Tag: ರೇಪಿಸ್ಟ್

  • ಕಳ್ಳತನಕ್ಕೆ ಹೋಗಿ ಯುವತಿ ಮೇಲೆ ರೇಪ್ ಮಾಡಿದ್ದ ಸೈಕೋ ರೇಪಿಸ್ಟ್ ಅರೆಸ್ಟ್

    ಕಳ್ಳತನಕ್ಕೆ ಹೋಗಿ ಯುವತಿ ಮೇಲೆ ರೇಪ್ ಮಾಡಿದ್ದ ಸೈಕೋ ರೇಪಿಸ್ಟ್ ಅರೆಸ್ಟ್

    ಬೆಂಗಳೂರು: ಕಳ್ಳತನ ಮಾಡಲು ಹೋಗಿ ಯುವತಿಯನ್ನು ರೇಪ್ ಮಾಡಿದ್ದ ಸೈಕೋ ರೇಪಿಸ್ಟ್ ನನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ.

    ದೇವರಾಜ್(21) ಅರೆಸ್ಟ್ ಆದ ರೇಪಿಸ್ಟ್. ನವೆಂಬರ್ 8ರಂದು ದೇವರಾಜ್ ಕಳ್ಳತನ ಮಾಡಲು ಹೋಗಿ ಮನೆಯಲ್ಲಿದ್ದ ಉತ್ತರ ಭಾರತೀಯ ಮೂಲದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದನು. ಕುರುಬರಹಳ್ಳಿಯ ಜೆ.ಸಿ ನಗರದ ನಿವಾಸಿಯಾಗಿರುವ ದೇವರಾಜ್‍ನನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ದೇವರಾಜ್ ಜೆ.ಸಿ ನಗರದಲ್ಲಿ ತನ್ನ ಪೋಷಕರ ಜೊತೆ ವಾಸವಾಗಿದ್ದು, ರಾಜಾಜಿನಗರದಲ್ಲಿ ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು.

    ನಡೆದಿದ್ದೇನು?
    ಉತ್ತರ ಭಾರತೀಯ ಮೂಲದ ಮಹಿಳೆ ತನ್ನ ಇಬ್ಬರು ಸ್ನೇಹಿತರ ಜೊತೆ ಬಸವೇಶ್ವರ ನಗರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಮಹಿಳೆ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದು, ದೀಪಾವಳಿಗೆಂದು ಆಕೆಯ ಇಬ್ಬರು ಸ್ನೇಹಿತರು ಊರಿಗೆ ತೆರೆಳಿದ್ದರು. ನ. 8ರಂದು ದೇವರಾಜ್ ರಾತ್ರಿ ಸುಮಾರು 9.30ಕ್ಕೆ ಕಳ್ಳತನಕ್ಕೆಂದು ಮಹಿಳೆಯ ಮನೆಯ ಕಾಲಿಂಗ್ ಬೆಲ್ ಒತ್ತಿದ್ದಾನೆ. ಮಹಿಳೆ ಬಾಗಿಲು ತೆರೆಯುತ್ತಿದ್ದಂತೆ ದೇವರಾಜ್ ಆಕೆಯನ್ನು ತಳ್ಳಿಕೊಂಡು ಹೋಗಿ ಬಲವಂತವಾಗಿ ಮನೆಗೆ ಪ್ರವೇಶಿಸಿದ್ದಾನೆ. ಅಲ್ಲದೇ ಮಹಿಳೆಯ ಕೈ ಕಚ್ಚಿ, ಪ್ರಜ್ಞೆ ತಪ್ಪಿಸಿ ಅತ್ಯಾಚಾರವೆಸಗಿದ್ದಾನೆ.

    ಬಂಧಿಸಿದ್ದು ಹೇಗೆ?
    ಕೃತ್ಯ ಎಸಗಿದ ಬಳಿಕ ದೇವರಾಜ್ ಮನೆಯಿಂದ ಓಡಿ ಹೋಗಿದ್ದ. ರಾತ್ರಿ ಸುಮಾರು 10.49ಕ್ಕೆ ದೇವರಾಜ್ ಮನೆಯಿಂದ ಓಡಿ ಹೋಗುವಾಗ ರಸ್ತೆಯಲ್ಲೇ ಆರೋಪಿ ದೇವರಾಜ್ ಶರ್ಟ್ ಹಾಕಿಕೊಂಡ. ಈ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪೊಲೀಸರು ಈ ಘಟನೆಯ ತನಿಖೆ ನಡೆಸುವಾಗ ಮೊದಲು ಸಿಸಿಟಿವಿ ದೊರೆತಿದೆ. ಈ ಸಿಸಿಟಿವಿ ದೃಶ್ಯಾವಳಿ ಮೂಲಕ ಆರೋಪಿಯ ಗುರುತು ಪತ್ತೆಯಾಗಿದ್ದು, ಇದಾದ ಬಳಿಕ ಪೊಲೀಸರು ಬೇರೆಡೆಯ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿದ್ದರು. ಅಂತಿಮವಾಗಿ ಶುಕ್ರವಾರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಆರೋಪಿ ಮೇಲೆ ಪ್ರಕರಣಗಳು:
    ಆರೋಪಿ ದೇವರಾಜ್ ಮೇಲೆ ಈಗಾಗಲೇ ಪ್ರಕರಣಗಳು ದಾಖಲಾಗಿದೆ. ನಿಲ್ಲಿಸಿದ್ದ ವಾಹನಗಳ ಗಾಜನ್ನು ಒಡೆದಿದ್ದಕ್ಕೆ ಆರೋಪಿ ವಿರುದ್ಧ ನಂದಿನಿ ಲೇಔಟ್ ಹಾಗೂ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲದೇ ಮೂರು ತಿಂಗಳ ಹಿಂದೆ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಜೈಲು ಪಾಲಾಗಿದ್ದ. ಆದರೆ ಈಗ ಕಳ್ಳತನಕ್ಕೆ ಹೋಗಿ ಪೊಲೀಸರು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಕ್ಕೆ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಕೊಡಲಿ ಹಿಡಿದು ಹಿಂಬಾಲಿಸಿದ ರೇಪಿಸ್ಟ್ ನಿಂದ ತಪ್ಪಿಸಿಕೊಳ್ಳಲು ಅರ್ಧ ಕಿ.ಮೀ ನಗ್ನವಾಗಿ ಓಡಿದ ಮಹಿಳೆ!

    ಕೊಡಲಿ ಹಿಡಿದು ಹಿಂಬಾಲಿಸಿದ ರೇಪಿಸ್ಟ್ ನಿಂದ ತಪ್ಪಿಸಿಕೊಳ್ಳಲು ಅರ್ಧ ಕಿ.ಮೀ ನಗ್ನವಾಗಿ ಓಡಿದ ಮಹಿಳೆ!

    ಭೋಪಾಲ್: ಬುರ್ಹಾನ್‍ಪುರ್ ಜೈಲಿನಿಂದ ಆಗ ತಾನೇ ಹೊರಬಂದಿದ್ದ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಕುಡುಗೋಲಿನಿಂದ ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಗುಪ್ತೇಶ್ವರ್ ದೇವಸ್ಥಾನ ಪ್ರದೇಶದಲ್ಲಿನ ಅಮ್ರಾವತಿ ಹೆದ್ದಾರಿಯ ಬಳಿ ನಡೆದಿದೆ.

    ಆರೋಪಿ ರಮ್ಜಾನ್ ಸಂತ್ರಸ್ತೆಯನ್ನ ನಡುರಸ್ತೆಯಲ್ಲಿ ನಗ್ನ ಮಾಡಿ ಆಕೆಯ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿದ್ದು, ಸಾರ್ವಜನಿಕರನ್ನ ಬೆಚ್ಚಿ ಬೀಳಿಸಿದೆ. ಇದರಿಂದ ಸಂತ್ರಸ್ತೆಯ ಮೈ ಮೇಲೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

    ಸಂತ್ರಸ್ತೆ ನಿರಂತರವಾಗಿ 20 ನಿಮಿಷಗಳ ಕಾಲ ಹಲ್ಲೆ ಮಾಡಿದ ವ್ಯಕ್ತಿ ಜೊತೆ ಹೋರಾಡಿದ್ದಾರೆ. ದೇಹವೆಲ್ಲಾ ರಕ್ತಸಿಕ್ತವಾಗಿ, ಆತನಿಂದ ತಪ್ಪಿಸಿಕೊಳ್ಳಲು ನಗ್ನವಾಗಿಯೇ ಸುಮಾರು ಅರ್ಧ ಕಿ.ಮೀ ದೂರ ಸಹಾಯಕ್ಕಾಗಿ ಓಡಿದ್ದಾರೆ. ಇದನ್ನು ನೋಡಿದ ಮತ್ತೊಬ್ಬ ಮಹಿಳೆ ಸಹಾಯಕ್ಕೆ ಧಾವಿಸಿದ್ದಾರೆ. ಅಷ್ಟೂ ಹೊತ್ತು ಸಂತ್ರಸ್ತೆಯ ಬಟ್ಟೆ ರಸ್ತೆಯಲ್ಲಿ ಬಿದ್ದಿತ್ತು. ನಂತರ ಮಹಿಳೆ ಬಟ್ಟೆಯನ್ನು ಸಂತ್ರಸ್ತೆಯ ಮೇಲೆ ಹೊದಿಸಿ, ಹೆದ್ದಾರಿವರೆಗೆ ಕರೆದುಕೊಂಡು ಹೋಗಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಆರೋಪಿ ರಮ್ಜಾನ್ ಈ ಹಿಂದೆ ಅನೇಕ ಬಾರಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ. ನಾನು ಪೊಲೀಸರಿಗೆ ದೂರು ನೀಡಿದ್ದರೂ ಅವರು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಿಟ್ಟು ಕಳಿಸಿದ್ದರು. ಎರಡು ವಾರಗಳ ಹಿಂದೆ ಮತ್ತೆ ಆರೋಪಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದ. ಆಗಲೂ ಪೊಲೀಸರಿಗೆ ಆತನ ವಿರುದ್ಧ ದೂರು ನೀಡಿದ್ದೆ. ಆಗ ಪೊಲೀಸರು ಮತ್ತೆ ಆತನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದರು. ಪೊಲೀಸರು ನಾನು ಕೊಟ್ಟ ದೂರನ್ನು ಗಂಭೀರವಾಗಿ ಪರಿಗಣಿಸಿದ್ದರೆ ಈ ರೀತಿ ಆಗುತ್ತಿರಲಿಲ್ಲ ಎಂದು ಸಂತ್ರಸ್ತೆ ಹೇಳಿದ್ದಾರೆ.

    ಈಗ ಸಂತ್ರಸ್ತೆ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ವೈದ್ಯರು ಇಂದೋರ್‍ಗೆ ರವಾನಿಸಲು ಹೇಳಿದ್ದಾರೆ. ಸದ್ಯ ಪೊಲೀಸರು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 307, 294, 323, 324 ಮತ್ತು 506ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

    ಸಂತ್ರಸ್ತೆಯ ಪತಿ 5 ವರ್ಷಗಳ ಹಿಂದೆ ಮೃತಪಟ್ಟಿದ್ದು, ಇಬ್ಬರು ಮ್ಕಕಳನ್ನು ಸಾಕಲು ದುಡಿಯುತ್ತಿದ್ದರು. ಜಮೀನಿನ ಕೆಲಸ ಮತ್ತು ಕಾಡಿನಿಂದ ಜಾನುವಾರುಗಳಿಗೆ ಮೇವು ಸಂಗ್ರಹಿಸುವ ಕೆಲಸ ಮಾಡಿಕೊಂಡಿದ್ದರು. ಮಹಿಳೆ ಒಬ್ಬರೇ ಕೆಲಸ ಮಾಡುವುದನ್ನು ನೋಡಿದ್ದ ಆರೋಪಿ ರಮ್ಜಾನ್, ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಪ್ರತಿ ಬಾರಿಯೂ ಮಹಿಳೆ ಇದಕ್ಕೆ ವಿರೋಧಿಸಿದ್ದರು. ಆದ್ರೆ ಒಂದು ದಿನ ಅತ್ಯಾಚಾರ ಮಾಡಿಯೇಬಿಟ್ಟ. ಅನಂತರವೂ ಹಲವು ಬಾರಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದ. ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರೇ ಹೊರತು ಈವರೆಗೆ ಅತ್ಯಾಚಾರ ಪ್ರಕರಣ ದಾಖಲಿಸಿರಲಿಲ್ಲ ಎಂದು ವರದಿಯಾಗಿದೆ.