೆ, 1.4 ಡಿಗ್ರಿ ಸೆಲ್ಸಿಯಸ್‌ಗೆ ತಾಪಮಾನ ಏರಿಕೆಯಾಗಬಹುದು ಎಂದು ಪರಿಸರ ತಜ್ಞರು ಅಂದಾಜಿಸಿದ್ದಾರೆ. ಹಸಿರು ಹೊದಿಕೆಯು ಗಾಳಿಯ ಗುಣಮಟ್ಟವನ್ನು ಸುಧಾರಿಸಲು, ಅಂತರ್ಜಲ ಮಟ್ಟವನ್ನು ವೃದ್ಧಿಸಲು ಮತ್ತು ಮಣ್ಣಿನ ಸವೆತವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

    ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಕಾಂಚಾ ಗಚ್ಚಿಬೌಲಿಯನ್ನು ತೆರೆದ ಗಾಳಿಯ ತರಗತಿಯಾಗಿ ಬಳಸುತ್ತಾರೆ, ಕ್ಷೇತ್ರ ಸಂಶೋಧನೆ, ಜೀವವೈವಿಧ್ಯ ಮ್ಯಾಪಿಂಗ್ ಮತ್ತು ಪಕ್ಷಿ ವೀಕ್ಷಣೆ ನಡಿಗೆಗಳನ್ನು ನಡೆಸುತ್ತಾರೆ. ಸ್ಥಳೀಯ ಮರಗಳು ಮತ್ತು ಕೀಟಗಳ ಬಗ್ಗೆ ಕಲಿಯಲು ಈ ಪ್ರದೇಶದ ಶಾಲೆಗಳು ಮಕ್ಕಳನ್ನು ಹುದುಗಿಸುತ್ತವೆ. ಸ್ಥಳೀಯ ನಿವಾಸಿಗಳು ಸ್ತಬ್ಧ ಬೆಳಿಗ್ಗೆ ನಡಿಗೆ, ಪ್ರಕೃತಿ ography ಛಾಯಾಗ್ರಹಣ ಮತ್ತು ಸಮುದಾಯ ಸ್ವಚ್ -ಗೊಳಿಸುವ ಡ್ರೈವ್‌ಗಳಿಗಾಗಿ ಭೇಟಿ ನೀಡುತ್ತಾರೆ, ಅದು ಜಾಗವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಿದೆ.

    ವಿವಾದ ಏನು?
    ಸುಮಾರು 400 ಎಕರೆ ಕಾಂಚಾ ಗಚಿಬೌಲಿ ಪ್ರದೇಶದ ಅರಣ್ಯದಲ್ಲಿ ಬಹು-ಮೂಲಸೌಕರ್ಯ ಮತ್ತು ಐಟಿ-ಪಾರ್ಕ್‌ಗಳ ಅಭಿವೃದ್ಧಿಗಾಗಿ ಹರಾಜು ಹಾಕಲು ತೆಲಂಗಾಣ ಸರ್ಕಾರ ಯೋಜಿಸಿದೆ. ಅದಕ್ಕಾಗಿ ಅರಣ್ಯ ಭೂಮಿ ತೆರವು ಮಾಡಲು ಮುಂದಾಗಿದೆ. ಇದಕ್ಕೆ ಹೈದರಾಬಾದ್‌ ವಿವಿ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ತೆಲಂಗಾಣ ಸರ್ಕಾರದ ಕ್ರಮ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ತೆಲಂಗಾಣದಲ್ಲಿ ಕಾಡುಗಳು ಮತ್ತು ಜೀವವೈವಿಧ್ಯತೆಯು ನೀರಾವರಿ, ರಸ್ತೆ ನಿರ್ಮಾಣ ಕಾರ್ಯಗಳು ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಂದಾಗಿ ಕುಗ್ಗುತ್ತಿದೆ. ಇದನ್ನು 2014 ರಲ್ಲಿ ರಾಜ್ಯ ರಚನೆಯ ನಂತರ ಈ ಕಾರ್ಯಗಳು ನಡೆಯುತ್ತಿವೆ. ತೆಲಂಗಾಣವು ಶ್ರೀಮಂತ ಜೀವವೈವಿಧ್ಯತೆಗೆ ಹೆಸರುವಾಸಿಯಾಗಿದೆ. ಇದನ್ನು ಒಂಬತ್ತು ಕೃಷಿ-ಹವಾಮಾನ ಪ್ರದೇಶಗಳಲ್ಲಿ ವಿತರಿಸಲಾಯಿತು. ರಾಜ್ಯವು ಗೋದಾವರಿ ಜಲಾನಯನ ಪ್ರದೇಶದೊಳಗೆ ದಟ್ಟವಾದ ತೇಗದ ಕಾಡುಗಳನ್ನು ಹೊಂದಿತ್ತು. ಕಾಡುಗಳನ್ನು ರಕ್ಷಿಸಲು ಮತ್ತು ಕಾಡುಗಳನ್ನು ಪುನರುತ್ಥಾನಗೊಳಿಸುವ ಇಚ್ಛಾಶಕ್ತಿಯ ಕೊರತೆಯಿಂದಾಗಿ, ತೆಲಂಗಾಣವು ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಒಂದೆಡೆ ಧಾರಾಕಾರ ಮಳೆಯ ಹೊಡೆದ, ಮತ್ತೊಂದು ಕಡೆ ನೀರಿನ ಕೊರತೆಯನ್ನೂ ಎದುರಿಸುತ್ತಿದೆ.

    ಕಾಂಚ ಗಚ್ಚಿಬೌಲಿ ಭೂಮಿ ಹರಾಜಿಗೆ ಮುಂದಾದ ಸರ್ಕಾರ
    ತೆಲಂಗಾಣ ಸರ್ಕಾರದಿಂದ ಹರಾಜಿಗೆ ಗುರುತಿಸಲ್ಪಟ್ಟ ಕಾಂಚ ಗಚ್ಚಿಬೌಲಿ ಭೂಮಿಯು ವಿವಿಧ ಕಾನೂನುಬದ್ಧ ಮಾಲೀಕರು ಮತ್ತು ಹಕ್ಕುದಾರರನ್ನು ಹೊಂದಿದೆ. ಆದಾಗ್ಯೂ, ಈ ಭೂಮಿಯು ಹಲವು ವರ್ಷಗಳ ಹೋರಾಟದ ಫಲವಾಗಿ ರಕ್ಷಿಸಲ್ಪಟ್ಟಿದೆ. ಜೀವವೈವಿಧ್ಯತೆ ಮತ್ತು ಹಸಿರು ಇಲ್ಲಿ ಸಮೃದ್ಧವಾಗಿದೆ. ಸರ್ವೆ ಸಂಖ್ಯೆ 25 ರೊಳಗೆ ರೇಖೆಗಳು, ಕಣಿವೆಗಳು ಮತ್ತು ಜಲಮೂಲಗಳನ್ನು ರಕ್ಷಿಸಿದ್ದರೆ, ಇದು ಪ್ರಮುಖ ಅರಣ್ಯವೂ ಆಗಬಹುದಿತ್ತು. ಇದು ಮುಸಿ ನದಿ ಜಲಾನಯನ ಪ್ರದೇಶದ ಭಾಗವಾಗಿದೆ. ನದಿ ಜಲಾನಯನ ಪ್ರದೇಶದ ಹರಿವಿಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತಿದೆ. ಸರ್ವೆ ಸಂಖ್ಯೆ 25 ರ 2,700 ಎಕರೆ ವಿಸ್ತೀರ್ಣದ ಈ ಭೂಮಿಯಲ್ಲಿ ಹರಾಜಿಗೆ ಗುರುತಿಸಲಾದ 400 ಎಕರೆ ಪ್ರದೇಶವೂ ಸೇರಿದೆ. ಇದು ಅಂತರ್ಜಲ ಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹರಾಜಾಗಲಿರುವ ಭೂಮಿಯ ಶೇ.14 ಭಾಗವು ಕಾಂಕ್ರಿಟ್ ಆಗಿ ಪರಿವರ್ತನೆಗೊಂಡರೆ, ಅಂತರ್ಜಲ ಮರುಪೂರಣ ಕಷ್ಟವಾಗುತ್ತದೆ. ಪರಿಣಾಮವಾಗಿ ಪ್ರವಾಹದ ಸಾಧ್ಯತೆಗಳು ಹೆಚ್ಚಾಗುತ್ತವೆ. ಜಲಮೂಲಗಳು, ಅಲೆಗಳ ಮಾದರಿಯ ಭೂಪ್ರದೇಶ ಮತ್ತು ನೈಸರ್ಗಿಕ ನೀರಿನ ಹರಿವಿನೊಂದಿಗೆ ಜೀವವೈವಿಧ್ಯತೆಯನ್ನು ಕಾಪಾಡಿಕೊಳ್ಳುವುದು ಅನುಕೂಲಕರ ಸೂಕ್ಷ್ಮ ಹವಾಮಾನವನ್ನು ಖಚಿತಪಡಿಸುತ್ತದೆ. ಒಂದು ವೇಳೆ, ಹಸಿರು ಹೊದಿಕೆ ಮತ್ತು ಜೀವವೈವಿಧ್ಯವನ್ನು ಬುಲ್ಡೋಜರ್ ಮಾಡಿದರೆ ಅದು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತದೆ.

    ಅರಣ್ಯ ರಕ್ಷಣೆಗೆ 25 ವರ್ಷಗಳಿಂದ ಹೋರಾಟ
    ಸುಮಾರು ಮೂರು ದಶಕಗಳ ಹಿಂದಿನಿಂದಲೂ ಹೈದರಾಬಾದ್ ವಿಶ್ವವಿದ್ಯಾಲಯದ (UoH) ಭೂಮಿಯನ್ನು ವಿವಿಧ ಉದ್ದೇಶಗಳಿಗಾಗಿ ಪರಭಾರೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಇದರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಭೂಮಿ ಸುಮಾರು 25 ವರ್ಷಗಳಿಂದ ಸುದೀರ್ಘ ಕಾನೂನು ಹೋರಾಟದ ಕೇಂದ್ರವಾಗಿದೆ. ಆದರೂ, ಈ ಭೂಮಿಯನ್ನು ಕಬಳಿಸುವ ಪ್ರಯತ್ನಗಳು ನಿರಂತರ ನಡೆಯುತ್ತಿವೆ. ವಿಶ್ವವಿದ್ಯಾಲಯದ ಅಧಿಕಾರಿಗಳು ಪರ್ಯಾಯವಾಗಿ ಇದಕ್ಕೆ ಸಹಕರಿಸುತ್ತಿದ್ದಾರೆ ಎಂಬ ಆರೋಪಗಳಿವೆ.

    400 ಎಕರೆಗಳಿಗೂ ಹೆಚ್ಚು ವಿಸ್ತೀರ್ಣದ ಈ ಭೂಮಿಯನ್ನು ಡೀಮ್ಡ್ ಅರಣ್ಯವೆಂದು ಪರಿಗಣಿಸಬಹುದು. ಟಿಎನ್ ಗೋದವರ್ಮನ್ ತಿರುಮುಲ್ಪಾಡ್ vs ಯೂನಿಯನ್ ಆಫ್ ಇಂಡಿಯಾ (1996) ಪ್ರಕರಣದ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಅರಣ್ಯದಲ್ಲಿರುವ ಎಲ್ಲಾ ಕಂದಾಯ ಅಥವಾ ಖಾಸಗಿ ಭೂಮಿಯನ್ನು ‘ಡೀಮ್ಡ್ ಅರಣ್ಯಗಳು’ ಎಂದು ಪರಿಗಣಿಸಲಾಗುತ್ತದೆ ಮತ್ತು ಅರಣ್ಯ ಸಂರಕ್ಷಣಾ ಕಾಯ್ದೆ, 1980 ರಲ್ಲಿ ವ್ಯಾಖ್ಯಾನಿಸಲಾದ ಅರಣ್ಯಗಳಂತೆಯೇ ಪರಿಗಣಿಸಲಾಗುತ್ತದೆ. 2025 ರ ಮಾರ್ಚ್ 15 ರಂದು ತೆಲಂಗಾಣ ಸರ್ಕಾರವು ಅರಣ್ಯ ಭೂಮಿಯನ್ನು ಗುರುತಿಸಲು ಮತ್ತು ಏಕೀಕೃತ ಭೂ ದಾಖಲೆಯನ್ನು ತಯಾರಿಸಲು ಸಮಿತಿಯನ್ನು ರಚಿಸುವ ಆದೇಶವನ್ನು ಹೊರಡಿಸಿತು. ಸರಿಯಾದ ಭೂ ಸಮೀಕ್ಷೆಯ ನಂತರ ಈ ಸಮಿತಿಯು, ‘ಸರ್ವೆ ಸಂಖ್ಯೆ 25 ರಲ್ಲಿರುವ ಕಾಂಚ ಗಚ್ಚಿಬೌಲಿ ಭೂಮಿಯನ್ನು ಅರಣ್ಯವೆಂದು ಘೋಷಿಸಬೇಕು. ಈ ಅರಣ್ಯವು ರಾಜ್ಯದ ಜಿಡಿಪಿಗೆ ಅಸಂಖ್ಯಾತ ರೀತಿಯಲ್ಲಿ ಕೊಡುಗೆ ನೀಡಬಹುದು’ ಎಂದು ಮನವರಿಕೆ ಮಾಡಿತು.

    ವಿವಾದಕ್ಕೆ ‘ಸುಪ್ರೀಂ’ ಎಂಟ್ರಿ
    ಐಟಿ ಪಾರ್ಕ್‌ ಸ್ಥಾಪನೆಗೆ ಅರಣ್ಯ ನಾಶ ವಿರೋಧಿಸಿ ಈಚೆಗೆ ಹೈದರಾಬಾದ್‌ ವಿವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಈ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಪ್ರಕರಣದ ವಿವಾದಕ್ಕೆ ಎಂಟ್ರಿ ಕೊಟ್ಟ ಸುಪ್ರೀಂ ಕೋರ್ಟ್‌, ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯ ಆವರಣದ ಬಳಿಯ ತೆಲಂಗಾಣದ ಕಾಂಚ ಗಚ್ಚಿಬೌಲಿ ಅರಣ್ಯ ಪ್ರದೇಶದಲ್ಲಿ ಮರ ಕಡಿಯುವುದನ್ನು ತಡೆಹಿಡಿದು ಮಧ್ಯಂತರ ಆದೇಶ ಹೊರಡಿಸಿದೆ.

  • ಗ್ಯಾರಂಟಿ ಯೋಜನೆಗಳಿಗೆ 56,984 ಕೋಟಿ ರೂ. ಮೀಸಲಿಟ್ಟ ತೆಲಂಗಾಣ ಸರ್ಕಾರ

    ಗ್ಯಾರಂಟಿ ಯೋಜನೆಗಳಿಗೆ 56,984 ಕೋಟಿ ರೂ. ಮೀಸಲಿಟ್ಟ ತೆಲಂಗಾಣ ಸರ್ಕಾರ

    ಹೈದರಾಬಾದ್: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದಂತೆ ತೆಲಂಗಾಣ (Telangana) ಸರ್ಕಾರವೂ ಸಹ 6 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿತ್ತು.

    ತೆಲಂಗಾಣದ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಮಲ್ಲು ಭಟ್ಟಿ ವಿಕ್ರಮಾರ್ಕ ಅವರು ಇಂದು 2025-26ನೇ ಸಾಲಿನ ರಾಜ್ಯ ಬಜೆಟ್ ಅನ್ನು ಮಂಡಿಸಿದರು. ಈ ವರ್ಷದ ಬಜೆಟ್ ಗಾತ್ರ ಮೊದಲ ಬಾರಿಗೆ 3 ಲಕ್ಷ ಕೋಟಿ ರೂ.ಗಳನ್ನು ದಾಟಿದೆ. ಇದನ್ನೂ ಓದಿ: ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ನಟನೆಯ ‘ಸಿಕಂದರ್’ ಚಿತ್ರದ ಸಾಂಗ್ ರಿಲೀಸ್

    ಇದೀಗ ತೆಲಂಗಾಣ ಸರ್ಕಾರ ರಾಜ್ಯ ಬಜೆಟ್‌ನಲ್ಲಿ 6 ಗ್ಯಾರಂಟಿ ಯೋಜನೆಗಳಿಗೆ ಒಟ್ಟು 56,984 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದನ್ನೂ ಓದಿ: ಮಸ್ಕ್‌ ಆಫರ್‌ ತಿರಸ್ಕರಿಸಿದ್ದ ಬೈಡನ್‌ – ಬಾಹ್ಯಾಕಾಶದಲ್ಲೇ 9 ತಿಂಗಳು ಕಳೆದ ಸುನಿತಾ

    ಮಹಾಲಕ್ಷ್ಮಿ ಯೋಜನೆಗೆ 4,305 ಕೋಟಿ ರೂ., ಗೃಹ ಜ್ಯೋತಿಗೆ 2,080 ಕೋಟಿ ರೂ., ಸನ್ನಾ ಅಕ್ಕಿ ಬೋನಸ್‌ಗೆ 1,800 ಕೋಟಿ ರೂ., ರಾಜೀವ್ ಆರೋಗ್ಯ ಶ್ರೀ ಯೋಜನೆಗೆ 1,143 ಕೋಟಿ ರೂ., ಗ್ಯಾಸ್ ಸಿಲಿಂಡರ್ ಸಬ್ಸಿಡಿಗೆ 723 ಕೋಟಿ ರೂ. ಮತ್ತು ಇಂದಿರಮ್ಮ ಆತ್ಮ ಭರೋಸಾ ಯೋಜನೆಗೆ 600 ಕೋಟಿ ರೂ.ಹಣವನ್ನು ಮೀಸಲಿಟ್ಟಿದೆ. ಇದನ್ನೂ ಓದಿ: PUBLiC TV Impact| ತೋಟದ ವಸತಿ ಪ್ರದೇಶಗಳಲ್ಲಿ ಮೊಬೈಲ್ ಟಾರ್ಚ್ ಬಳಸಿ ಓದುತ್ತಿದ್ದ ಮಕ್ಕಳಿಗೆ ವಿದ್ಯುತ್ ಪೂರೈಕೆ

  • ಗ್ಯಾರಂಟಿಯಿಂದ ಸರ್ಕಾರಿ ನೌಕರರಿಗೆ ಸಂಬಳ ನೀಡಲು ದುಡ್ಡಿಲ್ಲ: ತೆಲಂಗಾಣ ಸಿಎಂ

    ಗ್ಯಾರಂಟಿಯಿಂದ ಸರ್ಕಾರಿ ನೌಕರರಿಗೆ ಸಂಬಳ ನೀಡಲು ದುಡ್ಡಿಲ್ಲ: ತೆಲಂಗಾಣ ಸಿಎಂ

    – ಹಿಮಾಚಲದ ಬಳಿಕ ತೆಲಂಗಾಣ ಸರ್ಕಾರಕ್ಕೆ ಸಂಕಷ್ಟ
    – ಆರ್‌ಬಿಐನಿಂದ 4 ಸಾವಿರ ಕೋಟಿ ಕೈ ಸಾಲ

    ಹೈದರಾಬಾದ್‌: ಗ್ಯಾರಂಟಿ ಯೋಜನೆ ಜಾರಿ ಮಾಡಿ ಈಗಾಗಲೇ ಹಿಮಾಚಲ ಪ್ರದೇಶದಲ್ಲಿರುವ (Himachal Pradesh) ಕಾಂಗ್ರೆಸ್‌ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ. ತೆಲಂಗಾಣದಲ್ಲಿರುವ (Telangana) ರೇವಂತ್‌ ರೆಡ್ಡಿ (Revanth Reddy) ಸರ್ಕಾರವೂ ಸಂಕಷ್ಟಕ್ಕೆ ತುತ್ತಾಗಿದ್ದು ಸರ್ಕಾರಿ ನೌಕರರಿಗೆ ಸಂಬಳ ನೀಡಲು ದುಡ್ಡಿಲ್ಲ ಎಂದು ಹೇಳಿದೆ.

    ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದರಿಂದ ಈಗ ಸರ್ಕಾರದ ಬಳಿ ಸಂಬಳ ಕೊಡುವುದಕ್ಕೂ ಹಣ ಇಲ್ಲ. ನಮ್ಮ ಸರ್ಕಾರ ಸಾಲದ ಹೊರೆ ಮತ್ತು ಇತರ ಕಾರಣಗಳಿಂದ ಹಣಕಾಸಿನ ಕೊರತೆಯನ್ನು ಎದುರಿಸುತ್ತಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಆರ್‌ಬಿಐಯಿಂದ 4 ಸಾವಿರ ಕೋಟಿ ರೂ. ಕೈ ಸಾಲ ಪಡೆದಿದ್ದೇವೆ ಎಂದು ಸಿಎಂ ರೇವಂತ್‌ ರೆಡ್ಡಿ ಅವರೇ ಅಧಿಕೃತವಾಗಿ ತಿಳಿಸಿದ್ದಾರೆ.

     

     

     

    ವಿಧಾನ ಪರಿಷತ್‌ನಲ್ಲಿ ಮಾತನಾಡಿದ ಅವರು, ಹಣ ಇಲ್ಲದ ಕಾರಣ ರಾಜ್ಯ ನೌಕರರಿಗೆ ಪ್ರತೀ ತಿಂಗಳ ಆರಂಭದಲ್ಲಿ ವೇತನ (Salary) ನೀಡಲು ಕಷ್ಟವಾಗುತ್ತಿದೆ. ನೌಕರರ ತುಟ್ಟಿ ಭತ್ಯೆ (ಡಿಎ) ಬೇಡಿಕೆ ನ್ಯಾಯಯುತವಾದದ್ದೇ. ಆದರೆ ಪ್ರಸ್ತುತ ಕಠಿಣ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅದಕ್ಕಾಗಿ ಒತ್ತಾಯಿಸಬೇಡಿ. ಮುಂದೆ ಸರ್ಕಾರದ ಹಣಕಾಸು ಪರಿಸ್ಥಿತಿಯ ಸಂಪೂರ್ಣ ವಿವರವನ್ನು ನೀಡುತ್ತೇನೆ. ಸರ್ಕಾರಿ ನೌಕರರು ಮುಂದಿನ ದಿನಗಳಲ್ಲಿ ತಮ್ಮ ಕೆಲಸಗಳನ್ನು ಸೇವೆಯಂತೆ ಮಾಡಬೇಕು. ನೌಕರರು ದಯವಿಟ್ಟು ಸರ್ಕಾರದ ಜೊತೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ಹೊಡೆತಕ್ಕೆ ತತ್ತರ – ದೇವಸ್ಥಾನದ ಹಣಕ್ಕೆ ಕೈ ಹಾಕಿತಾ ಹಿಮಾಚಲ ಸರ್ಕಾರ?

     

     

    ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದಲ್ಲಿ ರೇವಂತ್‌ ರೆಡ್ಡಿ ರಾಜ್ಯದ ಕರಾಳ ಆರ್ಥಿಕ ಪರಿಸ್ಥಿತಿಯನ್ನು ತೆರೆದಿಟ್ಟಿದ್ದರು. ರಾಜ್ಯದ ಸಾಲದ ಮೊತ್ತ ಈಗ 7 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ರಾಜ್ಯದ ಮಾಸಿಕ ಆದಾಯ 18,500 ಕೋಟಿ ರೂ. ಇದೆ. ಅದರಲ್ಲಿ 6,500 ಕೋಟಿ ರೂ. ವೇತನ ಮತ್ತು ಪಿಂಚಣಿ ಪಾವತಿಗೆ ಹೋಗುತ್ತಿದೆ. 6,500 ಕೋಟಿ ರೂ. ಸಾಲ ಮತ್ತು ಬಡ್ಡಿ ಮರುಪಾವತಿಗೆ ಬೇಕು. ಉಳಿದ ಕೇವಲ 5,000 ಕೋಟಿ ರೂ. ಮೊತ್ತವನ್ನು ವಿವಿಧ ಯೋಜನೆಗಳಿಗೆ ಬಳಸಲಾಗುತ್ತಿದೆ. ಹೀಗಾಗಿ ಉಳಿದ ವೆಚ್ಚಗಳಿಗೆ ಸರ್ಕಾರದ ಬಳಿ ದುಡ್ಡೇ ಇಲ್ಲ ಎಂದಿದ್ದರು.

    2023ರ ಮೇ ತಿಂಗಳಿನಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 5 ಗ್ಯಾರಂಟಿಗಳನ್ನು ಪ್ರಕಟಿಸಿ ಅಧಿಕಾರಕ್ಕೆ ಏರಿತ್ತು. ಇದರಿಂದ ಉತ್ತೇಜನಗೊಂಡ ಕಾಂಗ್ರೆಸ್‌ ತೆಲಂಗಾಣ ಚುನಾವಣೆಯಲ್ಲೂ ಗ್ಯಾರಂಟಿ ನೀಡುವ ಭರವಸೆ ನೀಡಿ ಅಧಿಕಾರಕ್ಕೆ ಏರಿತ್ತು. ಇದನ್ನೂ ಓದಿ: ಗ್ಯಾರಂಟಿ ಹೊಡೆತಕ್ಕೆ ಹಿಮಾಚಲ ತತ್ತರ – ಮಂತ್ರಿಗಳು, ಕ್ಯಾಬಿನೆಟ್ ದರ್ಜೆಯ ಸದಸ್ಯರಿಗೆ 2 ತಿಂಗಳ ಸಂಬಳ ಕಟ್‌

    ಕೆಲ ತಿಂಗಳ ಹಿಂದೆ ಕಾಂಗ್ರೆಸ್‌ ಆಡಳಿತದ ಮತ್ತೊಂದು ರಾಜ್ಯವಾದ ಹಿಮಾಚಲಪ್ರದೇಶದಲ್ಲೇ ಇದೇ ಪರಿಸ್ಥಿತಿ ನಿರ್ಮಾಣವಾಗಿ, ಇತಿಹಾಸದಲ್ಲೇ ಮೊದಲ ಬಾರಿಗೆ ವೇತನ, ಪಿಂಚಣಿ ಪಾವತಿ ವಿಳಂಬವಾಗಿತ್ತು. ಸಿಎಂ, ಶಾಸಕರ ವೇತನ ಪಾವತಿ ಮುಂದೂಡಲಾಗಿತ್ತು.

     

  • ರಂಜಾನ್ ಮಾಸದಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ಕಚೇರಿಯಿಂದ ಬೇಗನೆ ಹೊರಡಲು ಅವಕಾಶ

    ರಂಜಾನ್ ಮಾಸದಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ಕಚೇರಿಯಿಂದ ಬೇಗನೆ ಹೊರಡಲು ಅವಕಾಶ

    – ತೆಲಂಗಾಣ ಸರ್ಕಾರದ ಆದೇಶಕ್ಕೆ ಬಿಜೆಪಿ ಟೀಕೆ

    ಹೈದರಾಬಾದ್: ಪವಿತ್ರ ರಂಜಾನ್‌ ಮಾಸದಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ಕಚೇರಿಯಿಂದ ಬೇಗನೆ ಹೊರಡುವುದಕ್ಕೆ ಅವಕಾಶ ನೀಡಿ ತೆಲಂಗಾಣ ಸರ್ಕಾರ ಆದೇಶ ಹೊರಡಿಸಿರುವುದು ವಿವಾದಕ್ಕೆ ಕಾರಣವಾಗಿದೆ.

    ಈ ಆದೇಶವನ್ನು ತುಷ್ಟೀಕರಣ ರಾಜಕೀಯದ ಪರಮಾವಧಿ ಎಂದು ಬಿಜೆಪಿ ಟೀಕಿಸಿದೆ.

    ತೆಲಂಗಾಣ ಮುಖ್ಯ ಕಾರ್ಯದರ್ಶಿ ಶಾಂತಿ ಕುಮಾರಿ ಅವರು, ಮಾ.2 ರಿಂದ 31 ರ ವರೆಗೆ ರಂಜಾನ್ ಸಮಯದಲ್ಲಿ ಅಗತ್ಯ ಪ್ರಾರ್ಥನೆ ಸಲ್ಲಿಸಲು ಸರ್ಕಾರಿ ಮುಸ್ಲಿಂ ನೌಕರರಿಗೆ ಒಂದು ಗಂಟೆ ಮೊದಲು ಸಂಜೆ 4 ಗಂಟೆಗೆ ಕಚೇರಿಯಿಂದ ಹೊರಡಲು ಅವಕಾಶ ನೀಡಿ ಆದೇಶ ಹೊರಡಿಸಿದ್ದರು.

    ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಸರ್ಕಾರಿ ಮುಸ್ಲಿಂ ನೌಕರರು/ಶಿಕ್ಷಕರು/ಗುತ್ತಿಗೆದಾರರು/ಹೊರಗುತ್ತಿಗೆ/ಮಂಡಳಿಗಳು/ನಿಗಮಗಳು ಮತ್ತು ಸಾರ್ವಜನಿಕ ವಲಯದ ನೌಕರರು ರಂಜಾನ್ ಪವಿತ್ರ ಮಾಸದಲ್ಲಿ ಸಂಜೆ 4 ಗಂಟೆಗೆ ತಮ್ಮ ಕಚೇರಿಗಳು/ಶಾಲೆಗಳಿಂದ ಹೊರಡಲು ಸರ್ಕಾರವು ಅನುಮತಿ ನೀಡಿದೆ. ಮಾ.2 ರಿಂದ 31 ರ ವರೆಗೆ (ಸೇವೆಗಳ ತುರ್ತು ಪರಿಸ್ಥಿತಿಯಲ್ಲಿ ಅವರ ಉಪಸ್ಥಿತಿಯು ಅಗತ್ಯವಿರುವುದನ್ನು ಹೊರತುಪಡಿಸಿ) ಅಗತ್ಯ ಪ್ರಾರ್ಥನೆಗಳನ್ನು ಸಲ್ಲಿಸಲು ಕಚೇರಿಯಿಂದ ಬೇಗ ಹೊರಡಲು ಅನುಮತಿಸಲಾಗಿದೆ ಎಂದು ಶಾಂತಿ ಕುಮಾರಿ ಫೆ.15 ರಂದು ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

    ತೆಲಂಗಾಣ ರಾಜ್ಯ ಅಲ್ಪಸಂಖ್ಯಾತ ನೌಕರರ ಸೇವಾ ಸಂಘದ ರಾಜ್ಯ ಅಧ್ಯಕ್ಷರ ಕೋರಿಕೆಯ ಮೇರೆಗೆ ಮುಖ್ಯ ಕಾರ್ಯದರ್ಶಿ ಈ ಜ್ಞಾಪಕ ಪತ್ರವನ್ನು ಹೊರಡಿಸಿದ್ದಾರೆ.

    ತುಷ್ಟೀಕರಣ ರಾಜಕೀಯವು ಅದರ ಉತ್ತುಂಗದಲ್ಲಿದೆ. ತೆಲಂಗಾಣ ಸರ್ಕಾರ ರಂಜಾನ್‌ಗೆ ಮುಂಚಿತವಾಗಿ ರಜೆ ನೀಡುತ್ತದೆ. ಆದರೆ ಹಿಂದೂ ಹಬ್ಬಗಳನ್ನು ನಿರ್ಲಕ್ಷಿಸುತ್ತದೆ ಎಂದು ಗೋಶಮಹಲ್‌ನ ಬಿಜೆಪಿಯ ಶಾಸಕ ಠಾಕೂರ್ ರಾಜಾ ಸಿಂಗ್ ಟೀಕಿಸಿದ್ದಾರೆ.

  • ಅಲ್ಲು ಅರ್ಜುನ್ ಮನೆ ಮುಂಭಾಗ ದಾಂಧಲೆ ನಡೆಸಿದ್ದ 6 ಆರೋಪಿಗಳಿಗೆ ಜಾಮೀನು

    ಅಲ್ಲು ಅರ್ಜುನ್ ಮನೆ ಮುಂಭಾಗ ದಾಂಧಲೆ ನಡೆಸಿದ್ದ 6 ಆರೋಪಿಗಳಿಗೆ ಜಾಮೀನು

    ಪುಷ್ಪ-2 ಸ್ಟಾರ್ ಅಲ್ಲು ಅರ್ಜುನ್ (Allu Arjun) ಮನೆ ಮೇಲಿನ ದಾಳಿ ಪ್ರಕರಣದಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ದಾಳಿ ಮಾಡಿದ್ದ 6 ಆರೋಪಿಗಳಿಗೆ ಹೈದರಾಬಾದ್ ನ್ಯಾಯಾಲಯ (Hyderabad court) ಜಾಮೀನು ಮಂಜೂರು ಮಾಡಿದೆ.

    ನಿನ್ನೆ (ಡಿ.22) ಆರು ದಾಳಿಕೋರರನ್ನು ಬಂಧಿಸಿದ್ದ ಜ್ಯುಬ್ಲಿ ಹಿಲ್ಸ್ ಪೊಲೀಸರು ಇಂದು ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಿದ್ದು, 6 ಆರೋಪಿಗಳಿಗೆ ತಲಾ 10,000 ರೂ. ವೈಯಕ್ತಿಕ ಬಾಂಡ್‌ ಮೇಲೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ ಎಂದು ಹಿರಿಯ ವಕೀಲ ವಕೀಲ ರಾಮದಾಸ್ ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸರೇ ಜೈಲಿಗೆ ಹೋಗ್ಬೇಕಾಗುತ್ತೆ – ಸ್ಫೀಕರ್‌ ವಾರ್ನಿಂಗ್‌ ಬೆನ್ನಲ್ಲೇ ಕೋರ್ಟ್ ಅಂಗಳಕ್ಕೆ ಹೋಗುತ್ತಾ ಸಂವಿಧಾನಿಕ ಸಂಘರ್ಷ?’

    ಇನ್ನೂ ಠಾಣೆಯಲ್ಲಿ ಆರೋಪಿಗಳೆಲ್ಲಾ ಬೆಂಚ್ ಮೇಲೆ ಕುಳಿತು ಮೊಬೈಲ್‌ನಲ್ಲಿ ಮುಳುಗಿದ್ದ ದೃಶ್ಯಗಳು ವೈರಲ್ ಆಗಿದ್ದು, ಪೊಲೀಸರ ಕಾರ್ಯವೈಖರಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗ್ತಿದೆ. ಇದ್ರ ಮಧ್ಯೆ, ಆರೋಪಿಗಳು ನಿಮ್ಮವರೆಂದು ಕಾಂಗ್ರೆಸ್ ಮತ್ತು ಬಿಆರ್‌ಎಸ್ ಪಕ್ಷಗಳು ಪರಸ್ಪರ ಕೆಸರರೆಚಾಟದಲ್ಲಿ ತೊಡಗಿವೆ. ಇದನ್ನೂ ಓದಿ: ಖೇಲ್‌ ರತ್ನ ಪ್ರಶಸ್ತಿಗೆ ಶಿಫಾರಸ್ಸುಗೊಳ್ಳದ ಶೂಟರ್ ಮನು ಭಾಕರ್ ಹೆಸರು; ತಂದೆ ಆಕ್ಷೇಪ

    ಆರೋಪಿಗಳಿಗೆ ಸಿಎಂ ಜೊತೆ ಇರುವ ಫೋಟೋಗಳನ್ನು ಬಿಆರ್‌ಎಸ್ ರಿಲೀಸ್ ಮಾಡಿದೆ. ಇಲ್ಲ ಇವರು ಬಿಆರ್‌ಎಸ್ ಬೆಂಬಲಿಗರು ಎಂದು ಕಾಂಗ್ರೆಸ್ ಪ್ರತ್ಯಾರೋಪ ಮಾಡಿದೆ. ಇನ್ನೂ ಪುಷ್ಪ ಶೋ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣ ಸಂಬಂಧ ಶೀಘ್ರವೇ ಮುಖ್ಯಮಂತ್ರಿ ರೇವಂತ್ ರೆಡ್ಡಿಯನ್ನು ಭೇಟಿ ಮಾಡಲು ಟಾಲಿವುಡ್ ಗಣ್ಯರು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಕ್ರಿಸ್‌ಮಸ್ ಹಬ್ಬ ಆಚರಣೆಯ ಇತಿಹಾಸ, ಮಹತ್ವ ನಿಮಗೆಷ್ಟು ಗೊತ್ತು?

    ಈ ನಡುವೆ ಅಲ್ಲು ಅರ್ಜುನ್‌ ಮನೆ ಮೇಲೆ ದಾಳಿ ನಡೆಸಿದ್ದ ಕಿಡಿಗೇಡಿಗಳ ಪೈಕಿ ಒಬ್ಬರಾದ ಶ್ರೀನಿವಾಸ್ ರೆಡ್ಡಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಸಹಾಯಕ ಎಂದು ಬಿಆರ್‌ಎಸ್ ಮುಖಂಡರೊಬ್ಬರು ಆರೋಪಿಸಿದ್ದಾರೆ.

  • ಅಲ್ಲು ಅರ್ಜುನ್‌ ದುಡ್ಡಿನ ಮದದಿಂದ ಸುಳ್ಳು ಹೇಳ್ತಿದ್ದಾರೆ: ಎಸಿಪಿ ವಾರ್ನಿಂಗ್‌

    ಅಲ್ಲು ಅರ್ಜುನ್‌ ದುಡ್ಡಿನ ಮದದಿಂದ ಸುಳ್ಳು ಹೇಳ್ತಿದ್ದಾರೆ: ಎಸಿಪಿ ವಾರ್ನಿಂಗ್‌

    ಹೈದರಾಬಾದ್: ತೆಲಂಗಾಣ (Telangana) ಸಿಎಂ ರೇವಂತ್‌ ರೆಡ್ಡಿಯ (Revanth Reddy) ಬಳಿಕ ಈಗ ಎಸಿಪಿ ಸಬ್ಬತಿ ವಿಷ್ಣು (ACP Vishnu) ಅವರು ಪುಷ್ಪ (Pushpa) ಸಿನಿಮಾದ ನಟ ಅಲ್ಲು ಅರ್ಜುನ್‌ (Allu Arjun) ವಿರುದ್ಧ ವಾಗ್ದಾಳಿ ನಡೆಸಿ ಎಚ್ಚರಿಕೆ ನೀಡಿದ್ದಾರೆ.

    ಪುಷ್ಪ ಪ್ರೀಮಿಯರ್ ಶೋ ವೇಳೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ಪೊಲೀಸರ ಭದ್ರತಾ ವೈಫಲ್ಯದಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಅಲ್ಲು ಅರ್ಜುನ್‌ ದೂರಿದ್ದರು.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಎಸಿಪಿ, ಥಿಯೇಟರ್‌ಗೆ ಹೋಗಲು ಅನುಮತಿ ಇತ್ತು ಅಂತ ಸುಳ್ಳು ಹೇಳುತ್ತಿದ್ದಾರೆ. ಅಲ್ಲು ಅರ್ಜುನ್‌ ಅವರಿಗೆ ಸಂವಿಧಾನಿಕ ಜ್ಞಾನದ ಕೊರತೆಯಿದೆ. ದುಡ್ಡಿನ ಮದದಿಂದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಕೋರ್ಟ್ ಅಲ್ಲು ಅರ್ಜುನ್ ವಿರುದ್ಧದ ಪ್ರಕರಣವನ್ನು ವಜಾಗೊಳಿಸಿಲ್ಲ. ಆದರೆ ಈಗ ಮಧ್ಯಂತರ ಜಾಮೀನು ಮಾತ್ರ ನೀಡಿದೆ. ಮಧ್ಯಂತರ ಜಾಮೀನು ನಿಮ್ಮನ್ನು ಜವಾಬ್ದಾರಿಯಿಂದ ಮುಕ್ತಗೊಳಿಸುತ್ತದೆ ಎಂದು ಭಾವಿಸಬೇಡಿ ಎಂದು ಹೇಳಿದರು.

    ಪುಷ್ಪ ಸಿನಿಮಾದ ಕಥಾವಸ್ತುವನ್ನೇ ಟೀಕಿಸಿದ ಅವರು ವಿಷಕಾರಿ ಚಲನಚಿತ್ರಗಳನ್ನು ನಿರ್ಮಾಣ ಮಾಡುವ ಬದಲು ಸಮಾಜಕ್ಕೆ ಪ್ರಯೋಜನಕಾರಿ ಸಂದೇಶ ನೀಡುವ ಸಿನಿಮಾಗನ್ನು ಮಾಡುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

    ಪುಷ್ಪಾದಲ್ಲಿ ಪೊಲೀಸ್ ಅಧಿಕಾರಿಗಳನ್ನು ಅಗೌರವವಾಗಿ ತೋರಿಸಿದ್ದನ್ನು ಖಂಡಿಸಿದ ಅವರು, ಪೊಲೀಸರನ್ನು ಅವಮಾನಿಸಬೇಡಿ ಅಥವಾ ಅವರಿಗೆ ಬೆದರಿಕೆ ಹಾಕಬೇಡಿ. ನಿಜ ಜೀವನದಲ್ಲಿ ಅದೇ ಅಗೌರವವನ್ನು ಪುನರಾವರ್ತಿಸಲು ಬಯಸುತ್ತಾರೆಯೇ ಎಂದು ಪ್ರಶ್ನಿಸಿದರು.

     

  • ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ತೆಲಂಗಾಣ ಸಿಎಂ ಆರೋಪಕ್ಕೆ ಅಲ್ಲು ಅರ್ಜುನ್‌ ಬೇಸರ

    ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ತೆಲಂಗಾಣ ಸಿಎಂ ಆರೋಪಕ್ಕೆ ಅಲ್ಲು ಅರ್ಜುನ್‌ ಬೇಸರ

    – ಕಾಲ್ತುಳಿತ ಪ್ರಕರಣ ಆಕಸ್ಮಿಕ ಘಟನೆ; ಬಾಲಕ ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ
    – ಮೃತರ ಕುಟುಂಬಸ್ಥರಿಗೆ ಕ್ಷಮೆಯಾಚಿಸುತ್ತೇನೆ

    ಹೈದರಾಬಾದ್: ಪುಷ್ಪ 2 ಪ್ರೀಮಿಯರ್‌ ಶೋ ವೇಳೆ ಕಾಲ್ತುಳಿತಕ್ಕೆ ಮಹಿಳೆ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿ ಹರಡಲಾಗುತ್ತಿದೆ. ಆ ಮೂಲಕ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ ಎಂದು ನಟ ಅಲ್ಲು ಅರ್ಜುನ್‌ ಬೇಸರ ವ್ಯಕ್ತಪಡಿಸಿದ್ದಾರೆ.

    ತೆಲಂಗಾಣ ವಿಧಾನಸಭೆಯಲ್ಲಿ ಸಿಎಂ ರೇವಂತ್‌ ರೆಡ್ಡಿ ಗಂಭೀರ ಆರೋಪಗಳಿಗೆ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ ನಟ, ತಪ್ಪು ಮಾಹಿತಿ ಹರಡಲಾಗುತ್ತಿದೆ. ನಾನು ಯಾರನ್ನೂ, ಯಾವುದೇ ಇಲಾಖೆ ಅಥವಾ ರಾಜಕೀಯ ನಾಯಕರನ್ನು ದೂಷಿಸಲ್ಲ. ಇದು ಅವಮಾನಕರ ಮತ್ತು ಚಾರಿತ್ರ್ಯ ವಧೆಯಂತೆ ಭಾಸವಾಗುತ್ತಿದೆ. ದಯವಿಟ್ಟು ನನ್ನ ಬಗ್ಗೆ ಜಡ್ಜ್‌ ಮಾಡಬೇಡಿ. ಸಂಧ್ಯಾ ಥಿಯೇಟರ್‌ ಬಳಿ ನಡೆದ ಘಟನೆಗೆ ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ.

    ಇದು ಅತ್ಯಂತ ದುರದೃಷ್ಟಕರ ಘಟನೆ. ಆಕಸ್ಮಿಕವಾಗಿ ಘಟನೆ ಜರುಗಿದೆ. ಕುಟುಂಬಕ್ಕೆ ನನ್ನ ಸಂತಾಪ. ನಾನು ಮಗುವಿನ ಸ್ಥಿತಿಯ ಬಗ್ಗೆ ಪ್ರತಿ ಗಂಟೆಗೂ ಅಪ್‌ಡೇಟ್‌ ಪಡೆಯುತ್ತಿದ್ದೇನೆ. ಬಾಲಕ ಬೇಗ ಚೇತರಿಸಿಕೊಳ್ಳಿ ಎಂದು ಪ್ರಾರ್ಥಿಸುತ್ತೇನೆ. ಪ್ರಕರಣ ಸಂಬಂಧ ಸಾಕಷ್ಟು ತಪ್ಪು ಮಾಹಿತಿ, ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ ಎಂದು ವಿಷಾದಿಸಿದ್ದಾರೆ.

  • ಅಲ್ಲು ಅರ್ಜುನ್‌ ವಿರುದ್ಧ ಮತ್ತೆ ಗುಡುಗಿದ ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ

    ಅಲ್ಲು ಅರ್ಜುನ್‌ ವಿರುದ್ಧ ಮತ್ತೆ ಗುಡುಗಿದ ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ

    ಹೈದರಾಬಾದ್: ಪುಷ್ಪ-2 (Pushpa 2) ಸಿನಿಮಾ ಪ್ರೀಮಿಯರ್‌ ಶೋ ವೇಳೆ ಕಾಲ್ತುಳಿತಕ್ಕೆ ಮಹಿಳೆ ಸಾವನ್ನಪ್ಪಲು ನಟ ಅಲ್ಲು ಅರ್ಜುನ್‌ (Allu Arjun) ಕಾರಣ ಎಂದು ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ (Revanth Reddy) ಆರೋಪ ಮಾಡಿದ್ದಾರೆ.

    ಪೊಲೀಸರು ಅನುಮತಿ ನಿರಾಕರಿಸಿದ್ದರೂ ತೆಲುಗು ನಟ ಅಲ್ಲು ಅರ್ಜುನ್ ಡಿ.4 ರಂದು ತಮ್ಮ ಚಿತ್ರ ಪುಷ್ಪ-2 ಪ್ರದರ್ಶನಕ್ಕೆ ಹಾಜರಾಗಿದ್ದರು. ಕಾರ್ಯಕ್ರಮದ ವೇಳೆ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ನಂತರವೂ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಲವಂತವಾಗಿ ಹೊರಗೆ ಕಳುಹಿಸುವವರೆಗೂ ಚಿತ್ರಮಂದಿರದಿಂದ ಹೊರಬರಲಿಲ್ಲ ಎಂದು ರೆಡ್ಡಿ ಆರೋಪಿಸಿದ್ದಾರೆ. ಇದನ್ನೂ ಓದಿ: ‘ಪುಷ್ಪ 2’ ಕಾಲ್ತುಳಿತ ಪ್ರಕರಣ: 9 ವರ್ಷದ ಬಾಲಕನ ಬ್ರೈನ್ ಡೆಡ್

    ಎಐಎಂಐಎಂ ಶಾಸಕ ಅಕ್ಬರುದ್ದೀನ್ ಓವೈಸಿ ಅವರು ವಿಧಾನಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ ನಂತರ ರೆಡ್ಡಿ ಅವರು ಈ ಹೇಳಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋಗಳನ್ನು ಉಲ್ಲೇಖಿಸಿದ ರೆಡ್ಡಿ, ಅಲ್ಲು ಅರ್ಜುನ್ ದೊಡ್ಡ ಜನಸ್ತೋಮವಿದ್ದರೂ ರೋಡ್‌ಶೋ ನಡೆಸಿ ಜನರತ್ತ ಕೈ ಬೀಸಿದ್ದು ಗೊಂದಲಕ್ಕೆ ಕಾರಣವಾಯಿತು ಎಂದು ಟೀಕಿಸಿದ್ದಾರೆ.

    ನಟ ಮತ್ತು ಇತರರ ಭೇಟಿಗೆ ಭದ್ರತೆ ಕೋರಿ ಥಿಯೇಟರ್ ಆಡಳಿತವು ಡಿ.2 ರಂದು ಪೊಲೀಸರಿಗೆ ಮನವಿ ಸಲ್ಲಿಸಿತ್ತು. ಆದರೆ, ಜನಸಂದಣಿಯನ್ನು ನಿರ್ವಹಿಸುವ ಆತಂಕದಿಂದಾಗಿ ಪೊಲೀಸರು ವಿನಂತಿಯನ್ನು ತಿರಸ್ಕರಿಸಿದ್ದರು ಎಂದು ಸಿಎಂ ತಿಳಿಸಿದ್ದಾರೆ. ಇದನ್ನೂ ಓದಿ: ‘ಪುಷ್ಪ 2’ ನಟ ಅಲ್ಲು ಅರ್ಜುನ್‌ ಜೈಲಿಂದ ರಿಲೀಸ್‌ – ಜೈಲಲ್ಲಿ ಒಂದು ರಾತ್ರಿ ಕಳೆದ ಸ್ಟಾರ್‌

    ಅಲ್ಲು ಅರ್ಜುನ್ ಬಂಧನದ ನಂತರ ಅವರ ನಿವಾಸಕ್ಕೆ ಭೇಟಿ ನೀಡಿದ ಚಿತ್ರರಂಗದ ಗಣ್ಯರ ವಿರುದ್ಧವೂ ಸಿಎಂ ಕಿಡಿಕಾರಿದ್ದಾರೆ. ಆದರೆ, ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನ ವಿಚಾರದಲ್ಲಿ ಯಾರೂ ಸಹ ನಟನಿಗೆ ತೋರಿದ ಅನುಕಂಪ ತೋರಲಿಲ್ಲ ಎಂದು ಕಿಡಿಕಾರಿದ್ದಾರೆ.

  • ನಟ ಅಲ್ಲು ಅರ್ಜುನ್ ಬಂಧನ – ಪೊಲೀಸರ ನಡೆ ಸಮರ್ಥಿಸಿಕೊಂಡ ತೆಲಂಗಾಣ ಸಿಎಂ

    ನಟ ಅಲ್ಲು ಅರ್ಜುನ್ ಬಂಧನ – ಪೊಲೀಸರ ನಡೆ ಸಮರ್ಥಿಸಿಕೊಂಡ ತೆಲಂಗಾಣ ಸಿಎಂ

    – ಸಿನಿಮಾ ತಾರೆಯರು ಹಣ ಸಂಪಾದನೆಗಾಗಿಯೇ ಇದ್ದಾರೆ
    – ನಾನು ಯಾರ ಅಭಿಮಾನಿಯೂ ಅಲ್ಲ, ನನಗೆ ನಾನೇ ಸ್ಟಾರ್

    ಅಮರಾವತಿ: ಪುಷ್ಪ 2 (Pushpa 2) ಸಿನಿಮಾ ನಟ ಅಲ್ಲು ಅರ್ಜುನ್ (Allu Arjun) ಬಂಧನ ವಿಚಾರದಲ್ಲಿ ಪೊಲೀಸರ ನಡೆಯನ್ನು ತೆಲಂಗಾಣ ಸಿಎಂ ರೇವಂತ್ ರೆಡ್ಡಿ (Revanth Reddy) ಸಮರ್ಥಿಸಿಕೊಂಡಿದ್ದಾರೆ.

    ಅಲ್ಲು ಅರ್ಜುನ್ ಸುಮ್ಮನೆ ಸಿನಿಮಾ ನೋಡಿ ಹೊರ ಬಂದಿಲ್ಲ. ಅವರು ತಮ್ಮ ಕಾರಿನ ಸನ್‌ರೂಫ್‌ನಿಂದ ಹೊರಬಂದು ಅಭಿಮಾನಿಗಳತ್ತ ಕೈಬೀಸಿದರು. ಚಲನಚಿತ್ರದ ಸಂಭ್ರಮಾಚರಣೆ ಮಾಡುತ್ತಿದ್ದ ಅಭಿಮಾನಿಗಳನ್ನು ಹುರಿದುಂಬಿಸಿದರು. ಇದರಿಂದ ಪರಿಸ್ಥಿತಿ ಹತೋಟಿ ತಪ್ಪಿತು ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ನಾನು ಕಾನೂನು ಪಾಲಿಸುವ ನಾಗರಿಕ.. ತನಿಖೆಗೆ ಸಹಕರಿಸುತ್ತೇನೆ: ಜೈಲಿಂದ ರಿಲೀಸ್‌ ಆದ ಅಲ್ಲು ಅರ್ಜುನ್‌ ರಿಯಾಕ್ಷನ್‌

    ನಟನ ಬಂಧನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, ಕಾಲ್ತುಳಿತಕ್ಕೆ ಒಳಗಾದ ಸಂತ್ರಸ್ತೆ ಮತ್ತು ಅವರ ಕುಟುಂಬದ ಬಗ್ಗೆ ಯಾರು ಕೂಡ ಮಾತನಾಡುತ್ತಿಲ್ಲ. ಬಡ ಕುಟುಂಬವೊಂದು ಸದಸ್ಯನನ್ನು ಕಳೆದುಕೊಂಡಿದೆ. ಮೃತ ಮಹಿಳೆಯ ಮಗ ಇನ್ನೂ ಆಸ್ಪತ್ರೆಯಲ್ಲಿ ಕೋಮಾದಲ್ಲಿದ್ದಾನೆ. ಅವನು ಕೋಮಾದಿಂದ ಹೊರಬಂದು ತನ್ನ ತಾಯಿಯಿಲ್ಲದ ಜೀವನವನ್ನು ನಡೆಸಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಸಿನಿಮಾ ತಾರೆಯರು ಹಣ ಸಂಪಾದನೆಗಾಗಿಯೇ ಇದ್ದಾರೆ. ಜನಸಾಮಾನ್ಯರಿಗೂ ಇದಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ‘ಪುಷ್ಪ 2’ ನಟ ಅಲ್ಲು ಅರ್ಜುನ್‌ ಜೈಲಿಂದ ರಿಲೀಸ್‌ – ಜೈಲಲ್ಲಿ ಒಂದು ರಾತ್ರಿ ಕಳೆದ ಸ್ಟಾರ್‌

    ನಿಮ್ಮ ನೆಚ್ಚಿನ ತೆಲುಗು ನಟ ಯಾರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ತೆಲಂಗಾಣ ಸಿಎಂ, ನಾನೇ ಸ್ಟಾರ್. ನಾನು ಯಾರ ಅಭಿಮಾನಿಯೂ ಅಲ್ಲ ಎಂದು ಹೇಳಿದ್ದಾರೆ.