Tag: ರೇನ್‍ಬೋ ಆಸ್ಪತ್ರೆ

  • ಮಹಿಳಾ ಸುರಕ್ಷತೆ ಜಾಗೃತಿಗಾಗಿ ಮಿಡ್ ನೈಟ್ ಬೈಕ್ ರ‍್ಯಾಲಿ

    ಮಹಿಳಾ ಸುರಕ್ಷತೆ ಜಾಗೃತಿಗಾಗಿ ಮಿಡ್ ನೈಟ್ ಬೈಕ್ ರ‍್ಯಾಲಿ

    ಬೆಂಗಳೂರು: ಮಹಿಳಾ ಬೈಕರ್‌ಗಳಿಂದ ಲಿಂಗ ಸಮಾನತೆ ಹಾಗೂ ಮಹಿಳಾ ಸುರಕ್ಷತೆ ಜಾಗೃತಿಗಾಗಿ ಬೈಕ್ ಸವಾರಿ ಜಾಥಾ ನಗರದಲ್ಲಿ ನಡೆಯಿತು.

    ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡುವ ಉದ್ದೇಶದಿಂದ ರೈನ್ ಬೋ ಮಕ್ಕಳ ಆಸ್ಪತ್ರೆ ವಿಶೇಷ ಮಧ್ಯರಾತ್ರಿಯ ಬೈಕ್ ಜಾಥಾ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಕಾರ್ಯಕ್ರಮದಲ್ಲಿ 50 ಕ್ಕೂ ಹೆಚ್ಚು ಮಹಿಳಾ ಬೈಕರ್‌ಗಳು ಭಾಗಿಯಾಗಿದ್ದರು. ಮಾರತಹಳ್ಳಿಯ ರೈನ್ ಬೋ ಆಸ್ಪತ್ರೆಯಿಂದ ಆರಂಭವಾದ ಬೈಕ್ ರ‍್ಯಾಲಿ ಬನ್ನೇರುಘಟ್ಟ ಮುಖಾಂತರ ಹೆಬ್ಬಾಳ ರೈನ್‍ ಬೋ ಆಸ್ಪತ್ರೆ ಬಳಿ ಅಂತ್ಯಗೊಂಡಿತು. ಇದನ್ನೂ ಓದಿ: ಶಾಲೆಗೆ ಮದ್ಯ ಸೇವಿಸಿ ಬಂದ ಶಿಕ್ಷಕ – ವಿದ್ಯಾರ್ಥಿ ಮೇಲೆ ಬ್ಯಾಟ್‍ನಿಂದ ಹಲ್ಲೆ

    ಕಾರ್ಯಕ್ರಮದ ಬಗ್ಗೆ ರೈನ್ ಬೋ ಆಸ್ಪತ್ರೆ ಛೇರ್ಮನ್ ಡಾ ರಮೇಶ್ ಕಂಚಾರ್ಲ ಮಾತನಾಡಿ, ಈ ಕಾರ್ಯಕ್ರಮ ನಿಜವಾದ ನಾರಿ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಸಮಾಜದಲ್ಲಿ ಸಮಾನತೆ ಮೂಡಿಸುವ ಅಗತ್ಯವಿದೆ. ಮಹಿಳೆಯರು ಯಾವುದೇ ಸ್ಥಳದಲ್ಲಿ ವಾಹನ ಚಲಾಯಿಸಬಹುದು ಎಂಬುದನ್ನು ಈ ಮಧ್ಯರಾತ್ರಿ ಬೈಕ್ ರೈಡ್ ತೋರಿಸಿಕೊಟ್ಟಿದೆ ಎಂದರು. ಇದನ್ನೂ ಓದಿ: ಗೊರಗುಂಟೆಪಾಳ್ಯ ಫ್ಲೈಓವರ್‌ನಲ್ಲಿ ರಾತ್ರಿ ಸಂಚಾರ ಬಂದ್

    ಈ ಮಧ್ಯರಾತ್ರಿಯ ಬೈಕ್ ಸವಾರಿ ಅನೇಕ ಅಂಶಗಳಲ್ಲಿ ವಿಶಿಷ್ಟವೆನಿಸಿದೆ. ಮೊದಲನೇಯದಾಗಿ, ಮಹಿಳೆಯರು ಒಂದು ನಿರ್ದಿಷ್ಟ ಸಮಯದಲ್ಲಿ ಹೊರಗೆ ಸುತ್ತಾಡಬಾರದು ಅನ್ನುವ ನಿಯಮಕ್ಕೆ ಬದ್ಧರಲ್ಲ. ಪುರುಷರು ಹೊರಗೆ ಹೋದರೆ ಸಂಜೆ ಅಥವಾ ರಾತ್ರಿಯಾದರೂ ತಿರುಗಬಹುದು ಆದ್ರೆ ಮಹಿಳೆಯರು ರಾತ್ರಿ ಹೊರಗಿರಬಾರದು ಅಂತ ಕಟ್ಟಳೆ ಹೇರುತ್ತದೆ ನಮ್ಮ ಸಾಮಾಜಿಕ ವ್ಯವಸ್ಥೆ. ಮಹಿಳೆ ಕೂಡ ರಾತ್ರಿ ಮುಕ್ತವಾಗಿ ಸಂಚರಿಸಬಹುದು. ಎರಡನೇಯದಾಗಿ, ರೈನ್‍ ಬೋ ಚಿಲ್ಡ್ರನ್ಸ್ ಹಾಸ್ಪಿಟಲ್ ಆಯೋಜಿಸಿರುವ ಈ ಮಧ್ಯರಾತ್ರಿ ಕಾರ್ಯಕ್ರಮ ದೇಶದ ಎಲ್ಲಾ ಪೋಷಕರು ಮಹಿಳೆಯರಿಗೆ ಸಮಾನತೆ ಖಾತ್ರಿಪಡಿಸಬೇಕು ಎನ್ನುವುದಕ್ಕೆ ಉದಾಹರಣೆ. ಮೂರನೇಯದಾಗಿ, ಮಹಿಳೆಯರು ಬೈಕ್ ಚಲಾಯಿಸಲಾರರು ಎಂಬ ಮಾತನ್ನು ನಮ್ಮ ಇಂದಿನ ನಾರಿಶಕ್ತಿ ಸುಳ್ಳಾಗಿಸಿದೆ ಎಂದು ಅಭಿಪ್ರಾಯಪಟ್ಟರು.

    ಕಾರ್ಯಕ್ರಮದಲ್ಲಿ ಐಪಿಎಸ್ ಅಧಿಕಾರಿ ರೂಪ ಭಾಗಿಯಾಗಿ, ರ‍್ಯಾಲಿಯಲ್ಲಿ ಭಾಗಿಯಾದ ಮಹಿಳಾ ಬೈಕರ್‌ಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದರು.