Tag: ರೇಣುಕಾ ಸ್ವಾಮಿ

  • ದರ್ಶನ್ ಜಾಮೀನು ಅರ್ಜಿ: ಇವತ್ತಾದರೂ ಸಿಗತ್ತಾ ಬೇಲ್?

    ದರ್ಶನ್ ಜಾಮೀನು ಅರ್ಜಿ: ಇವತ್ತಾದರೂ ಸಿಗತ್ತಾ ಬೇಲ್?

    ಳ್ಳಾರಿ ಜೈಲಿನಲ್ಲಿ ಇದ್ದುಕೊಂಡು ಜಾಮೀನಿಗಾಗಿ ಕಾಯುತ್ತಿರುವ ದರ್ಶನ್ (Darshan) ಜಾಮೀನು (Bail) ಅರ್ಜಿ ವಿಚಾರಣೆ ಇಂದು ಮುಂದುವರೆಯಲಿದೆ. ಇಂದೂ ಸಹ ವಾದ ಮುಂದುವರೆಸಲಿದ್ದಾರೆ ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್. ನಿನ್ನೆ ಚಾರ್ಜ್ ಶೀಟ್ ನಲ್ಲಿನ ಲೋಪದೋಷಗಳ ಬಗ್ಗೆ ಬೆಳಕು ಚೆಲ್ಲಿದ್ದರು ಸಿವಿ ನಾಗೇಶ್, ಸ್ವ ಇಚ್ಚಾ ಹೇಳಿಕೆ , ಸ್ಪಾಟ್ ಮಹಜರ್, ಸೀಜ್ ಮಾಡಿದ ಐಟಮ್ ಗಳಿಗೆ ಸಾಮ್ಯತೆಯಿಲ್ಲ ಅಂತ ಕೋರ್ಟ್ ಗಮನಕ್ಕೆ ತಂದಿದ್ದರು. ತನಿಖಾಧಿಕಾರಿ ಸಾಕ್ಷಿಗಳನ್ನ ಸೃಷ್ಟಿಸಿದ್ದಾರೆ. ಇದೊಂದು ವರ್ಸ್ಟ್ ಚಾರ್ಜ್ ಶೀಟ್ ಅಂತಾ ವಾದಿಸಿದ್ದ ಸಿವಿ ನಾಗೇಶ್ ಅವರು, ಇಂದು ವಾದ ಕಂಟಿನ್ಯೂ ಮಾಡೋದಾಗಿ ಹೇಳಿದ್ದರು. ಹೀಗಾಗಿ ಇಂದು ಮದ್ಯಾಹ್ನ ೧೨.೩೦ ಕ್ಕೆ ತಮ್ಮ ವಾದ ಮುಂದುವರೆಸಲಿದ್ದಾರೆ ದರ್ಶನ್ ಪರ ವಕೀಲರು. ಸಿವಿ ನಾಗೇಶ್ ರ ವಾದ ಮುಗಿದ ಬಳಿಕ ತಮ್ಮ ವಾದ ಮಂಡಿಸಲಿದ್ದಾರೆ ಎಸ್ ಪಿಪಿ ಪ್ರಸನ್ನಕುಮಾರ್.

    ಕೋರ್ಟಿನಲ್ಲಿ ನಿನ್ನೆ ನಡೆದದ್ದು ಏನು?

    ವೇಳೆ ಪ್ರಕರಣದ ತನಿಖೆ (Investigation) ತುಂಬಾ ಕೆಟ್ಟದ್ದಾಗಿ ನಡೆದಿದೆ. ಸುಪ್ರೀಂ ಕೋರ್ಟ್ 2 ತೀರ್ಪು ಉಲ್ಲೇಖಿಸಿ, ಇಡೀ ಪ್ರಕರಣ ಕಪೋಲಕಲ್ಪಿತ ಕಥೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳನ್ನು ತನಿಖಾಧಿಕಾರಿಯೇ ಸೃಷ್ಟಿಸಿದ್ದಾರೆ ಎಂದು ಪ್ರಬಲ ವಾದ ಮಂಡಿಸಿದರು. ವಾದ ಆರಂಭಿಸುತ್ತಿದ್ದಂತೆ ಮೊದಲು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿರುವ ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತಂದರು. ವಿಚಾರಣೆ ಸಂದರ್ಭದಲ್ಲಿ ಮಾಧ್ಯಮಗಳು ಟ್ರಯಲ್ ಮಾಡಿದ್ದಾವೆ. ಸ್ವಇಚ್ಚಾ ಹೇಳಿಕೆ, ಫೋಸ್ಟ್ ಮಾರ್ಟ್ಂ ರಿಪೋರ್ಟ್, ವಿಟ್ನೆಸ್ ಅನ್ನು ಬಿತ್ತರ ಮಾಡಿವೆ. ತನಿಖೆಯ ಪ್ರತೀ ಹಂತದಲ್ಲೂ ಕೂಡ ಟ್ರಯಲ್ ಮಾಡಿದ್ದಾವೆ. ಜೀವಾವಧಿ ಅಥವಾ ಸಮನಾಂತರ ಶಿಕ್ಷೆ ಹೊಂದಿರೋ ಪ್ರಕರಣ ಇದು ಇದನ್ನು ವಿಧಿಸೋದು ಬಾಕಿ ಇದೆ. ಇನ್ನೂ ಕೋರ್ಟ್ ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂದು ಹೇಳಿದರು.

    ಎಸ್ಪಿಪಿ (SPP) ಅತ್ಯುತ್ತಮ ತನಿಖೆ ಅಂತ ಕೋರ್ಟ್ಗೆ ಹೇಳಿದ್ದಾರೆ. ಆದರೆ ಇದು ನನ್ನ ಪ್ರಕಾರ ತುಂಬಾ ಕೆಟ್ಟದಾದ ತನಿಖೆ ಎನ್ನುತ್ತಾ ಸುಪ್ರೀಂ ಕೋರ್ಟ್ನ ಎರಡು ತೀರ್ಪುಗಳ ಉಲ್ಲೇಖಿಸಿ ವಾದ ಮಂಡಿಸಿದರು. ವೇಳೆ ತೀರ್ಪಿನ ಪ್ರತಿಯನ್ನು ಎಸ್ಪಿಪಿ ಕೇಳಿದರು. ಅದಕ್ಕೆ ಗರಂ ಆದ ಸಿ.ವಿ ನಾಗೇಶ್, ನಾನು ಕೆಲಸ ಮಾಡಿ ತಂದಿರೋ ತೀರ್ಪು ಇದು. ನಾನು ನಿಮಗೆ ಪ್ರತಿ ಕೊಡೋಲ್ಲ, ಪ್ರಸನ್ನ ನೀವೇ ಹುಡುಕಿ ಎಂದರು.

    ರೇಣುಕಾ ಮುಖ ನಾಯಿ ಕಚ್ಚಿ ತಿಂದಿದೆ.
    ಮೀಡಿಯಾದಲ್ಲಿ ದಿನಾ ಟ್ರಯಲ್ ಮಾಡಿ ಪ್ರಚಾರ ನೀಡುತ್ತಾ ಇದ್ದಾರೆ. ಮೀಡಿಯಾದಲ್ಲಿ ಆರೋಪಿಗಳ ಸ್ವ ಇಚ್ಛಾ ಹೇಳಿಕೆ ಬಂದಿದೆ. ಅಲ್ಲದೇ ಮೃತ ದೇಹದ ಫೋಟೋ ತೋರಿಸಿದ್ದಾರೆ. ಆತನ ಮುಖವನ್ನು ನಾಯಿ ತಿಂದಿದೆ, ಅಂತ ವೈದ್ಯರು ಸ್ಪಷ್ಟ ಪಡಿಸಿದ್ದಾರೆ. ಆದರೆ ಮಾಧ್ಯಮದಲ್ಲಿ ಇದನ್ನೇ ಕ್ರೌರ್ಯ ಅಂತ ಹೇಳಿದ್ರು. ಹಲ್ಲೆ ಎಂದು ಬಿಂಬಿಸಿ ಸುದ್ದಿ ಸಹ ಮಾಡಿವೆ. ನಾಯಿ ಕಚ್ಚಿ ಅವನ ಮುಖ ತಿಂದಿದೆ. ಇದೆನ್ನೆಲ್ಲಾ ಪರಿಗಣಿಸಿ ಕೋರ್ಟ್ ತನಿಖಾಧಿಕಾರಿಗೆ ತರಾಟೆ ತೆಗೆದುಕೊಳ್ಳಬೇಕು ಎಂದು ವಾದಿಸಿದರು.

    ನೀರಿನ ಬಾಟಲ್ ಅನ್ನು ಸಾಕ್ಷಿ ಅಂದಿದ್ದಾರೆ:
    ಪ್ರಕರಣದಲ್ಲಿ ಎಲ್ಲಾ ರಿಕವರಿ ಸುಳ್ಳು ರಿಕವರಿ ಆಗಿದೆ. ಎಲ್ಲಾ ಸಾಕ್ಷ್ಯಗಳನ್ನು ತನಿಖಾಧಿಕಾರಿಯೇ ಸೃಷ್ಟಿ ಮಾಡಿದ್ದಾರೆ. ಮರದ ಕೊಂಬೆಗಳು, ಹಗ್ಗದ ತುಂಡುಗಳನ್ನು ರಿಕವರಿ ಎಂದು ತೋರಿಸಿದ್ದಾರೆ. ನೀರಿನ ಬಾಟಲ್ ಅನ್ನು ಸಾಕ್ಷಿ ಅಂದಿದ್ದಾರೆ. 12-6 ರಲ್ಲಿ ಇದೆಲ್ಲವನ್ನೂ ತಮ್ಮ ವಶಕ್ಕೆ ಪಡೆದಿದ್ದಾರೆ. ಆದರೆ 9 ಜೂನ್ ಅಲ್ಲಿಯೇ ಪೊಲೀಸರ ವಶದಲ್ಲಿ ಇತ್ತು. ವಸ್ತುಗಳನ್ನು ವಶಕ್ಕೆ ಪಡೆದಿರೋದಾಗಿ ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ಹೇಳಿದ್ದಾರೆ. ಇಲ್ಲಿ ದಿನಾಂಕಗಳ ವ್ಯತ್ಯಾಸ ಕಂಡುಬಂದಿದೆ ಎಂದು ಹೇಳಿದರು.

     

    ಸ್ವಇಚ್ಚಾ ಹೇಳಿಕೆಯಲ್ಲಿ ಚಪ್ಪಲಿ, ಪೊಲೀಸರಿಗೆ ಸಿಕ್ಕಿದ್ದು ಶೂ:
    ಅಲ್ಲದೇ ದರ್ಶನ್ ಸ್ವಇಚ್ಚಾ ಹೇಳಿಕೆಯಲ್ಲಿ ಚಪ್ಪಲಿ ಅಂತ ಇದೆ. ಅದರೆ ಪೊಲೀಸರು ವಶಕ್ಕೆ ಪಡೆದಿರೋದು ಶೂ. ಸ್ವಇಚ್ಛಾ ಹೇಳಿಕೆಯನ್ನ ಬದಲಾಯಿಸಲಾಗಿದೆ. ದರ್ಶನ್ ಘಟನೆ ವೇಳೆ ಧರಿಸಿದ್ದ ಬಟ್ಟೆ, ಚಪ್ಪಲಿಗಳನ್ನ ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿದ್ದು, ಮನೆಗೆ ಬಂದರೆ ತೋರಿಸುವುದಾಗಿ ಹೇಳಿದ್ದಾರೆ. ಆದ್ರೆ, ಮನೆಯಲ್ಲಿ ಶೂಗಳು ಹೇಗಾದವು? ಇಷ್ಟೇಲ್ಲಾ ಆದ್ಮೇಲೆ ಹೇಳಿಕೆ ಬದಲಿಸಿದ್ದಾರೆ. ಮೊದಲು ಹೇಳಿಕೆ ಕೊಟ್ಟಾಗ ಚಪ್ಪಲಿ ಚಪ್ಪಲಿ ಅಂದಿದ್ದಾರೆ. ಕೊನೆಗೆ ಅದನ್ನೇ ಶೂ ಎಂದು ಹೇಳಿಕೆ ಬದಲಿಸಿದ್ದಾರೆ ಎಂದು ವಾದ ಮಂಡನೆ ಮಾಡಿದರು.

     

    ರಕ್ತದ ಕಲೆ ಬಿಟ್ಟು ಉಳಿದೆಲ್ಲ ಕಡೆ ತೊಳೆದಿದ್ದರಂತೆ:
    ಪೊಲೀಸರು ಮೊದಲ ಬಾರಿಗೆ ಹೋದಾಗ ರಕ್ತದ ಕಲೆ ಇತ್ತು ಎನ್ನಲಾದ ಬಟ್ಟೆ ಸಿಕ್ಕಿಲ್ಲ. ಆಮೇಲೆ ಅದೇ ಬಟ್ಟೆಯನ್ನು ಶರ್ಫ್ ಹಾಕಿ ತೊಳೆದಿದ್ದಾರೆ ಎಂದು ಹೇಳಿಕೆ ದಾಖಲಿಸಲಾಗಿದೆ. ರಕ್ತದ ಕಲೆ ಇರೋ ಜಾಗ ಬಿಟ್ಟು, ಇನ್ನೆಲ್ಲಾ ಕಡೆ ಬಟ್ಟೆ ತೊಳೆದಿದ್ದರು ಅನ್ಸುತ್ತೆ. ಅದಕ್ಕೆ ರಕ್ತದ ಕಲೆ ಸಿಕ್ಕಿದೆ ಎಂದು ವ್ಯಂಗ್ಯವಾಡಿದರು. ಟೀ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಶರ್ಫ್ ಹಾಕಿ ತೊಳೆದು ಒಣಗಿಸಲಾಗಿತ್ತು. ಶನಿವಾರ ಕೊಲೆ ಆಗಿದೆಭಾನುವಾರ ಬಟ್ಟೆ ಇಟ್ಟಿದ್ದಾರೆ. ಸೋಮವಾರ ಸುಶೀಲಮ್ಮ ತೊಳೆದು ಒಣಗಿ ಹಾಕಿದ್ದಾರೆ. ಇಷ್ಟೇಲ್ಲಾ ಉತ್ತಮವಾಗಿ ತೊಳೆದ್ರೂ ಕೂಡ ರಕ್ತದ ಕಲೆ ಸಿಕ್ಕಿದೆ ಅಂತೆ ಎಂದು ಹಾಸ್ಯಮಾಡಿದರು.

  • ದರ್ಶನ್‌, ಪವಿತ್ರಾ ಗೌಡ ಸೇರಿದಂತೆ 10ಕ್ಕೂ ಹೆಚ್ಚು ಆರೋಪಿಗಳ ಫ್ರಿಂಗರ್‌ ಪ್ರಿಂಟ್‌ ಮ್ಯಾಚ್‌

    ದರ್ಶನ್‌, ಪವಿತ್ರಾ ಗೌಡ ಸೇರಿದಂತೆ 10ಕ್ಕೂ ಹೆಚ್ಚು ಆರೋಪಿಗಳ ಫ್ರಿಂಗರ್‌ ಪ್ರಿಂಟ್‌ ಮ್ಯಾಚ್‌

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ‌ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ಕ್ರೈಂ ಸೀನ್ ಫಿಂಗರ್ ಪ್ರಿಂಟ್ ಜೊತೆ ಹತ್ತಕ್ಕೂ ಹೆಚ್ಚು ಆರೋಪಿಗಳ ಫಿಂಗರ್ ಪ್ರಿಂಟ್ (Finger Print) ಹೋಲಿಕೆಯಾಗಿರುವ ವಿಚಾರ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

    ವಿಧಿ ವಿಜ್ಞಾನ ಪರೀಕ್ಷೆಯಲ್ಲಿ (FSL) ದರ್ಶನ್ (Darshan), ಪವಿತ್ರಾ ಗೌಡ (Pavithra Gowda) ಸೇರಿ ಹತ್ತು ಜನರ ಫಿಂಗರ್ ಪ್ರಿಂಟ್ ಹೋಲಿಕೆಯಾಗಿದೆ. ಇದನ್ನೂ ಓದಿ: WWEಗೆ ನಿವೃತ್ತಿ ಹೇಳಿದ ಜಾನ್‌ ಸೀನಾ

    ಕ್ರೈಂ ಸೀನ್, ಶವ ಬಿಸಾಕಿದ ಜಾಗ, ಶವ ಸಾಗಾಟ ಮಾಡಿದ ವಾಹನ, ಶವ ಇಟ್ಟಿದ್ದ ಸೆಕ್ಯೂರಿಟಿ ಗಾರ್ಡ್ ಕೊಠಡಿ, ಮೃತನ‌ ಬಟ್ಟೆಗಳು, ಹಲ್ಲೆ ಮಾಡಲು ಬಳಸಿದ ವಸ್ತುಗಳು, ಸಾಗಾಟ ಮಾಡಿದ ಕಾರ್, ಆರೋಪಿಗಳ ಬಟ್ಟೆಗಳ ಮೇಲಿನ‌ ಫಿಂಗರ್ ಪ್ರಿಂಟ್ ಸಂಗ್ರಹ ಮಾಡಲಾಗಿತ್ತು. ಇದನ್ನೂ ಓದಿ: ಉತ್ತರ ಭಾರತದಲ್ಲಿ ಕರ್ನಾಟಕ ಶಾಸಕರ ಅಧ್ಯಯನ ಪ್ರವಾಸ

    ಎಫ್‌ಎಸ್‌ಎಲ್‌ ತಜ್ಞರನ್ನ ಬಳಸಿ ಫಿಂಗರ್ ಪ್ರಿಂಟ್ ಸಂಗ್ರಹಿಸಲಾಗಿತ್ತು. ಆರೋಪಿಗಳ ಬಂಧನದ ಬಳಿಕ ಎಲ್ಲರ ಫಿಂಗರ್ ಪ್ರಿಂಟ್ ಪಡೆದು ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗಿತ್ತು.

     

    ತನಿಖೆ ವೇಳೆ ಪೊಲೀಸರು ಪ್ರಬಲವಾದ ಸಾಕ್ಷ್ಯಗಳನ್ನು ಸಂಗ್ರಹಿಸದೇ ಇದ್ದರೆ ಆರೋಪಿಗಳು ಪ್ರಕರಣದಿಂದ ಖುಲಾಸೆ ಆಗುತ್ತಾರೆ. ಈ ಪ್ರಕರಣದಲ್ಲಿ ಫಿಂಗರ್‌ ಪ್ರಿಂಟ್‌ ಹೋಲಿಕೆಯಾಗಿದು ಕೋರ್ಟ್‌ ವಿಚಾರಣೆಯ ಸಂದರ್ಭದಲ್ಲಿ ಇದು ಪ್ರಮುಖ ಸಾಕ್ಷ್ಯವಾಗಲಿದೆ.

  • ದರ್ಶನ್ ವಿರುದ್ಧ ರೌಡಿ ಶೀಟ್? – ಗೃಹಸಚಿವ ಪರಮೇಶ್ವರ್ ಹೇಳಿದ್ದೇನು?

    ದರ್ಶನ್ ವಿರುದ್ಧ ರೌಡಿ ಶೀಟ್? – ಗೃಹಸಚಿವ ಪರಮೇಶ್ವರ್ ಹೇಳಿದ್ದೇನು?

    ಬೆಂಗಳೂರು: ದರ್ಶನ್ ಪ್ರಕರಣ (Actor Darshan Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡ್ತಿದೆ. ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಸ್ಫೋಟಕ ರಹಸ್ಯಗಳು ಹೊರಬರುತ್ತಿವೆ. ಪ್ರಕರಣದ ವರದಿಯನ್ನು ಗೃಹ ಸಚಿವರು ಮುಖ್ಯಮಂತ್ರಿಗೆ ನೀಡಿದ್ದಾರೆ.

    ಇನ್ನೂ ಈ ಕುರಿತು ಮಾತನಾಡಿರುವ ಸಚಿವ ಜಿ. ಪರಮೇಶ್ವರ್ (G Parameshwara), ಪ್ರಕರಣದ ತನಿಖೆ ನಡೆಯುತ್ತಿದೆ, ಕಾನೂನು ಎಲ್ಲರಿಗೂ ಒಂದೇ ಆಗಿದೆ. ರೇಣುಕಾಸ್ವಾಮಿ, ಪವಿತ್ರಾಗೌಡ (Pavithra Gowda) ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಮೆಸೇಜ್ ಮಾಡಿದ್ದರಂತೆ, ಅದಕ್ಕೆ ಕಾನೂನು ಕ್ರಮ ಕೈಗೊಳ್ಳಬಹುದಿತ್ತು. ಕೊಲೆ ಮಾಡುವ ಹಂತಕ್ಕೆ ಹೋಗುವುದು ಸರಿಯಲ್ಲ ಎಂದಿದ್ದಾರೆ.

    ಇನ್ನೂ ಯಾವುದೇ ಪ್ರಭಾವಿಗಳು ದರ್ಶನ್ ಪರವಾಗಿ ಲಾಬಿ ಮಾಡಿಲ್ಲ. ಈ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವೂ ಇಲ್ಲ. ನಮ್ಮ ಪೊಲೀಸರೇ ತನಿಖೆ ನಡೆಸುತ್ತಿದ್ದಾರೆ. ರೇಣುಕಾಸ್ವಾಮಿ ಕುಟುಂಬಕ್ಕೆ ನೆರವು ನೀಡುವ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಕುವೈತ್ ಅಗ್ನಿ ದುರಂತದಲ್ಲಿ 40 ಮಂದಿ ಭಾರತೀಯರ ದುರ್ಮರಣ – ಮೋದಿ ಸಂತಾಪ

    ಇದೇ ವೇಳೆ ದರ್ಶನ್ ವಿರುದ್ಧ ರೌಡಿ ಶೀಟ್ ತೆರೆಯುವ ವಿಚಾರ ತೆರೆಯುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ದರ್ಶನ್ ಅವರದ್ದು ಇದೇ ಮೊದಲ ಪ್ರಕರಣವಲ್ಲ. ಹಿಂದೆಯೂ ಬೇರೆ ಬೇರೆ ಪ್ರಕರಣ ಕಂಡುಬಂದಿದೆ. ತನಿಖೆ ನಂತರ ಪೊಲೀಸರು ಏನು ಶಿಫಾರಸು ಮಾಡ್ತಾರೆ ನೋಡಬೇಕು. ರೌಡಿ ಶೀಟ್ ತೆರೆಯುವ ವಿಚಾರವನ್ನು ಪೊಲೀಸರು ನೋಡಿಕೊಳ್ತಾರೆ ಎಂದು ತಿಳಿಸಿದ್ದಾರೆ.

    ಇನ್ನೂ ದರ್ಶನ್-ಪವಿತ್ರಾಗೌಡ ಪರ ವಕೀಲ ನಾರಾಯಣಸ್ವಾಮಿ ಮಾತಾನಾಡಿ, ತಮ್ಮ ಕಕ್ಷಿದಾರರಿಬ್ಬರು ಅಮಾಯಕರು. ಅವರಿಗೆ ಏನು ಗೊತ್ತಿಲ್ಲ ಎಂದಿದ್ದಾರೆ. ರಾಜ್ಯಸಭಾ ಸದಸ್ಯರೂ ಆಗಿರುವ ನಟ ಜಗ್ಗೇಶ್ ಎಕ್ಸ್ ಖಾತೆ ಮೂಲಕ ಪ್ರತಿಕ್ರಿಯಿಸಿದ್ದು, `ರಾಮನಾಗು.. ರಾವಣನಾದರೇ ಅಂತ್ಯ ಎಂದಿದೆ ಸನಾತನ ಕೃತಿ.. ಮದಕ್ಕೆ ಕಾರುಣ್ಯದ ಅರಿವಿಲ್ಲ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರಸಿದ್ಧರು, ಸೆಲೆಬ್ರಿಟಿಗಳೆಂದು ಬಿಡುವ ಪ್ರಶ್ನೆ ಇಲ್ಲ: ದರ್ಶನ್ ಕೇಸ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ 

  • ರೇಣುಕಾಸ್ವಾಮಿ ಕೊಲೆಯಾದ ಶೆಡ್‌ನಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸ್ಥಳ ಮಹಜರು!

    ರೇಣುಕಾಸ್ವಾಮಿ ಕೊಲೆಯಾದ ಶೆಡ್‌ನಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸ್ಥಳ ಮಹಜರು!

    – ಆರೋಪಿಗಳ ಸಾಲಿನಲ್ಲಿ ಕೈಕಟ್ಟಿ ನಿಂತಿದ್ದ ನಟ ದರ್ಶನ್

    ಬೆಂಗಳೂರು: ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಅವರನ್ನಿರಿಸಿದ್ದ ಪಟ್ಟಣಗೆರೆಯ ಶೆಡ್‌ನಲ್ಲಿ ಪೊಲೀಸರು ಇಂದು (ಬುಧವಾರ) ಸ್ಥಳ ಮಹಜರು ನಡೆಸಿದ್ದಾರೆ. ಆರೋಪಿ ನಟ ದರ್ಶನ್ (Darshan), ಪವಿತ್ರಾ ಗೌಡ (Pavithra Gowda) ಸೇರಿದಂತೆ ಇತರ ಆರೋಪಿಗಳನ್ನ ಕರೆತಂದು ಕಾಮಾಕ್ಷಿ ಪಾಳ್ಯ ಪೊಲೀಸರು ಸ್ಥಳ ಮಹಜರು ನಡೆಸಿದರು.

    ಪೊಲೀಸ್ ಅಧಿಕಾರಿಗಳು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯ ತಂಡ (FSL Team) ಸುಮಾರು ಒಂದೂವರೆಗಂಟೆಗೂ ಹೆಚ್ಚು ಕಾಲ ತಪಾಸಣೆ ನಡೆಸಿದೆ. ಕೊಲೆಯಾದ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದ ಸ್ಥಳ, ದಿಕ್ಕು ಹಾಗೂ ಹಲ್ಲೆ ಬಳಿಕ ಆತ ಸಾವನ್ನಪ್ಪಿದ ಸ್ಥಿತಿ, ಮೃತಪಟ್ಟ ನಂತರ ರೇಣುಕಾಸ್ವಾಮಿ ತಲೆ ಮತ್ತು ಕೈಕಾಲುಗಳು ಯಾವ ದಿಕ್ಕಿಗೆ ತಿರುಗಿತ್ತು? ಎಲ್ಲಾ ವಿಷಗಳನ್ನು ಆರೋಪಿಗಳಿಂದ ವಿಚಾರಣೆ ನಡೆಸಿ, ಸ್ಥಳ ಮಹಜರು ನಡೆಸಿದ್ದಾರೆ.

    ಆರೋಪಿಗಳ ಸಮ್ಮುಖದಲ್ಲಿ ಘಟನೆಯನ್ನ ಮರುಸೃಷ್ಟಿ ಮಾಡಿದ್ದ ಪೊಲೀಸರು, ಬಳಿಕ ಅದನ್ನು ವೀಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಜೊತೆಗೆ ಹಲ್ಲೆಗೆ ಬಳಸಿದ್ದ ವಸ್ತುಗಳು, ರಕ್ತದ ಕಲೆಗಳು, ಮೃತನ ಕೂದಲು, ಬಟ್ಟೆಯ ತುಂಡುಗಳ ಸಾಕ್ಷ್ಯವನ್ನು ಸಂಗ್ರಹಿಸಿದ್ದಾರೆ. ಸ್ಥಳ ಮಹಜರು ಮುಗಿದ ಬಳಿಕ ಪೊಲೀಸರು ಮತ್ತೆ ಠಾಣೆಗೆ ಆರೋಪಿಗಳನ್ನು ಕರೆದೊಯ್ದಿದ್ದಾರೆ. ಇದನ್ನೂ ಓದಿ: ದರ್ಶನ್ ನನ್ನ ಸ್ನೇಹಿತರು – ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿರೋದು ಶಾಕ್ ಆಗ್ತಿದೆ: ದರ್ಶನ್ ಪುಟ್ಟಣ್ಣಯ್ಯ

    50 ಮೀಟರ್ ವರೆಗೆ ಪ್ರವೇಶ ನಿಷೇಧ:
    ಸ್ಥಳ ಮಹಜರು ವೇಳೆ ಪಟ್ಟಣಗೆರೆಯ ಜಯಣ್ಣ ಅವರಿಗೆ ಸೇರಿದ್ದ ಶೆಡ್ ಮುಂಭಾಗ 50 ಮೀಟರ್ ವರೆಗೂ ಸಾರ್ವಜನಿಕರ ಪ್ರವೇಶ ನಿಷೇಧಗೊಳಿಸಲಾಗಿತ್ತು. ಇದನ್ನೂ ಓದಿ: ನನ್ನ ಮಗ ತಪ್ಪು ಮಾಡಿಲ್ಲ, ಯಾರೋ ಪಿತೂರಿ ಮಾಡಿದ್ದಾರೆ: ರೇಣುಕಾಸ್ವಾಮಿ ಕೊಲೆ ಕೇಸ್‌ ಎ3 ಆರೋಪಿ ತಾಯಿ 

  • ಕೈ ನಡುಗುತ್ತಿದೆ, ದಯಮಾಡಿ ಒಂದು ಸಿಗರೇಟ್ ಕೊಡಿಸಿ – ಪೊಲೀಸರ ಬಳಿ ದರ್ಶನ್‌ ಮನವಿ!

    ಕೈ ನಡುಗುತ್ತಿದೆ, ದಯಮಾಡಿ ಒಂದು ಸಿಗರೇಟ್ ಕೊಡಿಸಿ – ಪೊಲೀಸರ ಬಳಿ ದರ್ಶನ್‌ ಮನವಿ!

    ಬೆಂಗಳೂರು: ಚಿತ್ರದುರ್ಗದ (Chitradurga) ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್‌ ಒಂದೇ ಒಂದು ಸಿಗರೇಟ್‌ ಕೊಡಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

    ಸದ್ಯ 6 ದಿನಗಳ ಕಾಲ ಪೊಲೀಸ್‌ ಕಸ್ಟಡಿಯಲ್ಲಿರುವ ಆರೋಪಿ ದರ್ಶನ್‌ (Actor Darshan), ವಿಚಾರಣೆಯಲ್ಲಿ ನಾನು ಏನು ತಪ್ಪು ಮಾಡಿಲ್ಲ, ನನಗೆ ಗೊತ್ತಿಲ್ಲ. ನಾನು ಕೊಲೆ ಮಾಡಲು ಹೇಳಿಲ್ಲ, ಮಾಡಿಸಿಯೂ ಇಲ್ಲ ಎಂದು ಅಲವತ್ತುಕೊಂಡಿದ್ದಾರೆ. ಇದೇ ವೇಳೆ ದಯಮಾಡಿ ಒಂದೇ ಒಂದು ಸಿಗರೇಟ್‌ (Cigarette) ಕೊಡಿಸಿ, ಕೈಗಳು ನಡುಗುತ್ತಿವೆ ಅಂತ ಪೊಲೀಸರಿಗೆ ಬೇಡಿಕೊಂಡಿದ್ದಾರೆ. ಇದಕ್ಕೆ ಗರಂ ಆದ ಪೊಲೀಸರು, ಸಿಗರೇಟ್‌ ಕೊಡಿಸಲು ಸಾಧ್ಯವಿಲ್ಲ ಎಂದು ಹೇಳಿರುವುದಾಗಿ ತಿಳಿದುಬಂದಿದೆ.

    ಸದ್ಯ ಆರೋಪಿ ದರ್ಶನ್‌, ಪೊಲೀಸರ ಎದುರು ತಾನೇನು ಮಾಡಿಲ್ಲ ಎಂದು ಹೇಳುತ್ತಿರುವುದಾದರೂ, ತನಿಖೆಯಲ್ಲಿ ದರ್ಶನ್‌ ಹಲ್ಲೆ ಮಾಡಿದ್ದಾರೆ ಎಂಬುದಕ್ಕೆ ಸಾಕ್ಷ್ಯಗಳು ಲಭ್ಯವಾಗಿದೆ. ಸಾಕ್ಷ್ಯಗಳನ್ನು ಮುಂದಿಟ್ಟು ಪ್ರಶ್ನೆ ಕೇಳಿದರೆ ಆಗ ಸೈಲೆಂಟ್‌ ಆಗುತ್ತಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಆನ್‌ಲೈನ್‌ ವಂಚನೆ – ಆಗ್ನೇಯ ಏಷ್ಯಾ ಮೂಲದ ಕ್ರಿಮಿನಲ್‌ಗಳಿಗೆ ಭಾರತೀಯರೇ ಟಾರ್ಗೆಟ್‌; ವಂಚನೆ ಬಲೆಗೆ ಹೇಗೆ ಬೀಳಿಸ್ತಾರೆ ಗೊತ್ತಾ?

    ಸ್ಫೋಟಕ ಮಾಹಿತಿ ಬಯಲಿಗೆ:
    ಚಿತ್ರದುರ್ಗದ ರೇಣುಕಾಸ್ವಾಮಿಯನ್ನ ಕೊಲೆಗೈದ ಪ್ರಕರಣದಲ್ಲಿ ಅರೆಸ್ಟ್‌ ಆಗಿದ್ದರೂ ಈ ಪ್ರಕರಣದಿಂದ ಪಾರಾಗಲು ದರ್ಶನ್‌ ಭಾರೀ ಪ್ಲ್ಯಾನ್‌ ಮಾಡಿದ ವಿಚಾರ ಪೊಲೀಸ್‌ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ರೇಣುಕಾಸ್ವಾಮಿಯನ್ನು ಕೊಲೆಮಾಡಿ ಶವ ವಿಲೇವಾರಿ ಬಳಿಕ ಹಂತಕರಿಗೆ ನಡುಕ ಶುರುವಾಗಿತ್ತು. ಹೀಗಾಗಿ ಮೂವರಲ್ಲಿ ಶರಣಾಗುವಂತೆ ದರ್ಶನ್‌ ಸೂಚನೆ ನೀಡಿದ್ದರು. ಜೂನ್‌ 10 ರಂದು ಮೂವರು ಕಾಮಾಕ್ಷಿಪಾಳ್ಯ ಠಾಣೆಗೆ ಶರಣಾಗಿ ನಾವು ಹಣಕಾಸು ವಿಚಾರಕ್ಕೆ ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು, ಸಚಿವರಾಗಿ ಪವನ್‌ ಕಲ್ಯಾಣ್‌ ಪ್ರಮಾಣವಚನ ಸ್ವೀಕಾರ

    ಕೊಲೆ ಮಾಡಿ ಶರಣಾದ ಹಿನ್ನೆಲೆಯಲ್ಲಿ ಅನುಮಾನಗೊಂಡ ಪೊಲೀಸರು (Police) ಮೂವರನ್ನು ಪ್ರತ್ಯೇಕವಾಗಿ ಕರೆದು ಪೊಲೀಸ್‌ ಶೈಲಿಯಲ್ಲಿ ವಿಚಾರಣೆ ನಡೆಸಿ ಯಾರ ಮಾಹಿತಿ ಮೇರೆಗೆ ಬಂದು ಶರಣಾಗಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಒಬ್ಬೊಬ್ಬರು ಸಂಬಂಧವೇ ಇಲ್ಲದ ಒಂದೊಂದು ಹೇಳಿಕೆ ನೀಡಿದ್ದಾರೆ. ಪೊಲೀಸರು ಮತ್ತೆ ತನಿಖೆಗೆ ಇಳಿದು ಮೊಬೈಲ್‌ ಪರಿಶೀಲನೆ ನಡೆಸಿದಾಗ ದರ್ಶನ್‌ಗೆ ರಾತ್ರಿಯಿಡಿ ವಾಟ್ಸಪ್‌ ಕರೆ ಮಾಡಿರುವ ವಿಚಾರ ಗೊತ್ತಾಗಿದೆ. ಈ ವಿಚಾರ ತಿಳಿದು ವಿಚಾರಣೆಯನ್ನು ಮತ್ತಷ್ಟು ತೀವ್ರಗೊಳಿಸಿದಾಗ ಈ ಪ್ರಕರಣದ ನೈಜ ಹಂತಕರ ಬಗ್ಗೆ ಬಾಯಿಬಿಟ್ಟಿದ್ದಾರೆ.

  • ಮಗನ ಕಳೆದುಕೊಂಡ ಪೋಷಕರ ಆಕ್ರಂದನ- ದರ್ಶನ್‌ಗೆ ಹಿಡಿ ಶಾಪ

    ಮಗನ ಕಳೆದುಕೊಂಡ ಪೋಷಕರ ಆಕ್ರಂದನ- ದರ್ಶನ್‌ಗೆ ಹಿಡಿ ಶಾಪ

    ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅರೆಸ್ಟ್ ಆಗಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದಲ್ಲಿ ದರ್ಶನ್‌ರನ್ನು ಬಂಧಿಸಿದ್ದು, ಇದೀಗ ಮಗನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಕೊಲೆ ಪ್ರಕರಣದಲ್ಲಿ ದರ್ಶನ್‌ ಹೆಸರು ಕೇಳಿ ಬಂದ ಹಿನ್ನಲೆಯಲ್ಲಿ ಪೋಷಕರು ಹಿಡಿ ಶಾಪ ಹಾಕುತ್ತಿದ್ದಾರೆ.

    ಇದೀಗ ಕೊಲೆಯಾದ ರೇಣುಕಾಸ್ವಾಮಿ ಪೋಷಕರು ಕೂಡ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಬಂದಿದ್ದು, ಅಶ್ಲೀಲ ಮೆಸೇಜ್ ಮಾಡಿದ್ರೆ ಕಾನೂನು ಕ್ರಮ ಕೈಗೊಳ್ಳಬಹುದಿತ್ತು. ಅದು ಬಿಟ್ಟು ಕೊಲೆ ಮಾಡಿಸುವ ಮನಸ್ಥಿತಿಗೆ ಯಾಕೆ ಬಂದರು ಎಂದು ದರ್ಶನ್ ವಿರುದ್ಧ ರೇಣುಕಾಸ್ವಾಮಿ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾನೂನು ಮೂಲಕ ಹೋರಾಟ ಮಾಡಬಹುದಿತ್ತು ಎಂದು ರೇಣುಸ್ವಾಮಿ ಪೋಷಕರಾದ ಶಿವನಗೌಡ ಮತ್ತು ರತ್ನಪ್ರಭಾ ದಂಪತಿ ಕಣ್ಣೀರಿಟ್ಟಿದ್ದಾರೆ.

    ಅಂದಹಾಗೆ, ಚಿತ್ರದುರ್ಗದ ರೇಣುಕಾಸ್ವಾಮಿ ಅವರು ಪವಿತ್ರಾ ಗೌಡ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಮಾಡಿದ ನಂತರ ರೇಣುಕಾಸ್ವಾಮಿರನ್ನು ಜೂನ್ 9ರಂದು ಹತ್ಯೆ ಮಾಡಲಾಗಿತ್ತು. ಕೊಲೆ ಮಾಡಿದ ಇಬ್ಬರು ಅರೋಪಿಗಳ ಜೊತೆ ದರ್ಶನ್ ನಿರಂತರ ಸಂಪರ್ಕದಲ್ಲಿದ್ದರು ಎಂಬ ಆರೋಪ ಕೇಳಿ ಬಂದಿದೆ. ಪೊಲೀಸ್ ವಿಚಾರಣೆಯ ಸಂದರ್ಭದಲ್ಲಿ ಕೊಲೆ ಆರೋಪಿಗಳು ದರ್ಶನ್ ಸೂಚನೆಯಂತೆ ಕೊಲೆ ಮಾಡಿದ್ದೇವೆ. ಕೊಲೆಗೆ ದರ್ಶನ್ ಸುಪಾರಿ ನೀಡಿದ್ದರು ಎಂದು ಆರೋಪಿಗಳು ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ದರ್ಶನ್ ಅವರನ್ನು ಬಂಧಿಸಲಾಗಿದೆ.

    ಸದ್ಯ ಈ ಪ್ರಕರಣದ ವಿಚಾರವಾಗಿ ದರ್ಶನ್ ಮತ್ತು ಪವಿತ್ರಾ ಗೌಡ ಇಬ್ಬರನ್ನೂ ಕೂಡ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ.